Tag: chaitra hallikeri

  • ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

    ಗುನ್ನಾ, ಶಿಷ್ಯ, ಖುಷಿ (Kushi) ಸಿನಿಮಾಗಳಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ನಟಿ ಚೈತ್ರಾ ಹಳ್ಳಿಕೇರಿ ಅವರು ‘ಬಿಗ್ ಬಾಸ್’ (Bigg Boss Kannada) ಶೋ ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ‘ಅಂತರಪಟ’ (Antarapata) ಸೀರಿಯಲ್‌ನ ಚಾಂದಿನಿ ಪಾತ್ರದ ಮೂಲಕ ಮನಗೆಲ್ಲಲು ಸಜ್ಜಾಗಿದ್ದಾರೆ.

    ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ ನಟಿ ಚೈತ್ರಾ ಅವರು ಪೀಕ್‌ನಲ್ಲಿರುವಾಗಲೇ ಮದುವೆಯಾದರು. ಕ್ಯಾಮೆರಾ ಕಣ್ಣಿಂದ ದೂರ ಸರಿದರು. ಬಳಿಕ ಕಳೆದ ವರ್ಷದ ಬಿಗ್ ಬಾಸ್ ಒಟಿಟಿ ಶೋನಲ್ಲಿ ಗಟ್ಟಿ ಸ್ಪರ್ಧಿಯಾಗಿ ಚೈತ್ರಾ ಗುರುತಿಸಿಕೊಂಡರು. ಈಗ ಮತ್ತೆ ಚೈತ್ರಾ ಅವರ ಕಿರುತೆರೆಯ ಪರ್ವ ಶುರುವಾಗಿದೆ. ಇದನ್ನೂ ಓದಿ:ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನದ ಮೇಘನಾ ರಾಜ್

    ಸ್ವಪ್ನ ಕೃಷ್ಣ (Swapna Krishna) ನಿರ್ದೇಶನದ ‘ಅಂತರಪಟ’ ಧಾರಾವಾಹಿಯಲ್ಲಿ ನಟಿ ಚೈತ್ರಾ (Chaitra Hallikeri) ಅವರು ಚಾಂದಿನಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರ ಕೂಡ ಮಹಿಳಾ ಸಬಲೀಕರಣವನ್ನೇ ಸಾರುತ್ತದೆ. ಸ್ವಾವಲಂಬಿ ಮಹಿಳೆಯಾಗಿರುವ ಚಾಂದಿನಿ ತನ್ನ ಬ್ಯುಸಿನೆಸ್ ಅನ್ನು ತಾನೇ ಪರಿಶ್ರಮದಿಂದ ಮುಂದೆ ತಂದಿರುವಂತಹ ದಿಟ್ಟೆ. ಜೊತೆಗೆ ‘ಅಂತರಪಟ’ ಧಾರಾವಾಹಿಯ ಮುಖ್ಯ ಪಾತ್ರಧಾರಿ ಆರಾಧನಾಳ ಬ್ಯುಸಿನೆಸ್ ಗುರುವಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

    ಚಾಂದಿನಿ ಪಾತ್ರ ಕೂಡ ಚೈತ್ರಾ ಅವರ ರಿಯಲ್ ಲೈಫ್‌ಗೆ ಒಪ್ಪುವಂತಿದೆ. ಅವರು ರಿಯಲ್ ಲೈಫ್‌ನಲ್ಲಿ ಗಟ್ಟಿ ವ್ಯಕ್ತಿಯಾಗಿದ್ದಾರೆ. ಎಲ್ಲದನ್ನೂ ಸವಾಲಾಗಿ ಸ್ವೀಕರಿಸುತ್ತಾರೆ. ಒಟ್ನಲ್ಲಿ ‘ಅಂತರಪಟ’ ಸೀರಿಯಲ್ ಮೂಲಕ ಚೈತ್ರಾ ಮೋಡಿ ಮಾಡ್ತಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಊಹೆಗೂ ಮೀರಿದ ಟ್ವೀಸ್ಟ್‌ಗಳು ನಡೆಯುತ್ತಿದೆ. ದಿನ ಕಳೆದಂತೆ ಮನೆಯ ರಂಗು ಹೆಚ್ಚುತ್ತಿದೆ. ಬಿಗ್ ಬಾಸ್ ಓಟಿಟಿ ಮುಗಿಯಲು ಎರಡು ವಾರಗಳಿವೆ. ಇದೀಗ ಒಬ್ಬಬ್ಬರೇ ಮನೆಯಿಂದ ಎಲಿಮೀನೇಟ್ ಆಗಿ ಹೊರಬರುತ್ತಿದ್ದಾರೆ. ಆದರೆ ಈ ವಾರದ ಡಬಲ್ ಎಲಿಮಿನೇಷನ್ ಮನೆಮಂದಿಗೆ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಹೊರನಡೆದಿದ್ದಾರೆ. ಈ ಎಲ್ಲಾ ಬೆಳವಣಿಕೆಗಳ ನಡುವೆ ಜಯಶ್ರೀ ಆರಾಧ್ಯಗೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ದೊಡ್ಮನೆ ಬಿಗ್ ಬಾಸ್ ಸಾಕಷ್ಟು ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ಟಫ್ ಆಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರಕ್ಕೆ ಚೈತ್ರಾ ಮತ್ತು ಅಕ್ಷತಾ ಕುಕ್ಕಿ ಔಟ್ ಆಗಿದ್ದಾರೆ. ಆತ್ಮೀಯ ಗೆಳತಿ ಚೈತ್ರಾ ಅವರಿಗಾಗಿ ಜಯಶ್ರೀ ಗಳಗಳನೆ ಅತ್ತಿದ್ದಾರೆ.

    ಜಯಶ್ರೀ ಅವರಿಗೆ ಮೊದಲಿನಿಂದಲೂ ಚೈತ್ರ ಅವರಿರೊಂದಿಗೆ ಒಳ್ಳೆಯ ಒಡನಾಟವಿತ್ತು. ಮನೆಯಲ್ಲಿ ಇದ್ದಷ್ಟು ದಿನ ಒಬ್ಬರಿಗೊಬ್ಬರು ಕೆಲಸಗಳಲ್ಲಿ ಮತ್ತು ಟಾಸ್ಕ್ನಲ್ಲಿ ಸಾಥ್ ನೀಡುತ್ತಲೇ ಬಂದಿದ್ದರು. ಆದರೆ ಈಗ ಮನೆಯಿಂದ ಚೈತ್ರ ಹೊರನಡೆದಿರುವುದು ಜಯಶ್ರೀ ಅವರಿಗೆ ಒಂಟಿತನ ಕಾಡಿದೆ. ಚೈತ್ರಾ ಎಲಿಮಿನೇಟ್ ಆದ ದಿನವೇ ಜಯಶ್ರೀ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ನನಗೆ ಇಲ್ಲಿ ಇರಲು ಆಗುತ್ತಿಲ್ಲ. ತುಂಬಾ ಒಂಟಿತನ ಫೀಲ್ ಆಗುತ್ತಿದೆ. ತುಂಬಾ ವೀಕ್ ಆದಂತೆ ಅನಿಸುತ್ತಿದೆ. ಎಂದು ಗಳಗಳನೆ ಅತ್ತಿದ್ದಾರೆ. ಈ ವೇಳೆ ಇತರ ಸ್ಪರ್ಧಿಗಳು ಸಮಾಧಾನಿಸಲು ಪ್ರಯತ್ನ ಪಟ್ಟಿದ್ದಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಹೊರಗಡೆ ಜೀವನದಲ್ಲಿ ಈ ರೀತಿ ಆದಾಗ ಬೇರೆ ಆಯ್ಕೆ ಇರುತ್ತದೆ. ಮೊಬೈಲ್ ಇರುತ್ತದೆ. ಆದರೆ ಇಲ್ಲಿ ಸಂಪೂರ್ಣ ಒಂಟಿ ಎಂದೆನಿಸುತ್ತಿದೆ ಎಂದು ಜಯಶ್ರೀ ಹೇಳಿಕೊಂಡಿದ್ದಾರೆ. ಚೈತ್ರ ಅವರಿಗಾಗಿ ಜಯಶ್ರೀ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ಚೈತ್ರಾ ಹಳ್ಳಿಕೇರಿ – ಅಕ್ಷತಾ ಕುಕ್ಕಿ ಔಟ್

    ಬಿಗ್ ಬಾಸ್ ಮನೆಯಿಂದ ಚೈತ್ರಾ ಹಳ್ಳಿಕೇರಿ – ಅಕ್ಷತಾ ಕುಕ್ಕಿ ಔಟ್

    ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ಹೊಸ ಟ್ವೀಸ್ಟ್ಗಳನ್ನ ಪಡೆದುಕೊಳ್ಳುತ್ತಾ ನೋಡುಗರನ್ನ ಮೋಡಿ ಮಾಡುತ್ತಿದೆ. ಮನೆಯ ಆಟ 27ನೇ ದಿನ ಪೂರೈಸಿದೆ. ಇದೀಗ ಈ ವಾರ ಬಿಗ್ ಬಾಸ್ ಮಂದಿಗೆ ಡಬಲ್ ಶಾಕ್ ಕೊಟ್ಟಂತೆ ಆಗಿದೆ. ದೊಡ್ಮನೆಯಿಂದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಔಟ್ ಆಗಿದ್ದಾರೆ.

    ಪ್ರತಿ ವಾರ ಕಿಚ್ಚನ ವೀಕೆಂಡ್ ಪಂಚಾಯಿತಿಗಾಗಿ ಅಭಿಮಾನಿಗಳು ಕಾದು ಕೂತಿರುತ್ತಾರೆ. ಜತೆಗೆ ವಾರದ ಕಡೆಯಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ ಎಂಬುದರ ಬಗ್ಗೆಯೂ ಕ್ಯೂರಿಯಸ್ ಆಗಿ ಕಾಯುತ್ತಾರೆ. ಇದೀಗ ಈ ವಾರ ದೊಡ್ಮನೆಯಲ್ಲಿ ಗಟ್ಟಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಮನೆಯಿಂದ ಡಬಲ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದನ್ನೂ ಓದಿ:ನಾನು ಸಹ ಕೆಟ್ಟ ಸಂಬಂಧ ಹೊಂದಿದ್ದೆ ಎಂದ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

    ಈಗಾಗಲೇ ಬಿಗ್ ಬಾಸ್ ಮನೆಯಿಂದ ಕಿರಣ್ ಯೋಗೇಶ್ವರ್, ಸ್ಪೂರ್ತಿ ಗೌಡ, ಅರ್ಜುನ್ ರಮೇಶ್, ಲೋಕೇಶ್ ಮನೆಯಿಂದ ಹೊರ ಬಂದಿದ್ದಾರೆ. ಇದೀಗ ಈ ವಾರ ಚೈತ್ರಾ ಮತ್ತು ಅಕ್ಷತಾ ಮನೆಯಿಂದ ಹೊರಬಂದಿದ್ದಾರೆ. ಇದೀಗ ಡಬಲ್ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಬಿಗ್ ಬಾಸ್ ಮನೆಯಲ್ಲಿ ಈಗೀಗ ಚೈತ್ರಾ ಹಳ್ಳಿಕೇರಿ ಮುಖವಾಡ ಕಳಚ್ತಾ ಇದ್ದಾರೆ : ಸ್ಪೂರ್ತಿ ಗೌಡ

    ಬಿಗ್ ಬಾಸ್ ಮನೆಯಲ್ಲಿ ಯಾರು ಹೇಗೆ ಎನ್ನುವುದು ನೋಡುಗರಿಗಿಂತ ಮನೆಯಲ್ಲಿ ಇರುವವರಿಗೆ ಹೆಚ್ಚು ಗೊತ್ತಿರುತ್ತದೆ. ಹಾಗಾಗಿ ಮನೆಯಿಂದ ಆಚೆ ಬರುವ ಸ್ಪರ್ಧಿಗಳು ಶಾಕಿಂಗ್ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆ. ನೋಡುಗರಿಗೆ ಅವರು ತೋರುವುದು ಒಂದು, ಮನೆಯಲ್ಲಿ ಅವರು ಇರುವುದು ಒಂದು ಎನ್ನುವಂತಹ ಮಾತುಗಳನ್ನು ಅವರು ಆಡುತ್ತಿದ್ದಾರೆ. ಹಾಗಾಗಿ ಮನೆಯಲ್ಲಿ ಇರುವವರ ಬಣ್ಣ, ಆಚೆ ಬಂದವರಿಂದ ಬಯಲಾಗುತ್ತಿದೆ.

    ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೂ ಚೆನ್ನಾಗಿಯೇ ಇರುವ, ಒಂದು ಸಲವೂ ನಾಮಿನೇಟ್ ಆಗದೇ ಇರುವಂತಹ ಸ್ಪರ್ಧಿ ಎಂದರೆ ಚೈತ್ರಾ ಹಳ್ಳಿಕೇರಿ. ಖಾಸಗಿ ಬದುಕಿನಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸಿರುವ ಮತ್ತು ಅದನ್ನು ಬಹಿರಂಗವಾಗಿ ಹೇಳಿಕೊಂಡು ಗಟ್ಟಿಗಿತ್ತಿ ಅನಿಸಿರುವ ಚೈತ್ರಾ, ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಮುಖವಾಡ ಹಾಕಿಕೊಂಡು ಬದುಕುತ್ತಿದ್ದರಂತೆ. ಹಾಗಂತ ಸ್ಪೂರ್ತಿ ಗೌಡ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಚೈತ್ರಾ ಬಿಗ್ ಬಾಸ್ ಮನೆ ಒಳಗೆ ಇರುವವರ ಜೊತೆ ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡಿ ಮಾತನಾಡುತ್ತಿದ್ದರು. ನಾನು ಮನೆಯಿಂದ ಆಚೆ ಬರುವ ಎರಡು ದಿನ ಮುಂಚೆ ನನ್ನ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ಎಷ್ಟು ದಿನ ಅಂತ ಮುಖವಾಡ ಹಾಕಿಕೊಂಡು ಇರುವುದಕ್ಕೆ ಆಗತ್ತೆ? ಈಗೀಗ ಅವರು ಮುಖವಾಡ ತಗೆದು ಬದುಕುತ್ತಿದ್ದಾರೆ ಎಂದು ಸ್ಪೂರ್ತಿ ಗೌಡ ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಚೈತ್ರಾ ಪತಿ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

    ನಟಿ ಚೈತ್ರಾ ಪತಿ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

    ಮ್ಮ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಟಿ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಪತಿ ಬಾಲಾಜಿ ಮತ್ತು ಮಾವ ಎಂ.ಕೆ ಪೋತರಾಜು ವಿರುದ್ಧ ದೂರು ದಾಖಲಿಸಿದ್ದರು. ಅವರ ಮೇಲೆ ಕ್ರಮ ತಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ನಟಿ ಚೈತ್ರಾ ಹಳ್ಳಿಕೇರಿ ತಮ್ಮ ಮೇಲೆ ದಾಖಲಿಸಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸುವಂತೆ ಬಾಲಾಜಿ ಮತ್ತು ಅವರ ತಂದೆ ಪೋತರಾಜು ಅವರು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ಹೇಮಂತ್ ಚಂದನಗೌಡರ್ ಅವರು ತಡೆಯಾಜ್ಞೆ ನೀಡಿದ್ದಾರೆ. ಈ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಶ್ಯಾಮಸುಂದರ್ ವಾದಿಸಿದ್ದರು. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಚೈತ್ರಾ ಹಳ್ಳಿಕೇರಿ ಈ ಹಿಂದೆಯೇ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ತಮಗೆ ನಿರಂತರ ಹಿಂಸೆ ಕೊಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದರು. ಈ ಬಾರಿ ತಮ್ಮ ಅರಿವಿಗೆ ಬಾರದಂತೆ ತಮ್ಮದೇ ಹೆಸರಿನಲ್ಲಿ ಪತಿ ಮತ್ತು ಮಾವ ಬ್ಯಾಂಕ್ ಖಾತೆ ತೆಗೆದು ವ್ಯವಹರಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.

  • ನಟಿ ಚೈತ್ರಾ ಹಳ್ಳಿಕೇರಿ 25 ಕೋಟಿ  ಬೇಡಿಕೆ ಇಟ್ಟರಾ? ನಟಿಯ ಆರೋಪಕ್ಕೆ ತಿರುಗೇಟು ನೀಡಿದ ಪತಿ ಬಾಲಾಜಿ

    ನಟಿ ಚೈತ್ರಾ ಹಳ್ಳಿಕೇರಿ 25 ಕೋಟಿ ಬೇಡಿಕೆ ಇಟ್ಟರಾ? ನಟಿಯ ಆರೋಪಕ್ಕೆ ತಿರುಗೇಟು ನೀಡಿದ ಪತಿ ಬಾಲಾಜಿ

    ನಿನ್ನೆಯಷ್ಟೇ ಸ್ಯಾಂಡಲ್ ವುಡ್ ನಟಿ ಚೈತ್ರಾ ಹಳ್ಳಿಕೇರಿ  ಸುದ್ದಿಗೋಷ್ಠಿ ನಡೆಸಿ, ಪತಿ ಬಾಲಾಜಿ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದರು. ದೈಹಿಕ ಕಿರುಕುಳ ಮತ್ತು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಪತಿ ಮಾತ್ರವಲ್ಲ, ಮಾವ ಪೋತರಾಜ್ ಕೂಡ ತಮಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ : 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

    ಪತ್ನಿ ಚೈತ್ರಾ ಪ್ರೆಸ್ ಮೀಟ್ ಮಾಡಿದ ಬೆನ್ನಲ್ಲೆ ಪತಿ ಬಾಲಾಜಿ ಕೂಡ ಇಂದು ಮಾಧ್ಯಮ ಗೋಷ್ಠಿ ಕರೆದಿದ್ದರು. ಪತಿ ಚೈತ್ರಾ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು, ತಾವಷ್ಟು ಆರೋಪಗಳನ್ನು ಪತ್ನಿಯ ಮೇಲೆ ಮಾಡಿದರು. ಚೈತ್ರಾ ಮಾಡಿರುವ ಅಷ್ಟೂ ಆರೋಪಗಳಲ್ಲೂ ಯಾವುದೇ ಹುರುಳಿಲ್ಲ ಎಂದರು. ಅಲ್ಲದೇ, ನಾಲ್ಕು ವರ್ಷಗಳಿಂದ ತಾವಿಬ್ಬರೂ ದೂರ ಇರುವುದಾಗಿಯೂ ಅವರು ಹೇಳಿದರು. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ಈಗಾಗಲೇ ನಾನು ಚೈತ್ರಾಗೆ ಕೋಟ್ಯಾಂತರ ರೂಪಾಯಿ ಕೊಟ್ಟಿರುವೆ. 5 ಕೋಟಿ ಮನೆ, 50 ಲಕ್ಷ ರೂಪಾಯಿ ಬೆಲೆಬಾಳುವ ಕಾರು ಕೊಟ್ಟಿರುವೆ. ಎರಡು ವರ್ಷಗಳ ಹಿಂದೆಯೇ ಅವರು ಡಿವೋರ್ಸ್ ಕೇಳಿದರು. ಹೆಚ್ಚು ಹಣಕ್ಕಾಗಿ ಡಿಮಾಂಡ್ ಕೂಡ ಮಾಡಿದರು. ಅವರು 25 ಕೋಟಿ ರೂಪಾಯಿ ಡಿಮಾಂಡ್ ಮಾಡುತ್ತಿದ್ದಾರೆ. ಅದನ್ನು ಕೊಡದೇ ಇದ್ದಾಗ ಮೀಡಿಯಾಗೆ ಹೋಗುವುದಾಗಿ ಬೆದರಿಸುತ್ತಾರೆ ಎಂದಿದ್ದಾರೆ ಬಾಲಾಜಿ. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

    ಎರಡು ಮಕ್ಕಳು ಆದ ನಂತರ ಚೈತ್ರಾ ಅವರೇ ಮಿಸಸ್ ಇಂಡಿಯಾ ಸ್ಪರ್ಧೆಗೆ ಹೋಗಬೇಕೆಂದು ಬಾಲಾಜಿ ಅವರಲ್ಲಿ ಕೇಳಿದರಂತೆ. ತಮಗೆ ಫ್ರಿಡಂ ಬೇಕು ಅಂತ ಬೇರೆ ಮನೆಗೆ ಬದಲಾದರಂತೆ. ನಂತರ ಅವರ ಡಿಮಾಂಡ್ ಗಳು ಜಾಸ್ತಿ ಆಗುತ್ತಲೇ ಹೋದವು ಎಂದು ಬಾಲಾಜಿ ಆರೋಪ ಮಾಡಿದರು. ಇಬ್ಬರ ಮಧ್ಯೆ ಸಣ್ಣ ಪುಟ್ಟ ಜಗಳ ಆಗಿದ್ದನ್ನು ಒಪ್ಪಿಕೊಂಡ ಬಾಲಾಜಿ, ಅದರಿಂದಾಗಿ ಚೈತ್ರಾ ಅವರಿಗೆ ತಾವೇನೂ ತೊಂದರೆ ಮಾಡಿಲ್ಲ ಎಂದರು. ಚೈತ್ರಾ ಅವರನ್ನು ಯಾರೋ ದಾರಿ ತಪ್ಪಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.

  • ಗಂಡನ ಕರಾಳ ಮುಖ ಬಿಚ್ಚಿಟ್ಟ ನಟಿ ಚೈತ್ರಾ ಹಳ್ಳಿಕೇರಿ ಯಾರು?

    ಗಂಡನ ಕರಾಳ ಮುಖ ಬಿಚ್ಚಿಟ್ಟ ನಟಿ ಚೈತ್ರಾ ಹಳ್ಳಿಕೇರಿ ಯಾರು?

    ರಡು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ನಟಿ ಚೈತ್ರಾ ಹಳ್ಳಿಕೇರಿ ಅವರ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತಿದೆ. ತಮ್ಮ ಪತಿ ಮತ್ತು ಅವರ ಕುಟುಂಬದವರು ತಮಗೆ ಮೋಸ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಚೈತ್ರಾ ಹಳ್ಳಿಕೇರಿ, ತಮ್ಮ ಪತಿಯಿಂದ ದೈಹಿಕ ಹಲ್ಲೆಗೊಳಗಾಗಿರುವೆ ಎಂದೂ ಹೇಳಿದ್ದಾರೆ. ಅಲ್ಲದೇ, ಇದೀಗ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು ಪತಿಯ ಕುಟುಂಬ ತಮಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ : ನಿಮ್ಮ ಬಾಡಿಯನ್ನು ನೀವೇ ಲವ್ ಮಾಡಬೇಕು : ರಾಗಿಣಿ

    ಕೌಟುಂಬಿಕ ಕಾರಣಕ್ಕಾಗಿ ಚೈತ್ರಾ ಹಳ್ಳಿಕೇರಿ ಸುದ್ದಿ ಆಗಿದ್ದು, ಇದೇ ಮೊದಲೇನೂ ಅಲ್ಲ. ಈ ಹಿಂದೆ 2018ರಲ್ಲೂ ಅವರು ಪತಿಯ ವಿರುದ್ಧ ದೂರು ದಾಖಲಿಸಿದ್ದರು. ತಮಗೆ ಪತಿಯಿಂದ ವಿಪರೀತ ಹಿಂಸೆ ಆಗುತ್ತಿದೆ. ಹಾಗೂ ತಾವು ನಿರ್ಮಿಸಿದ್ದ ಧಾರಾವಾಹಿಯಿಂದ ಬಂದ ಹಣವನ್ನೂ ಅವರು ಕಿತ್ತುಕೊಂಡಿದ್ದಾರೆ ಎಂದು ದೂರು ಕೊಟ್ಟಿದ್ದರು. ಆನಂತರ ಪತಿಯೊಂದಿಗೆ ಜೀವನ ನಡೆಸುತ್ತೇನೆ ಎಂದು ಒಪ್ಪಂದಕ್ಕೂ ಬಂದಿದ್ದರು. ಇದನ್ನೂ ಓದಿ : ಸದ್ದಿಲ್ಲದೇ ಶುರುವಾಯ್ತು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ : ಮೊದಲ ದಿನವೇ ಫೋಟೋ ಲೀಕ್

    ಇದೀಗ ಮತ್ತೆ ಚೈತ್ರಾ ಹಳ್ಳಿಕೇರಿ ತಮ್ಮ ಪತಿಯ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ತಮಗೆ ಗೊತ್ತೇ ಇಲ್ಲದಂತೆ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಸಾಲ ತಗೆದುಕೊಂಡಿದ್ದಾರೆ ಹಾಗೂ ತಮ್ಮದೇ ಗೋಲ್ಡ್ ಅಡವಿಟ್ಟು, ಪತಿಯು ಸಾಲ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಜೊತೆ ಹೊಂದಾಣಿಕೆ ಸಾಧ್ಯವಿಲ್ಲ. ಹಾಗಾಗಿ ಅವರಿಂದ ದೂರವಾಗುವುದು ನಿಶ್ಚಿತ ಎಂದೂ ಹೇಳಿದ್ದಾರೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

    ಇಷ್ಟೆಲ್ಲ ಆರೋಪ ಮಾಡುತ್ತಿರುವ ಚೈತ್ರಾ ಹಳ್ಳಿಕೇರಿ ಯಾರು ಎನ್ನುವ ಕುತೂಹಲ ಸಿನಿಮಾ ಪ್ರೇಮಿಗಳದ್ದು. ವೆಲ್ ಡನ್ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದವರು ಚೈತ್ರಾ ಹಳ್ಳಿಕೇರಿ. ಆನಂತರ ಗೌಡ್ರು,  ಖುಷಿ, ಶಿಷ್ಯ, ಗುನ್ನ, ಪಾರ್ಥ, ಶ್ರೀ ದಾನಮ್ಮ ದೇವಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಮದುವೆಯ ನಂತರ ಸಿನಿಮಾ ರಂಗದಿಂದಲೇ ದೂರವಾದರು. ಇದೀಗ ಮತ್ತೆ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

  • ಪತಿ, ಮಾವನ ವಿರುದ್ಧವೇ ದೂರು ದಾಖಲಿಸಿದ ನಟಿ ಚೈತ್ರಾ ಹಳ್ಳಿಕೇರಿ

    ಪತಿ, ಮಾವನ ವಿರುದ್ಧವೇ ದೂರು ದಾಖಲಿಸಿದ ನಟಿ ಚೈತ್ರಾ ಹಳ್ಳಿಕೇರಿ

    ಮೈಸೂರು: ಪತಿ ಮತ್ತು ಮಾವನ ವಿರುದ್ಧವೇ ಚಲನಚಿತ್ರ ನಟಿ ಚೈತ್ರಾ ಹಳ್ಳಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪತಿ ಮತ್ತು ಮಾವ ತನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡು ಗೋಲ್ಡ್ ಲೋನ್ ಪಡೆದಿದ್ದಾರೆ ಎಂದು ನಟಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟುವಾಗ ಕುಸಿದುಬಿದ್ದಂತೆ ವಧು ನಾಟಕ – ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ

    ಗಂಡ ಬಾಲಾಜಿ ಪೋತರಾಜ್ ಹಾಗೂ ಮಾವ ಪೋತರಾಜ್, ತಮ್ಮ ಸಹಿ ಫೋರ್ಜರಿ ಮಾಡಿ ಗೋಲ್ಡ್ ಪಡೆದಿದ್ದಾರೆ. ಇದರಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ. ನನಗೆ ವಂಚನೆ ಮಾಡಿ ಜೀವಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ.