Tag: Chakda Express

  • ಚಕ್ಡಾ ಎಕ್ಸ್‌ಪ್ರೆಸ್‌ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್

    ಚಕ್ಡಾ ಎಕ್ಸ್‌ಪ್ರೆಸ್‌ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್

    ಮಗೆ ಸಿನಿಮಾ ಬಗ್ಗೆ ಅಷ್ಟೇನೂ ಗೊತ್ತಿಲ್ಲ ಎಂದುಕೊಂಡೆ ಹೆಸರಾಂತ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯನ್ನು ಮದುವೆಯಾದರು ಅನುಷ್ಕಾ ಶರ್ಮಾ. ಆ ನಂತರದ ದಿನಗಳಲ್ಲಿ ಅವರು ಹೆಚ್ಚೆಚ್ಚು ಕ್ರಿಕೆಟ್ ಪಂದ್ಯಗಳ ಗ್ಯಾಲರಿಯಲ್ಲಿ ಕಾಣಿಸಿಕೊಂಡರು. ಇದೀಗ ಕ್ರಿಕೆಟ್ ತಾರೆಯ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಪಾತ್ರಕ್ಕಾಗಿ ಅವರು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಉಪೇಂದ್ರ ಸಿನಿಮಾದ ಹೊಸ ಪೋಸ್ಟರ್ ವಿಶ್ಲೇಷಣೆ: ಏನೇನೆಲ್ಲ ಇದೆ, ತಲೆ ಕೆಟ್ಟು ಹೋಗತ್ತೆ!

    ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಬದುಕನ್ನು ಆಧರಿಸಿದ ‘ಚಕ್ಡಾ ಎಕ್ಸ್ ಪ್ರೆಸ್’ ಸಿನಿಮಾದಲ್ಲಿ ಅನುಷ್ಕಾ ಅವರು ಜೂಲನ್ ಪಾತ್ರ ಮಾಡುತ್ತಿದ್ದಾರೆ. ಉತ್ತಮ ಬೌಲರ್ ಆಗಿರುವ ಜೂಲನ್ ಹೇಗೆಲ್ಲ ಕ್ರಿಕೆಟ್ ಆಡುತ್ತಿದ್ದರು ಎನ್ನುವುದನ್ನು ಸಮೀಪದಿಂದ ಗಮನಿಸಿ, ಇದೀಗ ಬೌಲಿಂಗ್ ಪ್ರಾಕ್ಟಿಸ್ ಕೂಡ ಮಾಡುತ್ತಿದ್ದಾರೆ. ಆ ವಿಡಿಯೋವನ್ನು ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಹಾಕಿದ್ದಾರೆ. ನೆಟ್ಸ್ ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಮಾಡುತ್ತಿರುವ ಅನುಷ್ಕಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಕೂಡ ಆಗಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ನಾಲ್ಕು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದ ಅನುಷ್ಕಾ 2018ರಲ್ಲಿ ತೆರೆಕಂಡ ಝೀರೋ ಚಿತ್ರದಲ್ಲಿ ನಟಿಸಿದ್ದರೆ, ಆನಂತರ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಹಾಗಾಗಿಯೇ ಸಖತ್ ತಾಲೀಮು ಮಾಡಿಕೊಂಡೆ ಕ್ಯಾಮೆರಾ ಮುಂದೆ ನಿಲ್ಲುವ ಸಂಕಲ್ಪ ಮಾಡಿದ್ದಾರಂತೆ ಅನುಷ್ಕಾ.

  • ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಶುಭ ಹಾರೈಕೆ

    ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಶುಭ ಹಾರೈಕೆ

    ಮುಂಬೈ: ಇಂದು ಬೆಳಗ್ಗೆ ನಡೆದ ಮೊದಲ ಭಾರತ-ಪಾಕಿಸ್ತಾನ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಜಯಭೇರಿ ಬಾರಿಸಿದೆ. ಈ ಹಿನ್ನೆಲೆ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಶುಭ ಹಾರೈಸಿದ್ದಾರೆ.

    ನೀಲಿ ಬಣ್ಣದ ಜೆರ್ಸಿ ಹೊಂದಿರುವ ಮಹಿಳಾ ಆಟಗಾರ್ತಿಯರೇ ಇಡೀ ರಾಷ್ಟ್ರವೇ ನಿಮ್ಮೊಂದಿಗಿದೆ. ವಿಶ್ವಕಪ್‍ಗಾಗಿ ನಿಮಗೆ ಶುಭ ಹಾರೈಸುತ್ತೇನೆ ಎಂದು ಬರೆದ ಪೋಸ್ಟ್‌ವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಈಗಾಗಲೇ ಅನುಷ್ಕಾ ಚಕ್ದಾ ಎಕ್ಸ್‌ಪ್ರೇಸ್‌ ಚಿತ್ರಕ್ಕಾಗಿ ಕ್ರಿಕೆಟರ್ ಆಗಲು ತಯಾರಿ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ, ಅವರು ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದ ಒಂದು ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ:  ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

    ಈ ಚಿತ್ರದ ಮೂಲಕ ಅನುಷ್ಕಾ ತಮ್ಮ ಗರ್ಭಾವಸ್ಥೆಯ ನಂತರ ಮತ್ತೆ ಚಲನಚಿತ್ರಗಳಲ್ಲಿ ನಟಿಸಲು ಮರಳುತ್ತಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಜೂಲನ್ ಅವರು ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹೊಂದಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಭಾರತಕ್ಕಾಗಿ ಕ್ರಿಕೆಟ್ ಆಡುವ ತನ್ನ ಕನಸನ್ನು ನನಸಾಗಿಸಲು ಸ್ತ್ರೀ ದ್ವೇಷದ ರಾಜಕೀಯವು ಒಡ್ಡಿದ ಅಡೆತಡೆಗಳ ಮಧ್ಯೆಯೂ ಅವರು ತಮ್ಮ ಗುರಿಯನ್ನು ತಲುಪಲು ಯಶ್ವಸಿಯಾಗಿದ್ದರು. ಕೊನೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿ, ದೇಶದ ಎಷ್ಟೋ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ಮಾದರಿಯಾಗಿದ್ದರು.

    ಬಾಲಿವುಡ್‍ನ ಎಷ್ಟೋ ಪ್ರಭಾವಿ ನಟರಲ್ಲಿ ಅನುಷ್ಕಾ ಕೂಡಾ ಒಬ್ಬರಾಗಿದ್ದಾರೆ. ಅವರು ಸುಲ್ತಾನ್, ಪಿಕೆ, ಮತ್ತು ಸಂಜು ಅಂತಹ ಖ್ಯಾತ ಚಿತ್ರಗಳಲ್ಲಿ ನಟಿಸಿದ್ದಾರೆ.

  • ಕ್ರಿಕೆಟ್ ಲೆಜೆಂಡರಿ ಬೌಲರ್ ಪಾತ್ರದಲ್ಲಿ ಅನುಷ್ಕಾ ಶರ್ಮಾ

    ಕ್ರಿಕೆಟ್ ಲೆಜೆಂಡರಿ ಬೌಲರ್ ಪಾತ್ರದಲ್ಲಿ ಅನುಷ್ಕಾ ಶರ್ಮಾ

    ಮುಂಬೈ: ಬಾಲಿವುಡ್ ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ ವಾಮಿಕಾ ಹುಟ್ಟಿದ ನಂತರ ಇದೇ ಮೊದಲಬಾರಿಗೆ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಿಸಿದ್ದಾರೆ.

    ಬಾಲಿವುಡ್ ನಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ಹಲವು ಸಿನಿಮಾಗಳು ಬರುತ್ತಿವೆ. ಇದೀಗ ಭಾರತೀಯ ವನಿತಾ ಕ್ರಿಕೆಟ್ ನ ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ ಬಯೋಪಿಕ್ ಸಿದ್ಧವಾಗುತ್ತಿದ್ದು, ಈ ಪಾತ್ರದಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಅವರೇ ‘ಚಕ್ಡಾ ಎಕ್ಸ್‌ಪ್ರೆಸ್‌’ ಸಿನಿಮಾದ ಟೈಟಲ್ ಪೋಸ್ಟರ್ ಮತ್ತು ಟೀಸರ್ ಅನ್ನು ಅನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾ ನೆಟ್‍ಫ್ಲಿಕ್ಸ್ ಓಟಿಟಿಯಲ್ಲಿ ಬರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ – ರಿಲೀಸ್‌ ಡೇಟ್‌ ಮುಂದಕ್ಕೆ 

    https://twitter.com/AnushkaSharma/status/1478940165418610688?ref_src=twsrc%5Etfw%7Ctwcamp%5Etweetembed%7Ctwterm%5E1478940165418610688%7Ctwgr%5E%7Ctwcon%5Es1_&ref_url=https%3A%2F%2Fwww.udayavani.com%2Fcinema%2Fbollywood-news%2Fanushka-sharma-plays-julan-goswami-role-in-chakda-xpress

     

    ಈ ಕುರಿತು ಅನುಷ್ಕಾ ಟ್ವಿಟ್ಟರ್ ನಲ್ಲಿ, ಇದು ನಿಜವಾಗಿಯೂ ವಿಶೇಷ ಸಿನಿಮಾವಾಗಿದೆ. ಏಕೆಂದರೆ ಇದು ಅದ್ಭುತ ತ್ಯಾಗದ ಕಥೆಯಾಗಿದೆ. ಮಾಜಿ ಭಾರತೀಯ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನ ಆಧಾರಿತ ಕಥೆಯೇ ‘ಚಕ್ಡಾ ಎಕ್ಸ್‌ಪ್ರೆಸ್‌’. ಇದು ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಕಣ್ಣು ತೆರೆಸಿದ ಕಥೆ. ಜೂಲನ್ ಅವರು ಕ್ರಿಕೆಟರ್ ಆಗಲು ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ದೇಶವನ್ನು ಹೆಮ್ಮೆಪಡಲು ನಿರ್ಧರಿಸಿದ್ದರು. ಆದರೆ ಆ ಸಮಯದಲ್ಲಿ ಕ್ರೀಡೆಯನ್ನು ಆಡುವ ಬಗ್ಗೆ ಮಹಿಳೆಯರು ಯೋಚಿಸುವುದು ತುಂಬಾ ಕಠಿಣವಾಗಿತ್ತು. ಆ ಸಮಯದಲ್ಲಿ ಅವರು ಎದುರಿಸಿದ ಕಠಿಣ ಸಮಯವನ್ನು ಈ ಚಿತ್ರ ನಿಮ್ಮ ಕಣ್ಣು ಮುಂದೆ ತೋರಿಸುತ್ತದೆ. ಜೂಲನ್ ಅವರ ಜೀವನ ಮತ್ತು ಮಹಿಳಾ ಕ್ರಿಕೆಟ್ ಅನ್ನು ರೂಪಿಸಿದ ಹಲವಾರು ನಿದರ್ಶನಗಳು ಈ ಸಿನಿಮಾ ಪ್ರೇಕ್ಷಕರಿಗೆ ತಿಳಿಯುತ್ತೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಕ್ರಿಕೆಟ್‍ನಲ್ಲಿ ಭವಿಷ್ಯವನ್ನು ಹೊಂದಲು, ಅದನ್ನೆ ತನ್ನ ವೃತ್ತಿಯಾಗಿ ತೆಗೆದುಕೊಂಡವರಲ್ಲಿ ಭಾರತದ ಮಹಿಳೆಯರು ಬಹಳ ಕಡಿಮೆ. ಜೂಲನ್ ಅವರು ಹೋರಾಟದಿಂದ ಇಂದು ಹಲವು ಮಹಿಳೆಯರು ಕ್ರಿಕೆಟ್ ಅನ್ನು ತಮ್ಮ ವೃತ್ತಿ ಜೀವನವಾಗಿ ಸ್ವೀಕರಿಸುತ್ತಿದ್ದಾರೆ. ಅದು ಅಲ್ಲದೇ ಅವರು ತಮ್ಮ ದೇಶವನ್ನು ಹೆಮ್ಮೆ ಪಡುವಂತೆ ಪ್ರೇರೇಪಿಸಿದ್ದರು. ಮಹಿಳೆಯರು ಭಾರತದಲ್ಲಿ ಕ್ರಿಕೆಟ್ ನಲ್ಲಿ ವೃತ್ತಿಜೀವನವನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಅವರು ಬದಲಾಯಿಸಿದರು. ಅದಕ್ಕಾಗಿ ಅವರು ತುಂಬಾ ಶ್ರಮಿಸಿದ್ದಾರೆ. ಅವರ ಪರಿಶ್ರಮದಿಂದ ಈಗ ಕ್ರಿಕೆಟ್ ಆಡುವ ಹುಡುಗಿಯರಿಗೆ ಉತ್ತಮ ಆಟದ ಮೈದಾನ ಸಿಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಮನೆಯಲ್ಲಿ ಕಳ್ಳತನ – ಗೋಡೆ ಮೇಲೆ ಅಶ್ಲೀಲ ಚಿತ್ರ ಬಿಡಿಸಿ ವಿಕೃತಿ

    ಅನುಷ್ಕಾ ಅವರು 2018 ರಲ್ಲಿ ಬಿಡುಗಡೆಯಾದ ಆನಂದ್ ಎಲ್ ರೈ ನಿರ್ದೇಶನದ ‘ಝೀರೋ’ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆದರೆ ಇಂದು, ಅನುಷ್ಕಾ ಅವರು ತಮ್ಮ ಮುಂಬರುವ ಚಿತ್ರ ‘ಚಕ್ಡಾ ಎಕ್ಸ್‌ಪ್ರೆಸ್‌’ ನ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.