Tag: Chairman

  • ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ – ಸಿಎಂ ಬೊಮ್ಮಾಯಿ ಅಂಕಿತ

    ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ – ಸಿಎಂ ಬೊಮ್ಮಾಯಿ ಅಂಕಿತ

    ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದೆ.

    2019ರಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿತ್ತು. ಅವರಲ್ಲಿ 52 ಮಂದಿಯ ನೇಮಕಾತಿಯನ್ನು ರದ್ದುಗೊಳಿಸಿ ಜುಲೈ 12ರಂದು ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ RSS ಕಚೇರಿ ಮೇಲೆಯೇ ಭಾರತದ ಬಾವುಟ ಹಾರಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಈ ಹಿಂದೆ ಅಧ್ಯಕ್ಷ ಸ್ಥಾನ ಹೊಂದಿದ್ದ ರಘು ಕೌಟಿಲ್ಯ, ಮಣಿರಾಜ ಶೆಟ್ಟಿ, ಕೆ.ವಿ. ನಾಗರಾಜ ಮತ್ತು ರೇವಣಪ್ಪ ಕೋಳಗಿ ಅವರಿಗೆ ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಈ ಬಾರಿ ಬಿಜೆಪಿ ಕಾರ್ಯಕರ್ತರಿಗೇ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಿಂದ ಕಾಣೆಯಾಗಿದ್ದ PUC ವಿದ್ಯಾರ್ಥಿನಿಯರು ಪತ್ತೆ – ಹುಬ್ಬಳ್ಳಿಗೆ ಹೋಗಿದ್ದೇಕೆ ಎಂಬುದೇ ಸಸ್ಪೆನ್ಸ್

    ಯಾರಿಗೆ – ಯಾವ ನಿಗಮ ಮಂಡಳಿ?

    • ಧರ್ಮಣ್ಣ ದೊಡ್ಡಮನಿ – ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
    • ಗುತ್ತಿಗೆನೂರು ವಿರೂಪಾಕ್ಷಗೌಡ-ಕರ್ನಾಟಕ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
    • ಕೌಟಿಲ್ಯ ರಘು- ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ (ಮೈಲಾಕ್) ನಿಗಮದ ಅಧ್ಯಕ್ಷ
    • ಮಲ್ಲಿಕಾರ್ಜುನ್ ಬಸವಣ್ಣಪ್ಪ ತುಬಾಕಿ- ಮದ್ಯಪಾನ ಸಂಯಮ ಮಂಡಳಿ
    • ಕೆಪಿ ವೆಂಕಟೇಶ್ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
    • ದೇವೇಂದ್ರನಾಥ ಕೆ ನಾದ್- ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ
    • ಚಂಗಾವರ ಮಾರಣ್ಣ – ಕಾಡುಗೊಲ್ಲ ಅಭಿವೃದ್ಧಿ ನಿಗಮ
    • ಎಂ.ಕೆ.ಶ್ರೀನಿವಾಸ್ – ವಸ್ತು ಪ್ರದರ್ಶನ ಪ್ರಾಧಿಕಾರ
    • ಎಂ.ಕೆ.ವಾಸುದೇವ್- ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
    • ಎನ್‌ಎಂ ರವಿನಾರಾಯಣರೆಡ್ಡಿ – ದ್ರಾಕ್ಷಿ ಮತ್ತು ವೈನ್ ಬೋರ್ಡ್
    • ಚಂದ್ರಶೇಖರ ಕವಟಗಿ – ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
    • ಬಿ.ಸಿ.ನಾರಾಯಣಸ್ವಾಮಿ – ರೇಷ್ಮೆ ಮಾರಾಟ ಮಂಡಳಿ
    • ಗೌತಮ್ ಗೌಡ – ರೇಷ್ಮೆ ಉದ್ಯಮಗಳ ನಿಗಮ
    • ಮಣಿರಾಜ ಶೆಟ್ಟಿ – ಗೇರು ಅಭಿವೃದ್ಧಿ ನಿಗಮ
    • ಗೋವಿಂದ ಜಟ್ಟಪ್ಪ ನಾಯ್ಕ – ಪಶ್ಚಿಮ ಘಟ್ಟಗಳ ಸಂರಕ್ಷಣ ಕಾರ್ಯಪಡೆ
    • ಎಂ ಶಿವಕುಮಾರ್ – ಮೃಗಾಲಯ ಪ್ರಾಧಿಕಾರ
    • ಎನ್‌.ಎಂ.ರವಿ ಕಾಳಪ್ಪ – ಜೀವ ವೈವಿಧ್ಯ ಮಂಡಳಿ
    • ಎಂ.ವಿ.ತೀರ್ಥರಾಮ – ರೀತ್ಯಾ ಆಡಳಿತ ಮಂಡಳಿ
    • ವೆಂಕಟಪ್ಪ – ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
    • ಮಲ್ಲಪ್ಪ – ಕರಕುಶಲ ಅಭಿವೃದ್ಧಿ ನಿಗಮ

    Live Tv
    [brid partner=56869869 player=32851 video=960834 autoplay=true]

  • ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

    ಟಾಟಾ ಸನ್ಸ್ ಗ್ರೂಪ್‌ಗೆ ಎನ್ ಚಂದ್ರಶೇಖರನ್ ಅಧ್ಯಕ್ಷರಾಗಿ ಮರು ನೇಮಕ

    ನವದೆಹಲಿ: ಟಾಟಾ ಸನ್ಸ್ ಮಂಡಳಿಯಲ್ಲಿ ಮುಂದಿನ 5 ವರ್ಷಗಳ ವರೆಗೆ ನಟರಾಜನ್ ಚಂದ್ರಶೇಖರನ್ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

    ಎನ್ ಚಂದ್ರಶೇಖರನ್ 2017ರಲ್ಲಿ ಟಾಟಾ ಸನ್ಸ್ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರ 5 ವರ್ಷಗಳ ಅಧಿಕಾರ ಅವಧಿ ಮುಗಿದಿದ್ದು, ಮತ್ತೆ 5 ವರ್ಷಗಳ ಅಧ್ಯಕ್ಷೀಯ ಅವಧಿಯನ್ನು ನವೀಕರಿಸಲಾಗಿದೆ.

    ಚಂದ್ರಶೇಖರನ್ 2016ರ ಅಕ್ಟೋಬರ್‌ನಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದ್ದರು. ಜನವರಿ 2017ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇವರು 100ಕ್ಕೂ ಅಧಿಕ ಟಾಟಾ ಆಪರೇಟಿಂಗ್ ಕಂಪನಿಗಳ ಪ್ರವರ್ತಕರಾಗಿದ್ದು, 100 ಶತಕೋಟಿ ಡಾಲರ್‌ಗೂ ಹೆಚ್ಚಿನ ಆದಾಯ ಹೊಂದಿದ್ದಾರೆ. ಇದನ್ನೂ ಓದಿ: IPL 2022 Auction: ಲಿವಿಂಗ್‍ಸ್ಟೋನ್ ದುಬಾರಿ ವಿದೇಶಿ ಆಟಗಾರ – ಫಿಂಚ್, ಮಾರ್ಗನ್ ಅನ್‍ಸೋಲ್ಡ್

     

    ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸೇರಿದಂತೆ ಹಲವಾರು ಗ್ರೂಪ್ ಆಪರೇಟಿಂಗ್ ಕಂಪನಿಗಳ ಮಂಡಳಿಗೆ ಅಧ್ಯಕ್ಷರಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ 15ರ ಸೆಟ್‌ಗೆ ಬೆಂಕಿ!

    ಚಂದ್ರಶೇಖರನ್ ತಮ್ಮ ಅಧಿಕಾರಾವಧಿಯಲ್ಲಿ ಏರ್ ಇಂಡಿಯಾವನ್ನು ಮರಳಿ ಪಡೆದಿದ್ದಾರೆ. ಟಾಟಾ ಗ್ರೂಪ್‌ಗೆ ಏರ್ ಇಂಡಿಯಾವನ್ನು ಮರಳಿ ಪಡೆಯಲು ನಾವು ಉತ್ಸುಕರಾಗಿದ್ದೇವೆ. ಇದನ್ನು ವಿಶ್ವದರ್ಜೆಯ ವಿಮಾನಯಾನ ಮಾಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದರು.

  • ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ – ಆರ್‌ಸಿಬಿ ಚೇರ್‌ಮ್ಯಾನ್ ಹೇಳಿದ್ದೇನು?

    ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ – ಆರ್‌ಸಿಬಿ ಚೇರ್‌ಮ್ಯಾನ್ ಹೇಳಿದ್ದೇನು?

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈಗಾಗಲೇ ಐಪಿಎಲ್-2020ಗಾಗಿ ಯುಎಇಗೆ ಪ್ರಯಾಣ ಬೆಳೆಸಿದೆ. ಐಪಿಎಲ್‍ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಐಪಿಎಲ್‍ನಲ್ಲಿ ಆರ್‌ಸಿಬಿ ಬಹಳ ಜನಪ್ರಿಯವಾದ ತಂಡ. ಆದರೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಭಾರತ ತಂಡವನ್ನು ಮುನ್ನಡೆಸುವ ನಾಯಕ ವಿರಾಟ್ ಕೊಹ್ಲಿಯವರೇ ನಾಯಕನಾದರೂ ತಂಡ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಾಗಿ ತಂಡದ ನಾಯಕತ್ವವನ್ನು ಬದಲಿಸಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಎಂಬುದು ಕೆಲವರ ವಾದವಾಗಿದೆ.

    ಈ ಪ್ರಶ್ನೆಗೆ ಖಾಸಗಿ ವಾಹಿನಿಯೊಂದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರಿಸಿರುವ ಆರ್‌ಸಿಬಿ ತಂಡದ ಚೇರ್‌ಮ್ಯಾನ್ ಸಂಜೀವ್ ಚುರಿವಾಲಾ, ವಿರಾಟ್ ಭಾರತ ತಂಡದ ನಾಯಕ. ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಆಟ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ ವಿರಾಟ್ ಅವರು ಯಾವ ರೀತಿಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಆರ್‌ಸಿಬಿ ತಂಡದ ಮಾಲೀಕನಾಗಿ ನಮಗೆ ಕೊಹ್ಲಿ ತಂಡದ ನಾಯಕನಾಗಿರುವುದು ಹೆಮ್ಮೆ ಎಂದು ಹೇಳಿದ್ದಾರೆ.

    ಈ ಬಾರಿಯ ಆರ್‌ಸಿಬಿ ತಂಡ ಬಹಳ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ತಂಡ ಬಹಳ ಬಲಿಷ್ಠವಾಗಿದೆ. ಹಿಂದಿನ ಆವೃತ್ತಿಯಲ್ಲಿ ನಮ್ಮ ತಂಡಕ್ಕೆ ಇದ್ದ ವೈಫಲ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ಬಾರಿಯ ಹಾರಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿ ಮಾಡಿದ್ದೇವೆ. ಜೊತೆಗೆ ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದೇವೆ. ಹೀಗಾಗಿ ಈ ಬಾರಿ ಕಪ್ ಗೆಲ್ಲುವ ವಿಶ್ವಾದಲ್ಲಿ ಇದ್ದೇವೆ ಎಂದು ಚುರಿವಾಲಾ ತಿಳಿಸಿದ್ದಾರೆ.

    ತಂಡದಲ್ಲಿ ಉತ್ತಮ ಆಟಗಾರರು ಇದ್ದರೂ ಆರ್‌ಸಿಬಿ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ತಂಡದ ಆಟಗಾರರು ವೈಯಕ್ತಿಕವಾಗಿ ಉತ್ತಮವಾಗಿ ಆಡಿದರೂ ಒಂದು ತಂಡವಾಗಿ ಆಡುವಲ್ಲಿ ವಿಫಲರಾಗಿದ್ದಾರೆ. ಆರ್‌ಸಿಬಿ ಕಳೆದ ಮೂರು ಆವೃತ್ತಿಲ್ಲೂ ಅಂಕಪಟ್ಟಿಯಲ್ಲಿ, 8, 6 ಮತ್ತು 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಳೆದ ಮೂರು ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಫ್ಲೇಆಪ್ ಹಂತಕ್ಕೂ ಬಂದಿಲ್ಲ. ಇದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.

    ಐಪಿಎಲ್‍ನಲ್ಲಿ ಬ್ಯಾಟ್ಸ್‍ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್‍ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ.

  • ಟಿಟಿಡಿ ಅಧ್ಯಕ್ಷರಾಗಿ ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಆಯ್ಕೆ

    ಟಿಟಿಡಿ ಅಧ್ಯಕ್ಷರಾಗಿ ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಆಯ್ಕೆ

    ಅಮರಾವತಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಮಂಡಳಿಯ ಅಧ್ಯಕ್ಷರನ್ನಾಗಿ ತಮ್ಮ ಚಿಕ್ಕಪ್ಪ ವೈಎಸ್‍ಆರ್ ಕಾಂಗ್ರೆಸ್ ಪಕ್ಷ (ವೈಎಸ್‍ಆರ್‍ಸಿಪಿ)ದ ಮುಖಂಡ ವೈ.ವಿ.ಸುಬ್ಬಾರೆಡ್ಡಿ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

    ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ಅಧ್ಯಕ್ಷರನ್ನಾಗಿ ವೈ.ವಿ.ಸುಬ್ಬಾ ರೆಡ್ಡಿ ಅವರನ್ನು ನೇಮಕ ಮಾಡಿರುವ ಕುರಿತು ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಮನ್ ಮೋಹನ್ ಸಿಂಗ್ ಆದೇಶ ಹೊರಡಿಸಿದ್ದಾರೆ.

    ಜಗನ್ ಚಿಕ್ಕಪ್ಪ ವೈ.ವಿ.ಸುಬ್ಬಾರೆಡ್ಡಿ ಅವರು ವೈಎಸ್‍ಆರ್‍ಸಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇಂದು ಟಿಟಿಡಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಟಿಟಿಡಿ ಮಂಡಳಿಯ ಉಳಿದ ಸದಸ್ಯರನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

    ತಿರುಮಲ ತಿರುಪತಿ ಒಂದು ದೇವಸ್ವ ಮಂಡಳಿಯಾಗಿದ್ದು, ತಿರುಪತಿ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಆಂಧ್ರ ಪ್ರದೇಶದಲ್ಲಿ ಟಿಟಿಡಿ ಅಧ್ಯಕ್ಷ ಸ್ಥಾನ ತುಂಬಾ ಪ್ರಭಾವಿಯಾಗಿದ್ದು, ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸುವ ಕ್ಯಾಬಿನೆಟ್ ಸಚಿವರು ಹಾಗೂ ಇತರ ಗಣ್ಯರು ಟಿಟಿಡಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ನಂತರ ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

    ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಪುಟ್ಟ ಸುಭಾಕರ್ ರೆಡ್ಡಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವೈ.ವಿ.ಸುಬ್ಬಾರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ನಾಲ್ಕು ದಿನಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯನ್ನು ಪುನರ್ ರಚನೆ ಮಾಡುವಂತೆ ವೈಎಸ್‍ಆರ್ ಸರ್ಕಾರ ಸೂಚಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಟಿಟಿಡಿ ಅಧ್ಯಕ್ಷರನ್ನಾಗಿ ಸುಬ್ಬಾರೆಡ್ಡಿ ಅವರನ್ನು ಆಯ್ಕೆ ಮಾಡಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಚಾರದ ವೇಳೆ ಚಕ್ಕಡಿಯಿಂದ ಬಿದ್ದು ತಲೆಗೆ ಗಾಯವಾಗಿದ್ದ ಕೈ ಅಧ್ಯಕ್ಷ ಇನಿಲ್ಲ

    ಪ್ರಚಾರದ ವೇಳೆ ಚಕ್ಕಡಿಯಿಂದ ಬಿದ್ದು ತಲೆಗೆ ಗಾಯವಾಗಿದ್ದ ಕೈ ಅಧ್ಯಕ್ಷ ಇನಿಲ್ಲ

    ಹುಬ್ಬಳ್ಳಿ: ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಹೆಚ್.ವಿ ಮಾಡಳ್ಳಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ನವಲಗುಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಮಾಡಳ್ಳಿ ಚಕ್ಕಡಿ(ಎತ್ತಿನ ಬಂಡಿ) ಹತ್ತಲು ಹೋಗಿ ಬಿದ್ದು ಗಾಯ ಮಾಡಿಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ಮಾಡುವಾಗ ಈ ಘಟನೆ ನಡೆದಿತ್ತು.

    ಘಟನೆಯಲ್ಲಿ ಮಾಡಳ್ಳಿ ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದರಿಂದ ಎರಡು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲೇ ಇದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

  • ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಸಂತಸದಲ್ಲಿ ಪರಮೇಶ್ವರ್ ಹೇಳಿದ್ದೇನು?

    ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಸಂತಸದಲ್ಲಿ ಪರಮೇಶ್ವರ್ ಹೇಳಿದ್ದೇನು?

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ 7 ವರ್ಷ ಪೂರೈಸಿದ ಪರಮೇಶ್ವರ್‍ಗೆ ಕಾಂಗ್ರೆಸ್ ಮುಖಂಡರು ಶುಭಾಶಯ ಕೋರಿದ್ದಾರೆ.

    ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪರಮೇಶ್ವರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ 7 ವರ್ಷ ಪೂರೈಸಲು ಸಹಕರಿಸಿದ ಎಲ್ಲಾ ಮುಖಂಡರಿಗೂ ಧನ್ಯವಾದಗಳು. ಹಾಗೂ ದೆಹಲಿಯಿಂದ ಬಂದ ಎಲ್ಲ ಪ್ರಧಾನ ಕಾರ್ಯದರ್ಶಿಗಳು ನನಗೆ ಸಾಥ್ ನೀಡಿದ್ದಾರೆ. ನನ್ನ ನಂಬಿ ಜವಾಬ್ದಾರಿ ಕೊಟ್ಟ ಹೈಕಮಾಂಡ್‍ಗೆ ನಾನು ಋಣಿಯಾಗಿರುತ್ತೇನೆಂದು ಧನ್ಯವಾದ ತಿಳಿಸಿದರು.

    ಕಷ್ಟದಲ್ಲಿದ್ದ ಪಕ್ಷವನ್ನ 2013 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತಂದಿದ್ದೇವೆ. 2018 ಕ್ಕೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೇ ನನ್ನ 8 ನೇ ವರ್ಷದ ಸಂಕಲ್ಪ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    2018ರ ಚುನಾವಣೆಯಲ್ಲಿ ಬಿಜೆಪಿ ರೀತಿ ನಮಗೆ ಮಿಷನ್ ಬೇಕಿಲ್ಲ. ಅಧಿಕಾರಕ್ಕೆ ಬರುವುದೇ ನಮಗೆ ಮುಖ್ಯ ಗುರಿ ಎಂದರು. 2018 ಕ್ಕೆ ಚುನಾವಣೆ ಸ್ಪರ್ಧೆ ನಿಶ್ಚಿತ ಆದರೆ ನಾನು ಎಲ್ಲಿ ನಿಲ್ಲಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಪರಮೇಶ್ವರ್ ಹೇಳಿದರು.

  • ಚರಂಡಿ, ಬಚ್ಚಲ ನೀರನ್ನು ಬಕೆಟ್ ನಲ್ಲಿ ತುಂಬಿ ಹೊರಹಾಕ್ತಿದ್ದಾರೆ ಜನ!

    ಚರಂಡಿ, ಬಚ್ಚಲ ನೀರನ್ನು ಬಕೆಟ್ ನಲ್ಲಿ ತುಂಬಿ ಹೊರಹಾಕ್ತಿದ್ದಾರೆ ಜನ!

    ಗದಗ: ನಗರದ ಕುಂಬಾರೇಶ್ವರ ಕಾಲೋನಿ ನಿವಾಸಿಗಳ ಜೀವನ ಒಂದು ರೀತಿ ನರಕಮಯವಾಗಿದೆ. ತಾವು ಸ್ನಾನ ಮಾಡಿದ ಬಚ್ಚಲು ನೀರನ್ನ ನಂತರ ತಾವೇ ತುಂಬಿ ಹೊತ್ತು ಹೊರಹಾಕುತ್ತಿದ್ದಾರೆ. ಕುಂಬಾರ ಕಲೋನಿಯಲ್ಲಿ ಅನೇಕ ವರ್ಷಗಳಿಂದ ರಸ್ತೆ, ಚರಂಡಿ, ಒಳಚರಂಡಿ, ಶೌಚಾಲಯ ಇಲ್ಲದ ಕಾರಣ ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ರಸ್ತೆಗಳೆಲ್ಲಾ ಕೆಸರು ಗದ್ದೆಯಾಗಿವೆ.

     

    ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು ಸುಲಭವಾಗಿ ನಡೆದಾಡಲಾಗುವುದಿಲ್ಲ. ಇದು ಒಂದೆರಡು ದಿನಗಳ ಪರಸ್ಥಿತಿ ಅಲ್ಲ. ಸ್ನಾನ ಮಾಡಿದ ನಂತರ ಬಂದ ನೀರನ್ನ ಬುಟ್ಟಿ ಅಥವಾ ಬಕೆಟ್‍ನಲ್ಲಿ ತುಂಬಿ ರಸ್ತೆ ಮಧ್ಯೆ ಇಲ್ಲವೇ ಬೇರೆ ಕಡೆ ಹಾಕುವ ಪದ್ಧತಿ ಇಲ್ಲಿ ಅನೇಕ ವರ್ಷಗಳಿಂದ ನಡೆದು ಬಂದಿದೆ. ಸುಮಾರು 20 ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಇಲ್ಲಿಯ ಜನ ಎದುರಿಸುತ್ತಿದ್ದಾರೆ.

    ಈ ಸಮಸ್ಯೆ ಬಗ್ಗೆ ನಗರಸಭೆ ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಅಂತಿಲ್ಲ. ಅನೇಕ ಜನ ಕಾಯಿಲೆಗೆ ತುತ್ತಾಗಿದ್ದು ಕಾಲೋನಿಯ ಜನರು ನಮ್ಮದು ನರಕದ ಜೀವನ ಅಂತ ನಗರಸಭೆ, ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.