ಬೆಂಗಳೂರು: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮತ್ತು ಈಶ್ವರಪ್ಪ ಮನೆಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ, ಈಗ ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಭದ್ರತಾ ದೃಷ್ಟಿಯಿಂದ ಕೊಡಲೇ ಬೇಕು. ಆದರೆ ಮೂವರು ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿದ್ದಾರೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ (Priyank Kharge) ಇದ್ದಾರೆ. ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ, ಪ್ರಿಯಾಂಕ್ ಖರ್ಗೆ ಕುಟುಂಬವೂ ಕೂಡ ಹೊಣೆ ಎಂದು ಆಕ್ರೋಶ ಹೊರಹಾಕಿದರು.
ಇವರ ಭ್ರಷ್ಟಾಚಾರ ಎತ್ತಿ ತೋರಿಸುವ ಕೆಲಸ ವಿಪಕ್ಷ ನಾಯಕರು ಮಾಡಬಾರದು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ನಾನು ವಿಪಕ್ಷ ನಾಯಕನಾಗಿ ಒಂದೂವರೆ ವರ್ಷ ಆಗುತ್ತಿದೆ. ಇಲ್ಲಿವರೆಗೂ ಸರ್ಕಾರಿ ಗೃಹ ಕೊಟ್ಟಿಲ್ಲ. ಇದೇ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾಗ ಜಗಳ ಮಾಡಿ ಮನೆ ತೆಗೆದುಕೊಂಡಿದ್ದರು ಎಂದರು. ಇದನ್ನೂ ಓದಿ: ಭದ್ರತಾ ಪಡೆಗಳ ಮುಂದೆ 208 ನಕ್ಸಲರು ಶರಣು – ಕೆಂಪು ಉಗ್ರರಿಂದ ಉತ್ತರ ಬಸ್ತಾರ್ ಮುಕ್ತ
ನನಗೆ ಕೊಟ್ಟ ಭದ್ರತೆಯನ್ನು ವಾಪಸ್ ಪಡೆದಿದ್ದು ಯಾಕೆ? ಇದಕ್ಕೆ ಗೃಹ ಸಚಿವರು ಉತ್ತರ ಕೊಡಲೇಬೇಕು. ಇಲ್ಲದೇ ಇದ್ದರೆ ನನಗೆ ಕೊಟ್ಟಿರುವ ಕಾರು, ಬೆಂಗಾವಲು,ಭದ್ರತಾ ಸಿಬ್ಬಂದಿ ಎಲ್ಲರನ್ನೂ ವಾಪಸ್ ಕಳುಹಿಸುತ್ತೇನೆ . ಪ್ರಿಯಾಂಕ್ ಖರ್ಗೆ ಮನೆಗೆ ಬೆದರಿಕೆ ಬಂದಿದೆ ಎಂದು ಮತ್ತಷ್ಟು ಭದ್ರತೆ ಅವರ ಮನೆಗೆ ನೀಡಿದ್ದಾರೆ. ನನ್ನ ಭದ್ರತೆ ವಾಪಸ್ ಪಡೆದು, ಅವರಿಗೆ ಭದ್ರತೆ ಹೆಚ್ಚಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಬ್ಲಾಕ್‌ಬಸ್ಟರ್ ಹಿಟ್; 2 ವಾರದಲ್ಲಿ 717 ಕೋಟಿ ಕಲೆಕ್ಷನ್
ನನಗೆ ಯಾವುದೇ ರಕ್ಷಣೆ ಬೇಡ. ನನಗೆ ಏನೇ ಆದರೂ ಖರ್ಗೆ ಹಾಗೂ ಅವರ ಕುಟುಂಬವೇ ಕಾರಣ ಆಗಲಿದೆ. ಈ ರೀತಿ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ವಿರುದ್ದ ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದರು.
ಬೆಂಗಳೂರು: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ (Siddaramaiah) ಅಧಿಕಾರ ಅಂತ್ಯದ ಮುನ್ಸೂಚನೆಯಾ? ಡಿಕೆ ಶಿವಕುಮಾರ್ ಸಿಎಂ ಆಗುವ ಆರಂಭವೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್ ಕ್ರಾಂತಿ ಅನ್ನೋದು ಬಹುದಿನಗಳ ಸುದ್ದಿ. 6 ತಿಂಗಳ ಹಿಂದೆಯೇ ಕಾಂತ್ರಿ ಆಗುತ್ತೆ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ರು. ಆ ಕ್ರಾಂತಿಗೆ ಇನ್ನೊಂದು ತಿಂಗಳು ಇದೆ. ಅದರ ಬೆಳವಣಿಗೆ ಈಗ ಶುರುವಾಗಿದೆ. ಸಿಎಂ ಅವರು ಬದಲಾವಣೆ ಆಗ್ತಾರೆ ಅನ್ನೋ ಸಮಯದಲ್ಲಿ ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರೆ. ಸಿಎಂ ಅಲ್ಲದೇ ಬೇರೆ ಮಂತ್ರಿಗಳು ಸಭೆ ಮಾಡ್ತಿದ್ದಾರೆ. ಇದು ಕ್ರಾಂತಿಯ ವಿಚಾರವೇ ಅಂತ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್
ಡಿನ್ನರ್ ಮೀಟಿಂಗ್ ಅಂದರೆ ಅದೇ ವಿಶೇಷತೆ. ಎರಡು ವರ್ಷಗಳಿಂದ ಡಿನ್ನರ್ ಮೀಟಿಂಗ್ ಸಿಎಂ ಮಾಡಿರಲಿಲ್ಲ.ಈಗ ಮಾಡ್ತಿದ್ದಾರೆ ಅಂದರೆ ಸಿದ್ದರಾಮಯ್ಯ (Siddaramaiah) ಅವರ ಅಧಿಕಾರ ಅಂತ್ಯವಾ? ಅಥವಾ ಡಿಕೆಶಿ (DK Shivakumar) ಗುಂಪು ಹೇಳು ರೀತಿ ನವೆಂಬರ್ ಗೆ ಡಿಕೆಶಿವಕುಮಾರ್ ಸಿಎಂ ಆಗ್ತಾರೆ ಅನ್ನೋದರ ಪ್ರಾರಂಭನಾ? ಅಥವಾ ದಲಿತ ಸಿಎಂ ಮಾಡ್ತೀನಿ ಅಂತ ಕಾಂಗ್ರೆಸ್ ಹೇಳ್ತಿದೆ. ಈಗಲಾದರೂ ದಲಿತ ಸಿಎಂ ಮಾಡಿ ಅದಕ್ಕೆ ತೆರೆ ಎಳೆಯುತ್ತಾರಾ ಅಂತ ಪ್ರಶ್ನೆ ಮಾಡಿದರು.
ನಿನ್ನೆಯಿಂದ ಸಿಎಂ ಆಗಿ ಪರಮೇಶ್ವರ್ ಅವರನ್ನ ಮಾಡುತ್ತಾರೆ. ಅವರನ್ನು ಬೆಂಬಲಿಸುತ್ತೇವೆ ಎಂದು ಸಿಎಂ ಜೊತೆ ಇರೋ ಮಂತ್ರಿಗಳು ಹೇಳುತ್ತಿದ್ದಾರೆ. ಸಿಎಂ ಅವರು ಪರಮೇಶ್ವರ್ ಸಿಎಂ ಮಾಡಿಸೋಕೆ ಪ್ರಯತ್ನ ಮಾಡ್ತಿದ್ದಾರಾ? ನವೆಂಬರ್ ಕ್ರಾಂತಿಗೂ ಸಿಎಂ ಡಿನ್ನರ್ ಮೀಟಿಂಗ್‌ಗೂ ನಿಕಟ ಸಂಬಂಧವಿದೆ. ಈ ಬೆಳವಣಿಗೆ ನೋಡ್ತಿದ್ದರೆ ಏನೋ ದೊಡ್ಡ ವಿಷಯ ಇದೆ ಅಂತ ಜನರು ಅನ್ನಿಸುತ್ತಿದೆ ಅಂತ ತಿಳಿಸಿದರು. ಇದನ್ನೂ ಓದಿ: ಕುಕ್ಕರ್ ಬ್ರ್ಯಾಂಡ್ ಪ್ರೆಸ್ಟೀಜ್ ಸಂಸ್ಥಾಪಕ ಟಿಟಿ ಜಗನ್ನಾಥನ್ ನಿಧನ
ಈ ಬಾರಿಯ ದಸರಾ ಜನ ಸಾಮಾನ್ಯರ ದಸರಾ ಆಗಿರಲಿಲ್ಲ. ಕಾಂಗ್ರೆಸ್ ದಸರಾ ಆಗಿತ್ತು. ಈ ಬಾರಿ ದಸರಾ ಸಿದ್ದರಾಮಯ್ಯ, ಮಹದೇವಪ್ಪ ಅವರ ಅವರ ಮನೆ ಮದುವೆ ಸಮಾರಂಭ ನಡೆದ ಹಾಗೆ ಇತ್ತು. ಜನ ಸಾಮಾನ್ಯರು ಕಷ್ಟಪಟ್ಟರೂ ದಸರಾ ನೋಡಲು ಸಾಧ್ಯವಾಗಲಿಲ್ಲ. ಟಿಕೆಟ್ ಕಾಳಸಂತೆಯಲ್ಲಿ ಮಾರಾಟ ಆಗಿತ್ತು. ಸಿದ್ದರಾಮಯ್ಯ, ಮಹದೇವಪ್ಪ ಮೊಮ್ಮಕ್ಕಳ ಕಾರ್ಯಕ್ರಮದ ರೀತಿ ಇತ್ತು ಎಂದು ಹೇಳಿ ಯದುವೀರ್ ಒಡೆಯರ್ ಹೇಳಿಕೆಯನ್ನು ಸಮರ್ಥಿಸಿದರು.
ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕರ್ನಾಟಕದ ಅಪ್ರಬುದ್ಧ ವಿರೋಧ ಪಕ್ಷದ ನಾಯಕ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar), ಛಲವಾದಿ ನಾರಾಯಣಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಗ್ ಬಾಸ್ (Bigg Boss) ವಿಷಯದಲ್ಲಿ ಸರ್ಕಾರ ಸುದೀಪ್‌ರನ್ನ (Kichcha Sudeep) ಟಾರ್ಗೆಟ್ ಮಾಡಿದ್ದಾರೆ ಎಂಬ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಅಪ್ರಬುದ್ಧ ವಿರೋಧ ಪಕ್ಷದ ನಾಯಕ ಅಂದರೆ ಛಲವಾದಿ ನಾರಾಯಣಸ್ವಾಮಿ. ಸರ್ಕಾರ ಸುದೀಪ್ ಅವರನ್ನ ಟಾರ್ಗೆಟ್ ಮಾಡ್ತಿದೆ ಅಂತ ಮಾತನಾಡುತ್ತಾರೆ. ನಾವು ಯಾಕೆ ಅವರನ್ನ ಟಾರ್ಗೆಟ್ ಮಾಡೋಣ. ಸುದೀಪ್ ಸರ್ ಅಂದರೆ ನಮಗೆ ಬಿಜೆಪಿ ಅವರಿಗಿಂತ ಹೆಚ್ಚು ಗೌರವ, ಪ್ರೀತಿ. ಬಿಗ್ ಬಾಸ್ ವಿಚಾರ ಕಮ್ಯುನಿಕೇಶನ್ ಸಮಸ್ಯೆಯಿಂದ ಆಗಿತ್ತು. ಈಗ ಡಿಕೆ ಸಾಹೇಬ್ರು ಸರಿ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಋತುಚಕ್ರ ರಜೆಗೆ ಕ್ಯಾಬಿನೆಟ್ ಒಪ್ಪಿಗೆ – ತಿಂಗಳಲ್ಲಿ 1 ದಿನ ವೇತನ ಸಹಿತ ರಜೆ
ಬಿಗ್ ಬಾಸ್ ವಿಷಯ ನಮ್ಮ ಸರ್ಕಾರದ ಗಮನಕ್ಕೆ ಬಂದ ಕೂಡಲೇ ಡಿಸಿಎಂ ಸಾಹೇಬ್ರು ಸರಿ ಮಾಡಿದ್ದಾರೆ. ಕಾನೂನು ಯಾರಪ್ಪನಿಗಾದ್ರು ಒಂದೇ. ಕನ್ನಡ ಚಿತ್ರರಂಗದ ಪರವಾಗಿ ನಮ್ಮ ಸರ್ಕಾರ ಇದೆ. ಛಲವಾದಿ ಅವರೇ ಬಾಯಿಗೆ ಬಂದ ಹಾಗೇ ಮಾತಾಡಬೇಡಿ. ಕನ್ನಡ ಚಿತ್ರರಂಗದ ಬಗ್ಗೆ ನಮ್ಮ ಸರ್ಕಾರಕ್ಕೆ ಗೌರವ ಇದೆ. ಛಲವಾದಿ ನಾರಾಯಣಸ್ವಾಮಿ ರಾಜಕೀಯವನ್ನ ರಾಜಕೀಯವಾಗಿ ಮಾಡಿ. ಸುದೀಪ್ ಸರ್ ಅವರೇ ಡಿಸಿಎಂಗೆ ಧನ್ಯವಾದ ಹೇಳಿದ್ದಾರೆ. ಛಲವಾದಿ ಅವರಿಗೆ ಐಡೆಂಟಿಟಿ ಕಾಡ್ತಿದೆ, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ನಮ್ಮ ಗಮನಕ್ಕೆ ಈ ವಿಷಯ ಇರಲಿಲ್ಲ. ಒಂದು ದಿನ ಆದ ಮೇಲೆ ಗಮನಕ್ಕೆ ಬಂತು. ಸರಿ ಮಾಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ, ಬಿಎಸ್‌ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ (Govt Hospitals) ಯಾವುದೇ ರೀತಿಯ ಔಷಧಿಗಳ ಕೊರತೆ ಎದ್ದು ಕಾಣದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ಕೆಲವು ದೂರು ಬಂದ ಕಾರಣ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಸುಮಾರು 75ರಷ್ಟು ಔಷಧಗಳು ಇಲ್ಲಿ ಸಿಗುತ್ತವೆ. ಉಳಿದವನ್ನು ಸರ್ಕಾರ ಒದಗಿಸಬೇಕಿದೆ. ಬಡವರಿಗೆ ಔಷಧಿ ಅಂಗಡಿಗಳಲ್ಲಿ ಹೋಗಿ ಕೊಳ್ಳುವ ಶಕ್ತಿ ಇರುವುದಿಲ್ಲ. ಇದನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ
ವೈದ್ಯರ ಕೆಲವು ಕೊರತೆಗಳೂ ಎದ್ದು ಕಾಣುತ್ತವೆ, ಅವರನ್ನು ಕೇಳಿದ್ದೇನೆ. ಕೆಲವು ಭಾಗಗಳಲ್ಲಿ ಹಿರಿಯ ವೈದ್ಯರು ರೋಗಿಗಳನ್ನು ಸರಿಯಾಗಿ ನೋಡುವುದಿಲ್ಲ ಎಂಬ ದೂರುಗಳಿತ್ತು. ನಮ್ಮ ಮುತುವರ್ಜಿಯಲ್ಲೇ ಎಲ್ಲವೂ ನಡೆಯುತ್ತದೆ. ಎಂಬಿಬಿಎಸ್ ತರಬೇತಿಗೆ ಬಂದವರಿಗೆ ಪಾಠ ಹೇಳುವಾಗ ಜೊತೆಯಲ್ಲಿ ಇಟ್ಟುಕೊಳ್ಳುತ್ತೇವೆ. ನಾವೇ ಚಿಕಿತ್ಸೆ ಕೊಡುತ್ತೇವೆ ಎಂದಿದ್ದಾಗಿ ವಿವರಿಸಿದರು. ಇದನ್ನೂ ಓದಿ: Karur Stampede | ಸ್ವತಂತ್ರ ತನಿಖೆಗೆ ಕೋರಿ ಸುಪ್ರೀಂಗೆ ಟಿವಿಕೆ ಅರ್ಜಿ – ಅ.10ಕ್ಕೆ ವಿಚಾರಣೆ
ತುಂಬಾ ಹಿರಿಯ ವೈದ್ಯರು ಕೆಲವೊಮ್ಮೆ ಇಲ್ಲಿಂದ ಬೇರೆ ಬೇರೆ ಆಸ್ಪತ್ರೆಗೆ ಹೊರಟು ಹೋಗುತ್ತಾರೆ. ಇದನ್ನು ಸರ್ಕಾರ ತಡೆಯಬೇಕಿದೆ. ಇಲ್ಲಿ ಬರುವ ಅನಾರೋಗ್ಯಪೀಡಿತರನ್ನು ಕಾಪಾಡುವುದು ಹಿರಿಯ ವೈದ್ಯರ ಕರ್ತವ್ಯ. ಅವರನ್ನು ಹೊರಗಡೆ ಹೋಗಲು ಬಿಡಬಾರದು. ವೈದ್ಯರ ಕೊರತೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ನರ್ಸ್ ಮತ್ತಿತರ ಸಿಬ್ಬಂದಿ ಕೊರತೆ ಇದ್ದು ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಕೆಲವು ಸಂದರ್ಭಗಳಲ್ಲಿ ಸ್ವಚ್ಛತೆಯ ಕೊರತೆ ಇದೆ. ಆ ಕಡೆ ಗಮನ ಕೊಡಬೇಕು. ಶುಶ್ರೂಷೆ ಕೊಡುವ ಜಾಗದಲ್ಲಿ ಸ್ವಚ್ಛತೆಯ ಕೊರತೆಯಿಂದ ರೋಗ ರುಜಿನಗಳು ಹರಡುವ ಹಾಗೆ ಆಗಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ನಾಯಕರು ರಾಜ್ಯದಲ್ಲಿ ಬೊಗಳೋದು ಬಿಟ್ಟು ದೆಹಲಿಗೆ ಹೋಗಿ ಬೊಗಳಲಿ: ಬೋಸರಾಜು
ಬೆಂಗಳೂರು: ಒಂದು ನಿಗದಿತ ಧರ್ಮವನ್ನು ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದ್ಯಾ? ಈ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್ ಸೇರಿ ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರಣೆ ಕೊಟ್ಟಿದ್ದಾರೆ. ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆಯ ವೇಳೆ ಸೇರಿಸಬಾರದು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ (Chalavadi Narayanaswamy) ಸ್ವಾಮಿ ಆಗ್ರಹಿಸಿದರು.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ (Caste Census) ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದರು. ಇದನ್ನು ಸಾಮಾಜಿಕ-ಆರ್ಥಿಕ ಸರ್ವೇ ಎಂದು ಹೇಳಿದ್ದಾರೆ. ಆದರೆ, ಇವರು ಜಾತಿಗಳಿಗೆ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್ ಹೀಗೆ ಪರಿಶಿಷ್ಟ ಜಾತಿಗಳಲ್ಲಿ ಇರುವ ಎಲ್ಲಕ್ಕೂ ಕ್ರಿಶ್ಚಿಯನ್ ಪದ ಸೇರಿಸಿದ್ದಾರೆ. ಇದರ ಹಿಂದೆ ಇವರನ್ನೆಲ್ಲ ಕ್ರಿಶ್ಚಿಯನ್ ಮಾಡುವ ಉದ್ದೇಶವೇ? ಕಾಂಗ್ರೆಸ್ ಸರ್ಕಾರದ ಈ ಸಮೀಕ್ಷೆ ಬೂಟಾಟಿಕೆ ಮತ್ತು ಪುಂಡಾಟಿಕೆಯದು ಎಂದು ಆಕ್ಷೇಪಿಸಿದರು.ಇದನ್ನೂ ಓದಿ: ಕುರುಬ ಸಮುದಾಯದ ಬಗ್ಗೆ ಅಧ್ಯಯನ ಮಾಡಿ ಛಲವಾದಿ ನಾರಾಯಣಸ್ವಾಮಿ ಮಾತಾಡಲಿ: ಪ್ರದೀಪ್ ಈಶ್ವರ್
ಯಾವ ಜಾತಿಯಿಂದ ಬಂದವರು, ಯಾವ ಧರ್ಮದಿಂದ ಬಂದವರೆಂದು ನೀವು ಸಮೀಕ್ಷೆಯಲ್ಲಿ ತಿಳಿಸಬೇಕಿಲ್ಲ. ಇದು ಸರ್ಕಾರಿ ದಾಖಲೆಗೆ ಬೇಕಾಗಿಲ್ಲ. ಇದೆಲ್ಲ ಬಿಟ್ಟು ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಹೀಗೆ ಮಾಡುವುದು ಕಾನೂನುಬಾಹಿರ. ಇದನ್ನು ಮಾಡಿದರೆ ಜನಾಂಗಗಳ ಹೋರಾಟ ಸತತವಾಗಿ ಇರಲಿದೆ. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಬಾರದೆಂಬ ಉದ್ದೇಶ ಸರ್ಕಾರಕ್ಕಿದೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಹೇಗಿರುತ್ತದೆ ಎಂಬುದು ಜನರಿಗೆ ಬಿಟ್ಟ ವಿಚಾರ ಎಂದು ಕಿಡಿಕಾರಿದರು.
ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ?:
ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ? ಸೋನಿಯಾ ಗಾಂಧಿ ಈ ರೀತಿ ಮಾಡಲು ಹೇಳಿದ್ದಾರಾ? ಜನಸಾಮಾನ್ಯರು ಅರ್ಜಿ ನೀಡಿ ಅಥವಾ ಬೀದಿಗಿಳಿದು ಕ್ರಿಶ್ಚಿಯನ್ ಎಂದು ಸೇರಿಸಲು ಒತ್ತಾಯಿಸಿದರೇ? ಎಂದು ಪ್ರಶ್ನಿಸಿದರು. ಇದನ್ನು ಮಾಡದಂತೆ ಜನರು ಬೀದಿಗೆ ಇಳಿದಿದ್ದಾರೆ. ನಿಮಗೆ ಅದರ ಕುರಿತು ಗೌರವ ಇಲ್ಲ. ಮುಖ್ಯಮಂತ್ರಿ ಒಬ್ಬರನ್ನು ಹೊರತುಪಡಿಸಿದರೆ ಇಡೀ ಕಾಂಗ್ರೆಸ್ ಸಚಿವ ಸಂಪುಟವು ಇದರ ವಿರುದ್ಧ ಇದೆ. ಬಿಜೆಪಿ ಪೂರ್ಣ ಮುಖಂಡತ್ವ ನಿಮ್ಮ ವಿರುದ್ಧ ಇದೆ. ಜನತಾದಳ ವಿರುದ್ಧ ಇದೆ. ಮಠಮಾನ್ಯಗಳ ಗುರುಹಿರಿಯರು, ಸಮುದಾಯಗಳ ಮುಖಂಡರು ನಿಮ್ಮ ವಿರುದ್ಧ ಇದ್ದಾರೆ ಎಂದು ಗಮನಸೆಳೆದರು.
ರಾಜ್ಯದಲ್ಲಿ ಅತಿಯಾದ ಗೊಂದಲದಿಂದ, ಗೊಂದಲಗಳ ಮಧ್ಯೆ ಇವತ್ತಿನಿಂದ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿಗಳ ಸಮೀಕ್ಷೆ ಮಾಡಲು ಸರ್ಕಾರ ಮುಂದಾಗಿದೆ. ಈ ಸಮೀಕ್ಷೆ ಹೊಸದೇನೂ ಅಲ್ಲ. ಕಾಂತರಾಜು ಆಯೋಗ ರಚಿಸಿ ಸಮೀಕ್ಷೆ ಮಾಡಲಾಗಿತ್ತು. ಆದರೆ ಸರ್ಕಾರ ಅದನ್ನು ಒಪ್ಪಲಿಲ್ಲ. ಆ ವರದಿ ಎಲ್ಲಿ ಹೋಯಿತೆಂದು ಗೊತ್ತಿಲ್ಲ. ಅದು ಕಳವಾಗಿದೆಯಂತೆ, ಅದೇನು ಚಿನ್ನವೇ? ಕದ್ದ ಆಯೋಗದ ವರದಿಯನ್ನು ಪತ್ತೆ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.ಇದನ್ನೂ ಓದಿ: ಬಾನು ಮುಷ್ತಾಕ್ ಮೇಲೆ ನಮಗೆ ಗೌರವ ಹೆಚ್ಚಾಗಿದೆ: ನಾರಾಯಣಸ್ವಾಮಿ
ಜನರ ಹಣ ಇಷ್ಟಬಂದಂತೆ ಪೋಲು ಮಾಡಲು ಈ ಸಮೀಕ್ಷೆ:
ಮೊದಲನೇ ಆಯೋಗಕ್ಕೆ ಸುಮಾರು 180 ಕೋಟಿ ರೂ. ಖರ್ಚು ಮಾಡಿದ್ದರು. ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿಗೆ ಎಷ್ಟು ಖರ್ಚಾಗಿದೆ ಎಂದು ಬಾಯಿ ಬಿಡುತ್ತಿಲ್ಲ. ಕಾಂತರಾಜು ವರದಿ ಒಪ್ಪಿದ್ದರೆ ಜನರ ಭಾವನೆಗೆ ಗೌರವ ಬರುತ್ತಿತ್ತು. ಈಗ ಮತ್ತೆ 425 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಇದೇನು ಕಾಂಗ್ರೆಸ್ಸಿನ ಖಜಾನೆ, ಮನೆಯಿಂದ ತಂದು ಕೊಡುತ್ತೀರಾ? ಜನರ ಹಣವನ್ನು ಇಷ್ಟಬಂದಂತೆ ಪೋಲು ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟವರು? ಎಂದು ಪ್ರಶ್ನಿಸಿದರು.
ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯ ಆಗುತ್ತಿಲ್ಲ. ನಗರಗಳಲ್ಲಿ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲ. ಇಲ್ಲಿಂದ ಕಾಲ್ತೆಗೆಯುವ ಕುರಿತು ರಾಜ್ಯದ ಕೈಗಾರಿಕೋದ್ಯಮಿಗಳು ಪತ್ರ ಬರೆಯುತ್ತಿದ್ದಾರೆ. ಟ್ವೀಟ್ ಮಾಡಿ ತಿಳಿಸುತ್ತಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಸಮೀಕ್ಷೆಯ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಗುಂಡಿ ಮುಚ್ಚಲು ಆಗದವರು ಬೆಂಗಳೂರಿಗೆ ಸುರಂಗ ಮಾಡ್ತಾರಂತೆ ಎಂದು ಟೀಕಿಸಿದರು.
15 ದಿನಗಳಲ್ಲಿ ಸಮೀಕ್ಷೆ ಸಾಧ್ಯವೇ?:
15 ದಿನಗಳಲ್ಲಿ ಸುಮಾರು 7 ಕೋಟಿ ಜನರ ಸಮೀಕ್ಷೆ ಮುಗಿಸುವುದಾಗಿ ಹೇಳಿದ್ದಾರೆ. ನೀವೇ ಹೇಳಿದಂತೆ 1.7 ಕೋಟಿ ಪರಿಶಿಷ್ಟ ಜಾತಿಯವರ ಜನಸಂಖ್ಯೆ. 1.7 ಕೋಟಿ ಜನಸಂಖ್ಯೆಯ ಸಮೀಕ್ಷೆಗೆ 3-4 ಸಾರಿ ಮುಂದೂಡಿ 2ರಿಂದ ಎರಡೂವರೆ ತಿಂಗಳ ಕಾಲ ಸಮೀಕ್ಷೆ ಮಾಡಿದ್ದೀರಿ. ಶೇ.65ರಷ್ಟು ಮಾತ್ರ ಮಾಡಿದ್ದೀರಿ. ಉಳಿದುದೆಲ್ಲ ಬೋಗಸ್, ಬೊಗಳೆ ಅಂಕಿ ಅಂಶ. ಇದು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕೇವಲ 15 ದಿನಗಳಲ್ಲಿ ಇಡೀ ರಾಜ್ಯದ ಸಮೀಕ್ಷೆ ಮಾಡುವುದಾದರೆ ಉಪಗ್ರಹ ಆಧಾರದಡಿ ಸಮೀಕ್ಷೆ ಆಗಬೇಕಷ್ಟೇ ಎಂದರು.
ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿ ತರಿಸಿಕೊಂಡರು. ಅದೂ ಆಯಿತು. ವರದಿ ಒಪ್ಪಿಗೆ ಪಡೆಯಲಿಲ್ಲ. ಈಗ 3ನೇ ಆಯೋಗದ ವರದಿಗೆ ಹೊರಟಿದ್ದಾರೆ. ಮೊದಲನೇ ಆಯೋಗದ ವರದಿಗೆ ಗೊಂದಲ ಇರಲಿಲ್ಲ. ಎರಡನೇ ವರದಿ ಬಂದಾಗ ಅಲ್ಪ ಗೊಂದಲ ಆರಂಭವಾಗಿತ್ತು. ಈಗ 3ನೇ ಆಯೋಗ ಮಾಡಿದ್ದು, ಸಂಪೂರ್ಣ ಗೊಂದಲ ಇದೆ. ಎಲ್ಲರ ಇಚ್ಛಾಶಕ್ತಿಗೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರವು ಈ ಆಯೋಗದ ವರದಿ ತಯಾರಿಸಲು ಹೊರಟಿದೆ ಎಂದು ಹೇಳಿದರು.ಇದನ್ನೂ ಓದಿ: ನಮ್ಮದು ಜಾತ್ಯಾತೀತ ಸರ್ಕಾರ ಆಗಿರೋದಕ್ಕೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಿರೋದು: ಪ್ರದೀಪ್ ಈಶ್ವರ್
ಬೆಂಗಳೂರು: ಕುರುಬ ಸಮುದಾಯ ಬಗ್ಗೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಧ್ಯಯನ ಮಾಡಿ ಬಳಿಕ ಮಾತಾಡಬೇಕು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕಿಡಿಕಾರಿದ್ದಾರೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಛಲವಾದಿ ನಾರಾಯಣಸ್ವಾಮಿ (Chalavadi Narayanswamy) ಟೀಕೆ ಮಾಡಿದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ಛಲವಾದಿ ನಾರಾಯಣಸ್ವಾಮಿ ಕುರುಬ ಸಮುದಾಯದ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಕುರುಬರ ಕೊಡುಗೆ ಏನು ಅಂತ ಕೇಳಿದ್ದಾರೆ. ಛಲವಾದಿ ಅವರೇ ನೀವು ವಿರೋಧ ಪಕ್ಷದಲ್ಲಿ ಇದ್ದೀರಾ ಅಧ್ಯಯನ ಮಾಡಿಕೊಳ್ಳಿ. 1977 ರವರೆಗೂ ಕುರುಬ ಸಮುದಾಯ ಎಸ್ಟಿಯಲ್ಲಿತ್ತು. 1977 ಹಾವನೂರು ಆಯೋಗ ಎಸ್ಟಿ ಸಮುದಾಯದಿಂದ ಮೋಸ್ಟ್ ಬ್ಯಾಕ್ ವರ್ಡ್ ಕ್ಲಾಸ್ ಕ್ಯಾಟಗರಿಗೆ ಬದಲಾವಣೆ ಮಾಡಿತ್ತು. ಈಗ ಕುರುಬ ಸಮುದಾಯವನ್ನು ಮತ್ತೆ ಎಸ್ಟಿಗೆ ಸೇರಿಸಿ ಅಂತ ಕೇಳ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಮ್ಮದು ಜಾತ್ಯಾತೀತ ಸರ್ಕಾರ ಆಗಿರೋದಕ್ಕೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಿರೋದು: ಪ್ರದೀಪ್ ಈಶ್ವರ್
ಕುರುಬ ಸಮುದಾಯ ಕೊಡುಗೆ ಬಗ್ಗೆ ನಾರಾಯಣಸ್ವಾಮಿ ಮಾತಾಡೋದು ಸರಿಯಲ್ಲ. ದಕ್ಷಿಣ ಭಾರತವನ್ನ ಆಳಿದ್ದು ಕುರುಬರು. ಕರ್ನಾಟಕಕಕ್ಕೆ ಹೆಚ್ಚು ಬಜೆಟ್ ಕೊಟ್ಟಿರೋದು ಕುರುಬ ಸಮುದಾಯ ಸಿದ್ದರಾಮಯ್ಯ ಅವರು. ಬ್ರಿಟಿಷರು ಕುರುಬರನ್ನ ನೋಡಿದ್ರೆ ಹೆದರುತ್ತಿದ್ದರು. ಕುರುಬ ಸಮುದಾಯ ಇಡೀ ದೇಶದಲ್ಲಿದೆ. ಅವರ ಸಮುದಾಯದ ಮೀಸಲಾತಿಗೆ ಅವರು ಪ್ರಯತ್ನ ಮಾಡ್ತಾರೆ. ಛಲವಾದಿ ಅವರೇ ಯಾಕೆ ಮೀಸಲಾತಿಗೆ ವಿರೋಧ ಮಾಡ್ತೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮದು ಬಲಿಜ ಸಮುದಾಯ, 3ಎ ಗೆ ಹಾಕಿದ್ದಾರೆ. 2ಎ ಗೆ ಸೇರಿಸಿ ಅಂತ ಸಿಎಂಗೆ ಮನವಿ ಮಾಡಿದ್ದೇವೆ. ಇದರಲ್ಲಿ ಏನು ತಪ್ಪು. ಕುರುಬರು ಕೇಳೋದು ಅವರ ಹಕ್ಕು. ಎಸ್ಟಿಗೆ ಸೇರಿಸೋದು, ಬಿಡೋದು ಕೇಂದ್ರಕ್ಕೆ ಬಿಟ್ಟಿದ್ದು. ಛಲವಾದಿ ನಾರಾಯಣಸ್ವಾಮಿ ಯಾಕೆ ಮೂಗು ತೂರಿಸುತ್ತಾರೆ. ಸ್ವಲ್ಪ ಓದಿಕೊಳ್ಳಿ, ಬಾಯಿಗೆ ಬಂದಂತೆ ಮಾತಾಡಬೇಡಿ. ನಾರಾಯಣಸ್ವಾಮಿಗೆ ಅಸ್ತಿತ್ವದ ಪ್ರಶ್ನೆ ಬಂದಿದೆ. ಹಾಗಾಗಿ ಈ ರೀತಿ ಮಾತಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಎಸ್ಟಿ ಮೀಸಲಾತಿಗೆ ಮಾಜಿ ಸಚಿವ ಈಶ್ವರಪ್ಪ ವಿರೋಧ ಪಡಿಸಿದ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ಅವರೇ ಕುರುಬ ಮಕ್ಕಳು ಬೆಳೆಯೋದು ಬೇಡ್ವಾ? ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಿದರೆ ಎಸ್ಟಿ ಮೀಸಲಾತಿ ಜಾಸ್ತಿ ಆಗುತ್ತದೆ. ಯಾರು ಆತಂಕ ಪಡೆಯಬೇಡಿ. ಈಶ್ವರಪ್ಪ ಅವರೇ ನೀವು ದೊಡ್ಡವರಿದ್ದೀರಾ. ನಿಮ್ಮ ಸಮುದಾಯದ ಮಕ್ಕಳು ಬೆಳೆಯೋದು ಬೇಡ್ವಾ? ಮೀಸಲಾತಿ ಯಾಕೆ ಮುಖ್ಯ ಅಂತ ನನಗೆ ಗೊತ್ತು. ಇದರಲ್ಲಿ ಈಶ್ವರಪ್ಪ, ಛಲವಾದಿ ನಾರಾಯಣಸ್ವಾಮಿ ಮೂಗು ತೂರಿಸೋದು ಬೇಡ ಎಂದಿದ್ದಾರೆ.
ನಮಗೆ ಏನು ಬೇಕಿತ್ತೋ? ನಮ್ಮ ನಿರೀಕ್ಷೆ ಏನು ಇತ್ತೋ ಅದನ್ನು ಅವರು ಇವತ್ತು ಮಾಡಿದ್ದಾರೆ. ಹಿಂದೂ ಸಂಸ್ಕೃತಿಗೆ ಗೌರವ ಕೊಟ್ಟು ಬಾನು ಮುಷ್ತಾಕ್ ಇವತ್ತು ನಡೆದುಕೊಂಡಿದ್ದಾರೆ. ಹೀಗಾಗಿ ಅವರ ಮೇಲೆ ನಮಗೆ ಗೌರವ ಹೆಚ್ಚಾಗಿದೆ ಎಂದು ತಿಳಿಸಿದರು.
ಬೆಂಗಳೂರು: ಕುರುಬರ ಎಸ್ಟಿ ಮೀಸಲಾತಿಯ ಬಗ್ಗೆ ಮಾತನಾಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ (Bengaluru) ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ಸಮುದಾಯದವರು ಕುರುಬ ಸಮುದಾಯದ ಬಗ್ಗೆ ದಂಗೆ ಏಳಬೇಕು ಅಂತ ಎಂಎಲ್‌ಸಿ ಹಾಗೂ ಶಾಸಕರು ಹೇಳಿಕೆ ಕೊಟ್ಟಿದ್ರು. ಈ ಸಂಬಂಧ ಕುರುಬ ಸಮುದಾಯದ ಮುಖಂಡ ಸಿದ್ದಣ್ಣ ತೇಜಿ, ಡಿಜಿ & ಐಜಿಪಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸೆ.22 ರಿಂದ ಜಾತಿ ಜನಗಣತಿ ಆರಂಭ – ಸರ್ಕಾರದಿಂದ ಅಧಿಕೃತ ಆದೇಶ ಜಾರಿ
ಬೆಂಗಳೂರು: ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ (Indira Gandhi) ಮತಗಳ್ಳತನ ಸಂಬಂಧ ಅಲಹಾಬಾದ್ ಹೈಕೋರ್ಟ್ ತೀರ್ಪು ಕೊಟ್ಟ ಬಳಿಕವೇ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.
ಆಳಂದದಲ್ಲಿ (Alanda) ಮತದಾರರ ಪಟ್ಟಿಯಿಂದ ಹೆಸರು ತೆಗೆದ ವಿಷಯದಲ್ಲಿ ರಾಹುಲ್ ಗಾಂಧಿ ಮತ್ತು ಬಿ.ಆರ್.ಪಾಟೀಲರ ಆರೋಪಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1975-76ರಲ್ಲಿ ಈ ದೇಶದಲ್ಲೇ ಒಂದು ದೊಡ್ಡ ಆಂದೋಲನ ಆಗಿತ್ತು. ಆಗಿನ ರಾಷ್ಟ್ರೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಅದರ ನೇತೃತ್ವ ವಹಿಸಿದ್ದರು. ದೇಶದಲ್ಲಿ ಮತಚೋರಿ ವಿರುದ್ಧ ಅವರು ಆಕ್ಷೇಪಿಸಿ ಆಂದೋಲನ ಮಾಡಿದ್ದರು ಎಂದು ವಿವರಿಸಿದರು. ಆಗ ಇಂದಿರಾ ಗಾಂಧಿ ಹಠಾವೋ ಕಾರ್ಯಕ್ರಮ ನಡೆದಿತ್ತು ಎಂದರು. ಇದನ್ನೂ ಓದಿ: ಆಳಂದ ಫೈಲ್ಸ್ ಕೇಸ್ ತನಿಖೆಗೆ ಎಸ್‌ಐಟಿ ರಚನೆಗೆ ಕ್ಯಾಬಿನೆಟ್ ಒಲವು
ಕಳ್ಳ ಮತ್ತೊಬ್ಬನನ್ನು ಕಳ್ಳ ಎನ್ನಲು ಶುರು ಮಾಡಿದ್ದಾನೆ. ಕಳ್ಳ ತಪ್ಪಿಸಿಕೊಳ್ಳಲು ಬೇರೆಯವರನ್ನು ಕಳ್ಳ ಮಾಡಲು ಹೊರಟಿದ್ದಾನೆ ಎಂದು ಟೀಕಿಸಿದರು. ಇದು ರಾಹುಲ್ ಗಾಂಧಿಯವರ ಕೆಲಸ ಎಂದು ದೂರಿದರು. ಇವರು ಮತಪತ್ರ ಬೇಕು ಎನ್ನುತ್ತಾರಲ್ಲವೇ? ಯಾಕೆ? ಬೂತಿನಲ್ಲಿ ಬ್ಯಾಲೆಟ್ ಪೇಪರ್ ಇದ್ದಾಗ ಬೂತನ್ನೇ ಕಳವು ಮಾಡಿದ ಕಾಂಗ್ರೆಸ್ಸಿನವರಿದ್ದಾರೆ. ಅವರ ಮೇಲೆ ಕೋರ್ಟುಗಳಲ್ಲಿ ಇನ್ನೂ ಕೂಡ ಕೆಲವು ಕೇಸುಗಳು ಬಾಕಿ ಇವೆ ಎಂದು ವಿವರಿಸಿದರು. ಇದನ್ನೂ ಓದಿ: ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA
ಬೆಂಗಳೂರು: ಮುಖ್ಯಮಂತ್ರಿಗಳು ಸರ್ವರನ್ನೂ ಜೊತೆಯಾಗಿ ಒಯ್ಯುವ ಕಾರ್ಯ ಮಾಡುತ್ತಿಲ್ಲ. ಗಣೇಶ ವಿಸರ್ಜನೆ ವೇಳೆ ಆಗುತ್ತಿರುವ ಅಹಿತಕರ ಘಟನೆಗಳಿಗೆ ಸರ್ಕಾರವೇ ಹೊಣೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ಒಂದು ಕಡೆ ವಾಲಿದ್ದರಿಂದ ಇಂದು ಈ ಪರಿಸ್ಥಿತಿ ಎದುರಾಗುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸರ್ಕಾರ ಹೀಗೆ ನಡೆದುಕೊಂಡರೆ ಸರಿಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಎಂ ಕುರ್ಚಿಯಲ್ಲಿ ಕುಳಿತು ನ್ಯಾಯ ಕೊಡುವುದು ಮುಖ್ಯ: ಬಿ.ವೈ.ವಿಜಯೇಂದ್ರ ಅಭಿಪ್ರಾಯ
ಮದ್ದೂರಿನಲ್ಲಿ (Maddur) ಭಾನುವಾರ ಗಣೇಶ ವಿಸರ್ಜನೆ ಸಮಯದಲ್ಲಿ ಅಚಾತುರ್ಯದ ಘಟನೆಗಳು ನಡೆದಿವೆ. ಇದು ಕಾಂಗ್ರೆಸ್ ತನ್ನ ಮತ ಬ್ಯಾಂಕನ್ನು ಭದ್ರಪಡಿಸಿಕೊಳ್ಳಲು ಕೆಲವು ರೀತಿಯ ಓಲೈಕೆಗಳನ್ನು ಮಾಡಿದ್ದರಿಂದ ಇಡೀ ರಾಜ್ಯದಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರತಾಪ್ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಪ್ರದೀಪ್ ಈಶ್ವರ್
ಗಣೇಶ ವಿಸರ್ಜನೆಗೆ ನೀವು ಅವಕಾಶವನ್ನೂ ಕೊಡುತ್ತಿಲ್ಲ. ಚಿತ್ರದುರ್ಗದಲ್ಲಿ ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಎಸ್ಪಿ ಆದೇಶ ಹೊರಡಿಸಿದ್ದಾರೆ. ನಮ್ಮೂರಿನಲ್ಲಿ ಆಚರಿಸುವುದಕ್ಕೆ ನಮಗೆ ನೀವು ಅನುಮತಿ ಕೊಡಬೇಕೇ ಎಂದು ಗುಡುಗಿದ್ದಾರೆ.