Tag: chadachana

  • ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು – ಎದೆಗೆ ಗುಂಡಿಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷನ ಹತ್ಯೆ

    ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು – ಎದೆಗೆ ಗುಂಡಿಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷನ ಹತ್ಯೆ

    -ಗುಂಡು ಹಾರಿಸಿ, ತಲವಾರ್‌ನಿಂದ ಹಲ್ಲೆ ಮಾಡಿ ಗ್ರಾಮ ಪಂಚಾಯಿತಿ ಎದುರೇ ಕೊಲೆ

    ವಿಜಯಪುರ: ಬೆಳ್ಳಂಬೆಳಗ್ಗೆ ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷನ ಮೇಲೆ ಗುಂಡು ಹಾರಿಸಿ, ತಲವಾರ್‌ನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಚಡಚಣ (Chadachan) ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ (Bhimanagouda Biradar) ಎಂದು ಗುರುತಿಸಲಾಗಿದ್ದು, ಭೀಮಾತೀರದ ಮಹಾದೇವ ಸಾಹುಕಾರ್‌ ಭೈರಗೊಂಡ ಅವರ (Mahadeva Bhairagond) ಪರಮಾಪ್ತ, ಬಲಗೈ ಬಂಟನಾಗಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಕೆಜಿಎಫ್ ಬಾಬುಗೆ ಲೋಕಾಯುಕ್ತ ನೋಟಿಸ್

    ಬುಧವಾರ (ಸೆ.3) ಬೆಳಗ್ಗೆ ಮೃತ ಭೀಮನಗೌಡ ಅವರು ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್‌ಗೆ ಆಗಮಿಸಿದ್ದರು. ಈ ವೇಳೆ ಮೂರರಿಂದ ನಾಲ್ಕು ಜನ ಮುಸುಕುಧಾರಿಗಳು ಬಂದು ಕಟಿಂಗ್ ಮಾಡುವವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಭೀಮನಗೌಡ ಅವರ ಮೇಲೆ ಫೈರಿಂಗ್ ನಡೆಸಿ, ತಲವಾರ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

    ಸದ್ಯ ಭೀಮನಗೌಡ ಅವರ ಮೃತದೇಹವನ್ನು ವಿಜಯಪುರದ (Vijayapura) ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹಳೆಯ ವೈಷಮ್ಯದ ಹಿನ್ನೆಲೆ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಆಪ್ತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಹಾದೇವ ಭೈರಗೊಂಡ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಚಡಚಣ ಪೊಲೀಸರು (Chadachan) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಹಾಸನ | ಮಲೆನಾಡು ಭಾಗದಲ್ಲಿ ಭಾರಿ ಮಳೆ – ಬಿಸಿಲೆ ಘಾಟ್‌ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ

  • ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

    ವಿಜಯಪುರ: ಕಳೆದ ಕೆಲವು ತಿಂಗಳಿನಿಂದ ಆತಂಕ ಹುಟ್ಟಿಸಿದ್ದ ಚಿರತೆ ಇಂದು ಜಿಲ್ಲೆಯ ಚಡಚಣ (Chadachana) ತಾಲೂಕಿನ ಮಣಂಕಲಗಿ ಗ್ರಾಮದಲ್ಲಿ ಸೆರೆಯಾಗಿದೆ.

    ಇಂದು ಮಣಂಕಲಗಿ ಗ್ರಾಮದ ಜೋಳದ ಹೊಲದಲ್ಲಿ ಚಿರತೆ ಪ್ರತ್ಯಕ್ಷವಾಗಿ ನಾಲ್ವರ ಮೇಲೆ ದಾಳಿ ನಡೆಸಿತ್ತು.ಇದನ್ನೂ ಓದಿ: ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್

    ಮಾದೇವ ಯಾದವಾಡ, ಈರಣ್ಣ ಮೇತ್ರಿ, ಸಂತೋಷ ತಾಂಬೆ, ಕಲ್ಲಪ್ಪ ಕೋಟ್ಯಾಳ ಎಂಬುವವರ ಮೇಲೆ ದಾಳಿ ನಡೆಸಿತ್ತು. ಮಾದೇವ ಯಾದವಾಡ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಚಡಚಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇದೇ ವೇಳೆ ಚಿರತೆ ಹಿಡಿಯಲು ಜನರು ಜಮೀನಿನ ಸುತ್ತ ನೆರೆದಿದ್ದು, ಝಳಕಿ ಪೊಲೀಸರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ

  • ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯ ರಂಪಾಟ – ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯ ರಂಪಾಟ – ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ವಿಜಯಪುರ: ಕುಡಿದ ನಶೆಯಲ್ಲಿ ಆಸ್ಪತ್ರೆಗೆ ಬಂದು ವೈದ್ಯನೊಬ್ಬ ರಂಪಾಟ ಮಾಡಿರುವ ಘಟನೆ ಜಿಲ್ಲೆಯ ಚಡಚಣ (Chadachana) ತಾಲೂಕಿನ ಶಿರನಾಳ (Shiranala) ಆಯುಷ್ ಆರೋಗ್ಯ ಮಂದಿರದಲ್ಲಿ ನಡೆದಿದೆ.ಇದನ್ನೂ ಓದಿ: ಮುಡಾ, ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಮುಳುಗಿ ಹೋಗಿದೆ: ಜಗದೀಶ ಶೆಟ್ಟರ್

    ಶಿರನಾಳ ಗ್ರಾಮದ ಆಯುಷ್ ಆರೋಗ್ಯ ಮಂದಿರದಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್‌ ಆಫೀಸರ್ (Health Inspector Officer) ಹುದ್ದೆಯಲ್ಲಿರುವ ನಾರಾಯಣ ರಾಠೋಡ ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ್ದಾನೆ. ಆಸ್ಪತ್ರೆಯ ಕಿಟಕಿ, ಗಾಜು ಪುಡಿ ಪುಡಿ ಮಾಡಿ ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯ ಟೇಬಲ್, ಕುರ್ಚಿಗಳೆಲ್ಲ ಪುಡಿಪುಡಿಯಾಗಿವೆ. ಅಷ್ಟಲ್ಲದೇ ನಶೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ಕೂಡ ನೀಡಿದ್ದಾನೆ. ವೈದ್ಯನ ಅವತಾರ ಕಂಡು ಗ್ರಾಮದ ಜನ ಹಿಡೀ ಶಾಪ ಹಾಕಿದ್ದಾರೆ.

    ಕುಡಿತದ ಕಾರಣದಿಂದ ಮೂರು ತಿಂಗಳ ಹಿಂದೆ ನಾರಾಯಣ ರಾಠೋಡನನ್ನ ಅಮಾನತು ಮಾಡಲಾಗಿತ್ತು. ಬರಡೋಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದಾಗ ಮಹಿಳಾ ರೋಗಿಗಳು ಬಂದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆ ಅಮಾನತು ಮಾಡಲಾಗಿತ್ತು.ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು

    ವಾರದ ಹಿಂದಷ್ಟೇ ಮತ್ತೇ ಕರ್ತವ್ಯಕ್ಕೆ ಹಾಜರಾಗಿದ್ದ ವೈದ್ಯ ಇದೀಗ ಮತ್ತೆ ಅದೇ ರೀತಿ ರಂಪಾಟ ಮಾಡಿದ್ದಾನೆ. ಸದ್ಯ ವೈದ್ಯನ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

  • ಹುಟ್ಟುಹಬ್ಬದ ದಿನವೇ ಭೀಮಾತೀರದ ನಟೋರಿಯಸ್ ಅರೆಸ್ಟ್

    ಹುಟ್ಟುಹಬ್ಬದ ದಿನವೇ ಭೀಮಾತೀರದ ನಟೋರಿಯಸ್ ಅರೆಸ್ಟ್

    ವಿಜಯಪುರ: ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ್ ಹುಟ್ಟುಹಬ್ಬದ ದಿನದಂದೆ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ಇಂಡಿ ತಾಲೂಕಿನ ಉದ್ಯಮಿಗೆ 5 ಕೋಟಿ ನಗದು ಅಥವಾ 3 ಕೆ.ಜಿ. ಚಿನ್ನಕ್ಕೆ ಬೇಡಿಕೆ ಇಟ್ಟಿದ ಆರೋಪದಡಿ ಬಂಧನವಾಗಿದ್ದಾನೆ.

    ನಾಮದೇವ್ ಡಾಂಗೆ

    ಚಿನ್ನಾಭರಣದ ವ್ಯಾಪಾರಿಯಾಗಿರುವ ನಾಮದೇವ್ ಡಾಂಗೆ ಎಂಬವರಿಗೆ ಬೇಡಿಕೆ ಇಟ್ಟಿದ್ದನು. 5 ಕೋಟಿ ಕೊಡದೇ ಇದ್ರೇ ಕಾಲು, ತಲೆ ಕಟ್ ಮಾಡ್ತೀನಿ. ಯಾರಿಗಾದ್ರೂ ಹೇಳಿದ್ರೆ ಮನೆಗೆ ಹೊಕ್ಕು ತಲೆಗೆ ಗುಂಡು ಹೊಡೆಯುತ್ತೇನೆಂದು ಧಮ್ಕಿ ಹಾಕಿದ್ದನು. ಇನ್ನು ಈ ವೇಳೆ ಮಹಾದೇವ ಸಾಹುಕಾರ್ ಜೊತೆ ಭೀಮಾತೀರದ ಮತ್ತೊಬ್ಬ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಮತ್ತು ಆಪ್ತ ಲಕ್ಷ್ಮಿಕಾಂತ್ ಪಾಟೀಲ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆಂದು ನಾಮದೇವ್ ದೂರು ದಾಖಲಿಸಿದ್ದರು.

    ಬಾಗಪ್ಪ ಹರಿಜನ

    ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 384, 511, 504, 506 ಮತ್ತು ರೇ/ವು 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಪ್ಪ ಹಾಗೂ ಲಕ್ಷ್ಮಿಕಾಂತ್ ನಾಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.