Tag: Chain Thieves

  • ಚೈನ್ ಕಳ್ಳರನ್ನು ಹಿಡಿದು ಥಳಿಸಿದ ಅಮ್ಮ ಮಗಳು: ವಿಡಿಯೋ

    ಚೈನ್ ಕಳ್ಳರನ್ನು ಹಿಡಿದು ಥಳಿಸಿದ ಅಮ್ಮ ಮಗಳು: ವಿಡಿಯೋ

    ನವದೆಹಲಿ: ತಮ್ಮ ಬಳಿ ಚೈನ್ ಕಿತ್ತುಕೊಂಡು ಹೋಗಲು ಬಂದ ಇಬ್ಬರು ಕಳ್ಳರನ್ನು ಅಮ್ಮ ಮಗಳ ಹಿಡಿದು ಥಳಿಸಿರುವ ಘಟನೆ ಪಶ್ಚಿಮ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂಗ್ಲೋಯಿ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಅಮ್ಮ ಮತ್ತು ಮಗಳ ಮುಂದೆ ಬೈಕಿನಲ್ಲಿ ಬಂದ ಇಬ್ಬರು ಅಮ್ಮನ ಕೊರಳಲ್ಲಿ ಇದ್ದ ಸರ ಕಸಿದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆಗ ಅಮ್ಮ ಮಗಳು ಇಬ್ಬರು ಸೇರಿ ಕಳ್ಳನ್ನು ಹಿಡಿದು ಥಳಿಸುವ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ವಿಡಿಯೋದಲ್ಲಿ ರಸ್ತೆ ದಾಟುತ್ತಿದ್ದ ಅಮ್ಮ ಮಗಳ ಮುಂದೆ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಸರವನ್ನು ಕಿತ್ತುಕೊಂಡು ಹೋಗಲು ಪ್ರಯತ್ನ ಮಾಡುತ್ತಾರೆ. ತಕ್ಷಣ ಎಚ್ಚೆತ್ತುಕೊಂಡ ಅಮ್ಮ ಮಗಳು ಹಿಂಬದಿಯಲ್ಲಿ ಕುಳಿತ್ತಿದ್ದ ಕಳ್ಳನನ್ನು ಹಿಡಿದುಕೊಂಡು ಇಬ್ಬರು ಕಳ್ಳರನ್ನು ಬೈಕಿನ ಸಮೇತ ಕೆಳಗೆ ಬೀಳಿಸುತ್ತಾರೆ. ಇದರಲ್ಲಿ ಒಬ್ಬ ತಪ್ಪಿಸಿಕೊಂಡು ಹೊಗುತ್ತಾನೆ ಆದರೆ ಒಬ್ಬನನ್ನು ಬಿಗಿಯಾಗಿ ಹಿಡಿದುಕೊಂಡ ಅಮ್ಮ ಮಗಳು ಸ್ಥಳೀಯರ ಸಹಾಯದಿಂದ ಕಳ್ಳನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.

    ಚೈನ್ ಕಳ್ಳನನ್ನು ಹಿಡಿದು ಥಳಿಸಿದ ಅಮ್ಮ ಮಗಳು ಮತ್ತು ಸ್ಥಳೀಯರು ನಂತರ ಅವನನ್ನು ಪೊಲೀಸರುಗೆ ಒಪ್ಪಿಸಿದ್ದಾರೆ. ಒಬ್ಬನನ್ನು ಕರೆದುಕೊಂಡು ಹೋಗಿ ತನಿಖೆ ಮಾಡಿರುವ ದೆಹಲಿ ಪೊಲೀಸರು ತಪ್ಪಿಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಅರೋಪಿಗಳನ್ನು ಅಬ್ದುಲ್ ಶಂಶಾದ್ ಮತ್ತು ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸರು, ತನಿಖೆಯಲ್ಲಿ ಈ ಇಬ್ಬರು ಆರೋಪಿಗಳು ತುಂಬಾ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಇವರು ಎರಡು ಚಿನ್ನದ ಚೈನ್ ಮತ್ತು ಮೂರು ಬೈಕ್‍ಗಳು ಎರಡು ಮೊಬೈಲ್‍ಗಳನ್ನು ಕಳವು ಮಾಡಿದ್ದರು ಎಂದು ಹೇಳಿದ್ದಾರೆ.