ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದವರು ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ ವಸಂತ್ (Rukmini Vasant). ಈ ಜೋಡಿಯು ಚಿತ್ರದಲ್ಲಿ ಸಖತ್ ಮೋಡಿ ಮಾಡಿತ್ತು. ಅಲ್ಲಿಂದ ಈ ಜೋಡಿ ಸದಾ ಜೊತೆಯಾಗಿಯೇ ಇರುತ್ತದೆ. ಒಬ್ಬರಿಗೊಬ್ಬರ ಸಿನಿಮಾಗಳನ್ನು ಪ್ರಮೋಟ್ ಮಾಡ್ತಾ, ಇತರರ ಚಿತ್ರಗಳಿಗೂ ಪ್ರೋತ್ಸಾಹ ನೀಡುತ್ತಾ ತಮ್ಮ ಗೆಳೆತನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ರುಕ್ಮಿಣಿ ವಸಂತ್ ಜೊತೆಗಿರುವ ಫೋಟೋವೊಂದನ್ನು ಚೈತ್ರಾ ಆಚಾರ್ ಪೋಸ್ಟ್ ಮಾಡಿ, ನನ್ನ ಜೀವನದಲ್ಲಿ ಸಿಕ್ಕಿ ಬೆಸ್ಟ್ ಗಿಫ್ಟ್ ಅಂದರೆ ಅದು ರುಕ್ಮಿಣಿ ವಸಂತ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರುಕ್ಮಿಣಿ ಅವರಿಗೆ ತಮ್ಮ ಜೀವನದಲ್ಲಿ ಯಾವ ರೀತಿಯ ಮಹತ್ವವನ್ನು ನೀಡಲಾಗಿದೆ ಎನ್ನುವುದನ್ನು ಸಾರಿದ್ದಾರೆ.
ಚೈತ್ರಾ ಆಚಾರ್ ಅವರು ಹೊಸ ಹೊಸ ಪಾತ್ರಗಳಿಗೆ ಕಾದು ಕೂತಿದ್ದರೆ, ರುಕ್ಮಿಣಿ ವಸಂತ್ ಈಗಾಗಲೇ ರಾಜ್ಯದ ಗಡಿದಾಟಿ ಬೇರೆ ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಮಿಳು ಸಿನಿಮಾವೊಂದರ ಶೂಟಿಂಗ್ ನಲ್ಲೂ ಅವರು ಭಾಗಿಯಾಗಿದ್ದಾರೆ.
ದೀಕ್ಷಿತ್ ಶೆಟ್ಟಿ (Dixit Shetty) ಹಾಗೂ ಚೈತ್ರ ಆಚಾರ್ (Chaitra Achar) ಮುಖ್ಯಭೂಮಿಯಲ್ಲಿ ನಟಿಸಿರುವ ‘ಬ್ಲಿಂಕ್’ (Blink) ಚಿತ್ರತಂಡ, ಚಿತ್ರೀಕರಣದ ದಿನದಿಂದಲೂ ತಮ್ಮ ವಿನೂತನ ಪ್ರಚಾರ ತಂತ್ರಗಳಿಂದ ಚಂದನವನದಲ್ಲಿ ಗಮನ ಸೆಳೆದಿದೆ. ತಮ್ಮ ಚಿತ್ರವನ್ನು ಜನರಿಗೆ ಮುಟ್ಟಿಸುವಲ್ಲಿ ಗೆಲ್ಲಲೇಬೇಕು ಎಂದು ಶಪಥ ಮಾಡಿರುವ ಈ ತಂಡ ಯಾವುದೇ ಮುಚ್ಚು ಮರೆ ಇಲ್ಲದೆ , ನೂತನ ಚಿತ್ರಗಳನ್ನು ಕಟ್ಟುವಲ್ಲಿ , ಜನರಿಗೆ ತಲುಪಿಸುವಲ್ಲಿ ಇರುವ ಸಮಸ್ಯೆಗಳನ್ನು ತಿಳಿಸಲು ವಿನೂತನ ಪ್ರಯೋಗ ಮಾಡಿದ್ದು ‘ಜನರಿಂದಲೇ ಸಿನಿಮಾ, ಜನರೇ ಸಿನಿಮಾ’ ಎಂಬಾ ವಿಶಿಷ್ಟ ಸಾಲುಗಳು ಜನರ ಮನಸ್ಸನ್ನು ಗೆಲ್ಲುತ್ತಿವೆ. ಚಿತ್ರಮಂದಿರದಿಂದ ದೂರ ಉಳಿದಿರುವ ಜನರಿಗೆ, ಮತ್ತೆ ಚಿತ್ರಮಂದಿರದ ಆ ಮಾಂತ್ರಿಕ ಜಗತ್ತಿನ ವಿಶೇಷತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಈಗಾಗಲೇ ತಮ್ಮ ಹೊಸತನದಿಂದ ಜನರ ಗಮನಸೆಳೆದಿರುವ ಬ್ಲಿಂಕ್ ತಂಡವು ಮಾರ್ಚ್ ನಲ್ಲಿ ಚಿತ್ರಮಂದಿರದೊಳಗೆ ಪ್ರವೇಶಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಜನನಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರವು ಸೈಫೈ ಪ್ರಕಾರದ ಚಿತ್ರವಾಗಿದ್ದು ಪ್ರೇಕ್ಷಕರನ್ನು ಸೆಳಿದಿಟ್ಟುಕೊಳ್ಳುವುದು ಖಂಡಿತವೆಂದು ನಿರ್ಮಾಪಕ ರವಿಚಂದ್ರ ಎ ಜೆ ಹೇಳುತ್ತಾರೆ .
ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಚಿತ್ರದ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರುರವರು, ಇದೊಂದು ಕಾಲ್ಪನಿಕ ಕಥೆಯಾಗಿದ್ದು ..ಕನ್ನಡ ಚಿತ್ರರಂಗದಲ್ಲಿ ಈ ಪ್ರಕಾರದ ಚಿತ್ರಗಳು ತೀರಾ ಕಡಿಮೆ ತೆರೆಕಂಡಿದ್ದು ಈ ಚಿತ್ರವು ನೋಡುಗರಲ್ಲಿ ಹೊಸತನ ಮೂಡಿಸುತ್ತದೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಹೇಳುತ್ತಾರೆ ದಿಯಾ, ದಸರಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿಯವರು ನಾಯಕ ನಟನ ಜವಬ್ದಾರಿಯನ್ನು ಹೊತ್ತಿದ್ದಾರೆ.. ಹಾಗೂ ಹೊಸ ದಿನಚರಿ ಖ್ಯಾತಿಯ ಮಂದಾರ ಬಟ್ಟಲಹಳ್ಳಿ ನಾಯಕಿನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚಿಗೆ ತೆರೆಕಂಡ ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ 2 ಚಿತ್ರದ ಸುರಭಿ ಪಾತ್ರಧಾರಿ ಚೈತ್ರ ಜೆ ಆಚಾರ್ ಬ್ಲಿಂಕ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ ಹಾಗೂ ವಜ್ರಧೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್, ಮುರುಳಿ ಶೃಂಗೇರಿ, ಸುರೇಶ್ ಅನಗಹಳ್ಳಿ ಸೇರಿದಂತೆ ಇನ್ನು ದೊಡ್ಡ ತಾರಬಳಗವಿದೆ. ಈ ಚಿತ್ರಕ್ಕೆ ಪ್ರಸನ್ನ ಕುಮಾರ್ ಎಂ ಎಸ್ ರವರ ಸಂಗೀತ ನಿರ್ದೇಶನವಿದ್ದು , ಅವಿನಾಶ ಶಾಸ್ರ್ತಿ ಅವರ ಕ್ಯಾಮೆರಾ ಕೈ ಚಳಕವಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ (Deep Fake Video) ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸ್ವತಃ ಕೇಂದ್ರ ಸರಕಾರವೇ ಈ ಕುರಿತು ಪ್ರತಿಕ್ರಿಯಿಸಿತ್ತು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಆಕ್ರೋಶ ಹೊರ ಹಾಕಿದ್ದರು. ಇದೀಗ ಕನ್ನಡದ ನಟಿಯರಾದ ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ (Rukmini) ಕೂಡ ಈ ಕುರಿತು ಮಾತನಾಡಿದ್ದಾರೆ. ಈ ನಡೆ ಅಪಾಯಕಾರಿಯಾದದ್ದು ಎಂದಿದ್ದಾರೆ.
ಇಂತಹ ದುಷ್ಟ ನಡೆಯನ್ನು ಮುಲಾಜಿಲ್ಲದೇ ಎಲ್ಲರೂ ಖಂಡಿಸಬೇಕು. ಮೊದಲು ಇಂತಹ ಆಪ್ ಗಳನ್ನು ನಟಿಯರೇ ಬ್ಯಾನ್ ಮಾಡಬೇಕು. ಎಲ್ಲ ರೀತಿಯಲ್ಲೂ ಇದನ್ನು ನಾವು ವಿರೋಧಿಸಬೇಕು. ಸೆಲೆಬ್ರಿಟಿಗಳಿಗೆ ಹೀಗೆ ಆದರೆ, ಸಾಮಾನ್ಯ ಇನ್ನೆಷ್ಟು ಕಷ್ಟ ಪಡಲ್ಲ ಎಂದು ನಟಿಯರು ಮಾತನಾಡಿದ್ದಾರೆ.
ವಿಜಯ್ ದೇವರಕೊಂಡ ಆಕ್ರೋಶ
ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಪರ ಬಿಗ್ ಬಿ, ನಾಗಚೈತನ್ಯ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ಧ್ವನಿಯೆತ್ತಿದ್ದಾರೆ. ಈ ಬೆನ್ನಲ್ಲೇ, ಗೆಳತಿ ರಶ್ಮಿಕಾ ಪರ ವಿಜಯ್ ದೇವರಕೊಂಡ (Vijay Devarakonda) ಕೂಡ ಮಾತನಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ವಿಜಯ್ ಕಿಡಿಕಾರಿದ್ದಾರೆ.
ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ ಡೀಪ್ ಫೇಕ್‌ರ್ಸ್ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಎಂದು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, ಭವಿಷ್ಯಕ್ಕಾಗಿ ಇದು ಮುಖ್ಯವಾದ ಕ್ರಮ. ಇದು ಯಾರಿಗೂ ಆಗಬಾರದು. ಸೈಬರ್ ಕ್ರೈಮ್ ತೆಡೆಯಲು ಸಮರ್ಥವಾದ ಮತ್ತು ಸುಲಭಕ್ಕೆ ಜನರ ಸಂಪರ್ಕಕ್ಕೆ ಸಿಗುವಂತಹ ಸೈಬರ್ ಘಟಕ ಎಲ್ಲರಿಗೂ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾದರೆ ಜನರಿಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.
ವಿಜಯ್- ರಶ್ಮಿಕಾ (Rashmika) ತೆಲುಗು ಸಿನಿಮಾರಂಗದಲ್ಲಿ ಬೆಸ್ಟ್ ಜೋಡಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇಬ್ಬರ ಬಗ್ಗೆ ಡೇಟಿಂಗ್ ರೂಮರ್ ಇದ್ದರೂ ಕೂಡ ಈ ಜೋಡಿ ಇದನ್ನ ಒಪ್ಪಿಕೊಂಡಿಲ್ಲ. ಆದರೆ ಒಬ್ಬರಿಗೊಬ್ಬರು ಬೆಂಬಲಿಸುತ್ತಲೇ ಬಂದಿದ್ದಾರೆ. ಒಟ್ನಲ್ಲಿ ವಿಜಯ್ ನಡೆ ಫ್ಯಾನ್ಸ್ ಖುಷಿಕೊಟ್ಟಿದೆ.
ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ- ಟೋಬಿ ಬ್ಯೂಟಿ ಚೈತ್ರ ಜೆ ಆಚಾರ್ (Chaitra J Achar) ನಟನೆಯ ‘ಬ್ಲಿಂಕ್’ (Blink) ಸಿನಿಮಾ ಆಗಂತುಕ ಸಾಂಗ್ ರಿಲೀಸ್ ಆಗಿದೆ. ಚಿತ್ರದ ಫಸ್ಟ್ ಸಾಂಗ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಶ್ರೀಯುತ ರವಿಚಂದ್ರ ಎ ಜೆ ರವರ ನಿರ್ಮಿಸುತ್ತಿರುವ, ಶ್ರೀನಿಧಿ ಬೆಂಗಳೂರು ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಚಿತ್ರ ಬ್ಲಿಂಕ್ ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿ ಬೆಳ್ಳಿಪರದೆಗೆ ಅಬ್ಬರಿಸಲು ಸಜ್ಜಾಗಿದೆ. ಇದನ್ನೂ ಓದಿ:ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?
ನಮ್ಮ ಮಣ್ಣಿನ ಪ್ರಖ್ಯಾತ ರ‍್ಯಾಪರ್ ಆದ ಅನೂಪ್ ಇವರು ರಾಪ್ ಭಾಗವನ್ನು ಅತ್ಯುತ್ತಮವಾದ ಸಾಹಿತ್ಯದ ಜೊತೆಗೆ ಅವರ ದನಿಯ ಮೂಲಕ ಮೆರಗು ನೀಡಿದ್ದಾರೆ. ‘ಬ್ಲಿಂಕ್’ ಚಿತ್ರದ ಸಂಗೀತ ನಿರ್ದೇಶಕರಾದ ಪ್ರಸನ್ನ ಕುಮಾರ್ ಎಂ.ಎಸ್ ರವರು ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಕೌಮುದಿಯವರು ಈ ಹಾಡಿಗೆ ದನಿಯಾಗುವ ಮೂಲಕ ಕನ್ನಡ ನಾಡಿನ ಜನತೆಗೆ ಪರಿಚಯವಾಗಿದ್ದಾರೆ.
ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ದೀಕ್ಷಿತ್ ಶೆಟ್ಟಿ(Dheekshith Shetty), ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ವಜ್ರಧೀರ್ ಜೈನ್, ಗೋಪಾಲ ಕೃಷ್ಣದೇಶಪಾಂಡೆ, ಕಿರಣ್ ನಾಯ್ಕ್ ಮತ್ತು ಹಲವಾರು ಕಲಾವಿದರ ತಾರಗಣವಿದ್ದು, ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ, ಮತ್ತು ಸಂಜೀವ್ ಜಾಗಿರ್ದಾರ್ ರವರ ಸಂಕಲನವಿದೆ.
ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ರವಿಚಂದ್ರ ಎ ಜೆ ನಿರ್ಮಿಸುತ್ತಿರುವ , ಶ್ರೀನಿಧಿ ಬೆಂಗಳೂರು (Srinidhi Bangalore) ನಿರ್ದೇಶನದ ಚೊಚ್ಚಲ ಸಿನಿಮಾ ‘ಬ್ಲಿಂಕ್’ (Blink). ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿ ಬೆಳ್ಳಿಪರದೆಗೆ ಬರಲು ಸಿನಿಮಾ ಸಜ್ಜಾಗಿದೆ.
ಈ ನಿಟ್ಟಿನಲ್ಲಿ ಚಿತ್ರದ ಮೊದಲನೇ ಹಾಡನ್ನು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ರಿಲೀಸ್ ಮಾಡಿದೆ. ಇದು ರಾಪ್ ಶೈಲಿಯ ಹಾಡಾಗಿದ್ದು (Song) ಭಾರತದ ಪಾರಂಪರಿಕ ಸಂಗೀತವನ್ನು ಒಳಗೊಂಡಿದೆ. ಇದನ್ನೂ ಓದಿ:ಅಪ್ಪನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರೂಪೇಶ್ ಶೆಟ್ಟಿ
ನಮ್ಮ ಮಣ್ಣಿನ ಪ್ರಖ್ಯಾತ ರಾಪರ್ ಆದ ಅನೂಪ್ ( ಕಾಟಕೊಡು) ರಾಪ್ ಭಾಗವನ್ನು ಅತ್ಯುತ್ತಮವಾದ ಸಾಹಿತ್ಯದ ಜೊತೆಗೆ ಅವರ ದನಿಯ ಮೂಲಕ ಮೆರಗು ನೀಡಿದ್ದಾರೆ. ಬ್ಲಿಂಕ್ ಚಿತ್ರದ ಸಂಗೀತ ನಿರ್ದೇಶಕರಾದ ಪ್ರಸನ್ನ ಕುಮಾರ್ ಎಂ ಎಸ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಕೌಮುದಿಯವರು ಈ ಹಾಡಿಗೆ ದನಿಯಾಗುವ ಮೂಲಕ ಕನ್ನಡ ನಾಡಿನ ಜನತೆಗೆ ಪರಿಚಯವಾಗಲಿದ್ದಾರೆ.
ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ದೀಕ್ಷಿತ್ ಶೆಟ್ಟಿ(Dixit Shetty) , ಚೈತ್ರ ಜೆ ಆಚಾರ್ (Chaitra Achar), ಮಂದಾರ ಬಟ್ಟಲಹಳ್ಳಿ , ವಜ್ರಧೀರ್ ಜೈನ್ , ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಮತ್ತು ಹಲವಾರು ಕಲಾವಿದರ ತಾರಾಗಣದಲ್ಲಿದ್ದು, ಅವಿನಾಶ ಶಾಸ್ರ್ತಿ ಛಾಯಾಗ್ರಹಣ, ಮತ್ತು ಸಂಜೀವ್ ಜಾಗಿರ್ದಾರ್ ಸಂಕಲನವಿದೆ., ಆಗಂತುಕ ಶೀರ್ಷಿಕೆಯೊಂದಿಗೆ ಹೊರ ಬರುತ್ತಿರುವ ಈ ಹಾಡು ಆಗಸ್ಟ್ 15 ರಂದು ಲಾಲ್ ಭಾಗ್ ನಲ್ಲಿ ಪುಷ್ಪ ಪ್ರದರ್ಶನದಲ್ಲಿ ಬಿಡುಗಡೆಯಾಗಿದೆ.
ತಮ್ಮ ಸಹಜ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಟೋಬಿ’ (Toby) ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ಫಸ್ಟ್ ಲುಕ್ ಭಾರೀ ಕುತೂಹಲ ಮೂಡಿಸಿದೆ. ರಾಜ್ ಬಿ ಶೆಟ್ಟಿ (Raj B Shetty) ಫಸ್ಟ್ ಲುಕ್ (First Look) ನಲ್ಲಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ. ಕುರುಚಲು ಗಡ್ಡ, ಮೂಗಿನಲ್ಲಿ ದೊಡ್ಡ ಮೂಗುತಿ, ತಲೆ ಹಾಗೂ ಮೂಗಿನಲ್ಲಿ ರಕ್ತದ ಕಲೆಯಿಂದ ಕೂಡಿರುವ ಗಾಯ ಹೀಗೆ ಹಲವು ವಿಶೇಷತೆಗಳುಳ್ಳ ಈ ವಿಭಿನ್ನ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಟೀಸರ್, ಟ್ರೇಲರ್ ಸದ್ಯದಲ್ಲೇ ಬರಲಿದೆ.
ಬರಹಗಾರ ಟಿ.ಕೆ.ದಯಾನಂದ್ ‘ಟೋಬಿ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಾನು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. ನೀವೊಬ್ಬರನ್ನು ನೋಡಿದಾಗ ಇವರು ಇಂತಹವರು ಅಂತ ಹೇಳಬಹುದು. ಆದರೆ ಈ ವ್ಯಕ್ತಿಯನ್ನು ಆ ರೀತಿ ಹೇಳಲಾಗದು. ನಾನು ಆತನ ಕುರಿತು ಕಥೆ ಬರೆದಿದ್ದೇನೆ. ಅದು ಈಗ ಟೋಬಿ ಚಿತ್ರವಾಗಿದೆ ಎಂದು ಟಿ.ಕೆ.ದಯಾನಂದ್ ತಿಳಿಸಿದರು. ಇದನ್ನೂ ಓದಿ:‘ಕೃಷ್ಣಂ ಪ್ರಣಯ ಸಖಿ’ಯಾಗಿ ಲವರ್ ಬಾಯ್ ಲುಕ್‌ನಲ್ಲಿ ಗೋಲ್ಡನ್ ಸ್ಟಾರ್ ಎಂಟ್ರಿ
ಸಿನಿಮಾ ನೋಡಲು ಬಂದ ಪ್ರೇಕ್ಷಕನಿಗೆ ಮೊದಲು ಸಿನಿಮಾ ಇಷ್ಟ ಆಗಬೇಕು. ಅಂತಹ ಸಿನಿಮಾ ಮಾಡುವ ಆಸೆ ನನಗೆ. ಟೋಬಿ ಫ್ಯಾಮಿಲಿ ಎಂಟರ್ ಟೈನರ್ ಚಿತ್ರ ಎನ್ನಬಹುದು. ನೀವು ಫಸ್ಟ್ ಲುಕ್ ನಲ್ಲಿ ನೋಡುತ್ತಿರುವುದು ಚಿತ್ರದ ಒಂದು ಭಾಗವಷ್ಟೆ. ಇಡೀ ಚಿತ್ರ ಈ ರೀತಿ ಇರುವುದಿಲ್ಲ. ನನಗೆ ಈ ಚಿತ್ರದ ಕಥೆ ಹೊಸತು ಎನಿಸಿತು. ನನ್ನ ಪಾತ್ರ ಕೂಡ ಹಿಂದಿನ ಚಿತ್ರಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ನನಗೆ ಗೊತ್ತಿಲ್ಲದ ವಿಷಯವನ್ನು ಕಲಿತು ಈ ಚಿತ್ರದಲ್ಲಿ ಹೇಳಿದ್ದೇನೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎನ್ನುತ್ತಾರೆ ರಾಜ್ ಬಿ ಶೆಟ್ಟಿ.
ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲಂಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ನಿರ್ದೇಶಕ ಬಾಸಿಲ್, ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್, ಚಿತ್ರದ ನಾಯಕಿಯರಾದ ಸಂಯುಕ್ತ ಹೊರನಾಡು (Samyukta Horanadu), ಚೈತ್ರಾ ಆಚಾರ್ (Chaitra Achar) ಚಿತ್ರದಲ್ಲಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಶ್ರೀಕಾಂತ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ “ಟೋಬಿ” ಚಿತ್ರದ ಕುರಿತು ಮಾತನಾಡಿದರು. ಟೋಬಿ ಚಿತ್ರಕ್ಕೆ ‘ಮಾರಿ ಮಾರಿ ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್ ಬಿ ಶೆಟ್ಟಿ ಅವರ ಈ ಹಂದಿನ ಚಿತ್ರಗಳಿಗಿಂತ ಟೋಬಿ ಬಿಗ್ ಬಜೆಟ್ ನ ಚಿತ್ರವಾಗಿದೆ.
‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradacche Yello) ಚಿತ್ರದ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ. ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಹಂಚಿಕೊಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?
‘ಮಹಿರ’ (Mahira) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಚೈತ್ರಾ ಆಚಾರ್ (Chaithra Achar) ಅವರು ಆ ದೃಶ್ಯ, ಗಿಲ್ಕಿ, ತಲೆದಂಡ (Thaledanda) ಸಿನಿಮಾಗಳಲ್ಲಿ ನಾಯಕಿ ನಟಿಸಿದ್ದಾರೆ. ಗಾಯಕಿಯಾಗಿಯೂ ಚೈತ್ರಾ ಆಚಾರ್ ಗುರುತಿಸಿಕೊಂಡಿದ್ದಾರೆ. ಸಾರ್ವಜನಿಕರಿಗೆ ಸುವರ್ಣಾವಕಾಶ, ಮಯಾಬಜಾರ್ 2016, ಗರುಡ ಗಮನ ವೃಷಭ ವಾಹನ ಸಿನಿಮಾದ ಹಾಡುಗಳಿಗೆ ಚೈತ್ರಾ ಧ್ವನಿಯಾಗಿದ್ದಾರೆ.
ಬ್ಲೌಸ್ ಇಲ್ಲದೇ ಹಳದಿ ಬಣ್ಣದ ಸೀರೆಯುಟ್ಟು ನಟಿ ಚೈತ್ರಾ ಮಿಂಚಿದ್ದಾರೆ. ಹಳದಿ ಸೀರೆ ಕೆಂಪು ಬಣ್ಣದ ಬಾರ್ಡರ್ ಸೀರೆಯಲ್ಲಿ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಾಯಕಿ ಚೈತ್ರಾ ಆಚಾರ್ (Chaithra Achar) ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ತಮ್ಮ ಬೋಲ್ಡ್ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್
`ಮಹಿರ’ (Mahira) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೈತ್ರಾ, ಆ ದೃಶ್ಯ, ಗಿಲ್ಕಿ, ತಲೆದಂಡ ಚಿತ್ರಗಳಲ್ಲಿ ನಟಿಸಿದ್ದಾರೆ. `ತಲೆದಂಡ’ (Thaledanda) ಚಿತ್ರದಲ್ಲಿ ಚೈತ್ರಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಸಂಚಾರಿ ವಿಜಯ್ (Sanchari Vijay) ಜೊತೆ ನಟಿ ತೆರೆಹಂಚಿಕೊಂಡಿದ್ದರು.
ಕೆಂಪು ಬಣ್ಣದ ಮಾಡ್ರನ್ ಲುಕ್‌ನಲ್ಲಿ ನಟಿ ಚೈತ್ರಾ ಆಚಾರ್ ಮಿಂಚಿದ್ದಾರೆ. ರೆಟ್ರೋ ಸ್ಟೈಲಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಬಣ್ಣದ ಲೋಕದಲ್ಲಿ ದಿನ ಕಳೆದಂತೆ ಹೊಸ ಹೊಸ ನಾಯಕಿಯರ ಪರಿಚಯವಾಗ್ತಿದೆ. ಆದ್ರೆ ಪ್ರತಿಭೆಯ ಜೊತೆಗೆ ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರ್ತಾರೆ. ಈ ಸಾಲಿನಲ್ಲಿ ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಕೂಡ ಒಬ್ಬರು.
ಈಗಾಗಲೇ ಮಹಿರಾ, ಗಿಲ್ಕಿ, ತಲೆದಂಡ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ವಿಶೇಷ ಪಾತ್ರಗಳ ಮೂಲಕ ಮೋಡಿ ಮಾಡಿರೋ ನಟಿ ಚೈತ್ರಾ ಈಗ `ಅಕಟಕಟ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ..
ಈ ಹಿಂದೆ `ಪುಕ್ಸಟ್ಟೆ ಲೈಫು’ ಚಿತ್ರ ನಿರ್ಮಾಣ ಮಾಡಿದ್ದ ನಾಗರಾಜ್ ಸೋಮಯಾಜಿ ಇದೀಗ `ಅಕಟಕಟ’ ಚಿತ್ರದ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. `ಅಕಟಕಟ’ ಸಿನಿಮಾದಲ್ಲಿ ಜಾನಕಿ ಎಂಬ ಚೈತ್ರಾ ಆಚಾರ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಚಿತ್ರದ ನಾಯಕಿಯ ಲುಕ್‌ನ್ನ ಚಿತ್ರತಂಡ ಇದೀಗ ರಿವೀಲ್ ಮಾಡಿದೆ. ಸದಾ ಖುಷಿ ಖುಷಿಯಿಂದ ಜೀವನವನ್ನು ಜೀವಿಸುವ,ನೆಗೆಟಿವ್ ಬಿಟ್ಟು ಪಾಸಿಟಿವ್ ಬಗ್ಗೆ ಯೋಚಿಸುವ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಳ್ತಿದ್ದಾರೆ. ಇಂಥ ನಾಯಕಿಯ ಬದುಕಿಗೆ ನಾಯಕ ಎಂಟ್ರಿ ಕೊಟ್ಟಾಗ ಏನಾಗುತ್ತೇ ಅನ್ನೋದೇ ಚಿತ್ರದ ಸ್ಟೋರಿ. ಇದನ್ನು ಓದಿ: ಪುಷ್ಪ-2ನಲ್ಲೂ ಸಮಂತಾ- ಆದ್ರೆ ಐಟಂ ಸಾಂಗ್‌ನಲ್ಲಿ ಅಲ್ಲ?
ನಿರ್ದೇಶಕ ನಾಗರಾಜ್ ಸೋಮಯಾಜಿ ಮೂಲತಃ ಫೋಟೋಗ್ರಾಫರ್,ರಂಗಭೂಮಿಯಲ್ಲಿಯೂ ಸಕ್ರಿಯರಾಗಿರುವ ಅವರು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಈಗ `ಅಕಟಕಟ’ ಸಿನಿಮಾಗೆ ಚಿತ್ರಕಥೆ ಬರೆದು ಡೈರೆಕ್ಷನ್ ಕೂಡ ನಿರ್ದೇಶಕ ನಾಗರಾಜ್ ಅವರೇ ಮಾಡ್ತಿದ್ದಾರೆ. ಸದ್ಯ ಭಿನ್ನ ಟೈಟಲ್‌ನಿಂದ ಗಮನ ಸೆಳೆಯುತ್ತಿರೋ `ಅಕಟಕಟ’ ಚಿತ್ರ, ಮುಂದಿನ ದಿನಗಳಲ್ಲಿ ಅದ್ಯಾವ ರೀತಿ ಸೌಂಡ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.