Tag: Chaitra Vasudevan

  • ಹುಡುಗರಂತೆ ವರ್ಕೌಟ್ ಮಾಡಿ ಬೈಸಿಪ್ಸ್ ಪ್ರದರ್ಶಿಸಿದ ಚೈತ್ರಾ ವಾಸುದೇವನ್

    ಹುಡುಗರಂತೆ ವರ್ಕೌಟ್ ಮಾಡಿ ಬೈಸಿಪ್ಸ್ ಪ್ರದರ್ಶಿಸಿದ ಚೈತ್ರಾ ವಾಸುದೇವನ್

    ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್  ಚೈತ್ರಾ ವಾಸುದೇವನ್ (Chaitra Vasudevan) ಹೊಸ ಅವತಾರದಲ್ಲಿ ಕಾಣಿಸ್ಕೊಂಡು ಆಶ್ಚರ್ಯ ಹುಟ್ಟಿಸಿದ್ದಾರೆ. ಸಾಮಾನ್ಯವಾಗಿ ಹುಡುಗರು ಸತತ ವರ್ಕೌಟ್ ಮಾಡುವ ಮೂಲಕ ಪಡೆಯುವ ಸ್ಟ್ರಾಂಗ್ ಮಸಲ್ಸ್ ಹಾಗೂ ಬೈಸಿಪ್ಸ್ (Biceps) ಅನ್ನು ಮಹಿಳೆಯಾಗಿ ಚೈತ್ರಾ ವಾಸುದೇವನ್ ಸಾಧಿಸಿದ್ದಾರೆ.

    ಸತತ ವರ್ಕೌಟ್‌ನ ಫಲವನ್ನ ಫೋಟೋ ಮೂಲಕ ತೋರಿಸಲು‌ ಇನ್‌ಸ್ಟಾಗ್ರಾಮ್‌  ಪೋಸ್ಟ್ ಮಾಡಿದ್ದಾರೆ ಚೈತ್ರಾ ವಾಸುದೇವನ್. ಮಿಲಿಯನ್ ಫಾಲೋವರ್ಸ್ ಹೊಂದಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ಚೈತ್ರಾ ಜಾಲತಾಣದಲ್ಲಿ ಅವರದ್ದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿ. ಕನ್ನಡದ ಬಿಗ್‌ಬಾಸ್ (Bigg Boss) ಸ್ಪರ್ಧಿಯೂ ಆಗಿದ್ದ ಚೈತ್ರಾ ನಿರೂಪಕಿಯಾಗಿ-ಇವೆಂಟ್  ಪ್ಲ್ಯಾನರ್  ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: 600 ಕೋಟಿ ಕಲೆಕ್ಷನ್ ಮಾಡಿದ ‘ಸ್ತ್ರೀ 2’ ಸಿನಿಮಾ- ಶ್ರದ್ಧಾ ಕಪೂರ್ ಚಿತ್ರಕ್ಕೆ ಹೆಚ್ಚಿದ ಬೇಡಿಕೆ

    ಜಿಮ್‌ನಲ್ಲಿ ವರ್ಕೌಟ್ ಮಾಡುವ ಫೋಟೋ ಪೋಸ್ಟ್ ಮಾಡಿರುವ ಚೈತ್ರಾ ಹೆಣ್ಮಕ್ಕಳು ಅಪರೂಪದಲ್ಲಿ ಅಪರೂಪಕ್ಕೆ ಸ್ವೀಕರಿಸುವ ಟಾಸ್ಕ್ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ ನಯಾ ನಾಜೂಕಿನ ಔಟ್‌ಲುಕ್ ಬಯಸುವ ಹೆಣ್ಮಕ್ಕಳು ಫಿಟ್ ಇರೋದಕ್ಕೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡಿದರೂ ಬೈಸಿಪ್ಸ್ ಬರಿಸಿಕೊಳ್ಳುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಚೈತ್ರಾ ವಾಸುದೇವನ್ ಪ್ರತ್ಯೇಕ ಸಾಲಿನಲ್ಲಿ ನಿಲ್ತಾರೆ. ಇದನ್ನೂ ಓದಿ: ‘ಲಾಪತಾ ಲೇಡಿಸ್’ ಬೆನ್ನಲ್ಲೇ ಆಸ್ಕರ್‌ಗೆ ಪ್ರವೇಶ ಪಡೆದ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಚಿತ್ರ

  • ಪತಿಗೆ ಡಿವೋರ್ಸ್‌ ನೀಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಆ್ಯಂಕರ್ ಚೈತ್ರಾ

    ಪತಿಗೆ ಡಿವೋರ್ಸ್‌ ನೀಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಆ್ಯಂಕರ್ ಚೈತ್ರಾ

    ನಿರೂಪಕಿ, ಬಿಗ್ ಬಾಸ್ (Bigg Boss Kannada) ಸ್ಪರ್ಧಿ ಚೈತ್ರಾ ವಾಸುದೇವನ್ (Chaitra Vasudevan)  ಅವರು ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನ ಕೊಟ್ಟಿದ್ದರು. 5 ವರ್ಷಗಳ ದಾಂಪತ್ಯಕ್ಕೆ ನಟಿ ಚೈತ್ರಾ ಅವರು ಅಂತ್ಯ ಹಾಡಿದ್ದರು. ತಮ್ಮ ಡಿವೋರ್ಸ್ (Divorce)  ಬಗ್ಗೆ ನಟಿ ಚೈತ್ರಾ ಅವರು ಅಧಿಕೃತವಾಗಿ ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದರು. ಈಗ ತಮ್ಮ ಪತಿಗೆ ಡಿವೋರ್ಸ್ ಕೊಟ್ಟಿದ್ದು ಯಾಕೆ ಎಂದು ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.

    ಚೈತ್ರಾ ವಾಸುದೇವನ್ ಅವರು ತಮ್ಮ ನಿರೂಪಣೆಯ ಮೂಲಕ ಮನೆ ಮಾತಾದ ನಟಿ, ಪಟಪಟ ಮಾತು, ಆ ನಗು, ಆಕೆಯ ಮುದ್ದು ಮುಖ ನೋಡುಗರನ್ನ ಇಂಪ್ರೆಸ್ ಮಾಡಿತ್ತು. ಸದಾ ಒಂದಲ್ಲಾ ಒಂದು ಶೋ ಮೂಲಕ ಅಭಿಮಾನಿಗಳಿಗೆ ರಂಜಿಸೋ ಚೈತ್ರಾ ಅವರ ಬಾಳಲ್ಲಿ ಡಿವೋರ್ಸ್ ಎಂಬ ಬಿರುಗಾಳಿ ಎದ್ದಿದೆ. ಪತಿಗೆ ಡಿವೋರ್ಸ್ ನೀಡಿ ಕೆಲವು ತಿಂಗಳುಗಳು ಕಳೆದಿದೆ.

    ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಕುಂದಾಪುರದ ಹುಡುಗಿ ಚೈತ್ರಾ ಜೊತೆ ಸತ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಕಾರ್ಯಕ್ರಮದ ನಿರೂಪಣೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಚೈತ್ರಾ ಅಭಿಮಾನಿಗಳ ಗಮನ ಸೆಳೆದರು. ಇದನ್ನೂ ಓದಿ:ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್

    ಆಂಗ್ಲ ಮಾಧ್ಯಮವೊಂದಕ್ಕೆ ಬಿಗ್ ಬಾಸ್ ಚೈತ್ರಾ ಅವರು ತಮ್ಮ ಡಿವೋರ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮತ್ತು ನನ್ನ ಪತಿ ಮಧ್ಯೆ ಅಹಂಕಾರದ ಸಮಸ್ಯೆಯಿಂದ ಬೇರೆಯಾಗಿದ್ದೇವೆ ಎಂದು ಅಂದುಕೊಂಡಿದ್ದಾರೆ. ಆದರೆ ಅದು ಸುಳ್ಳು ಈ ವಿಚಾರವಾಗಿ ನಾವು ಬೇರೆಯಾಗಿದಲ್ಲ. ನಾವಿಬ್ಬರೂ 2017ರಲ್ಲಿ ಮದುವೆಯಾದೆವು, ಕಳೆದ 5 ವರ್ಷಗಳಿಂದ ನಮ್ಮ ನಡುವಿನ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟಿದ್ವಿ. ಆದರೆ ಅದು ಸಾಧ್ಯವಾಗದ ಕಾರಣ ಯೋಚಿಸಿ, ಇಬ್ಬರ ಸಮ್ಮತಿಯ ಮೇರೆಗೆ ಕೆಲವು ತಿಂಗಳುಗಳ ಹಿಂದೆ ಬೇರೆ ಆಗಿದ್ವಿ ಎಂದು ನಟಿ ಮಾತನಾಡಿದ್ದಾರೆ.

    ಈ ಹಿಂದೆ ನನ್ನ ಕೆರಿಯರ್‌ಗೆ ಪತಿ ಕುಟುಂಬದ ಬೆಂಬಲವಿದೆ ಎಂದು ನಟಿ ಹೇಳಿದ್ದರು. ಚೆನ್ನಾಗಿದ್ದ ಸಂಸಾರದಲ್ಲಿ ಅದು ಏನಾಯ್ತೋ ಏನೋ ಈಗ ನಿರೂಪಕಿ ಚೈತ್ರಾ-ಸತ್ಯ ಅವರ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ಇಬ್ಬರು ಡಿವೋರ್ಸ್ ಪಡೆದು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಡಿವೋರ್ಸ್ ಪಡೆದು ಹಲವು ತಿಂಗಳುಗಳ ನಂತರ ನಟಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಕೆಂಪು ಬಣ್ಣದ ಉಡುಗೆಯಲ್ಲಿ ‌’ಕಾವಾಲಾ’ ಬ್ಯೂಟಿ ಮಿಂಚಿಂಗ್

    ಇತ್ತೀಚೆಗೆ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡಿವೋರ್ಸ್ ವಿಚಾರಗಳನ್ನು ಘೋಷಿಸುತ್ತಿದ್ದಾರೆ. ಇದೀಗ ಚೈತ್ರಾ ಕೂಡ ಅದನ್ನೇ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಚೈತ್ರಾ ವಾಸುದೇವನ್ ಬರೆದುಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಬಾರಿ ಕಾರು ಖರೀದಿಸಿದ ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್

    ದುಬಾರಿ ಕಾರು ಖರೀದಿಸಿದ ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್

    ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರು ದುಬಾರಿ ಕಾರು ತಗೆದುಕೊಳ್ಳುವುದು ವಾಡಿಕೆ. ಅವರು ತಗೆದುಕೊಂಡು, ತಮ್ಮ ಪತ್ನಿಗೂ ಅನೇಕ ನಟರು ಕಾಸ್ಟ್ಲಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ನಿರೂಪಣೆ ಮಾಡಿಕೊಂಡು, ತಮ್ಮದೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿ ನಡೆಸುತ್ತಾ ಹಗಲಿರುಳು ಶ್ರಮಿಸುವ ಚೈತ್ರಾ ವಾಸುದೇವನ್ ದುಬಾರಿ ಕಾರು ಖರೀದಿಸಿದ್ದಾರೆ. ಕಷ್ಟ ಪಟ್ಟರೆ ಯಾವ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ಉದಾಹರಣೆ ಆಗಿದ್ದಾರೆ.

    ಚೈತ್ರಾ ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಖಾಸಗಿ ಇವೆಂಟ್ ಗಳಿಗೆ ನಿರೂಪಕರಾಗಿದ್ದಾರೆ. ತಮ್ಮದೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯನ್ನೂ ಇವರು ನಡೆಸುತ್ತಿದ್ದಾರೆ. ಸದಾ ಲವಲವಿಕೆಯಿಂದ ಮಾತನಾಡುವ, ಚಟುವಟಿಕೆಯಿಂದ ಇರುವ ಚೈತ್ರಾ  ವಾಸುದೇವನ್ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ದೊಡ್ಮನೆಗೆ ಪ್ರವೇಶ ಮಾಡಿದ್ದರು. ಆ ಮೂಲಕ ಸಾಕಷ್ಟು ಅಭಿಮಾನಿಗಳನ್ನೂ ಅವರು ಗಳಿಸಿದ್ದಾರೆ.  ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?

    ಅಂದಹಾಗೆ ಚೈತ್ರಾ ವಾಸುದೇವನ್ ಖರೀದಿಸಿರೋದು ಐಷಾರಾಮಿ ಕಾರಾದ ರೇಂಜ್ ರೋವರ್ ಕಂಪೆನಿಯದ್ದು. ಇದರ ಎಕ್ಸ್ ಶೋರೂಂ ಬೆಲೆ 72 ಲಕ್ಷ ರೂಪಾಯಿ. ಆನ್ ರೋಡ್ ಪ್ರೈಸ್ 89 ಲಕ್ಷವಂತೆ. ತಮ್ಮ ಹೊಸ ಕಾರು ಮುಂದೆ ನಿಂತು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ ಚೈತ್ರಾ. ಈ ಸಾಧನೆಗೆ ಅನೇಕರು ಅವರನ್ನು ಅಭಿನಂದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್-7’ ಶುರುವಾಗಿ ಎರಡು ವಾರಗಳಾಗಿದೆ. ಈಗಾಗಲೇ ಮನೆಯಲ್ಲಿ ಜಗಳ ಶುರುವಾಗಿದ್ದು, ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ ಆಗಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳು ಮನೆಯ ಹೊರಗೆ ಕುಳಿತಿರುತ್ತಾರೆ. ಈ ವೇಳೆ ಕಿಶನ್, ಜೈ ಜಗದೀಶ್ ಅವರ ಬಳಿ ಹೋಗಿ ನೀವು ಎಲ್ಲರನ್ನು ಕೆಟ್ಟದಾಗಿ ನಿಂದಿಸುತ್ತೀರಿ. ತುಂಬಾ ಜನಕ್ಕೆ ಬೇಜಾರು ಮಾಡಿದ್ದೀರಿ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಜೈಜಗದೀಶ್ ವಿರುದ್ಧ ಗರಂ ಆಗಿದ್ದಾರೆ.

    ಈ ವೇಳೆ ಜಗದೀಶ್ ನೀನು ಇಷ್ಟು ದಿನ ಇರಲಿಲ್ಲ. ನಾನು ಯಾರಿಗೂ ಬೇಜಾರು ಮಾಡಿಲ್ಲ. ನಾನು ನೇರವಾಗಿ ಎಲ್ಲರ ಜೊತೆ ಮಾತನಾಡುತ್ತೇನೆ. ನೀನು ಇಷ್ಟು ದಿನಗಳಿಂದ ಇಲ್ಲಿ ಇರಲಿಲ್ಲ. ಹಾಗಾಗಿ ನಿನಗೆ ಸಂಪೂರ್ಣ ವಿಷಯ ಗೊತ್ತಿಲ್ಲ. ನೀನು ನನಗೆ ಬುದ್ಧಿ ಹೇಳಲು ಬರಬೇಡ ಎಂದು ಜೈ ಜಗದೀಶ್ ಕೋಪದಲ್ಲಿಯೇ ಉತ್ತರಿಸಿದ್ದಾರೆ.

    ಬಳಿಕ ಚೈತ್ರ ವಾಸುದೇವ್ ಅವರು ಕೂಡ ಕಣ್ಣೀರು ಹಾಕಿ, ನಾನು ಊಟಕ್ಕೆಂದು ಬಂದಿಲ್ಲ. ಬೇರೆಯವರ ಬಳಿ ನಾನು ಕಿತ್ತುಕೊಂಡು ತಿಂದಿಲ್ಲ. ನಾನು ತಿನ್ನುವುದಕ್ಕೆ ಬಂದಿರಲಿಲ್ಲ. ಕೆಲಸ ಹುಡುಕುತ್ತಿದ್ದೆ. ನಾನು ಕೇವಲ ಬಿಸ್ಕೇಟ್ ನೋಡುತ್ತಿದ್ದೆ. ಅದನ್ನು ತಿನ್ನಲು ಹೋಗಲಿಲ್ಲ ಎಂದು ಹೇಳಿದ್ದಾರೆ.

    ಕಿಶನ್ ಹಾಗೂ ಜೈ ಜಗದೀಶ್ ನಡುವೆ ಜಗಳ ಜಾಸ್ತಿ ಆಗುತ್ತಿದ್ದಂತೆ ನಟ ಹರೀಶ್ ರಾಜ್, ಸುಜಾತ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಕಿಶನ್ ಜಗಳವಾಡುತ್ತಿರುವುದನ್ನು ನೋಡಿ ಹರೀಶ್, ಇದು ಜೈ ಜಗದೀಶ್ ಅವರ ಆಡುಭಾಷೆ. ನಿನಗೆ ಹಾಗೆ ಅನಿಸಿರಬಹುದು ಎಂದು ಕಿಶನ್ ಹಾಗೂ ಜೈ ಜಗದೀಶ್ ಅವರನ್ನು ಸಮಾಧಾನಪಡಿಸಿದ್ದಾರೆ.

    ಗಲಾಟೆಯ ಬಳಿಕ ಅಡುಗೆ ವಿಭಾಗದಲ್ಲಿದ್ದ ಜೈ ಜಗದೀಶ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದ ರಶ್ಮಿ ಅವರನ್ನು ಕರೆದಿದ್ದಾರೆ. ರಶ್ಮಿ ಅವರನ್ನು ಕರೆದು ನನಗೆ ಅಡುಗೆ ಡಿಪಾರ್ಟ್ ಮೆಂಟ್ ಬೇಡ. ನನಗೆ ಬೇರೆ ಡಿಪಾರ್ಟ್ ಮೆಂಟ್ ಬೇಕು ಎಂದು ಹೇಳಿದ್ದಾರೆ.