Tag: Chaithra J Achar

  • ‘ಮಾರ್ನಮಿ’ ಚಿತ್ರದ ಟೀಸರ್‌ ಔಟ್- ಕರಾವಳಿ ಪ್ರೇಮಕಥೆಯಲ್ಲಿ ರಿತ್ವಿಕ್, ಚೈತ್ರಾ ಆಚಾರ್

    ‘ಮಾರ್ನಮಿ’ ಚಿತ್ರದ ಟೀಸರ್‌ ಔಟ್- ಕರಾವಳಿ ಪ್ರೇಮಕಥೆಯಲ್ಲಿ ರಿತ್ವಿಕ್, ಚೈತ್ರಾ ಆಚಾರ್

    ವಿಭಿನ್ನ ಕಂಟೆಂಟಿನ ಸುಳಿವಿನ ಮೂಲಕವೇ ಸದ್ದು ಮಾಡೋ ಸಿನಿಮಾಗಳು ಗೆದ್ದು ಬೀಗಿದ ಅನೇಕ ಉದಾಹರಣೆಗಳಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಸ್ಪಷ್ಟ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ ಮಾರ್ನಮಿ. ಪಿಂಗಾರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ರಿಶಿತ್ ಶೆಟ್ಟಿ (Rishith Shetty) ಚೊಚ್ಚಲ ಪ್ರಯತ್ನವೇ ಈ ಮಾರ್ನಮಿ. ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಮಾಡಲಾಯಿತು. ಈ ವೇಳೆ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

    ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಹೊಸ ತಂಡ ಹೊಸ ನಿರ್ದೇಶಕರು. ಈ ತಂಡದಲ್ಲಿ ನನ್ನ ಅಚ್ಚುಮೆಚ್ಚಿನ ನಟರು ಎಲ್ಲಾ ಇದ್ದಾರೆ. ತುಂಬಾ ಒಳ್ಳೆ ಕಥೆ. ನನಗೂ ಒಳ್ಳೆ ಅವಕಾಶ ಇದೆ ಎನಿಸಿತು. ನನಗೂ ಅವಕಾಶ ಪಡೆದುಕೊಂಡಿದ್ದೇನೆ. ಸಂಗೀತದ ಕೆಲಸ ಶುರು ಮಾಡಿದ್ದೇವೆ.  ಮಾರ್ನಮಿ (Maarnami) ಟೈಟಲ್ ಟೀಸರ್ ಮಾಡಿದ್ದೇವೆ. ಹಾಡುಗಳ ಕಂಪೋಸ್ ಮಾಡಲು ಶುರು ಮಾಡಿದ್ದೇವೆ. ಇಷ್ಟೇ ಸಾಂಗ್ ಇದೆ ಅಂತಾ ಡಿಸೈಡ್ ಮಾಡಿಲ್ಲ. ಆದರೆ ಐದು ಹಾಡುಗಳು ಇರುತ್ತವೆ ಎಂದರು.‌ ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ- ತಂದೆಯಾದ ಖುಷಿಯಲ್ಲಿ ಚಂದನ್

    ನಿರ್ದೇಶಕ ರಿಶಿತ್ ಶೆಟ್ಟಿ ಮಾತನಾಡಿ, ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೆಟ್ ಆಗಿ ರೈಟರ್ ಆಗಿ ಕೆಲಸ ಮಾಡಿದ್ದೇನೆ. ಪ್ರೀತಂ ಶೆಟ್ಟಿ ಅವರ ಜೊತೆ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಮಂಗಳೂರಲ್ಲಿ ಸ್ಕ್ರಿಪ್ಟ್ ಕೆಲಸಕ್ಕೆ ಹೋಗಿದ್ದಾಗ ಸುಧಿ ಪರಿಚಯವಾಗಿದ್ದು. ಅವರು ಒಂದು ಕಥೆ ಮಾಡಿಕೊಂಡಿದ್ದರು. ಅವರು ಡೈರೆಕ್ಷನ್ ಮಾಡಲು ಇಷ್ಟಇಲ್ಲ ಅಂದಾಗ ನಾನು ಕಥೆ ಕೇಳಿದೆ. ಅವರು ಪ್ರೀತಿಯಿಂದ ಕೊಟ್ಟರು. ರಿತ್ವಿಕ್ ಅವರಿಗೆ ಹೇಳಿದೆ. ಅವರು ಇದಕ್ಕೆ ಏನೋ ಬೇಕೋ ಅನಿಸುತ್ತಿದೆ ಎಂದರು. ಬಳಿಕ 6 ತಿಂಗಳ ವರ್ಕ್ ಮಾಡಿಕೊಂಡು ಅವರ ಬಳಿ ಹೋದೆ. ಅವರು ಕಥೆ ಕೇಳಿ ಖುಷಿಪಟ್ಟರು. ಬಳಿಕ ಪ್ರೊಡ್ಯೂಸರ್ ಹುಡುಕಾಟದಲ್ಲಿ ನಿಶಾಂತ್ ಸರ್ ಭೇಟಿಯಾದರು. ಆ ಬಳಿಕ ಟೈಟಲ್ ಟೀಸರ್ ಮಾಡಿಕೊಂಡು ಬಂದೆವು. ಆ ಬಳಿಕ ನಿರ್ಮಾಪಕರು ಇಷ್ಟಪಟ್ಟರು. ಚಿತ್ರದ ಪ್ರತಿ ಹಂತದಲ್ಲಿ ನಿಶಾಂತ್ ಸರ್ ಸಹಕಾರ ಕೊಟ್ಟಿದ್ದಾರೆ ಎಂದರು.

    ನಟ ರಿತ್ವಿಕ್ ಮಾತನಾಡಿ, ಈ ಚಿತ್ರದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಒಂದು ಕಥೆ. ಚೆನ್ನಾಗಿ ಎಳೆದುಕೊಂಡು ಬಂದಿದ್ದು ರಿಶಿತ್ ಶೆಟ್ಟಿ. ನಮಗೆ ಬೇಕು ಅಂದಿದೆಲ್ಲ ಕೊಡುತ್ತಿರುವುದು, ನಮಗೆ ಸಪೋರ್ಟ್ ಮಾಡುತ್ತಿರುವುದು ನಿರ್ಮಾಪಕ ನಿಶಾಂತ್ ಸರ್. ಇಂತಹ ನಿರ್ಮಾಪಕರು ಅಪರೂಪ. ಈ ರೀತಿ ನಿರ್ಮಾಪಕರು ಇಂಡಸ್ಟ್ರೀಗೆ ಸಿಗಬೇಕು. ಇವರು ಗೆದ್ದರೆ ಮತ್ತಷ್ಟು ಸಿನಿಮಾಗಳು ಮಾಡುತ್ತಾರೆ. ಕಥೆ ಚೆನ್ನಾಗಿದೆ. ಕರಾವಳಿ ಭಾಗದಲ್ಲಿ ನಡೆಯುವ ಅದ್ಭುತ ಲವ್ ಸ್ಟೋರಿ. ದಸರಾ ದಿನವನ್ನು ಮಾರ್ನಮಿ ಎಂದು ಕರೆಯುತ್ತಾರೆ. ಚಿತ್ರದಲ್ಲಿ ಒಳ್ಳೆ ಸ್ಟಾರ್ ಕ್ಯಾಸ್ಟ್ ಇದೆ. ಅದ್ಭುತ ತಾಂತ್ರಿಕ ವರ್ಗ ಇದೆ ಎಂದು ಮಾಹಿತಿ ಹಂಚಿಕೊಂಡರು.

    ನಾಯಕಿ ಚೈತ್ರಾ ಆಚಾರ್ (Chaithra Achar) ಮಾತನಾಡಿ, ಕಥೆ ಬಹಳ ಇಷ್ಟವಾಯ್ತು. ಡೇಟ್ ಸಮಸ್ಯೆ ಇದೆ ಆಗಲ್ಲ ಎಂದೆ. ಮತ್ತೆ ಕಥೆ ನನ್ನ ಬಳಿಯೇ ಬಂತು. ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳೋಣಾ ಎಂದರು. ಅದ್ಭುತ ಕಥೆ. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಷಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ರಿತ್ವಿಕ್ ಅವರ ಜೊತೆ ಕೆಲಸ ಮಾಡಲು ಖುಷಿ ಇದೆ. ಕಥೆ ನಂಬಿದ್ದೇವೆ, ಚರಣ್ ರಾಜ್ ಅವರ ಮ್ಯೂಸಿಕ್ ಇದೆ. ನಾನು ಶೂಟಿಂಗ್ ಗೆ ಹೊರಡಲು ಎಕ್ಸೈಟ್ ಆಗಿದ್ದೇನೆ ಎಂದರು.

    ಮಾರ್ನಮಿ ಸಿನಿಮಾದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನವಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

    ಚಿತ್ರದ ಟೈಟಲ್ ಟೀಸರ್ ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ಬಿಡುಗಡೆಯಾಗಿದ್ದು, ಟೀಸರ್ ಪ್ರಾಮಿಸಿಂಗ್ ಆಗಿದೆ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಚಿತ್ರದಲ್ಲಿ ಇರಲಿದೆ. ಚೆಂದದ ಲವ್ ಸ್ಟೋರಿ ಜೊತೆಗೆ ಆಕ್ಷನ್, ಎಮೋಷನ್,ಕಾಮಿಡಿ ಮಿಶ್ರಣದ ಮಾರ್ನಮಿ ಸಿನಿಮಾಗೆ ಗುನಾಧ್ಯ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಅಕ್ಟೋಬರ್ ಒಂದರಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ನಡೆಸಲು ಚಿತ್ರತಂಡ ಸಜ್ಜಾಗಿದೆ.

  • ರಾಜ್‌ ಬಿ ಶೆಟ್ಟಿ ಜೊತೆ ಕೈಜೋಡಿಸಿದ ನಟಿ- ‘ರೂಪಾಂತರ’ ಚಿತ್ರದಲ್ಲಿ ಚೈತ್ರಾ

    ರಾಜ್‌ ಬಿ ಶೆಟ್ಟಿ ಜೊತೆ ಕೈಜೋಡಿಸಿದ ನಟಿ- ‘ರೂಪಾಂತರ’ ಚಿತ್ರದಲ್ಲಿ ಚೈತ್ರಾ

    ಚಿಟಿ ಚಿಟಿ ಜಿನುಗುವ ಮಳೆಯಲ್ಲಿ ಹಾಡೊಂದನ್ನು ಕೇಳುವುದು ಯಾರಿಗೆ ತಾನೆ ಇಷ್ಟವಿಲ್ಲ. ಇದನ್ನು ಚೆನ್ನಾಗಿ ಅರಿತಂತಿದೆ ‘ರೂಪಾಂತರ’ ಚಿತ್ರತಂಡ. ಹೌದು ‘ಒಂದು ಮೊಟ್ಟೆಯ ಕಥೆ’ಯ ಮೂಲಕ ಚಿತ್ರರಂಗಕ್ಕೆ ಬಂದು ಜನರ ಮೆಚ್ಚುಗೆ ಗಳಿಸಿದ ಅದೇ ಚಿತ್ರತಂಡ ‘ರೂಪಾಂತರ’ (Roopantara Film) ಎನ್ನುವ ಸಿನಿಮಾ ಮಾಡಿ ಬಿಡುಗಡೆಗೆ ಸಿದ್ಧವಾಗಿದ್ದು, ಅದರ ‘ಕಿತ್ತಾಳೆ’ ಎನ್ನುವ ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಸಿನಿರಸಿಕರ, ಸಂಗೀತ ಆಸ್ವಾದಕರ ಮನವನ್ನು ತಣಿಸಿದೆ.

    ‘ಒಂದು ಮೊಟ್ಟೆಯ ಕಥೆ’ಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಜ್ ಬಿ ಶೆಟ್ಟಿ ಮತ್ತು ಮಿಧುನ್ ಮುಕುಂದನ್ ಯಶಸ್ವಿ ಜೋಡಿಯಾಗಿ ಅನೇಕ ಹಿಟ್ ಹಾಡುಗಳನ್ನು ಕೊಡುತ್ತಾ ಬಂದಿದ್ದು, ಈಗ ‘ರೂಪಾಂತರ’ ಚಿತ್ರದ ಕಿತ್ತಾಳೆ ಹಾಡನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಹಿಂದೆ ಅನೇಕ ಚಿತ್ರಗಳಿಗೆ ರಾಜ್ ಸಾಹಿತ್ಯ ಬರೆದು ಮಿಧುನ್ ಸಂಗೀತ ನೀಡಿದ್ದರು. ಈ ಹಾಡು ಇಬ್ಬರಿಗೂ ಚಿತ್ರರಂಗದಲ್ಲಿ ಹೊಸ ಗುರುತನ್ನು ನೀಡಲಿದೆ. ಮಿಧುನ್ ಅವರ ಸಂಗೀತಕ್ಕೆ ರಾಜ್ ಅವರ ರಸಭರಿತ ಸಾಹಿತ್ಯ ಸಿಹಿಯಾದ ಕಿತ್ತಾಳೆ ಹಣ್ಣನ್ನು ಸವಿದಂತ ಅನುಭವವನ್ನು ನೀಡುತ್ತಿದೆ ಎಂದು ಅನೇಕ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಗರುಡ ಗಮನ ವೃಷಭ ವಾಹನ, ಮಾದೇವ ಖ್ಯಾತಿಯ ಗಾಯಕಿ ಚೈತ್ರ ಜೆ ಆಚಾರ್ (Chaithra J Achar) ಅವರು ಈ ಹಾಡಿಗೆ ಧ್ವನಿ ನೀಡಿದ್ದು ಇನ್ನೊಂದು ಹೈಲೈಟ್.

    ಮೊನ್ನೆಯಷ್ಟೆ ಫಸ್ಟ್ ಲುಕ್ ಪೋಸ್ಟರ್‌ನ ಮೂಲಕ ಗಮನ ಸೆಳೆದ ಮಿಥಿಲೇಶ್ ಎಡವಲತ್ ಅವರ ಚೊಚ್ಚಲ ಚಿತ್ರ ಇದಾಗಿದ್ದು, ಕನ್ನಡ ಚಿತ್ರರಂಗದಲ್ಲೊಂದು ಹೊಸ ಅಲೆಯನ್ನು ಸೃಷ್ಟಿ ಮಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ರಾಜ್ ಬಿ ಶೆಟ್ಟಿಯವರು (Raj B Shetty) ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೆ, ಸಂಭಾಷಣೆಯನ್ನು ಬರೆದಿದ್ದಾರೆ. ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯಾದ ಲೈಟರ್ ಬುದ್ಧ ಫಿಲ್ಮ್‌ ಮೂಲಕ ತೆರೆಗೂ ತರುತ್ತಿದ್ದಾರೆ. ‘ಒಂದು ಮೊಟ್ಟೆಯ ಕಥೆ’ಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಈ ಚಿತ್ರದ ನಿರ್ಮಾಣವನ್ನು ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣ, ಮಿಧುನ್ ಮುಕುಂದನ್ ಸಂಗೀತವನ್ನೂ ನೀಡುವ ಮೂಲಕ ಈ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಚಿಸಲು ಹೊರಟಿದೆ.

    ಉಳಿದಂತೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಚಿತ್ರಕ್ಕಿದೆ. ಸಂಕಲನ ಭುವನೇಶ್ ಮಣಿವಣ್ಣನ್, ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದಾಗಿದೆ. ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಪ್ರಭಾಸ್ ಫ್ಯಾನ್ಸ್

    ಹಾಡು ಲೈಟರ್ ಬುದ್ಧ ಸಂಸ್ಥೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು, ಈ ಹೊಸ ಪ್ರಯತ್ನವನ್ನು ಕನ್ನಡಿಗರು ಸ್ವಾಗತಿಸುತ್ತಾರೆ ಎಂಬುದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಬಾಲಕೃಷ್ಣ ಅರ್ವಾಂಕರ್ ಅವರ ಅಭಿಪ್ರಾಯ.

  • ಅಕಟಕಟ ಹುಡುಗಿಯ ಅಂತರಂಗ: ಹೊಸ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್

    ಅಕಟಕಟ ಹುಡುಗಿಯ ಅಂತರಂಗ: ಹೊಸ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್

    ಟಿ ಚೈತ್ರಾ ಜೆ ಆಚಾರ್ ‘ಬ್ಲಿಂಕ್’ ಸಿನಿಮಾ ನಂತರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅಕಟಕಟ ಹೆಸರಿನ ಈ ಸಿನಿಮಾದಲ್ಲಿ ಗ್ಲಾಮರ್ ಗೊಂಬೆ ಚೈತ್ರಾ, ಮಧ್ಯಮದ ವರ್ಗದ ಕುಟುಂಬದ ಹೆಣ್ಣು ಮಗಳ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.

    ಅಕಟಕಟ ಸಿನಿಮಾವನ್ನು ನಾಗರಾಜ್ ಸೋಮಯಾಜಿ ನಿರ್ದೇಶಿಸಿಸುತ್ತಿದ್ದು, ಈ ಸಿನಿಮಾದಲ್ಲಿ ಮತ್ತೊಬ್ಬ ಹೊಸ ಪ್ರತಿಭೆಗೆ ನರ್ತನ್ ಗೆ ಅವಕಾಶ ನೀಡಲಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಚೈತ್ರಾ ಜೆ ಆಚಾರ್ ತಮ್ಮ ಪಾತ್ರದ ಕುರಿತಾಗಿ ಕೆಲವು ಹಿಂಟ್ ಬಿಟ್ಟುಕೊಟ್ಟಿದ್ದಾರೆ.  ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ‘ನಾನು ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಜಾನಕಿ ಎನ್ನುವ ಪಾತ್ರವನ್ನು ನಿರ್ವಹಿಸುತ್ತೇನೆ. ಜಾನಕಿ ಜೀವನದಲ್ಲಿ ಒಳ್ಳೆಯ ವಿಚಾರ, ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾಳೆ. ಏಕೆಂದರೆ ತನ್ನ ಜೀವನವನದ ದಿಕ್ಕನ್ನು ಬದಲಾಯಿಸುವ ಏಕೈಕ ವಿಷಯ ಶಿಕ್ಷಣ ಎಂದು ಆಕೆ ಭಾವಿಸುತ್ತಾಳೆ. ಈ ಸಿನಿಮಾದಲ್ಲಿ ನಾನು ಸಾಂಪ್ರದಾಯಿಕ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಚೈತ್ರ ಆಚಾರ್.


    ‘ವೃತ್ತಿ ಬದುಕಿನ ಆರಂಭಿಕ ಹಂತದಲ್ಲಿ ಇಂತಹ ಸವಾಲಿನ ಪಾತ್ರಗಳು ಸಿಕ್ಕಿರುವುದು ನನ್ನ ಅದೃಷ್ಟವಾಗಿದೆ. ಗ್ಲಾಮರಸ್, ನಟನೇ ಎಂದು ಪಾತ್ರಗಳನ್ನು ನಾನು ಎಂದು ವರ್ಗೀಕರಿಸುವುದಿಲ್ಲ. ನನಗೆ ಸಿಕ್ಕ ಪಾತ್ರಗಳನ್ನು ಮಾಡುತ್ತೇನೆ. ಒಳ್ಳೆಯ ಪಾತ್ರಗಳು ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಸ್ಕ್ರಿಪ್ಟ್‌ಗಳನ್ನು  ಆಯ್ಕೆ ಮಾಡುವಾಗಲೂ ನಾನು, ಈ ಸಿನಿಮಾ ನಂತರ ನಾನು ಏನಾದರೂ ಹೊಸತು ಕಲಿಯಬೇಕು. ಹಾಗಿದ್ದರೆ ಆ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.