Tag: Chaitra Kundapura

  • ಸೊಲ್ಲಾಪುರದಲ್ಲಿ ಚೈತ್ರಾ ಕಾರಿದ್ದು, ತಂದು ಇಟ್ಕೊಳಿ- ಕಿರಣ್‍ಗೆ ಕರೆ ಮಾಡಿದ್ದ ಶ್ರೀಕಾಂತ್

    ಸೊಲ್ಲಾಪುರದಲ್ಲಿ ಚೈತ್ರಾ ಕಾರಿದ್ದು, ತಂದು ಇಟ್ಕೊಳಿ- ಕಿರಣ್‍ಗೆ ಕರೆ ಮಾಡಿದ್ದ ಶ್ರೀಕಾಂತ್

    – ಕಿಯಾ ಕಾರು, ಸಿಸಿಬಿ ವಶಕ್ಕೆ
    – ಕಿರಣ್ ಯಾರು..?

    ಬಾಗಲಕೋಟೆ: ವಂಚಕಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣವು (Chaitra Kundapura Deal Case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಚೈತ್ರಾ ಪ್ರಕರಣ ಹೊರಬೀಳುತ್ತಿದ್ದಂತೆಯೇ ಆರೋಪಿ ಶ್ರೀಕಾಂತ್, ಕಿರಣ್‍ಗೆ (Kiran) ಕರೆ ಮಾಡಿದ್ದಾನೆ. ಕಾರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ. ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ತಂದು ನಿಮ್ಮ ಬಳಿ ಇಟ್ಕೊಳಿ ಎಂದು ಹೇಳಿರುವುದು ಇದೀಗ ಬಯಲಾಗಿದೆ.

    ಶ್ರೀಕಾಂತ್ ಹೇಳಿದಂತೆ ಕಿರಣ್ ಅವರು ಸೆಪ್ಟೆಂಬರ್ 9 ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರೆನ್ಸ್ (Kia Carens) ತಂದು ತನ್ನ ಡ್ರೈವಿಂಗ್ ಸ್ಕೂಲ್‍ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸೌಟ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    ಕಿರಣ್ ಯಾರು..?: 32 ವರ್ಷದ ಕಿರಣ್ ಗಣಪ್ಪಗೊಳ ಹಿಂದೂ ಕಾರ್ಯಕರ್ತ. ಇವರು 26 ವರ್ಷದಿಂದ ರನ್ನ ಡ್ರೈವಿಂಗ್ ಸ್ಕೂಲ್ ಇಟ್ಟುಕೊಂಡಿದ್ದಾರೆ. ಮೊದಲು ಕಿರಣ್ ತಂದೆ ಭೀಮಶಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಕಳೆದ ಹಲವಾರು ವರ್ಷಗಳಿಂದ ಮಗ ಕಿರಣ್ ಸ್ಕೂಲ್ ನೋಡಿಕೊಳ್ಳುತ್ತಿದ್ದಾರೆ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾರಣ ಮೂರು ಬಾರಿ ಮುಧೋಳ ನಗರಕ್ಕೆ ಚೈತ್ರಾ ಕುಂದಾಪುರ ಅವರನ್ನು ಭಾಷಣಕ್ಕೆ ಕರೆಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಆಗಿತ್ತು.

    ಕಾರು ಪತ್ತೆ: ಸದ್ಯ ಕಿರಣ್ ಡ್ರೈವಿಂಗ್ ಸ್ಕೂಲ್‍ನಲ್ಲಿದ್ದ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಿಯಾ ಕಾರು ಚೈತ್ರಾ ಬಾಲಕೃಷ್ಣ ಕುಂದಾಪುರ ಹೆಸರಲ್ಲಿದೆ. ಇದನ್ನು 2023 ರಲ್ಲಿ ಚೈತ್ರಾ ಖರೀದಿ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟಿ ಕೋಟಿ ವಂಚಿಸಿ (BJP Ticket Fraud Case) ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ (Chaitra Kundapura), ಬಂಧನಕ್ಕೂ ಮುನ್ನ ಸಿಸಿಬಿಗೆ (CCB) ಚಳ್ಳೆಹಣ್ಣು ತಿನ್ನಿಸಲು ಭಾರೀ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಪೊಲೀಸರು ತನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದ ಕೂಡಲೇ ತಪ್ಪಿಸಿಕೊಳ್ಳಲು ತೊಡಕಾಗುತ್ತದೆ ಎಂದು ತನ್ನ ಕಾರನ್ನೇ ಮುಚ್ಚಿಟ್ಟಿರುವ ವಿಚಾರ ಈಗ ಬಯಲಾಗಿದೆ.

    ಪ್ರಕರಣದ ಎ1 ಆರೋಪಿ ಚೈತ್ರಾ ತನ್ನ ಬಂಧನಕ್ಕೆ ಕಾರಿನ ನಂಬರ್‌ನ್ನು ಪೊಲೀಸರು ಟ್ರೇಸ್ ಮಾಡುತ್ತಾರೆ. ಇದರಿಂದ ತಾನು ಸುಲಭವಾಗಿ ಸಿಕ್ಕಿ ಬೀಳುತ್ತೇನೆ ಎಂಬುದನ್ನು ಸರಿಯಾಗಿ ಅರಿತಿದ್ದಳು. ಇದೇ ಕಾರಣಕ್ಕೆ ಕಾರನ್ನೇ ಮುಚ್ಚಿಟ್ಟರೆ ಸುಲಭವಾಗಿ ಹಿಡಿಯಲು ಸಾಧ್ಯವಿಲ್ಲ ಎಂದು ಕಾರನ್ನು ಬಾಗಲಕೋಟೆಯ ಮುದೋಳದ ಹಳ್ಳಿಯೊಂದರಲ್ಲಿ ಮುಚ್ಚಿಟ್ಟಿದ್ದಳು. ಬಳಿಕ ಅಲ್ಲಿಂದ ಸ್ನೇಹಿತರ ಸಹಾಯದಿಂದ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ತಲೆಮರೆಸಿಕೊಂಡು ಕೆಎಸ್‍ಆರ್‍ಟಿಸಿ ಬಸ್ ಮೂಲಕ ಬೇರೆಡೆಗೆ ತೆರಳಿದ್ದಳು. ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಇದುವರೆಗೂ 3 ಕೋಟಿಯಷ್ಟು ಮೌಲ್ಯದ ನಗದು, ಚಿನ್ನ ಜಪ್ತಿ

    ಇದೀಗ ಸಿಸಿಬಿ ಅಧಿಕಾರಿಗಳು ವಂಚಕಿ ಚೈತ್ರಾಳ 28 ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆದಿದ್ದಾರೆ. 12 ಲಕ್ಷ ರೂ. ಹಣ ನೀಡಿ ಕಾರು ಖರೀದಿಸಿದ್ದ ಆಕೆ ಬಾಕಿ ಹಣಕ್ಕೆ ತನ್ನ ಹೆಸರಿನಲ್ಲೇ ಸಾಲ ಮಾಡಿದ್ದಳು ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾಳೆ ಎನ್ನುವ ವಿಚಾರ ತಿಳಿದು ಬಂದಿದೆ. ಇದೇ ವಿಚಾರವಾಗಿ ಮನೋ ವೈದ್ಯರು ಆಕೆಯನ್ನು ಪರೀಕ್ಷಿಸಲಿದ್ದಾರೆ ಎಂಬ ಮಾಹಿತಿ ಇದೆ.

    ಇನ್ನೂ ಪ್ರಕರಣದ ಮೂರನೇ ಆರೋಪಿ ಆಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಸ್ವಾಮಿಜಿ ಬಂಧನದ ಬಳಿಕ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿದೆ. ದೊಡ್ಡವರ ಹೆಸರುಗಳು ಹೊರ ಬರಲಿವೆ ಎಂದು ಚೈತ್ರಾ ಹೇಳಿದ್ದಳು. ಇದೀಗ ಹಾಲಶ್ರೀ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ ಡೀಲ್ ಕೇಸ್- ಹಾಲಶ್ರೀ ಕಾರು ಚಾಲಕನ ವಿಚಾರಣೆ

    ಚೈತ್ರಾ ಕುಂದಾಪುರ ಡೀಲ್ ಕೇಸ್- ಹಾಲಶ್ರೀ ಕಾರು ಚಾಲಕನ ವಿಚಾರಣೆ

    – ಆಪ್ತನ ಮನೆಯಲ್ಲಿ ಕಾರು ಇಟ್ಟು ಶ್ರೀ ಎಸ್ಕೇಪ್

    ಬೆಂಗಳೂರು/ಮೈಸೂರು: ಚೈತ್ರಾ ಕುಂದಾಪುರ (Chaitra Kundapura) ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಅಭಿನವ ಹಾಲಶ್ರೀ (Abhinava Halashree) ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಅಭಿನವ ಹಾಲಶ್ರೀಗಾಗಿ ಸಿಸಿಬಿ ಪೊಲೀಸರ ಹುಡುಕಾಟ ನಡೆಸಲಾಗುತ್ತಿದ್ದು, ಕಾರು ಚಾಲಕನ ವಿಚಾರಣೆಗೊಳಪಡಿಸುವ ಮೂಲಕ ಸ್ವಾಮೀಜಿ ಪತ್ತೆಗೆ ಪ್ರಯತ್ನ ಮಾಡಲಾಗತ್ತಿದೆ. ಸ್ವಾಮೀಜಿ ಬಳಕೆ ಮಾಡುತ್ತಿದ್ದ ಇನ್ನೋವಾ ಕಾರು (Innova Car) ಹಾಗೂ ಚಾಲಕ ನಿಂಗರಾಜುನನ್ನು ಸಿಸಿಬಿ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿಯನ್ನ ಕೊನೆಯದಾಗಿ ಎಲ್ಲಿ ಡ್ರಾಪ್ ಮಾಡಲಾಯಿತು. ಬೇರೆ ಯಾವ ಕಾರಿನಲ್ಲಿ ಹೋದ್ರು. ಎಲ್ಲಿಗೆ ಹೋದ್ರು, ಎಲ್ಲಿ ಆಶ್ರಯ ಪಡೆದಿದ್ದಾರೆ ಅಂತಾ ಮಾಹಿತಿ ಕಲೆ ಹಾಕಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣದ ಶ್ರೀಕಾಂತ್ ಮನೆ ಜಾಲಾಡಿದ ಸಿಸಿಬಿ- ಬಾಕ್ಸ್‌ನಲ್ಲಿಟ್ಟಿದ್ದ 41 ಲಕ್ಷ ಪತ್ತೆ

    ಸ್ವಾಮೀಜಿ ಎಸ್ಕೇಪ್ ಆಗುವ ವೇಳೆ ನಾಲ್ಕು ಸಿಮ್ ಕಾರ್ಡ್ ಹಾಗೂ ನಾಲ್ಕು ಬೇಸಿಕ್ ಮೊಬೈಲ್ ಖರೀದಿಸಿ ಮೈಸೂರಿನಿಂದ ಎಸ್ಕೇಪ್ ಆಗಿದ್ದಾರೆ. ಮೈಸೂರಿನಲ್ಲಿ ತಮ್ಮ ಕಾರನ್ನ ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಎಸ್ಕೇಪ್ ಆಗುವ ವೇಳೆ ಕಾರಿನ ನಂಬರ್ ಪ್ಲೇಟ್ ತೆಗೆದಿದ್ದಾರೆ. ನಂಬರ್ ಪ್ಲೇಟ್ ತೆಗೆದು ಕಾರನ್ನು ಆಪ್ತನ ಮನೆಯಲ್ಲಿ ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ಸಾವಿರಕ್ಕೂ ಕಷ್ಟಪಡ್ತಿದ್ದ ಚೈತ್ರಾ ಈಗ ಕೋಟ್ಯಧಿಪತಿ- 3 ಕೋಟಿ 6 ಭಾಗವಾಗಿ ಹಂಚಿದ್ದು ಹೇಗೆ?

    10 ಸಾವಿರಕ್ಕೂ ಕಷ್ಟಪಡ್ತಿದ್ದ ಚೈತ್ರಾ ಈಗ ಕೋಟ್ಯಧಿಪತಿ- 3 ಕೋಟಿ 6 ಭಾಗವಾಗಿ ಹಂಚಿದ್ದು ಹೇಗೆ?

    ಬೆಂಗಳೂರು: ಬಿಜೆಪಿ ಟಿಕೆಟ್‍ಗಾಗಿ (BJP Ticket) 5 ಕೋಟಿ ಡೀಲ್ ನಾಯಕಿ ಚೈತ್ರಾ ಕುಂದಾಪುರ (Chaitra Kundapura) ಮಾಡ್ತಾ ಇದ್ದಿದ್ದು ಸಮಾಜಸೇವೆ, ಧಾರ್ಮಿಕ ಚಿಂತಕಿ. ಹೀಗಿದ್ದ ಬಡತನ ಮನೆಯ ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯಾದಳು. ಗ್ರಾಂ ಲೆಕ್ಕದಲ್ಲಿ ಇದ್ದ ಬಿಸ್ಕೆಟ್ ರೂಪದಲ್ಲಿ ಕೆಜಿ ಆಯ್ತು.

    ಹೌದು. ಚೈತ್ರಾ ಮತ್ತು ಗ್ಯಾಂಗ್ ಅಲಿಯಾಸ್ ಕಬಾಬ್ ಗ್ಯಾಂಗ್ ಆಡಿದ್ದ ನೌಟಂಕಿ ಆಟಕ್ಕೆ ಶಹಬ್ಬಾಷ್ ಅನ್ಲೇ ಬೇಕು. ಯಾವುದೋ ಒಂದು ಬಕ್ರಾ ಸಿಗ್ತು ಅಂತ ಚೆನ್ನಾಗಿ ಸುಲಿಗೆ ಮಾಡಿದ್ದ ಗ್ಯಾಂಗ್ ಇದು. ಎಂಎಲ್‍ಎ ಆಗ್ತೀನಿ ಅಂತ ಹಗಲು ಕನಸನ್ನೇ ಕಾಣುತ್ತಾ ಇದ್ದ ಗೋವಿಂದ ಬಾಬು ಪೂಜಾರಿ ಕೋಟಿ ಕೋಟಿ ಹಣ ಪಡೆದು ಮೂರು ನಾಮ ಹಾಕಿದ್ರು. ಇದೆಲ್ಲಾ ಓಲ್ಡ್ ಸ್ಟೋರಿ, ಲೇಟೆಸ್ಟ್ ಏನಪ್ಪಾ ಅಂದ್ರೆ ಗೋವಿಂದಣ್ಣ ಕಿಸೆಯಲ್ಲಿ ಕದ್ದ ಕಾಸನ್ನ 6 ಭಾಗ ಮಾಡಿ ಹರಿದು ಹಂಚಿಕೊಂಡಿದ್ರು. ಇನ್ನೊಂದು ಟ್ವಿಸ್ಟ್ ಅಂದ್ರೆ ಕಥಾನಾಯಕಿ ಚೈತ್ರಾಗೆ ಜಾಯಿಂಟ್ ವೆಂಚರ್ ಇತ್ತು ಅನ್ನೋದು ಚೈತ್ರಾ ಮತ್ತು ಶ್ರೀಕಾಂತ್ ತಮಗೆ ಬಂದ ಹಣವನ್ನು ಜಾಯಿಂಟ್ ಅಕೌಂಟ್ ಅಲ್ಲಿ ಇಟ್ಟುಕೊಂಡಿದ್ರು.

    3 ಕೋಟಿ ಹಣ ಏನಾಯ್ತು?: ಚೈತ್ರಾ ಮತ್ತು ಶ್ರೀಕಾಂತ್ ಹೆಸರಲ್ಲಿ 1 ಕೋಟಿ 8 ಲಕ್ಷ ಎಫ್‍ಡಿ, ಚೈತ್ರಾಳ ಬ್ಯಾಂಕ್ ಲಾಕರ್‍ನಲ್ಲಿ 40 ಲಕ್ಷ ನಗದು, ಚೈತ್ರಾಳ ಮತ್ತೊಂದು ಲಾಕರ್‍ನಲ್ಲಿ 23 ಲಕ್ಷದ ಚಿನ್ನದ ಬಿಸ್ಕೆಟ್, ಹೊಸದಾಗಿ ಮನೆ ಕಟ್ಟಿಸೋಕೆ 40 ಲಕ್ಷ, ಚೈತ್ರಾಳ ಅಕ್ಕನ ಮನೆ ಸರಿ ಮಾಡಿಸೋಕೆ 15 ಲಕ್ಷ, ಚೈತ್ರಾಳ ಹೊಸ ಕಿಯಾ ಕಾರು 12 ಲಕ್ಷ (ಉಳಿದದ್ದು ಸಾಲ), ಗಗನ್ ಕಡೂರ್ ಮದುವೆಗೆ 35 ಲಕ್ಷ, ಗಗನ್ ಕಡೂರ್ ಕಾರಿನ ಬೆಲೆ 10 ಲಕ್ಷ, ರಮೇಶ್‍ಗೆ (ವಿಶ್ವನಾಥ್ ಜಿ) 1 ಲಕ್ಷದ 50 ಸಾವಿರ, ಚೆನ್ನನಾಯ್ಕ್ ಗೆ 1 ಲಕ್ಷ (93 ಸಾವಿರ ನಗದು), ಪ್ರಜ್ವಲ್‍ಗೆ 10 ಲಕ್ಷ ಹಣ, ಅಭಿನವ ಹಾಲಾಶ್ರೀಗೆ ನೀಡಿದ ಹಣ 1.5 ಕೋಟಿ ಹಂಚಿಕೆಯಗಿದೆ.

    ಹೀಗೆ 5 ಕೋಟಿ ಹಣವನ್ನು ಎಷ್ಟೊಂದು ಪಾಲು ಮಾಡಿ ಹಂಚಿಕೊಂಡಿದ್ದಾರೆ. ಇನ್ನು ಜಾಯಿಂಟ್ ಅಕೌಂಟ್ ಎಫ್‍ಡಿ, ಚಿನ್ನದ ಬಿಸ್ಕೆಟ್, 40 ಲಕ್ಷ ನಗದು, ಮುಧೋಳದಲ್ಲಿ ಇದ್ದ ಕಿಯಾ ಕಾರು ಇದೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಪ್ರಕಾರ 2 ಕೋಟಿ ಅಷ್ಟು ರಿಕವರಿ ಆಗಿದೆ.

    ಈ ಪ್ರಕರಣದಲ್ಲಿ ಇನ್ನುಳಿದವರ ಬಳಿ ಹಣ ರಿಕವರಿ ಮಾಡಬೇಕಿದ್ದು, ತಲೆಮರೆಸಿಕೊಂಡಿರೋ ಸ್ವಾಮೀಜಿಗಾಗಿ ಪೆÇಲೀಸರು ಹುಡುಕಾಟ ನಡೆಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕೇಸ್‌ಗೂ, ನನಗೂ ಸಂಬಂಧವೇ ಇಲ್ಲ- ವಿಚಾರಣೆಗೆ ಸಿದ್ಧ ಅಂದ್ರು ಸುನಿಲ್ ಕುಮಾರ್

    ಉಡುಪಿ: ನನಗೂ, ಚೈತ್ರಾ ಕುಂದಾಪುರ ಕೇಸ್‌ಗೂ (Chaiyra Kundapura) ಯಾವುದೇ ಸಂಬಂಧ ಇಲ್ಲದ ಘಟನೆ ಇದು. ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ (Sunil Kumar) ಸ್ಪಷ್ಟಪಡಿಸಿದ್ದಾರೆ.

    ಚೈತ್ರಾ ಆಡಿಯೋದಲ್ಲಿ ಸುನಿಲ್ ಕುಮಾರ್ ಹೆಸರು ಪ್ರಸ್ತಾಪಿಸಿರುವ ವಿಚರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ (BJP) ಹೆಸರಿನಲ್ಲಿ ಯಾರಿಗೆ ಯಾರು ಕೂಡ ಮೋಸ ಮಾಡಬಾರದು. ಸಿಸಿಬಿ ಅಧಿಕಾರಿಗಳು ಈಗಾಗಲೇ ಬಂಧಿಸಿರುವ ಯಾರ ಮುಖ ಪರಿಚಯ ನನಗೆ ಇಲ್ಲ. ನಾನು ಯಾರ ಜೊತೆಗೆ ನಾನು ಫೆÇೀನಲ್ಲಿ ಮಾತಾಡಿ ಕೂಡ ಇಲ್ಲ. ಆಕಸ್ಮಿಕವಾಗಿ ಶುಭ ಸಮಾರಂಭ ಕಾರ್ಯಕ್ರಮಗಳಲ್ಲೂ ಕೂಡ ಭೇಟಿ ಆಗಿಲ್ಲ ಎಂದರು.

    ಬಿಜೆಪಿಯಲ್ಲಿ ಹಣದಿಂದ ಟಿಕೆಟ್ (BJP Ticket) ಸಿಗುತ್ತೆ ಅನ್ನೋದು ಒಂದು ಭ್ರಮೆ. ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು ನಾಲ್ಕು ಬಾರಿ ಗೆದ್ದು ಬರುದಕ್ಕೆ ಸಾಧ್ಯ ಆಗುತ್ತಿರಲಿಲ್ಲ. ರಾಜಕಾರಣಿಗಳ ಹೆಸರು ಹೇಳಿ ಹಣದ ದುರುಪಯೋಗ ಮಾಡುತ್ತಾರೆ ಎಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಘಟನೆಯ ತಾರ್ಕಿಕ ಅಂತ್ಯಕ್ಕೆ ಪೊಲೀಸ್ ಇಲಾಖೆ ತೆಗೆದುಕೊಂಡು ಹೋಗಬೇಕು ಎಂದು ಶಾಸಕರು ಆಗ್ರಹಿಸಿದರು. ಇದನ್ನೂ ಓದಿ: ಚೈತ್ರಾ ಡೀಲ್ ಪ್ರಕರಣಕ್ಕೂ ಹಿರೇಹಡಗಲಿ ಶ್ರೀಮಠಕ್ಕೂ ಸಂಬಂಧವಿಲ್ಲ: ಸಣ್ಣ ಹಾಲಶ್ರೀ ಸ್ಪಷ್ಟನೆ

    ಘಟನೆಯ ಹಿಂದೆ ಯಾರಿದ್ದಾರೆ, ಯಾರು ದುರುಪಯೋಗ ಮಾಡುತ್ತಾರೆ ಅಂತವರನ್ನ ಸಂಪೂರ್ಣವಾಗಿ ಮಟ್ಟ ಹಾಕಬೇಕು. ರಾಜಕಾರಣಿಯ ಹೆಸರು ಹೇಳಿ ಪಕ್ಷದ ಹೆಸರು ಹೇಳಿ ಹಣ ಸಂಗ್ರಹ ಮಾಡುವುದು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ. ಈ ಘಟನೆಯೇ ಅಂತ್ಯ ಆಗಬೇಕು ಅಂತಹ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು. ನನಗೆ ಯಾವುದೇ ಸಂಬಂಧ ಇಲ್ಲದ ಘಟನೆ ಇದು ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ. ಇದರ ಹಿಂದೆ ಯಾರು ಯಾರು ಫೋನ್ ಸಂಪರ್ಕ (Phone Contact) ಮಾಡಿದ್ದಾರೆ ಅಂತವರನ್ನು ಮಟ್ಟ ಹಾಕಬೇಕು ಎಂದು ತಿಳಿಸಿದರು.

    ಆಡೀಯೋದಲ್ಲೇನಿದೆ..?: ಚೈತ್ರಾ ಕುಂದಾಪುರ ಹಾಗೂ ಪ್ರಸಾದ್ ಬೈಂದೂರು (Prasad Baindoor) ನಡುವಿನ ಡೀಲ್ ಮಾತುಕತೆಯಲ್ಲಿ ಮಾಜಿ ಸಚಿವ ಸುನೀಲ್ ಹೆಸರು ಪ್ರಸ್ತಾಪ ಮಾಡಲಾಗಿದೆ. ಹಣ ಜಸ್ಟ್ ಕೊಟ್ಟು ಬಂದೆ ಎಂದು ಪ್ರಸಾದ್ ಹೇಳಿದಾಗ ಸುನೀಲ್ ಕುಮಾರ್ ಮನೆಗೆ ಹಣ ತೆಗೆದುಕೊಂಡು ಹೋಗಿರಬಹುದು ಅಂತ ಚೈತ್ರಾ ಕುಂದಾಪುರ ಹೇಳುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉದ್ಯಮಿಗೆ ವಂಚನೆ ಪ್ರಕರಣ – ಹಾಲಶ್ರೀ ಬಂಧನಕ್ಕೆ ಬಲೆ ಬೀಸಿದ ಸಿಸಿಬಿ

    ಉದ್ಯಮಿಗೆ ವಂಚನೆ ಪ್ರಕರಣ – ಹಾಲಶ್ರೀ ಬಂಧನಕ್ಕೆ ಬಲೆ ಬೀಸಿದ ಸಿಸಿಬಿ

    ಬಳ್ಳಾರಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯನ್ನು ಸಿಸಿಬಿ (CCB) ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಹಾಲಶ್ರೀ ಸ್ವಾಮೀಜಿಗಾಗಿ (Abhinava Halashree) ಶೋಧ ಕಾರ್ಯ ಆರಂಭಗೊಂಡಿದೆ.

    ಸ್ವಾಮೀಜಿಯ ಮನೆ ಹಾಗೂ ಹಿರೇಹಡಗಲಿಯ ಮಠದಲ್ಲಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಹಾಲಶ್ರೀ ಮನೆ ಮತ್ತು ಮಠದ ಸಿಸಿಟಿವಿ ಡಿವಿಆರ್‌ನ್ನು ಸಿಸಿಬಿ ವಶಕ್ಕೆ ಪಡೆದಿದೆ. ಇಷ್ಟೇ ಅಲ್ಲದೇ ಆರೋಪಿಯ ಸಂಬಂಧಿಕರ ಮನೆಗಳಲ್ಲೂ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಹರಪನಹಳ್ಳಿ ಹಾಗೂ ದಾವಣಗೆರೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಹಲವು ಕಡೆ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ನಾನು ಓದಿದ್ದು 7ನೇ ಕ್ಲಾಸ್‌ – ಮೋಸಹೋದ ಕಥೆಯನ್ನು ವಿನಯ್‌ ಗುರೂಜಿಗೆ ಪತ್ರದಲ್ಲಿ ವಿವರಿಸಿದ್ದ ಗೋವಿಂದ ಪೂಜಾರಿ

    ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಶ್ರೀ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ಯಾವುದೇ ಸುಳಿವಿಲ್ಲದಂತೆ ತಲೆಮರೆಸಿಕೊಂಡಿದ್ದಾರೆ. ಸ್ವಾಮೀಜಿ ವಿಚಾರವಾಗಿ ಈಗಾಗಲೇ ಬಂಧನವಾಗಿರುವ ಎ1 ಆರೋಪಿ ಚೈತ್ರಾ ಕುಂದಾಪುರ (Chaitra Kundapura) ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತರುವಾಗ, ಸ್ವಾಮೀಜಿ ಬಂಧನವಾದ ಬಳಿಕ ದೊಡ್ಡವರ ಹೆಸರು ಹೊರ ಬರಲಿದೆ ಎಂದು ಹೇಳಿದ್ದಳು. ಈ ಹೇಳಿಕೆ ಪ್ರಕರಣದಲ್ಲಿ ಸಂಚಲನವನ್ನೂ ಮೂಡಿಸಿತ್ತು.

    ಕಳೆದ ಆಗಸ್ಟ್‌ನಲ್ಲಿ ಸ್ವಾಮೀಜಿ ಸಹ ದೂರು ನೀಡಿದ್ದು, ಗೋವಿಂದ ಬಾಬು ಅವರನ್ನು ಬೇಟಿಯಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಪ್ರಕರಣದ ಪ್ರಮುಖ ಹಾಗೂ ಮೂರನೇ ಆರೋಪಿ ಎನಿಸಿಕೊಂಡ ಅವರು ತಲೆ ಮರೆಸಿಕೊಂಡಿರುವುದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಸ್ವಾಮೀಜಿ ಬಂಧನದ ಬಳಿಕವಷ್ಟೇ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಓದಿದ್ದು 7ನೇ ಕ್ಲಾಸ್‌ – ಮೋಸಹೋದ ಕಥೆಯನ್ನು ವಿನಯ್‌ ಗುರೂಜಿಗೆ ಪತ್ರದಲ್ಲಿ ವಿವರಿಸಿದ್ದ ಗೋವಿಂದ ಪೂಜಾರಿ

    ನಾನು ಓದಿದ್ದು 7ನೇ ಕ್ಲಾಸ್‌ – ಮೋಸಹೋದ ಕಥೆಯನ್ನು ವಿನಯ್‌ ಗುರೂಜಿಗೆ ಪತ್ರದಲ್ಲಿ ವಿವರಿಸಿದ್ದ ಗೋವಿಂದ ಪೂಜಾರಿ

    ಉಡುಪಿ: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಕಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರ (CCB Police) ತನಿಖೆ ನಡೆಸುತ್ತಿದ್ದಾರೆ. ಚೈತ್ರಾ ಕುಂದಾಪುರ (Chaitra Kundapura) ಮತ್ತು ಏಳು ಜನ ಸಹಚರರು ಪೊಲೀಸರ ವಶದಲ್ಲಿದ್ದಾರೆ. ಈ ನಡುವೆ ಮೋಸಕ್ಕೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Poojari) ಅವಧೂತ ವಿನಯ ಗುರೂಜಿಯವರಿಗೆ (Vinay Guruji) ಪತ್ರ ಬರೆದು ಆಗಿರುವ ವೃತ್ತಾಂತವನ್ನೆಲ್ಲ ವಿವರಿಸಿದ್ದಾರೆ.

    ಐದೂವರೆ ಕೋಟಿ ರೂಪಾಯಿ ಕಳೆದುಕೊಂಡ ನಂತರ ಮನನೊಂದು ಗೋವಿಂದ ಪೂಜಾರಿ ಅವಧೂತ ವಿನಯ್ ಗುರೂಜಿಗೆ ಪತ್ರ ಬರೆದಿದ್ದರು. ಗೋವಿಂದ ಬಾಬು ಪೂಜಾರಿ ಬರೆದ ಪತ್ರದ ಸಾರಾಂಶ ಇಲ್ಲಿದೆ. ಇದನ್ನೂ ಓದಿ: ಮುಂದಿನ ವರ್ಷ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಬಿಡುಗಡೆ

    ಕಷ್ಟಕರ ಪರಿಸ್ಥಿತಿಯಲ್ಲಿ ನಾನು ಏಳನೇ ತರಗತಿ ವಿದ್ಯಾಭ್ಯಾಸ ಮಾಡಿ ಮುಂಬೈಗೆ ಹೋದೆ. ಮುಂಬೈ ಹೋಟೆಲುಗಳಲ್ಲಿ ಪ್ಲೇಟ್ ತೊಳೆದು ಜೀವನವನ್ನು ರೂಪಿಸಿದ್ದೇನೆ. ಕೆಲಸ ಮಾಡುತ್ತಾ ಮಾಡುತ್ತಾ ಫೈವ್ ಸ್ಟಾರ್ ಹೋಟೆಲ್ ಗೆ ಸೇರಿಕೊಂಡೆ.

    ಐದು ಜನರಿಂದ ಒಂದು ಉದ್ಯಮವನ್ನು ನಾನು ಆರಂಭ ಮಾಡಿದೆ. ತಮಿಳುನಾಡು ಗುಜರಾತ್ ಆಂಧ್ರದಲ್ಲಿ ಮನೆ ಕಂಪನಿಗೆ ಫುಡ್ ಸರ್ವಿಸ್ ಶುರು ಮಾಡಿದೆ. ಲಾಭದಲ್ಲಿ ವೃದ್ಧಾಶ್ರಮ ಅನಾಥಾಶ್ರಮ ಕೋವಿಡ್ ಸಂದರ್ಭ ಶಿಕ್ಷಣಕ್ಕೆ ಸಹಾಯ ಮಾಡಿದೆ. ನನ್ನ ಜೀವನದಲ್ಲಿ ಈವರೆಗೆ 15 ರಿಂದ 20 ಸಾವಿರ ಮನೆ/ ಜನಗಳಿಗೆ ಸಹಾಯ ಮಾಡಿದ್ದೇನೆ. ಹಿರಿಯರ ಮಾರ್ಗದರ್ಶನದಂತೆ ನಾನು ಆರ್‌ಎಸ್‌ಎಸ್‌ನ ಐಟಿಸಿ ಕೋರ್ಸ್ ಅನ್ನು ಮುಗಿಸಿದೆ. ಊರಿನವರ ಆಪ್ತರ ಹಿತೈಷಿಗಳ ಮಾರ್ಗದರ್ಶನದಂತೆ ಬಿಜೆಪಿ ಸೇರ್ಪಡೆಯಾದೆ.

     

    ಕಳೆದ ಆರು ವರ್ಷಗಳಿಂದ ನಾನು ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದ್ದೇನೆ. ನನ್ನ ಜೊತೆ ಕೆಲಸ ಮಾಡುತ್ತಿದ್ದ ಪ್ರಸಾದ್ ಬೈಂದೂರು ಚೈತ್ರಾಳನ್ನು ಮೊದಲು ಪರಿಚಯ ಮಾಡಿದ್ದಾನೆ. ಚೈತ್ರಾ ನಂತರ ಗಗನ್ ಕಡೂರು ಪರಿಚಯ ಮಾಡಿಸಿದಳು. ಬಿಜೆಪಿ ಮತ್ತು ಆರ್‌ ಎಸ್ ಎಸ್ ಎಂದು ವಿಶ್ವನಾಥ್ ಜಿ, ಅಭಿನವ ಸ್ವಾಮೀಜಿ , ನಾಯ್ಕ್ ಒಬ್ಬೊಬ್ಬರಾಗಿ ಪರಿಚಯಿಸಿದರು. ಆಮೇಲೆ ಚಿಕ್ಕಮಗಳೂರು ಬೆಂಗಳೂರು, ಮಂಗಳೂರಿನಲ್ಲಿ ಅಂತ ಹಂತವಾಗಿ 5.50ಕೋಟಿ ಪಡೆದರು. ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

    ಹರಿದ 10 ರೂ. ನೋಟು ಮೂಲಕ ಹಣ ವರ್ಗಾವಣೆಯಾಗಿದೆ. ಅರ್ಧ ಅರ್ಧ ನೋಟಿನ ಕೋಡ್ ವಾರ್ಡ್ ಮೂಲಕ ನಾವು ಹಣ ಹಸ್ತಾಂತರ ಮಾಡಿದ್ದೇವೆ. ನನ್ನ ಆಸ್ತಿಯನ್ನು ಅಡ ಇಟ್ಟು ಒಮ್ಮೆ ಮೂರು ಕೋಟಿ ಸಾಲ ಪಡೆದಿದ್ದೇನೆ. ಇನ್ನೆರಡು ಕೋಟಿ ಬೇಕು ಎಂದು ಚೈತ್ರ ಗ್ಯಾಂಗ್ ಬೇಡಿಕೆ ಇಟ್ಟಿದ್ದು, ಮತ್ತೆ ಖಾಸಗಿ ಫೈನಾನ್ಸ್ ನಿಂದ 2 ಕೋಟಿ ಸಾಲ ಪಡೆದುಕೊಂಡೆ ಎಂದು ವಿವರಿಸಿದ್ದಾರೆ.

    ಅವಧೂತ ಗುರೂಜಿಗೆ ಗೋವಿಂದ ಬಾಬು ಪೂಜಾರಿ ಪತ್ರದ ಕೊನೆಗೆ ವಿನಂತಿ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷ, ಆರ್‌ಎಸ್‌ಎಸ್‌ ಸಂಘ ಎಂದು ಹೇಳಿ ನನಗೆ ಮೋಸ ಮಾಡಿದರು. ರಾಜಕೀಯದ ಆಮೀಷ ತೋರಿಸಿ ನನ್ನನ್ನು ಹಳ್ಳಕ್ಕೆ ತಳ್ಳಿದರು. ಹಿರಿಯರಾದ ತಾವು ನನಗೆ ದಾರಿ ತೋರಿಸಬೇಕು. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ. ನನಗೆ ನ್ಯಾಯ ಒದಗಿಸಲು ಸಹಕಾರ ಮಾಡಿ ಎಂದು ಹೇಳುವ ಮೂಲಕ ಪತ್ರ ಕೊನೆಗೊಳಿಸಿದ್ದಾರೆ. ಅದರ ಜೊತೆ ಎರಡು ವಾಯ್ಸ್ ನೋಟ್ ಗಳು ಲಭ್ಯವಾಗಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

    ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟಿ ಕೋಟಿ ವಂಚಿಸಿರುವ (Fraud Case) ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್ ವಿರುದ್ಧದ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿಗಳು ಪ್ರಕರಣ ನಡೆದ ಸ್ಥಳಗಳ ಮಹಜರು ನಡೆಸಿದ್ದಾರೆ.

    ಈಗಾಗಲೇ ಮಂಗಳೂರಿಗೆ (Mangaluru) ತೆರಳಿರುವ ಅಧಿಕಾರಿಗಳು ಮೂರು ಸ್ಥಳಗಳಲ್ಲಿ ಮಹಜರು ನಡೆಸಲಿದ್ದಾರೆ. ಉದ್ಯಮಿಯನ್ನು ಭೇಟಿಯಾದ ಜಾಗ, ಮಾತುಕತೆ ನಡೆದ ಜಾಗ ಹಾಗೂ ಹಣ ಪಡೆದ ಜಾಗಗಳ ಮಹಜರು ನಡೆಯಲಿದೆ. ಈಗಾಗಲೇ ವಂಚಕರ ಗ್ಯಾಂಗ್ ಉದ್ಯಮಿಯನ್ನು ಭೇಟಿಯಾದ ಬೆಂಗಳೂರಿನ ನಾರಾಯಣ ಗುರು ಕೋ ಅಪರೇಟಿವ್ ಬ್ಯಾಂಕ್, ಗೋವಿಂದ ಬಾಬು ಕಚೇರಿ ಹಾಗೂ ಕುಮಾರ ಕೃಪಾದಲ್ಲಿ ಸಿಸಿಬಿ ಪೊಲೀಸರು ಮಹಜರು ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಒಂದಷ್ಟು ದಾಖಲೆಗಳ ಮಾಹಿತಿಯನ್ನು ಸಿಸಿಬಿ ಪೊಲೀಸರು (CCB) ಕಲೆಹಾಕಿದ್ದರು. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ಮಾದರಿಯಲ್ಲೇ ಮತ್ತೊಂದು ಪ್ರಕರಣ – ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ

    ಕುಮಾರ ಕೃಪಾದಲ್ಲಿ ಆರೋಪಿಗಳು ಚೆನ್ನನಾಯ್ಕ್ ಹೆಸರಲ್ಲಿ ನಕಲಿ ಪಾತ್ರಧಾರಿಯನ್ನು ಸೃಷ್ಟಿಸಿ ನಾಟಕವಾಡಿದ್ದರು. ಈ ವೇಳೆ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಬಂದಿದ್ದಾರೆ ಎಂದು ಕತೆ ಹೆಣೆದಿದ್ದರು. ಈಗ ತನಿಖೆ ಚುರುಕುಗೊಂಡಿದ್ದು ಮತ್ತಷ್ಟು ಮಹತ್ವದ ಮಾಹಿತಿಗಳು ಸಂಗ್ರಹದ ಬಳಿಕ ಪ್ರಕರಣದ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿವೆ.

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಗೆಳೆಯ ಶ್ರೀಕಾಂತ್ ವಿರುದ್ಧ ಮತ್ತೊಂದು ಸೆಕ್ಷನ್ ದಾಖಲಾಗಿದೆ. ಬಂಡೆಪಾಳ್ಯ ಠಾಣೆಯಲ್ಲಿ ಸಿಸಿಬಿ ಪೊಲೀಸರು ಐಪಿಸಿ ಸೆಕ್ಷನ್ 201ನ್ನು ಹೊಸದಾಗಿ ಸೇರಿಸಿದ್ದಾರೆ. ಸಿಸಿಬಿ ತನಿಖೆ ವೇಳೆ ಚೈತ್ರಾ ಹಾಗೂ ಗೆಳೆಯ ಆರೋಪಿ ಶ್ರೀಕಾಂತ್ ಕಳ್ಳಾಟ ಬಯಲಾಗಿದ್ದು, ಶ್ರೀಕಾಂತ್ ಮೊಬೈಲ್ ಸಂಪೂರ್ಣ ನಾಶ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಚೈತ್ರಾ ಗೆಳೆಯ ಶ್ರೀಕಾಂತ್‌ ವಿರುದ್ಧದ ಕೇಸ್‌ಗೆ ಮತ್ತೊಂದು ಸೆಕ್ಷನ್‌ ದಾಖಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಗೆಳೆಯ ಶ್ರೀಕಾಂತ್‌ ವಿರುದ್ಧದ ಕೇಸ್‌ಗೆ ಮತ್ತೊಂದು ಸೆಕ್ಷನ್‌ ದಾಖಲು

    ಚೈತ್ರಾ ಗೆಳೆಯ ಶ್ರೀಕಾಂತ್‌ ವಿರುದ್ಧದ ಕೇಸ್‌ಗೆ ಮತ್ತೊಂದು ಸೆಕ್ಷನ್‌ ದಾಖಲು

    ಬೆಂಗಳೂರು: ಬಿಜೆಪಿ ಟಿಕೆಟ್‌ ನೀಡುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚನೆ ಎಸಗಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ (Chaitra Kundapura) ಗೆಳೆಯ ಶ್ರೀಕಾಂತ್ ವಿರುದ್ಧ ಮತ್ತೊಂದು  ಸೆಕ್ಷನ್‌ ದಾಖಲು ಮಾಡಲಾಗಿದೆ.

    ಬಂಡೆಪಾಳ್ಯ ಠಾಣೆಯಲ್ಲಿ ಸಿಸಿಬಿ ಪೊಲೀಸರು ಐಪಿಸಿ ಸೆಕ್ಷನ್ 201 ಹೊಸದಾಗಿ ಸೇರ್ಪಡೆ ಮಾಡಿದ್ದಾರೆ. ಸಿಸಿಬಿ ತನಿಖೆ ವೇಳೆ ಚೈತ್ರಾ ಹಾಗೂ ಗೆಳೆಯ ಆರೋಪಿ ಶ್ರೀಕಾಂತ್ (Shrikanth) ಕಳ್ಳಾಟ ಬಯಲಾಗಿದ್ದು, ಶ್ರೀಕಾಂತ್ ಮೊಬೈಲ್ ಸಂಪೂರ್ಣ ನಾಶ ಮಾಡಲಾಗಿದೆ.  ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೊರಟ ಜನ- ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್

     

    ಆರೋಪಿಗಳ ಇಬ್ಬರ ಮೊಬೈಲ್ ಪೋನ್ ತಡಕಾಡಿದ ಸಿಸಿಬಿಗೆ ಮೊಬೈಲ್‌ನಲ್ಲಿರುವ ದತ್ತಾಂಶ ನಾಶವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹಾಗಾಗಿ ಆರೋಪಿಗಳ ವಿರುದ್ಧ ಸಾಕ್ಷಿ ನಾಶ ಆರೋಪದ ಮೇಲೆ ಮತ್ತೊಂದು ಸೆಕ್ಷನ್ ಸೇರಿಸಲಾಗಿದೆ.

    ವಂಚನೆ ಪ್ರಕರಣ ಸಂಬಂಧ ಎಫ್‌ಐಆರ್ ಆಗುತ್ತಿದ್ದಂತೆ ಶ್ರೀಕಾಂತ್ ಹಾಗೂ ಚೈತ್ರಾ ನಡುವೆ ನಡೆದಿರುವ ಸಂಭಾಷಣೆಗಳನ್ನು ನಾಶ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಮಲಾ ಸೀತಾರಾಮನ್ ಹೊಗಳಿಕೆಯನ್ನೇ ತಮ್ಮ ಮೈಲೇಜ್‍ಗೆ ಬಳಸಿಕೊಂಡ್ರಾ ಚೈತ್ರಾ?

    ನಿರ್ಮಲಾ ಸೀತಾರಾಮನ್ ಹೊಗಳಿಕೆಯನ್ನೇ ತಮ್ಮ ಮೈಲೇಜ್‍ಗೆ ಬಳಸಿಕೊಂಡ್ರಾ ಚೈತ್ರಾ?

    ಉಡುಪಿ/ಬೆಂಗಳೂರು: 2018ರಲ್ಲಿ ಕಾಂಗ್ರೆಸ್ (Congress) ಕರೆ ನೀಡಿದ್ದ ಭಾರತ್ ಬಂದ್ (Bharat Bandh) ವಿರೋಧಿಸಿ ಚೈತ್ರಾ ಕುಂದಾಪುರ (Chaitra Kundapura) ಭಾರೀ ಸದ್ದು ಮಾಡಿದ್ರು. ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಗಮನ ಸೆಳೆದಿತ್ತು.

    ಡೇರಿಂಗ್ ಗರ್ಲ್ ಎಂದು ಟ್ವೀಟಿಸಿ ಬೆನ್ನುತಟ್ಟಿದ್ರು. ಇದನ್ನೇ ಚೈತ್ರಾ ತಮ್ಮ ಮೈಲೇಜ್‍ಗೆ ಬಳಸಿಕೊಂಡಿದ್ರು. ತಮಗೆ ಕೇಂದ್ರದ ಲಿಂಕ್ ಇದೆ ಎಂದು ಬಿಂಬಿಸಿಕೊಂಡಿದ್ರು. ಮುಂದೆ ನಾನೇ ಬೈಂದೂರು ಎಂಎಲ್‍ಎ ಆಗ್ತೀನಿ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಆಗ್ತೀನಿ ಎಂದು ಹೇಳ್ಕೊಂಡು ಓಡಾಡ್ತಿದ್ರು.

    ಗೋವಿಂದ ಪೂಜಾರಿಗೂ ಇದೇ ಕತೆಯನ್ನು ಹೇಳಿ ಚೈತ್ರಾ ವಂಚಿಸಿದ್ರು ಎಂಬ ವಿಚಾರ ಬಯಲಾಗಿದೆ. ಈ ವಂಚನೆ ಪುರಾಣ ಬಯಲಾದ ಬೆನ್ನಲ್ಲೇ ಆರೋಪಿ ಚೈತ್ರಾರಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳತೊಡಗಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ. ಇದನ್ನೂ ಓದಿ: EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    ಬಿಜೆಪಿಯಲ್ಲಿ ಟಿಕೆಟ್ ಸೇಲ್‍ಗಿಲ್ಲ ಎನ್ನುವುದು ಇದ್ರಿಂದ ಗೊತ್ತಾಗ್ತಿದೆ ಎಂದು ಸಿಟಿ ರವಿ ಹೇಳ್ಕೊಂಡಿದ್ದಾರೆ. ನಮ್ಮ ಪಕ್ಷದ ಒಳಗೆ ಇದಕ್ಕೆಲ್ಲ ಅವಕಾಶ ಇಲ್ಲ ಎಂದು ಅಶ್ವಥ್‍ನಾರಾಯಣ್ ಹೇಳಿಕೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]