Tag: chalavadi narayanaswamy

  • ನನಗೆ ಕಾರು, ಗನ್ ಮ್ಯಾನ್ ಕೊಟ್ಟಿಲ್ಲ, ಏನಾದ್ರೂ ಆದ್ರೆ ಸರ್ಕಾರವೇ ಹೊಣೆ: ಛಲವಾದಿ ನಾರಾಯಣಸ್ವಾಮಿ

    ನನಗೆ ಕಾರು, ಗನ್ ಮ್ಯಾನ್ ಕೊಟ್ಟಿಲ್ಲ, ಏನಾದ್ರೂ ಆದ್ರೆ ಸರ್ಕಾರವೇ ಹೊಣೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ನಾನು ವಿಪಕ್ಷ ನಾಯಕನಾಗಿ 20 ದಿನಗಳು ಕಳೆದಿವೆ. ನನಗೆ ಇನ್ನೂ ಕಾರು ಬಂದಿಲ್ಲ, ಗನ್ ಮ್ಯಾನ್ ಕೊಟ್ಟಿಲ್ಲ ಎಂದು ಪರಿಷತ್‍ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ  (Vidhana Soudha) ಮಾತನಾಡಿದ ಅವರು, ಇರುವ ಒಬ್ಬ ಗನ್ ಮ್ಯಾನ್ ಸಹ ಇಂದು ಸಂಜೆ ವಾಪಸು ಕಳಿಸ್ತೀನಿ. ನನಗೆ ಯಾವುದೇ ಸಮಸ್ಯೆ ಆದರೂ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ. ಮೂವರು ಗನ್ ಮ್ಯಾನ್‍ಗಳು ಬರಬೇಕು. ಎಸ್ಕಾರ್ಟ್ ಕೊಡಬೇಕು ಕೊಡಲಿಲ್ಲ. ನನ್ನ ಮನೆಗೆ ರಕ್ಷಣೆ ಕೊಡಬೇಕು. ಪ್ರೋಟೋಕಾಲ್ ಪ್ರಕಾರ ಕೊಡಬೇಕು. ನನ್ನ ಹೆಸರೇ ಛಲವಾದಿ ನಾರಾಯಣಸ್ವಾಮಿ. ನನಗೆ ಯಾವುದೇ ಭಯ ಇಲ್ಲ. ಆದರೆ ಇದು ನನ್ನ ಹಕ್ಕು ನನಗೆ ಬೇಕು ಎಂದು ಆಗ್ರಹಿಸಿದ್ದಾರೆ.

    ಇದೇ ವೇಳೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದ ಅವರು, ಸಿದ್ದರಾಮಯ್ಯ ದಲಿತರ ಚರ್ಮ ತೆಗೆದು ಚಪ್ಪಲಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಕನಕಪುರದಲ್ಲಿ ದಲಿತನ ಕೈ ಕತ್ತರಿಸಿದ್ದಾರೆ. ಈ ಕೃತ್ಯ ಮಾಡಿದ್ದು ಸಹ ಕಾಂಗ್ರೆಸ್‍ನವರೇ ಎನ್ನುವ ಮಾಹಿತಿ ಇದೆ. ಸರ್ಕಾರ ಕೂಡಲೇ ತನಿಖೆ ಮಾಡಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಪೋಕ್ಸೊ ಕೇಸ್‍ಲ್ಲಿ ಜಾಮೀನು ಕೊಟ್ಟಿದ್ದು ತಪ್ಪು ಎಂದು ಈಗ ಪರಮೇಶ್ವರ್ ಹೇಳಿದ್ದಾರೆ. ದೂರು ಕೊಟ್ಟ ದಿನ ಯಡಿಯೂರಪ್ಪಗೆ 82 ವರ್ಷ, ಅದೆಲ್ಲ ನಂಬಲು ಸಾಧ್ಯವಿಲ್ಲ ಎಂದು, ಇವತ್ತು ನಿಮ್ಮ ವಿರುದ್ಧ ಪಾದಯಾತ್ರೆ ಮಾಡಿದ ತಕ್ಷಣ ಪೋಕ್ಸೊ ಕಾಯ್ದೆ ಅಂತಿದ್ದಾರೆ. ಜಾಮೀನು ಕೊಟ್ಟಿದ್ದೆ ತಪ್ಪು ಎಂದು ಹೇಳ್ತಿದ್ದಾರೆ. ಇದು ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಪರಿಷತ್‌ ವಿರೋಧ ಪಕ್ಷದ ನಾಯಕನಾಗಿ ಛಲವಾದಿ‌ ನಾರಾಯಣಸ್ವಾಮಿ ಆಯ್ಕೆ

    ಪರಿಷತ್‌ ವಿರೋಧ ಪಕ್ಷದ ನಾಯಕನಾಗಿ ಛಲವಾದಿ‌ ನಾರಾಯಣಸ್ವಾಮಿ ಆಯ್ಕೆ

    ಬೆಂಗಳೂರು: ವಿಧಾನ ಪರಿಷತ್ತಿನ (Vidhan Parishad) ವಿರೋಧ ಪಕ್ಷದ ನಾಯಕರಾಗಿ ಛಲವಾದಿ‌ ನಾರಾಯಣಸ್ವಾಮಿ (Chalavadi Narayanaswamy) ಆಯ್ಕೆ ಆಗಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರು ಛಲವಾದಿ‌ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ದನಿಯಾಗಿ ನಿಂತು ಹೋರಾಟ ನಡೆಸಿಕೊಂಡು ಬಂದ ಹಿನ್ನಲೆಯ ಛಲವಾದಿ ನಾರಾಯಣ ಸ್ವಾಮಿಯವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಟರು ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ ‘ಸಾಮಾಜಿಕ ನ್ಯಾಯ’ ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ – ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ

    ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಗುಳುಂ, ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿದ್ದ ಸಾವಿರಾರು ಕೋಟಿ ರೂಪಾಯಿಗಳು ಇತರ ಯೋಜನೆಗಳಿಗಾಗಿ ನಿಯಮ ಉಲ್ಲಂಘಿಸಿ ಬಳಕೆ, ಭ್ರಷ್ಟಾಚಾರಗಳ ಸರಣೀ ಸರಮಾಲೆ, ಸ್ವಜನ ಪಕ್ಷಪಾತ ಹಾಗೂ ಮುಡಾ ಹಗರಣಗಳ ವ್ಯೂಹದಲ್ಲಿ ಸಿಲುಕಿ ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನಾಕ್ರೋಶ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ದುರಾಡಳಿತದ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಲು ನಾರಾಯಣ ಸ್ವಾಮಿಯವರನ್ನು ಆಯ್ಕೆ ಮಾಡಿರುವುದು ಸಮಯೋಚಿತ ನಿರ್ಧಾರವಾಗಿದೆ.

    ಮಾನ್ಯ ಛಲವಾದಿ ನಾರಾಯಣ ಸ್ವಾಮಿಯವರನ್ನು ಆತ್ಮೀಯವಾಗಿ ಅಭಿನಂಧಿಸಿ ಅವರನ್ನು ಆಯ್ಕೆಮಾಡಿದ ಪಕ್ಷದ ವರಿಷ್ಠ ಮಂಡಳಿಗೆ ಕೃತಜ್ಞತೆ ಸಲ್ಲಿಸುವೆ.

  • ಡೆಂಗ್ಯೂನಿಂದ ಜನ ಸಾಯ್ತಿದ್ರೆ, ಸಚಿವರು ಸ್ವಿಮ್ಮಿಂಗ್ ಪೂಲ್‍ನಲ್ಲಿದ್ದಾರೆ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಡೆಂಗ್ಯೂನಿಂದ ಜನ ಸಾಯ್ತಿದ್ರೆ, ಸಚಿವರು ಸ್ವಿಮ್ಮಿಂಗ್ ಪೂಲ್‍ನಲ್ಲಿದ್ದಾರೆ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಜನ ಡೆಂಗ್ಯೂನಿಂದ (Dengue) ಸಾಯುತ್ತಿದ್ದರೆ, ಸಚಿವ ದಿನೇಶ್ ಗುಂಡೂರಾವ್‌ (Dinesh Gundu Rao) ಅವರು ಸ್ವಿಮ್ಮಿಂಗ್ ಪೂಲ್‍ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ರೋಶ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜನ ಸಾಯ್ತಿದ್ದಾರೆ. ಸೊಳ್ಳೆ ನಿಯಂತ್ರಣ ಆಗಬೇಕು. ಎಲ್ಲೂ ಔಷಧಿ ಹೊಡೆಯುತ್ತಿಲ್ಲ. ಜನ ಸಾಯ್ತಿದ್ದಾರೆ, ಸಚಿವರು ಅವರ ಪಾಡಿಗೆ ಅವರಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಡೆಂಗ್ಯೂ ಗಂಭೀರ ಹಂತಕ್ಕೆ ತಲುಪಿದಾಗ ಚಿಕಿತ್ಸೆ ಇಲ್ಲ: ಡಾ. ಮಂಜುನಾಥ್

    ದಿನೇಶ್ ಗುಂಡೂರಾವ್ ಅವರಿಗೆ ಹೆಲ್ತ್ ಬಗ್ಗೆ ಏನು ಗೊತ್ತು.?. ಅವರ ಪಿಎ ಅಥವಾ ಡಾಕ್ಟರ್ ಹೇಳಿದಂತೆ ಕೇಳ್ತಾರೆ. ಜನರಿಗೆ ಔಷಧಿ ಕೊಡೋದನ್ನ ಮಾಡಬೇಕು. ಇಲ್ಲದಿದ್ರೆ ಸರ್ಕಾರಕ್ಕೆ ಔಷಧಿ ಕೊಡಬೇಕಿದೆ. ಇವರು ಸ್ವಿಮ್ಮಿಂಗ್ ಪೂಲ್ ನಿಂದ ಹೊರಗೆ ಬರಲ್ಲ. ಇರೋರೆಲ್ಲ ಕೆಲಸ ಮಾಡದೆ, ಲೂಟಿ ಹೊಡೆಯುತ್ತಿದ್ದಾರೆ ಎಂದರು.

    ಕೆಲಸ ಮಾಡದವರ ರಾಜೀನಾಮೆ ಕೇಳುತ್ತಾ ಕೂರಲು ಸಾಧ್ಯವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಟ್ರೆ ಎಲ್ಲವೂ ಸರಿಹೋಗಲಿದೆ ಎಂದು ಡೆಂಗ್ಯೂ ನಿಯಂತ್ರಣ ಮಾಡದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಗರಂ ಆದರು.

  • ಸಿದ್ದರಾಮಯ್ಯ ದರೋಡೆಕೋರರ ನಾಯಕ: ಛಲವಾದಿ ನಾರಾಯಣಸ್ವಾಮಿ

    ಸಿದ್ದರಾಮಯ್ಯ ದರೋಡೆಕೋರರ ನಾಯಕ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ದರೋಡೆಕೋರರ ನಾಯಕ ಎಂದು ಬಿಜೆಪಿ (BJP) ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ (Valmiki Development Corporation Scam) ಮಂತ್ರಿಗಳ ಪಾತ್ರ ಇದೆ ಎಂದು ಚಂದ್ರಶೇಖರನ್ ಡೆತ್ ನೋಟ್ ನಲ್ಲಿ ಬರೆದಿತ್ತು. ಆದರೂ ಇಷ್ಟು ತಡವಾಗಿ ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಕೈ ಹುಣ್ಣಿಗೆ ಕನ್ನಡಿ ಬೇಕಾ? ಚಂದ್ರಶೇಖರನ್ ಆತ್ಮಹತ್ಯೆ ಆದ ಕೂಡಲೇ ರಾಜೀನಾಮೆ ಪಡೆಯಬೇಕಿತ್ತು. ಕೇಸ್ ಮುಚ್ಚಿ ಹಾಕಲು ರಾಜೀನಾಮೆ ಪಡೆಯಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ: ಡಿಕೆಶಿ

    ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಿತ್ತು. ರಾಜ್ಯಪಾಲರ ಭೇಟಿ ಮಾಡಿ ಹಗರಣದ ವಿರುದ್ಧ ದೂರು ನೀಡಿದ್ದೇವೆ. ಈಗ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ. ಸಚಿವರ ರಾಜೀನಾಮೆ ಮಾತ್ರ ಸಾಲದು, ಸಿಎಂ ಸಹ ರಾಜೀನಾಮೆ ಕೊಡಬೇಕು. ಇದೊಂದು ಹಗಲು ದರೋಡೆ. ಸಿಎಂ ಅನುಮತಿ ಇಲ್ಲದೆ ಇಷ್ಟು ಹಣ ಹೊರಗೆ ಹೋಗಿಲ್ಲ. ಇದು ಒಂದು ಇಲಾಖೆಯ ಭ್ರಷ್ಟಾಚಾರ ಅಲ್ಲ. ಬೇರೆ ಬೇರೆ ಇಲಾಖೆಯ ನಿಗಮದಲ್ಲೂ ಭ್ರಷ್ಟಾಚಾರ ಆಗಿದೆ. ಇದನ್ನ ನಮ್ಮ ನಾಯಕರು ಪತ್ತೆ ಹಚ್ಚುತ್ತಿದ್ದಾರೆ ಎಂದರು.

    ಎಸ್‍ಟಿ ನಿಗಮದ ಹಣ ಅ ಸಮುದಾಯಕ್ಕಾಗಿ ಬಳಸುವ ಹಣ. ಆ ಸಮುದಾಯದ ಮಂತ್ರಿಯನ್ನು ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದೀರಿ. ದಲಿತರಿಗೆ ಅನ್ಯಾಯ ಮಾಡೋಕೆ ಮಹಾದೇವಪ್ಪ ಅವರನ್ನು ಮಂತ್ರಿ ಮಾಡಿ ಭ್ರಷ್ಟಾಚಾರ ಮಾಡಿಸಿದ್ದಾರೆ. ಸಿದ್ದರಾಮಯ್ಯ ದರೋಡೆಕೋರರ ನಾಯಕ. ಅವರು ನೇರವಾಗಿ ಭ್ರಷ್ಟಾಚಾರ ಮಾಡುವುದಿಲ್ಲ. ಬೇರೆಯವರಿಂದ ಭ್ರಷ್ಟಾಚಾರ ಮಾಡಿಸುತ್ತಾರೆ. ಭೂಗತ ಡಾನ್‍ಗಳು ಮಾಡುವ ತರಹ ಚೇರ್‍ನಲ್ಲಿ ಕುಳಿತು ಭ್ರಷ್ಟಾಚಾರ ಮಾಡಿಸುತ್ತಾರೆ ಎಂದು ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

  • ಗ್ಯಾರಂಟಿ ಯೋಜನೆಗಳಿಗೆ SCSP-TSP ಹಣ ಬಳಕೆ – ಸರ್ಕಾರದಿಂದ ಮಾಹಿತಿ

    ಗ್ಯಾರಂಟಿ ಯೋಜನೆಗಳಿಗೆ SCSP-TSP ಹಣ ಬಳಕೆ – ಸರ್ಕಾರದಿಂದ ಮಾಹಿತಿ

    ಬೆಂಗಳೂರು: 2023-24ನೇ ಸಾಲಿನಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ (Guarantee Schemes) SCSP-TSP ಹಣ ಬಳಕೆ ಮಾಡಲಾಗಿದೆ ಎಂದು ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಮಹದೇವಪ್ಪ (H.C. Mahadevappa), 5 ಗ್ಯಾರಂಟಿ ಯೋಜನೆಗಳಿಗೆ 11,144 ಕೋಟಿ ರೂ. SCSP-TSP ಹಣ ನೀಡಲಾಗಿದೆ. ಇದರಲ್ಲಿ 6162 ಕೋಟಿ ರೂ. SCSP-TSP ಹಣ ಖರ್ಚು ಮಾಡಲಾಗಿದೆ. ಇದರಲ್ಲಿ SCSP ಹಣ 4281.91 ಕೋಟಿ ರೂ. ಬಳಕೆ ಮಾಡಲಾಗಿದೆ. TSP ಹಣ 1880.11 ಕೋಟಿ ರೂ. ಬಳಕೆ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್‍ಗಳ ಬ್ರದರ್‌ರಿಂದ ಕುಕ್ಕರ್ ಹಂಚಿಕೆ – ಡಿಕೆಸುಗೆ ತಿವಿದ ಬಿಜೆಪಿ

    SCSP-TSP ಅನುದಾನದಲ್ಲಿ ಗೃಹಲಕ್ಷ್ಮಿ- 5075 ಕೋಟಿ ರೂ. ಅನ್ನಭಾಗ್ಯ- 2779.50 ಕೋಟಿ ರೂ. ಗೃಹಜ್ಯೋತಿ- 2410 ಕೋಟಿ ರೂ. ಶಕ್ತಿ- 812 ಕೋಟಿ ರೂ. ಹಾಗೂ ಯುವನಿಧಿ- 67.50 ಕೋಟಿ ರೂ. ಬಳಕೆ ಮಾಡಲು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಗೃಹಲಕ್ಷ್ಮಿಯಲ್ಲಿ SC ಸಮುದಾಯದ 21,74,519, ST 8,62,846 ಸಮುದಾಯ ಫಲಾನುಭವಿಗಳಿಗೆ ಹಣ ಕೊಡಲಾಗಿದೆ. ಅನ್ನಭಾಗ್ಯ SC-59,15,002, ST-25,90,678, ಯುವನಿಧಿಯಲ್ಲಿ SC-21986, ST-9220, ಗೃಹಲಕ್ಷ್ಮಿ SC-8,57,324, ST-3,68,997 ಜನರಿಗೆ ಅನುದಾನ ಹಂಚಿಕೆ ಆಗಿದೆ. ಶಕ್ತಿ ಯೋಜನೆಗೆ ಫಲಾನುಭವಿಗಳು ಗುರುತಿಸಿರೋದು ಕಷ್ಟ ಹೀಗಾಗಿ 812 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸರ್ಕಾರದ ಈ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಸರ್ಕಾರ ದಲಿತರ ದುಡ್ಡಿನಿಂದ ಗ್ರಾನೈಟ್ ತಂದು ದಲಿತರ ಸಮಾಧಿ ಕಟ್ಟಲು ಮುಂದಾಗಿದೆ. ಗ್ಯಾರಂಟಿಗೆ ಹಣ ಕೊಡೋದು ನಿಮ್ಮ ತೆವಲಿಗೆ ಮಾಡಿಕೊಂಡಿದ್ದೀರಾ ನೀವು ಮಾಡಿಕೊಳ್ಳಿ. ಅದಕ್ಕೆ ದಲಿತರ ಹಣ ಯಾಕೆ ಕೊಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

    ಮಹದೇವಪ್ಪಗೆ ಮಗಳ ಗಂಡ ಯಾರು? ಅಳಿಯ ಯಾರು ಗೊತ್ತಾಗುತ್ತಿಲ್ಲ. ಮಹದೇವಪ್ಪ ಪರಮಾತ್ಮ ಆಡಿಸಿದಂತೆ ಆಡುತ್ತಿದ್ದಾರೆ. ಆ ಪರಮಾತ್ಮ ಯಾರು ಎಂದು ನನಗೆ ಗೊತ್ತಿದೆ. ಮಹದೇವಪ್ಪ ಹಠ ಮಾಡಿ ಇದನ್ನ ಮಾಡುತ್ತಿದ್ದೀರಾ ಮಾಡಿ. ನಾನು ಛಲವಾದಿ ನಾನು ಇದನ್ನ ಇಲ್ಲಿಗೆ ಬಿಡೊಲ್ಲ. ಕಾಂಗ್ರೆಸ್ ಸರ್ಕಾರ ದಲಿತರ ಹಣ ಲೂಟಿ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ಯಾವ ಪರಮಾತ್ಮ ನನ್ನನ್ನು ಆಟ ಆಡಿಸೋಕೆ ಆಗೋದಿಲ್ಲ. ನಾನೇ ಪರಮಾತ್ಮನನ್ನ ಆಟ ಆಡಿಸ್ತೀನಿ. SCSP-TSP ಹಣ ಯಾವುದಕ್ಕೆ ಬಳಕೆ ಆಗಬೇಕು ಎಂದು ಕಾಯ್ದೆ ಮಾಡಲಾಗಿದೆ. ಅದರಂತೆ ಹಣ ಬಳಕೆ ಆಗ್ತಿದೆ. SCSP-TSP ಹಣ ಬೇರೆಯವರಿಗೆ ಖರ್ಚು ಮಾಡಲು ಆಗೊಲ್ಲ. ಕಾಯ್ದೆ ಪ್ರಕಾರ ಗ್ಯಾರಂಟಿಗೆ ಹಣ ನೀಡಲಾಗಿದೆ. SCSP-TSP ಕಾಯ್ದೆ ತಂದಿದ್ದೇ ನಾನು. 2011ರ ಜಾತಿಗಣತಿ ಪ್ರಕಾರ ಅನುದಾನ ಗ್ಯಾರಂಟಿ ಯೋಜನೆಗಳಿಗೆ ನೀಡಲಾಗಿದೆ. ಯಾರಿಗೂ ಅನ್ಯಾಯ ಆಗಿಲ್ಲ. ಯಾರಿಗೂ ಅನ್ಯಾಯ ಆಗಲು ಬಿಡೊಲ್ಲ ಎಂದಿದ್ದಾರೆ.

    ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯ ನಡುವೆ ಗದ್ದಲ ನಡೆದು, ಬಳಿಕ ಅರ್ಧ ಗಂಟೆಗೆ ಚರ್ಚೆ ಮಾಡಿಕೊಡೋದಾಗಿ ಸಚಿವರು ಭರವಸೆ ಕೊಟ್ಟ ಬಳಿಕ ಗದ್ದಲ ನಿಲ್ಲಿಸಲಾಯಿತು. ಇದನ್ನೂ ಓದಿ: ಏನಿಲ್ಲಾ ಏನಿಲ್ಲಾ, ದಲಿತ ಯೋಜನೆಗಳ‌ ಮಾಲೀಕ ನೀನಲ್ಲಾ – ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ

  • ಕೋರ್ಟ್‌ ಅಂಗಳ ತಲುಪಿದ ಡಿಕೆಸು ಭಾರತ ವಿಭಜನೆ ಹೇಳಿಕೆ

    ಕೋರ್ಟ್‌ ಅಂಗಳ ತಲುಪಿದ ಡಿಕೆಸು ಭಾರತ ವಿಭಜನೆ ಹೇಳಿಕೆ

    ಬೆಂಗಳೂರು: ಸಂಸದ ಡಿಕೆ ಸುರೇಶ್ (DK Suresh) ಭಾರತ ವಿಭಜನೆ ಹೇಳಿಕೆ ಈಗ ಕೋರ್ಟ್ ಅಂಗಳ ತಲುಪಿದೆ. ಬಂಟ್ವಾಳ ಮೂಲದ ವಿಕಾಸ್ ಪಿ ಎಂಬುವವರು ಡಿಕೆಸು ವಿರುದ್ಧ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.

    ಡಿ ಕೆ ಸುರೇಶ್ ಅವರ ಹೇಳಿಕೆ ದೇಶ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆಯಾಗಿದೆ. ಐಪಿಸಿ ಸೆಕ್ಷನ್ 124(ಎ) ಪ್ರಕಾರ ಡಿಕೆಸು ಹೇಳಿಕೆ ಶಿಕ್ಷಾರ್ಹ ಅಪರಾಧ ಆಗಲಿದೆ. ದೇಶದ ನಾಗರೀಕರಿಗೆ ಡಿಕೆಸು ಹೇಳಿಕೆ ಮಾನಸಿಕ ಆಘಾತ ತಂದಿದೆ. ಹೀಗಾಗಿ ನ್ಯಾಯಾಲಯವು ಈ ಹೇಳಿಕೆ ಕುರಿತ ಮುಂದಿನ ತನಿಖೆಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ನಿರ್ದೇಶಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಹೈಕೋರ್ಟ್ ಮೆಟ್ಟಿಲೇರಿದ ನಿಖಿಲ್ ಕುಮಾರಸ್ವಾಮಿ

     

    ಇನ್ನೊಂದು ಕಡೆ ಸಂಸದ ಡಿಕೆಸು ಹೇಳಿಕೆ ವಿರುದ್ಧ ಲೋಕಸಭೆ ಸ್ಪೀಕರ್ ಅವರಿಗೂ ದೂರು ಸಲ್ಲಿಸಲಾಗಿದೆ. ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಅವರು ಲೋಕಸಭೆ ಸ್ಪೀಕರ್‌ಗೆ ಎರಡು ಪುಟಗಳ‌ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್‌ಡಿಡಿ

    ಸಂವಿಧಾನದ ಪ್ರಮಾಣ ವಚನ ಸ್ವೀಕಾರ ಮಾಡಿರುವ ಡಿಕೆಸು ತಮ್ಮ ಹೇಳಿಕೆ ಮೂಲಕ ಉಲ್ಲಂಘಿಸಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿರುವ ಡಿಕೆಸು ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕನ್ನು ಕಳೆದುಕೊಂಡಿದ್ದಾರೆ.‌ ಡಿಕೆಸು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭೆ ಸ್ಪೀಕರ್‌ಗೆ ಛಲವಾದಿ ನಾರಾಯಣ ಸ್ವಾಮಿ ಪತ್ರ ಬರೆದಿದ್ದಾರೆ.

     

  • ಸಿಎಂ, ಸೋನಿಯಾ ಗಾಂಧಿಯವರಿಗೂ ಹೀಗೆ ಮಾತಾಡಿದ್ದಾರಾ?: ಛಲವಾದಿ ನಾರಾಯಣಸ್ವಾಮಿ

    ಸಿಎಂ, ಸೋನಿಯಾ ಗಾಂಧಿಯವರಿಗೂ ಹೀಗೆ ಮಾತಾಡಿದ್ದಾರಾ?: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಚಿತ್ರದುರ್ಗದಲ್ಲಿ ಅಹಿಂದ ಹೆಸರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ರಾಷ್ಟ್ರಪತಿಗಳಿಗೆ ಏಕವಚನ ಪ್ರಯೋಗ ಮಾಡಿದ್ದಾರೆ. ಸೋನಿಯಾ ಗಾಂಧಿಯವರಿಗೂ ಸಿದ್ದರಾಮಯ್ಯ (Siddaramaiah) ಹೀಗೇ ಏಕವಚನದಲ್ಲಿ ಮಾತಾಡಿದ್ದಾರಾ? ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಹಾಗೂ ಖರ್ಗೆಯವರಿಗೂ ಇವರು, ಇವನು, ಅವನು ಎಂದು ಏಕವಚನದಲ್ಲಿ ಕರೆಯುತ್ತಾರಾ? ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ನಗರದ ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಒಬ್ಬ ದಲಿತ ಹೆಣ್ಣು ಮಗಳಾಗಿರುವ ರಾಷ್ಟ್ರಪತಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿರೋದು ಖಂಡನೀಯ. ಹಳ್ಳಿಗಳಲ್ಲಿ ಹಾಗೇ ಕರೆಯೋದು ಎಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಮೂಲಕ ಹಳ್ಳಿ ಜನರನ್ನೂ ಸಿಎಂ ಅಪಮಾನ ಮಾಡಿದ್ದಾರೆ. ಹಳ್ಳಿ ಜನರು ಎಲ್ಲರನ್ನೂ ಗೌರವದಿಂದ ಮಾತಾಡಿಸುತ್ತಾರೆ. ಸಿದ್ದರಾಮಯ್ಯ ಯಾಕೆ ಇಷ್ಟು ಸುಳ್ಳು ಹೇಳುತ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ, ಅಹಂಕಾರ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜಕೀಯ ಮಾಡೋದು ಬಿಟ್ಟು ಜನರ ಭಾವನೆಗಳಿಗೆ ಬೆಲೆ ಕೊಡಲಿ: ಅಶ್ವಥ್ ನಾರಾಯಣ್

    ರಾಷ್ಟ್ರಪತಿಗಳ ಬಣ್ಣದ ಬಗ್ಗೆಯೂ ಸಿದ್ದರಾಮಯ್ಯನವರು ಈ ಹಿಂದೆ ಕಾಮೆಂಟ್ ಮಾಡಿದ್ದರು. ನೀವು ಭಾಷೆ ಸರಿಪಡಿಸಿಕೊಳ್ಳಲು ಒಬ್ಬ ಟೀಚರ್‍ನ್ನು ನೇಮಿಸಿಕೊಳ್ಳಿ. ನಾನೇ ಬೇಕಾದ್ರೆ ನಿಮಗೆ ಟೀಚರ್ ಆಗಿ ಬಂದು ಭಾಷೆ ಬಳಕೆ ಹೇಳಿಕೊಡುತ್ತೇನೆ ಎಂದಿದ್ದಾರೆ.

    ಕೆರೆಗೋಡು ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರ ಯಾರನ್ನೂ ಓಲೈಸಿ ಹೀಗೆ ಮಾಡ್ತಿದೆ? ಪೊಲೀಸರು ಬೂಟ್ ಕಾಲಿನಲ್ಲಿ ಸಂಜೆ 3 ಗಂಟೆಗೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಲು ನಿಯಮಗಳಿವೆ, ಅದನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ: ಹೆಚ್‌ಡಿಕೆ ವಾಗ್ದಾಳಿ

  • ಅಂಬೇಡ್ಕರ್ ಹೆಸರಲ್ಲೂ ರಾಮನಿದ್ದಾನೆ: ಛಲವಾದಿ ನಾರಾಯಣಸ್ವಾಮಿ

    ಅಂಬೇಡ್ಕರ್ ಹೆಸರಲ್ಲೂ ರಾಮನಿದ್ದಾನೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಅಂಬೇಡ್ಕರ್ (B.R Ambedkar) ಅವರ ಹೆಸರು ಹಾಗೂ ಸಂವಿಧಾನದಲ್ಲೂ ರಾಮ ಇದ್ದಾನೆ. ದೇವಸ್ಥಾನಕ್ಕೆ ಯಾಕೆ ನಮ್ಮನ್ನ ಬಿಡಲ್ಲ ಎಂದು ಅಂಬೇಡ್ಕರ್ ಕೇಳಿದ್ದರು. ದೇವರ ಮೇಲೆ ನಂಬಿಕೆ ಇದ್ದಿದ್ದರಿಂದಲೇ ಅವರು ಹಾಗೆ ಪ್ರಶ್ನಿಸಿದ್ದರು ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.

    ನಗರದ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ. ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರ – ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ

    ಕಾಂಗ್ರೆಸ್ (Congress) ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ಮನಬಂದಂತೆ ಟೀಕಿಸುತ್ತಿದೆ. ಕಾಂಗ್ರೆಸ್‍ನ ಈ ನಿಲುವನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಮೊದಲು ವಿರೋಧಿಸಿದ್ದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು ಇದನ್ನು ನಾನು ಮೆಚ್ಚುತ್ತೇನೆ.

    ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ಪ್ರಿಯಾಂಕ್ ಖರ್ಗೆ ಮನಬಂದಂತೆ ಮಾತಾಡಿದ್ದಾರೆ. ಜನರೇ ಇದಕ್ಕೆ ಉತ್ತರ ಕೊಡುತ್ತಾರೆ. ಅವರೆಲ್ಲ ಶ್ರೀರಾಮನನ್ನು ಅವಹೇಳನ ಮಾಡಿದಾಕ್ಷಣ ದೊಡ್ಡ ನಾಯಕರಾಗ್ತಾರೆ ಎಂಬ ತಪ್ಪು ಭಾವನೆಯಲ್ಲಿದ್ದಾರೆ. ಪೊಸ್ಟರ್ ಹಾಕಿದರೆ ಅದನ್ನ ಕತ್ತರಿಸ್ತಾರೆ. ಮಂತ್ರಾಕ್ಷತೆಯನ್ನು ಎಲ್ಲಾ ಕಡೆ ಹಂಚಿಕೆ ಮಾಡಲಾಗ್ತಿದೆ. ಕಾಂಗ್ರೆಸ್‍ನವರು ಅದನ್ನು ಬಿಸಾಡುವ ಕೆಲಸ ಮಾಡ್ತಿದ್ದಾರೆ. ಜನರಿಗೆ ಕೊಡುತ್ತಿರುವುದು ರಾಜ್ಯದ ಅಕ್ಕಿಯಲ್ಲ. ಮೋದಿ ಕೊಡುತ್ತಿರುವ ಅಕ್ಕಿ, ಜನರ ಕಿವಿ ಮೇಲೆ ಹೂವು ಇಡಬೇಡಿ ಡಿಕೆಶಿಯವರೇ ಎಂದಿದ್ದಾರೆ.

    ಪ್ರಿಯಾಕೃಷ್ಣ ಅವರು 80 ಅಡಿ ರಾಮನ ಪೋಸ್ಟರ್ ಹಾಕಿದ್ದಾರೆ ಅದಕ್ಕೆ ಕತ್ತರಿ ಹಾಕಿದ್ದೀರಾ? ಎಲ್ಲರ ಹೃದಯದಲ್ಲಿ ರಾಮನಿದ್ದಾನೆ. ಪ್ರಿಯಾಕೃಷ್ಣ ಅವರ ಪೋಸ್ಟರ್ ಇದಕ್ಕೆ ಸಾಕ್ಷಿಯಾಗಿದೆ. ಪ್ರಿಯಾಂಕ್ ಖರ್ಗೆ ಮನೆಯಲ್ಲಿ ರಾಮನಾಮ ಹಾಗೂ ಹೊರಗಡೆ ರಹೀಮ ನಾಮ ಎಂದು ವ್ಯಂಗ್ಯವಾಡಿದ್ದಾರೆ.

    ರಾಜಣ್ಣರ ಮೇಲೆ ಜನ ಗೌರವ ಇಟ್ಟುಕೊಂಡಿದ್ದಾರೆ. ಅವರು ಪ್ರಚೋದನಕಾರಿ ಮಾತಾಡೋದನ್ನು ಬಿಡಲಿ. ಜನ ಇಟ್ಟಿರುವ ಗೌರವ ಉಳಿಸಿಕೊಳ್ಳಿ. ಯೋಗಿ ಆದಿತ್ಯನಾಥ್ ಬಂದರೆ ಹೊಡೀರಿ ಎಂದಿದ್ದಾರೆ. ರಾಜಣ್ಣ ಅವರ ಈ ಹೇಳಿಕೆ ಪಕ್ಷದ ನಿಲುವಾ? ನಮ್ಮವರು ಮಾತಾಡಿದ್ರೆ ಅದು ಪಕ್ಷದ ನಿಲುವು, ನಿಮ್ಮೋರು ಮಾತಾಡಿದ್ರೆ ವೈಯಕ್ತಿಕನಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮನ ಬಗ್ಗೆ ರಾಜಣ್ಣ ಅವಹೇಳನ; ಸಿಎಂ, ಸಚಿವ ಇಬ್ಬರೂ ಕ್ಷಮೆ ಕೇಳಲಿ: ಡಿವಿಎಸ್ ಆಗ್ರಹ

  • ರಾಮನ ಪೋಸ್ಟರ್ ಹಾಕಿದ್ರೆ ಕತ್ತರಿ, ಕೊಟ್ಟ ಮಂತ್ರಾಕ್ಷತೆ ಬೀಸಾಡ್ತಿದ್ದಾರೆ- ಕೈ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆರೋಪ

    ರಾಮನ ಪೋಸ್ಟರ್ ಹಾಕಿದ್ರೆ ಕತ್ತರಿ, ಕೊಟ್ಟ ಮಂತ್ರಾಕ್ಷತೆ ಬೀಸಾಡ್ತಿದ್ದಾರೆ- ಕೈ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆರೋಪ

    ಬೆಂಗಳೂರು: ರಾಮನ ಪೋಸ್ಟರ್ ಹಾಕಿದರೆ ಕಾಂಗ್ರೆಸ್ (Congress) ಕತ್ತರಿ ಹಾಕುತ್ತದೆ. ಇನ್ನು ಕೊಟ್ಟ ಮಂತ್ರಾಕ್ಷತೆನ್ನು (Mantrakshate) ಬಿಸಾಡುತ್ತಿದ್ದಾರೆ ಎಂದು ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಗಂಭೀರ ಆರೋಪ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನ ಕಾಂಗ್ರೆಸ್ ಮನಬಂದಂತೆ ಟೀಕಿಸ್ತಿದೆ. ಕಾಂಗ್ರೆಸ್‍ನ ಈ ನಿಲುವನ್ನ ಖಂಡಿಸುತ್ತೇನೆ. ಸಿದ್ದರಾಮಯ್ಯ ಮೊದಲು ವಿರೋಧಿಸಿದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು, ಇದನ್ನ ಮೆಚ್ಚುತ್ತೇನೆ ಎಂದರು.

    ಕೆ.ಎನ್ ರಾಜಣ್ಣ (KN Rajanna), ಪ್ರಿಯಾಂಕ್ ಖರ್ಗೆ ಮನಬಂದಂತೆ ಮಾತಾಡಿದ್ದಾರೆ. ಜನರೇ ಇದಕ್ಕೆ ಉತ್ತರ ಕೊಡ್ತಾರೆ. ಶ್ರೀರಾಮನನ್ನ ಅವಹೇಳನ ಮಾಡಿದಾಕ್ಷಣ ದೊಡ್ಡ ನಾಯಕರಾಗ್ತಾರೆ ಎಂಬ ತಪ್ಪು ಭಾವನೆಯಲ್ಲಿದ್ದಾರೆ. ಪೋಸ್ಟರ್ ಹಾಕಿದರೆ ಅದನ್ನ ಕತ್ತರಿಸ್ತಾರೆ. ಮಂತ್ರಾಕ್ಷತೆ ಎಲ್ಲಾ ಕಡೆ ಹಂಚಿಕೆ ಮಾಡಲಾಗ್ತಿದೆ. ಆದರೆ ಕಾಂಗ್ರೆಸ್‍ನವರು ಅದನ್ನ ಬಿಸಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಜನರಿಗೆ ಕೊಡ್ತಿರೋದು ಮೋದಿ ಕೊಡ್ತಿರೋ ಅಕ್ಕಿ: ಜನರಿಗೆ ಕೊಡುತ್ತಿರುವುದು ರಾಜ್ಯದ ಅಕ್ಕಿಯಲ್ಲ, ಮೋದಿ ಕೊಡುತ್ತಿರುವ ಅಕ್ಕಿ. ಡಿಕೆಶಿಯವರೇ ಜನರ ಕಿವಿ ಮೇಲೆ ಹೂವು ಇಡಬೇಡಿ. ಪ್ರಿಯಾಕೃಷ್ಣ ಅವರು 80 ಅಡಿ ರಾಮನ ಪೋಸ್ಟರ್ ಹಾಕಿದ್ದಾರೆ. ಅದಕ್ಕೆ ಕತ್ತರಿ ಹಾಕಿದ್ದೀರಾ?. ಎಲ್ಲರ ಹೃದಯದಲ್ಲಿ ರಾಮನಿದ್ದಾನೆ. ಪ್ರಿಯಾಕೃಷ್ಣ ಅವರ ಪೋಸ್ಟರ್ ಇದಕ್ಕೆ ಸಾಕ್ಷಿ. ಪ್ರಿಯಾಂಕ್ ಖರ್ಗೆ (Priyank Kharge) ಮನೆಯಲ್ಲಿ ರಾಮನಾಮ, ಹೊರಗಡೆ ರಹೀಮ ನಾಮ. ಕಾಂಗ್ರೆಸ್ ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿ ಇದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

    ಸಂವಿಧಾನದಲ್ಲೂ ರಾಮ ಇದ್ದಾನೆ. ಅಂಬೇಡ್ಕರ್ ಅವರ ಹೆಸರಲ್ಲೂ ರಾಮ ಇದ್ದಾನೆ. ದೇವಸ್ಥಾನಕ್ಕೆ ಯಾಕೆ ನಮ್ಮನ್ನ ಬಿಡಲ್ಲ ಎಂದು ಅಂಬೇಡ್ಕರ್ ಕೇಳಿದ್ರು. ದೇವರ ಮೇಲೆ ನಂಬಿಕೆ ಇದ್ದಿದ್ದರಿಂದಲೇ ಕೇಳಿದರು. ಹಿಂದೂ ಧರ್ಮದಲ್ಲಿರುವ ನ್ಯೂನತೆ ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋದರು. ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಹೋಗಿಲ್ಲ ಅವರು. ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದು ಅವರು ಹೇಳಿದರು.

  • ಸಿದ್ದರಾಮಯ್ಯರಿಂದ ದಲಿತರಿಗೆ ಮಹಾ ಮೋಸ- ಕಾಂಗ್ರೆಸ್ ಪಕ್ಷ ವಂಚಕರ ಸಂತೆ: ಛಲವಾದಿ ನಾರಾಯಣಸ್ವಾಮಿ

    ಸಿದ್ದರಾಮಯ್ಯರಿಂದ ದಲಿತರಿಗೆ ಮಹಾ ಮೋಸ- ಕಾಂಗ್ರೆಸ್ ಪಕ್ಷ ವಂಚಕರ ಸಂತೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಸಿದ್ದರಾಮಯ್ಯರಿಂದ (Siddaramaiah) ದಲಿತರಿಗೆ ಮಹಾ ಮೋಸ ಆಗುತ್ತಿದೆ. ಕಾಂಗ್ರೆಸ್ (Congress) ಪಕ್ಷವೇ ವಂಚಕರ ಸಂತೆ ಎಂದು ಬಿಜೆಪಿ (BJP) ರಾಜ್ಯ ಎಸ್‌ಸಿ (SC) ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಟೀಕಿಸಿದರು.

    ಮಲ್ಲೇಶ್ವರಂನಲ್ಲಿರುವ (Malleshwaram) ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಕಡೆ ವರ್ಗಾಯಿಸಲು ನೆರವಾಗುವ ಮೂಲಕ ದಲಿತರ ಸಂಹಾರದ ನೀಚ ಕೆಲಸಕ್ಕೆ ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ (Priyank Kharge) ಸಹಕಾರ ಮಾಡಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ಎಸೆದು ಹೊರಕ್ಕೆ ಬರಲಿ. ಇಲ್ಲವಾದರೆ ಕಾಂಗ್ರೆಸ್ ದಲಿತ ನಾಯಕರು ಧ್ವನಿರಹಿತರು ಮತ್ತು ಬೋನ್‌ಲೆಸ್ ಎಂದು ಕರೆಯಬೇಕಾದೀತು ಎಂದು ನುಡಿದರು. ಇದನ್ನೂ ಓದಿ: ವೀರೇಂದ್ರ ಹೆಗ್ಗಡೆಯವರಿಗೆ ಮಾನಸಿಕ ಹಿಂಸೆ ನೀಡಲಾಗ್ತಿದೆ: ಜೈನಮುನಿ ಗುಣದರನಂದಿ ಶ್ರೀ

    ನಾನು ಕೆಲವು ದಿನಗಳ ಹಿಂದೆ ಮಾಡಿದ್ದ ಆಪಾದನೆ ಪ್ರಮುಖವಾಗಿ ಪ್ರಕಟವಾಗಿರಲಿಲ್ಲ. ಈಗ ಅದು ಮಾಧ್ಯಮಗಳಿಂದಾಗಿ ಪ್ರಚಾರ ಪಡೆದಿದೆ. ಬಜೆಟ್‌ನ 24.1% ಹಣವನ್ನು ಎಸ್‌ಸಿ, ಎಸ್‌ಟಿ ಶ್ರೇಯೋಭಿವೃದ್ಧಿಗೆ ಬಳಸಲು ಸಿದ್ದರಾಮಯ್ಯನವರು ಒತ್ತಾಯಿಸಿದ್ದರು. ಎಸ್‌ಸಿ ಎಸ್‌ಪಿ, ಟಿಎಸ್‌ಪಿಯ ಹಣವನ್ನು 2013ರಲ್ಲಿ 7ಡಿ ನಿಯಮಾವಳಿ ಮೂಲಕ ಬೇರೆಡೆಗೆ ವರ್ಗಾಯಿಸುತ್ತಿದ್ದರು. ಬಸವರಾಜ ಬೊಮ್ಮಾಯಿಯವರು 7ಡಿ ರದ್ದು ಮಾಡಲು ಮುಂದಾಗಿದ್ದರು. ಈಗ 7 ಡಿ ರದ್ದಾಗಿದೆಯೇ ಎಂದು ಅವರೇ ಹೇಳಲಿ ಎಂದು ಸಿದ್ದರಾಮಯ್ಯನವರಿಗೆ ಸವಾಲೆಸೆದರು.

    ಬಿಜೆಪಿ 40% ಕಮಿಷನ್ ನಿಲ್ಲಿಸುವ ಮೂಲಕ ಗ್ಯಾರಂಟಿ ಯೋಜನೆ ಜಾರಿ, ಅಭಿವೃದ್ಧಿ ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. 3 ಲಕ್ಷ ಕೋಟಿ ಬಜೆಟ್‌ನಲ್ಲಿ 40% ಎಂದರೆ 1.20 ಲಕ್ಷ ಕೋಟಿ ಉಳಿಯಲಿಲ್ಲವೇ? ಗ್ಯಾರಂಟಿಗೆ 50 ಸಾವಿರ ಕೋಟಿ ರೂ. ಬಳಸಿದರೆ 70 ಸಾವಿರ ಕೋಟಿ ರೂ. ಉಳಿಯುವುದಿಲ್ಲವೇ? ಅದನ್ನು ಅವರು ಅಭಿವೃದ್ಧಿಗೆ ಬಳಸಬೇಕಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಸ್ಲಿಂ ಮತಗಳಿಂದ ಜೆಡಿಎಸ್‌ಗೆ ಈ ಬಾರಿ ಸೋಲಾಗಿಲ್ಲ: ಸಿಎಂ ಇಬ್ರಾಹಿಂ

    ಶೋಷಿತರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯದ ಸೌಕರ್ಯ, ಶೋಷಣೆರಹಿತ ಘನತೆಯ ಬದುಕು ಬೇಕು. ನಿಮ್ಮ ಬಿಟ್ಟಿ ಅಲ್ಲ. 24.1% ಎಂದು ಮೀಸಲಿಟ್ಟು, ಅದನ್ನೆಲ್ಲ ಬೇರೆ ಇಲಾಖೆಗೆ ಕೊಟ್ಟು ದಲಿತರಿಗೆ ಕೆಟ್ಟ ಹೆಸರನ್ನು ತರುತ್ತೀರಿ. ನಾವು ಪೌರಕಾರ್ಮಿಕರನ್ನು ಖಾಯಂ ಮಾಡಿದ್ದೆವು. ನಾವು ದಲಿತರಿಗೆ ನ್ಯಾಯ ಕೊಟ್ಟಿದ್ದೇವೆ. ದಲಿತರ ಸಮಸ್ಯೆ ಮತ್ತು ವಿಚಾರ ಬಂದಾಗ ಹಕ್ಕು ಕೇಳುವ ಕೆಲಸ ಮಾಡಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೊರಕ್ಕೆ ಬನ್ನಿ ಎಂದು ಆಗ್ರಹಿಸಿದರು.

    ಆಪತ್ತು ಬಂದಾಗ ಕಾಂಗ್ರೆಸ್ ಪಕ್ಷ ದಲಿತರ ಕಾರ್ಡ್ ಬಳಸುತ್ತದೆ. 2006ರಲ್ಲಿ ಖರ್ಗೆಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಬಳಿಕ ಪರಮೇಶ್ವರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಅಧಿಕಾರ ಬಂದಾಗಲೂ ದಲಿತರನ್ನು ಸಿಎಂ ಮಾಡಲಿಲ್ಲ. ಬದಲಾಗಿ ಪಕ್ಷಕ್ಕೆ ವಲಸೆ ಬಂದ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ್ದರು ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮೂರನೇ ಪರ್ಯಾಯ ಶಕ್ತಿ ಸ್ಥಾಪನೆಗೆ ಮುಸ್ಲಿಂ ಸಂಘಗಳ ಪ್ರವಾಸ- ಸಿಎಂ ಇಬ್ರಾಹಿಂ

    ಎಐಸಿಸಿಯಲ್ಲಿ ಅಧ್ಯಕ್ಷರನ್ನಾಗಿ ಖರ್ಗೆಯವರನ್ನು ಮಾಡಿದ್ದು ಇದೇ ಕಾರಣಕ್ಕೆ. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದವರು ಅಮಾಯಕರು ಎಂದು ಹೇಳಿದ್ದು, ದಲಿತ ವಿರೋಧಿಯಲ್ಲವೇ ಎಂದು ಪ್ರಶ್ನೆ ಕೇಳಿದರು. ಕೆಲವು ದಲಿತ ನಾಯಕರು ಮತ್ತು ಸಂಘಟನೆಗಳು ಪ್ಯಾಕೇಜ್ ಸಂಘಟನೆಗಳಂತಿವೆ. ದಲಿತರಿಗೆ ಅನ್ಯಾಯ ಕಂಡರೂ ಸುಮ್ಮನಿರುವ ಅವರ ಸ್ವರ ಎಲ್ಲಿ ಅಡಗಿದೆ ಎಂದು ಕೇಳಿದರು.

    ಕಾಮಾಲೆ ಕಣ್ಣಿನಿಂದ ಪಕ್ಷಗಳನ್ನು ನೋಡದಿರಿ ಎಂದು ದಲಿತ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಅವರು, ಪ್ಯಾಕೇಜ್ ಬೆಂಬಲ ನೀಡದಿರಿ ಎಂದು ತಿಳಿಸಿದರು. ಕೆಲವು ದಲಿತ ಸಂಘಟನೆಗಳಿಗೆ ಕಾಂಗ್ರೆಸ್‌ನ ಸುಳ್ಳುಗಳೂ ಸತ್ಯ ಎನಿಸುತ್ತಿದೆ. ಕಾಂಗ್ರೆಸ್ ಸುಡುವ ಮನೆ. ದಲಿತರಿಗೆ ಭವಿಷ್ಯ ಇಲ್ಲ ಎಂದು ಡಾ. ಅಂಬೇಡ್ಕರರು ಹೇಳಿದ್ದರು. ಕೆಲವು ದಲಿತ ಸಂಘಟನೆಗಳ ಈಗಿನ ನಡೆ ಬಾಬಾಸಾಹೇಬ ಅಂಬೇಡ್ಕರರಿಗೆ ಮಾಡಿದ ಅಪಚಾರ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಇಲ್ಲ, ಐ ಲವ್ ಮೋದಿ : ಸಿಎಂ ಇಬ್ರಾಹಿಂ

    ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆದಿದೆ. ಬೆಲೆ ಏರಿಕೆ ಎಂದು ಬೊಮ್ಮಾಯಿ ಸರ್ಕಾರ ಬಂದಾಗ ಬೊಬ್ಬಿಡುತ್ತಿದ್ದ ಕಾಂಗ್ರೆಸ್ಸಿಗರು ವಸ್ತುಗಳ ಬೆಲೆ ಗಗನದಿಂದ ಆಚೆಗೆ ಹೋದ ಬಗ್ಗೆ ಚರ್ಚಿಸಲಿ ಮತ್ತು ಕಾರಣ ತಿಳಿಸಲಿ. ಹಾಲು, ವಿದ್ಯುತ್, ಹೋಟೆಲ್ ತಿಂಡಿ ತಿನಿಸು ಸೇರಿ ಎಲ್ಲ ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ಬೆಲೆ ಮಾತ್ರ ಹೆಚ್ಚಾಗಿಲ್ಲ ಎಂದು ಟೀಕಿಸಿದರು.

    ಈ ಸರ್ಕಾರವು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಲೇ ಬಂತು. ವರ್ಗಾವಣೆ ದಂಧೆಯ ಪಾಲು ಕೇಳಲು ದೆಹಲಿ ಸಭೆ ನಡೆದಿದೆ. ಮುಂದಿನ ಚುನಾವಣೆಗೆ ಡಬ್ಬ ತುಂಬಿಸಲು ಸಭೆ ನಡೆಸಲಾಗುತ್ತಿದೆ. ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುನ್ನಡೆದಿದೆ. ಎರಡೇ ತಿಂಗಳಲ್ಲಿ ಸಿದ್ದರಾಮಯ್ಯನವರ ಸರ್ಕಾರ ಕೆಟ್ಟ ಸರ್ಕಾರ ಎಂಬ ಹೆಸರು ಪಡೆದಿದೆ ಎಂದು ದೂರಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್: ಪ್ರಮೋದ್ ಮುತಾಲಿಕ್ ಕಿಡಿ

    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಜಗದೀಶ್, ಬೆಂಗಳೂರು ನಗರ ಜಿಲ್ಲೆ ಎಸ್‌ಸಿ ಮೋರ್ಚಾ ಅಧ್ಯಕ್ಷ ಎಚ್‌ವಿ ಮಂಜುನಾಥ್ ಉಪಸ್ಥಿತರಿದ್ದರು. ಇದನ್ನೂ ಓದಿ: ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗಿದ್ದಾರೆ: ಖಂಡ್ರೆ, ಖರ್ಗೆ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]