Tag: Chakravarty Chandrachud

  • ಭೀಮಾ ಕೋರೇಗಾಂವ ಚಿತ್ರದಲ್ಲಿ ದೀಪಿಕಾ ಪಡುಕೋಣೆ: ನಿರ್ದೇಶಕರು ಹೇಳಿದ್ದೇನು?

    ಭೀಮಾ ಕೋರೇಗಾಂವ ಚಿತ್ರದಲ್ಲಿ ದೀಪಿಕಾ ಪಡುಕೋಣೆ: ನಿರ್ದೇಶಕರು ಹೇಳಿದ್ದೇನು?

    ತ್ತೀಚೆಗಷ್ಟೆ ‘ಸಂಜು ವೆಡ್ಸ್ ಗೀತಾ-2’ ಚಿತ್ರಕ್ಕೆ ಚಾಲನೆ ನೀಡಿದ್ದ ನಿರ್ದೇಶಕ ನಾಗಶೇಖರ್ (Nagasekhar),  ಅದರ ಬೆನ್ನಲ್ಲೇ ಮತ್ತೊಂದು  ಬಿಗ್ ಪ್ರಾಜೆಕ್ಟ್   ಚಿತ್ರಕ್ಕೆ ಕೈ  ಹಾಕಿದ್ದಾರೆ. ರೆವಲ್ಯೂಷನರಿ ಸಬ್ಜೆಕ್ಟ್ ಇಟ್ಟುಕೊಂಡು ನೈಜ ಘಟನೆಯನ್ನು ತೆರೆಯ ಮೇಲೆ ಹೇಳಹೊರಟಿದ್ದಾರೆ. ಅದಕ್ಕೆ ಕೊಟ್ಟಿರುವ ಹೆಸರು ಭೀಮಾ ಕೋರೇಗಾಂವ (Bhima Koregaon). ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಛಲವಾದಿ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಹು ಸೂಕ್ಷ್ಮ ವಿಚಾರ ಇಟ್ಟುಕೊಂಡು  ಮಾಡುತ್ತಿರುವ ಚಲನಚಿತ್ರ ಇದಾಗಿದ್ದು,  ಬೆಂಗಳೂರಿನ ಅಶೋಕಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು  ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು  ಬಿಡುಗಡೆ ಮಾಡಿದರು.

    ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡುತ್ತ ‘ಸಂಜು ವೆಡ್ಸ್ ಗೀತಾ’  ಚಿತ್ರದ ಬಗ್ಗೆ ಚರ್ಚೆ ನಡೆಸುವಾಗ ಈ ವಿಷಯ ಪ್ರಸ್ತಾಪಕ್ಕೆ ಬಂತು. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಈ ಘಟನೆಯನ್ನು ನಮ್ಮ ಜನರಿಗೆ ತಿಳಿಸಬೇಕು ಎಂದು ನಿರ್ಧರಿಸಿ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದರು. ನಂತರ ನಾಗಶೇಖರ್ ಮಾತನಾಡಿ ‘1818ರ ಜ.1 ರಂದು ನಡೆದ ರೆವಲ್ಯೂಷನರಿ ಸಬ್ಜೆಕ್ಟ್. ಶೋಷಿತರ  ಬದುಕಿಗೆ ಬೆಳಕು ಹಚ್ಚುವ ಕೆಲಸಕ್ಕೆ ದೀಪ ಹಚ್ಚುವ ಮೂಲಕ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಇದು ಬಹಳ ದೊಡ್ಡ ವಿಚಾರವಾಗಿದೆ ಎಂದರು.

    ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡುತ್ತಾ, ‘ಪೂನಾ ನದಿಯ ದಡದಲ್ಲಿ ಡಿ.31ರಿಂದ ಜ.1ರವರೆಗೆ ಸ್ವಾಭಿಮಾನಿ ಬದುಕಿಗೋಸ್ಕರ. ನಡೆದ ಘನಘೋರ ಯುದ್ಧ . 2ನೇ ಬಾಜೀರಾಯನ ಘೋರ ಕೃತ್ಯಗಳನ್ನು ವಿರೋಧಿಸಿ ಮೆಹರ್ ಸೈನಿಕರು ನಡೆಸಿದ ಯುದ್ದ, ಭಾರತದ ನೆಲದಲ್ಲಿ ಬಾಜೀರಾಯ ಅಸ್ಪೃಶ್ಯರನ್ನು ಹೇಗೆ ನಡೆಸಿಕೊಂಡಿದ್ದ, ಯಾವ ರೀತಿ ನೋಡಿಕೊಂಡಿದ್ದ, ಯಾವ ಉದ್ದೇಶಕ್ಕೆ ಈ ಯುದ್ಧ ನಡೆಯಿತು ಅನ್ನುವುದನ್ನು ಈ ಸಿನಿಮಾದಲ್ಲಿ ದಾಖಲು ಮಾಡಲಾಗುತ್ತೆ’ ಎಂದರು.

    ಮುಖ್ಯ ಅತಿಥಿಯಾಗಿದ್ದ ಚಿಂತಕ ಗೋಪಾಲ್ ಮಾತನಾಡುತ್ತಾ, ‘ಅಸಮಾನತೆಯ ವಿರುದ್ಧ ನಡೆದ ಹೋರಾಟವಿದು. 500 ಜನ ಸೈನಿಕರು, 30  ಸಾವಿರ ಪೇಶ್ವೆ ಬಾಜೀರಾಯನ ಸೈನಿಕರನ್ನು 12 ಗಂಟೆಗಳಲ್ಲಿ ಧ್ವಂಸ ಮಾಡಿದ ಘಟನೆ. ಮೆಹರ್ಸ್ ಅಂದರೆ ಗುಲಾಮರು. ಬಾಜೀರಾಯ  ಅಸ್ಪೃಶ್ಯರ ವಿರುದ್ಧ  ಕಠಿಣ  ಕಾನೂನುಗಳನ್ನು ಜಾರಿಗೆ ತಂದಿದ್ದ. ಇದನ್ನು ವಿರೋಧಿಸಿ ನಡೆದ ಯುದ್ದವಿದು. ಹಾಲಿವುಡ್ ಶೈಲಿಯ ಸಿನಿಮಾ ಆಗಲಿದೆ‌’ ಎಂದರು. ಉಳಿದಂತೆ ನೆಹರು ಓಲೇಕಾರ್, ಚಕ್ರವರ್ತಿ ಚಂದ್ರಚೂಡ್, ಈ ಘಟನೆಯ ಬಗ್ಗೆ ಒಂದಷ್ಟು ಮಾಹಿತಿ‌ ನೀಡಿದರು.

     

    ಕೊನೆಯಲ್ಲಿ ಮಾತು ಮುಂದುವರೆಸಿದ ನಾಗಶೇಖರ್, ‘ಈ ಸಿನಿಮಾ ಮಾಡುವಂತೆ ನನಗೆ ಪ್ರೇರೇಪಿಸಿದ್ದು ರೈಟರ್ ಚಂದ್ರಚೂಡ್ (Chakravarty Chandrachud),  ಜಾಸ್ತಿ ಬಂಡವಾಳ ಕೇಳುತ್ತೆ. ಚಿತ್ರದ ಬಜೆಟ್ 120 ಕೋಟಿ ಆಗಬಹುದು. ನಿರ್ಮಾಪಕ ಕುಮಾರ್ ಎಷ್ಟೇ ಆದರೂ ಖರ್ಚು ಮಾಡಲು ರೆಡಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ಒಬ್ಬರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ. ನಟಿ ದೀಪಿಕಾ ಪಡುಕೋಣೆ (Deepika Padukone)ಅವರನ್ನು ನಾಯಕಿ ಪಾತ್ರಕ್ಕೆ ಕರೆತರುವ ಉದ್ದೇಶವಿದೆ. 54 ಕೋಟಿ ಶೋಷಿತರಿಗೆ ಬೆಳಕಾಗುವ ಕಥಾನಕವಿದು. ಚಂದ್ರಚೂಡ್ ನೇತೃತ್ವದಲ್ಲಿ ಬರಹಗಾರರ ತಂಡ ಕಟ್ಟಿ ಭಾಗ-1,  ಭಾಗ-2 ಮಾಡುವ ಯೋಚನೆಯಿದೆ. ಪ್ರೀ ಪ್ರೊಡಕ್ಷನ್ ಗೆ  365 ದಿನ ತೆಗೆದುಕೊಂಡಿದ್ದೇನೆ. ಈ ಕಥೆಯನ್ನು ಕಣ್ಣಿಗೆ ಕಟ್ಟುವ ಹಾಗೆ ಮನಸಿಗೆ ಮುಟ್ಟುವ ಹಾಗೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಮೇಲಿದೆ’ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಳು ವರ್ಷಗಳ ನಂತರ ನಿರ್ದೇಶನದ ಕ್ಯಾಪ್ ತೊಟ್ಟ ಚಕ್ರವರ್ತಿ ಚಂದ್ರಚೂಡ

    ಏಳು ವರ್ಷಗಳ ನಂತರ ನಿರ್ದೇಶನದ ಕ್ಯಾಪ್ ತೊಟ್ಟ ಚಕ್ರವರ್ತಿ ಚಂದ್ರಚೂಡ

    ತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (Chakravarty Chandrachud) ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರ ಹುಟ್ಟುಹಬ್ಬದಂದು ಮಿಲಿಂದ್ ಗೌತಮ್ ನಾಯಕನಾಗಿ ನಟಿಸುತ್ತಿರುವ ಈ ನೂತನ ಚಿತ್ರದ ಟೀಮ್ ಅನೌನ್ಸ್ ಆಗಿದೆ.  ಮಯೂರ ಮೋಷನ್ ಪಿಕ್ಚರ್ಸ್ ನ ನಿರ್ಮಾಪಕರು ಮಂಜುನಾಥ್ ಡಿ ಅವರು ‘ಅನ್ ಲಾಕ್  ರಾಘವ’ ನಂತರ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.  ಮಿಲಿಂದ್ ಗೌತಮ್ ನಾಯಕ ನಟರಾಗಿರುವ ಈ ಸಿನೆಮಾಗೆ ನಿರ್ದೇಶಕರ ಕ್ಯಾಪ್ ತೊಟ್ಟಿರುವುದು ಬಹುಮುಖ ಪ್ರತಿಭೆ ಡಿ. ಜೆ. ಚಕ್ರವರ್ತಿ (ಚಂದ್ರಚೂಡ್). ಬಿಗ್ ಬಾಸ್ ಖ್ಯಾತಿಯ, ಬರಹಗಾರ, ನಿರ್ದೇಶಕ ಚಕ್ರವರ್ತಿ ಏಳು ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದಾರೆ.

    ಅನ್ ಲಾಕ್  ರಾಘವ ನಂತರ ಮಿಲಿಂದ್ ಗೌತಮ್ (Milind Gautam) ಅವರು ಸತತ ಮೂರು ತಿಂಗಳುಗಳಿಂದ ಈ ಹೊಸ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ. ಇದನ್ನೂ ಓದಿ:ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

    ಮಣಿಕಾಂತ್ ಕದ್ರಿ (Manikanth Kadri) ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ. ಈಗಾಗಲೇ ಕದ್ರಿ ಮಣಿಕಾಂತ್ ಹಾಡುಗಳು ಸಂಯೋಜನೆಯಲ್ಲಿದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದೆ.

    ಆಗಸ್ಟ್ 18ರಂದು  ಟೀಸರ್ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ 2 , ಅಭಿನಯ ಚಕ್ರವರ್ತಿ ಸುದೀಪ್ ರವರ ಹುಟ್ಟಿದ ದಿನದಂದು ಟೀಸರ್ ಬಿಡುಗಡೆ ಮತ್ತು ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ನಿರ್ದೇಶಕರ ಹುಟ್ಟುಹಬ್ಬದಂದು(ಆಗಸ್ಟ್ 15) ಟೀಮ್ ಅನೌನ್ಸ್ ಆಗಲಿದೆ. ಈ ಪೋಸ್ಟರ್ ನಲ್ಲಿರುವ ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ!  ನಿಮಗೊಂದು ಅಪರೂಪದ ವಿಷಯ ಸಿಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]