Tag: Chaitra Kundapur

  • ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಹಾಲಶ್ರೀ ಮಠದಲ್ಲಿ ಮಹಜರು

    ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಹಾಲಶ್ರೀ ಮಠದಲ್ಲಿ ಮಹಜರು

    ವಿಜಯನಗರ: ರಾಜ್ಯದಲ್ಲಿ ಚೈತ್ರಾ ಕುಂದಾಪುರ (Chaitra Kundapur) 5 ಕೋಟಿ ರೂ. ವಂಚನೆ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ. ಪ್ರಕರಣದ ಎ3 ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು (Halashree Swamiji) ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು (CCB Police) ಬುಧವಾರ ರಾತ್ರಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಗಡಗಲಿ ಮಠದಲ್ಲಿ ಮಹಜರು ನಡೆಸಿದ್ದಾರೆ.

    ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಹಾಸಂಸ್ಥಾನ ಮಠದಲ್ಲಿ 2 ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದರು. ಮಠಕ್ಕೆ ಎಂಟ್ರಿಯಾಗುತ್ತಿದ್ದಂತೆ ತೆಂಗಿನಕಾಯಿ ಒಡೆದು ಸ್ವಾಗತ ಮಾಡಿದರು. ಮಠದ ಒಳಗೆ ಹೋಗುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮೀಜಿಯನ್ನೊಬ್ಬರನ್ನೇ ರೂಂ ನೊಳಗೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.

    ಹಾಲಶ್ರೀ ಇರುತ್ತಿದ್ದ ರೂಂನೊಳಗೆ ಸಿಸಿಬಿ ಪೊಲೀಸರು ಕುಟುಂಬಸ್ಥರನ್ನು ಒಳಗಡೆ ಬಿಡದೆ ಹಾಲಶ್ರೀ ಜೊತೆಗೆ ಮಹಜರು ನಡೆಸಿದರು. ಹಾಲಶ್ರೀ ಜೊತೆಗೆ ಕುಟುಂಬಸ್ಥರು ಮಾತನಾಡಲು ಅವಕಾಶ ಕೇಳಿದರು. ಒಳಗಡೆ ಅವಕಾಶ ಇಲ್ಲ, ಹೊರಗಡೆ ಬಂದಾಗಲೇ ಮಾತನಾಡಲು ಹೇಳಿದರು. ಆದರೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಹಾಲಶ್ರೀ ಮುಜುಗರಗೊಂಡು, ಕುಟುಂಬಸ್ಥರು ಏನೇ ಕೇಳಿದರೂ ಉತ್ತರಿಸಲಿಲ್ಲ. ಇದನ್ನೂ ಓದಿ: ಬಟ್ಟೆ ಅಂಗಡಿ ಹೆಸ್ರಲ್ಲಿ ವಂಚನೆ ಆರೋಪ- ಚೈತ್ರಾ ವಿಚಾರಣೆಗೆ ಒಪ್ಪಿಸುವಂತೆ ಕೋಟ ಪೊಲೀಸರ ಮನವಿ

    ಊಟ ಮಾಡಿ ಹೋಗಿ ಎಂದು ಮನವಿ ಮಾಡಿದಾಗ, ಇಲ್ಲ ಅವರ ಊಟ ಆಗಿದೆ. ನಾವು ಯಾರೂ ಊಟ ಮಾಡಲ್ಲ ನಮ್ಮ ಊಟ ಆಗಿದೆ ಎಂದು ಹೇಳಿ ಹಾಲಶ್ರೀ ಯನ್ನು ಮಹಜರು ಮಾಡಿ ಕರೆದುಕೊಂಡು ಹೋದರು. ಮಹಜರು ವೇಳೆ ಏನೆಲ್ಲಾ ಮಾಡಿದರು ಎಂಬುವುದರ ಬಗ್ಗೆ ಕುಟುಂಬಸ್ಥರಿಗೆ ಸುಳಿವು ಸಹ ಸಿಸಿಬಿ ಪೊಲೀಸರು ಬಿಟ್ಟುಕೊಟ್ಟಿಲ್ಲ. ಪತ್ನಿ, ತಂದೆ ಹಾಗೂ ಚಿಕ್ಕಪ್ಪಂದಿರು ಏನೇ ಕೇಳಿದರೂ, ಹಾಲಶ್ರೀ ಉತ್ತರಿಸದೆ ಕೈ ಸನ್ನೆ ಮಾಡಿದರೆ ಹೊರತು, ಮಾತನಾಡಿಲ್ಲ. ಹಾಕಿಕೊಂಡಿದ್ದ ಮಾಸ್ಕ್ ಸಹ ಕುಟುಂಬಸ್ಥರ ಮುಂದೆ ತೆಗೆಯದೆ ಹಾಗೆಯೇ ಸಿಸಿಬಿ ಪೊಲೀಸರ ಜೊತೆಗೆ ತೆರಳಿದರು. ಇದನ್ನೂ ಓದಿ: ಮಗಳ ಅಪಹರಣ ಕೇಸನ್ನು ಹಿಂಪಡೆಯುವಂತೆ ಹಲ್ಲೆಗೈದು ಮಹಿಳೆಗೆ ಒತ್ತಡ ಹೇರಿದ ಪೊಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ – ಬಂಧನಕ್ಕೆ ತೆರಳಿದ ಸಿಸಿಬಿ ಟೀಂ

    ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ – ಬಂಧನಕ್ಕೆ ತೆರಳಿದ ಸಿಸಿಬಿ ಟೀಂ

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚಿಸಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ (Chaitra Kundapur) ಗ್ಯಾಂಗ್‍ನ ತಲೆಮರೆಸಿಕೊಂಡಿರುವ ಆರೋಪಿ ಅಭಿನವ ಹಾಲಶ್ರೀ (Halashree) ಬಂಧನಕ್ಕೆ ಸಿಸಿಬಿ ತೀವ್ರ ಹುಡುಕಾಟ ಆರಂಭಿಸಿದೆ. ಆರೋಪಿ ಹೈದರಾಬಾದ್‍ನಲ್ಲಿ (Hyderabad) ಅಡಗಿರುವ ಶಂಕೆ ಇದ್ದು ಬಂಧನಕ್ಕೆ ಸಿಸಿಬಿ (CCB) ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ.

    ತಲೆಮರೆಸಿಕೊಂಡಿರುವ ಹಾಲಶ್ರೀ ಪ್ರಕರಣದ ಮೂರನೇ ಆರೋಪಿ ಆಗಿದ್ದು, ಚೈತ್ರಾ ಬಂಧನದ ಬಳಿಕ ಯಾವುದೇ ಸುಳಿವಿಲ್ಲದಂತೆ ನಾಪತ್ತೆಯಾಗಿದ್ದರು. ಪ್ರಕರಣದಲ್ಲಿ ಸ್ವಾಮೀಜಿಯ ಕಾರು ಚಾಲಕ ನಿಂಗರಾಜ್‍ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಹಾಲಶ್ರೀ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿ ಅಡಗಿರುವ ಸುಳಿವಿಗಾಗಿ ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    ಇನ್ನೂ ಸ್ವಾಮೀಜಿ ಮೈಸೂರಿನಲ್ಲಿ ಕಾರು ಬಿಟ್ಟು ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಕಾರಿನ ನಂಬರ್ ಪ್ಲೇಟ್ ತೆಗೆದು ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಸ್ವಾಮೀಜಿಗಳ ಬಳಿ ನಾಲ್ಕು ಸಿಮ್‍ಗಳಿವೆ ಎನ್ನಲಾಗಿದೆ.

    ಸ್ವಾಮೀಜಿ ಆಗಾಗ ಸ್ಥಳ ಬದಲಾಯಿಸುತ್ತಿದ್ದು ಬಂಧನಕ್ಕೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ ಪ್ರಕರಣದ ಶ್ರೀಕಾಂತ್ ಮನೆ ಜಾಲಾಡಿದ ಸಿಸಿಬಿ- ಬಾಕ್ಸ್‌ನಲ್ಲಿಟ್ಟಿದ್ದ 41 ಲಕ್ಷ ಪತ್ತೆ

    ಚೈತ್ರಾ ಕುಂದಾಪುರ ಪ್ರಕರಣದ ಶ್ರೀಕಾಂತ್ ಮನೆ ಜಾಲಾಡಿದ ಸಿಸಿಬಿ- ಬಾಕ್ಸ್‌ನಲ್ಲಿಟ್ಟಿದ್ದ 41 ಲಕ್ಷ ಪತ್ತೆ

    ಉಡುಪಿ: ಉದ್ಯಮಿಗೆ ಚೈತ್ರಾ ಕುಂದಾಪುರ (Chaitra Kundapur) ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ 7ನೇ ಆರೋಪಿ ಶ್ರೀಕಾಂತ್ (Srikanth Naik) ಮನೆಯನ್ನು ಸಿಸಿಬಿ ಪೊಲೀಸರು (CCB Police) ಜಾಲಾಡಿದ್ದಾರೆ. ಈ ವೇಳೆ ಪೊಲೀಸರಿಗೆ 41 ಲಕ್ಷ ರೂ. ನಗದು ದೊರೆತಿದೆ.

    ಗುಡ್ಡೆಯಂಗಡಿಯಲ್ಲಿರುವ (Guddeyangadi) ಶ್ರೀಕಾಂತ್ ಮನೆಯ ಬಾಕ್ಸ್‌ನಲ್ಲಿ ಇಟ್ಟಿದ್ದ 41 ಲಕ್ಷ ರೂ. ನಗದು ಪತ್ತೆಯಾಗಿದೆ. ಅದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸ ಮನೆಯ ಬಗ್ಗೆ ಶ್ರೀಕಾಂತ್ ನಾಯ್ಕ್‌ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಶ್ರೀಕಾಂತ್ 10 ಲಕ್ಷ ರೂ. ಕೊಟ್ಟು ಜಮೀನು ಖರೀದಿ ಮಾಡಿದ್ದು, ಸುಮಾರು 70 ಲಕ್ಷ ರೂ. ಮೊತ್ತದ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: 10 ಸಾವಿರಕ್ಕೂ ಕಷ್ಟಪಡ್ತಿದ್ದ ಚೈತ್ರಾ ಈಗ ಕೋಟ್ಯಧಿಪತಿ- 3 ಕೋಟಿ 6 ಭಾಗವಾಗಿ ಹಂಚಿದ್ದು ಹೇಗೆ?

    ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಚೈತ್ರಾ ಮತ್ತು 7 ಜನರ ಗ್ಯಾಂಗ್ ಬರೋಬ್ಬರಿ 5.50 ಕೋಟಿ ರೂ. ಪೀಕಿಸಿದೆ. ಟಿಕೆಟ್ ಸಿಗದೆ ಕಾಸು ಕಳೆದುಕೊಂಡ ಗೋವಿಂದ ಪೂಜಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚೈತ್ರಾ ಮತ್ತು ತಂಡ ಆ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ರ‍್ಯಾರಿಗೆ ಎಷ್ಟೆಷ್ಟು ಹಂಚಿದ್ದಾರೆ ಎಂದು ಇನ್ನಷ್ಟೇ ವಿಚಾರಗಳು ಬಹಿರಂಗ ಆಗಬೇಕಾಗಿದೆ. ಈ ನಡುವೆ ಚೈತ್ರಾಳ ಗೆಳೆಯ ಶ್ರೀಕಾಂತ್ ನಾಯಕ್ ಗುಡ್ಡೆಯಂಗಡಿಯಲ್ಲಿ ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಇದುವರೆಗೂ 3 ಕೋಟಿಯಷ್ಟು ಮೌಲ್ಯದ ನಗದು, ಚಿನ್ನ ಜಪ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಲ್ಲಾ ಪರೀಕ್ಷೆಗಳ ರಿಪೋರ್ಟ್ ನಾರ್ಮಲ್- ಚೈತ್ರಾ ಹೆಲ್ತ್ ಬುಲೆಟಿನ್ ರಿಪೋರ್ಟ್ ಇಲ್ಲಿದೆ

    ಎಲ್ಲಾ ಪರೀಕ್ಷೆಗಳ ರಿಪೋರ್ಟ್ ನಾರ್ಮಲ್- ಚೈತ್ರಾ ಹೆಲ್ತ್ ಬುಲೆಟಿನ್ ರಿಪೋರ್ಟ್ ಇಲ್ಲಿದೆ

    ಬೆಂಗಳೂರು: ಸಿಸಿಬಿ (CCB) ವಿಚಾರಣೆ ವೇಳೆ ಕುಸಿದು ಬಿದ್ದಿದ್ದ ಚೈತ್ರಾ ಕುಂದಾಪುರ (Chaitra Kundapur) ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಸ್ಪತ್ರೆ ಚೈತ್ರಾ ಅವರ ಹೆಲ್ತ್ ಬುಲೆಟಿನ್ ಅನ್ನು ಆಸ್ಪತ್ರೆ ವೈದ್ಯರು ಬಿಡುಗಡೆ ಮಾಡಿದ್ದಾರೆ.

    ಚೈತ್ರಾರ ಆರೋಗ್ಯ ಸ್ಥಿರವಾಗಿದೆ. ರಕ್ತದ ವರದಿ, ಇಸಿಜಿ ಸೇರಿ ಹಲವು ಪರೀಕ್ಷೆಗಳ ವರದಿ ನಾರ್ಮಲ್ ಆಗಿದೆ. ಬ್ರೈನ್ ಕೂಡ ನಾರ್ಮಲ್ ಆಗಿದೆ. ಟ್ರಾಮ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ ಐಸಿಯುನಲ್ಲಿ ಅವರನ್ನು ನಿಗಾದಲ್ಲಿಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

    ಸಿಸಿಬಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾಗ ಚೈತ್ರಾ ಟಾಯ್ಲೆಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ರಾತ್ರಿ ಹೊಟ್ಟೆ ತುಂಬಾ ಊಟ ಮಾಡಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಚೈತ್ರಾ ಮಲಗಿದ್ದರು. ಬೆಳಗ್ಗೆ ಎದ್ದು 1 ಗಂಟೆ ಯೋಗ, ಧ್ಯಾನ ಸಹ ಮಾಡಿದ್ದರು. ಯೋಗ ಮುಗಿದ ಬಳಿಕ ಸಿಸಿಬಿ ಕಚೇರಿಗೆ ಕರೆತರಲಾಗಿತ್ತು. ಇದನ್ನೂ ಓದಿ: EXCLUSIVE: ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ವಿಷ ಕುಡಿಯೋ ನಾಟಕವಾಡಿದ್ದ ಗಗನ್!

    ಟೆನ್ಷನ್ ಹೆಚ್ಚಾದಾಗ ಈ ಹಿಂದೆ ಕೂಡಾ ಪ್ರಜ್ಞೆ ಕಳೆದುಕೊಂಡು ಚೈತ್ರಾ ಬಿದ್ದಿದ್ದರು ಎನ್ನಲಾಗಿದೆ. ಭಾಷಣ ಮಾಡುವ ಸಂದರ್ಭದಲ್ಲಿ ಈ ಹಿಂದೆ ಸುಸ್ತಾಗಿ ಬಿದ್ದಿರೊ ಇತಿಹಾಸ ಇದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌ ಇಲ್ಲ: ಬಾಲಾಜಿ ಪೈ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಎನ್ನುವುದು ಚೈತ್ರಾ ಕುಂದಾಪುರ ಪ್ರಕರಣದಿಂದ ಸಾಬೀತಾಗಿದೆ: ಸಿಟಿ ರವಿ

    ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಎನ್ನುವುದು ಚೈತ್ರಾ ಕುಂದಾಪುರ ಪ್ರಕರಣದಿಂದ ಸಾಬೀತಾಗಿದೆ: ಸಿಟಿ ರವಿ

    ನವದೆಹಲಿ: ಬಿಜೆಪಿ (BJP) ಪಕ್ಷದಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಎನ್ನವುದು ಚೈತ್ರಾ ಕುಂದಾಪುರ (Chaitra Kundapur) ಪ್ರಕರಣದಲ್ಲಿ ಸಾಬೀತಾಗಿದೆ. ಸಮಯದ ದುರ್ಬಳಕೆ ಮಾಡಿಕೊಂಡು ಗೋವಿಂದ್ ಬಾಬು ಪೂಜಾರಿಗೆ ವಂಚಿಸುವ ಕೆಲಸ ಮಾಡಿದೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರ್ತಾರೆ ಎನ್ನುವುದು ಮರೆಯಬಾರದು ಎಂದು ಮಾಜಿ ಶಾಸಕ ಸಿಟಿ ರವಿ (CT Ravi) ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಣ ಕೊಟ್ಟು ಟಿಕೆಟ್ ಖರೀದಿ ಸಾಧ್ಯವಿಲ್ಲ. ಹಣದ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮುಂದೆ ಯಾರು ಮಾಡಬಾರದು. ಒಂದು ವೇಳೆ ಮಾಡಿದರೆ ಮತ್ತೊಬ್ಬ ಗೋವಿಂದ ಪೂಜಾರಿ ಆಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

    ಬಿಜೆಪಿ ದೊಡ್ಡ ಪಕ್ಷವಾಗಿದೆ. ಇಲ್ಲಿ ಎಲ್ಲ ತರದ ಜನರು ಇದ್ದಾರೆ. ಸಿದ್ಧಾಂತಕ್ಕಾಗಿ, ಸೇವೆಗಾಗಿ, ಜನಪ್ರತಿನಿಧಿಯಾಗಲು ಜನರು ಪಕ್ಷಕ್ಕೆ ಬರುತ್ತಾರೆ. ಕೆಲವರು ಸಮಯದ ದುರ್ಬಳಕೆ ಮಾಡಿಕೊಳ್ಳಲು ಪಕ್ಷಕ್ಕೆ ಬರುತ್ತಾರೆ. ಮೋಸ ಮಾಡಲೆಂದು ದೊಡ್ಡವರ ಹೆಸರು ಬಳಕೆ ಮಾಡಲಾಗುತ್ತದೆ. ಬಿಜೆಪಿ ಚುನಾವಣಾ ಸಮಿತಿಯಲ್ಲಿದ್ದವರಿಗೆ ತಮಗೆ ಬೇಕಾದ ಅಭ್ಯರ್ಥಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಒಮ್ಮತ ನಿರ್ಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ. ಹಣದ ಮೂಲಕ ಟಿಕೆಟ್ ಸಿಗುವ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ: ನಾವು ಯಾರು ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ: ಶೋಭಾ ಕರಂದ್ಲಾಜೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದಾರೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಹೀಗೆ ಎಲ್ಲ ಪ್ರಮುಖ ನಾಯಕರಿದ್ದಾರೆ. ಟಿಕೆಟ್‌ಗಾಗಿ ಅವರನ್ನು ಸಂಪರ್ಕಿಸಬೇಕು. ಕನಿಷ್ಠ ದುಡ್ಡು ಕೊಡುವ ಮುನ್ನವಾದರೂ ಗಮನಕ್ಕೆ ತರಬಹುದಿತ್ತು. ಯಾರಿಗೂ ಹೇಳದೇ ಹಣ ನೀಡುವ ಕೆಲಸ ಮಾಡಿದ್ದಾರೆ. ಬಿಜೆಪಿ ಕಾಲಲ್ಲಿ ಚಪ್ಪಲಿ ಹಾಕದವರಿಗೆ ಟಿಕೆಟ್ ನೀಡಿದೆ ಎನ್ನುವುದು ಯಾರು ಮರೆಯಬಾರದು ಎಂದರು.

    ಇಡೀ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿಲ್ಲ. ಘಟನೆಯ ಒಂದು ಭಾಗ ಚಿಕ್ಕಮಗಳೂರು ಅಷ್ಟೇ. ಇದು ಬೆಳಕಿಗೆ ಬರುವ ಮುನ್ನ ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: 8 ಎಕರೆ ಜಮೀನು ಖರೀದಿ, ಪೆಟ್ರೋಲ್ ಬಂಕ್ ನಿರ್ಮಾಣ – ಅಭಿನವ ಹಾಲಾಶ್ರೀ ಈಗ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾಗೆ ಮೂರ್ಛೆ ರೋಗ ಇಲ್ಲ: ಆಸೀಮಾ ಬಾನು

    ಚೈತ್ರಾಗೆ ಮೂರ್ಛೆ ರೋಗ ಇಲ್ಲ: ಆಸೀಮಾ ಬಾನು

    ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapur) ಮೂರ್ಛೆ ರೋಗ ಇಲ್ಲ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಪ್ರಾಂಶುಪಾಲೆ ಆಸೀಮಾ ಬಾನು ಹೇಳಿದ್ದಾರೆ.

    ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಟಿ ಸ್ಕ್ಯಾನ್, ಇಸಿಜಿ ಎಲ್ಲವೂ ನಾರ್ಮಲ್ ಅಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದರು.

    ಇಂದು ಬೆಳಗ್ಗೆ ಸಿಸಿಬಿ ಕಚೇರಿಯಿಂದ (CCB Office) ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಚೈತ್ರಾಳ ಬಾಯಲ್ಲಿ ನೊರೆ ಬರುತ್ತಿತ್ತು. ಹೀಗಾಗಿ ಮೂರ್ಛೆ ರೋಗ ಇದ್ದಿರಬಹುದು ಎಂಬ ಶಂಕೆ ಇತ್ತು. ಆದರೆ ಚೈತ್ರಾಳನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆಗೆ ಮೂರ್ಛೆ ರೋಗ ಇಲ್ಲ ಎಂದು ದೃಢಪಡಿಸಿದ್ದಾರೆ.  ಇದನ್ನೂ ಓದಿ: ಚೀನಾದ ರಕ್ಷಣಾ ಸಚಿವ ನಾಪತ್ತೆ

    ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಚೈತ್ರಾಳನ್ನು ಸಿಸಿಬಿ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದು ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ (CCB Office) ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಳು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಸಿದು ಬಿದ್ದ ಚೈತ್ರಾ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

    ಕುಸಿದು ಬಿದ್ದ ಚೈತ್ರಾ – ಎಮರ್ಜೆನ್ಸಿ ವಾರ್ಡ್‌ಗೆ ಶಿಫ್ಟ್‌

    ಬೆಂಗಳೂರು: ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ (Chaitra Kundapur) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ದಾಖಲಿಸಲಾಗಿದೆ.

    ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ (CCB Office) ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ.

    ವಿಚಾರಣೆ ವೇಳೆ ಮೂರ್ಛೆ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಇದನ್ನೂ ಓದಿ: ನಾನು ಹಣವನ್ನ ಲೋನ್ ಪಡೆದು ಕೊಟ್ಟಿದ್ದೇನೆ: ಗೋವಿಂದ ಬಾಬು ಪೂಜಾರಿ

    ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಚೈತ್ರಾ ಮೂರ್ಛೆ (Fits) ರೋಗದಿಂದ ಬಳಲುತ್ತಿದ್ದು, ವಿಚಾರಣೆ ವೇಳೆ ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಗುರಿ ಮಾಡಿ ಯಾರೋ ದುಡ್ಡು ತಿಂದಿದ್ದಾರೆ: ತಾಯಿ ರೋಹಿಣಿ

    ಚೈತ್ರಾ ಗುರಿ ಮಾಡಿ ಯಾರೋ ದುಡ್ಡು ತಿಂದಿದ್ದಾರೆ: ತಾಯಿ ರೋಹಿಣಿ

    ಉಡುಪಿ: ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ (Chaitra Kundapur) ಹಾಗೂ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಆದರೆ ಚೈತ್ರಾಳನ್ನು ಯಾರೋ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಅವಳನ್ನು ಗುರಿ ಮಾಡಿಕೊಂಡು ಯಾರೋ ದುಡ್ಡು ತಿಂದಿದ್ದಾರೆ ಎಂದು ಆಕೆಯ ತಾಯಿ ರೋಹಿಣಿ (Rohini) ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಅವರು, ಚೈತ್ರಾ ನಮ್ಮ ಜೊತೆ ಬಹಳ ಪ್ರೀತಿಯಿಂದ ಇದ್ದಳು. ಅವಳು ಮೊದಲಿನಿಂದಲೂ ಚುರುಕಿನ ಸ್ವಭಾವದವಳು. ಮೊನ್ನೆ ಫೋನ್ ಮಾಡಿ ನಮ್ಮ ಜೊತೆ ಮಾತಾಡಿದ್ದಳು. ನಮಗೆ ಧೈರ್ಯದಿಂದ ಇರುವಂತೆ ತಿಳಿಸಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

    ಚೈತ್ರಾಳನ್ನು ಗುರಿ ಮಾಡಿಕೊಂಡು ಯಾರೋ ದುಡ್ಡು ತಿಂದಿದ್ದಾರೆ. ಅವಳು ಯಾವ ಟೆನ್ಶನ್‌ನಲ್ಲಿ ಇದ್ದರೂ ನಮಗೆ ಹೇಳುವುದಿಲ್ಲ ಎಂದು ಚೈತ್ರಾ ತಾಯಿ ರೋಹಿಣಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

    ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

    ಮಂಗಳೂರು: ಆರೋಪಿ ಸ್ಥಾನದಲ್ಲಿರುವ ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಸಮಗ್ರ ತನಿಖೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

    ಮಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಆರೋಪಿ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಚೈತ್ರಾ ಕುಂದಾಪುರ ಕೇಸ್ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು. ಟಿಕೆಟ್ ಕೊಡಿಸ್ತೀವಿ ಅಂತ ಹಣ ಪಡೆದಿರೋದನ್ನ ನಾವು ಗಂಭೀರವಾಗಿ ಪರಿಗಣಿಸ್ತೇವೆ. ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಹಲವರು ಹೋರಾಟ ಮಾಡ್ತಾರೆ, ಹಾಗೆಂದ ಮಾತ್ರಕ್ಕೆ ಅದೆಲ್ಲವೂ ಪಕ್ಷಕ್ಕೆ ಸಂಬಂಧವಿರುತ್ತದೆ ಎಂದಲ್ಲ. ಈ ಪ್ರಕರಣದ ಸಂಪೂರ್ಣ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ವಿಚಾರದಲ್ಲಿ ಇನ್ನೂ ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ. ಸದ್ಯ ಪ್ರಾಥಮಿಕ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಹೈಕಮಾಂಡ್ ನಾಯಕರು ಚರ್ಚಿಸುತ್ತಾರೆ. ಮೈತ್ರಿ ಸಮಯದಲ್ಲಿ ನಮ್ಮೊಂದಿಗೂ ಚರ್ಚಿಸಿ ಅಭಿಪ್ರಾಯ ಕೈಗೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಂದಾಗಿ ಹೆಚ್ಚು ಸೀಟ್ ಪಡೆಯೋದು ನಮ್ಮ ಉದ್ದೇಶ. ಮಾನ್ಸೂನ್ ಪೂರ್ವದ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು, ಬರಗಾಲ ಘೋಷಣೆಯಲ್ಲೂ ವಿಳಂಬ ಮಾಡಿದ್ದಾರೆ. ಸರ್ಕಾರ ವರದಿ ಪಡೆಯುವಲ್ಲಿ ವಿಳಂಬ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈಗ ಮುಂಗಾರು ಹೋಗಿದೆ, ರೈತರಿಗೆ ಸಹಾಯ ಮಾಡಲು ಆಗಲ್ಲ. ಕನಿಷ್ಠ ಬೆಳೆ ನಷ್ಟ ಪರಿಹಾರವಾದ್ರೂ ಸರ್ಕಾರ ಕೊಡಬೇಕು. ನಮ್ಮ ಅವಧಿಯಲ್ಲಿ ಪ್ರವಾಹದ ಒಂದು ತಿಂಗಳಲ್ಲೇ ಪರಿಹಾರ ಕೊಟ್ಟಿದ್ದೇವೆ. ನಾವು ಕೇಂದ್ರದ ಮಾನದಂಡಕ್ಕೂ ಕಾಯಲಿಲ್ಲ, ಇವರು ಕೇಂದ್ರದ ಮಾನದಂಡ ಅಂತಿದ್ದಾರೆ. ಕಷ್ಟದಲ್ಲಿರೋ ಜನರಿಗೆ ಸಹಾಯ ಮಾಡುವ ಮನೋಭಾವ ಸರ್ಕಾರಕ್ಕೆ ಇಲ್ಲ. ಕುಂಟು ನೆಪ ಹೇಳಿಕೊಂಡು ಕಾಲ ದೂಡುತ್ತಿದೆ. ಸುಮಾರು 25 ಸಾವಿರ ಕೋಟಿ ಸಾಲದ ಬದಲು ರೈತರಿಗೆ 7 ಸಾವಿರ ಕೋಟಿ ಅಷ್ಟೇ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂಪರ ಕಾರ್ಯಕರ್ತರ ವಿರುದ್ಧ ಕೇಸ್‌ ಎಂಬ ಆರೋಪಕ್ಕೂ, ಚೈತ್ರಾ ಪ್ರಕರಣಕ್ಕೂ ಸಂಬಂಧ ಇಲ್ಲ: ಜಿ.ಪರಮೇಶ್ವರ್

    ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ನಾವು ಹೇಳಿಕೊಂಡು ಬಂದಿದ್ದೇವೆ. ತಮಿಳುನಾಡಿನ ಡ್ಯಾಂಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಆದರೂ ರಾಜ್ಯ ಸರ್ಕಾರ ನೀರು ಬಿಡ್ತಾ ಇತ್ತು. ಕಾನೂನಾತ್ಮಕವಾಗಿ ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಕಾವೇರಿ ಜಲಾನಯನ ರೈತರಿಗೆ, ಬೆಂಗಳೂರಿಗೆ ಕಷ್ಟ ಆಗಲಿದೆ. ಇವತ್ತು ಪರಿಹಾರ ಕಾನೂನಾತ್ಮಕ ಮತ್ತು ತಮಿಳುನಾಡನ್ನ ಒಪ್ಪಿಸೋದು. ಆದ್ರೆ ನಮ್ಮ ಸಿಎಂ ತಮಿಳುನಾಡಿನ ಸಿಎಂ ಸ್ಟಾಲಿನ್ ಜೊತೆಗೆ ಮಾತಾಡೋಕೆ ತಯಾರಿಲ್ಲ ಎಂದು ಹೇಳಿದ್ದಾರೆ.

    ಐಎನ್‌ಡಿಐಎ ಇಂಡಿಯಾ ಒಕ್ಕೂಟ ಅಂತಾ ಹೇಳ್ತಾರೆ, ಇವರು ನಮ್ಮ ನೀರಿನ ಹಕ್ಕಿನ ಬಗ್ಗೆ ಮಾತನಾಡಲ್ಲ. ಸದ್ಯ ನೀರು ಬಿಡಲ್ಲ ಅನ್ನೋ ತಮ್ಮ ನಿಲುವಿಗೆ ಅವರು ಗಟ್ಟಿಯಾಗಿ ನಿಲ್ಲಬೇಕು. ನಾವು ಈ ನಿಲುವಿನ ಬಗ್ಗೆ ಸರ್ಕಾರದ ಜೊತೆ ನಿಲ್ತೇವೆ, ಒಂದು ವೇಳೆ ನೀರು ಬಿಟ್ಟರೆ ನಾವು ಸರ್ಕಾರದ ವಿರುದ್ಧ ಹೋರಾಡ್ತೀವಿ ಎಂದು ಎಚ್ಚರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್

    – ಸಿಸಿಟಿವಿ ಫೂಟೇಜ್, ಫೋನ್ ಕಾಲ್ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿ ಇದೆ

    ಬೆಂಗಳೂರು: ಚೈತ್ರಾ (Chaitra Kundapur) ವಿರುದ್ಧ ಸಿಸಿಟಿವಿ ಪೂಟೇಜ್, ಫೋನ್ ಸಂಭಾಷಣೆ ಆಡಿಯೋ ರೆಕಾರ್ಡ್ ಎಲ್ಲಾ ಸಾಕ್ಷಿಗಳೂ ಇದೆ. ಪ್ರಕರಣ ಹೊರಗೆ ಬಂದರೆ ಸರಿಯಿರಲ್ಲ, ನನಗೆ ಅಂಡರ್ ವರ್ಲ್ಡ್ ಪರಿಚಯವಿದೆ ಎಂದು ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಕಚೇರಿಗೆ ಬಂದು ಸೂಸೈಡ್ ಮಾಡಿಕೊಳ್ಳೋ ಬೆದರಿಕೆ ಕೂಡಾ ಹಾಕಿದ್ರು ಎಂದು ದೂರುದಾರ ಗೋವಿಂದ ಬಾಬು ಪೂಜಾರಿ (Govinda Babu Poojari) ಆಪ್ತ ರಕ್ಷಿತ್ ಶೆಟ್ಟಿ (Rakshit Shetty) ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿರುವ ಅವರು, ಚೈತ್ರಾ ಬೆದರಿಕೆ ಹಾಕಿರೋದು, ಬ್ಲಾಕ್ ಮೇಲ್ ಮಾಡಿರೋದು, ತಪ್ಪೊಪ್ಪಿಗೆ ಮಾಡಿಕೊಂಡಿದ್ದು ಎಲ್ಲವೂ ಆಡಿಯೋ ರೆಕಾರ್ಡ್ ಹಾಗೂ ಸಿಸಿಟಿವಿ ದಾಖಲೆಗಳು ಇವೆ. ಚೈತ್ರಾ ಈ ವಿಚಾರದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರಕರಣ ಏನಾದ್ರೂ ಹೊರಗೆ ಬಂದರೆ ಸರಿಯಿರಲ್ಲ, ನಂಗೆ ಅಂಡರ್ ವರ್ಲ್ಡ್ ನಲ್ಲಿಯೂ ಪರಿಚಯ ಇದ್ದಾರೆ ಎಂದು ಆರಂಭದಲ್ಲಿ ಗೋವಿಂದ ಬಾಬು ಪೂಜಾರಿಗೆ ಬೆದರಿಕೆ ಹಾಕಿದ್ದರು. ಅದಾದ ಬಳಿಕ ಕಚೇರಿಗೆ ಬಂದು ಸೂಸೈಡ್ ಮಾಡ್ತೀನಿ ಅಂತ ಕಣ್ಣೀರು ಹಾಕಿದ್ರು ಎಂದು ತಿಳಿಸಿದ್ದಾರೆ.

    ಚೈತ್ರಾ ಹಾಗೂ ಗೋವಿಂದ ಬಾಬು ಪೂಜಾರಿ ಅವರ ನಡುವಿನ ಮಾತುಕತೆ, ಚೈತ್ರಾ ಆತ್ಮಹತ್ಯೆ ಬೆದರಿಕೆ ಎಲ್ಲವನ್ನು ನಾನು ಖುದ್ದು ಆಡಿಯೋ ಕೇಳಿಸಿಕೊಂಡಿದ್ದೇನೆ. ಅರ್ಧ ದುಡ್ಡು ಅಂದ್ರೆ 1 ಕೋಟಿ 70 ಲಕ್ಷ ರೂ. ವಾಪಸ್ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ದು ನಿಜ ಅಂತ ಕಚೇರಿಗೆ ಬಂದು ಕಣ್ಣೀರು ಹಾಕಿದ್ದರು. ಇದೆಲ್ಲದರ ಸಿಸಿ ಟಿವಿ ಫೂಟೇಜ್ ಆಡಿಯೋ ರೆಕಾರ್ಡ್ ಇದೆ. ಚೈತ್ರಾ ಬೇರೆಯವರಲ್ಲ. ಅದರೆ ಹಿಂದುತ್ವ, ಹಿಂದೂ ಎಂದು ಹೀಗೆಲ್ಲಾ ಯಾಮಾರಿಸ್ತಾರೆ ಎಂದರೆ ಖಂಡಿತಾ ತಪ್ಪು ಎಂದು ಹೇಳಿಕೆ ನೀಡಿದರು. ಈ ಬಗ್ಗೆ ರಕ್ಷಿತ್ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬೈಂದೂರು ರಾಜಕೀಯದಲ್ಲಿ ನಾವೊಂದಿಷ್ಟು ಜನ ಸಕ್ರಿಯರಾಗಿರುವುದರಿಂದ ನನಗೆ ಟಿಕೆಟ್‌ಗಾಗಿ ಹಣ ಪಡೆದ ಕೇಸ್‌ನ ಬಗ್ಗೆ ಒಂದಿಷ್ಟು ನಿಖರವಾದ ಮಾಹಿತಿ ಗೊತ್ತಿದೆ. ಇಷ್ಟೆಲ್ಲಾ ಮುಗಿದು ಪೋಲಿಸರ ಕಸ್ಟಡಿಯಲ್ಲಿರುವ ತಂಡ ಇನ್ನು ನಮ್ಮದೇನು ತಪ್ಪಿಲ್ಲ. ಇಂದಿರಾ ಕ್ಯಾಂಟೀನ್ ಹಣ ಬಾಕಿಯಿರುವುದರಿಂದ ಇದೆಲ್ಲಾ, ಸ್ವಾಮೀಜಿ ಸಿಗಲಿ ಗೊತ್ತಾಗುತ್ತೆ ಎಂದಿದ್ದಾರೆ.

    ಅಸಲಿಗೆ ಮೂರುವರೆ ಕೋಟಿ ನೀಡಿದ್ದು ಚೈತ್ರಾ ಆ್ಯಂಡ್ ಕಂಪನಿಗೆ. ಒಂದೂವರೆ ಕೋಟಿ ನೀಡಿದ್ದು ಸ್ವಾಮಿಗಳಿಗೆ, ಒಟ್ಟು 5 ಕೋಟಿಗಳು. ದುಡ್ಡಿನ ವಿಚಾರದಲ್ಲಿ ಸ್ವಾಮೀಜಿ ಸಿಕ್ಕಿಯೇ ಗೊತ್ತಾಗಬೇಕಾದ ವಿಚಾರಗಳಿಲ್ಲ. ಎಲ್ಲಾ ನಡೆದು ಟಿಕೆಟ್ ಸಿಗದೆ ಇದ್ದಾಗ ಸ್ವತಃ ತನಿಖೆ ಇಳಿದ ಗೋವಿಂದ ಬಾಬು ಪೂಜಾರಿಯವರಿಗೆ ಎಲ್ಲರೂ ಸಿಗುತ್ತಾರೆ. ಆಗ ಆಫೀಸಿನಲ್ಲಿ ಕೂರಿಸಿ ವಿಚಾರಣೆ ನಡೆಸಿದಾಗ ಅವರು ಹೇಳಿದ ಮಾತು ನಾವು ಹಣವನ್ನೆಲ್ಲಾ ವಿಶ್ವನಾಥ ಜೀಗೆ ಕೊಟ್ಟಿದ್ದೇವೆ. ಅವರು ತೀರಿಕೊಂಡರು ಎಂದು. ಇದನ್ನೂ ಓದಿ: ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್‌ಗೂ ಸಂಬಂಧ ಇಲ್ಲ: ಗೋವಿಂದ ಬಾಬು

    ಕೊನೆಗೆ ವಿಶ್ವನಾಥ್ ಜೀ ಪಾತ್ರ ಮಾಡಿದವನನ್ನು ಎಳೆದು ತಂದಾಗ ಇದೇ ತಂಡ ಗೋವಿಂದ ಬಾಬು ಪೂಜಾರಿಯವರ ಆಫೀಸ್‌ನಲ್ಲಿ ವಿಷ ಕುಡಿಯುವ ಪ್ರಹಸನ ಬೇರೆ ಮಾಡಿತ್ತು. ಕೊನೆಗೆ ಸ್ವಲ್ಪ ದಿನದ ನಂತರ ಹಣ ವಾಪಸ್ ಕೊಡುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿತ್ತು. ಇದೆಲ್ಲದರ ಬಗ್ಗೆ ಸಿಸಿಟಿವಿ ಫೂಟೇಜ್‌ಗಳಿವೆ, ಪೋನ್ ಸಂಭಾಷಣೆಗಳ ರೆಕಾರ್ಡ್‌ಗಳಿವೆ. ಇಷ್ಟೆಲ್ಲಾ ಇದ್ದರೂ ಆಟ ಆಡುವ ಈಕೆ ಮತ್ತು ತಂಡ, ಜೊತೆಗೆ ಆಕೆಯದೆ ಸರಿ ಎನ್ನುವ ಕೆಲವರು. ಡಿಫೆಂಡ್ ಮಾಡಿಕೊಳ್ಳೋಣ ಎಂದು ರಕ್ಷಿತ್ ಬರೆದಿದ್ದಾರೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]