Tag: Chadigarh

  • ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

    ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

    -ರಾಜಸ್ಥಾನದ ಜೈಸಲ್ಮೇರ್‌ನಲ್ಲೂ ಪಟಾಕಿ ಮಾರಾಟ, ಖರೀದಿ ನಿಷೇಧ

    ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ (India-Pakistan) ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಚಂಡೀಗಢ ಸರ್ಕಾರ (Chandigarh Government) 2 ತಿಂಗಳುಗಳ ಕಾಲ ಪಟಾಕಿ ನಿಷೇಧಿಸಿದೆ.

    ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಹಾಗೂ ಪಾಕ್ ನಡುವಿನ ಕಾದಾಟ ಹೆಚ್ಚಾಗುತ್ತಿದೆ. ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ `ಆಪರೇಷನ್ ಸಿಂಧೂರ’ದಡಿಯಲ್ಲಿ (Operation Sindoor) ಭಾರತೀಯ ಸೇನೆ ಪಾಕ್ ಮೇಲೆ ವಾಯುದಾಳಿ ನಡೆಸಿತ್ತು. ಬಳಿಕ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತವು ತಕ್ಕ ಉತ್ತರ ನೀಡಿದೆ.ಇದನ್ನೂ ಓದಿ: ನಮ್ಮ ನಾಯಕ ಹೇಡಿ.. ಮೋದಿ ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ: ತಮ್ಮ ಪ್ರಧಾನಿ ವಿರುದ್ಧವೇ ಗುಡುಗಿದ ಪಾಕ್ ಸಂಸದ

    ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಯುದ್ಧ ಭೀತಿ ಹಿನ್ನೆಲೆ ಇದೀಗ ಚಂಡೀಗಢ ಸರ್ಕಾರ ಎರಡು ತಿಂಗಳುಗಳ ಪಟಾಕಿ ನಿಷೇಧಿಸಿದೆ. ಮದುವೆ, ಶುಭ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಇನ್ನೂ ರಾಜಸ್ಥಾನದ ಜೈಸಲ್ಮೇರ್‌ನಲ್ಲಿಯೂ (Jaisalmer) ಪಟಾಕಿ ಸಿಡಿಸುವುದರ ಜೊತೆಗೆ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಿಲಾಗಿದೆ.

    ಈ ಕುರಿತು ಚಂಡೀಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಶಾಂತ್ ಕುಮಾರ್ ಯಾದವ್ ಮಾತನಾಡಿ, 2023ರ ಬಿಎನ್‌ಎಸ್ (BNS) ಸೆಕ್ಷನ್ 163ರ ಅಡಿಯಲ್ಲಿ 2025ರ ಮೇ 09 ರಿಂದ ಜುಲೈ 7ರವರೆಗೆ ಪಟಾಕಿ ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದಾರೆ.

    ಮದುವೆ, ಶುಭ ಸಮಾರಂಭ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಕಾರಣ ಯುದ್ಧ ಭೀತಿಯ ಸಂದರ್ಭದಲ್ಲಿ ಈ ರೀತಿ ಪಟಾಕಿ ಶಬ್ದವು ಡ್ರೋನ್ ಹಾಗೂ ಕ್ಷಿಪಣೆ ದಾಳಿಯ ಭ್ರಮೆಯನ್ನು ಸೃಷ್ಟಿಸಿ, ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತದೆ. ಹೀಗಾಗಿ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ

  • ಅಪ್ರಾಪ್ತೆಯನ್ನು ಅಪಹರಿಸಿ ಗ್ಯಾಂಗ್‍ರೇಪ್!

    ಅಪ್ರಾಪ್ತೆಯನ್ನು ಅಪಹರಿಸಿ ಗ್ಯಾಂಗ್‍ರೇಪ್!

    -ರಾತ್ರಿ ಬಾಲಕಿಯನ್ನು ನಡುರಸ್ತೆಯಲ್ಲಿ ಬಿಟ್ಟು ಪರಾರಿ

    ಚಂಡಿಗಢ: 7 ವರ್ಷದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸೆಗಿರುವ ಅಮಾನವೀಯ ಘಟನೆ ಹರಿಯಾಣದ ರೋಹ್ಟಕ್ ಪ್ರದೇಶದ ರೈಲ್ವೇ ಯಾರ್ಡ್ ಬಳಿ ನಡೆದಿದೆ.

    ಗುರುವಾರ ಸಂಜೆ ವೇಳೆ ರೋಹ್ಟಕ್ ರೈಲ್ವೇ ನಿಲ್ದಾಣದಿಂದ 300 ಮೀ. ದೂರದಲ್ಲಿರುವ ರೈಲ್ವೇ ಯಾರ್ಡ್ ಬಳಿ ಬಾಲಕಿಯನ್ನು ಮೂವರು ಕಾಮುಕರು ಅಪಹರಿಸಿದ್ದಾರೆ. ಬಳಿಕ ರಾತ್ರಿ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದಾರಿ ಮೇಲೆಯೇ ಬಿಟ್ಟು ಹೋಗಿದ್ದಾರೆ. ನಂತರ ಬಾಲಕಿ ಹೇಗೋ ಮನೆಯನ್ನು ತಲುಪಿ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಈ ಕುರಿತು ತಿಳಿಯುತ್ತಿದ್ದಂತೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಮೂವರು ಆರೋಪಿಗಳಲ್ಲಿ ಸಂತ್ರಸ್ತೆಯ ತಂದೆ ಓರ್ವನನ್ನು ಗುರುತಿಸಿದ್ದಾರೆ. ಇನ್ನುಳಿದವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ರೈಲ್ವೇ ನಿಲ್ದಾಣ ಮತ್ತು ಘಟನಾ ಸ್ಥಳದ ಆಸುಪಾಸಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದ ಹಿನ್ನೆಲೆಯಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿಲ್ಲ. ಆದರೂ ಕೂಡ ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಘಟನೆ ಕುರಿತು ರೋಹ್ಟಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮೊಬೈಲ್ ವ್ಯಾಲೆಟ್ ಮೊಬಿ ಕ್ವಿಕ್ ಅಕೌಂಟ್‍ನಿಂದ 19 ಕೋಟಿ ರೂ. ನಾಪತ್ತೆ!

    ಮೊಬೈಲ್ ವ್ಯಾಲೆಟ್ ಮೊಬಿ ಕ್ವಿಕ್ ಅಕೌಂಟ್‍ನಿಂದ 19 ಕೋಟಿ ರೂ. ನಾಪತ್ತೆ!

    ಚಂಡೀಘಡ: ಡಿಜಿಟಲ್ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಸಂಸ್ಥೆಯ ಖಾತೆಯಿಂದ ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿದೆ.

    ಮೊಬಿಕ್ವಿಕ್ ಸಂಸ್ಥೆಯ ಖಾತೆಗಳನ್ನು ಪರೀಶಿಲನೆಯನ್ನು ಮಾಡಿದ ನಂತರ ಭಾರೀ ಮೊತ್ತದ ಹಣವು ನಾಪತ್ತೆಯಾಗಿರುವ ಮಾಹಿತಿ ಹೊರಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಸಂಸ್ಥೆಯ ಅಧಿಕಾರಿಗಳು ಹಣ ನಾಪತ್ತೆಯಾಗಿರುವ ಕುರಿತು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಮೊಬಿಕ್ವಿಕ್ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಗ್ರಾಹಕರ ಖಾತೆಗಳಿಂದ ಕಡಿತವಾಗಬೇಕಿದ್ದ ಹಣ ಸಂಸ್ಥೆಯ ವೈಯಕ್ತಿಕ ಖಾತೆಯಿಂದ ಕಡಿತಗೊಳಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

    ಗುರುಗಾಂವ್ ಸೆಕ್ಟರ್ 53ರ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗದಲ್ಲಿ ಐಪಿಸಿ ಸೆಕ್ಷನ್ 420(ವಂಚನೆ) ಮತ್ತು 406(ಕ್ರಿಮಿನಲ್ ಅಪರಾಧ)ರ ಪ್ರಕಾರ ದೂರು ದಾಖಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಕರಣವನ್ನು ಇಂದು ದಾಖಲು ಮಾಡಿಕೊಳ್ಳಲಾಗಿದ್ದು, ದೂರಿನಲ್ಲಿ ನೀಡಿರುವ ಮಾಹಿತಿಯನ್ನು ಪರಿಶೀಲನೆಯನ್ನು ಮಾಡುತ್ತಿದ್ದೇವೆ. ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿರುವ ಕುರಿತು ದೂರಿನಲ್ಲಿ ಮಾಹಿತಿಯನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರ್ ಕ್ರೈಮ್ ವಿಭಾಗದ ಅಧಿಕಾರಿ ಅನಂದ್ ಯಾದವ್ ತಿಳಿಸಿದ್ದಾರೆ.

    ಸಂಸ್ಥೆಯ ಸಿಬ್ಬಂದಿ ಉದ್ದೇಶಪೂರ್ವವಾಗಿಯೇ ಲೋಪ ಎಸಗಿದ್ದಾರೋ ಅಥವಾ ಯಾವುದೋ ಬಗ್ ನಿಂದ ಹಣ ನಾಪತ್ತೆಯಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ. ಪ್ರಕರಣ ತನಿಖೆ ಪೂರ್ಣಗೊಳಿಸಿದ ನಂತರವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ.

    ಸಂಸ್ಥೆಯ ಹಣವು ನಾಪತ್ತೆಯಾದ ತಕ್ಷಣ ಗುರುಗಾಂವ್ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ನೀಡಿದ್ದೇವೆ. ಅಲ್ಲದೇ ಸಂಸ್ಥೆಯ ಖಾತೆಗಳಿಗೆ ಸೂಕ್ತ ರಕ್ಷಣೆಯನ್ನು ನೀಡಲಾಗಿದೆ ಎಂದು ಮೊಬಿಕ್ವಿಕ್ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಇಚ್ಚಿಗೆ ಅಂತರ್ಜಾಲದಲ್ಲಿ ಹಣವನ್ನು ವಂಚನೆ ಮಾಡುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, 2016ರ ನಂತರ ನಗರದಲ್ಲಿ ಸುಮಾರು 2,270 ಪ್ರಕರಣಗಳು ಸೈಬರ್ ವಂಚನೆ ಅಪರಾಧ ಅಡಿಯಲ್ಲಿ ದಾಖಲಾಗಿವೆ. 2015ರಲ್ಲಿ ವರ್ಷದಲ್ಲಿ ಸುಮಾರು 1,963 ಪ್ರಕರಣಗಳು ದಾಖಲಾಗಿದ್ದು, ಸುಮಾರು 15% ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೆ ಸುಮಾರು 1,260 ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‍ಲೈನ್ ಬ್ಯಾಂಕಿಂಗ್ ಮಾಡುವ ಸಮಯದಲ್ಲಿ ವಂಚನೆಗೊಳಗಾಗಿರುವ ಪ್ರಕರಣಕ್ಕೆ ಸಂಬಂಧಿಸಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.