Tag: chain Theft

  • ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್

    ಕಾಂಗ್ರೆಸ್ ಸಂಸದೆ ಸರ ಕಳವು ಪ್ರಕರಣ – ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸ್

    ನವದೆಹಲಿ: ವಾಕಿಂಗ್ ಹೋಗಿದ್ದ ಕಾಂಗ್ರೆಸ್ (Congress) ಸಂಸದೆ ಸುಧಾ ರಾಮಕೃಷ್ಣನ್ (Sudha Ramakrishnan) ಅವರ ಸರ ದೋಚಿ ಪರಾರಿಯಾಗಿದ್ದ ಕಳ್ಳರನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.

    ಆಗಸ್ಟ್ 4ರಂದು ತಮಿಳುನಾಡಿನ ಮೈಲಾಡುತುರೈನ ಸಂಸದೆ ಸುಧಾ ಅವರು ಚಾಣಕ್ಯಪುರಿಯ ಪೋಲೆಂಡ್ ರಾಯಭಾರ ಕಚೇರಿಯ ಬಳಿ ಡಿಎಂಕೆ ಶಾಸಕಿ ರಾಜತಿ ಅವರ ಜೊತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಸುಧಾ ಅವರ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದ. ಇದನ್ನೂ ಓದಿ: ಡಿಕೆಶಿ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು: ಇಕ್ಬಾಲ್ ಹುಸೇನ್

    ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಇದೀಗ ಪೊಲೀಸರು ಖದೀಮನನ್ನು ಬಂಧಿಸಿದ್ದು, ಆತನಿಂದ ಚಿನ್ನದ ಸರವನ್ನೂ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಓಖ್ಲಾ ನಿವಾಸಿಯೆಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದಲ್ಲೇ ಸರಗಳ್ಳತನ- ಇಬ್ಬರು ಅರೆಸ್ಟ್

    ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದಲ್ಲೇ ಸರಗಳ್ಳತನ- ಇಬ್ಬರು ಅರೆಸ್ಟ್

    ಬೆಂಗಳೂರು: ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆಯ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡಿರುವ ಆರೋಪಿಗಳಿಬ್ಬರನ್ನು ಇದೀಗ ಬಂಧಿಸಲಾಗಿದೆ.

    ಹರೀಶ್ ಹಾಗೂ ಸುರೇಶ್‍ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಇವರು ಒಂದು ವರ್ಷದಿಂದ ಗಿರಿನಗರ (Girinagar) ಹಾಗೂ ಸಿ.ಕೆ ಅಚ್ಚುಕಟ್ಟು ಸೇರಿ ಹಲವು ಠಾಣೆಗಳ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡುತ್ತಿದ್ದರು. ಪ್ರತಿಯೊಂದು ತಿಂಗಳು ಒಂದೊಂದು ಠಾಣೆಯ ಪಕ್ಕದ ರಸ್ತೆಯಲ್ಲಿ ಕಳ್ಳತನ ಎಸಗುತ್ತಿದ್ದರು. ಹೀಗೆ ಮಾಡುತ್ತಾ ಒಂದು ವರ್ಷದಿಂದಲೂ ಪೊಲೀಸರಿಗೆ ಸಿಗದೆ ನಾಪತ್ತೆ ಆಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸರು (Girinagar Police) ಸರಗಳ್ಳರ ಬಂಧನಕ್ಕೆ ವಿಶೇಷ ತಂಡಗಳು ರಚನೆ ಮಾಡಿದ್ದರು. ಇದನ್ನೂ ಓದಿ: ದೇಗುಲ ಮಠದ ಮೂವರು ವಿದ್ಯಾರ್ಥಿಗಳು ನಾಪತ್ತೆ‌- ದೂರು ನೀಡಿದ ವಾರ್ಡನ್

    ಒಮ್ಮೆ ಸರಗಳ್ಳತನ ಮಾಡಿದ್ರೆ ಇಡೀ ತಿಂಗಳು ಎದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಸುರೇಶ್ ಝೋಮೋಟೋ ಬಾಯ್ ಆಗಿ ಕೆಲಸ ಮಾಡಿದ್ರೆ, ಹರೀಶ್ ವಿದ್ಯಾರ್ಥಿಯಾಗಿದ್ದ. ಒಂದು ಬಾರಿಯೂ ಬಂಧನವಾಗದೆ ಆರೋಪಿಗಳು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು. ಐಷಾರಾಮಿ ಜೀವನ ನಡೆಸಲು ಆರೋಪಿಗಳು ಸರಗಳ್ಳತನ ಮಾಡ್ತಿದ್ದರು. ವೀಕ್ ಎಂಡ್ ನಲ್ಲಿ ಮೋಜು ಮಸ್ತಿ ಮಾಡಲು ಪಬ್ ಗೆ ಹೋಗ್ತಿದ್ದರು.

    ಸದ್ಯ ಸಿಸಿಟಿವಿ ಹಾಗೂ ಕೆಲ ಟೆಕ್ನಿಕಲ್ ಎವಿಡೆನ್ಸ್ ನಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಗಿರಿನಗರ ಪೊಲೀಸರಿಂದ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಕ್. ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳು ಅರೆಸ್ಟ್

    ಬೈಕ್. ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳು ಅರೆಸ್ಟ್

    ಬೆಂಗಳೂರು: ರಾಜಧಾನಿಯಲ್ಲಿ ಬೈಕ್ ಹಾಗೂ ಸರಗಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳನ್ನು ನಗರದ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

    ದೊಂಬರಹಳ್ಳಿ ಮಂಜಕಳ್ ಮಂಜ, ದೀಪಕ್ ಪಾಕ, ಮನು, ದಯನಂದ್, ಮುನಿಸ್ವಾಮಿ, ಸತೀಶ್, ಕಳ್ ಮಂಜನ ಜೊತೆ ಸಹಕರಿಸಿದ್ದ ಅವನ ತಾಯಿ ಪ್ರೇಮಾ, ತಂಗಿ ಅನ್ನಪೂರ್ಣ ಬಂಧಿತ ಆರೋಪಿಗಳು.
    ಬಂಧಿತರಿಂದ 44 ಲಕ್ಷ ಬೆಲೆಬಾಳುವ 23 ಬೈಕ್, 2 ಕಾರು ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಈ ಹಿಂದೆ ಬಾಡಿಗೆ ಮನೆ ನೋಡುವ ನೆಪದಲ್ಲಿ ಲಾಂಗ್ ತೋರಿಸಿ ಬೆದರಿಸಿ ಬಾಗಲಗುಂಟೆಯಲ್ಲಿ ಶಿಕ್ಷಕಿಯ ಸರಗಳವು ಮಾಡಿದ್ದರು. ಮಾದನಾಯಕನಹಳ್ಳಿಯಲ್ಲಿ ಬುಲೆಟ್ ಬೈಕ್‍ನಲ್ಲಿ ಮಹಿಳೆಯನ್ನ ಅಡ್ಡಗಟ್ಟಿ ಸರಗಳವು ಮಾಡಿದ್ದರು. ಕಳ್ಳತನ ಮಾಡುವ ವೇಳೆ ಏನೂ ಸಿಕ್ಕಿಲ್ಲ ಅಂದರೆ ಕುರಿ-ಮೇಕೆ, ಸಾಕಿದ್ದ ಹಂದಿಯನ್ನು ಕೂಡಾ ಬಿಡದೇ ಕದಿಯುತ್ತಿದ್ದರು. ಬಳಿಕ ಗ್ಯಾಂಗ್ ಎಲ್ಲರೂ ಸೇರಿ ಭರ್ಜರಿ ಬಾಡೂಟ ಮಾಡಿ ಪಾರ್ಟಿ ಮಾಡುತ್ತಿದ್ದರು. ಕದ್ದ ಚಿನ್ನದ ಸರಗಳನ್ನು ಕಳ್ ಮಂಜನ ಜೊತೆ ಸಹಕರಿಸುತ್ತಿದ್ದ ಅವನ ತಾಯಿ ಹಾಗೂ ತಂಗಿಯ ಮುಖಾಂತರವಾಗಿ ಸೇಠುಗಳಿಗೆ ಮಾರುತ್ತಿದ್ದರು. ಇದನ್ನೂ ಓದಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?

    ಪೊಲೀಸರ ತಂಡವೊಂದು ಶಿಕ್ಷಕಿಯ ಸರ ಕದ್ದ ಬುಲೆಟ್ ಬೈಕ್ ಹಿಂದೆ ಬಿದ್ದಿದ್ದು ತಂಡಕ್ಕೆ ಇದು ಭರ್ಜರಿ ಪತ್ತೆ ಕಾರ್ಯವಾಗಿತ್ತು. ಆರೋಪಿಗಳು ಬಾಗಲಗುಂಟೆ, ಪೀಣ್ಯಾ, ನೆಲಮಂಗಲ, ಮಾದನಾಯಕನಹಳ್ಳಿ, ಕಾಮಾಕ್ಷಿ ಪಾಳ್ಯ, ವರ್ತೂರು, ನಂದಿನಿಲೇಔಟ್, ರಾಜಗೋಪಾಲ ನಗರ, ಹೆಣ್ಣೂರು, ಸೋಲದೇವನಹಳ್ಳಿ ಸೇರಿದಂತೆ 30 ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯಗಳಲ್ಲಿ ಭಾಗಿಯಾಗಿದ್ದರು.

    ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುದುಕಿ ಎನ್ನುವುದನ್ನೂ ಲೆಕ್ಕಿಸದ ಕಳ್ಳರು- ಎಳೆದ ರಭಸಕ್ಕೆ ನೆಲಕ್ಕುರುಳಿ ಒದ್ದಾಡಿದ ವೃದ್ಧೆ

    ಮುದುಕಿ ಎನ್ನುವುದನ್ನೂ ಲೆಕ್ಕಿಸದ ಕಳ್ಳರು- ಎಳೆದ ರಭಸಕ್ಕೆ ನೆಲಕ್ಕುರುಳಿ ಒದ್ದಾಡಿದ ವೃದ್ಧೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಮಹಿಳೆಯರು, ವೃದ್ಧೆಯರು ಚಿನ್ನಾಭರಣ ಧರಿಸಿ ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧೆಯನ್ನೂ ಬಿಡದ ಕಳ್ಳರು, ಸರ ಕದಿಯುವ ಭರದಲ್ಲಿ ಹಲ್ಲೆ ನಡೆಸಿದ್ದಾರೆ.

    ಅಜ್ಜಿಯನ್ನೂ ಬಿಡದ ಕಳ್ಳ ಕುತ್ತಿಗೆಯಲ್ಲಿನ ಸರಕ್ಕೆ ಕೈ ಹಾಕಿ ಎಳೆದು ನೆಲಕ್ಕೆ ಬೀಳಿಸಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪರಿಚಯಸ್ಥರ ರೀತಿ ಮಾತನಾಡಿಕೊಂಡು ಹತ್ತಿರ ಬಂದು ಸರ ಎಳೆದಿದ್ದಾನೆ.

    ಬೈಕ್‍ನಲ್ಲಿದ್ದ ಕಳ್ಳರು ನಿಧಾನವಾಗಿ ಬಂದು ವೃದ್ಧೆಯ ಸರಕ್ಕೆ ಕೈ ಹಾಕಿ ಎಳೆದಿದ್ದಾರೆ. ಎಳೆಯುವ ರಭಸಕ್ಕೆ ಅಜ್ಜಿ ಮಕಾಡೆ ಬೀಳುತ್ತಾರೆ. ಆಗ ಕಳ್ಳ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾರೆ. ಅಜ್ಜಿಯ ಸರ ಕೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗೇಟಿನೊಳಗೆ ಹೋಗುತ್ತಿದ್ದ ಅಜ್ಜಿಯನ್ನು ಮಾತನಾಡಿಸುವ ನೆಪದಲ್ಲಿ ತಡೆದು ಕಳ್ಳರು ಕೈ ಚಳಕ ತೋರಿದ್ದಾರೆ. ಈ ಕುರಿತು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ನೆಲಮಂಗಲ: ಅಡ್ರೆಸ್ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿಯಾದ್ರು

    ನೆಲಮಂಗಲ: ಅಡ್ರೆಸ್ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿಯಾದ್ರು

    ಬೆಂಗಳೂರು: ಬ್ಲಾಕ್ ಪಲ್ಸರ್‍ನಲ್ಲಿ ಬಂದ ಇಬ್ಬರು ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಗೆ ಅಡ್ರೆಸ್ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಪಟ್ಟಣದ ಸುಭಾಷ್ ನಗರದಲ್ಲಿ ನಡೆದಿದೆ.

    ಸುಜಾತಾ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ಇಂದು ಬೆಳಗಿನ ಜಾವ ಸುಮಾರು 6 ಗಂಟೆ ವೇಳೆಯಲ್ಲಿ ಸುಜಾತಾ ಅವರು ಮನೆಯ ಮುಂದೆ ರಂಗೋಲಿ ಹಾಕುವಾಗ ಬೈಕ್‍ನಲ್ಲಿ ಬಂದ ಇಬ್ಬರು ವಿಳಾಸ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕದಿಯಲು ಪ್ರಯತ್ನಿಸಿದ್ದಾರೆ. ಸುಜಾತ ಅವರು ಭಯದಿಂದ ಕಿರುಚಿದಾಗ ಸ್ಥಳೀಯರು ನೆರವಿಗೆ ಧಾವಿಸುತ್ತಿದ್ದಂತೆ ಕಳ್ಳರು ಕೇವಲ ಅರ್ಧದಷ್ಟು ಮಾತ್ರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ಸುಮಾರು 15 ಗ್ರಾಂ. ಬಂಗಾರ ಕಳ್ಳತನವಾಗಿದೆ ಎಂದು ಸುಜಾತಾ ಅವರು ತಿಳಿಸಿದ್ದಾರೆ. ಈ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.