Tag: chaddi

  • ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು, 20 ವರ್ಷ ಗುಪ್ತಾಂಗ ಮುಚ್ಚಲಾಗಿತ್ತು- ತಲಕಾಡು ಚಿಕ್ಕರಂಗೇಗೌಡ ಹೇಳಿಕೆ

    ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು, 20 ವರ್ಷ ಗುಪ್ತಾಂಗ ಮುಚ್ಚಲಾಗಿತ್ತು- ತಲಕಾಡು ಚಿಕ್ಕರಂಗೇಗೌಡ ಹೇಳಿಕೆ

    ಬೆಂಗಳೂರು: ಶ್ರವಣಬೆಳಗೊಳದ ಗೊಮ್ಮಟ್ಟೇಶ್ವರನಿಗೆ ಬ್ರಿಟಿಷರು ಚಡ್ಡಿ ಹಾಕಿದ್ರು. 19ನೇ ಶತಮಾನದಲ್ಲಿ 1800 ರಿಂದ 1820 ರವರೆಗೆ ಸುಮಾರು ಇಪತ್ತು ವರ್ಷಗಳ ಕಾಲ ಬಾಹುಬಲಿಯ ಗುಪ್ತಾಂಗವನ್ನು ಮುಚ್ಚಲಾಗಿತ್ತು ಎಂದು ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.

    ಸುಮಾರು ಆರು ಅಡಿ ತಗಡಿನ ವಸ್ತುವಿನಿಂದ ಬಾಹುಬಲಿ ಗುಪ್ತಾಂಗವನ್ನು ಮುಚ್ಚಲಾಗಿತ್ತು. ನಾಲ್ಕನೇ ಮೈಸೂರು ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷ್ ಸೇನಾನಿ ಸರ್ ಅರ್ಥರ್ ವೆಲ್ಲೆಸ್ಲೀ ಬಾಹುಬಲಿಗೆ ಚಡ್ಡಿ ತೊಡಿಸಿದ್ರು. ಈ ಬಗ್ಗೆ ಡಾ. ಫ್ರಾನ್‍ಸಿಸ್ ಬುಕಾನನ್ ಅವರು ಬರೆದಿರೋ ಪುಸ್ತಕದಲ್ಲಿ ಫೋಟೋ ಸಮೇತವಾಗಿ ಮಾಹಿತಿ ನೀಡಲಾಗಿದೆ ಅನ್ನೋದನ್ನ ತಲಕಾಡು ಚಿಕ್ಕ ರಂಗೇಗೌಡ್ರು ಸ್ಪಷ್ಟಪಡಿಸಿದ್ದಾರೆ.

    ಬ್ರಿಟಿಷ್ ಮಹಿಳೆಯರು ಬಾಹುಬಲಿಯನ್ನ ನೋಡೋಕೆ ಮುಜುಗರ ಪಟ್ಟುಕೊಳ್ಳುತ್ತಿದ್ರು ಅನ್ನೋ ಬಗ್ಗೆ ಸಹ ಪುಸ್ತಕದಲ್ಲಿ ಉಲ್ಲೇಖವಿದೆ ಎಂದು ಹೇಳಿದ್ದಾರೆ.