Tag: Chakravarthy Chandrachud

  • ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ

    ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ

    ಸಿಸಿಎಲ್ ಆಡೋದಕ್ಕೆ ಸಮಯವಿದೆ, ಫಿಲ್ಮ್ ಫೆಸ್ಟಿವಲ್ ಭಾಗವಹಿಸೋದಕ್ಕೆ ಸಮಯವಿಲ್ವಾ ಎಂದು ಸುದೀಪ್ (Sudeep) ವಿರುದ್ಧ ಕಿಡಿಕಾರಿದ್ದ ಶಾಸಕ ರವಿ ಗಣಿಗ ಮಾತಿಗೆ ನಟನ ಆಪ್ತ ಚಂದ್ರಚೂಡ್ ಚಕ್ರವರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಚಲನಚಿತ್ರೋತ್ಸವಕ್ಕೆ ಆಹ್ವಾನ ಕೊಡದೇ ಸುದೀಪ್ ಅವರು ಬರೋಕೆ ಹೇಗೆ ಸಾಧ್ಯ ಎಂದು ಸುದೀಪ್ ಆಪ್ತ ಚಂದ್ರಚೂಡ್ ಖಡಕ್ ಆಗಿ ಮಾತನಾಡಿದ್ದಾರೆ.

    ಚಲನಚಿತ್ರೋತ್ಸವಕ್ಕೆ ಬರದೇ ಇದಿದ್ದಕ್ಕೆ, ರಾಜ್ಯ ಪ್ರಶಸ್ತಿ ನಿರಾಕರಿಸಿದ್ದಕ್ಕೆ ಸುದೀಪ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದ ಶಾಸಕ ರವಿ ಗಣಿಗ (Ravi Ganiga) ಅವರಿಗೆ ಸುದೀಪ್ ಆಪ್ತ ಮಾತನಾಡಿ, ಚಲನಚಿತ್ರೋತ್ಸವಕ್ಕೆ ಆಮಂತ್ರಣ ಕೊಡದೆ ಸುದೀಪ್ ಅವರು ಹೇಗೆ ಬರೋಕೆ ಸಾಧ್ಯ? ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು. ಇನ್ನೂ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನ ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ ಎಂದು ಚಂದ್ರಚೂಡ್ ಚಕ್ರವರ್ತಿ (Chakravarthy Chandrachud) ತಕ್ಕ ಉತ್ತರ ನೀಡಿದ್ದಾರೆ.

    2004ರಿಂದ ಇವತ್ತಿನವರೆಗೂ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗಿ ಅವಾರ್ಡ್‌ಗಳನ್ನು ತೆಗೆದುಕೊಂಡಿಲ್ಲ ಅಂದ್ರೆ, 2019ರ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ರು. ಆದರೆ ಅದನ್ನು ತಿರಸ್ಕರಿಸಿಲ್ಲ. ಈ ಹಿಂದೆ ಡಾಕ್ಟರೇಟ್ ಬಂದಾಗ ಸಮಾಜಮುಖಿ ಕೆಲಸ ಮಾಡಿದವರಿಗೆ ಕೊಡಿ ಅಂದ್ರೋ ಈಗಲೂ ಹಾಗೆ. ಈ ಯೋಚನೆ ಹಿಂದೆ ಕಾರಣವಿತ್ತು ಒಂದಿಷ್ಟು ಅವಮಾನವಿತ್ತು ಎಂದಿದ್ದಾರೆ.

    ಈ ಹಿಂದೆ ‘ರಂಗ ಎಸ್‌ಎಸ್‌ಎಲ್‌ಸಿ’ ಸಮಯದಲ್ಲಿ ಅವರಿಗೆ ಸ್ಟೇಟ್ ಅವಾರ್ಡ್ ಬರೋದು ಇರುತ್ತದೆ. ಅದರ ಹಿಂದಿನ ಸರ್ಕಾರದಿಂದ ಅವರಿಗೆ ಪತ್ರ ಬಂದಿರುತ್ತದೆ. ನಿಮಗೆ ರಾಜ್ಯೋತ್ಸವ ಬಂದಿದೆ ಅಂತ, ಮರುದಿನ ಆ ಅವಾರ್ಡ್ ಬೇರೆ ಅವರಿಗೆ ಕೊಟ್ಟಿರುತ್ತಾರೆ. `ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾ ಪ್ರಶಸ್ತಿ ಅನೌನ್ಸ್ ಮಾಡೋ ಟೈಮ್‌ನಲ್ಲೂ ಹೀಗೆ ಆಯ್ತು ಎಂದು ರವಿ ಗಣಿಗ ಆರೋಪಕ್ಕೆ ಸುದೀಪ್ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಕಾರ್ಯಕ್ರಮವೊಂದರಲ್ಲಿ 2019ರಲ್ಲಿ ರಾಜ್ಯ ಪ್ರಶಸ್ತಿ ನಿರಾಕರಿಸಿದ್ದಕ್ಕೆ ಸುದೀಪ್‌ರನ್ನು ಶಾಸಕ ರವಿ ಗಣಿಗ ಟೀಕಿಸಿದ್ದರು. ರಾಜ್ಯ ಪ್ರಶಸ್ತಿ ನಿರಾಕರಿಸಿದ್ದರ ಬಗ್ಗೆ ಸುದೀಪ್ ಹೆಸರು ಹೇಳದೇ ರವಿ ಗಣಿಗ ಮಾತನಾಡಿದ್ದರು. ಜೊತೆಗೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸದ ಸುದೀಪ್ ಸಿಸಿಎಲ್ ಆಡುತ್ತಿರುವುದಕ್ಕೆ ಪ್ರಶ್ನಿಸಿದ್ದರು. ಕಲಾವಿದರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಎಂದು ಹೇಳಿದ್ದರು.

  • ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

    ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಕಿಡಿಕಾರಿರುವ ಚಕ್ರವರ್ತಿ ಚಂದ್ರಚೂಡ್ ಸವಾಲೆಸೆದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸಂಬರ್ಗಿಗೆ ಪ್ರಶ್ನೆಗಳ ಸುರಿಮಳೆಗೈದ ಚಂದ್ರಚೂಡ್, ಅವರು ಬಂದರೆ ನಿಮ್ಮ ವಾಹಿನಿಗೆ ನಾನು ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದು ನೇರವಾಗಿ ಚಾಲೆಂಜ್ ಮಾಡಿದರು.

    ಮುಖವಾಡ ಕಳಚಲೆಂದೇ ನಾನು ಬಂದಿದ್ದೀನಿ. ಕಳೆದ 19 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಸುಮಾರು ಜನರ ಮುಖವಾಡಗಳನ್ನು ಕಳಚಿದ್ದೀನಿ. ಸುಮಾರು 60ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳನ್ನು ನೋಡಿದ್ದೀನಿ. ಅಲ್ಲದೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ಸಂಬರ್ಗಿಗೆ ಪ್ರಚಾರ ಕೊಡುತ್ತಿರುವ ಮಾಧ್ಯಮಗಳು ದುರ್ಬಳಕೆ ಆಗುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಅವರಿಗೆ ನೆಟ್ಟಗೆ 4 ಕನ್ನಡ ವಾಕ್ಯ ಮಾತಾಡೋಕೆ ಬರುತ್ತಾ ಕೇಳಿ. ಎರಡು ಚಲಚಿತ್ರ ಮಂಡಳಿಗಳಿವೆ. ಈ ಎರಡರಲ್ಲೂ ಇವರ ಬ್ಯಾನರ್ ಇಲ್ಲ. ಒಂದು ಗೀತೆ ರಚನೆಕಾರ, ಹಾಡು ಬರೆದಿದ್ದಾರೋ ಅಥವಾ ನಟಿಸಿದ್ದಾರೋ ಏನೂ ಗೊತ್ತಿಲ್ಲ. ಎಲ್ಲೋ ಸಣ್ಣಪುಟ್ಟ ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 24 ಥಿಯೇಟರ್ ಗಳನ್ನು ಕೊಡಬೇಕು, ಪರಭಾಷಾ ಚಿತ್ರಗಳಿಂದ ಕನ್ನಡವನ್ನು ಕಾಪಾಡಿಕೊಳ್ಳಬೇಕು ಅನ್ನೋದು ಅಣ್ಣಾವ್ರ ಕಾಲದಿಂದಲೂ ಹೋರಾಟ ನಡೆದಿದೆ ಎಂದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಯಾರೋ ಏನೋ ಮಾಡಿರುವುದನ್ನು ಫೇಸ್ ಬುಕ್ ಜ್ಯೋತಿಷಿ, ಭಯೋತ್ಪಾದಕನ ರೀತಿ ಕುಳಿತುಕೊಂಡು ಮಾತಾಡೋದು ಸರಿಯಲ್ಲ. ರಾಗಿಣಿ ಮತ್ತು ಸಂಜನಾಗೆ ಶಿಕ್ಷೆಯಾಗಿದ್ದಕ್ಕೆ ನಾನು ಕಾರಣ ಎಂದು ಹೇಳುತ್ತಿದ್ದಾರೆ. ಅಲ್ಲದೆ ಅನುಶ್ರೀಯವರನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಹೇಳಿಕೆ ನೀಡುವುದೆಲ್ಲ ಸಮಂಜಸವಲ್ಲ. ಕನ್ನಡದ ಹೆಣ್ಣು ಮಗಳು, ಆಕೆ ತಪ್ಪು ಮಾಡಿದ್ದರೆ ಕಾನೂನು, ಸಂವಿಧಾವಿದೆ. ಸಂಬಂಧ ಪಟ್ಟ ಇಲಾಖೆಗಳಿವೆ. ಈ ರೀತಿಯ ಕುತಂತ್ರಗಳನ್ನು ನೀವು ಬೆಳೆಸಬೇಡಿ. ದಾಖಲೆ ಒದಗಿಸಲು 2 ತಿಂಗಳು ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

  • ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    – ಸಂಬರ್ಗಿಯವರು ತಾಯಿ ಮೇಲೆ ಆಣೆ ಮಾಡಲಿ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಂಡು ತಿರುಗುವ ಪ್ರಶಾಂತ್ ಸಂಬರ್ಗಿ ಓರ್ವ ನೆಲಹಿಡುಕ. ಬಿಗ್‍ಬಾಸ್ ಶೋ ನಲ್ಲಿ ಎಲ್ಲರಿಗೂ ಪಾರ್ಟಿಕೊಟ್ಟು ಅರವಿಂದ್‍ನ ವೀಡಿಯೋ ಮಾಡಿ ಟ್ರೋಲಿಗನಿಗೆ ಕೊಟ್ಟಿದ್ದಾರೆ ಎಂದು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಸಂಬರ್ಗಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ. ಎಲ್ಲರ ಮಾತು, ಎಲ್ಲರ ವೀಡಿಯೋ ರೆಕಾರ್ಡ್ ಮಾಡುವ ನೀಚ. ಬಿಗ್‍ಬಾಸ್ ನ ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಖಾಸಗಿ ವಾಹಿನಿ ಮಾಡಿದ್ದ ಕ್ವಾರೈಂಟೈನ್ ಸಂದರ್ಭದಲ್ಲಿ ಬಿಗ್‍ಬಾಸ್ ಸ್ಪರ್ಧಿ ಅರವಿಂದ್ ಸೇರಿದಂತೆ ಹಲವರಿಗೆ ಮದ್ಯಪಾನದ ಪಾರ್ಟಿಕೊಟ್ಟು(ಚಾನಲ್ ನಿಯಮಾವಳಿ ವಿರೋಧಿಸಿ) ವೀಡಿಯೋ ಮಾಡಿದ್ದರು. ಈ ಸಂದರ್ಭ ನಾನು ಇದನ್ನು ಗಮನಿಸಿ, ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಅಲ್ಲಿದ್ದ ಹೆಣ್ಣುಮಕ್ಕಳನ್ನು ರೂಮ್‍ನಿಂದ ಹೋಗುವಂತೆ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಆದರೂ ಅರವಿಂದ್ ಅವರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದಿದ್ದರು. ಈ ಸುದ್ದಿಯನ್ನು ನಾನು ಖಾಸಗಿ ಚಾನಲ್ ಗೆ ತಿಳಿಸಿದ ಬಳಿಕ ಆ ವೀಡಿಯೋವನ್ನು ತಡೆಹಿಡಿಯಲಾಗಿದೆ. ತಾಯಿ ಪುಷ್ಪ ಸಂಬರ್ಗಿ ಅವರ ತಲೆಮೇಲೆ ಕೈಇಟ್ಟು ಈ ಬಗ್ಗೆ ನಾ ಇಂತಹ ಕೆಟ್ಟ ಕೆಲಸ ಮಾಡಲಿಲ್ಲವೆಂದು ಸಂಬರ್ಗಿ ಹೇಳಲಿ. ಇಲ್ಲದಿದ್ದಲ್ಲಿ ತನ್ನ ಮೊಬೈಲ್‍ನ್ನು ಪೊಲೀಸರಿಗೆ ತನಿಖೆಗೆ ಕೊಡಲಿ. ಟ್ರೋಲ್ ಮಾಡಬೇಕು. ನೆಗೆಟಿವ್ ಮಾಡಬೇಕು. ಕುತಂತ್ರ ಮಾಡಿ ಅವರ ಶಕ್ತಿ ಕುಂದಿಸಬೇಕು. ಅವರನ್ನು ಜನರ ಮುಂದೆ ಕೆಟ್ಟವರಾಗಿ ತೋರಿಸಬೇಕು. ಈ ಮೂಲಕ ತಾನು ಒಳ್ಳೆಯವನಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಸಂಬರ್ಗಿಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ನಿಜಕ್ಕೂ ಖಾಸಗಿ ಚಾನಲ್ ಆಯೋಜಕರು ಯಾವ ಪರಿ ಬುದ್ಧಿವಾದ ಹೇಳಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು. ಇವರು ಸಾಮಾಜಿಕ ಕಾರ್ಯಕರ್ತ ಎನ್ನುವುದಕ್ಕೆ ಯೋಗ್ಯನಲ್ಲ ಎಂದು ವಾಗ್ದಾಳಿ ನಡೆಸಿದರು.

  • ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    – ಸಂಬರ್ಗಿ ಅಲ್ಲ ಸಾಂಬಾರ್ ಕಾಗೆ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ, ಕನ್ನಡ ವಿರೋಧಿ. ರಾಜಕೀಯ ಕಾರಣಕ್ಕೆ ತಾಯಿಭಾಷೆ ಬಲಿಕೊಡುವ ನೆಲಹಿಡುಕ. ಬಿಜೆಪಿ ಪಕ್ಷ ಸೇರಲು ಪಡಬಾರದ ಪ್ರಚಾರದ ಗಿಮಿಕ್ ನಡೆಸುತ್ತಿರುವ ಓರ್ವ ನೆಲಹಿಡುಕ ಎಂದು ಬಿಗ್‍ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ.

    ಪ್ರಶಾಂತ್ ಸಂಬರ್ಗಿ ವಿರುದ್ಧ ಫೇಸ್‍ಬುಕ್ ನಲ್ಲಿ ಬರೆದುಕೊಂಡು ಆರೋಪಗಳ ಸುರಿಮಳೆ ಗೈದಿರುವ ಚಂದ್ರಚೂಡ್, ಸಂಬರ್ಗಿಯ ಹೋರಾಟವೆಲ್ಲಾ ಸುಳ್ಳು. ಸಂಬರ್ಗಿ ಒಬ್ಬ ಮೋಸಗಾರ. ಯಾವುದೇ ಕೇಸ್ ಅಲ್ಲಿ ಕೂಡ ಸಂಬರ್ಗಿ ಸಾಕ್ಷ್ಯ ಕೊಟ್ಟಿಲ್ಲ. ಮೀಟೂ ಕೇಸ್ ಅಲ್ಲಿ ಕೋಟ್ಯಂತರ ಹಣ ಪಡೆದ, ಅರ್ಜುನ್ ಸರ್ಜಾ ಪರವಾಗಿ ಮಾತನಾಡಿದ. ಇದೂವರೆಗೂ ಒಂದೇ ಒಂದು ಸಾಕ್ಷ್ಯವನ್ನು ಕೊಟ್ಟಿಲ್ಲ. ರಾಗಿಣಿ, ಸಂಜನಾ, ಜಮೀರ್ ಅಹಮದ್ ವಿರುದ್ಧ ಮಾತನಾಡಿದ ಬಳಿಕ ಸಿಸಿಬಿಯ ಕಚೇರಿಯಲ್ಲಿ ಖಾಲಿ ಫೈಲ್ ಹಿಡ್ಕೊಂಡು ಓಡಾಡಿದ. ಇನ್ಸ್‍ಪೆಕ್ಟರ್, ಡಿಸಿಪಿ ಚೇಂಬರ್ ಗೆ ಹೋಗಿ ಕಾಲಹರಣ ಮಾಡಿ ಬಂದ ಅಷ್ಟೇ. ಸ್ನೇಹಿತನೊಬ್ಬನಿಗೆ ಕಾರು ಕೊಡ್ತಿಸ್ತೀನಿ ಅಂತ ತಾನೇ ಕಾರನ್ನು ಇಟ್ಟುಕೊಂಡು. ಬಳಿಕ ಕಾರು ತೆಗೆದುಕೊಳ್ಳಲು ಬಂದ ಸ್ನೇಹಿತನಿಗೆ ಮೋಸ ಮಾಡಿದ ಎಂದು ಸಂಬರ್ಗಿಯ ಇಡೀ ಚರಿತ್ರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಚಂದ್ರಚೂಡ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ವಕೀಲ ಸೂರ್ಯ ಮುಕುಂದ್ ರಾಜ್ ಪೋಸ್ಟ್ ಗೆ ಸಂಬರ್ಗಿ ವಿರುದ್ಧ ಸಾಕಷ್ಟು ಬರೆದಿರೊ ಚಂದ್ರಚೂಡ್, ಸಾಂಬಾರ್ ಕಾಗೆ ಎಂಬ ದಲ್ಲಾಳಿಯ ಪುರಾಣ. ರಿಲಾಯನ್ಸ್ ಕಂಪನಿಯ ಮಾರ್ಕೆಟಿಂಗ್ ಬಾಯ್ ಅಂತಾ ಪೋಸ್ಟ್ ಹಾಕಿದ್ದ ವಕೀಲ ಸೂರ್ಯ ಮುಕುಂದ್ ರಾಜ್ ಪೋಸ್ಟ್ ಗೆ ಪುಟಗಟ್ಟಲೆ ಕಮೆಂಟ್ ಮಾಡಿರುವ ಚಂದ್ರಚೂಡ್, ಈ ಸಂಧರ್ಭಕ್ಕೆ ಇಂತಹದ್ದೊಂದು ವಿವರಣೆ ಬರೆಯದೆ ಹೋದರೆ ಕಲಿತ ಪತ್ರಿಕೋದ್ಯಮಕ್ಕೆ ಅಗೌರವ. ಸಿನಿಮಾ ಇಂಡಸ್ಟ್ರಿಗೂ ಅವನಿಗೂ ಏನು ಸಂಬಂಧ ಕಳಿಸ್ರೊ ಅವನನ್ನು ಹೊರಗೆ ಅಂತಾ ಅಂಬರೀಶ್ ಉಗಿದು ಕಳಿಸಿದ್ರು, ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಲು ಕ್ರೈಸ್ತ ಮಿಶನರಿ ಇಂದ ಹಣ ಬರ್ತಿತ್ತು. ಹಾಗಾಗಿ ಅವನು ಆರೋಪ ಮಾಡಿದ್ದ. ರೇಂಜ್ ರೋವರ್ ಕಾರ್ ಪಡೆದು ಸ್ನೇಹಿತನಿಗೆ ರಾತ್ರೋ ರಾತ್ರಿ ವಿಶ್ವಾಸ ದ್ರೋಹವೆಸಗಿದ ಆಸಾಮಿ ಅವನು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

    ಕಂಡವರ ಬಗ್ಗೆ ಸುಳ್ಳು ಆಸ್ತಿಗಳನ್ನ ಕೇಳ್ತಾನೆ ರಾಗಿಣಿ, ಸಂಜನಾ, ಅನುಶ್ರೀ, ಜಮೀರ್ ಬಗ್ಗೆ ಈವರೆಗೆ ಈತ ಒಂದೇ ಒಂದು ಚೂರು ಮಾಹಿತಿ ಕೊಟ್ಟಿಲ್ಲ. ನಾಲ್ಕು ಬಾರಿ ಸಿಸಿಬಿಯ ಬಾತ್ ರೂಮ್ ಬಳಸಿ ಬಂದನೇ ಹೊರತು ಯಾವ ಸಣ್ಣ ಮಾಹಿತಿಯೂ ನೀಡಿಲ್ಲ. ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು, ಖ್ಯಾತ ಗಾಯಕ ರಘು ದೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ ಗಿಂಡಿಮಾಣಿ ಪ್ರಶಾಂತ್ ಸಂಬರ್ಗಿ ಎಂದು ಹಿಗ್ಗಾಮುಗ್ಗ ಜರಿದಿದ್ದಾರೆ.

     

     

  • ಊರ ನಾಯಿ ಕಾಡು ನಾಯಿ ಜೊತೆ ಹೋಗಿದೆ: ಚಕ್ರವರ್ತಿ

    ಊರ ನಾಯಿ ಕಾಡು ನಾಯಿ ಜೊತೆ ಹೋಗಿದೆ: ಚಕ್ರವರ್ತಿ

    ಬಿಗ್ ಬಾಸ್ ಕೊನೇಯ ವಾರಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ಸಹ ನಡೆಯಲಿದೆ. ಇದೇ ಸಂದರ್ಭದಲ್ಲಿ ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್‍ಗೆ ಚಕ್ರವರ್ತಿ ಚಂದ್ರಚೂಡ್ ಆಗಮಿಸಿದ್ದು, ಈ ವೇಳೆ ಮನೆಯಲ್ಲಿನ ಸ್ಪರ್ಧಿಗಳನ್ನು ಪ್ರಾಣಿಗಳಿಗೆ ಹೋಲಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ದಿವ್ಯಾ ಉರುಡುಗ ಅವರನ್ನು ಕಾಂಗರೂ ಮರಿಗೆ ಹೋಲಿಸಿದ್ದಾರೆ. ನೀರಿದ್ದಾಗ ಹೇಗೆ ಮಾಡಬೇಕು, ನೀರಿಲ್ಲದಾಗ ಹೇಗೆ ಮಾಡಬೇಕು, ಹೇಗೆ ತನ್ನವರನ್ನು ಕಾಪಾಡಿಕೊಳ್ಳಬೇಕು ಎಂಬ ಗುಣವಿದೆ. ಆದರೆ ಅದಕ್ಕೆ ಬೆನ್ನ ಹಿಂದೆ ಯಾರಾದರೂ ಇರಲೇಬೇಕು. ಇನ್ನು ಊರ ನಾಯಿ, ಕಾಡು ನಾಯಿ ಜೊತೆ ಹೋಗಿ ಬಿಟ್ಟಿದೆ. ನಾಯಿಗಳು ಎಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹೇಗಾದರೂ ಮಾಡಿ ಬದುಕುತ್ತವೆ. ಇದನ್ನು ತುಂಬಾ ಜನ ಪೆಟ್ ಎಂದು ಮುದ್ದು ಮಾಡಿ, ಪ್ಯಾಂಟ್, ಶರ್ಟ್ ಹೊಲಿಸುತ್ತಾರೆ. ಆದರೆ ಇಂತಹ ನಾಯಿ ಯಾವಾಗಲೂ ಒಬ್ಬರ ಮೇಲೆ ಅವಲಂಬಿತವಾಗಿರಬೇಕು, ಇಲ್ಲವಾದಲ್ಲಿ ಅದಕ್ಕೆ ಬದುಕಲು ಆಗುವುದಿಲ್ಲ ಎಂದು ಶಮಂತ್‍ಗೆ ಹೇಳಿದ್ದಾರೆ.

    ಅಲ್ಲಿ ಒಂದು ನರಿ ಇದೆ, ಇನ್ನೊಬ್ಬರ ತಪ್ಪುಗಳ ಮೇಲೆ ಸವಾರಿ ಮಾಡುತ್ತದೆ, ತನ್ನ ಸರಿಗಳ ಮೇಲೆ ಸವಾರಿ ಮಾಡಲ್ಲ. ಆದರೆ ಅದು ತುಂಬಾ ಬ್ರಿಲಿಯಂಟ್, ಜನರ ನಾಡಿ ಮಿಡಿತ ನೋಡಿಕೊಂಡು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಆಟವಾಡುತ್ತಿದೆ ಎಂದು ಪ್ರಶಾಂತ್ ಸಂಬರಗಿ ಹೆಸರನ್ನು ಹೇಳಿದ್ದಾರೆ. ತುಂಬಾ ಅದ್ಭುತವಾದ ಹುಲಿಯೊಂದಿದೆ. ಆ ಹುಲಿ ಯಾವಾಗಲೂ ಫ್ರಿಡ್ಜ್ ಇಟ್ಟುಕೊಳ್ಳುವುದಿಲ್ಲ, ಹೊಟ್ಟೆ ಹಸಿವಾದಾಗ ಮಾತ್ರ ಬೇಟೆಯಾಡುತ್ತದೆ. ಬಾಕಿ ವಿಚಾರಗಳಲ್ಲಿ ತುಂಬಾ ಆರಾಮವಾಗಿರುತ್ತದೆ. ಅದಕ್ಕೆ ಬೇರೆನೂ ಗೊತ್ತಾಗಲ್ಲ ಅದೇ ಕೆಪಿ ಅರವಿಂದ್ ಎಂದು ಹೇಳಿದ್ದಾರೆ. ಆದರೆ ಆ ಹುಲಿ ಈ ಕೊನೇಯ ವಾರದಲ್ಲಿ ಸರ್ವೈವ್ ಆಗಬೇಕೆಂದರೆ ನನ್ನ ಬೇಟೆಯಲ್ಲಿ ತಪ್ಪಿದೆ, ಒನ್ ಸೈಡೆಡ್ ಆಗುತ್ತಿದೆ ಎನ್ನುವುದು ಅದಕ್ಕೆ ಅರಿವಾಗಬೇಕು ಎಂದು ಅರ್ಥವಾಗಬೇಕಿದೆ ಎಂದಿದ್ದಾರೆ.

    ಒಂದು ಜಿಂಕೆ ಇದೆ ಅದಕ್ಕೆ ಅಲಂಕಾರವೇ ಒಳ್ಳೆಯ ಗುಣ, ವಿನಯ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಅಮಾಯಕ ಎಂದು ಅನ್ನಿಸಿದ್ದು ದಿವ್ಯಾ ಸುರೇಶ್. ಎಷ್ಟೇ ಬೇಟೆಗಾರರು ಬಂದರೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಥ್ರ್ಯವಿದೆ. ಆದರೆ ಆ ಜಿಂಕೆಗೆ ಸೋಲು ಗೆಲವು ಎರಡನ್ನೂ ಸಮಾನವಾಗಿ ತೆಗೆದುಕೊಳ್ಳುವ ಶಕ್ತಿ ಬೇಕು ಎಂದಿದ್ದಾರೆ. ಒಂದು ಮೊಲ ಇದೆ ಅದಕ್ಕೆ ವಯಸ್ಸು, ಆಯಸ್ಸು ಯಾವುದೂ ಗೊತ್ತಾಗಲ್ಲ, ಯಾವಾಗಲೂ ಏನಾದರೂ ಕೇಳುತ್ತಲೇ ಇರುತ್ತದೆ. ಅದನ್ನು ತಬ್ಬಿಕೊಂಡು ಮುದ್ದಾಡಬೇಕೆನ್ನಿಸುತ್ತದೆ. ಆದರೆ ಅದು ಯಾರಿಗೆ ವಾಸನೆ ಹಿಡಿದಿರುತ್ತದೆಯೋ ಅವರ ಜೊತೆ ಮಾತ್ರ ಇರುತ್ತದೆ ಎಂದು ಶುಭಾ ಪೂಂಜಾ ಬಗ್ಗೆ ಹೇಳಿದ್ದಾರೆ.

    ಸಾರಂಗ ಇದೆ, ಅದು ನೋಡಕ್ಕೂ ಚೆಂದ, ವಾದ್ಯವಾಗುತ್ತದೆ. ಮಾತು ಕಡಿಮೆ ಆಡುತ್ತದೆ. ತನ್ನಪಾಡಿಗೆ ತಾನು ಹೋಗುತ್ತಿರುತ್ತದೆ. ಯಾವುದೇ ಪ್ರಭೇದ ಅಲ್ಲ. ಆದರೆ ಅದು ಸೌಂಡ್ ಮಾಡಲ್ಲ, ಅದು ಸದ್ದು ಮಾಡಿದರೆ ಸಾರಂಗಗಳು ಹಿಂಡಾಗಿ ಬರುತ್ತವೆ ಅವರೇ ವೈಷ್ಣವಿ ಎಂದಿದ್ದಾರೆ. ತುಂಬಾ ಚೆಂದದ ಸಾರಂಗ, ಮಾಡುವ ಕಡೆ ಶಬ್ದ ಮಾಡಬೇಕು. ಆಗ ಅದ್ಭುತವಾಗಿ ಕಾಣುತ್ತದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

    ಇನ್ನೊಂದು ಮುದ್ದು ಕೋಣ ಇದೆ ಕೆಸರಲ್ಲಿ, ನದಿಯಲ್ಲಿ ಎಲ್ಲಾದರೂ ಹಾಕಿ, ಏನೂ ಹಾಕಿದರೂ ನಗಿಸುವುದೊಂದೇ ಅದರ ಗುಣ. ಏನು ಮಾಡಿದರೂ ನಿನ್ನ ಜೊತೆ ಚೆನ್ನಾಗಿರುತ್ತೇನೆ ಎನ್ನುತ್ತಿರುತ್ತದೆ, ಹಳ್ಳಿ ಹಕ್ಕಿ, ಪ್ರತಿಭಾವಂತ ಅದು ಮಂಜು ಪಾವಗಡ, ಅದಕ್ಕೊಂದು ಚೆಪ್ಪಾಳೆ ಎಂದಿದ್ದಾರೆ.

  • ಚಕ್ರವರ್ತಿ ಔಟ್ ಆಗಲು ಬಲವಾದ ಕಾರಣವೇನು ಗೊತ್ತಾ?

    ಚಕ್ರವರ್ತಿ ಔಟ್ ಆಗಲು ಬಲವಾದ ಕಾರಣವೇನು ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಕನ್ನಡ ಸೀಸನ್ 8ನಲ್ಲಿ ಫಿನಾಲೆ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ದೊಡ್ಮನೆಯಲ್ಲಿ ರೋಚಕತೆ ಹೆಚ್ಚಿದೆ. ಈ ವಾರ ಮನೆಯಿಂದ ಚಕ್ರವರ್ತಿ ಆಚೆ ಹೋಗಿದ್ದಾರೆ.

    ಬಿಗ್‍ಬಾಸ್ ಮನೆಯ ಈ ವಾರಾದ ಎಲಿಮಿನೇಷನ್ ತುಂಬಾ ವಿಭಿನ್ನವಾಗಿರಲಿದೆ. ನಿಮ್ಮಲ್ಲಿಯೇ ಒಬ್ಬರು ಯಾರಿಗೂ ತಿಳಿಯದಂತೆ ಮನೆಯಿಂದ ಆಚೆ ಹೋಗುತ್ತಾರೆ. ಸಖತ್ ಟ್ವಿಸ್ಟ್ ಇರಲಿದೆ ಎಂದು ಸುದೀಪ್ ಹೇಳಿದ್ದರು. ಅದರಂತೆ ಚಕ್ರವರ್ತಿ ಆಚೆ ಬಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿತ್ತು. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್ ನೀಡಲಾಯಿತು. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್‍ನಲ್ಲಿ ಮಾತನಾಡಿದರು. ಬಿಗ್‍ಬಾಸ್ ಪಯಣದ ಕುರಿತಾಗಿ ಹೇಳಲು ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಟ್ಟರು. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್‍ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಯಿತು. ಯಾರಿಗೆ ಬಿಗ್‍ಬಾಸ್ ಮನೆಯ ಮುಖ್ಯದ್ವಾರ ತೆರೆದುಕೊಳ್ಳುತ್ತದೆಯೋ ಅವರು ಹೊರಗೆ ಬರಬೇಕು ಎಂದು ಹೇಳಿದ್ದರು. ಈ ವೇಳೆ ಶಮಂತ್ ಮತ್ತು ಚಕ್ರವರ್ತಿ ಕೊನೆಯಲ್ಲಿ ಉಳಿದುಕೊಂಡಿದ್ದರು. ಆಗ ಬಿಗ್‍ಬಾಸ್ ಚಕ್ರವರ್ತಿ ನೀವು ಮುಖ್ಯದ್ವಾರ ಮೂಲಕವಾಗಿ ಹೊರಗೆ ಬನ್ನಿ ಎಂದು ಸೂಚನೆ ನೀಡದರು. ಈ ವೇಳೆ ಚಕ್ರವರ್ತಿ ಮನೆಯಿಂದ ಆಚೆ ಬಂದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣಾದಲ್ಲಿ ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್‍ಗೆ ದಿನಾಂಕ ನಿಗದಿ

    ಪ್ರಿಯಾಂಕಾ ಎಲಿಮಿನೇಟ್ ಆದಾಗ ಚಕ್ರವರ್ತಿ ಚಂದ್ರಚೂಡ್ ನಡೆದುಕೊಂಡಿದ್ದ ರೀತಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಕೆಲವು ಸ್ಪರ್ಧಿಗಳ ಜೊತೆಗೆ ಜಗಳ ಮಾಡಿಕೊಂಡಿದ್ದರು. ಅವರು ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಚಕ್ರವರ್ತಿಯನ್ನು ಮನೆಯಿಂದ ಆಚೆ ಕಳುಹಿಸಿ ಎನ್ನುವ ಕೂಗು ಕೇಳಿ ಬರುತ್ತಿತ್ತು. ಈ ವಿಚಾರದ ಬಗ್ಗೆ ಚಕ್ರವರ್ತಿ ಕ್ಷಮೆಯನ್ನು ಕೇಳಿದ್ದರು. ಆದರೆ ಈ ವರ್ತನೆ ಜನರಿಗೆ ಇಷ್ಟವಾಗದ ಕಾರಣ ಇವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದಾರೆ.

    ಸಾಮಾನ್ಯವಾಗಿ ವೀಕೆಂಡ್‍ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್‍ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ವಾರದ ಮಧ್ಯೆ ಎಲಿಮಿನೇಷನ್ ನಡೆದ ಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಚಕ್ರವರ್ತಿ ಔಟ್ ಆಗಿದ್ದಾರೆ. ಅರವಿಂದ್ ಕೆ.ಪಿ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ವೈಷ್ಣವಿ ಹಾಗೂ ಶುಭಾ ಪೂಂಜಾ ಆಟ ಮುಂದುವರಿಸಿದ್ದಾರೆ.

  • ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

    ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

    ಬಿಗ್‍ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರವಾಗುತ್ತಿದೆ. ಒಂಟಿಮನೆಯ ಸ್ಪರ್ಧಿಗಳು ಗೆಲ್ಲಬೇಕು ಎಂದು ಏನೆಲ್ಲಾ ಕಸರತ್ತುಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಈ ಮಧ್ಯೆ ಸ್ಪರ್ಧಿಗಳಿಗೆ ನಾವು ಹೊರಗಡೆ ತುಂಬಾ ಟ್ರೋಲ್ ಆಗುತ್ತಿದ್ದೇವೆ ಎನ್ನುವ ಭಯ ಶುರುವಾಗಿದೆ.

    ಬಿಗ್‍ಬಾಸ್ ಮನೆಯಲ್ಲಿ ಪ್ರತಿ ಬಾರಿ ನಾನು ಟಾರ್ಗೆಟ್ ಆಗ್ತಿದ್ದೀನಿ, ನನ್ನನ್ನು ಸುದೀಪ್ ಸರ್ ಸ್ತ್ರೀ ಪೀಡಕ, ಸ್ತ್ರೀ ಕಂಟಕ ಅಂತ ಬಿಂಬಿಸುತ್ತಿದ್ದಾರೆ ಎಂದೆಲ್ಲ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಈಗ ಹೊಸದೊಂದು ಆತಂಕ ಶುರುವಾಗಿದೆ. ಈ ಕುರಿತಾಗಿ ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರಗೆ ಹೋಗುವಾಗ, ಚಕ್ರವರ್ತಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇದರಿಂದ ಕೋಪಗೊಂಡ ಚಕ್ರವರ್ತಿ, ಅಶ್ಲೀಲವಾಗಿ ಸನ್ನೆ ಮಾಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು. ಸುದೀಪ್ ಕೂಡ ಚಕ್ರವರ್ತಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಕುರಿತಾಗಿ ಚಕ್ರವರ್ತಿಗೆ ತಲೆನೋವು ಶುರುವಾಗಿದೆ.  

    ಫುಲ್ ಟ್ರೋಲ್ ಆಗಿರತ್ತೆ ಅಲ್ವಾ ಅದು ಎಂದು ಚಕ್ರವರ್ತಿ, ಅರವಿಂದ್ ಬಳಿ ಕೇಳಿದ್ದಾರೆ. ಮುಂಚೆ ಆಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ, 43 ದಿನಗಳಲ್ಲಿ ನೋಡಿದ್ದರ ಪ್ರಕಾರ, ಖಂಡಿತಾ ಅದು ಟ್ರೋಲ್ ಆಗಿರುತ್ತದೆ. ಖಂಡಿತಾ ನಿಮ್ಮನ್ನು ಮಾತ್ರ ಅಲ್ಲ, ನನ್ನನ್ನು ಚಚ್ಚಿರುತ್ತಾರೆ ಎಂದು ಅರವಿಂದ್ ಹೇಳಿದ್ದಾರೆ. ಚಚ್ಚಿರುತ್ತಾರೆ ಹಾಕ್ಕೊಂಡು ನನ್ನ, ಆದರೆ ನಿನ್ನ ಯಾಕೆ ಟ್ರೋಲ್ ಮಾಡುತ್ತಾರೆ ಎಂದು ಚಕ್ರವರ್ತಿ ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ. ಇಲ್ಲ ನಾನು ಆಟವನ್ನು ಸರಿಯಾಗಿ ಆಡುತ್ತಿಲ್ಲ ಎಂದು ಜನ ನನ್ನ ಟ್ರೋಲ್ ಮಾಡಿರುತ್ತಾರೆ ಎಂದು ಊಹಿಸಿದ್ದಾರೆ. ಇದನ್ನೂ ಓದಿ: ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

    ಅದೇ ನಾನು ಹೇಳಬೇಕು ಅಂದುಕೊಂಡೆ, ಪ್ರತಿವಾರವೂ ನನಗೊಂದು ಸೂಚನೆ ಬರ್ತಾ ಇದೆಯಲ್ಲಾ, ಏನಿದು? ಈ ವಾರ ನಾನು ಏನಾದ್ರೂ ಉಳಿದಕೊಂಡರೆ, ಹೆವಿ ಟಾಸ್ಕ್ ಆಡಿಬಿಡ್ತೀನಿ. ನನ್ನ ವ್ಯಕ್ತಿತ್ವ ಇರೋ ಥರ ಇದ್ದುಬಿಡ್ತೀನಿ. ಒಂದೇ ಪದ ಒಂದು ಹೆಚ್ಚಿಗೆ ಹೇಳೋದಿಲ್ಲ ಈ ಸಲ ಎಂದು ಚಕ್ರವರ್ತಿ ದೃಢ ನಿರ್ಧಾರ ಮಾಡಿದ್ದಾರೆ. ಪ್ರತಿ ವಾರ ತಪ್ಪು ಆಗ್ತಾ ಇದೆ ಸರ್ ಅದಕ್ಕೆ ಕ್ಲಾಸ್ ತಗೋತಾ ಇದ್ದಾರೆ ಎಂದು ಅರವಿಂದ್ ಹೇಳಿದ್ದಾರೆ. ಇದನ್ನೂ ಓದಿ:  ನಾನು ಮನುಷ್ಯಳೇ ಅಲ್ಲವಾ ಸರ್? – ಸುದೀಪ್‍ಗೆ ರೇಷ್ಮೆ ಅಕ್ಕ ಪ್ರಶ್ನೆ

    ಹೌದು ಬಿಗ್‍ಬಾಸ್ ಮನೆಯಲ್ಲಿ ನಡೆಯುವ ಎಷ್ಟೋ ವಿಚಾರಗಳು ಹೊರಗಿನ ಪ್ರಪಂಚದಲ್ಲಿ ಟ್ರೋಲ್ ಆಗುತ್ತಿವೆ. ಜನರು ಒಳ್ಳೆಯ ವಿಚಾರಗಳ ಕುರಿತಾಗಿ ಮಾತನಾಡುವುದ್ದಕ್ಕಿಂತ ಸ್ಪರ್ಧಿಗಿಳಿಂದ ಸಣ್ಣ ತಪ್ಪಾದರೂ ಆ ಕುರಿತಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಸ್ಪರ್ಧಿಗಳು ತಾವು ಮಾಡಿರುವ ತಪ್ಪುಗಳನ್ನು ನೆನಪು ಮಾಡಿಕೊಂಡು ಟ್ರೋಲ್ ಆಗುತ್ತಿರಬಹುದು ಎಂದಿದ್ದಾರೆ.

  • ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ

    ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ

    ಪ್ರಿಯಾಂಕ ತಿಮ್ಮೇಶ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಅಶ್ಲೀಲ ಕೈ ಸನ್ನೆ ಮಾಡಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

    ಪ್ರಿಯಾಂಕ ತಿಮ್ಮೇಶ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವಾಗ ಚಕ್ರವರ್ತಿ ತೋರಿಸಿದ ಅಶ್ಲೀಲ ಸನ್ನೆಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವರ ವರ್ತನೆ ಮತ್ತು ಕ್ಷಮೆ ಕೇಳದ ಬಗ್ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಸುದೀಪ್ ಅವರ ಶೋದಲ್ಲೂ ಅವರು ಕ್ಷಮೆ ಕೇಳದ ಬಗ್ಗೆ ಚರ್ಚೆ ಆಗಿತ್ತು. ಈಗ ಚಕ್ರವರ್ತಿ ಕ್ಷಮೆ ಕೇಳಿದ್ದಾರೆ.

    ಪ್ರೀತಿಯಿಂದ ಅಭಿಮಾನದಿಂದ ನೋಡಿಕೊಡ ಹುಡುಗಿಗೆ ನಾನು ಆ ಕೈ ಸನ್ನೆ ಮಾಡಬಾರದಿತ್ತು. ಅದು ನನ್ನ ಗುಣವಲ್ಲ. ಸ್ವಲ್ಪ ಬೇಗ ಎಮೋಷನಲ್ ಆಗುತ್ತೇನೆ. ಸಿಟ್ಟಿಗೆ ಆ ರೀತಿ ಮಾಡಿದ್ದೇನೆ ಹೊರತಾಗಿ ಯಾವುದೇ ಉದ್ದೇಶವಿಲ್ಲ. ಆ ಕೈ ಸನ್ನೆಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಿಗ್‍ಬಾಸ್ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸಿದ್ದಾರೆ.

    ಅದು ತುಂಬಾ ಕೆಟ್ಟದಾಗಿ ಕಾಣಿಸಿತ್ತು ಮತ್ತು ಒಬ್ಬ ಹೆಣ್ಣು ಮಗಳಿಗೆ ಆ ರೀತಿ ಕೈ ಸನ್ನೆ ಮಾಡಬಾರದಿತ್ತು ಎಂದು ನನಗೆ ಅನಿಸಿದೆ. ಅದು ಯಾವುದೇ ಉದ್ದೇಶವಿಟ್ಟು ಮಾಡಿಲ್ಲ, ಸಿಟ್ಟಿನಲ್ಲಿ ಆ ರೀತಿ ಮಾಡಿದೆ ಅದಕ್ಕೆ ನಾನು ಶಿರಬಾಗಿ ಕ್ಷಮೆಯನ್ನು ಕೇಳಿಕೊಳ್ಳುತ್ತೇನೆ ದಯವಿಟ್ಟು ನನನ್ನು ಕ್ಷಮಿಸಿ ಎಂದಿದ್ದಾರೆ.  ಇದನ್ನೂ ಓದಿ : ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

    ವಾರದ ಕತೆ ಕಿಚ್ಚ ಜೊತೆಯಲ್ಲಿ ಮಾತನಾಡುವಾಗ ಚಕ್ರವರ್ತಿಯವರ ಬೆರಳಿನ ವಿಚಾರದ ಕುರಿತು ಪ್ರಶ್ನಿಸಿದ್ದರು. ಅಲ್ಲದೆ ಅದರ ಅರ್ಥ ಏನು ಎಂದು ಹೇಳುವವರೆಗೆ ಬಿಡುವುದಿಲ್ಲ ಎಂದಿದ್ದರು. ನಮ್ಮ ಕೈಯಲ್ಲಿನ ಐದು ಬೆರಳುಗಳ ಮೂಲಕ ಸನ್ನೆ ಮಾಡಬಹುದು ಪ್ರತಿ ಬೆರಳಿನ ಸನ್ನೆಗೂ ಅರ್ಥವಿದೆ ಎಂದು ಹೇಳಿದ ಸುದೀಪ್, ನೀವು ಮಾಡಿದ ಸನ್ನೆಯ ಅರ್ಥವೇನು ಎಂದು ಚಕ್ರವರ್ತಿಯವರನ್ನು ಕೇಳಿದ್ದರು.

    ಇದಕ್ಕೆ ಆರಂಭದಲ್ಲಿ ಉತ್ತರಿಸಿದ ಚಕ್ರವರ್ತಿ ಚಂದ್ರಚೂಡ್, ಸಿಟ್ಟು ಬಂತು ಹೀಗಾಗಿ ತೋರಿಸಿಬಿಟ್ಟೆ ಎನ್ನುತ್ತಾರೆ. ಬಳಿಕ ಮತ್ತೊಮ್ಮೆ ಕೇಳಿದಾಗ ಐದು ಬೆರಳುಗಳು ಪಂಚಭೂತಗಳ ಸಂಕೇತ, ಮಧ್ಯದ ಬೆರಳು ಸಮತೋಲನದ ಸಂಕೇತ, ಕಷ್ಟ, ಸುಖ ಎಲ್ಲವನ್ನೂ ಸಮತೋಲನವಾಗಿ ಸವೀಕರಿಸಲಿ ಎಂದು ಪ್ರಿಯಾಂಕಾ ಅವರಿಗೆ ಆ ಬೆರಳು ತೋರಿಸಿದೆ ಎನ್ನುತ್ತಾರೆ. ತಕ್ಷಣವೇ ಸುದೀಪ್ ಕೋಪಗೊಳ್ಳುತ್ತಾರೆ, ಮತ್ತೆ ನಿಧಾನವಾಗಿ ಪ್ರಶ್ನಿಸಿ, ಸಮತೋಲನದ ಬೆರಳು ಆಗಿದ್ದರೆ, ಹೇಗೆ ಅಪರಾಧವಾಗುತ್ತದೆ ಎಂದು ಕೇಳಿದ್ದರು.

    ಅದು ಅಪರಾಧವಾಗುತ್ತದೆ, ಆ ಸನ್ನೆ ಮಾಡುವುದು ಕಾನೂನಿನ ಪ್ರಕಾರ ಸಹ ತಪ್ಪು ಎನ್ನುತ್ತಾರೆ. ಆಗ ಚಕ್ರವರ್ತಿ ಹೌದು ಸರ್ ಕೆಟ್ಟ ಸನ್ನೆ ಎನ್ನುತ್ತಾರೆ. ಅದು ಕೆಟ್ಟ ಸನ್ನೆಯೇ, ಹೊರಗಡೆ ಈ ರೀತಿ ತೋರಿಸಿದರೆ ಜಗಳವಾಗುತ್ತದೆ. ಅದೂ ಒಂದು ಹುಡುಗಿಗೆ ಅದನ್ನು ನೀವು ತೋರಿಸುವುದು ನಾಟ್ ಒಕೆ ಸರ್ ಎಂದು ಸುದೀಪ್ ಹೇಳಿದ್ದರು. ಆಗ ಎಸ್ ಸರ್ ಐ ಅಗ್ರೀ ಸರ್, ಆ ಕ್ಷಣ ಸಿಟ್ಟು ಬಂದು ಮಾಡಿದೆ. ಅಲ್ಲದೆ ಕನ್ನಡಿಯಲ್ಲಿ ಮತ್ತೆ ನೋಡಿಕೊಂಡಿದ್ದು, ಯಾವ ಮಟ್ಟಕ್ಕೆ ಕಾಣುತ್ತಿದೆ, ಏನೋ ಮಾಡಿಬಿಟ್ನಲ್ಲ ಎಂದು ನನಗೆ ನಾನೇ ನೋಡಿಕೊಂಡೆ ಎಂದು ಚಕ್ರವರ್ತಿ ಹೇಳಿದ್ದರು.

  • ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ

    ಸುದೀಪ್ ಸರ್, ನೀವು ನನ್ನನ್ನು ಸ್ತ್ರೀ ನಿಂದಕನಂತೆ ಬಿಂಬಿಸಿದ್ದೀರಿ: ಚಕ್ರವರ್ತಿ ಬೇಸರ

    ಬಿಗ್‍ಬಾಸ್ ಮನೆಯಲ್ಲಿ ಕೆಲವು ನಿಯಮಗಳಿಗೆ ಅದರ ವಿರುದ್ಧವಾಗಿ ಯಾರು ನಡೆದುಕೊಂಡರೂ ಸುದೀಪ್ ಆ ಕುರಿತಾಗಿ ವಾರಂತ್ಯದಲ್ಲಿ ಮಾತನಾಡಿ ಕೆಲವು ಪರಿಹಾರ, ಮತ್ತು ಬುದ್ಧಿವಾದವನ್ನು ಹೇಳುವ ಕೆಲಸವನ್ನು ಮಾಡುತ್ತಾರೆ. ಆದರೆ ಈ ವಾರ ಸುದೀಪ್ ವಿರುದ್ಧವಾಗಿ ಚಕ್ರವರ್ತಿ ತಿರುಗಿ ಬಿದ್ದಿದ್ದಾರೆ. ತಪ್ಪು ಮಾಡಿ ನನ್ನದಲ್ಲ ಎನ್ನುವ ರೀತಿಯಲ್ಲಿ ಸುದೀಪ್ ಬಳಿ ಚಕ್ರವರ್ತಿ ಮಾತನಾಡಿದ್ದಾರೆ.

     

    ಬಿಗ್‍ಬಾಸ್ ಮನೆಯಲ್ಲಿ ಪದೇಪದೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಸುದೀಪ್ ಸ್ತ್ರೀ ಪೀಡಕ ಎಂಬಂತೆ ಬಿಂಬಿಸಿದ್ದಾರೆ. ನಾನು ಟಾರ್ಗೆಟ್ ಆಗುತ್ತಿದ್ದೇನೆ ಎಂದು ಬ್ರೇಕ್ ಸಂದರ್ಭದಲ್ಲಿ ಚಕ್ರವರ್ತಿ ಸ್ಪರ್ಧಿಗಳ ಜೊತೆ ಅಭಿಪ್ರಾಯ ಹಂಚಿಕೊಂಡರು. ಪ್ರತಿ ವಾರವೂ ನನಗೊಂದು ಎಪಿಸೋಡ್ ಮೀಸಲಿಡುತ್ತಿದ್ದೀರಿ. ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ. ಅಂತೂ ಈಗ ನಾಲ್ಕು ಸಾಲು ಒಳ್ಳೆಯದನ್ನು ಹೇಳಿದ್ದೀರಿ. ಸಾಧು-ಸಂತರ ಮಧ್ಯೆ ನಾನು ಕ್ರಿಮಿನಲ್ ಆಗಿದ್ದೇನೆ. ನಿಮ್ಮ ಮೇಲೆ ನನಗೆ ಬೇಸರವಿದೆ. ನಾನು ಆಡುವ ಆಟ, ಕವನಗಳನ್ನು ನೀವು ಹೊಗಳುವುದೇ ಇಲ್ಲ. ಅಪರೂಪಕ್ಕೆ ನನ್ನನ್ನು ಹೊಗಳುತ್ತೀರಿ ಎಂದು ಚಕ್ರವರ್ತಿ ದೂರಿದರು.

    ಚಕ್ರವರ್ತಿ ಮಾತಿಗೆ ಸುದೀಪ್, ನೀವು ಹೇಳಿರೋದನ್ನೇ, ಮಾಡಿದ್ದನ್ನೇ ನಾನು ಹೇಳಿದ್ದೀನಿ ಅಂತ ಸಖತ್ ಖಡಕ್ ಆಗಿ ಉತ್ತರ ಕೊಟ್ಟರು. ನಂದೇನಾದರೂ ಇದೆಯಾ ಒಳ್ಳೆಯದನ್ನೂ ಹೇಳಿದ್ದೀನಿ. ನಾನು ನಿಮ್ಮ ಜ್ಞಾನ, ತಿಳುವಳಿಕೆ ಬಗ್ಗೆ ನನಗೆ ಗೌರವವಿದೆ, ಆ ವಿಚಾರದಲ್ಲಿ ನಾನು ನಿಮ್ಮ ಅಭಿಮಾನಿ. ಇಷ್ಟು ಸೀಸನ್‍ಗಳಲ್ಲಿ ನಾನು ಯಾರನ್ನೂ ಅಷ್ಟಾಗಿ ಹೊಗಳಿಲ್ಲ. ನಿಮ್ಮನ್ನು ಸಾಕಷ್ಟು ಬಾರಿ ಹೊಗಳಿದ್ದೇನೆ. ಅದನ್ನು ಸಾಬೀತುಪಡಿಸಲು ಕ್ಲಿಪ್ಪಿಂಗ್ ತೋರಿಸಬೇಕಾ? ಈ ಮನೆಯಲ್ಲಿ ಎಷ್ಟು ಜನಕ್ಕೆ ಇದನ್ನು ಹೇಳಿದ್ದೇನೆ. ನಿಮ್ಮಲ್ಲಿ ಒಳ್ಳೆತನ ಇದೆ. ಈ ವಾರ ಕೋಪ ಕಂಟ್ರೋಲ್ ಮಾಡಿಕೊಂಡ್ರಿ ಅದನ್ನು ಹೇಳ್ತಾ ಇದ್ದೀನಿ. ನೀವು ಕೊಟ್ಟಿರೋ ಬೇಜಾರನ್ನು ಬೇಜಾರಿಂದಲೇ ಹೇಳದೇ ತುಪ್ಪ ಹಚ್ಚಿ ಹೇಳಲಾ? ನಿಮ್ಮ ವೇದಿಕೆಯಿಂದ ನಾಲ್ಕು ಜನ ಕಲಿಯಲಿ ಅನ್ನೋದು ನನ್ನ ಅರ್ಥ ಎಂದು ಸುದೀಪ್ ತಿರುಗೇಟು ನೀಡಿದರು.

  • ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಪ್ರಿಯಾಂಕಾಗೆ ಅಶ್ಲೀಲ ಸನ್ನೆ – ಚಕ್ರವರ್ತಿ ವಿರುದ್ಧ ವೀಕ್ಷಕರು ಗರಂ

    ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ್ ಕೊಂಚ ಡಿಫರೆಂಟ್ ಆಗಿದ್ದಾರೆ. ಆದರೆ ಈ ಬಾರಿ ಚಕ್ರವರ್ತಿ ಮಾಡಿರುವ ಒಂದು ಸನ್ನೆಯಿಂದ ಬಿಗ್‍ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬಿಗ್‍ಬಾಸ್‍ನಲ್ಲಿ ಚಕ್ರವರ್ತಿ ಚಂದ್ರಚೂಡ್ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರು ಅಶ್ಲೀಲ ಪದ ಬಳಕೆ ಮಾಡಿದ್ದರಿಂದ ಬೀಪ್ ಸೌಂಡ್ ಹಾಕಲಾಗಿತ್ತು. ಇದಕ್ಕೆ ಕಿಚ್ಚ ಸುದೀಪ್ ಅಸಮಾಧಾನ ಹೊರ ಹಾಕಿದ್ದರು. ಚಕ್ರವರ್ತಿ ಅವರೇ ನಿಮಗೆ ಇರುವ ಜ್ಞಾನಕ್ಕೆ ಇದು ಸಲ್ಲುವುದಿಲ್ಲ ಎಂದಿದ್ದರು. ಅದಾದ ನಂತರದಲ್ಲಿ ನಾನು ತಪ್ಪನ್ನು ತಿದ್ದಿಕೊಳ್ಳುತ್ತೇನೆ ಎಂದಿದ್ದರು ಚಕ್ರವರ್ತಿ. ಇದಾದ ಒಂದೇ ವಾರದಲ್ಲಿ ಅವರು ಮತ್ತೆ ಅದೇ ತಪ್ಪನ್ನು ಮಾಡಿದ್ದಾರೆ.

    ಪ್ರಿಯಾಂಕಾ ಹಾಗೂ ಚಕ್ರವರ್ತಿ ನಡುವೆ ಒಂದು ಗೆಳೆತನ ಬೆಳೆದಿತ್ತು. ಆದರೆ ಬಿಗ್‍ಬಾಸ್ ಮನೆಯಲ್ಲಿ ಅದು ದಿಕ್ಕು ಬದಲಿಸಿಕೊಂಡಿತ್ತು. ಪ್ರಿಯಾಂಕಾ, ಶಮಂತ್ ಅನ್ಯೋನ್ಯವಾಗಿದ್ದಾರೆ ಎನ್ನುವುದೇ ಚಕ್ರವರ್ತಿ ಬೇಸರಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ಈ ಜಗಳ ವಿಚಾರ ಸುದೀಪ್ ಮುಂದೆ ಕೂಡಾ ಪ್ರಸ್ತಾಪವಾಗಿತ್ತು. ಸುದೀಪ್ ಅವರು ಇಬ್ಬರಿಗೂ ಬುದ್ಧವಾದವನ್ನು ಹೇಳಿ ರಾಜಿ ಮಾಡಿಸಿದ್ದರು. ಆದರೆ ಮತ್ತೆ ಅದೇ ಮುನಿಸು, ಜಗಳ ಮತ್ತೆ ಮಂದುವರಿದಿತ್ತು.

    ಪ್ರಿಯಾಂಕಾ ತಿಮ್ಮೇಶ್ ಔಟ್ ಆಗಿದ್ದು ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅವರಿಗೆ ಬಿಗ್‍ಬಾಸ್ ವಿಶೇಷ ಅಧಿಕಾರ ಒಂದನ್ನು ನೀಡಿದ್ದರು. ಅದರನ್ವಯ ಒಬ್ಬರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಬೇಕು. ಆಗ ಪ್ರಿಯಾಂಕಾ ತೆಗೆದುಕೊಂಡ ಹೆಸರು ಚಕ್ರವರ್ತಿ ಚಂದ್ರಚೂಡ್ ಅವರದ್ದು. ಇದು ಚಕ್ರವರ್ತಿ ಚಂದ್ರಚೂಡ್‍ಗೆ ಅಸಮಾಧಾನ ತರಿಸಿದೆ. ಹೀಗಾಗಿ ಪ್ರಿಯಾಂಕಾಗೆ ಅವರು ಮಧ್ಯದ ಬೆರಳು ತೋರಿಸಿ ಅಶ್ಲೀಲ ಸನ್ನೆ ಮಾಡಿದ್ದಾರೆ.

    ಚಕ್ರವರ್ತಿ ಚಂದ್ರಚೂಡ್ ಎಷ್ಟೇ ಹೇಳಿದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಕಾಣುತ್ತಿಲ್ಲ. ಪದೇ ಪದೇ ಬಿಗ್‍ಬಾಸ್ ಚೌಕಟ್ಟನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಈ ಬಾರಿ ಬಿಗ್‍ಬಾಸ್ ನಿಯಮವನ್ನು ಮತ್ತೆ ಮೀರಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈ ವಾರದ ವೀಕೆಂಡ್‍ನಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ.