Tag: Chaitra Acharya

  • ಡಾಲಿ ನಟನೆಯ ‘ಉತ್ತರಕಾಂಡ’ ಟೀಮ್ ಸೇರಿಕೊಂಡ ಚೈತ್ರಾ ಆಚಾರ್

    ಡಾಲಿ ನಟನೆಯ ‘ಉತ್ತರಕಾಂಡ’ ಟೀಮ್ ಸೇರಿಕೊಂಡ ಚೈತ್ರಾ ಆಚಾರ್

    ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಶಿವರಾಜ್ ಕುಮಾರ್ ಕಾಂಬಿನೇಷನ್ ನ ಉತ್ತರ ಕಾಂಡ (Uttarkanda) ಸಿನಿಮಾದಲ್ಲಿ ಚೈತ್ರಾ ಆಚಾರ್ಯ್ (Chaitra Acharya)  ಕೂಡ ನಟಿಸುತ್ತಿದ್ದಾರೆ. ಚೈತ್ರ ಆಚಾರ್ ಉತ್ತರಕಾಂಡ ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಇಂದು ಚಿತ್ರೀಕರಣದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಲಚ್ಚಿ (Lacchi) ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ.

    ಉತ್ತರಕಾಂಡ’ದ ಮುಹೂರ್ತ 2022ರಲ್ಲಿ ಆಗಿದ್ದು, ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ, ಹಾಗೂ ಚಿತ್ರವು ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲ್ಯಾನಿಂಗ್ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೆ ಇದೀಗ ಸರ್ವ ಸಿದ್ಧತೆಗಳೊಂದಿಗೆ ಏ.15 ರಿಂದ ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರತಂಡದವರು ಉತ್ಸುಕರಾಗಿದ್ದಾರೆ.

     

    ‘ಉತ್ತರಕಾಂಡ’ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shivarajukumar) ಮತ್ತು ಡಾಲಿ ಧನಂಜಯ್ (Daali Dhananjay) ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಪದಕಿ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ- ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಸಾಥ್‌ ನೀಡುತ್ತಿದ್ದಾರೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ (ಡಿಸೈನ್) ಮಾಡಲಿದ್ದಾರೆ. ಬಹುದೊಡ್ಡ ತಾರಾಬಳಗವನ್ನು ಹೊಂದಿರುವ ಈ ಚಿತ್ರ, ತಾರಾಬಳಗವನ್ನು ಈ ವಾರ ಘೋಷಿಸಲಿದೆ.

  • ರಶ್ಮಿಕಾ ಡೀಪ್‌ಫೇಕ್‌ ವಿಡಿಯೋ : ಕನ್ನಡದ ನಟಿಯರ ಆತಂಕ

    ರಶ್ಮಿಕಾ ಡೀಪ್‌ಫೇಕ್‌ ವಿಡಿಯೋ : ಕನ್ನಡದ ನಟಿಯರ ಆತಂಕ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋ (Deep Fake Video) ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸ್ವತಃ ಕೇಂದ್ರ ಸರಕಾರವೇ ಈ ಕುರಿತು ಪ್ರತಿಕ್ರಿಯಿಸಿತ್ತು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಆಕ್ರೋಶ ಹೊರ ಹಾಕಿದ್ದರು. ಇದೀಗ ಕನ್ನಡದ ನಟಿಯರಾದ ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ (Rukmini) ಕೂಡ ಈ ಕುರಿತು ಮಾತನಾಡಿದ್ದಾರೆ. ಈ ನಡೆ ಅಪಾಯಕಾರಿಯಾದದ್ದು ಎಂದಿದ್ದಾರೆ.

    ಇಂತಹ ದುಷ್ಟ ನಡೆಯನ್ನು ಮುಲಾಜಿಲ್ಲದೇ ಎಲ್ಲರೂ ಖಂಡಿಸಬೇಕು. ಮೊದಲು ಇಂತಹ ಆಪ್ ಗಳನ್ನು ನಟಿಯರೇ ಬ್ಯಾನ್ ಮಾಡಬೇಕು. ಎಲ್ಲ ರೀತಿಯಲ್ಲೂ ಇದನ್ನು ನಾವು ವಿರೋಧಿಸಬೇಕು. ಸೆಲೆಬ್ರಿಟಿಗಳಿಗೆ ಹೀಗೆ ಆದರೆ, ಸಾಮಾನ್ಯ ಇನ್ನೆಷ್ಟು ಕಷ್ಟ ಪಡಲ್ಲ ಎಂದು ನಟಿಯರು ಮಾತನಾಡಿದ್ದಾರೆ.

    ವಿಜಯ್ ದೇವರಕೊಂಡ ಆಕ್ರೋಶ

    ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್‌ ವಿಡಿಯೋ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಪರ ಬಿಗ್ ಬಿ, ನಾಗಚೈತನ್ಯ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ಧ್ವನಿಯೆತ್ತಿದ್ದಾರೆ. ಈ ಬೆನ್ನಲ್ಲೇ, ಗೆಳತಿ ರಶ್ಮಿಕಾ ಪರ ವಿಜಯ್ ದೇವರಕೊಂಡ (Vijay Devarakonda) ಕೂಡ ಮಾತನಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ವಿಜಯ್ ಕಿಡಿಕಾರಿದ್ದಾರೆ.‌

    ರಶ್ಮಿಕಾ ಡೀಪ್‌ಫೇಕ್‌ ವಿಡಿಯೋ ವೈರಲ್ ಆದ ಬಳಿಕ ಡೀಪ್ ಫೇಕ್‌ರ್ಸ್ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಎಂದು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, ಭವಿಷ್ಯಕ್ಕಾಗಿ ಇದು ಮುಖ್ಯವಾದ ಕ್ರಮ. ಇದು ಯಾರಿಗೂ ಆಗಬಾರದು. ಸೈಬರ್ ಕ್ರೈಮ್ ತೆಡೆಯಲು ಸಮರ್ಥವಾದ ಮತ್ತು ಸುಲಭಕ್ಕೆ ಜನರ ಸಂಪರ್ಕಕ್ಕೆ ಸಿಗುವಂತಹ ಸೈಬರ್ ಘಟಕ ಎಲ್ಲರಿಗೂ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾದರೆ ಜನರಿಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.

     

    ವಿಜಯ್- ರಶ್ಮಿಕಾ (Rashmika) ತೆಲುಗು ಸಿನಿಮಾರಂಗದಲ್ಲಿ ಬೆಸ್ಟ್ ಜೋಡಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇಬ್ಬರ ಬಗ್ಗೆ ಡೇಟಿಂಗ್ ರೂಮರ್ ಇದ್ದರೂ ಕೂಡ ಈ ಜೋಡಿ ಇದನ್ನ ಒಪ್ಪಿಕೊಂಡಿಲ್ಲ. ಆದರೆ ಒಬ್ಬರಿಗೊಬ್ಬರು ಬೆಂಬಲಿಸುತ್ತಲೇ ಬಂದಿದ್ದಾರೆ. ಒಟ್ನಲ್ಲಿ ವಿಜಯ್ ನಡೆ ಫ್ಯಾನ್ಸ್ ಖುಷಿಕೊಟ್ಟಿದೆ.