Tag: Chaitra Kotturu

  • ಸಾವಿನ ದವಡೆಗೆ ನೂಕುವ ಕ್ರಿಮಿಯು ಬದುಕಿನ ಮಹತ್ವ ತಿಳಿಸುತ್ತದೆ: ಚೈತ್ರಾ ಕೊಟ್ಟೂರು

    ಸಾವಿನ ದವಡೆಗೆ ನೂಕುವ ಕ್ರಿಮಿಯು ಬದುಕಿನ ಮಹತ್ವ ತಿಳಿಸುತ್ತದೆ: ಚೈತ್ರಾ ಕೊಟ್ಟೂರು

    ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ, ಚೈತ್ರಾ ಕೊಟ್ಟೂರು ಇದೀಗ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಹೌದು. ಫೇಸ್ ಬುಕ್ ನಲ್ಲಿ ಹೊಸ ಪ್ರೊಫೈಲ್ ಫೋಟೋ ಅಪ್ಲೋಡ್ ಮಾಡಿರುವ ಚೈತ್ರಾ, ‘ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ ಕ್ರಿಮಿಯು, ಬದುಕಿನ ಮಹತ್ವವನ್ನೂ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಆಭಾರಿ…’ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‍ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ…

    Posted by Chaithra Kotoor on Sunday, April 18, 2021

    ಒಟ್ಟಿನಲ್ಲಿ ಕೆಲ ದಿನಗಳ ಹಿಂದೆ ಮದುವೆಯಾಗಿ ಅದೇ ದಿನ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದುಕೊಂಡರು. ಈ ಎಲ್ಲಾ ಕಾರಣಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ಚೈತ್ರಾ ಇದೀಗ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ.

    ಸೋಶಿಯಲ್ ಮಿಡಿಯಾಕ್ಕೆ ಎಂಟ್ರಿ ಕೊಟ್ಟು ಪೋಸ್ಟ್ ಹಾಕುತ್ತಿದ್ದಂತೆಯೇ ಮೆಚ್ಚುಗೆಯ ಕಾಮೆಂಟ್ ಗಳೇ ಬರಲಾರಂಭಿಸಿವೆ. ಫೇಸ್ ಬುಕ್ ಬಳಕೆದಾರರೊಬ್ಬರು ‘ಚೈತ್ರಾ ಅಂದ್ರೆ ಹೀಗಿರ್ಬೆಕು ಹೀಗೆ ಗಟ್ಟಿಯಾಗಿ ಖುಷಿಯನ್ನೇ ನಿರಂತರ ಹುಡುಕಿ… ಹೊಸ ಕನಸು ಮತ್ತು ಯೋಜನೆಗಳನ್ನು ಇಟ್ಟುಕೊಂಡು ಮುನ್ನೆಡೆಯಿರಿ. ನಿಮ್ಮಲ್ಲಿಯ ಅಪಾರ ಶಕ್ತಿಯ ಮೇಲೆ ನಂಬಿಕೆ ಇರಲಿ… ನೀವು ಆರೋಗ್ಯವಾಗಿರುವುದು ಕೇಳಿ ಸಂತೋಷವಾಯಿತು. ನಿಲುವು ಬೇರೆಯಾದರು ಬದುಕ ಒಲುಮೆ ಒಂದೆಯಲ್ಲವೇ.? ದೇವರ ಆಶೀರ್ವಾದವಿರಲಿ. ನೋವು ನಲಿವು ಯಾವುದು ಶಾಶ್ವತವಲ್ಲ ಅಂದುಕೊಂಡಂಗೆ ಒಂದೂ ನಡೆಯಲ್ಲ. ಆದ್ರೂ ನಗ್ ನಗ್ತಾ ಬಾಳಬೇಕು. ಒಳ್ಳೆ ಕಾಲಕ್ಕಾಗಿ ಕಾಯ್ಬೇಕು…’ ಎಂದು ಬರೆದುಕೊಂಡಿದ್ದಾರೆ. ಹೀಗೆ ಸಾಕಷ್ಟು ಕಾಂಮೆಂಟ್ ಗಳು ಬಂದಿವೆ.

  • ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನ

    ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನ

    ಕೋಲಾರ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಮದುವೆಯಾದ ದಿನವೇ ಪೊಲೀಸ್ ಠಾಣೆ ಮಟ್ಟಿಲೇರಿದ್ದ ಇವರು, ಇದೀಗ ಕೋಲಾರ ನಗರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ಚೈತ್ರಾ ಅವರು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ ವಿಚಾರವಾಗಿ ವಿವಾದದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

    ಮಾರ್ಚ್-28 ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬವರೊಂದಿಗೆ ಚೈತ್ರಾ ಮದುವೆಯಾಗಿದ್ದರು. ಆದರೆ ಮದುವೆಯಾದ ದಿನವೇ ವಿವಾದ ಎಬ್ಬಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಗಾರ್ಜುನ್ ನನಗೆ ಈ ವಿವಾಹ ಇಷ್ಟವಿಲ್ಲ ಎಂದು ಹೇಳಿದ್ದರು. ಆದರೆ ಚೈತ್ರಾ ಕೊಟ್ಟೂರು ಮಾತ್ರ ನನಗೆ ನಾಗಾರ್ಜುನ್ ತುಂಬಾ ಇಷ್ಟ. ಅವರ ಜೊತೆಯೇ ಹೋಗುತ್ತೇನೆ ಎಂದು ಪಟ್ಟು ಹಿಡಿದ್ದರು.

    ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ರನ್ನ ಕೂಡಿ ಹಾಕಿ ದೇಗುಲದಲ್ಲಿ ವಿವಾಹ ಮಾಡಿಸಲಾಗಿದೆ. ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್, ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾರೆ. ನಾಗಾರ್ಜುನ್ ಸೇರಿ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ ಎಂದು ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ನಾಗಾರ್ಜುನ್ ಕುಟುಂಬದವರು ತಗಾದೆ ತೆಗೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆ ಬಳಿಕ ಇಬ್ಬರ ಕುಟುಂಬಸ್ಥರು ಸೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧಾರ ಮಾಡಿದ್ದರು.

  • ಇಬ್ಬರು ಪ್ರೀತಿಸಿ ಒಪ್ಪಿಯೇ ಮದ್ವೆಯಾಗಿದ್ದು: ಚೈತ್ರಾ ಕೊಟ್ಟೂರು

    ಇಬ್ಬರು ಪ್ರೀತಿಸಿ ಒಪ್ಪಿಯೇ ಮದ್ವೆಯಾಗಿದ್ದು: ಚೈತ್ರಾ ಕೊಟ್ಟೂರು

    – ಸಿನ್ಮಾದವಳು, ಜಾತಿ ಅಂತ ನೆಪ ಹೇಳ್ತಿದ್ದಾರೆ
    – ನಾಳೆ ಅಂತ್ಯವಾಗುತ್ತಾ ಮ್ಯಾರೇಜ್ ಮಿಸ್ಟರಿ?

    ಕೋಲಾರ: ಬಿಗ್‍ಬಾಸ್ ಸ್ಪರ್ಧಿ ಮತ್ತು ಬರಹಗಾರ್ತಿ ಚೈತ್ರಾ ಕೊಟ್ಟೂರು ಮದುವೆಗೆ ಸಿನಿಮಾ ಮತ್ತು ಜಾತಿ ಅಡ್ಡವಾಗಿದೆಯಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚೈತ್ರಾ ಕೊಟ್ಟೂರು ಮದುವೆ, ಪ್ರೀತಿಗೆ ಸಂಬಂಧಿಸಿದ ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ.

    ಬಿಗ್‍ಬಾಸ್ ಮುಗಿಸಿ ಬಂದ ನಂತರ ಫೇಸ್‍ಬುಕ್ ನಲ್ಲಿ ಪರಿಚಯವಾಯ್ತು, ಎರಡ್ಮೂರು ಬಾರಿ ಸಿಕ್ಕ ನಂತರ ಇಬ್ಬರು ಆಕರ್ಷಿತವಾದೆವು, ನಂತರ ಹಾಗೇ ಆಪ್ತತೆ ಬೆಳಿಯಿತು. ಆಗ ಲಾಕ್‍ಡೌನ್ ಆಗಿದ್ದರಿಂದ ಮನೆಯಲ್ಲಿ ಭೇಟಿ ಮಾಡಿದ್ದೀವಿ. ಪರಸ್ಪರ ಪ್ರೀತಿ ಮಾಡಿ ಇಬ್ಬರು ಮನೆಗೆ ಹೋಗಿ ಬರೋದು ನಡೆದಿತ್ತು. ನಾಗಾರ್ಜುನ್ ಹುಟ್ಟುಹಬ್ಬವನ್ನ ನಾನು ಅದ್ಧೂರಿಯಾಗಿ ಆಚರಿಸಿ, ಚಿನ್ನದ ಬ್ರೆಸ್ ಲೆಟ್ ಕೂಡ ಉಡುಗೊರೆಯಾಗಿ ಕೊಟ್ಟು ಮೂರು ಲಕ್ಷ ಖರ್ಚು ಮಾಡಿದೆ. ಆಚರಣೆಯ ಫೋಟೊಗಳನ್ನು ನನ್ನ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ ಎಂದರು.

    ಆಪ್ತವಾಗಿದ್ದ ಹುಡುಗ ಮದುವೆ ವಿಚಾರ ಗಂಭೀರವಾಗ್ತಿದ್ದಂತೆ ಬೇರೆಯ ರೀತಿ ನಡೆದುಕೊಳ್ಳಲು ಶುರುಮಾಡಿದ. ಇಬ್ಬರ ಒಪ್ಪಿಗೆ ಮೇರೆಗೆ ಮದುವೆ ನಡೆಯಿತು. ಮದುವೆ ನಂತ್ರ ಮನೆಯವರ ನೆಪ, ಜಾತಿ ನೆಪ, ಅಂತಸ್ಥಿನ ನೆಪ ಹೇಳುವ ಮೂಲಕ ಸದ್ಯ ನನ್ನನ್ನು ಅವಾಯ್ಡ್ ಮಾಡುತ್ತಿದ್ದಾನೆ. ನಾನು ಸಿನಿಮಾದವಳು ಎಂಬ ನೆಪ ಅಂತ ಆತನ ಮನೆಯವರು ಬೇಡ ಎನ್ನುತ್ತಿದ್ದಾರೆ.

    ಮೈಸೂರು ರೋಡಲ್ಲಿರುವ ಬಿಜಿಎಸ್ ಆಶ್ರಮದ ಬಳಿ ಮಾತುಕತೆಗೆ ಕರೆದ್ರು, ತದನಂತರ ಆ ಹುಡುಗನ ಮನೆಯವರು ಬಂದೊಡನೆ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು. ನೀನು ನಡತೆಗೆಟ್ಟವಳು, ಸಿನಿಮಾದವಳು ನನ್ನ ಸೊಸೆ ಆಗೋದಕ್ಕೆ ಯೋಗ್ಯತೆ ಇಲ್ಲದವಳು ಎಂದು ಅವರ ತಂದೆ ಗಲಾಟೆ ಮಾಡಿದ್ರು, ಬಲವಂತದ ಮದುವೆ ಎಂದು ಅವನ ತಲೆಗೆ ತುಂಬಿದರು. ಆತನು ಅವರಂತೆ ಆಡಲು ಶುರು ಮಾಡಿದ್ದಾನೆ.

    ತದನಂತರ ನಿಮ್ಮ ಮನೆಯಲ್ಲಿ ಕೂತು ಮಾತಾಡಿ ಬಗೆಹರಿಸೋಣ ಎಂದು ಬಂದವರು ನಮ್ಮ ಇಡೀ ರಸ್ತೆ ನೋಡುವಂತೆ ಕಿರುಚಿ ಕೂಗಾಡಿ ಗಲಾಟೆ ಮಾಡಿದರು. ನನ್ನನ್ನು ಮತ್ತು ನನ್ಮ ಅಣ್ಣಂದಿರನ್ನು ಹೊಡೆದು, ನನ್ನ ವಯಸ್ಸಾದ ತಂದೆ ತಾಯಿಯನ್ನು ನೂಕಾಡಿ ತಳ್ಳಾಡಿ ಬೀಳಿಸಿ, ಗಾಯಗೊಳಿಸಿದರು.

    ನಂತರ ನಾನು ದೂರು ಕೊಡಲು ಹೋದಾಗ, ಹುಡುಗನ ಬಾವಂದಿರು ಕಂಪ್ಲೆಂಟ್ ಕೊಡುವ ಮುನ್ನ ಒಂದೆರಡು ದಿನ ಸಮಯ ತಗೆದುಕೊಳ್ಳೋಣ. ನಾವುಗಳು ಕುಟುಂಬದವರು ಕೂತು ಮಾತಾಡೋಣ ಎಂದು ನನ್ನನ್ನು ಕೇಳಿಕೊಂಡಾಗ ನಾನು ಆಯ್ತು ಎಂದು ಒಪ್ಪಿದೆ. ಪೋಲಿಸರು ನೀವುಗಳು ಇನ್ನೆರಡು ದಿನಗಳಲ್ಲಿ ನಾವು ಬಗೆಹರಿಕೊಂಡು ಬನ್ನಿ ಇಲ್ಲವಾದಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈಗ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಅನ್ನೋ ಮಾಹಿತಿ ಇದೆ. ನಾನು ಇಲ್ಲಿ ಕೊಟ್ಟಿರುವ ಕಂಪ್ಲೆಂಟನ್ನು ತಡೆದು ಕೂತು ಮಾತಾಡೋಣ ಎಂದು ಹೋಲ್ಡ್ ನಲ್ಲಿ ಇಟ್ಟವರು, ಮನೆಯವರ ಡಬಲ್ ಗೇಮ್ ಮಾಡುತ್ತಿದ್ದಾರೆ ಎಂದು ಚೈತ್ರಾ ಆರೋಪಿಸಿದರು.

    ಇಲ್ಲಿಂದ ಹೋದ ಬಳಿಕ ನಾಗಾರ್ಜುನ್ ನನ್ನ ಜೊತೆ ಮಾತನಾಡಿಲ್ಲ. ನಾಳೆ ಅವಕಾಶ ಇರುವುದರಿಂದ ಅವರು ಮಾತಾಡಲು ಬಂದರೆ ಮಾತಾಡುತ್ತೇವೆ. ಇಲ್ಲವಾದಲ್ಲಿ ಮುಂದೆ ಮಾಡಬೇಕಾದ ಕ್ರಮದ ಕುರಿತು ಯೋಚಿಸುತ್ತೇವೆ ಎಂದರು.

  • ವಿವಾದ ಸೃಷ್ಟಿಸಿದ ಚೈತ್ರಾ ಕೊಟ್ಟೂರು ವಿವಾಹ – ಕಾದು ನೋಡಿ ತೀರ್ಮಾನ ಕೈಗೊಳ್ಳಲು ಮುಂದಾದ ಕುಟುಂಬಸ್ಥರು

    ವಿವಾದ ಸೃಷ್ಟಿಸಿದ ಚೈತ್ರಾ ಕೊಟ್ಟೂರು ವಿವಾಹ – ಕಾದು ನೋಡಿ ತೀರ್ಮಾನ ಕೈಗೊಳ್ಳಲು ಮುಂದಾದ ಕುಟುಂಬಸ್ಥರು

    ಕೋಲಾರ: ನಟಿ, ಬರಹಗಾರ್ತಿ, ಬಿಗ್ ಬಾಸ್ ಸೀಸನ್-7ರ ಸ್ಪರ್ಧಿ ಚೈತ್ರಾ ಕೊಟ್ಟೂರು ಮದುವೆ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನ ದೇವಾಲಯವೊಂದರಲ್ಲಿ ಸರಳವಾಗಿ ಮಂಡ್ಯ ಮೂಲದ ನಾಗರ್ಜುನರನ್ನ ಮದುವೆಯಾಗಿದ್ದ ಚೈತ್ರಾ, ಸಂಜೆ ವೇಳೆ ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿದ್ರು.

    ನಾಗರ್ಜುನ್‍ಗೆ ಸಂಘಟನೆಗಳಿಂದ ಬೆದರಿಕೆ ಹಾಕಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಉದ್ಯಮಿ ನಾಗರ್ಜುನ ಪೋಷಕರು ಕೋಲಾರದ ಚೈತ್ರಾ ಮನೆ ಎದುರು ಗಲಾಟೆ ಮಾಡಿದ್ರು. ಹಾಗಾಗಿ ಮಹಿಳಾ ಪೊಲೀಸ್ ಠಾಣೆ ಮೊರೆ ಹೋಗಿದ್ದ ಚೈತ್ರಾ ಕೊಟ್ಟೂರು ಮದುವೆ ವಿವಾದ, ಬುಧವಾರದವರೆಗೂ ಟೈಂ ಪಡೆಯುವ ಮೂಲಕ ಸಣ್ಣ ವಿರಾಮ ಪಡೆದುಕೊಂಡಿದೆ.

    ಸದ್ಯ 2 ಕುಟುಂಬದವರು ಒಂದೆಡೆ ಕುಳಿತು ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದು, ಅದಕ್ಕೆ ಬುಧವಾರ ಅಂತಿಮ ವರದಿ ಸಿಗಲಿದೆ. ನನಗೆ ಅವನೇ ಬೇಕು ಎಂದು ಪಟ್ಟು ಹಿಡಿದಿರುವ ಚೈತ್ರಾ ಕೊಟ್ಟೂರು, ಕೋಲಾರ ನಗರದ ಕುರುಬರಪೇಟೆಯಲ್ಲಿರುವ ತಮ್ಮ ಮನೆಯಲ್ಲಿದ್ದಾರೆ.

    ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಚೈತ್ರಾ, ಬುಧವಾರದವೆರಗೂ ಕಾದು ನೋಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಪೋಷಕರೊಟ್ಟಿಗೆ ಮಂಡ್ಯಕ್ಕೆ ವಾಪಸ್ಸಾಗಿರುವ ನಾಗಾರ್ಜುನ್ ಅವರ ನಿಲುವೇನು ಅನ್ನೋದು ಕೂಡ ನಿಗೂಢವಾಗಿಯೇ ಇದ್ದು, ಒಂದು ವೇಳೆ ಬುಧುವಾರ ಸಮಸ್ಯೆ ಬಗೆಹರಿಯದೆ ಇದ್ದರೆ ಕಾನೂನು ರೀತಿಯಲ್ಲಿ ಹೋರಾಟ ಮಾಡಲು ಚೈತ್ರಾ ನಿರ್ಧಾರ ಮಾಡಿದ್ದಾರೆ.

    ಕುಟುಂಬ ಸದಸ್ಯರ ಪ್ರಕಾರ ಎರಡು ಕುಟುಂಬಸ್ಥರು ಸೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧಾರ ಮಾಡಿದ್ದು, ಅಲ್ಲಿವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ. ಹಾಗಾಗಿ ಮನೆ ಬಳಿ ಬರಬೇಡಿ ಅನ್ನೋದು ಆಕೆಯ ಸಂಬಂಧಿಕರ ಒತ್ತಾಯದ ಎಚ್ಚರಿಕೆ.

  • ಕೋಲಾರದಲ್ಲಿ ಚೈತ್ರಾರನ್ನ ಬಿಟ್ಟು ಮಂಡ್ಯಕ್ಕೆ ತೆರಳಿದ ನಾಗಾರ್ಜುನ್

    ಕೋಲಾರದಲ್ಲಿ ಚೈತ್ರಾರನ್ನ ಬಿಟ್ಟು ಮಂಡ್ಯಕ್ಕೆ ತೆರಳಿದ ನಾಗಾರ್ಜುನ್

    ಕೋಲಾರ: ಬಿಗ್‍ಬಾಸ್ ಸೀಸನ್ ಏಳರ ಸ್ಪರ್ಧಿ ಚೈತ್ರಾ ಕೊಟ್ಟೂರು ಮದುವೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ರಾತ್ರಿ ಎರಡೂ ಕುಟುಂಬ ಮತ್ತು ನವ ದಂಪತಿಯ ವಿಚಾರಣೆ ನಡೆಸಿದ್ದರು. ಎರಡೂ ಕುಟುಂಬದವರಿಗೆ ಕುಳಿತು ಮಾತನಾಡಿ ನಿರ್ಧಾರಕ್ಕೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಬುಧವಾರದೊಳಗೆ ನಿರ್ಧಾರವನ್ನ ತಿಳಿಸಬೇಕೆಂದು ಪೊಲೀಸರು ನವ ದಂಪತಿಗೆ ಸೂಚಿಸಿದ್ದಾರೆ. ತಡರಾತ್ರಿ ಚೈತ್ರಾ ಅವರನ್ನ ಕೋಲಾರದಲ್ಲಿಯೇ ಬಿಟ್ಟು ನಾಗಾರ್ಜುನ್ ತಮ್ಮ ಪೋಷಕರ ಜೊತೆ ಮಂಡ್ಯಕ್ಕೆ ತೆರಳಿದ್ದಾರೆ. ಸದ್ಯ ಚೈತ್ರಾ ಕೋಲಾರದಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದಾರೆ.

    ಬೆಳಗ್ಗೆ ಮದ್ವೆ, ಸಂಜೆ ಪೊಲೀಸ್ ಠಾಣೆ: ಚೈತ್ರಾ ಕೊಟ್ಟೂರು ಹಾಗೂ ನಾಗಾರ್ಜುನ್ ಭಾನುವಾರ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ವರ್ಷಗಳಿಂದ ಚೈತ್ರಾ ಹಾಗೂ ನಾಗರ್ಜುನ್ ಇಬ್ಬರು ಪ್ರೀತಿಸುತ್ತಿದ್ದರು. ಬಳಿಕ ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಆದ್ರೆ ಸಂಜೆ ವೇಳೆ ಇಬ್ಬರ ಮದುವೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.

    ಬಲವಂತದ ಮದುವೆನಾ?: ನಾಗಾರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗುವುದು ಇಷ್ಟವಿರಲಿಲ್ಲ. ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ ಅವರನ್ನ ಕೂಡಿ ಹಾಕಿ ದೇಗುಲದಲ್ಲಿ ವಿವಾಹ ಮಾಡಿಸಲಾಗಿದೆ. ಸಂಘಟನೆಗಳ ಬೆದರಿಕೆಗೆ ಬಗ್ಗಿದ ನಾಗಾರ್ಜುನ್, ಬಲವಂತವಾಗಿ ಚೈತ್ರಾಗೆ ತಾಳಿ ಕಟ್ಟಿದ್ದಾರೆ. ನಾಗಾರ್ಜುನ್ ಸೇರಿ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟವಿರಲಿಲ್ಲ ಎಂದು ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದು ನಾಗಾರ್ಜುನ್ ಕುಟುಂಬದವರು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.

    ಭಾನುವಾರ ರಾತ್ರಿ ನಾಗಾರ್ಜುನ್ ಕುಟುಂಬದವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಚೈತ್ರಾ ಕೊಟ್ಟೂರು ಹಾಗೂ ನಾಗಾರ್ಜುನ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಎಂದು ನಾಗಾರ್ಜುನ್ ಪಟ್ಟು ಹಿಡಿದಿದ್ದರು. ಆದರೆ ಚೈತ್ರಾ ಕೊಟ್ಟೂರು ಮಾತ್ರ ನನಗೆ ನಾಗಾರ್ಜುನ್ ಇಷ್ಟ, ಅವನ ಜೊತೆಯೇ ಹೋಗುತ್ತೇನೆ ಎಂದು ಬಿಗಿಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ.