Tag: chain snatcher

  • ಎಸ್ಕೇಪ್ ಆಗುತ್ತಿದ್ದ ಸರಗಳ್ಳನನ್ನು ಚಾಣಕ್ಷತನದಿಂದ ಹಿಡಿದ ಪೊಲೀಸ್ – ವೀಡಿಯೋ ವೈರಲ್

    ಎಸ್ಕೇಪ್ ಆಗುತ್ತಿದ್ದ ಸರಗಳ್ಳನನ್ನು ಚಾಣಕ್ಷತನದಿಂದ ಹಿಡಿದ ಪೊಲೀಸ್ – ವೀಡಿಯೋ ವೈರಲ್

    ನವದೆಹಲಿ: ಪೊಲೀಸ್ ಪೇದೆಯೊಬ್ಬರು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಹಿಡಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ಘಟನೆಯ ವೀಡಿಯೋವನ್ನು ದೆಹಲಿ (Delhi) ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಪ್ರಾಣವನ್ನು ಲೆಕ್ಕಿಸದೇ, ಶಹಬಾದ್ ಡೈರಿ ಪೊಲೀಸ್ ಠಾಣೆಯ (Shahabad Dairy police station) ಕಾನ್‍ಸ್ಟೆಬಲ್ ಸತ್ಯೇಂದ್ರ ಕಳ್ಳನನ್ನು ಹಿಡಿದು ಬಂಧಿಸಿದ್ದಾರೆ. ಈ ಕಳ್ಳನ ಬಂಧನದೊಂದಿಗೆ 11 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಈ ಸಂಬಂಧ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್‌ಗಳು ತಾತ್ಕಾಲಿಕ ಸ್ಥಗಿತ

    ಕಾನ್‍ಸ್ಟೆಬಲ್‍ನ ಕೆಚ್ಚೆದೆಯ ಕಾರ್ಯದಿಂದ ಕಳ್ಳತನವಾಗುತ್ತಿದ್ದ ಮಹಿಳೆಯ ನೆಕ್ಲೇಸ್ ಉಳಿದಿದೆ. ಈ ಹಿಂದೆ ಶಹಾಬಾದ್ ಡೈರಿ ಪೊಲೀಸ್ ಠಾಣೆಯವರು ಸರಗಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಕಳ್ಳನನ್ನು ಪತ್ತೆ ಹಚ್ಚಲು ಕಾನ್‍ಸ್ಟೆಬಲ್ ಸತ್ಯೇಂದ್ರ ತೆರಳಿದ್ದರು. ಇದನ್ನೂ ಓದಿ: ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ ಈ ಬಗ್ಗೆ ಮಾಹಿತಿ ಇದೆ: ಕೆ.ಜಿ ಬೋಪಯ್ಯ ಸ್ಫೋಟಕ ಹೇಳಿಕೆ

    ವೀಡಿಯೋದಲ್ಲಿ ಕ್ರಿಮಿನಲ್ ಒಂದು ಕಡೆಯಿಂದ ಬರುತ್ತಿದ್ದಂತೆಯೇ ಕಾನ್‍ಸ್ಟೆಬಲ್ ತನ್ನ ಬೈಕನ್ನು ನಿಧಾನಗೊಳಿಸುತ್ತಾರೆ. ಪೊಲೀಸ್ ಅನ್ನು ಕಂಡ ಆರೋಪಿ ಗಾಬರಿಯಿಂದ ಎಸ್ಕೇಪ್ ಆಗಲು ಪ್ರಯತ್ನಿಸುತ್ತಾನೆ. ಆದರೆ ತಕ್ಷಣವೇ ಸತ್ಯೇಂದ್ರ ಅವರು ಆತನನ್ನು ಬಿಗಿಯಾಗಿ ಹಿಡಿದು, ತಪ್ಪಿಸಿಕೊಳ್ಳದಂತೆ ತಡೆಯುವುದನ್ನು ಕಾಣಬಹುದಾಗಿದೆ. ಇನ್ನೂ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅದ್ಭುತ, ಸೂಪರ್ ಎಂದು ಕಾನ್‍ಸ್ಟೆಬಲ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎರಡು ವರ್ಷಗಳಿಂದ ಪೊಲೀಸರಿಗೆ ಸಿಗದ ಖತರ್ನಾಕ್ ಕಳ್ಳ

    ಎರಡು ವರ್ಷಗಳಿಂದ ಪೊಲೀಸರಿಗೆ ಸಿಗದ ಖತರ್ನಾಕ್ ಕಳ್ಳ

    – ಪೊಲೀಸರಿಗೆ ತಲೆನೋವಾದ ಕಳ್ಳನ ನಿಗೂಢ ಹೆಜ್ಜೆ
    – 40ಕ್ಕೂ ಹೆಚ್ಚು ಸರಗಳ್ಳತನ

    ಬೆಂಗಳೂರು: ನಗರ ಪೊಲೀಸರು ಕಳೆದ ಎರಡು ವರ್ಷಗಳಿಂದ ಸರಗಳ್ಳನ ಬಂಧನಕ್ಕೆ ಬಲೆ ಬೀಸಿದ್ದು, ಚಾಲಾಕಿ ಕಳ್ಳ ಪದೇ ಪದೇ ಚಳ್ಳೆಹಣ್ಣು ತಿನ್ನಿಸಿ ಕ್ಷಣಾರ್ಧದಲ್ಲಿ ಮಾಯವಾಗ್ತಿದ್ದಾನೆ,

    ಕಳೆದ ಎರಡು ವರ್ಷದಿಂದ ಬೆಂಗಳೂರಿಗೆ ತನ್ನ ಈ ಕಪ್ಪು ಪಲ್ಸರ್ ಬೈಕ್ ನಲ್ಲಿ ಕಳ್ಳ ಬರುತ್ತಿದ್ದಾನೆ. ಹೀಗೆ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡುವ ಈ ಕಳ್ಳ ವಾಯುವಿಹಾರಕ್ಕೆ ಬಂದಿರುವ ಮಹಿಳೆಯರ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದಾನೆ. ಇದುವರೆಗೂ 70ಕ್ಕೂ ಹೆಚ್ಚು ಸರಗಳ್ಳತನ ಇವನೇ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸರಗಳ್ಳ ಪ್ರತಿ ಬಾರಿಯೂ ತನ್ನ ಬೈಕ್ ನ ನಂಬರ್ ಪ್ಲೇಟನ್ನ ಬದಲಾಯಿಸಿಕೊಳ್ಳುತ್ತಿದ್ದಾನೆ.

    50 ವರ್ಷ ಮೇಲ್ಪಟ್ಟವರು ರಸ್ತೆಯಲ್ಲಿ ಓಡಾಡ್ತಾರೋ ಅಂತವರನ್ನ ಸೂಕ್ಷ್ಮವಾಗಿ ಗಮನಿಸಿ ಫಾಲೋ ಮಾಡ್ತಾನೆ. ನಂತರ ನೇರವಾಗಿ ಹತ್ತಿರಕ್ಕೆ ಹೋಗಿ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದಾನೆ. ಬೆಂಗಳೂರಿನ ಗಿರಿನಗರ, ಹನುಮಂತನಗರ, ಬನಶಂಕರಿ, ಕೆಂಗೇರಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ಠಾಣೆಯಲ್ಲಿ ಸರಗಳ್ಳತನ ಮಾಡಿದ್ದಾನೆ. ಈತನ ಜಾಡನ್ನ ಹಿಡಿದು ಹೊರಟ ಪೊಲೀಸರಿಗೆ ಒಂದೆರಡು ಬಾರಿ ಕಳ್ಳ ಬಳಸುತ್ತಿದ್ದ ಮೊಬೈಲ್ ಸಿಮ್ ನ ಲೊಕೇಶನ್ ಕೂಡ ದೊರೆತಿತ್ತು. ಆದ್ರೆ ಆ ಮೊಬೈಲ್ ನೀಡಿದ ಸುಳಿವನ್ನ ಕೂಡ ಕಳ್ಳ ಹುಸಿ ಮಾಡಿದ್ದಾನೆ. ಇದನ್ನೂ ಓದಿ: ಯೂಟ್ಯೂಬ್‍ನಿಂದ ಸರಗಳ್ಳತನ ಕಲಿತ- ಕೋಟೆನಾಡಲ್ಲಿನ ಖತರ್ನಾಕ್ ಗ್ಯಾಂಗ್ ಅಂದರ್

    ಕಳ್ಳ ಸಿಟಿಗೆ ಬರುವ ಎಂಟ್ರಿ ಹಾಗೂ ಎಕ್ಸಿಟ್ ಪ್ರತೀ ಬಾರಿಯೂ ಬೇರೆ ಬೇರೆಯೇ ಆಗಿರುತ್ತಿದ್ದರಿಂದ ಪೊಲೀಸರ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಬೆಂಗಳೂರು ಸಿಟಿ ಪೊಲೀಸರು ಈ ಒಂಟಿ ಸರಗಳ್ಳನ ಬೆನ್ನ ಬಿದ್ದಿದ್ದು ಶತಾಯಗತಾಯ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಸರಗಳ್ಳತನ ಮಾಡ್ತಿದ್ದ ದಂಡುಪಾಳ್ಯದ ನಟೋರಿಯಸ್ ಮರಿ ರಾಕ್ಷಸ ಅರೆಸ್ಟ್

  • ಸಿನಿಮೀಯವಾಗಿ ಚೇಸ್ ಮಾಡಿ ಬೈಕಿಗೆ ಡಿಕ್ಕಿ ಹೊಡೆದು ಕಳ್ಳನನ್ನು ಹಿಡಿದ ಆಟೋ ಚಾಲಕ

    ಸಿನಿಮೀಯವಾಗಿ ಚೇಸ್ ಮಾಡಿ ಬೈಕಿಗೆ ಡಿಕ್ಕಿ ಹೊಡೆದು ಕಳ್ಳನನ್ನು ಹಿಡಿದ ಆಟೋ ಚಾಲಕ

    ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ಚಿನ್ನದ ಸರವನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಸಿನಿಮೀಯ ರೀತಿಯಲ್ಲಿ ಆಟೋ ಚಾಲಕರೊಬ್ಬರು ಚೇಸ್ ಮಾಡಿ ಹಿಡಿದಿದ್ದಾರೆ.

    ಸಿಲಿಕಾನ್ ಸಿಟಿಯ ಮಾರತಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾರತಹಳ್ಳಿಯ ಮ್ಯಾಕ್ಸ್ ಶೋರೂಮ್ ಮುಂಭಾಗ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆ.ಜಿ ಹಳ್ಳಿ ನಿವಾಸಿ ವಿಘ್ನೇಶ್ ಮಹಿಳೆಯ ಚಿನ್ನದ ಸರಕ್ಕೆ ಹೊಂಚು ಹಾಕಿ, ಆಕೆಯನ್ನು ಅಡ್ಡಗಟ್ಟಿ ಚಿನ್ನದ ಸರವನ್ನು ಕಿತ್ತು ಪರಾರಿ ಆಗುತ್ತಿದ್ದ. ಈ ವೇಳೆ ಕಳ್ಳತನದ ದೃಶ್ಯವನ್ನು ಗಮನಿಸಿದ ಆಟೋ ಚಾಲಕ ಹನುಮಂತ ಕಳ್ಳನನ್ನು ಹಿಂಬಾಲಿಸಿಕೊಂಡು ಹೋಗಿ ಆತನ ದ್ವಿಚಕ್ರ ವಾಹನಕ್ಕೆ ಆಟೋವನ್ನು ಡಿಕ್ಕಿ ಹೊಡೆಸಿದ್ದಾರೆ. ಇದನ್ನೂ ಓದಿ: ಸರ ಕದ್ದು ಕತ್ತನ್ನೂ ಸೀಳ್ತಾರೆ- ಬೆಂಗ್ಳೂರಿಗೆ ಎಂಟ್ರಿ ಕೊಟ್ಟಿದೆ ರಕ್ತಪಿಪಾಸು ಗ್ಯಾಂಗ್

    ಆಗ ಮತ್ತೆ ಕಳ್ಳ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಅವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆ ಬಳಿಕ ಆಟೋ ಚಾಲಕ ಹನುಮಂತ ಹಾಗೂ ಸಾರ್ವಜನಿಕರು ಖದೀಮನನ್ನು ಮಾರತಹಳ್ಳಿ ಪೋಲಿಸರಿಗೆ ಒಪ್ಪಿಸಿದ್ದಾರೆ.

    ಆಟೋ ಚಾಲಕ ಹನುಮಂತನ ಸಾಹಸದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಟೋ ಚಾಲಕನ ಧೈರ್ಯ ಮತ್ತು ಸಾಹಸಕ್ಕೆ ಪೋಲಿಸ್ ಇಲಾಖೆ ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದು, ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಆಟೋ ಚಾಲಕ ಹನುಮಂತನಿಗೆ 10 ಸಾವಿರ ರೂ. ಬಹುಮಾನ ವಿತರಿಸಿದ್ದಾರೆ.

    ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಸರಗಳ್ಳತನಕ್ಕೆ ಬಂದವ ಮಹಿಳೆ ಮೇಲೆ ಡ್ರ್ಯಾಗರ್‌ನಿಂದ ಅಟ್ಯಾಕ್ ಮಾಡ್ದ!

    ಸರಗಳ್ಳತನಕ್ಕೆ ಬಂದವ ಮಹಿಳೆ ಮೇಲೆ ಡ್ರ್ಯಾಗರ್‌ನಿಂದ ಅಟ್ಯಾಕ್ ಮಾಡ್ದ!

    ಬೆಂಗಳೂರು: ಸಾಮಾನ್ಯವಾಗಿ ಸರಗಳ್ಳರು ತಮ್ಮ ಕೃತ್ಯವನ್ನ ಎಸಗಲು ನಿರ್ಜನ ಪ್ರದೇಶವನ್ನ ಆರಿಸಿಕೊಳುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನಿಗೆ ಅದ್ಯಾವ ಭಂಡ ಧೈರ್ಯವೋ ಗೊತ್ತಿಲ್ಲ. ಜನರ ಮುಂದೆಯೇ ಕೈಚಳಕ ತೋರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.

    ಎಂಜಿ ರಸ್ತೆಯಲ್ಲಿ ನೂರಾರು ಜನರ ಮುಂದೆಯೇ ಸರಗಳ್ಳ ತನ್ನ ಕೈಚಳಕ ತೋರಿಸಲು ಯತ್ನಿಸಿದ್ದು, ಭಾನುವಾರ ಸಂಜೆ 7.30ರ ಸಮಯದಲ್ಲಿ ಸವಿತಾ ಎಂಬವರು ಮಕ್ಕಳನ್ನು ಆಡಿಸುತ್ತಿದ್ದ ವೇಳೆ ಮೊಹಮ್ಮದ್ ದಸ್ತಗೀರ್ ಎಂಬಾತ ಮಹಿಳೆ ಕೈಗೆ ಡ್ರ್ಯಾಗರ್‍ನಿಂದ ಇರಿದು ಸರ ಕಿತ್ತು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಸ್ಥಳದಲ್ಲಿ ಇದ್ದ ರೆವೆನ್ಯೂ ಇಲಾಖೆಯ ಗನ್ ಮ್ಯಾನ್ ರವೀಂದ್ರ ಎಂಬವರು ಕಳ್ಳನನ್ನ ಬೆನ್ನತ್ತಿದ್ದಾರೆ. ಆಗ ಮೊಹಮ್ಮದ್, ಗನ್ ಮ್ಯಾನ್ ಗೂ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಮೊಹಮ್ಮದ್ ನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

    ಘಟನೆ ಕುರಿತು ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಡಾ. ಚಂದ್ರಗುಪ್ತ ಅವರು, ಸವಿತಾರ ಮೇಲೆ ದಾಳಿ ನಡೆಸುವ ಮುನ್ನ ಮೊಹಮ್ಮದ್ ಅದೇ ದಾರಿಯಲ್ಲಿ ಬರುತ್ತಿದ್ದ ಮತ್ತೊಬ್ಬ ಮಹಿಳೆಯ ಸರ ಕೀಳಲು ಹೋಗಿ ವಿಫಲನಾಗಿದ್ದ. ಆರೋಪಿಯ ಮೇಲೆ 20 ಸರಗಳ್ಳತನ ಪ್ರಕರಣಗಳಿದ್ದು, ಈ ಹಿಂದೆ ಪೊಲೀಸರಿಂದ ಗುಂಡೇಟು ತಿಂದಿದ್ದ ಎಂದು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.