Tag: CH Powder

  • ಅಬಕಾರಿ ಅಧಿಕಾರಿಗಳ ದಾಳಿ – ಜಮೀನಿನಲ್ಲಿ ಅಡಗಿಸಿಟ್ಟಿದ್ದ 70 ಲಕ್ಷ ಮೌಲ್ಯದ ಸಿಹೆಚ್ ಪೌಡರ್ ಜಪ್ತಿ

    ಅಬಕಾರಿ ಅಧಿಕಾರಿಗಳ ದಾಳಿ – ಜಮೀನಿನಲ್ಲಿ ಅಡಗಿಸಿಟ್ಟಿದ್ದ 70 ಲಕ್ಷ ಮೌಲ್ಯದ ಸಿಹೆಚ್ ಪೌಡರ್ ಜಪ್ತಿ

    ರಾಯಚೂರು: ಅಬಕಾರಿ ಅಧಿಕಾರಿಗಳು (Excise Department) ಹಾಗೂ ಚುನಾವಣಾ ಎಫ್‍ಎಸ್‍ಟಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 70 ಲಕ್ಷ ರೂ. ಮೌಲ್ಯದ 850 ಕೆ.ಜಿ ಕಲಬೆರಿಕೆ ಸೇಂದಿ ತಯಾರಿಕೆಗೆ ಬಳಸುವ ಸಿಹೆಚ್ ಪೌಡರ್ (CH Powder) ಜಪ್ತಿ ಮಾಡಿದ ಘಟನೆ ರಾಯಚೂರಿನ (Raichur) ಕಡಗಂದೊಡ್ಡಿ ಗ್ರಾಮದಲ್ಲಿ ನಡೆದಿದೆ. ಓರ್ವ ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳಾದ ತಾಯನಗೌಡ ಹಾಗೂ ನರಸರಾಜು ಎಂಬುವವರ ಜಮೀನಿನಲ್ಲಿ ಸಿಹೆಚ್ ಪೌಡರ್ ಜಪ್ತಿಯಾಗಿದೆ. ಆರೋಪಿ ನರಸರಾಜುನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಮೀನಿನಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ನೀರಿನ ಸಂಪ್ ರೀತಿ ನಿರ್ಮಿಸಿದ್ದ ಜಾಗದಲ್ಲಿ 32 ಚೀಲಗಳಲ್ಲಿ ತುಂಬಿಟ್ಟಿದ್ದ ಸಿಹೆಚ್ ಪೌಡರ್‍ನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್

    ಆರೋಪಿಗಳು ಈಗಾಗಲೇ ಕಲಬೆರಿಕೆ ಸೇಂದಿ ತಯಾರಿಕೆ ಹಾಗೂ ಮಾರಾಟ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಚುನಾವಣೆ (Election) ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಗೆ ಸೇಂದಿ ಸರಬರಾಜು ಮಾಡಲು ಅಕ್ರಮವಾಗಿ ಸಿಹೆಚ್ ಪೌಡರ್ ಸಂಗ್ರಹಿಸಿರುವ ಅನುಮಾನವಿದೆ. ಆರೋಪಿಗಳ ಗಡಿಪಾರಿಗೆ ಶಿಫಾರಸು ಮಾಡಲಾಗುವುದು ಎಂದು ಅಬಕಾರಿ ಉಪ ಆಯುಕ್ತೆ ಲಕ್ಷ್ಮಿ ನಾಯಕ್ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ತಂಡದ ಕ್ರಿಕೆಟ್ ಕಿಟ್ ಕಳವು – ಬೆಂಗಳೂರಿನಲ್ಲಿ ಇಬ್ಬರ ಬಂಧನ

  • ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ

    ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ

    ರಾಯಚೂರು: ತೆಲಂಗಾಣದಿಂದ ರಾಯಚೂರಿಗೆ ಅಕ್ರಮವಾಗಿ ರೈಲಿನಲ್ಲಿ ಸಿಹೆಚ್ ಪೌಡರ್ ಸೇಂದಿ ಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಾರೆ. ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ದಾಳಿ ನಡೆಸಿ ಭಾರೀ ಪ್ರಮಾಣದ ಸೇಂದಿ ಜಪ್ತಿ ಮಾಡಿದ್ದಾರೆ.

    ತೆಲಂಗಾಣದ ಕೃಷ್ಣಾ ರೈಲ್ವೇ ನಿಲ್ದಾಣದಿಂದ ರಾಯಚೂರಿಗೆ ತರಲಾಗುತ್ತಿದ್ದ 250 ಲೀ. ಕಲಬೆರಕೆ ಸಿಹೆಚ್ ಪೌಡರ್ ಸೇಂದಿ ಜಪ್ತಿ ಮಾಡಲಾಗಿದೆ. ಆರೋಪಿಗಳು ಸೇಂದಿಯನ್ನು ಬಾಟಲ್‌ಗಳಲ್ಲಿ ತುಂಬಿ ಮಾರಾಟಕ್ಕೆ ಅಕ್ರಮವಾಗಿ ತರುತ್ತಿದ್ದರು. ಅಂದಾಜು 80 ಸಾವಿರ ರೂ. ಮೌಲ್ಯದ ಕಲಬೆರಕೆ ಸೇಂದಿ ಜಪ್ತಿಯಾಗಿದೆ. ಇದನ್ನೂ ಓದಿ: RSS, ಭಜರಂಗದಳ ಬ್ಯಾನ್ ಮಾಡಲಿ: ಜಮೀರ್ ಅಹ್ಮದ್

    ಆನಂದಮ್ಮ, ತಾಯಮ್ಮ, ಸುಬ್ಬಲಕ್ಷ್ಮೀ, ರಾಮಾಂಜನೇಯ ಹಾಗೂ ರಾಜು ಬಂಧಿತ ಆರೋಪಿಗಳು. ಇವರಲ್ಲಿ ಸುಬ್ಬಲಕ್ಷ್ಮೀ, ರಾಮಾಂಜನೇಯ ಹಾಗೂ ರಾಜು ಈಗಾಗಲೇ ತಲಾ ಎರಡೆರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಬೆಲೆ ಏರಿಸುತ್ತಿರುವ ಈ ಸರ್ಕಾರ ಒಂದು ರೀತಿ ಕೋಲ್ಡ್‌ಬ್ಲಡೆಡ್ ಹಂತಕನಿದ್ದಂತೆ: ದಿನೇಶ್ ಗುಂಡೂರಾವ್

    ಆರೋಪಿಗಳು ನಗರದ ರಾಗಿಮಾನಗಡ್ಡ, ಸ್ಟೇಷನ್ ಏಷಿಯಾ ನಿವಾಸಿಗಳಾಗಿದ್ದಾರೆ. ಆರ್‌ಪಿಎಫ್, ರೈಲ್ವೇ ಪೊಲೀಸ್, ನಗರದ ಪಶ್ಚಿಮ ಠಾಣೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ಕುಖ್ಯಾತ ಕಲಬೆರಕೆ ಸೇಂದಿ ದಂಧೆಕೋರನ ಬಂಧನ- ಗಡಿಪಾರಿಗೆ ಮುಂದಾದ ಅಧಿಕಾರಿಗಳು

    ಕುಖ್ಯಾತ ಕಲಬೆರಕೆ ಸೇಂದಿ ದಂಧೆಕೋರನ ಬಂಧನ- ಗಡಿಪಾರಿಗೆ ಮುಂದಾದ ಅಧಿಕಾರಿಗಳು

    ರಾಯಚೂರು: ಅಬಕಾರಿ ಹಾಗೂ ರಾಯಚೂರಿನ ವಿವಿಧ ಠಾಣೆ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.

    ನರಸಿಂಹಲು ಅಲಿಯಾಸ್ ಬ್ರೂಸ್ಲಿ ಬಂಧಿತ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರ. ವಿವಿಧ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳನ್ನ ಎದುರಿಸುತ್ತಿರುವ ಆರೋಪಿ ನರಸಿಂಹಲು ಬ್ರೂಸ್ಲಿ ಸೇಂದಿ ತಯಾರಿಕೆ ವೇಳೆ ಸಿಕ್ಕಿಬಿದ್ದಿದ್ದಾನೆ.

    ರಾಯಚೂರಿನ ಮೈಲಾರನಗರದಲ್ಲಿ ವಿವಿಧೆಡೆ ಕಲಬೆರಿಕೆ ಸೇಂದಿ ಅಡ್ಡೆಗಳನ್ನ ನಡೆಸುತ್ತಿದ್ದ ಬ್ರೂಸ್ಲಿ ಅಬಕಾರಿ ಪೊಲೀಸರ ದಾಳಿ ವೇಳೆ ಸೇಂದಿ ಸಹಿತ ಸಿಕ್ಕಿಬಿದ್ದಿದ್ದಾನೆ. 15 ಲೀಟರ್ ಕಲಬೆರಕೆ ಸೇಂದಿ, 2 ಕೆ.ಜಿ ಸಿಎಚ್ ಪೌಡರ್ ಹಾಗೂ ಸೇಂದಿ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ಜಪ್ತಿಮಾಡಿದ್ದಾರೆ.

    ಆರೋಪಿಯನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಮುಂದಾಗಿದ್ದು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಸಿದ್ಧತೆ ನಡೆಸಿವೆ. ಆದರೆ ಈ ಹಿಂದೆಯೂ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದ ಬ್ರೂಸ್ಲಿ ಗಡಿಪಾರಾಗಿದ್ದ. ಅದಾದ ಬಳಿಕವೂ ಯಾವುದೇ ಪರಿವರ್ತನೆಯಾಗದೆ ಪುನಃ ದಂಧೆಯನ್ನ ಮುಂದುವರಿಸಿದ್ದಾನೆ.

  • ರಾಯಚೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರೋ ಸಿಎಚ್ ಪೌಡರ್ ದಂಧೆ- 5 ಸಾವಿರ ಜನ ಬಲಿ

    ರಾಯಚೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರೋ ಸಿಎಚ್ ಪೌಡರ್ ದಂಧೆ- 5 ಸಾವಿರ ಜನ ಬಲಿ

    ರಾಯಚೂರು: ಜಿಲ್ಲೆಯಲ್ಲಿ ಕಲಬೆರಿಕೆ ಸಿಎಚ್ ಪೌಡರ್ ದಂಧೆ ಸತತ ಏಳೆಂಟು ವರ್ಷಗಳಿಂದ ಎಗ್ಗಿಲ್ಲದೆ ನಡೆದಿದ್ದು ವರ್ಷದಿಂದ ವರ್ಷಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

    ರಾಯಚೂರು ನಗರ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಗಡಿ ಭಾಗದಲ್ಲಿ ಇದುವರಗೆ ಸುಮಾರು 5 ಸಾವಿರ ಜನ ಸಿಎಚ್ ಪೌಡರ್ ಸೇಂದಿ ಕುಡಿದು ಸಾವನ್ನಪ್ಪಿದ್ದಾರೆ. ಈಗಲೂ ಸಾವಿನ ಸರಣಿ ಮುಂದುವರೆದಿದ್ದು, ರಾಯಚೂರು ನಗರದ ಮೈಲಾರನಗರ, ಹರಿಜನವಾಡ, ದೇವರಕಾಲೋನಿ, ರೈಲ್ವೇ ಸ್ಟೇಷನ್ ಪ್ರದೇಶದಲ್ಲಿ ಯಾರ ಭಯವಿಲ್ಲದೆ ಅಕ್ರಮ ಸಿಎಚ್ ಪೌಡರ್ ಮಾರಾಟ ನಡೆದಿದೆ.

    ಸಿಎಚ್ ಪೌಡರ್ ಸೇಂದಿ ಕುಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದರೂ, ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗದೆ ದಂಧೆಕೋರರು ಪ್ರಕರಣಗಳನ್ನ ಮುಚ್ಚಿ ಹಾಕುತ್ತಿದ್ದಾರೆ. ಸ್ಲಂ ಪ್ರದೇಶಗಳಲ್ಲೇ ದಂಧೆ ಜೋರಾಗಿರುವುದರಿಂದ ಹಲವಾರು ಕುಟುಂಬಗಳು ಸಿಎಚ್ ಪೌಡರ್ ಹಾವಳಿಯಿಂದ ಮನೆ ಯಜಮಾನನ್ನ ಕಳೆದುಕೊಂಡು ಅನಾಥವಾಗಿವೆ.

  • ರಾಯಚೂರಲ್ಲಿ ಸೇಂದಿಗೆ ದಾಸರಾಗಿದ್ದ ಬಾಲಕರಿಬ್ಬರ ರಕ್ಷಣೆ

    ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಕಲಬೆರಿಕೆ ಸಿಎಚ್ ಪೌಡರ್ ಸೇಂದಿಗೆ ಚಿಕ್ಕಮಕ್ಕಳು ದಾಸರಾಗಿ ರೈಲ್ವೇ ನಿಲ್ದಾಣದಲ್ಲೇ ಕುಡಿದು ತೂರಾಡಿದ ಕುರಿತ ಪಬ್ಲಿಕ್ ಟಿವಿ ವರದಿಯಿಂದ ರೈಲ್ವೇ ಪೊಲೀಸರು ಎಚ್ಚೆತ್ತಿದ್ದಾರೆ.

    ಕುಡಿತಕ್ಕೆ ದಾಸರಾದ ಇಬ್ಬರು ಬಾಲಕರನ್ನ ರಕ್ಷಿಸಿದ್ದು, ಓರ್ವನನ್ನ ಸರ್ಕಾರಿ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ಇನ್ನೋರ್ವನನ್ನ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ.

    ಒಟ್ಟು ನಾಲ್ಕು ಮಕ್ಕಳು ತೆಲಂಗಾಣಕ್ಕೆ ತೆರಳಿ ಸಿಎಚ್ ಪೌಡರ್ ಸೇಂದಿ ಕುಡಿದು ಬಾಟಲ್‍ಗಳನ್ನ ತಂದಿದ್ದರು. ರಾಯಚೂರು ರೈಲ್ವೇ ನಿಲ್ದಾಣದಲ್ಲೇ ಕುಡಿದು ತೂರಾಡುತ್ತಿದ್ದ ವಿಷ್ಯೂವಲ್ಸ್ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ರೈಲ್ವೇ ಪೊಲೀಸರು ಇಬ್ಬರು ಮಕ್ಕಳನ್ನ ರಕ್ಷಿಸುವ ಜೊತೆ ಓರ್ವ ಅಕ್ರಮ ಸಿಎಚ್ ಪೌಡರ್ ಸಾಗಣೆಗಾರನನ್ನೂ ಬಂಧಿಸಿದ್ದಾರೆ.

    ರಾಯಚೂರಿನ ರಾಗಿಮಾನಗಡ್ಡದ ನಿವಾಸಿ ವಿರೇಶ್ ಬಂಧಿತ ಆರೋಪಿ. ತೆಲಂಗಾಣದ ಕೃಷ್ಣದಿಂದ 25 ಲೀಟರ್ ಸೆಂದಿಯನ್ನ ಸಾಗಣೆ ಮಾಡುತ್ತಿದ್ದ ವೇಳೆ ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮ ಸಿಎಚ್ ಪೌಡರ್ ದಂಧೆ: ರಾಯಚೂರಿನಲ್ಲಿ ಸೇಂದಿಗೆ ದಾಸರಾದ ಚಿಕ್ಕಮಕ್ಕಳು

    ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಅಕ್ರಮ ಸಿಎಚ್ ಪೌಡರ್ ಸೇಂದಿ ದಂಧೆಗೆ ಈಗ ಅಪ್ರಾಪ್ತರು ಬಲಿಯಾಗುತ್ತಿದ್ದಾರೆ. ಎಗ್ಗಿಲ್ಲದೆ ರೈಲ್ವೆ ನಿಲ್ದಾಣದಲ್ಲೇ ಬಾಲಕರು ಕಲಬೆರಿಕೆ ಸೇಂದಿಯನ್ನ ಕುಡಿದು ತೂರಾಡುವ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಮಜ್ಜಿಗೆಯ ಹಾಗೇ ಕಾಣೋ ಕಲಬೆರಿಕೆ ಸಿಎಚ್ ಪೌಡರ್ ಸೇಂದಿ ಕ್ಲೋರಲ್ ಹೈಡ್ರೇಟ್ ರಾಸಾಯನಿಕದಿಂದ ತಯಾರಾಗೋ ಸ್ಲೋ ಪಾಯಿಸನ್. ಆಂಧ್ರ, ತೆಲಂಗಾಣದಲ್ಲಿ ಸಿಗುವ ಸೇಂದಿಯಲ್ಲಿ ಸಿಎಚ್ ಪೌಡರ್ ಬೆರಿಸಿ ಮಾರಾಟ ಮಾಡಲಾಗುತ್ತಿದೆ. ಇದನ್ನ ಕುಡಿಯಲು ರಾಯಚೂರು, ಯಾದಗಿರಿ ಜಿಲ್ಲೆಯಿಂದಲೂ ಚಿಕ್ಕಮಕ್ಕಳು, ಯುವಕರು ತೆಲಂಗಾಣದ ಕೃಷ್ಣಾ ಗ್ರಾಮಕ್ಕೆ ತೆರಳುತ್ತಾರೆ. ಕಂಠಪೂರ್ತಿ ಕುಡಿದು ಬಾಟಲ್‍ಗಳಲ್ಲಿ ಸೇಂದಿಯನ್ನ ತರುತ್ತಿದ್ದಾರೆ. ಅಕ್ರಮ ದಂಧೆಗೆ ಮಕ್ಕಳು, ವಯೋವೃದ್ಧರನ್ನ ಬಳಸಿಕೊಳ್ಳುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆಯೇ ವರದಿ ಮಾಡಿತ್ತು. ಆದ್ರೆ ಈಗ ಚಿಕ್ಕ ಮಕ್ಕಳೇ ಸೇಂದಿಗೆ ದಾಸರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿದರೂ ಕೇಳುವವರಿಲ್ಲ.

    ರಾಜ್ಯದಲ್ಲಿ ಈಚಲು ಮರಗಳಿಂದ ಇಳಿಸುವ ಸೇಂದಿ ಮಾರಾಟ ನಿಷೇಧವಾದಾಗಿನಿಂದ ಅಕ್ರಮ ಸಿಎಚ್ ಪೌಡರ್ ಸೇಂದಿ ದಂಧೆ ಜೋರಾಗಿದೆ. ಇಷ್ಟು ದಿನ ಕೂಲಿ ಕಾರ್ಮಿಕರು, ದುಡಿದು ದಣಿವ ಬಡವರ್ಗದ ಜನ, ಸ್ಲಂ ನಿವಾಸಿಗಳು ಇದನ್ನ ಕುಡಿಯುತ್ತಿದ್ದರು. ಈಗ ಚಿಕ್ಕ ಚಿಕ್ಕ ಮಕ್ಕಳು ಸಹ ರಾಜಾರೋಷವಾಗಿ ರೈಲು ನಿಲ್ದಾಣದಲ್ಲೇ ಕುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು ಒಂದು ಸಾವಿರ ಜನರನ್ನ ಬಲಿ ತೆಗೆದುಕೊಂಡಿರುವ ಸೇಂದಿ ಪೊಲೀಸ್ ಹಾಗೂ ರೈಲ್ವೆ ಇಲಾಖೆ ನಿರ್ಲಕ್ಷ್ಯದಿಂದ ಈಗ ಮಕ್ಕಳನ್ನೂ ಬಲಿತೆಗೆದುಕೊಳ್ಳಲು ಮುಂದಾಗಿದೆ.

    ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋರ್ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ ಸಿಎಚ್ ಪೌಡರ್ ಸಾಗಣೆ, ಮಾರಾಟ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಆಗಾಗ ಪೊಲೀಸರು ದಾಳಿ ನಡೆಸಿದಾಗ ಸುಮ್ಮನಾಗುವ ದಂಧೆಕೋರರು ಪುನಃ ದಂಧೆಗಿಳಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಿಎಚ್ ಪೌಡರ್ ದಂಧೆ ತನ್ನ ವ್ಯಾಪ್ತಿಯನ್ನ ವಿಸ್ತರಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಮಾತ್ರ ಯಾವ ಗಂಭೀರ ಕ್ರಮಗಳಿಗೂ ಮುಂದಾಗುತ್ತಿಲ್ಲ. ಈಗಲಾದ್ರೂ ಚಿಕ್ಕ ಮಕ್ಕಳ ಭವಿಷ್ಯವನ್ನ ಕಾಪಾಡಲು ಸರ್ಕಾರ ಮುಂದಾಗಬೇಕಿದೆ. ಅಕ್ರಮ ದಂಧೆಗೆ ಅಂತ್ಯ ಕಾಣಿಸಬೇಕಿದೆ.