Tag: Chakravarthy Chandrachud

  • ಚಕ್ರವರ್ತಿಗೆ ಶಾಕ್ ಕೊಟ್ಟ ಪ್ರಿಯಾಂಕಾ

    ಚಕ್ರವರ್ತಿಗೆ ಶಾಕ್ ಕೊಟ್ಟ ಪ್ರಿಯಾಂಕಾ

    ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಪ್ರಿಯಾಂಕಾ ತಿಮ್ಮೇಶ್ ಬರಹಗಾರ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕೊನೆಯಲ್ಲಿ ಶಾಕ್ ಕೊಟ್ಟಿದ್ದಾರೆ.

    ಪ್ರಿಯಾಂಕಾ ತಿಮ್ಮೇಶ್ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಮಧ್ಯ ಭಾಗದಲ್ಲಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದರು. ಹೀಗಾಗಿ ಇವರಿಬ್ಬರ ಮಧ್ಯೆ ಆರಂಭದಲ್ಲಿ ಉತ್ತಮವಾಗಿ ಮಾತುಕತೆ ನಡೆಯುತ್ತಿತ್ತು.

    ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದಿತ್ತು. ಈ ಮಧ್ಯೆ ಬಿಗ್ ಬಾಸ್ ಸ್ಥಗಿತಗೊಂಡು ಆರಂಭಗೊಂಡ ವಾರದಲ್ಲೂ ಇಬ್ಬರ ನಡುವೆ ಮಾತುಕತೆ ನಡೆಯಿತಿತ್ತು. ಆದರೆ ನಂತರದ ದಿನಗಳಲ್ಲಿ ಚಕ್ರವರ್ತಿ ಅವರಿಂದ ಪ್ರಿಯಾಂಕಾ ತಿಮ್ಮೇಶ್ ಅಂತರ ಕಾಯ್ದುಕೊಂಡು ದಿವ್ಯಾ ಸುರೇಶ್, ಶಮಂತ್, ಶುಭ ಪೂಂಜಾ ಅವರ ಜೊತೆ ಹೆಚ್ಚು ಬೆರೆಯುತ್ತಿದ್ದರು.

    ಎರಡನೇ ಇನ್ನಿಂಗ್ಸ್‍ನ ಮೂರನೇ ವಾರದಲ್ಲಿ ಚಕ್ರವರ್ತಿ ಮತ್ತು ಪ್ರಿಯಾಂಕ ತಿಮ್ಮೇಶ್ ಮಧ್ಯೆ ಜಾಸ್ತಿ ಮಾತುಕತೆ ನಡೆದಿರಲಿಲ್ಲ. ಆದರೆ ಚಕ್ರವರ್ತಿಯವರು ನೇರವಾಗಿ ನನ್ನ ಹೆಸರು ತೆಗೆಯದೇ ಟಾಂಗ್ ನೀಡುತ್ತಿದ್ದಾರೆ ಎಂದು ಪ್ರಿಯಾಂಕಾ ಇತರೇ ಸ್ಪರ್ಧಿಗಳ ಜೊತೆ ಹೇಳುತ್ತಿದ್ದರು. ಇದನ್ನೂ ಓದಿ : ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

    ಮೊದಲೇ ಚಕ್ರವರ್ತಿ ಅವರು ಪ್ರಿಯಾಂಕಾ ಬಗ್ಗೆ ಅಸಮಾಧಾನಗೊಂಡಿದ್ದರು. ಇದರ ಜೊತೆ ಕಳಪೆಗೆ ನೀಡಿದ ಕಾರಣ ಸರಿಯಿಲ್ಲ ಎಂದು ಹೇಳಿ ಪ್ರಿಯಾಂಕಾ ವಿರುದ್ಧ ಜೈಲಿನಲ್ಲೂ ಪ್ರತಿಭಟನೆ ಮಾಡಿದ್ದರು.

    ಅರವಿಂದ್ ಟೀಂ ಸೋತ ಹಿನ್ನೆಲೆಯಲ್ಲಿ ನಾಯಕ ಅರವಿಂದ್ ಬಿಟ್ಟು ವೈಷ್ಣವಿ, ಪ್ರಶಾಂತ್, ಶುಭಾ ಪುಂಜಾ, ಪ್ರಿಯಾಂಕಾ ತಿಮ್ಮೇಶ್ ನಾಮಿನೆಟ್ ಆಗಿದ್ದರು. ಹೀಗಾಗಿ ಕಡಿಮೆ ವೋಟ್ ಬಿದ್ದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮನೆಯಿಂದ ಔಟ್ ಆಗಿದ್ದಾರೆ.

    ಈ ಮೊದಲು ನಿಧಿ ಔಟಾದಾಗ ಅರವಿಂದ್ ಅವರನ್ನು ನಾಮಿನೆಟ್ ಮಾಡಿದ್ದರು. ನಂತ್ರ ರಘು ಶಮಂತ್ ಅವರನ್ನು ಸೇವ್ ಮಾಡಿದ್ದರು. ಈ ಬಾರಿ ಪ್ರಿಯಾಂಕಾ ಅವರು ನೇರವಾಗಿ ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಕೊನೆಗೆ ಮನೆಯಿಂದ ತೆರಳುವಾಗ ಪ್ರಿಯಾಂಕಾ ಶಾಕ್ ನೀಡಿದ್ದಾರೆ.

  • ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

    ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

    ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗೆ ಮನೆಯ ಎಲ್ಲಾ ಸದಸ್ಯರು ಸೇರಿ ಕಳಪೆ ಬೋರ್ಡ್ ಹಾಕುವುದು ನಿಯಮ. ಅದರಂತೆ ಈ ವಾರ ಮನೆಮಂದಿಯೆಲ್ಲಾ ಒಂದೊಂದು ಕಾರಣಗಳನ್ನು ಹೇಳಿ ಚಕ್ರವರ್ತಿ ಚಂದ್ರಚೂಡ್‍ಗೆ ಕಳಪೆ ಬೋರ್ಡ್ ನೀಡಿದ್ದಾರೆ.

    ಈ ಮಧ್ಯೆ ಇಷ್ಟು ದಿನ ಒಳ್ಳೆಯ ಸ್ನೇಹಿತರಾಗಿದ್ದ ಶಮಂತ್ ಹಾಗೂ ಚಕ್ರವರ್ತಿ ನಡುವೆ ಇದೇ ಮೊದಲ ಬಾರಿಗೆ ಜಗಳ ನಡೆದಿದೆ. ಕಳಪೆ ಬೋರ್ಡ್ ನೀಡಲು ಶಮಂತ್ ನೀಡಿದ್ದ ಕಾರಣವನ್ನು ವಿರೋಧಿಸಿದ ಚಕ್ರವರ್ತಿಯವರು, ಕಳಪೆ ಬೋರ್ಡ್ ಹಾಕುವ ಮುನ್ನವೇ ಶಮಂತ್ ನನಗೆ ಮೊದಲೇ ಹೇಳಿದ್ದರು, ನಿಮಗೆ ಕಳಪೆ ಬೋರ್ಡ್ ನೀಡುತ್ತೇನೆ ಎಂದು ದಿವ್ಯಾ ಅರವಿಂದ್ ಜೊತೆ ಮಾತನಾಡುತ್ತಿರುತ್ತಾರೆ.

    ಈ ವೇಳೆ ಶಮಂತ್, ದಿವ್ಯಾ ಉರುಡುಗರವರನ್ನು ನೀವು ಹಿಡಿದು ಕೊಳ್ಳಬಾರದಾಗಿತ್ತು. ನಿಮ್ಮದು ಮಿಸ್‍ಟೇಕ್ ಇದೆ, ಅದು ಬೇಕು, ಬೇಕು ಎಂದು ನೀವು ಮಾಡಿಲ್ಲ. ಇದೊಂದು ತಪ್ಪು ಬಿಟ್ಟರೆ ಬೇರೆ ಏನು ಇಲ್ಲ ಎಂದು ಹೇಳುತ್ತಾರೆ. ಅಲ್ಲದೇ ಇದೇ ವೇಳೆ ಪ್ರಿಯಾಂಕ ವಿಚಾರವಾಗಿ ಮಾತನಾಡಿದ ಚಕ್ರವರ್ತಿಯವರು, ಸಂದರ್ಭ ಬಂದಾಗ ಕೈ ಎತ್ತಿ ಬಿಡುತ್ತೀಯಾ, ಇದೇನಾ ನೀನು ವಿಶ್ವಾಸಕ್ಕೆ ಕೊಡುವ ಗೌರವ, ಮೋಸ ಮಾಡಿ ಬಿಡುತ್ತೀಯಾ, ಸುಳ್ಳು ಹೇಳಿ ನುಣುಚಿಕೊಂಡು ಬಿಡುತ್ತೀಯಾ, ತಪ್ಪಿಗೆ ತಪ್ಪು ಎಂದು ಹೇಳು, ಸರಿಗೆ ಸರಿ ಅಂತ ಹೇಳು, ನೀನು ಯಾವ ಸ್ನೇಹಿತರಿಗೆ ಬೇಕಾದರೂ ಕತ್ತು ಕುಯ್ದುಬಿಡುತ್ತೀಯಾ ಎಂದು ಬೈಯ್ಯುತ್ತಾರೆ.

    ಇದರಿಂದ ರೊಚ್ಚಿಗೆದ್ದ ಶಮಂತ್, ಯಾವುದಕ್ಕೊ, ಯಾವುದೋ ಪದ ಬಳಸಬೇಡಿ. ನಾನು ಕತ್ತು ಕುಯ್ಯುವ ಕೆಲಸ ಮಾಡಿಲ್ಲ. ನಾನು ಇಷ್ಟು ವಾರ ಕಳಪೆ ಹಾಕಿದವರು ಯಾವತ್ತು ಕೂಡ ನನಗೆ ಕತ್ತು ಕುಯ್ದೆ ಎಂದು ಹೇಳಿಲ್ಲ. ಹೇಳಿದ ಕಾರಣವನ್ನು ಸ್ವೀಕರಿಸಿ, ನನ್ನದೇ ಎಲ್ಲೋ ತಪ್ಪು ಇರಬಹುದು ಎಂದು ಸುಮ್ಮನೇ ಆಗಿದ್ದಾರೆ. ನನ್ನನ್ನು ಕಾರಣ ಕೇಳಿದ್ದಾರೆ, ನಾನು ಕಾರಣ ಹೇಳಿದ್ದೇನೆ ಅಷ್ಟೇ. ಕತ್ತು ಕುಯ್ಯೊದು ನಂಬಿಕೆ ದ್ರೋಹ, ಫ್ರೆಂಡ್ಸ್‍ನ ಕಳೆದುಕೊಳ್ಳುವುದು, ನಿಮಗೆ ಇದೆಲ್ಲದರ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ಎಷ್ಟು ದಿನ ಫ್ರೆಂಡ್ ನೀವು ನನಗೆ, ನನ್ನ ಬಗ್ಗೆ ಏನು ಗೊತ್ತು ನಿಮಗೆ, ಹೇಗೆ ಕತ್ತು ಕುಯ್ದೆ ಎಂದು ಹೇಳುತ್ತೀರಾ. ಕತ್ತು ಕುಯ್ದನಾ ನಾನು ನಿಮಗೆ, ಸುಮ್ಮನೆ ರಾಂಗ್ ಸ್ಟೇಟ್‍ಮೆಂಟ್ ಮಾಡಿ, ಇಲ್ಲದೇ ಇರುವ ಅನಿಸಿಕೆಯನ್ನು ಸೃಷ್ಟಿಸುವುದನ್ನು ಬಿಡಿ ಮೊದಲು, ನಾನು ಏನು ಬೇಕಾದರೂ ಮಾಡುತ್ತೇನೆ. ನಿಮಗೆ ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ ಎಂದರೆ ಮಾತನಾಡಬಾರದು, ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ತಂದೆಯ ಭಜನೆ ಹಾಡಿಗೆ ಮನಸೋತ ರಾಧಿಕಾ ಪಂಡಿತ್

  • ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

    ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

    ಪ್ರತಿ ದಿನ ದೊಡ್ಮನೆ ಮಂದಿಗೆ ಒಂದಲ್ಲ ಒಂದು ಟಾಸ್ಕ್ ನೀಡುವ ಬಿಗ್‍ಬಾಸ್ 15ನೇ ದಿನದಂದು ಚಿನ್ನದ ಮೊಟ್ಟೆ ಟಾಸ್ಕ್ ನೀಡಿದ್ದರು. ಈ ವೇಳೆ ಗೆದ್ದ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್‍ರವರಿಗೆ ಹೆಚ್ಚುವರಿಯಾಗಿ ಬಿಗ್‍ಬಾಸ್ ಒಂದು ಚಿನ್ನದ ಮೊಟ್ಟೆ ನೀಡಿ, ಅದನ್ನು ಮನೆಯ ಯಾವುದೇ ಸದಸ್ಯರ ತಲೆಯ ಮೇಲೆ ಹೊಡೆದರೆ ಆ ಸದಸ್ಯರ ಲಾಕರ್‍ನಲ್ಲಿರುವ ಹಣ ಮೊಟ್ಟೆ ಹೊಡೆದವರ ಪಾಲಾಗುತ್ತದೆ ಎಂದು ಸೂಚಿಸಿದ್ದರು.

    ಹೀಗಾಗಿ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್ ಮನೆಯ ಇತರ ಸದಸ್ಯರಿಗೆ ಮೊಟ್ಟೆ ಹೊಡೆಯಲು ಪ್ಲಾನ್ ಮಾಡುತ್ತಾರೆ. ಈ ವೇಳೆ ವೈಷ್ಣವಿ, ಶುಭಾ, ಪ್ರಿಯಾಂಕ್ ಬಾತ್ ರೂಮ್‍ನಲ್ಲಿ ಅವಿತುಕೊಂಡಿರುತ್ತಾರೆ. ನಂತರ ಬಾತ್ ರೂಮ್ ಬಾಗಿಲು ತೆಗೆದುಕೊಂಡಿದ್ದ ಪ್ರಿಯಾಂಕರ ಬೆನ್ನ ಹಿಂದೆ ಶಮಂತ್ ಬೀಳುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಸ್ವಿಮಿಂಗ್ ಪೂಲ್‍ಗೆ ಬಿದ್ದ ಪ್ರಿಯಾಂಕರನ್ನು ಅಟ್ಟಾಡಿಸಿಕೊಂಡು ದಿವ್ಯಾ ಸುರೇಶ್ ಮೊಟ್ಟೆ ಹೊಡೆಯುತ್ತಾರೆ. ಈ ವೇಳೆ ರೊಚ್ಚಿಗೆದ್ದ ಪ್ರಿಯಾಂಕ ದಿವ್ಯಾ ಸುರೇಶ್ ಬೆನ್ನ ಮೇಲೆ ಹೊಡೆಯುತ್ತಾರೆ. ಇದಕ್ಕೆ ದಿವ್ಯಾ ಸುರೇಶ್ ನನಗೆ ಯಾಕೆ ಹೊಡೆದೆ ಎಂದು ಪ್ರಶ್ನಿಸಿದಾಗ, ನೀನು ಏನು ಮಾಡಿದ್ದು ಎಂದು ಪ್ರಿಯಾಂಕ ತಿಮ್ಮೇಶ್ ಕಿಡಿಕಾರಿದ್ದಾರೆ.

    ನಂತರ ಬಿಗ್‍ಬಾಸ್ ನೀರಿನಲ್ಲಿದ್ದಾಗ ಹೊಡೆದಿದ್ದಾರೆ ಎಂದು ಹೇಳುತ್ತಾ ಮನೆಯ ಒಳಗೆ ಸಿಟ್ಟಿನಿಂದ ಹೋಗಿ ಪ್ರಿಯಾಂಕ ತಿಮ್ಮೇಶ್ ದಿವ್ಯಾ ಸುರೇಶ್ ಪೆಟ್ಟಿಗೆಯಲ್ಲಿದ್ದ ಹಣವನ್ನು ಹಾಳು ಮಾಡುತ್ತಾರೆ. ಬಳಿಕ ಸ್ವಿಮಿಂಗ್ ಪೂಲ್‍ಗೆ ಮತ್ತೆ ಇಳಿದ ಪ್ರಿಯಾಂಕ ಮೊಟ್ಟೆ ಹೊಡೆಯುವುದು ದೊಡ್ಡ ವಿಚಾರವಲ್ಲ. ನನಗೆ ಪೆಟ್ಟಾಗುವುದು ಇರುತ್ತದೆ. ಪರಾಚುವುದು ಇರುತ್ತದೆ ಎಂದು ಶಮಂತ್‍ಗೆ ಹೇಳುತ್ತಿರುತ್ತಾರೆ. ಈ ವೇಳೆ ನಾನು ಅವನಿಗೆ ಮೊಟ್ಟೆ ಹೊಡೆಯಲು ಹೇಳಿದೆ ಎಂದು ಚಕ್ರವರ್ತಿಯವರು ಮಧ್ಯೆ ಮಾತನಾಡಿದಾಗ, ನಾನು ಶಮಂತ್ ಹತ್ತಿರ ಮಾತಾಡುತ್ತಿದ್ದೇನೆ ನಿಮ್ಮ ಹತ್ತಿರ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ನಾನು ಶಮಂತ್ ಹತ್ತಿರನೇ ಹೇಳುತ್ತಿದ್ದೇನೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಇದಕ್ಕೆ ಹೇ.. ಎಂದು, ನೀವೇಕೆ ಮಾತನಾಡುತ್ತಿದೀರಾ ಸುಮ್ಮನೆ ಎಂದು ಪ್ರಿಯಾಂಕ ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ. ಆಗ ಚಕ್ರರ್ತಿಯವರು ನಾನು ನಿನ್ನ ಹತ್ತಿರ ಮಾತನ್ನೇ ಆಡುತ್ತಿಲ್ಲ. ಕಿರುಚಾಡ ಬೇಡ. ನಾನು ಶಮಂತ್ ಹತ್ತಿರ, ಮೊಟ್ಟೆ ಇರುವವರ ಹತ್ತಿರ ಹೇಳುತ್ತಿದ್ದೇನೆ, ನಿನ್ನ ಬಳಿ ಮಾತನಾಡುತ್ತಲೇ ಇಲ್ಲ. ಕೂಗಾಡಿ ಸೀನ್ ಕ್ರಿಯೆಟ್ ಮಾಡಬೇಡ. ನನಗೂ ನಿನಗೂ ವಿಷಯವೇ ಇಲ್ಲ. ನೀನು ಏನಾದರೂ ಮಾಡಿಕೋ, ಕಿರುಚಿಕೋ, ನನ್ನ ಈ ವಿಚಾರಕ್ಕೆ ಎಳೆಯಬೇಡ, ತೆಗೆದುಕೊಂಡರೆ ಕೆಟ್ಟದಾಗಿ ಮಾತನಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ಆಲೂಗಡ್ಡೆಯಿಂದ ತಯಾರಿಸಿ ರುಚಿಯಾದ ಬೆಳಗ್ಗಿನ ಟಿಫನ್

  • ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ – ಪ್ರಶಾಂತ್ ವಿರುದ್ಧ ಅರವಿಂದ್ ಕಿಡಿ

    ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ – ಪ್ರಶಾಂತ್ ವಿರುದ್ಧ ಅರವಿಂದ್ ಕಿಡಿ

    ಬಿಗ್‍ಬಾಸ್ ಮನೆಯಲ್ಲಿ ಈ ವಾರ ಅಡುಗೆ ಮನೆಯ ಜವಾಬ್ದಾರಿಯನ್ನು ಪುರುಷ ಸದಸ್ಯರು ಹೊತ್ತುಕೊಂಡಿದ್ದಾರೆ. ಸದ್ಯ ಚಪಾತಿ ವಿಚಾರವಾಗಿ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಅರವಿಂದ್, ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರು ಕಿಚನ್‍ನಲ್ಲಿ ಅಡುಗೆ ತಯಾರಿ ನಡೆಸುತ್ತಿರುತ್ತಾರೆ. ಈ ವೇಳೆ ಪ್ರಶಾಂತ್ ಚಪಾತಿ ಹಿಟ್ಟನ್ನು ಕಲಿಸುತ್ತಿರುವುದನ್ನು ಅರವಿಂದ್ ನೋಡಿ ನಾನು ಆಗಲೇ ಕಲಸಬೇಡಿ ಎಂದು ಹೇಳಿದೆ. ನೀವು ನನ್ನ ಮಾತಾಗಲಿ, ಯಾರ ಮಾತು ಕೇಳುವುದಿಲ್ಲ ಎನ್ನುತ್ತಾರೆ. ಆಗ ಪ್ರಶಾಂತ್ ನಮ್ಮ ಮನೆಯಲ್ಲಿ ಒವರ್ ನೈಟ್ ಕಲಿಸಿ ಇಡುತ್ತೇವೆ ಏನು ಆಗುವುದಿಲ್ಲ. ನೋಡಿ ಕರೆಕ್ಟ್ ಆಗಿಯೇ ಇದೆಯಲ್ಲಾ ಎಂದು ಚಪಾತಿ ಹಿಟ್ಟನ್ನು ಮೇಲಕ್ಕೆತ್ತಿ ತೋರಿಸುತ್ತಾರೆ. ಇದಕ್ಕೆ ಅರವಿಂದ್ ಕರೆಕ್ಟ್ ಆಗಿದೆ. ಹಾಗದರೆ ನೀವೇ ಒತ್ತುತ್ತೀರಾ? ಒತ್ತುವಾಗ ಗೊತ್ತಾಗುತ್ತದೆ ಕಲ್ಲಿನ ರೀತಿ ಇದೆ ಅಂತ, ನೀವು ಸುಲಭವಾಗಿ ಹೇಳಿ ಬಿಡುತ್ತೀರಾ ಒತ್ತಿ ಎಂದು ಆದರೆ, ಒತ್ತುವುದು ನಾವು ಅದಕ್ಕೆ ನಾನು ನಿಮಗೆ ಹೇಳಿದ್ದು, ಆದರೆ ನೀವು ಒಂದು ಮಾತನ್ನು ಕೇಳುವುದಿಲ್ಲ. ಸ್ವಲ್ಪವಾದರೂ ಅಪರೂಪಕ್ಕೆ ಕೇಳಿ ಎಂದು ಹೇಳುತ್ತಾರೆ.

    ನಂತರ ಪ್ರಶಾಂತ್ ಅದು ಚಪಾತಿ ಮಾಡುವ ವಿಧಾನ, ಹೊಸದಾಗಿ ನಾನೇನು ಮಾಡುತ್ತಿಲ್ಲ. ವೈಷ್ಣವಿಯವರು ಎಸಿ ಇದೆ ಕಲ್ಲಿನ ರೀತಿಯಾಗುತ್ತದೆ ಎಂದು ಹೇಳಿದಕ್ಕೆ ಒಳಗೆ ಇಟ್ಟಿದೆ. ಇಲ್ಲ ಬಿಸಾಕಿ ಬೇರೆ ಮಾಡೋಣಾ ಬಿಡಿ. ಏನು ಮಾಡುವುದಕ್ಕೆ ಆಗುತ್ತದೆ ಎನ್ನುತ್ತಾರೆ. ಇದನ್ನು ಕೇಳಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಶಾಕ್ ಆಗುತ್ತಾರೆ. ಬಳಿಕ ಬೀಸಾಕುವುದಾ ಸರ್.. ಏನು ಹೇಳುತ್ತಿದ್ದೀರಾ? ಹೇಳಿದರೆ ಕೋಪ ಮಾಡಿಕೊಳ್ಳುತ್ತೀರಾ ಒಂದು ಮಾತು ಕೇಳುವುದಿಲ್ಲ. ಬೇರೆಯವರ ಅಭಿಪ್ರಾಯವನ್ನು ಸ್ವೀಕರಿಸುವುದನ್ನು ಕಲಿರಿ ಎಂದು ಹೇಳುತ್ತಾರೆ.

    ಆಯ್ತು ರಾಜಾ… ಒಂದಿಪ್ಪತ್ತು ಎರಡು ಬಾರಿ ಹೇಳಿದ್ಯಾ, ಕಲಸಿ ಇಟ್ಟರೆ ಮತ್ತಗೆ ಆಗುತ್ತದೆ ಎಂದು ಪದ್ಧತಿ ಹಾಗಾಗಿ ಕಲಿಸಿ ಇಟ್ಟೆ. ಮನೆಯಲ್ಲಿ ಚಪಾತಿ ಮಾಡುವುದು ನಾನೇ 40 ವರ್ಷದಲ್ಲಿ ಒಂದಿಪ್ಪತ್ತು ವರ್ಷ ಚಪಾತಿ ಮಾಡಿದ್ದೇನೆ. ಆ ಇಪ್ಪತ್ತು ವರ್ಷದಲ್ಲಿ 4 ಗಂಟೆ ಮುಂಚೆಯೇ ಚಪಾತಿ ಹಿಟ್ಟನ್ನು ಕಲಿಸಿ ಇಡುತ್ತಿದ್ದೆ. ಹಾಗೆ ಇಲ್ಲಿಯೂ ಮಾಡಲು ಹೋದೆ ಆದ್ರೆ ಆಗಲಿಲ್ಲ. ಬೇಡ ಅಂದರೆ ಬೀಸಾಕೋಣ, ಇಲ್ಲ ಬೇರೆ ಏನಾದರೂ ಮಾಡೋಣ ಎನ್ನುತ್ತಾರೆ.

    ಈ ವೇಳೆ ಅರವಿಂದ್ ಇಲ್ಲ ಬಿಸಾಕಲು ಆಗುವುದಿಲ್ಲ ಎಂದರೆ, ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಲಿಮಿಟೆಡ್ ದಿನಸಿ ಕಳುಹಿಸುತ್ತಾರೆ. ನಿಮಗೆ ಗೊತ್ತಿಲ್ಲದೇ ಆಗಿ ಪರವಾಗಿಲ್ಲ ಬಿಡಿ ಎಂದು ಹೇಳುತ್ತಾರೆ. ಇದಕ್ಕೆ ಪ್ರಶಾಂತ್‍ರವರು ಗೊತ್ತಿಲ್ಲದೇ ಅಲ್ಲ ಗೊತ್ತಿದೆ ಮಾಡಿದ್ದು, ಆದರೆ ಇಲ್ಲಿ ಹೀಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಮರು ವಾದ ಮಾಡುತ್ತಾರೆ.

  • ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

    ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್

    ಬಿಗ್‍ಬಾಸ್ ಮನೆಲಿ ಸೈಲೆಂಟ್ ಆಗಿದ್ದ ಪ್ರಿಯಾಂಕ ತಿಮ್ಮೇಶ್ ಇದೀಗ ಜೋರು ಧ್ವನಿಯಲ್ಲಿ ಚಕ್ರವರ್ತಿ ಅವರಿಗೆ ಅವಾಜ್ ಹಾಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಜಗಳದ ಬೆಂಕಿ ಹೊತ್ತಿ ಉರಿಯುತ್ತಿದೆ.

    ಅವರು ನೇರವಾಗಿಲ್ಲ. ನಾಟಕೀಯ, ಸ್ಕೋಪ್ ತಗೆದುಕೂಳ್ಳುತ್ತಿದ್ದೀಯಾ? ಎಂದು ನನಗೆ ಹೇಗೆ ಹೇಳುತ್ತಿರುತ್ತಿರಾ ಎಂದು ಪ್ರಿಯಾಂಕಾ ಸುದೀಪ್ ಮುಂದೆ ಹೇಳಿಕೊಂಡಿದ್ದರು. ಕಟ್ಟೆಪಂಚಾಯ್ತಿಯಲ್ಲಿ ಈ ವಿಷಯನ್ನು ಇತ್ಯರ್ಥಮಾಡಿ ಸುದೀಪ್ ರಾಜಿ ಮಾಡಿದ್ದರು. ಈ ಹಿಂದೆ ಚಕ್ರವರ್ತಿ ಮತ್ತು, ಪ್ರಿಯಾಂಕಾ ನಡುವೆ ಹಲವು ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಿತ್ತು. ಆದರೆ ಇದೇ ವಿಷಯಗಳನ್ನು ಮತ್ತೇ ಕೆದಕಿಕೊಂಡು ಇಬ್ಬರು ಕಿತ್ತಾಟ ನಡೆಸಿದ್ದಾರೆ. ಕಾಲು ಕೆದರಿಕೊಂಡು ಜಗಳ ಮಾಡುವ ಚಕ್ರವರ್ತಿ ವಿರುದ್ಧವಾಗಿ ಪ್ರಿಯಾಂಕ ತಿರುಗಿ ಬಿದ್ದಿದ್ದಾರೆ.

    ಸಾಧ್ಯವಾದಷ್ಟು ಸೈಲೆಂಟ್ ಆಗಿಯೇ ಇದ್ದ ಪ್ರಿಯಾಂಕಾ ಯಾರು ಏನೇ ಹೇಳಿದರೂ ಅದನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಸಾಗುತ್ತಿದ್ದರು. ಚಕ್ರವರ್ತಿ ಅವರ ಮಾತಿನಿಂದ ಆಗಾಗ ಪ್ರಿಯಾಂಕಾ ಅವರನ್ನು ಕೆಣಕುತ್ತಿದ್ದರು. ಇದೇ ಮೊದಲ ಬಾರಿಗೆ ಪ್ರಿಯಾಂಕಾ ತಿಮ್ಮೇಶ್ ಅವರು ದೊಡ್ಮನೆಯೊಳಗೆ ಉಗ್ರಾವತಾರ ತೋರಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್‍ಗೆ ಖಡಕ್ ಆಗಿ ವಾನಿರ್ಂಗ್ ನೀಡಿದ್ದಾರೆ.

    ಪ್ರಿಯಾಂಕಾ ಕಣ್ಣೀರು ಹಾಕುತ್ತಾ ನಾನು ಮತ್ತು ಶಮಂತ್ ಏನೇ ಮಾಡಿದರೂ ಅದನ್ನು ಕೇಳೋಕೆ ಇವರು ಯಾರು? ಎಂದು ಅಳುತ್ತಲೇ ತಮ್ಮ ನೋವನ್ನು ಪ್ರಶಂತ್, ಶಮಂತ್ ಬಳಿ ಹೇಳಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಚಕ್ರವರ್ತಿ ಮತ್ತೆ ಪ್ರತ್ಯುತ್ತರ ನೀಡಲು ಬಂದಾಗ ಅವರ ಪ್ರಿಯಾಂಕಾ ತಾಳ್ಮೆಯ ಕಟ್ಟೆ ಒಡೆದಿದೆ. ಜೋರಾಗಿ ಕಿರುಚಾಡಿ ಪ್ರಿಯಾಂಕಾ ಚಕ್ರವರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಣ್ಣಲ್ಲಿ ನೀರು ಹಾಕಿಕೊಂಡು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದೆಲ್ಲ ನಿಜವಾಗುವುದಿಲ್ಲ ಎಂದು ಚಕ್ರವರ್ತಿ ಏರು ಧ್ವನಿಯಲ್ಲಿ ಮಾತನಾಡಿದರು. ಅದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, ನಾನು ಕಣ್ಣೀರು ಹಾಕಿಕೊಂಡು ನಾಟಕ ಮಾಡುತ್ತಿಲ್ಲ. ಬಾಯಿ ಮುಚ್ಚಿದರೆ ಸರಿ ಎಂದು ಕಿರುಚಾಡಿ ಹಾಗೇ ಸಿಟ್ಟಿನಿಂದ ಚಕ್ರವರ್ತಿ ಅವರ ಬಳಿ ಹೋಗಿದ್ದಾರೆ. ಆಗ ಮನೆ ಮಂದಿ ತಡೆದು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

  • ಚಕ್ರವರ್ತಿ ನನಗೆ ಒಂದು ಪಂಜರ ಕಟ್ಟಿಕೊಟ್ಟಿದ್ದಾರೆ ಎಂದಿದ್ಯಾಕೆ ಪ್ರಿಯಾಂಕಾ?

    ಚಕ್ರವರ್ತಿ ನನಗೆ ಒಂದು ಪಂಜರ ಕಟ್ಟಿಕೊಟ್ಟಿದ್ದಾರೆ ಎಂದಿದ್ಯಾಕೆ ಪ್ರಿಯಾಂಕಾ?

    ದೊಡ್ಮನೆಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸ್ಪರ್ಧಿಗಳ ಆಟದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಮನಸ್ತಾಪಗಳ ಬಗ್ಗೆ ಮಾತನಾಡುವಂತಾಗಿದೆ. ನನ್ನನ್ನು ಬಿಗ್‍ಮನೆಯ ಹೊರಗೆ ನಾನು ಹೀಗೆ ಎಂದು ಒಂದು ಪಂಜರವನ್ನು ಚಕ್ರವರ್ತಿ ಚಂದ್ರಚೂಡ್ ಅವರು ಕಟ್ಟಿಕೊಟ್ಟಿದ್ದಾರೆ ಎಂದು ಪ್ರಿಯಾಂಕಾ ತಿಮ್ಮೆಶ್ ಸುದೀಪ್ ಮುಂದೆ ದೂರಿಕೊಂಡಿದ್ದಾರೆ.


    ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ ಕಿಚ್ಚ, ಪ್ರಿಯಾಂಕಾ ಮತ್ತು ಚಕ್ರವರ್ತಿಯವರೆ ನಿಮ್ಮಿಬ್ಬರ ಸಮಸ್ಯೆ ಏನು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ, ಪ್ರಿಯಾಂಕಾ ಅವರು ಲಾಸ್ಟ್ ಇನ್ನಿಂಗ್ಸ್ ನಲ್ಲಿ ನನ್ನೊಂದಿಗೆ ತುಂಬಾ ಜಗಳವಾಡಿದ್ದಾರೆ. ಈ ಇನ್ನಿಂಗ್ಸ್ ನಲ್ಲಿ ಆ ತರಹ ಏನು ಆಗಿಲ್ಲ. ಆದರೆ ನಾನು ಅವರ ಬಗ್ಗೆ ಹೇಳಿದ ಮಾತುಗಳನ್ನು ಅವರು ಮನಸ್ಸಿನಲ್ಲಿಟ್ಟುಕೊಂಡು ನೊಂದಿದ್ದಾರೆ ಅನಿಸುತ್ತೀದೆ ಎಂದರು.

    ನಾನು ಮತ್ತು ಶಮಂತ್ ಈ ಹಿಂದೆ ಊಟಮಾಡಿಸಬೇಕೆಂಬ ಒಂದು ಚಾಲೆಂಜ್ ಹಾಕಿಕೊಂಡಾಗ ಮತ್ತು ನಾನು ದಿವ್ಯಾ ಸುರೇಶ್ ಜೊತೆಗಿದ್ದಾಗ ಚಕ್ರವರ್ತಿಯವರು ನನ್ನೊಂದಿಗೆ ನಡೆದುಕೊಂಡ ವರ್ತನೆ ನನಗೆ ಇಷ್ಟ ಆಗಿಲ್ಲ. ಅವರ ಮಾತುಗಳು ನನಗೆ ತುಂಬಾ ಚುಚ್ಚಿದಂತೆ ಆಗುತ್ತದೆ. ಹಾಗಾಗಿ ನಾನು ನನ್ನ ಪಾಡಿಗೆ ಇದ್ದೇನೆ ಎಂದು ಪ್ರಿಯಾಂಕಾ ಬೇಸರತೊಡಿಕೊಂಡರು. ಇದನ್ನೂ ಓದಿ: ಅರವಿಂದ್‍ಗೆ ಕಥೆ ಹೇಳಿದ ಸುದೀಪ್

    ಇದನ್ನು ಕೇಳಿಸಿಕೊಂಡ ಚಕ್ರವರ್ತಿ ಇಲ್ಲ ನಾನು ಪ್ರಿಯಾಂಕಾ ಅವರಿಗೆ ಹೇಳಿದ ಸಾಂತ್ವನದ ಮಾತು ಅವರಿಗೆ ಇಷ್ಟ ಆಗಿಲ್ಲ. ನನಗೆ ಅವರ ನಾಟಕದ ಮಾತು ಹಿಡಿಸಿಲ್ಲ. ಅವರ ಸ್ವಭಾವದಿಂದಾಗಿ ಅವರು ನನಗೆ ಕಾಣಿಸದಂತೆ ಆಗಿದ್ದಾರೆ ಎಂದರು.

    ಸರ್ ನನ್ನ ಸ್ವಭಾವ ಮತ್ತು ಇತರ ವಿಷಗಳನ್ನು ತೆಗೆದುಕೊಂಡು ನನ್ನನ್ನು ಹೊರ ಪ್ರಪಂಚದಲ್ಲಿ ಅವರು ಬೇರೆ ರೀತಿ ಅರ್ಥ ಮಾಡಿಸಿದ್ದಾರೆ ಇದು ನನಗೆ ಇಷ್ಟ ಇಲ್ಲ. ಅವರು ಹೊರ ಪ್ರಪಂಚಕ್ಕೆ ನಾನು ಹೀಗೆ ಎಂದು ಪಂಜರವೊಂದನ್ನು ಹಾಕಿದ್ದಾರೆ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.

  • ರ್‍ಯಾಗಿಂಗ್ ರೂವಾರಿ ಚಕ್ರವರ್ತಿ, ಕ್ಷಮಿಸಿ ದಿವ್ಯಾ ಸುರೇಶ್: ಪ್ರಶಾಂತ್ ಸಂಬರಗಿ

    ರ್‍ಯಾಗಿಂಗ್ ರೂವಾರಿ ಚಕ್ರವರ್ತಿ, ಕ್ಷಮಿಸಿ ದಿವ್ಯಾ ಸುರೇಶ್: ಪ್ರಶಾಂತ್ ಸಂಬರಗಿ

    ದಿವ್ಯಾ ಸುರೇಶ್ ವೈಯಕ್ತಿಕ ವಿಚಾರ ಕುರಿತಂತೆ ಅಣುಕಿಸಿದ್ದ ಪ್ರಶಾಂತ್ ಸಂಬರಗಿಯವರಿಗೆ ಶನಿವಾರ ಬಿಗ್‍ಬಾಸ್ ಪಂಚಾಯತಿಯಲ್ಲಿ ಪ್ರಶಾಂತ್ ಸಂಬರಗಿಯವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ನಂತರ ತಮ್ಮ ತಪ್ಪನ್ನು ಅರಿತ ಪ್ರಶಾಂತ್ ಸಂಬರಗಿಯವರು ದಿವ್ಯಾ ಸುರೇಶ್ ಬಳಿ ಹೋಗಿ, ನೀನು ಡಿಗ್ರಿ ಕಾಲೇಜ್ ಪಿಕ್ಚರ್ ಮಾಡಿರುವುದರ ಬಗ್ಗೆ ನನಗೆ ಗೊತ್ತೆ ಇರಲಿಲ್ಲ. ಈ ಡ್ರಾಮವನ್ನೆಲ್ಲಾ ನನ್ನ ತಲೆಗೆ ಹಾಕಿದ್ದು ಚಕ್ರವರ್ತಿ. ನನಗೆ ಏನು ಗೊತ್ತಿರಲಿಲ್ಲ ನಾನು ಹೇಳುತ್ತೇನೆ, ನೀನು ರಿಯಾಕ್ಟ್ ಮಾಡು ಅಂತ ಹೇಳಿದ್ದರು. ನನ್ನನ್ನು ನೀನು ಕರ್ನಾಟಕದ ಜನತೆ ಮುಂದೆ ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದೆ, ಹಾಗಾಗಿ ನೀನು ನನಗೆ ಕ್ಷಮೆ ಕೇಳುತ್ತೀಯಾ ಎಂದು ಕೊಂಡಿದ್ದೆ. ನಿನಗೆ ನಾನು ಪ್ರತಿ ಬಾರಿ ಗೈಡೆನ್ಸ್ ನೀಡಿದ್ದೇನೆ. ಆದರೆ ಏನಾದರೂ ತಪ್ಪು ಮಾಡಿದ್ನಾ? ಎಂದು ಹೇಳುತ್ತಾ ಕ್ಷಮೆಯಾಚಿಸಿದ್ದಾರೆ.

    ಇದಕ್ಕೆ ದಿವ್ಯಾ ಸುರೇಶ್ ಕೂಡ ನಾನು ನಿಮ್ಮ ಬಗ್ಗೆ ಆ ಹೇಳಿಕೆ ನೀಡಬಾರದಿತ್ತು ಸಾರಿ ಎಂದು ಕ್ಷಮೆ ಕೋರಿದ್ದಾರೆ. ನಂತರ ನೀನು ಸೆಕ್ಯೂರಿಟಿ ಗಾರ್ಡ್ ಎಂದಿದ್ದಕ್ಕೆ ಅಷ್ಟೇ ಕೋಪ ಇತ್ತು. ಆದರೆ ಇದರ ರೂವಾರಿ ಚಕ್ರವರ್ತಿ ಚಂದ್ರಚೂಡ್ ಎಂದು ಹೇಳಿದ್ದಾರೆ.

    ಬಳಿಕ ಕಿಚ್ಚ ಸುದೀಪ್ ಮುಂದೆ ಕೂಡ ಈ ರ್‍ಯಾಗಿಂಗ್ ರೂವಾರಿ, ಸ್ಕ್ರಿಪ್ಟ್ ರೈಟರ್ ಚಕ್ರವರ್ತಿಯವರು ನಾನು ಕೇವಲ ಪಾತ್ರ ತುಂಬಿದ್ದೆ ಅಷ್ಟೇ ನಾನು ದಿವ್ಯಾ ಸುರೇಶ್‍ಗೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ಕೂಡ ಅವಳಿಂದ ಕ್ಷಮೆ ನಿರೀಕ್ಷಿಸಿದ್ದೆ. ಯಾಕೆಂದರೆ ನನ್ನನ್ನು ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದಳು. ನಾನು ಅವಳಿಗೆ ತಿಳಿ ಹೇಳಿದ್ದೆ, ಅವಳಿಗೆ ಒಳ್ಳೆಯಾದಗಲಿ ಎಂದು ಬಯಸಿದ್ದೆ. ಅದೊಂದು ಬೇಜಾರಿತ್ತು. ಆದರೆ ಅದು ಬಿಟ್ಟರೆ ಅವಳು ಸ್ವೀಟ್ ಗರ್ಲ್. ಅವಳು ನನಗೆ ಬೇಜಾರು ಮಾಡಿದಕ್ಕೆ, ನಾನು ಅವಳಿಗೆ ಬೇಜಾರು ಮಾಡಲು ಹೊರಟಿದ್ದೆ. ಅದು ನನ್ನ ಚಿಕ್ಕತನ. ಆದರೆ ನಾನು ಅದನ್ನು ಕ್ಷಮಿಸಿ ಮುಂದೆ ಹೋಗಬೇಕಾಗಿತ್ತು ಎಂದಿದ್ದಾರೆ.

  • ‘ಪತ್ರವಳ್ಳಿ’ ಪದಕ್ಕೆ ನಮಗೆ ಅರ್ಥವೇ ಸಿಗಲಿಲ್ಲ- ಚಕ್ರವರ್ತಿಗೆ ಸುದೀಪ್ ಕ್ಲಾಸ್

    ‘ಪತ್ರವಳ್ಳಿ’ ಪದಕ್ಕೆ ನಮಗೆ ಅರ್ಥವೇ ಸಿಗಲಿಲ್ಲ- ಚಕ್ರವರ್ತಿಗೆ ಸುದೀಪ್ ಕ್ಲಾಸ್

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ 2ನೇ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್‍ಗೆ ಖಡಕ್ ಆಗಿ ವಾರ್ನಿಂಗ್ ಮಾಡಿ ಕಿವಿ ಮಾತು ಹೇಳಿದ್ದಾರೆ.

    ಹಿಂದಿನ ವಾರ ಪ್ರಶಾಂತ್ ಸಂಬರಗಿ ಅನ್‍ವಿಶಲ್ ಅಗಿರುವ ಕುರಿತಾಗಿ ಮಾತು ಆರಂಭಿಸಿದ್ದರು. ಸ್ವಲ್ವ ತಮಾಷೆಯಾಗಿ ಮಾತನ್ನು ಸುದೀಪ್ ಆರಂಭಿಸಿದ್ದರು. ನಂತರ ಹಿಂದಿನ ವಾರ ಚಕ್ರವರ್ತಿ ಮಂಜು, ದಿವ್ಯಾ ಸುರೇಶ್ ಕುರಿತಾಗಿ ಪ್ರವಳ್ಳಿ ಎನ್ನುವ ಶಬ್ದವನ್ನು ಬಳಸಿ ಮನಸ್ಸಿಗೆ ಬಂದತಂತೆ ಮಾತನಾಡಿದ್ದರು ಎಂದು ಹೇಳಿದರೆ ತಪ್ಪಾಗಲಾರದು. ಹಿಂದಿನ ವಾರ ಸುಮ್ಮನೆ ಹೀಗಿದ್ದ ಕಿಚ್ಚ ಈ ವಾರ ಸಖತ್ ಖಡಕ್ ಆಗಿ ಮಾತನಾಡಿದ್ದಾರೆ.

    ಚಕ್ರವರ್ತಿಯವರೇ ನೀವು ಹೆಚ್ಚು ಮಕ್ಕಳಿಗೆ ಗೌರವ ಕೊಡುತ್ತೇನೆ ಎಂದು ತುಂಬಾ ಸಲ ಹೇಳಿಕೊಂಡಿದ್ದೀರಾ? ಎಂದು ಕೇಳಿದಾಗ ಚಕ್ರವರ್ತಿ ಅವರದ್ದೇ ಕೆಲವು ವಿಚಾರಗಳನ್ನು ಹೇಳಿದ್ದಾರೆ. ಕರ್ನಾಟಕದ ಡಿಕ್ಷನರಿಯಲ್ಲಿ 6 ಬೇರೆ ಬೇರೆ ಉಪಭಾಷೆಗಳಲ್ಲಿ ‘ಪತ್ರವಳ್ಳಿ’ ಎನ್ನುವ ಪದಕ್ಕೆ ಅರ್ಥ ಹೀಗೆ ಇದೆ ಎಂದು ನಿಮ್ಮದೇ ರೀತಿಯಲ್ಲಿ ಕಳೆದ ವಾರ ಹೇಳಿದ್ದೀರಾ. ಮೈಸೂರು ವಿಶ್ವ ವಿದ್ಯಾಲಯದವರು ಮಾಡಿರುವ ಪದಕೋಶ, ಕನ್ನಡ ಸಾಹಿತ್ಯಪರಿಷತ್ ಮಾಡಿರುವ ಪದಕೋಶವನ್ನು ನೋಡಿದೆವು ಆದರೆ ಕನ್ನಡದ ಯಾವ ಡಿಕ್ಷನರಿಯಲ್ಲೂ ಕೂಡಾ ಆ ಪದದ ಅರ್ಥದಲ್ಲಿ ಸಿಗಲಿಲ್ಲ ಎಂದು ಹೇಳಿದ್ದಾರೆ. ಬೇಲಿ ಪಕ್ಕದಲ್ಲಿ ನಡೆಯುವ ವಿಚಾರ ಎಂದು ಹೇಳಿದ್ದೀರಾ ನೀವು. ಆದರೆ ನಿಮಗೆ ಸ್ಪಷ್ಟತೆ ಇಲ್ಲದೇ ಈ ವಿಚಾರವನ್ನು ನೀವು ಮಾತನಾಡಿದ್ದ ಕುರಿತು ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕನ್ನಡದ ವೈವಿದ್ಯಮಯ ಜಿಲ್ಲೆಯಲ್ಲಿ ಬಳಸುವ ಹಲವಾರು ಪದಗಳಿಗೆ ಅರ್ಥ ಇಲ್ಲ ಸರ್ 16ಕ್ಕೂ ಹೆಚ್ಚು ನಿಘಂಟುಗಳಿವೆ ಎಲ್ಲಾ ಶಬ್ದಕೋಶದಲ್ಲಿ ಎಲ್ಲಾ ಪದಗಳಿಗೆ ಅರ್ಥ ಸಿಗುವುದಿಲ್ಲ. ಹಳ್ಳಿ ಕಡೆ ಬಳಸುವ ಪದಗಳಿಗೆ ಅರ್ಥ ಸಿಗಲ್ಲ ಅದು ಒಂದು ಸಮನಾರ್ಥಕವಾಗಿದೆ. ಆಡು ಭಾಷೆಯಲ್ಲಿ ಇದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

    ನೀವು ಹೆಣ್ಣುಮಕ್ಕಳಿಗೆ ಗೌರವ ಕೋಡುತ್ತವೆ ಎಂದು ಹೇಳುತ್ತಾರ ಎಂದಾದರೆ ಹೆಣ್ಣುಮಕ್ಕಳಿಗೆ ಗೌರವ ಕೊಡ್ತೀನಿ ಅಂತ ನೀವು ಹೇಳ್ತೀರಾ ಹಗಾದ್ರೆ ಇಂತಹ ಪದವನ್ನು ಹೇಗೆ ಬಳಸಿದ್ದೀರಾ? ಏನದು ಚಕ್ರವರ್ತಿ ಅಂತ ಸುದೀಪ್ ಹೇಳಿದ್ದಾರೆ. ದಿವ್ಯಾ ನಿಮಗೆ ಅನ್ನಿಸಿದ್ದನ್ನೂ ನೀವು ಮಾತನಾಡಿ, ನಿಮ್ಮನ್ನು ನೀವು ಸೇವ್ ಮಾಡಿಕೊಳ್ಳಿ ಎಂದು ದಿವ್ಯಾ ಅವರಿಗೆ ಕಿವಿ ಮಾತು ಹೇಳಿದ್ದಾರೆ. ಮಂಜು ನೀವು ಚಕ್ರವರ್ತಿ ಅವರ ವೈಯಕ್ತಿಕ ವಿಚಾರವಾಗಿ ಮಾತನಾಡಿದ್ದೂ ತಪ್ಪು. ಸ್ವಾರಿ ಹೇಳುವುದು ತಪ್ಪಲ್ಲ ಎಂದು ಕೇಳುತ್ತಾ ಕಿವಿ ಮಾತು ಹೇಳಿದ್ದಾರೆ.

  • ದೊಡ್ಮನೆ ಕುಚುಕು ಗೆಳೆಯರ ಮಧ್ಯೆ ಬಿಗ್ ಫೈಟ್

    ದೊಡ್ಮನೆ ಕುಚುಕು ಗೆಳೆಯರ ಮಧ್ಯೆ ಬಿಗ್ ಫೈಟ್

    ಬಿಗ್‍ಬಾಸ್ ಮನೆಯಲ್ಲಿ ಕುಚುಕ ಗೆಳೆಯರು ಅಂದರೆ ಅದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್. ದೊಡ್ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟಿಗೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಇವರಿಬ್ಬರ ಮಧ್ಯೆ ಟಾಸ್ಕ್ ವೇಳೆ ಜೋರಾದ ವಾಗ್ವಾದ ನಡೆದಿದೆ.

    ಹೌದು, ಬಿಗ್‍ಬಾಸ್ ಮನೆಯಲ್ಲಿ ಮೈಂಡ್ ಗೇಮ್ ಆಡುತ್ತಿರುವ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಇಬ್ಬರು ಸದಾ ಮನೆಯ ಎಲ್ಲಾ ಸ್ಪರ್ಧಿಗಳ ಕಮೆಂಟ್ ಪಾಸ್ ಮಾಡುತ್ತಾ, ಚುರುಕಾಗಿ ಆಟ ಆಡುತ್ತಿದ್ದಾರೆ. ಇಷ್ಟು ದಿನ ಮನೆಯ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಈ ಜೋಡಿ, ಇದಿಗ ನೀನಾ – ನಾನಾ ಎಂದು ಜಗಳಕ್ಕೆ ನಿಂತಿದ್ದಾರೆ.

    ಎರಡು ತಂಡಗಳು ತಲಾ ಮೂರು ಸ್ಟಾರ್ ಪಡೆದ ಹಿನ್ನೆಲೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‍ಗಾಗಿ ಮನೆಯ ಸದಸ್ಯರಿಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದರು. ಡ್ರಮ್‍ನಲ್ಲಿ ತುಂಬಿಸಿದ್ದ ನೀರನ್ನು ಮಗ್‍ನಲ್ಲಿ ತುಂಬಿಸಿಕೊಂಡು ಹೋಗಿ ಕೊನೆಯಲ್ಲಿ ಇರಿಸಲಾಗಿರುವ ಜಾರ್‍ಗೆ ತುಂಬಿಸಬೇಕು ಎಂದು ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಈ ವೇಳೆ ಶಮಂತ್ ಆಟ ಆಡುವಾಗ ಫೌಲ್ ಆಗುತ್ತಾರೆ. ಇದರಿಂದ ಕೋಪಗೊಂಡ ಚಕ್ರವರ್ತಿ ಚಂದ್ರಚೂಡ್, ಶಮಂತ್ ಫಾಲ್ ಮಾಡಬೇಡ್ವೋ, ಫೌಲ್ ಮಾಡ್ಬೇಡಿ ಎಂದು ಕಿರುಚಾಡುತ್ತಾರೆ. ಇದರಿಂದ ರೊಚ್ಚಿಗೆದ್ದ ಪ್ರಶಾಂತ್ ಸಂಬರಗಿ ಬಜರ್ ಆದ ನಂತರ ಯಾಕೆ ಬೈಯ್ಯಬೇಕು ಎಂದು ಕಿಡಿಕಾರಿದ್ದಾರೆ.

    ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ಬಿಡಿಸಿ ಸಮಾಧಾನಗೊಳಿಸಲು ಮಧ್ಯೆ ಬಂದ ಅರವಿಂದ್‍ಗೆ ಕೇರ್ ಮಾಡದೇ ಚಕ್ರವರ್ತಿ ಚಂದ್ರಚೂಡ್ ಜಗಳ ಮುಂದುವರೆಸಿದ್ದಾರೆ. ಗೇಮ್ ಮುಗಿದ ನಂತರ ನನಗೆ ಬಂದು ಹೇಳಿದ್ದು ಇಷ್ಟ ಆಗಲಿಲ್ಲ ಎಂದು ಶಮಂತ್ ಹೇಳಿದ್ದಾರೆ.

    ನಂತರ ಗುರುವಾರ ಬಿಗ್‍ಬಾಸ್ ನೀಡಿದ್ದ ನೆನಪಿರಲಿ ಟಾಸ್ಕ್ ವೇಳೆ ನೀವು ಮಾಡಿದ ಯಡವಟ್ಟಿನಿಂದ ನಾವು ಸೋತ್ತಿದ್ವಿ. ಆದರೆ ಯಾರು ಕೂಡ ಏನು ಮಾತನಾಡಲಿಲ್ಲ ಎಂದು ದಿವ್ಯಾ ಉರುಡುಗ ಹರಿಹಾಯ್ದಿದ್ದಾರೆ. ಈ ವೇಳೆ ಬಜರ್ ಆದ ನಂತರ ನಾನು ಸರಿಯಾಗಿ ಆಡಿದ್ದೇನೆ ಎಂದು ತೋರಿಸಿಕೊಳ್ಳುವುದು ಎಂದು ಪ್ರಶಾಂತ್ ಸಂಬರಗಿ ಚಕ್ರವರ್ತಿ ಚಂದ್ರಚೂಡ್‍ಗೆ ಅಣುಕಿಸಿದ್ದಾರೆ.

    ಇದಕ್ಕೆ ರೊಚ್ಚಿಗೆದ್ದ ಚಕ್ರವರ್ತಿಯವರು ಬಜರ್ ಆದ ಮೆಲೆ ಅವನಿಗೆ ಹೇಳುತ್ತೇನೆ. ಏನು ಮಾಡುತ್ತಿಯಾ ತಿರುಗೇಟು ನೀಡಿದ್ದಾರೆ. ನಂತರ ಚಕ್ರವರ್ತಿಯವರನ್ನು ಸಮಾಧಾನಗೊಳಿಸಲು ಹೆಗಲ ಮೇಲೆ ಕೈ ಹಾಕಲು ಬಂದ ಪ್ರಶಾಂತ್ ಸಂಬರಗಿಯನ್ನು ಜೋರಾಗಿ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಡಿಯುಗೆ ಅರೆ..ಅರೆ.. ಮುದ್ದು ಗಿಳಿ ಎಂದ ಅರವಿಂದ್

  • ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ಅರವಿಂದ್ ಮಾತು

    ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ಅರವಿಂದ್ ಮಾತು

    ಬಿಗ್‍ಬಾಸ್ ಮನೆ ಸೆಕೆಂಡ್ ಇನ್ನಿಂಗ್ಸ್ ನ 6ನೇ ದಿನ ನಾಯಕ ಅರವಿಂದ್ ಅವರು ವೈಷ್ಣವಿ ಅವರನ್ನು ನೀವು ಬೇಜಾರ್ ಮಾಡ್ಕೋಬೇಡಿ ಎಂದು ಹೇಳಿ ನನ್ನ ಗೇಮ್ ಪ್ಲ್ಯಾನ್ ಏನಿತ್ತು ಎಂಬುದನ್ನು ತಂಡದ ಸದಸ್ಯರಿಗೆ ವಿವರಿಸಿದ್ದಾರೆ.

    ಎರಡನೇ ವಾರದ ಟಾಸ್ಕ್ ಗೆ ಮನೆಯ ಸದಸ್ಯರನ್ನು ಎರಡು ತಂಡಗಳನ್ನಾಗಿ ಮಾಡಲು ಬಿಗ್ ಬಾಸ್ ಮುಂದಾಗಿದ್ದರು. ಒಂದು ತಂಡದ ನಾಯಕನಾಗಿ ಮಂಜು ಈಗಾಗಲೇ ಆಯ್ಕೆ ಆಗಿದ್ದರೆ ಎರಡನೇ ತಂಡದ ಲೀಡರ್ ಆಯ್ಕೆಗೆ ಕಳೆದ ಬಾರಿಯ ಟಾಸ್ಕ್ ನಲ್ಲಿ ವಿಜೇತರಾದವರಿಗೆ ಟಾಸ್ಕ್ ನೀಡಲಾಗಿತ್ತು.

    ತುಂಡುತುಂಡಾಗಿದ್ದ ಭಾವಚಿತ್ರವನ್ನು ಸರಿಯಾಗಿ ಜೋಡಿಸುವ ಟಾಸ್ಕ್ ನಲ್ಲಿ ಅರವಿಂದ್ ಗೆದ್ದು ನಾಯಕನಾಗಿ ಆಯ್ಕೆ ಆಗುತ್ತಾರೆ. ಇದಾದ ಬಳಿಕ ಅರವಿಂದ್ ಮತ್ತು ಮಂಜು ತಂಡವನ್ನು ಆಯ್ಕೆ ಮಾಡಿಕೊಳ್ಳುವ ಪೆಡಸ್ಟಾಲ್ ಟಾಸ್ಕ್ ಗೆ ಸಿದ್ಧವಾಗುತ್ತಾರೆ.

    ಈ ಟಾಸ್ಕ್ ನಲ್ಲಿ ಅರವಿಂದ್ ಅನುಕ್ರಮವಾಗಿ ದಿವ್ಯಾ ಉರುಡುಗ, ದಿವ್ಯಾ, ಪ್ರಶಾಂತ್, ಚಕ್ರವರ್ತಿ, ಶಮಂತ್, ವೈಷ್ಣವಿ ಅವರನ್ನು ಆಯ್ಕೆ ಮಾಡಿದರು. ಮಂಜು ದಿವ್ಯ ಸುರೇಶ್, ರಘು, ನಿಧಿ ಸುಬ್ಬಯ್ಯ ಅವರನ್ನು ಆಯ್ಕೆ ಮಾಡಿದ್ದರು. ಈ ವೇಳೆಗೆ ಅರವಿಂದ್ 5 ಮಂದಿಯನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಶುಭಾ ಪೂಂಜಾ ಮತ್ತು ಪ್ರಿಯಾಂಕಾ ತಿಮ್ಮೇಶ್ ಮಂಜು ತಂಡವನ್ನು ಸೇರಿದರು.

    ತಂಡ ರಚನೆಯಾದ ನಂತರ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್, ನಮ್ಮ ಟೀಂನವವರ ಜೊತೆ ಒಳ್ಳೇದಾಗಿರಿ, ಆ ಟೀಂ ಜೊತೆಗೂ ಚೆನ್ನಾಗಿರಿ. ನಿಮ್ಮನ್ನು ನಾನು ಕೊನೆಗೆ ತೆಗೆದುಕೊಳ್ಳಬಹುದಿತ್ತು. ಯಾಕೆಂದರೆ ಮಂಜ ನಿಮ್ಮನ್ನು ತಗೆದುಕೊಳ್ಳುತ್ತಿರಲಿಲ್ಲ. ಅದಕ್ಕೆ ನಾನು ನಿಮ್ಮನ್ನು ಫಸ್ಟ್ ಆಯ್ಕೆ ಮಾಡಿದ್ದು, ಬೆಸ್ಟ್ ಫಲಿತಾಂಶ ನೀಡಬೇಕು ಎಂದರು. ಇದನ್ನೂ ಓದಿ: ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ‘ಕಪ್’ ಗೆದ್ದ ದಿವ್ಯಾ

    ತನ್ನ ಮಾತನ್ನು ಮುಂದುವರಿಸಿದ ಅರವಿಂದ್, ನಿಮ್ಮನ್ನು ಲಾಸ್ಟ್ ತೆಗೆದುಕೊಂಡೆ ಎಂದು ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮನ್ನು ಫಸ್ಟ್ ತೊಗೊಬಿಡ್ತಿದ್ದೆ ಎಂದು ವೈಷ್ಣವಿ ಜೊತೆ ಹೇಳಿದರು.ಇದನ್ನೂ ಓದಿ:ಪತ್ತರವಳ್ಳಿ ಅಂದರೆ ಬೇಲಿ ಸಂದಿಯಲ್ಲಿ ನಡೆಯುವ ಕಾಮ: ಮಂಜು ವಿರುದ್ಧ ಚಕ್ರವರ್ತಿ ಗರಂ

     

    ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಜೊತೆ ಮಂಜು, ದಿವ್ಯಾ ಸಂಬಂಧ ಈಗಾಗಲೇ ಹಾಳಾಗಿದೆ. ಹೀಗಾಗಿ ಇವರಿಬ್ಬರು ಯಾರ ತಂಡ ಸೇರುತ್ತಾರೆ ಎಂಬ ಕುತೂಹಲ ಇತ್ತು. ಆದರೆ ಆರವಿಂದ್ ದಿವ್ಯಾ ಅವರನ್ನು ಆಯ್ಕೆ ಮಾಡಿದ ಬಳಿಕ ಪ್ರಶಾಂತ್ ಮತ್ತು ಚಕ್ರವರ್ತಿ ಅವರನ್ನು ಆಯ್ಕೆ ಮಾಡಿ ಮತ್ತೆ ಮನೆಯ ಸದಸ್ಯರ ಮಧ್ಯೆ ಗಲಾಟೆ ಆಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

     

    ವೈಷ್ಣವಿ, ದಿವ್ಯಾ, ಅರವಿಂದ್ ಕಿಚನ್ ವಿಭಾಗವನ್ನೇ ನೋಡಿಕೊಳ್ಳುತ್ತಿದ್ದಾರೆ. ಮೂವರು ಮನೆಯ ಒಳಗಡೆ ಮತ್ತು ಹೊರಗಡೆಯೂ ಅತ್ಯುತ್ತಮ ಸ್ನೇಹಿತರಾಗಿದ್ದಾರೆ. ಪ್ರಶಾಂತ್, ಚಕ್ರವರ್ತಿ, ಶಮಂತ್ ಸಹ ಉತ್ತಮ ಸ್ನೇಹಿತರು. ಹೀಗಾಗಿ ಉತ್ತಮ ಸ್ನೇಹಿತರು ಇರುವ ಅರವಿಂದ್ ತಂಡ ಎದುರಾಳಿ ಮಂಜು ತಂಡದ ವಿರುದ್ಧ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಮೂಡಿದೆ.