Tag: chaithra rai

  • ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

    ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

    ‘ಆರ್‌ಆರ್‌ಆರ್’ (RRR) ಸೂಪರ್ ಸಕ್ಸಸ್ ನಂತರ ‘ಎನ್‌ಟಿಆರ್ 30’ ಚಿತ್ರದಲ್ಲಿ ತಾರಕ್ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ (Jr.ntr)  ಸಿನಿಮಾ ತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ತಾರಕ್ ಟೀಮ್‌ಗೆ ಬಾಲಿವುಡ್ (Bollywood) ಸ್ಟಾರ್ ಸೈಫ್ ಅಲಿ ಖಾನ್ (Saif Ali Khan) ಸೇರಿದ ಬಳಿಕ ಕನ್ನಡ ಕಿರುತೆರೆ ನಟಿಗೆ ಬಂಪರ್ ಆಫರ್ ಸಿಕ್ಕಿದೆ.

    ಕೊರಟಾಲ ಶಿವ ನಿರ್ದೇಶನದ ‘ಎನ್‌ಟಿಆರ್ 30’ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದೆ. ತಾರಕ್- ಜಾನ್ವಿ ಕಪೂರ್ (Janhavi Kapoor)  ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಬಿಟೌನ್ ಸೂಪರ್ ಹೀರೋ ಸೈಫ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್

    ತೆಲುಗಿನ ಈ ಸಿನಿಮಾ ಸೈಫ್ ಅಲಿ ಖಾನ್ ಪತ್ನಿ ಪಾತ್ರದಲ್ಲಿ ನಟಿಸಲು ಕರಾವಳಿ ನಟಿ ಚೈತ್ರಾ ರೈ (Chaithra Rai) ಅವರಿಗೆ ಚಾನ್ಸ್ ಸಿಕ್ಕಿದೆ. ಕನ್ನಡದ ರಾಧಾ ಕಲ್ಯಾಣ (Radha Kalyana) ಸೇರಿದಂತೆ ಹಲವು ಸೀರಿಯಲ್- ಸಿನಿಮಾಗಳಲ್ಲಿ ನಟಿಸಿದ್ದ ಚೈತ್ರಾ ಸೈಫ್‌ಗೆ ಪತ್ನಿಯಾಗಿ ಕಾಣಿಸಿಕೊಳ್ತಿದ್ದಾರೆ. ಚೈತ್ರಾ ರೈ ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಕನ್ನಡ- ತೆಲುಗು ಸೀರಿಯಲ್‌ನಲ್ಲಿ ಚೈತ್ರಾ ಆಕ್ಟೀವ್ ಆಗಿದ್ದಾರೆ. ಸದ್ಯ ತೆಲುಗಿನ ‘ರಾಧಕು ನೀವರೆ ಪ್ರಣಾಮ್’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಚೈತ್ರಾ ನಟಿಸುತ್ತಿದ್ದಾರೆ.

  • ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ

    ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ

    ಬೆಂಗಳೂರು: ಕಿರುತೆರೆ ನಟಿ ಚೈತ್ರಾ ರೈ ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ತಮ್ಮ ಮಗಳ ಫೋಟೋವನ್ನು ಇದೇ ಮೊದಲ ಸಲ ಪೋಸ್ಟ್ ಮಾಡಿದ್ದಾರೆ.

    ಆಗಸ್ಟ್ 16 ರಂದು ನಾನು ತಾಯಿಯಾದೆ. ನಾನು ಯಾರನ್ನೂ ಇಷ್ಟು ಪ್ರೀತಿಸಿಲ್ಲ. ನಾನು ತಾಯಿಯಾಗುವುದನ್ನು ಪ್ರೀತಿಸುತ್ತೇನೆ. ಮಾತೃತ್ವವು ನಿಜವಾದ ಆಶೀರ್ವಾದವಾಗಿದೆ ಎಂದು ಬರೆದುಕೊಂಡು ಅವರ ಮಗುವಿನ ಮುದ್ದಾದ ಫೋಟೋಗಳನ್ನು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಗರ್ಭಿಣಿ ಆಗಿರುವ ವಿಚಾರ, ಸೀಮಂತ ಶಾಸ್ತ್ರದ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗಸ್ಟ್ 16ರಂದು ಚೈತ್ರ ರಾವ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ನಿಷ್ಕಾ ಶೆಟ್ಟಿ ಎಂದು ನಾಮಕರಣವನ್ನು ಮಾಡಿದ್ದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.

     

    View this post on Instagram

     

    A post shared by Chaithra Rai (@chaithrarai17)

    ದೇವರು ಮನೆಗೆ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ಇಂದು ಹಿಂದೆಂದೂ ಅನುಭವಿಸದ ಭಾವನೆಯಾಗಿದೆ. ನಾನು ನನ್ನ ಪತಿ, ಕುಟುಂಬ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಸಣ್ಣ ಸಂತೋಷಕ್ಕೆ ಲೆಕ್ಕವಿಲ್ಲದಷ್ಟು ಆಶೀರ್ವಾದ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅಭಿಮಾನಿಗಳು ಇವರಿಗೆ ಕಾಮೆಂಟ್‍ಗಳ ಮೂಲಕ ಶುಭಾಶಯವನ್ನು ಕೋರಿದ್ದರು. ಇದೀಗ ಅವರು ಅವರ ಮುದ್ದು ಮಗಳಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

     

    View this post on Instagram

     

    A post shared by Chaithra Rai (@chaithrarai17)

    ಹಲವು ಕಾರಣಗಳಿಂದ ನಟನೆಯಿಂದ ದೂರವಿರುವ ಈ ನಟಿ ಪ್ರಸ್ತುತ ಚೈತ್ರಾ ರೈ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  • ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದ ನಟಿ ಚೈತ್ರಾ ರೈ

    ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದ ನಟಿ ಚೈತ್ರಾ ರೈ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಇತ್ತೀಚೆಗೆ ಇವರು ಗರ್ಭಿಣಿ ಆಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಸೀಮಂತ ಶಾಸ್ತ್ರದ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗಸ್ಟ್ 16ರಂದು ಚೈತ್ರ ರಾವ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ಸಮಾಚಾರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ

     

    View this post on Instagram

     

    A post shared by Chaithra Rai (@chaithrarai17)

    ದೇವರು ಮನೆಗ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ಇಂದು ಹಿಂದೆಂದೂ ಅನುಭವಿಸದ ಭಾವನೆಯಾಗಿದೆ. ನಾನು ನನ್ನ ಪತಿ, ಕುಟುಂಬ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಸಣ್ಣ ಸಂತೋಷಕ್ಕೆ ಲೆಕ್ಕವಿಲ್ಕದಷ್ಟು ಆಶೀರ್ವಾದಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಇವರಿಗೆ ಕಮೆಂಟ್ಸ್‍ಗಳ ಮೂಲಕ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಆತ್ಮ ಸಾಕ್ಷಿ ಅನುಸಾರ ತೀರ್ಮಾನ ತೆಗೆದುಕೊಳ್ಳುತ್ತೇನೆ: ಆನಂದ್ ಸಿಂಗ್

    ತುಂಬು ಗರ್ಭಿಣಿಯಾಗಿದ್ದಾಗ ಬೇಬಿ ಬಂಪ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಸೀಮಂತ ಕಾರ್ಯಕ್ರಮದ ಚಿತ್ರಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ತಾವು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಹಲವು ಕಾರಣಗಳಿಂದ ನಟನೆಯಿಂದ ದೂರವಿರುವ ಈ ನಟಿ ಪ್ರಸ್ತುತ ಚೈತ್ರ ರೈ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  • ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ

    ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ ಫೋಟೋವನ್ನು ಇನ್‍ಸ್ಟಾಗ್ರಾಮನ್‍ನಲ್ಲಿ ಶೇರ್ ಮಾಡಿದ್ದಾರೆ.

    ನಟಿ ಚೈತ್ರಾ ರೈ ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಚೈತ್ರಾ ರೈ ಹಾಗೂ ಪ್ರಸನ್ನ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿಗೆ ಇತ್ತೀಚೆಗಷ್ಟೆ ಸೀಮಂತ ಮಾಡಲಾಗಿದೆ. ಕೋವಿಡ್‍ನಿಂದಾಗಿ ಚೈತ್ರಾ ರೈ ಅವರ ಸೀಮಂತಕ್ಕೆ ಕೆಲವೇ ಕೆಲವು ಆಪ್ತರನ್ನು ಆಹ್ವಾನಿಸಲಾಗಿತ್ತಂತೆ. ಕಡಿಮೆ ಜನರಿದ್ದರೂ ಅವರ ಸಂಪ್ರದಾಯದ ಪ್ರಕಾರವೇ ಸೀಮಂತ ಮಾಡಲಾಗಿದೆಯಂತೆ.  ಇದನ್ನೂ ಓದಿ:  1.31 ಲಕ್ಷ ಬೆಲೆ ವೈನ್- ಪ್ರಿಯಾಂಕಾಗೆ ಪತಿಯಿಂದ ವಿಶೇಷ ಗಿಫ್ಟ್

     

    View this post on Instagram

     

    A post shared by Chaithra Rai (@chaithrarai17)

    ಕುಟುಂಬ ಮೊದಲು ವೃತ್ತಿ ಬದುಕಿನ ಬಗ್ಗೆ ಚಿಂತಿಸುವುದಕ್ಕೆ ಬಹಳ ಸಮಯ ಇರುತ್ತದೆ. ನಾನು ಹಾಗೂ ಪ್ರಸನ್ನ ಶೆಟ್ಟಿ ಈ ವಿಷಯ ಹೇಳಲು ತುಂಬ ಖುಷಿಪಡುತ್ತೇವೆ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿ ಇರಲಿ. ನನ್ನ ಜೀವನದ ಸುಂದರವಾದ ಹಂತವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಈ ಹಿಂದೆ ಚೈತ್ರಾ ರೈ ತಮ್ಮ ಪ್ರೆಗ್ನೆನ್ಸಿಯ ವಿಷಯವನ್ನು ಬಹಿರಂಗ ಮಾಡಿದ್ದರು. ಇದೀಗ ಸೀಮಂತದ ಫೋಟೋವನ್ನು ಅಭಿಮಾನಿಗಳೋಂದಿಗೆ ಹಂಚಿಕೊಂಡು ಸಂತೋಷವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Chaithra Rai (@chaithrarai17)

    ಚೈತ್ರಾ ಅವರು ಪ್ರಸನ್ನ ಶೆಟ್ಟಿ ಜೊತೆ ಮದುವೆಯಾಗಿದ್ದಾರೆ. ಪ್ರಸನ್ನ ಕತಾರ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಮಂಗಳೂರಿನಲ್ಲಿಯೇ ಈ ಜೋಡಿ ಮದುವೆ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಸಾಕಷ್ಟು ಫೋಟೋ, ಇನ್‍ಸ್ಟಾಗ್ರಾಮ್ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಾಯಿ ಆಗುತ್ತಿರುವುನ್ನು ಹಂಚಿಕೊಂಡಿದ್ಧಾರೆ. ಚೈತ್ರಾ ರೈ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಶುಭಾಶಯ ತಿಳಿಸಿದ್ದಾರೆ. ನಟಿ ಚೈತ್ರಾ ರೈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಇಂದಿಗೂ ಹಸಿರಾಗಿ ಉಳಿದಿದ್ದಾರೆ.

     

    View this post on Instagram

     

    A post shared by Chaithra Rai (@chaithrarai17)