Tag: Chakravarthy Chandrachud

  • ಆಡಿದ ಮಾತಿಗೆ ಪ್ರಾಯಶ್ಚಿತಕ್ಕೆ ಮುಂದಾದ ಚಕ್ರವರ್ತಿ

    ಆಡಿದ ಮಾತಿಗೆ ಪ್ರಾಯಶ್ಚಿತಕ್ಕೆ ಮುಂದಾದ ಚಕ್ರವರ್ತಿ

    ಬಿಗ್‍ಬಾಸ್ ಮನೆಯಲ್ಲಿ ನಗು, ಅಳುವಿನ ಕುರಿತಾಗಿ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಚಕ್ರವರ್ತಿಯವರು ಹೇಳಿದ ಮಾತನ್ನು ಕೇಳಿ ಶುಭಾ ಕಣ್ಣೀರು ಹಾಕಿದ್ದಾರೆ.

    ಶುಭಾ ಹುಡುಗ ಬೇರೆ ಹುಡುಗಿಯನ್ನು ನೋಡಿಕೊಳ್ಳುತ್ತಾನೆ ಎಂದು ಚಕ್ರವರ್ತಿ ಹೇಳಿ ಮುಗಿಸುವಷ್ಟರಲ್ಲಿ ಶುಭಾ ಕಣ್ಣೀರು ಹಾಕಿದ್ದಾರೆ. ಹಾಗೇ ಹೇಳಬೇಡಿ ಅಂದಿದ್ದಾರೆ. ನಾನು ನಿನ್ನ ಅಳಿಸಬೇಕು ಅಂತಾ ಹಾಗೇ ಹೇಳಿದೆ. ಕ್ಷಮಿಸು ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಮನೆಯ ಸ್ಪರ್ಧಿಗಳು ಏನು ಮಾತನಾಡದೇ ಸುಮ್ಮನೆ ಕುಳಿತಿದ್ದಾರೆ.

    ಈ ವಿಚಾರವಾಗಿ ಮನನೊಂದ ಚಕ್ರವರ್ತಿ ನಾನು ಹಾಗೇ ಹೇಳಬಾರದಿತ್ತು. ತಪ್ಪು ಮಾಡಿದೆ. ನಾನು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಇವತ್ತು ನನಗೆ ಊಟ ಬೇಡ. ನಾನು ಎಷ್ಟು ಕ್ಷಮೆ ಕೇಳಿದರೂ ಸಾಲದು. ನಾನು ಕಷ್ಟವನ್ನು ಅನುಭವಿಸಿದ್ದೇನೆ ಎಂದು ಮಂಜು ಬಳಿ ಹೇಳಿಕೊಂಡಿದ್ದಾರೆ.

    ನನಗೆ ಬೇಸರವಿಲ್ಲ. ನೀವು ಊಟ ಮಾಡಿ. ನನಗೆ ಅವನು ಜೀವನದಲ್ಲಿ ತುಂಬಾ ಮುಖ್ಯ ಎಂದು ಶುಭಾ ಚಕ್ರವರ್ತಿ ಅವರಿಗೆ ಹೇಳಿದ್ದಾರೆ. ಇಲ್ಲ ನಾನು ಯಾವತ್ತೂ ಹಾಗೇ ಮಾತನಾಡುವುದಿಲ್ಲ. ನನ್ನ ತಂಗಿಯ ಹಾಗೇ ನೀನು ನಿನಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಕ್ರವರ್ತಿ ಶುಭಾ ಅವರಿಗೆ ಹೇಳಿದ್ದಾರೆ.

    ಆಡಿದ ಮಾತನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಆದರೆ ಪ್ರಾಯಶ್ಚಿತಮಾಡಿಕೊಳ್ಳ ಬಹುದು ಎಂದು ಮಾತು ಆರಂಭಿಸಿದ ಸುದೀಪ್ ಈ ವಿಚಾರವನ್ನು ಕಟ್ಟೆ ಪಂಚಾಯ್ತಿಯಲ್ಲಿ ಮಾತನಾಡಿದ್ದಾರೆ. ನಾನು ಹಾಗೇ ಸರ್… ಚಕ್ರವರ್ತಿ ಅವರು ಹೇಳಿದ ಮಾತು ಬೇಸರವಾಯಿತ್ತು ಎಂದು ಶುಭಾ ಅವರು ಸುದೀಪ್ ಬಳಿ ಹೇಳಿದ್ದಾರೆ.

    ಶುಭಾ ಅವರಿಗೆ ಹೇಳಿದ ಮಾತು ತುಂಬಾ ಬೇಸರವಾಯುತು. ನಾನು ನೊಂದಿದ್ದೇನೆ. ನಾನು ಹಾಗೇ ಹೇಳಬಾರದಿತ್ತು. ನನಗೂ ಒಬ್ಬಳು ಮಗಳಿದ್ದಾಳೆ. ಯಾವುದೇ ವ್ಯಕ್ತಿಗೆ ಬೇಕು ಅಂತಾ ನೋವು ಕೊಡಬಾರದು ಸರ್ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ನಿಮ್ಮ ತಪ್ಪು ಅರಿತುಕೊಂಡು ಕ್ಷಮೆ ಕೇಳಿದ್ದಿರಾ. ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಹೋಗಿ ಪ್ರಾಯಶ್ಚಿತ ಮಾಡಿಕೊಂಡಿದ್ದಿರಾ ಒಳ್ಳೆಯದು ಎಂದು ಸುದೀಪ್ ಹೇಳಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿ

    ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿ

    ಬಿಗ್‍ಬಾಸ್ ಕನ್ನಡ ಸೀಸನ್ 8ರ ಮನೆಯಲ್ಲಿ ವೈಲ್ಡ್‍ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟು ಸಖತ್ ಸುದ್ದಿಯಲ್ಲಿರುವ ಚಕ್ರವರ್ತಿ ಚಂದ್ರಚೂಡ್ ಅವರು ಕಳಪೆ ಪ್ರದರ್ಶನ ತೋರಿ ಜೈಲು ಸೇರಿದ್ದಾರೆ. ಅವರ ವರ್ತನೆ ಮನೆಯ ಸದಸ್ಯರಿಗೆ ಹಿಡಿಸಿಲ್ಲ. ಆದರೆ ಚಕ್ರವರ್ತಿಯವರು ಜೈಲಿನಲ್ಲಿ ಇದ್ದುಕೊಂಡು ನಿಜವಾದ ಆಟ ಆಡುವ ಎಂದು ಪ್ಲ್ಯಾನ್ ಹಾಕಿದ್ದಾರೆ.

    ಬಿಗ್‍ಬಾಸ್ ಮನೆ ಪ್ರವೇಶ ಮಾಡಿದಕೂಡಲೇ ಎಲ್ಲರೂ ಯೋಚನೆ ಮಾಡುವ ಶೈಲಿ ಬದಲಾಯ್ತು, ಮನೆಯ ಸದಸ್ಯರು ಬೇರೆ ಬೇರೆ ಆಗಿ ಗ್ರೂಪ್ ಮಾಡಿಕೊಂಡರು. ಎಲ್ಲರ ನಡುವೆ ಮನಸ್ತಾಪ ಶುರುವಾಯ್ತು. ಚಕ್ರವರ್ತಿ ಬಂದನಂತರ ಮನೆಯ ವಾತಾವರಣವೇ ಬದಲಾಯ್ತು ಅಂತ ಕೂಡ ಮನೆಯ ಸದಸ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ವರ್ತನೆ ಅನೇಕರಿಗೆ ಇಷ್ಟವಾಗಿಲ್ಲ. ಚಕ್ರವರ್ತಿ ಅವರು ಬಂದ ಕೆಲವೇ ದಿನಗಳಲ್ಲಿ ಅವರ ಆಟವನ್ನು ಶುರು ಮಾಡಿದ್ದಾರೆ.

    ಚಕ್ರವರ್ತಿ ಅವರು ಜಗಳ ಆಡಿದ್ದಾರೆ, ನೇರವಾಗಿ ಬೇರೆಯವರ ಮನಸ್ಸಿಗೆ ಬೇಸರ ಆಗುವಂತೆ ಕಾಮೆಂಟ್ ಕೂಡ ನೀಡಿದ್ದರು ಎಂದು ಸ್ಪರ್ಧಿಗಳು ಹೇಳಿದ್ದಾರೆ. ಜೈಲಿಗೆ ಸೇರಿದ್ದು ಚಕ್ರವರ್ತಿಗೆ ಸಿಟ್ಟು ತರಿಸಿದೆ. ಸರ್ವಾಧಿಕಾರಿ ಆಗಿ ಮುಂದೆಯೂ ಇರ್ತೀನಿ, ವಾರ ವಾರ ಜೈಲಿಗೆ ಬರ್ತೀನಿ, ಎಲ್ಲರಿಗೂ ಉತ್ತರ ಕೊಡ್ತೀನಿ ಅಂತ ಚಕ್ರವರ್ತಿ ಹೇಳಿದ್ದಾರೆ.

    ಚಕ್ರವರ್ತಿ ಅವರು ಜೈಲಿನಲ್ಲಿ ತರಕಾರಿ ಹೆಚ್ಚಿಕೊಡಬೇಕಿದೆ. ಅವರಿಗೆ ನೀಡಿದ್ದ ಜೈಲಿನ ಟೋಪಿಯ ಅಳತೆ ಸರಿ ಇಲ್ಲವಂತೆ, ಮುಂದಿನ ಬಾರಿ ಟೋಪಿಯ ಸೈಜ್ ಬೇರೆ ಕೊಡಬೇಕು ಎಂದು ಚಕ್ರವರ್ತಿ ಹೇಳಿದ್ದಾರೆ. ಒಟ್ಟಿನಲ್ಲಿ ಕಳಪೆ ಪಟ್ಟ ನೀಡಿರೋದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬೇಸರ ತರಿಸಿದೆ. ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಮಂಜು ಪಾವಗಡ, ದಿವ್ಯಾ ಉರುಡುಗ ಮುಂತಾದವರು ಚಕ್ರವರ್ತಿಗೆ ಕಳಪೆ ಪಟ್ಟ ನೀಡಿದ್ದರು. ದಿವ್ಯಾ ಅವರು ಬಿಟ್ಟಿ ಸಲಹೆ ನೀಡ್ತಾರೆ ಅಂತ ಕಾಮೆಂಟ್ ಮಾಡಿದ್ದು ಚಕ್ರವರ್ತಿ ಕೋಪವನ್ನು ತಾರಕಕ್ಕೇರಿಸಿದೆ.

    ನಾನು ತರಕಾರಿ ಕಟ್ ಮಾಡಿಕೊಟ್ಟ್ರೆ ಇವರಿಗೆ ಊಟಾ ಎಂದರೆ ನಾನು ಕಟ್ ಮಾಡಿಕೊಡುವುದಿಲ್ಲ. ನನ್ನ ಜೈಲುವಾಸಕ್ಕೆ ಕಾರಣವಾಗಿರುವ ಪ್ರತಿಯೊಬ್ಬರಿಗೂ ನಿದ್ದೆ ಕೆಡಿಸುತ್ತೇನೆ ಇದು ನನ್ನ ಶಪಥ. ಜೈಲಿಗೆ ಹಾಕಿದ್ರೆ ಪ್ರತಿವಾರ ವಿಚಿತ್ರ ಮಾಡುತ್ತೇನ. ಪ್ರತಿವಾರ ಇನ್ನು ಚಳುವಳಿ ನಡೆಯುತ್ತದೆ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ನಕ್ಕು ಸುಮ್ಮನಾಗಿದ್ದಾರೆ.

  • ಶುಭಾ ಮೋಸ ಹೋಗ್ತಾರೆ, ಮೋಸ ಮಾಡಲ್ಲ: ಚಂದ್ರಚೂಡ್

    ಶುಭಾ ಮೋಸ ಹೋಗ್ತಾರೆ, ಮೋಸ ಮಾಡಲ್ಲ: ಚಂದ್ರಚೂಡ್

    ಬಿಗ್‍ಬಾಸ್ ಮನೆಯಲ್ಲಿ ಸ್ಪಧಿಗಳು ಗಾರ್ಡನ್ ಏರಿಯಾ ಮತ್ತು ಅಡುಗೆ ಮನೆಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂಬುದು ತಿಳಿದಿರುವ ವಿಷಯವಾಗಿದೆ. ಅಡುಗೆ ಮನೆಯ ಕುರಿತಾಗಿ ಜಗಳ, ಮುನಿಸು ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಒಟ್ಟಾಗಿ ಸೇರಿ ಅಡುಗೆ ಮನೆಯಲ್ಲಿ ಸೇರಿದಾಗ ಆ ಒಂದು ಮಾತನ್ನು ಕೇಳಿ ಸುಮ್ಮನಾಗಿದ್ದಾರೆ.

    ಶುಭಾ ಮನೆಯಲ್ಲಿರುವ ಸದಸ್ಯರಲ್ಲಿ ಅತ್ಯಂತ ಕ್ಯೂಟ್ ಸದಸ್ಯೆ ಎಂದು ಹೇಳಿದರೆ ತಪ್ಪಾಗಲಾರದು. ಅವರು ಜಗಳವನ್ನು ಸುಂದರವಾಗಿಯೇ ಮಾಡುತ್ತಾರೆ. ಅವರು ಅಳುವಾಗಲೂ ಕೂಡಾ ಎಲ್ಲೋ ಒಂದು ಕಡೆ ನಗುತ್ತಲೇ ಇರುತ್ತಾರೆ. ಹೀಗಿರುವಾಗ ಈ ಮುಗ್ಧ ಮನಸ್ಸಿನ ಚೆಲುವೆಗೆ ಚಕ್ರವರ್ತಿ ಚಂದ್ರಚೂಡ್ ಮಾತಿನ ಏಟನ್ನು ಕೊಟ್ಟಿದ್ದಾರೆ.

    ಹೌದು ಖಾಸಗಿ ವಾಹಿನಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಅನ್‍ಸೀನ್‍ನಲ್ಲಿ ಮನೆಯವರು ಎಲ್ಲರೂ ಒಟ್ಟಾಗಿ ಸೇರಿ ಚಪಾತಿ ಮಾಡುತ್ತಾ ಇದ್ದರು. ಈ ವೇಳೆ ಎಲ್ಲರೂ ಕಳ್ಳರಂತೆ ಒಂದೊಂದು ಚಪಾತಿಯನ್ನು ಎತ್ತಿಕೊಂಡು ತಿಂದಿದ್ದಾರೆ. ಏ.. ಚಪಾತಿಯನ್ನು ಈಗಾಗಲೇ ಖಾಲಿ ಮಾಡಿದ್ದೀರಾ ಎಂದು ಶುಭಾ ಹೇಳಿದ್ದಾರೆ. ಈ ವೇಳೆ ರಾಜೀವ್ ನೀನು ಸುಳ್ಳು ಹೇಳಬೇಡಾ, ಮೋಸ ಮಾಡಬೇಡಾ ಹಾಗೇ ಹೀಗೆ ಎಂದು ತಮಾಷೆಯಾಗಿ ಶುಭಾ ಅವರಿಗೆ ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶಿದ ಚಕ್ರವರ್ತಿ, ಶುಭಾ ಮೋಸ ಹೋಗಿ ಬಿಡುತ್ತಾರೆ. ಆದರೆ ಮೋಸ ಮಾಡುವುದಿಲ್ಲ ಬೇಕಾದರೆ ಅವರು ಅನುಭವವನ್ನು ಕೇಳಿ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿದ್ದ ಮನೆ ಮಂದಿ ಕೇಳಿಯೂ ಕೇಳದವರ ಹಾಗೇ ಇದ್ರು.

    ಚಕ್ರವರ್ತಿ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಸುದ್ದಿಯಾಗುತ್ತಿರುವ ಸ್ಪರ್ಧಿಯಾಗಿದ್ದಾರೆ. ಒಂದಲ್ಲಾ ಒಂದು ವಿಚಾರವಾಗಿ ಕಿರಿಕ್ ಮಾಡುತ್ತಲೇ ಇರುತ್ತಾರೆ. ತಮಗೆ ಅನ್ನಿಸಿದ ವಿಚಾರಗಳನ್ನು ನೇರವಾಗಿ ಹೇಳುವ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಆದರೆ ಶುಭಾ ಅವರಿಗೆ ಮೋಸ ಹೋಗುತ್ತಾರೆ… ಮೋಸ ಮಾಡಲ್ಲ ಎಂದು ಯಾಕೆ ಹೇಳಿದರೂ ಎನ್ನುವ ವಿಚಾರ ಮಾತ್ರ ನಿಗೂಢವಾಗಿದೆ.

  • ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಐದನೇ ವಾರದತ್ತ ಸಾಗುತ್ತಿದೆ. ಸದ್ಯ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಮನೆಗೆ ಹೊಸದಾಗಿ ಬಂದ ಸದಸ್ಯ ಚಕ್ರವರ್ತಿ ಚಂದ್ರಚೂಡ್ ಕಿಚ್ಚನ ಮುಂದೆ ಪ್ರಶಾಂತ್ ಸಂಬರ್ಗಿಯವರ ಕುರಿತಂತೆ ಸಾಹಿತ್ಯವೊಂದನ್ನು ಬರೆದಿದ್ದಾರೆ.

    ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು, ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು, ಕಡಲನೇ ತಂದು ಮಡಿಲಿಗೆ ಸುರಿದವನು. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಎಂದು ಚಕ್ರವರ್ತಿ ಚಂದ್ರಚೂಡರವರು ಹೇಳುತ್ತಾರೆ. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರೆ ನಿಮಗೆ ಯಾಕೆ ಈ ಸಾಲುಗಳನ್ನು ಹೇಳಿದರು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತಿಲ್ಲ ಎಂದಾಗ ಸುದೀಪ್ ಹಾಸ್ಯಮಯವಾಗಿ ನಿಮಗೆ ಗೊತ್ತಿಲ್ವಾ ಎನ್ನುತ್ತಾ ನಗುತ್ತಾರೆ.

    ಬಳಿಕ ಸುದೀಪ್ ಚಕ್ರವರ್ತಿವಯರೇ ವಿವರಿಸಿ ಯಾಕೆ ಪ್ರಶಾಂತ್ ಸಂಬರ್ಗಿಯವರ ಮೇಲೆ ಈ ಸಾಹಿತ್ಯ ಬರೆದಿದ್ದೀರಾ ಎಂದು ಹೇಳಿದಾಗ, ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು ಎಂದರೆ ಕಲ್ಲಾಗಿದ್ದಾಗ ಅದು ಯಾರಿಗೂ ಬೇಡವಾಗಿರುತ್ತದೆ, ಆದರೆ ಅದು ದೇವರಾದಾಗ ಎಲ್ಲರಿಗೂ ಬೇಕಾಗುತ್ತದೆ. ಒಂದು ಬೇಡವಾಗಿರುವುದನ್ನು ಬೇಕಾಗಿಸುವಂತಹ ಶಕ್ತಿ ಪ್ರಶಾಂತ್‍ರವರಿಗೆ ಇದೆ. ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು ಎಂದರೆ ಮೊಸಳೆ ನೀರಿನಲ್ಲಿದ್ದಾಗ ಯಾರಾದರೂ ಹೋದರೆ, ಒಮ್ಮೆ ಅದು ಹಿಡಿದುಕೊಂಡರೆ ಬಿಡುವುದಿಲ್ಲ. ಆದರೆ ಅದನ್ನು ಮಗುವಿನಂತೆ ಮಾಡಿಸುತ್ತಾನೆ ಎಂದರೆ ಅವನು ನೂರಾರು ಬ್ರಹ್ಮಗಳಿಗೆ ತಂದೆ ಎಂದರ್ಥ.

    ಕಡಲನೇ ತಂದು ಮಡಿಲಿಗೆ ಸುರಿದ ಎಂದರೆ ಈ ಮನುಷ್ಯ ಯಾರಿಗಾದರೂ ಸಂತೋಷ ಕೊಡಲು ಪ್ರಾರಂಭಿಸಿದರೆ, ಅಷ್ಟು ಸಂತೋಷ ಕೊಡುವ ತಾಕತ್ತಿದೆ. ಹಾಗೇಯೇ ಅಷ್ಟೇ ಕಾಟವನ್ನು ಕೂಡ ಕೊಟ್ಟು ಬಿಡುತ್ತಾನೆ. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಅಂದರೆ ಕಾಮನ ಬಿಲ್ಲು ಶಾಶ್ವತ ಅಲ್ಲ ಹೀಗೆ ಬಂದು ಹೀಗೆ ಹೋಗುತ್ತದೆ. ಸುಳ್ಳನ್ನೆ ತಂದು, ಸುಳ್ಳನ್ನೇ ಅಡುಗೆ ಮಾಡಿ, ಸುಳ್ಳನ್ನೇ ಬಡಿಸುವಷ್ಟು ಸತ್ಯವಂತ ಅಂತ ನಾನು ಭಾವಿಸಿದ್ದೇನೆ ಎಂದು ವ್ಯಂಗ್ಯಮಯವಾಗಿ ನುಡಿಯುತ್ತಾ, ಪ್ರಶಾಂತ್ ಸಂಬರ್ಗಿಯವರ ಮೇಲೆ ಕವಿತೆ ಬರೆದು ಬಣ್ಣಿಸಿದ್ದಾರೆ.

    ಒಟ್ಟಾರೆ ಚಕ್ರವರ್ತಿಯವರು ಆನ್ ದಿ ಸ್ಪಾರ್ಟ್ ಬರೆದ ಈ ಸಾಹಿತ್ಯ ಕೇಳಿ ಮನೆಯ ಎಲ್ಲಾ ಸದಸ್ಯರು ಎದ್ದು-ಬಿದ್ದು ನಕ್ಕಿದ್ದಾರೆ.

  • ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ಚಿಕ್ಕ ವಯಸ್ಸಿನಿಂದಲೂ ಕಷ್ಟದಲ್ಲಿಯೇ ಬೆಳೆದ ರಘು, ನಿನ್ನೆ ವೈಷ್ಣವಿ ಬಳಿ ತಮ್ಮ ತಾಯಿಯ ಬಗ್ಗೆ ಮಾತನಾಡಿ ನೋವನ್ನು ಹಂಚಿಕೊಂಡಿದ್ದಾರೆ.

    ವೈಲ್ಡ್‍ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಸದಸ್ಯ ಚಂದ್ರಚೂಡ ಚಕ್ರವರ್ತಿ, ನಿನ್ನೆ ರಘು ಜೊತೆ ನಿಮ್ಮ ಹೃದಯದಲ್ಲಿ ನಿಮ್ಮ ತಾಯಿಗೆ ಹೇಳಬೇಕಾದ ಬಹಳ ವಿಚಾರವಿದೆ. ಆದರೆ ಅದನ್ನು ಪ್ರಾಮಾಣಿಕವಾಗಿ ಯಾರಾದರೂ ಬಳಿ ಇಲ್ಲಿಯವಗೂ ಹೇಳಿಕೊಂಡಿದ್ದೀರಾ? ನಿಮಗೆ ನಿಮ್ಮ ಒಳಗಿರುವ ನೋವನ್ನು ಕರಗಿಸಿಕೊಳ್ಳಬೇಕು ಎಂಬ ಆಸೆ ಇದ್ಯಾ? ಎಂದು ಪ್ರಶ್ನಿಸುತ್ತಾರೆ.

    ಆಗ ರಘು ಹೌದು ಎಂದಾಗ, ವೈಷ್ಣವಿಯವರ ಕಣ್ಣನ್ನು ನೋಡಿಕೊಂಡು ನಿಮ್ಮ ತಾಯಿಯನ್ನು ಹುಡುಕಿ, ಹಾಗೇನಾದರೂ ನಿಮ್ಮ ತಾಯಿಯ ಭಾವನೆ ಅವರಲ್ಲಿ ಕಂಡರೆ ನಿಮ್ಮ ತಾಯಿ ಬಳಿ ಹೇಳಿಕೊಳ್ಳಬೇಕೆಂದು ಕೊಂಡಿದ್ದನ್ನೆಲ್ಲಾ ಹೇಳಿಕೊಳ್ಳಿ ಎಂದು ತಿಳಿಸುತ್ತಾರೆ.

    ಬಳಿಕ ವೈಷ್ಣವಿ ನೋಡುತ್ತಾ ರಘು, ನಿನ್ನ ಕೋಪ, ಅಸಹಾಯಕತೆ, ಬೇಸರ ನಿನ್ನ ಮನಸ್ಸಿನಲ್ಲಿ ನಡೆಯುತ್ತಿರುವುದು ನನಗೆ ಅರ್ಥವಾಗಬಹುದಿತ್ತೇನೋ ಆದರೆ ನನಗೆ ಅದು ತಿಳಿಯಲಿಲ್ಲ. ನೀನು ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪಾಗಿದ್ದವು. ಒಂದು ಸಮಯದಲ್ಲಿ ನನ್ನನ್ನು ನೀನು ಬೇಡ ಅಂದೇ, ದರಿದ್ರ, ಅನಿಷ್ಟ ಎಂದೇ ಅದನ್ನು ನಾನು ಅರ್ಥಮಾಡಿಕೊಂಡೆ, ಒಮ್ಮೊಮ್ಮೆ ನೀನು ಸತ್ತಿದ್ದೆ ನನಗೆ ಬೆಸ್ಟ್ ಎಂದು ಕೂಡ ಅನಿಸಿತ್ತು. ಯಾಕೆಂದರೆ ನಾನು 14-15 ವರ್ಷಗಳ ಹಿಂದೆ ನೋಡಿದ ಅಮ್ಮನಂತೆ ನೀನು ಇರಲಿಲ್ಲ. ನೀನು ತುಂಬಾ ಸ್ಟ್ರಾಂಗ್ ಆಗಿದ್ದೆ, ತುಂಬಾ ನಗುತ್ತಿದ್ದೆ, ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಆದರೆ ಸಾಯುವ ಕೊನೆಯ ಮೂರು ತಿಂಗಳ ಹಿಂದೆ ನೀನು ಯಾಕೆ ಹಾಗೇ ಆದೆ ಎಂದು ನಿನಗೆ ಮಾತ್ರ ಗೊತ್ತು. ಪ್ರತಿ ಬಾರಿ ನೀನು ನನಗೆ ಹುಚ್ಚು ಹಿಡಿದಂತೆ ಆಗುತ್ತಿದೆ. ನನಗೆ ಸಾಯುವುದಕ್ಕೂ ಇಷ್ಟವಾಗುತ್ತಿಲ್ಲ ರೋಡಿಗೆ ಹೋಗುತ್ತೇನೆ ನಾನು ಹುಚ್ಚಿಯಾಗುತ್ತೇನೆ ಎಂದಾಗ ನನಗೆ ಏನು ಮಾಡಬೇಕೆಂದು ಸಹ ಗೊತ್ತಾಗುತ್ತಿರಲಿಲ್ಲ.

    ನನಗೆ ಎಷ್ಟೋ ಬಾರಿ ನಿನ್ನನ್ನು ಸಾಯಿಸಿ ನಾನು ಸಾಯಬೇಕು ಎಂದುಕೊಂಡಿದ್ದೆ. ಆದರೆ ಆ ಧೈರ್ಯ ನನಗೆ ಇರಲಿಲ್ಲ ಎಂದು ಕಣ್ಣೀರಿಟ್ಟರು. ನೀನು ಹುಟ್ಟಿದ ಮೇಲೆ ಹೀಗಾದೆವು ಎಂದರೆ ನಾನೇನು ತಪ್ಪು ಮಾಡಿದ್ದೇ. ನೀನು ಏನು ಮಾಡಿದ್ದರೂ ನಾನು ಪ್ರಾಣಕ್ಕಿಂತ ನಿನ್ನನ್ನು ಇಷ್ಟಪಡುತ್ತಿದ್ದೆ. ಮುಂದೆಯೂ ಹೀಗೆ ಇಷ್ಟ ಪಡುತ್ತೇನೆ. ನೀನು ಏನು ಕಷ್ಟಪಟ್ಟಿದ್ಯೋ ಅದು ಯಾರಿಗೂ ಆಗಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ನೋವನ್ನು ವೈಷ್ಣವಿ ಬಳಿ ತೋಡಿಕೊಳ್ಳುತ್ತಾರೆ.

    ನಂತರ ವೈಷ್ಣವಿ ನಿಮ್ಮ ತಂದೆ-ತಾಯಿಗೆ ಏನು ನೋವಿತ್ತು ಎಂಬುವುದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಮೊದಲನೇಯದಾಗಿ ನಾವು ಅವರನ್ನು ಗೌರವಿಸಬೇಕು. ಇಂದಿನಿಂದ ನೀವು ಬದಲಾಗಿ ಎಲ್ಲವನ್ನು ಮರೆತು ಚೆನ್ನಾಗಿ ಬದುಕಿ ಎಂದು ಸಮಾಧಾನ ಪಡಿಸುತ್ತಾರೆ.

  • ನೋಡದಕ್ಕೆ ಮಾತ್ರ ಹುಡುಗಿ ಮನಸ್ಸು ಹುಡುಗ ಎಂದು ಚಂದ್ರಚೂಡ ಹೇಳಿದ್ದು ಯಾರಿಗೆ?

    ನೋಡದಕ್ಕೆ ಮಾತ್ರ ಹುಡುಗಿ ಮನಸ್ಸು ಹುಡುಗ ಎಂದು ಚಂದ್ರಚೂಡ ಹೇಳಿದ್ದು ಯಾರಿಗೆ?

    ಬೆಂಗಳೂರು: ಬಿಗ್‍ಬಾಸ್ ಸೀಸನ್ 8 ರ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿರುವ ಚಕ್ರವರ್ತಿ ಚಂದ್ರಚೂಡ, ಬಿಗ್‍ಮನೆಯಲ್ಲಿರುವ ಇತರ ಸ್ಪರ್ಧಿಗಳೊಂದಿಗೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮಾತಿನ ಮೂಲಕವೇ ಮೋಡಿ ಮಾಡಲು ಹೊರಟಿರುವ ಚಂದ್ರಚೂಡ, ನೀನು ನೋಡುದಕ್ಕೆ ಮಾತ್ರ ಹುಡುಗಿ ಮನಸ್ಸು ಮಾತ್ರ ಹುಡುಗನ ಹಾಗೆ ಎಂದು ಸ್ಪರ್ಧಿಯೊಬ್ಬರ ಕಾಲೆಳೆದಿದ್ದಾರೆ.

    ಹೌದು ಚಂದ್ರಚೂಡ ಬೆಳಗ್ಗೆ ಎದ್ದು ಪ್ರಶಾಂತ್, ರಘು ಮತ್ತು ನಿಧಿ ಸುಬ್ಬಯ್ಯ ಅವರೊಂದಿಗೆ ಮಾತಿಗಿಳಿದಿದ್ದರು. ಈ ವೇಳೆ ಮುಂದೆ ಕುಳಿದ್ದ ನಿಧಿಯನ್ನು ಕುರಿತು ನಾನು ನಿಧಿಮಾನನ್ನು ಹುಡುಗಿ ಎಂದು ನೋಡೋದೆ ಇಲ್ಲ. ಇವರು ನೋಡುದಕ್ಕೆ ಮಾತ್ರ ಹುಡುಗಿ ಮನಸ್ಸೆಲ್ಲ ಹುಡುಗನ ಹಾಗೆ ಇದೆ. ಇವರ ಸೈಕಾಲಜಿ ಪುರುಷರ ಸೈಕಾಲಜಿ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಮೊದಲು ಚಂದ್ರಚೂಡ, ನಿಧಿ ನಿಮಗೆ ನಾನು ಕಪಲ್‍ಬಾತ್ ಮತ್ತು ಬುದ್ಧ ವಾಕಿಂಗ್ ಹೇಳಿಕೊಡುತ್ತೇನೆ ಪ್ರತಿದಿನ ಹದಿನೈದು ನಿಮಿಷ ಇದನ್ನು ಮಾಡಬೇಕು ಇದರಿಂದ ನಿಮ್ಮ ಎನರ್ಜಿ ಹೆಚ್ಚಾಗುತ್ತದೆ ಎಂದರು. ನಂತರ ಚಂದ್ರಚೂಡ ನಾನು ಇದನ್ನು ವೈಷ್ಣವಿ ಅವರಿಗೂ ಹೇಳಿಕೊಡಬೇಕು ಬಿಗ್‍ಬಾಸ್ ಮನೆಯಲ್ಲಿ ಅವರ ಎನರ್ಜಿ ತುಂಬಾ ಚೆನ್ನಾಗಿದೆ. ಪಾಸಿಟಿವ್ ಎನರ್ಜಿ ಕಾಣಿಸುತ್ತಿದೆ, ನಮ್ಮ ಮುಂದೆ ಕುಳಿತಿರುವವರನ್ನು ನೋಡಿದಾಗ ಅವರ ಶಕ್ತಿಯ ಬಗ್ಗೆ ಅರಿವಾಗುತ್ತದೆ ಎಂದರು.

    ಈ ವೇಳೆ ಮಾತು ಪ್ರಾರಂಭಿಸಿದ ರಘು ನಾನು ಬಿಗ್‍ಬಾಸ್ ಮನೆಗೆ ಬಂದ ನಂತರ ಇಲ್ಲಿ ಒಂದಿಬ್ಬರು, ಮೂವರಲ್ಲಿ ಈ ರೀತಿಯ ಎನರ್ಜಿ ನೋಡಿದ್ದೇನೆ ಎಂದರು. ನಾವು ಹೆಣ್ಣು ಗಂಡು ಅಂತ ಬೇರೆ ಬೇರೆ ನೋಡಬಾರದು ಹೆಣ್ಣು ಗಂಡು ಒಂದೇ ಎಂದು ಚಂದ್ರಚೂಡ ತಿಳಿಸಿ, ನಿಧಿ ಒಳ್ಳೆ ಹುಡುಗಿ ಆದರೆ ನೋಡುದಕ್ಕೆ ಹಾಗೆ ಕಾಣುವುದಿಲ್ಲ ಎಂದು ತಮಾಷೆ ಮಾಡಿದರು.

    ಬಿಗ್‍ಮನೆಗೆ ಬಂದಂತಹ ಕೆಲ ಸ್ಪರ್ಧಿಗಳು ಎಲಿಮಿನೆಟ್ ಆಗಿ ಹೊರನಡೆದಿದ್ದರೆ, ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಚಂದ್ರಚೂಡ ಮಾತ್ರ ತಮ್ಮ ಮಾತು ಮತ್ತು ವರ್ತನೆಯ ಮೂಲಕ ಬಿಗ್‍ಬಾಸ್ ಮನೆಯಲ್ಲಿ ಹೊಸ ಮಂದಹಾಸ ಮೂಡಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವರೀತಿ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

  • ಕೊಡಗಿನ ಜನತೆಗೆ ನೆರವಾಗಲು ರಂಗಸಪ್ತಾಹ- ಭಾಗವಹಿಸಿ, ಸಹಾಯ ಮಾಡಿ

    ಕೊಡಗಿನ ಜನತೆಗೆ ನೆರವಾಗಲು ರಂಗಸಪ್ತಾಹ- ಭಾಗವಹಿಸಿ, ಸಹಾಯ ಮಾಡಿ

    ಬೆಂಗಳೂರು: ಕೊಡಗಿನ ಅನಾಹುತಕ್ಕೆ ನೆರವಾಗಲು ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಾಗೂ ಸಮಾನ ಮನಸ್ಕರ ನೇತೃತ್ವದಲ್ಲಿ ಆರಂಭವಾದ ಪೀಪಲ್ ಫಾರ್ ಕೊಡಗು ತಂಡವು ರಂಗಸಪ್ತಾಹ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

    ಬೆಂಗಳೂರಿನ ಕಲಾಗ್ರಾಮದಲ್ಲಿ ನವೆಂಬರ್ 11 ರಿಂದ ನವೆಂಬರ್ 16ರ ತನಕ ಪ್ರತಿದಿನ ಸಂಜೆ 5.30ಕ್ಕೆ ಗಾಯನ ಹಾಗೂ 7ಕ್ಕೆ ನಾಟಕ ಪ್ರದರ್ಶನವಿರುತ್ತದೆ. ಟಿಕೆಟ್ ಬೆಲೆ 100 ರೂ. ಹಾಗೂ 600 ರೂ. ಸೀಸನ್ ಪಾಸ್ ದರ ನಿಗದಿ ಮಾಡಲಾಗಿದೆ.

    ಪೀಪಲ್ ಫಾರ್ ಪೀಪಲ್ ಮನವಿ ಏನು?
    ಮಳೆ ನಿಂತಿತು, ಕೊಡಗು ಕೂಡ ಜನರ ನೆನಪಿನಿಂದ ಮರೆಯಾಗತೊಡಗಿತು. ನಮ್ಮ ದೇಶದಲ್ಲಿ ಸಮಸ್ಯೆಗಳೇ ಹಾಗೆ. ತಕ್ಷಣದ ಅನುಭೂತಿ ಮುಗಿದ ಮೇಲೆ ನಾವೆಲ್ಲರೂ ಮರೆಯುತ್ತೇವೆ. ಆದರೆ ಕೊಡಗು ನಮ್ಮೆಲ್ಲರ ಹೆಮ್ಮೆ. ಈ ಕೊಡಗು ಸರಿ ಹೋಗಿಲ್ಲ ಸಮಸ್ಯೆಗಳ ಸಾಗರವೇ ಇದೆ. ಕೊಡಗನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಬೆಟ್ಟದಷ್ಟು ಕೆಲಸಗಳು ಬಾಕಿ ಇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತಿದ್ದರೂ ಮರುನಿರ್ಮಾಣಕ್ಕೆ ವರ್ಷಾನುಗಟ್ಟಲೆಯ ಬದ್ಧತೆ ಬೇಕಿದೆ, ಶ್ರಮ ಹಾಕಬೇಕಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ “ಪೀಪಲ್ ಫಾರ್ ಪೀಪಲ್” ತಂಡ 25ಕ್ಕೂ ಹೆಚ್ಚು ದಿನಗಳ ಕಾಲ ಕೊಡಗಿನ ನೆರೆ ಪೀಡಿತ ಪ್ರದೇಶಗಳಲ್ಲಿ ನಿಂತು ಕೆಲಸ ಮಾಡಿದ್ದಲ್ಲದೆ ಸರಕಾರಕ್ಕೆ ಆಗಲೇಬೇಕಾದ 19 ಅವಶ್ಯ ಕೆಲಸಗಳ ಪಟ್ಟಿಯನ್ನು ಮನವಿ ಪತ್ರದ ಮೂಲಕ ಕೊಟ್ಟು, ಆ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಲು ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರನ್ನು ಕೈಜೋಡಿಸುವಂತೆ ಕೇಳಿಕೊಂಡಿದೆ. ಖುಷಿಯ ವಿಚಾರವೆಂದರೆ ಮಠ ಮಾನ್ಯಗಳಿಂದ ಹಿಡಿದು ರೈತ ಸಂಘದ ವರೆಗೆ ಎಲ್ಲರೂ ಕೈಜೋಡಿಸುತ್ತಿದ್ದಾರೆ.

    ಈಗ ಆಗಬೇಕಾಗಿದ್ದು ಏನು?
    ಜಾಗೃತಿ, 719 ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ, 6095 ಮನೆಗಳ ಮರುನಿರ್ಮಾಣ, 2000 ಜಾನುವಾರು ಮತ್ತು ಹೈನುಗಾರಿಕೆಗೆ ವ್ಯವಸ್ಥೆ, 183 ಶಾಲೆಗಳ ನಿರ್ಮಾಣ, ಹಾಳಾದ 13 ಸಾವಿರ ಹೆಕ್ಟೇರ್ ಭೂ ಪ್ರದೇಶವನ್ನು ವಾಸಯೋಗ್ಯವಾಗಿ ನಿರ್ಮಿಸುವುದು, ಕ್ಯಾಂಪ್ ಗಳ ನಿರ್ವಹಣೆ, ಮುಖ್ಯವಾಗಿ ಐದು ನದಿಗಳ ಪುನರುಜ್ಜೀವನ ಇದಕ್ಕೆ ಸಾಕಷ್ಟು ಶ್ರಮ ಬೇಕು ಜೊತೆಗೆ ಹಣವೂ ಬೇಕು. ಸಿಎಂ ಫಂಡ್ ಕೂಡ ಸಾಲುವುದಿಲ್ಲ. ಹತ್ತು ವರುಷದ ಶ್ರಮ ಬೇಡುವ ಸಮಸ್ಯೆ. ಈ ನಿಟ್ಟಿನಲ್ಲಿ ಪರಿಹಾರ ಕೆಲಸವಾಗಬೇಕಿದೆ. ತಾತ್ಕಾಲಿಕ ಉದ್ಯೋಗ ಮೇಳ, ಆರೋಗ್ಯ ಮೇಳ ಮೆಡಿಕಲ್ ಟರ್ಮ್ ಕೆಲಸ ಆಗಬೇಕು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: Kodagigagi Rangasapthaha

    ಈ ಎಲ್ಲ ಸದುದ್ದೇಶಗಳಿಗಾಗಿ ಈ ರಂಗ ಸಪ್ತಾಹದ ಕಾರ್ಯಕ್ರಮ ನಾಡಿನ ಅತ್ಯುತ್ತಮ ರಂಗತಂಡಗಳು ನವೆಂಬರ್ 11 ರಿಂದ ನವೆಂಬರ್ 17 ರ ವರೆಗೆ ರಂಗ ಪ್ರದರ್ಶನ ನೀಡುವುದರ ಮೂಲಕ ಈ ಮಹಾತ್ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಈ ಮೂಲಕ ಏನು ಸಿಗುತ್ತದೊ ಅದನ್ನ ಕೊಡಗಿಗೆ ಬಳಸುವುದು ನಮ್ಮ ಉದ್ದೇಶ.

    ಇದೆಲ್ಲದರ ಜೊತೆ ಕೊಡಗಿನ ಸಮಸ್ಯೆಗಳನ್ನು ಒಳಗೊಂಡ ವೈಜ್ಞಾನಿಕ ವಿಶ್ಲೇಷಣೆಯ ಯಾವುದೇ ಪಕ್ಷ, ಸಂಘಟನೆ ಪರವಾಗಿರದ ತಜ್ಞರ ರಿಸರ್ಚ್ ಆಧಾರದಲ್ಲಿ ಸಹ್ಯಾದ್ರಿ ಬದುಕಿಗೆ ಪರ್ಯಾಯ ಆಂದೋಲನ ರೂಪಿಸುವ ಶಕ್ತಿಗಾಗಿ ಸವಿವರವಾದ ‘ಜಮ್ಮಾ ಭೂಮಿರ ಕಥೆ’ ಸಾಕ್ಷ್ಯಚಿತ್ರ ನಿರ್ಮಾಣದ ಕಾರ್ಯವನ್ನೂ ಹಮ್ಮಿಕೊಂಡಿದ್ದೇವೆ. ನಿಮ್ಮೆಲ್ಲರ ಕಿಂಚಿತ್ತು ಸಹಾಯ, ಉದಾರ ಸಹಾಯಹಸ್ತ ಮುಳುಗಿ ಹೋಗಿರುವ ನಮ್ಮದೇ ನಾಡಿನ ಜನರ ಬದುಕು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ದಯವಿಟ್ಟು ನಮ್ಮೊಂದಿಗೆ ಕೈ ಜೋಡಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews