Tag: Chalapathi

  • ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ

    ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ

    ದೆಷ್ಟೇ ಜನಸಂದಣಿ ಇರಲಿ, ಅಭಿಮಾನಿಗಳು ಮುತ್ತಿಕ್ಕಿಕೊಳ್ಳಲು ಪುನೀತ್ ರಾಜ್ ಕುಮಾರ್ ಅವರನ್ನು ಸೇಫಾಗಿ ಕರೆದುಕೊಂಡು ಹೋಗುತ್ತಿದ್ದವರು ಅವರ ಗನ್ ಮ್ಯಾನ್ ಚಲಪತಿ. ಮಾಜಿ ಸೈನಿಕರು ಆಗಿರುವ ಚಲಪತಿ ಹಲವು ವರ್ಷಗಳಿಂದ ಅಪ್ಪು ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅಂದು ಕೊನೆಯ ಬಾರಿಗೆ ಪುನೀತ್ ಅವರು ಆಸ್ಪತ್ರಗೆ ಹೋದಾಗ, ಅವರನ್ನು ಕಾರ್ ವರೆಗೂ ಕರೆದುಕೊಂಡು ಹೋಗಿ ಬಿಟ್ಟವರು ಆನಂತರ ಅಪ್ಪು ಅವರ ಅಗಲಿಗೆ ಸುದ್ದಿ ಕೇಳಿ ಕಣ್ಣಿರಾಗಿದ್ದರು. ಅಷ್ಟೊಂದು ಭಾವನಾತ್ಮಕವಾಗಿ ಅಪ್ಪು ಅವರನ್ನು ಅಭಿಮಾನಿಸುತ್ತಿದ್ದರು.

    ಈಗ ಅಪ್ಪು ಇಲ್ಲ, ಸುಮ್ಮನೆ ಅವರ ಮನೆಯಲ್ಲಿ ಕುಳಿತುಕೊಳ್ಳಲು ಆಗಲ್ಲ. ಅಲ್ಲದೇ, ಬೇರೆ ಯಾವ ನಟರ ಬಳಿಯೂ ಇವರಿಗೆ ಕೆಲಸ ಮಾಡಲು ಇಷ್ಟವಿಲ್ಲವಂತೆ. ಹಾಗಾಗಿ ಅಪ್ಪು ಇಲ್ಲದ ಬೆಂಗಳೂರನ್ನೇ ತೊರೆದು, ವಾಪಸ್ಸು ತಮ್ಮೂರಿಗೆ ಹೋಗಿದ್ದಾರೆ ಚಲಪತಿ. ಬೇರೆ ಯಾರಿಗಾದರೂ ಗನ್ ಮ್ಯಾನ್ ಆಗುತ್ತೇನೆ. ಮತ್ತೆ ನಟರಿಗೆ ಆಗಲಾರೆ. ಅಪ್ಪು ಸಾರ್ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಜೊತೆ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಅಪ್ಪು ಸಾರ್ ನಿಧನದ ನಂತರ ಐದಾರು ತಿಂಗಳು ಅಶ್ವಿನಿ ಮೇಡಂ ಜೊತೆ ಕೆಲಸ ಮಾಡಿದೆ. ಇದೀಗ ಕೆಲಸ ಬಿಟ್ಟು ಒಂದು ತಿಂಗಳಾಗಿದೆ. ಊರಲ್ಲೇ ಇದ್ದೇನೆ. ಅಪ್ಪ ಸರ್ ನೆನಪಿನಲ್ಲೇ ದಿನಗಳನ್ನು ಸಾಗಿಸುತ್ತಿದ್ದೇನೆ. ಅಲ್ಲದೇ, ಅಪ್ಪು ಸರ್ ಮನೆಯಲ್ಲಿ ನಾನು ಮಾಡುವಂತಹ ಕೆಲಸ ಏನೂ ಇರಲಿಲ್ಲ. ಸುಮ್ಮನೆ ಕೂರುವುದು ನನಗೆ ಕಷ್ಟ. ಹಾಗಾಗಿ ವಾಪಸ್ಸು ಊರಿಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಾವತ್ತೂ ಅಪ್ಪು ಸರ್ ನನ್ನನ್ನು ಗನ್ ಮ್ಯಾನ್ ಆಗಿ ನೋಡಲಿಲ್ಲ. ಸಹೋದರನಂತೆ ಕಂಡರು ಎಂದು ನೆನಪಿಸಿಕೊಳ್ಳುತ್ತಾರೆ.

    Live Tv

  • ಬದುಕಿದ್ದು ಸತ್ತಂತೆ ಇದ್ದೇವೆ, ನಾವು ಬದುಕಿರೋವರೆಗೆ ಅಪ್ಪು ನೆನಪಲ್ಲೇ ಇರ್ತೇವೆ: ಛಲಪತಿ

    ಬದುಕಿದ್ದು ಸತ್ತಂತೆ ಇದ್ದೇವೆ, ನಾವು ಬದುಕಿರೋವರೆಗೆ ಅಪ್ಪು ನೆನಪಲ್ಲೇ ಇರ್ತೇವೆ: ಛಲಪತಿ

    ಬೆಂಗಳೂರು: ನಮ್ಮ ಯಜಮಾನ್ರು ಇಲ್ಲದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಬದುಕಿದ್ದು ಸತ್ತಂತೆ ಇದ್ದೇವೆ, ನಾವು ಬದುಕಿರೋವರೆಗೆ ಯಜಮಾನರ ನೆನಪಲ್ಲೇ ಇರುತ್ತೇವೆ ಎಂದು ನಟ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಅವರ ಬಾಡಿಗಾರ್ಡ್ ಆಗಿದ್ದ ಛಲಪತಿ ದುಃಖದಿಂದ ಹೇಳಿಕೊಂಡಿದ್ದಾರೆ.

    ಪುನೀತ್ ಅಗಲಿ ಇಂದಿಗೆ ಮೂರು ತಿಂಗಳಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ತಮ್ಮ ನೋವನ್ನು ಹಂಚಿಕೊಂಡ ಅವರು, ಮೂರು ತಿಂಗಳು ಸತ್ತು ಬದುಕಿರುವಂತಿದೆ. ನಾವು ಇರಬೇಕು ಇದ್ದೀವಿ ಹಾಗೆ ಇದ್ದೇವೆ. ಯಜಮಾನರು ಇಲ್ಲದೆ ಯಾವುದು ನಡೀತಿಲ್ಲ. ಯಾವುದೇ ಊರುಗಳಿಗೆ ಹೋದರೂ ಯಜಮಾನರನ್ನು ನೋಡುತ್ತಿದ್ದೇನೆ ಅಭಿಮಾನಿಗಳ ಪ್ರೀತಿ ಕಾಣುತ್ತಿದ್ದೇನೆ. ನಾನು ಇನ್ನೂ ಅವರ ನೆನಪಿನಲ್ಲೇ ಇದ್ದೇನೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಪುನೀತ್ ಅಗಲಿ ಇಂದಿಗೆ 3 ತಿಂಗಳು – ಅಪ್ಪು ನೆನಪಲ್ಲಿ ಅಶ್ವಿನಿಯಿಂದ 500 ಗಿಡಗಳ ದಾನ

    ಯಜಮಾನರ ಜೊತೆ ಎಲ್ಲೇ ಹೊದ್ರು ಅವರ ಮಾತು ಹೊಸತು ಅನಿಸುತ್ತಿತ್ತು. ಪುನೀತ್ ರಾಜ್‍ಕುಮಾರ್ ಅವರನ್ನು ಮಾತನಾಡಿಸಬೇಕು, ಮುಟ್ಟಬೇಕೆಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ನನಗೆ ಯಜಮಾನರ ಸೇವೆ ಮಾಡೋಕೆ ಅವಕಾಶ ಸಿಕ್ಕಿದ್ದೆ ಅದೃಷ್ಟ ಅಷ್ಟೇ ದುರಾದೃಷ್ಟ ಇಷ್ಟು ಬೇಗ ಕಳೆದುಕೊಂಡಿದ್ದೇವೆ. ಅವರೊಂದಿಗಿದ್ದ ಪ್ರೀತಿ ನೆನಪು ಯಾವತ್ತು ಅಮರ ಎಂದರು. ಇದನ್ನೂ ಓದಿ: ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ – ಪುನೀತ್ ಖದರ್

    ಜೇಮ್ಸ್ ಪೋಸ್ಟರ್ ನೋಡಿ ತುಂಬಾ ಖುಷಿ ಆಯ್ತು. ಜೇಮ್ಸ್ ಸಿನಿಮಾದಲ್ಲಿ ಯಜಮಾನರ ಜೊತೆ ನಟಿಸಿದ್ದೇನೆ. ನಾನು ಯಜಮಾನರ ಜೊತೆ ಕಾಶ್ಮೀರಕ್ಕೆ ಈ ಚಿತ್ರದ ಶೂಟಿಂಗ್ ಹೋಗಿದ್ದೆ. ಅದೀಗ ನೆನಪು. ಎಲ್ಲಾ ಕಡೆ ಮೌನ ಆವರಿಸಿದೆ. ಅವರಿದ್ದರೆ ಎಲ್ಲ ಮುಂದೆ ಗೊತ್ತಿಲ್ಲ ಎಂದು ಗದ್ಗದಿತರಾದರು.