Tag: CFI

  • ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ

    ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ

    ದಿಸ್ಪುರ್: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI) ಅಸ್ಸಾಂ (Assam) ಘಟಕದ ಇಬ್ಬರು ಉನ್ನತ ನಾಯಕರನ್ನು ಬಾರ್ಪೇಟಾದಲ್ಲಿ (Barpeta) ಬಂಧಿಸಲಾಗಿದೆ. ಪಿಎಫ್‍ಐನ ರಾಜ್ಯ ಅಧ್ಯಕ್ಷ ಅಬು ಸಮಾ ಅಹ್ಮದ್ ಹಾಗೂ ರಾಜ್ಯ ಕಾರ್ಯದರ್ಶಿ ಜಾಕಿರ್ ಹುಸೇನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

    ಮತ್ತೊಂದು ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸಂಘಟನೆಯ ನಾಯಕ ಸಾಹಿದುಲ್ ಇಸ್ಲಾಂನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂ. ನಾಲ್ಕು ಮೊಬೈಲ್ ಫೋನ್‍ಗಳು ಮತ್ತು ಕೆಲವು ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಹುಚ್ಚಾಟ – ತುರ್ತು ನಿರ್ಗಮನ ದ್ವಾರ ತೆಗೆಯಲು ವ್ಯಕ್ತಿ ಪ್ರಯತ್ನ

    ಕೇಂದ್ರ ಸರ್ಕಾರ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪಿಎಫ್‍ಐನ್ನು ನಿಷೇಧಿಸಿತ್ತು. ಮತ್ತು ಅದರ ಅಂಗಸಂಸ್ಥೆಗಳು ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಕೆಲಸಗಳಲ್ಲಿ ತೊಡಗಿವೆ ಎಂದು ಗೃಹ ಸಚಿವಾಲಯ (Home Ministry) ಹೇಳಿತ್ತು.

    ಅಲ್ಲದೇ ಜನರಲ್ಲಿ ಭಯ ಹುಟ್ಟಿಸಲು ಪಿಎಫ್‍ಐ ಸದಸ್ಯರು ಈ ಹಿಂದೆ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು. ಅದರ ಕಾರ್ಯಕರ್ತರು ಹಲವಾರು ಕ್ರೂರ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಚಿವಾಲಯ ಹೇಳಿಕೊಂಡಿತ್ತು. ಇದನ್ನೂ ಓದಿ: ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು

  • JOIN CFI ಗೋಡೆ ಬರಹ- ಶಿರಾಳಕೊಪ್ಪದ 9ಕ್ಕೂ ಹೆಚ್ಚು ಕಡೆ ಕೃತ್ಯ

    JOIN CFI ಗೋಡೆ ಬರಹ- ಶಿರಾಳಕೊಪ್ಪದ 9ಕ್ಕೂ ಹೆಚ್ಚು ಕಡೆ ಕೃತ್ಯ

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ (Shiralakoppa)ದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ಜಾಯಿನ್ ಸಿಎಫ್‍ಐ (CFI) ಎಂದು ಗೋಡೆ ಬರಹ ಬರೆಯುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.

    ಪಟ್ಟಣದ 9 ಕ್ಕೂ ಹೆಚ್ಚು ಕಡೆ ಗೋಡೆ ಬರಹ ಬರೆಯಲಾಗಿದೆ. ನೀಲಿ, ಕೆಂಪು ಬಣ್ಣದ ಸ್ಪೇಯಿಂದ ಬರೆದು ಸ್ಟಾರ್ ಇಡಲಾಗಿದೆ. ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ಚಂದ್ರಪ್ಪ ಎಂಬವರ ಮನೆಯ ಕ್ರಾಸ್‍ನ ವಿದ್ಯುತ್ ಕಂಬ, ಬಿಲಾಲ್ ಎಂಬವರ ಮನೆಯ ಬಳಿ ಇರುವ ಗ್ಯಾರೇಜ್ ಗೋಡೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆ, ಫಾರೂಕ್ ಮತ್ತು ಬಿಲಾಲ್ ಮನೆಯ ಗೋಡೆಗಳ ಮೇಲೆ ಬರಹ ಬರೆಯಲಾಗಿದೆ.

    ನ.28 ರಂದು ಪೊಲೀಸರು ಗಸ್ತು ತಿರುಗುವಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಿರಾಳಕೊಪ್ಪ ಠಾಣೆ (Shiralakoppa Police Station) ಯಲ್ಲಿ ಸುಮೊಟೊ ಪ್ರಕರಣ ದಾಖಲಿಸಲಾಗಿದೆ. ಸದ್ಯ ಖಾಕಿ ಪಡೆ ಯಾರು ಬರೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಬಲೆ ಬೀಸಿದೆ. ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಆಪ್‌ಗೆ ಮತ ಚಲಾಯಿಸಿ: ಕೇಜ್ರಿವಾಲ್ ಮನವಿ

    Live Tv
    [brid partner=56869869 player=32851 video=960834 autoplay=true]

  • CFI, PFI ಸಂಘಟನೆಗಳೇ ಮಕ್ಕಳ ಭವಿಷ್ಯ ಹಾಳಾಗೋದಕ್ಕೆ ಕಾರಣ: ಬಿ.ಸಿ.ನಾಗೇಶ್

    CFI, PFI ಸಂಘಟನೆಗಳೇ ಮಕ್ಕಳ ಭವಿಷ್ಯ ಹಾಳಾಗೋದಕ್ಕೆ ಕಾರಣ: ಬಿ.ಸಿ.ನಾಗೇಶ್

    ಬೆಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಜಬ್ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರಬಹುದು. ಈ ಸಂಘಟನೆಯವರೇ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗಂಭೀರ ಆರೋಪ ಮಾಡಿದ್ದಾರೆ.

    ಉಡುಪಿಯಲ್ಲಿ ಹಿಜಬ್ ವಿದ್ಯಾರ್ಥಿನಿರು ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಬಿ.ಸಿ. ನಾಗೇಶ್ ಅವರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದವರೇ ಮಕ್ಕಳನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲೂ ಹಿಜಬ್‌ ವಿದ್ಯಾರ್ಥಿನಿಯರ ಹೈಡ್ರಾಮಾ – ಮನೆಗೆ ನಡೆದ ವಿದ್ಯಾರ್ಥಿನಿಯರು

    ಜನವರಿಯಿಂದ ಇಲ್ಲಿಯವರೆಗೂ ಆರು ಜನ ವಿದ್ಯಾರ್ಥಿಯರ ಮನವೊಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆವು. ಆದರೆ ನಾವು ಎಷ್ಟು ಮನವೊಲಿಸಲು ಪ್ರಯತ್ನಿಸಿದ್ದೇವೋ, ಅದಕ್ಕಿಂತ ಬೇರೆ ಸಂಘಟನೆಗಳು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ವಿದ್ಯಾರ್ಥಿನಿಯರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಕೂಡ ಹೊರಬರುತ್ತಿದೆ. ಆದರೆ ಇದೀಗ ನಾವು ಯೋಚಿಸುತ್ತಿರುವುದು 6 ಹೆಣ್ಣು ಮಕ್ಕಳ ಬಗ್ಗೆ ಅಲ್ಲ. ಸುಮಾರು 1 ಲಕ್ಷ ಮುಸ್ಲಿಂ ಸಮಾಜಕ್ಕೆ ಸೇರಿದ ಮಕ್ಕಳು ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ 82 ಸಾವಿರ ಜನ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದಾರೆ. ಇಷ್ಟು ಜನರಲ್ಲಿ ಆರು ಮಂದಿ ಪರೀಕ್ಷೆ ಬರೆಯುವುದಿಲ್ಲ ಎಂಬುವುದಕ್ಕಿಂತ 81,900ಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆಯಲು ಸಿದ್ದರಾಗಿದ್ದೇವೆ ಎಂಬುವುದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

    ಇಲ್ಲಿಯವರೆಗೂ ಸುಪ್ರೀಂ ಕೋರ್ಟ್ ಕೂಡ ಅವರ ವಾದಗಳಿಗೆ ಮನ್ನಣೆ ನೀಡಿಲ್ಲ. ಅಲ್ಲದೇ ಇಲಾಖೆಗಳು ತೆಗೆದುಕೊಂಡ ನಿರ್ಧಾರಗಳು ಸರಿಯಾದ ರೀತಿಯಲ್ಲಿದೆ ಎಂದು ಹೈಕೋರ್ಟ್ ತಿಳಿಸಿದೆ. ಹಿಜಬ್ ಎಂಬುವುದು ಮುಗಿದು ಹೋದಂತಹ ಸಮಸ್ಯೆ ಎಂದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ನವಾಬ್‌ ಮಲಿಕ್‌ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ

    ಹಿಜಬ್ ಕೇವಲ ಭಾರತದಲ್ಲಿ ಮಾತ್ರ ಎದುರಿಸಲಾಗುತ್ತಿರುವ ಸಮಸ್ಯೆಯಲ್ಲ. ಪ್ರಪಂಚದ ಅನೇಕ ದೇಶಗಳಲ್ಲಿ ಇದೇ ರೀತಿ ಸಮಸ್ಯೆಗಳಿದ್ದು, ಎಲ್ಲಾ ದೇಶಗಳು ಧೈರ್ಯವಾಗಿ ಮುನ್ನುಗ್ಗುತ್ತಿದೆ. ಹಿಜಬ್ ಮತ್ತು ಬುರ್ಕಾವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಧರಿಸಬಾರದು ಎಂಬ ನಿರ್ಣಯಗಳನ್ನು ಅನೇಕ ದೇಶಗಳು ಕೈಗೊಳ್ಳಲಾಗಿದೆ. ದುಬೈ ಅಥವಾ ಸೌದಿಯಲ್ಲಿಯೋ ಈ ದೇಶದಲ್ಲಿ ಹಿಜಬ್ ಕಡ್ಡಾಯವಲ್ಲ ಎಂಬ ಬೋರ್ಡ್ ಕೂಡ ಹಾಕಲಾಗಿದೆ. ಇಷ್ಟರ ಮಟ್ಟಿಗೆ ಆ ಸಮಾಜದಲ್ಲಿ ಬದಲಾವಣೆಗಳಾಗುತ್ತಿದೆ ಎಂದು ತಿಳಿಸಿದರು.

  • ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

    ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್‌

    ಉಡುಪಿ: ಹಿಜಬ್ ಹೋರಾಟಗಾರ್ತಿಯರಿಗೆ ಈಗಲೂ ಸಲಹೆ ನೀಡುತ್ತೇನೆ. ಒಂದು ಬಟ್ಟೆಯಿಂದ ಶಿಕ್ಷಣ ಅವಕಾಶದಿಂದ ವಂಚಿತರಾಗಬೇಡಿ. ನೀವು ಮತ್ತೆ ಹೋರಾಟ ಎಂದು ಬಾಯಿ ತೆಗೆದರೆ ಜನ ನಿಮಗೆ ಉಗೀತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿದ್ಯಾರ್ಥಿಗಳಿಗೆ ಎಚ್ಚರಿಸಿದ್ದಾರೆ.

    pramod mutalik

    ಉಡುಪಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಾಯಿಮುಚ್ಚಿ ಸುಮ್ಮನಿದ್ದರೆ ಉತ್ತಮ. ಹಿಜಬ್ ಹೋರಾಟಗಾರ್ತಿಯರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ರಾಜ್ಯದ ಎಲ್ಲ ಬೆಳವಣಿಗೆಗಳಿಗೆ ಈ ವಿದ್ಯಾರ್ಥಿನಿಯರೇ ಕಾರಣ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಂವಿಧಾನ, ನ್ಯಾಯಾಲಯ ಅಂತಿಮವೇ ಹೊರತು ಕುರಾನ್, ಶರಿಯತ್, ಬೈಬಲ್, ಭಗವದ್ಗೀತೆ ಅಂತಿಮವಲ್ಲ ಎಂದು ತಿಳಿವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ? ಪ್ರಮೋದ್‌ ಮುತಾಲಿಕ್‌

    pramod mutalik

    ಸಂಘಟನೆಗಳು ನಿಮ್ಮನ್ನು ಬಲಿ ಕೊಡಲಿವೆ
    ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ನಿಮ್ಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳಬೇಡಿ, ನಿಮ್ಮ ಹಿಂದೆ ಇರುವಂತಹ ಪಿಎಫ್‌ಐ ಮತ್ತು ಸಿಎಫ್‌ಐ ಸಂಘಟನೆಗಳು ನಿಮ್ಮನ್ನು ಭಯಾನಕವಾಗಿ ಬಲಿಕೊಡಲಿವೆ. ನಿಮ್ಮ ಶಿಕ್ಷಣಕ್ಕೆ ಕಲ್ಲು ಹಾಕಲಿವೆ. ಎಲ್ಲವನ್ನೂ ಬಿಟ್ಟು ಪರೀಕ್ಷೆಗೆ ಹಾಜರಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    ಬಾಯಿಮುಚ್ಚಿ ಸುಮ್ಮನಿರುವುದು ಒಳ್ಳೆಯದು
    ಸಿಎಫ್‌ಐ, ಪಿಎಫ್‌ಐ ಕುಮ್ಮಕ್ಕು ಮುಸಲ್ಮಾನರಿಗೆ ಗೊತ್ತಾಗಿದೆ. ಮುಸಲ್ಮಾನರು, ಹಿಂದೂಗಳು ಚೀ.. ಥೂ.. ಅನ್ನುತ್ತಿದ್ದಾರೆ. ನ್ಯಾಯಾಲಯ ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಛೀಮಾರಿ ಹಾಕಿದೆ. ಈ ವಿದ್ಯಾರ್ಥಿಗಳು ಬಾಯಿ ಮುಚ್ಚಿ ಸುಮ್ಮನಿರುವುದು ಒಳ್ಳೆಯದು. ನೀವು ಮೌನವಾಗಿದ್ದಷ್ಟು ನಿಮ್ಮ ಮೇಲೆ ಸಮಾಜಕ್ಕೆ ಉತ್ತಮ ಭಾವನೆ ಬರುತ್ತದೆ. ನೀವು ಮತ್ತೆ ಬಾಯಿ ತೆರೆದರೆ ಜನ ನಿಮಗೇ ಉಗೀತಾರೆ ಎಂದು ಹೇಳಿದ್ದಾರೆ.

    pramod mutalik

    ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಹಿಂದೂ ಸಮಾಜದಿಂದ ಬರುತ್ತಿದೆ. ಮುಸಲ್ಮಾನರ ಅಹಂಕಾರಕ್ಕೆ ಹಿಂದೂ ಸಮಾಜದಿಂದ ಉತ್ತರಗಳು ಸಿಗುತ್ತಿವೆ. ಮುಸಲ್ಮಾನರ ಸೊಕ್ಕನ್ನು ಸಹನೆ ಮಾಡುವ ಹಿಂದೂ ಸಮಾಜ ಈಗ ಇಲ್ಲ. ಹಿಜಬ್ ಕೇಳಿದವರು ಬುರ್ಖಾ ಕೇಳ್ತಾರೆ, ನಾಳೆ ನಮಾಜಿಗೆ ಅವಕಾಶ ಕೊಡಿ ಅಂತಾರೆ, ನೀವು ಈ ದೇಶದ ಇಸ್ಲಾಮಿಕ್ ಭಾಗಗಳು. ನೀವು ಮಾತನಾಡಲು ಶುರು ಮಾಡಿದರೆ ಈ ಹೋರಾಟ ಮುಂದೆಯೂ ಬೆಳೆಯುತ್ತದೆ ಎಂದು ತಿಳಿಸಿದ್ದಾರೆ.

  • ಹೇಳಿಕೆ ಖಂಡಿಸದಿದ್ದರೆ ವಿದ್ಯಾರ್ಥಿಗಳೂ ಆಲ್‌ಖೈದಾ ಪಟ್ಟಿಗೆ: ರಘುಪತಿ ಭಟ್

    ಹೇಳಿಕೆ ಖಂಡಿಸದಿದ್ದರೆ ವಿದ್ಯಾರ್ಥಿಗಳೂ ಆಲ್‌ಖೈದಾ ಪಟ್ಟಿಗೆ: ರಘುಪತಿ ಭಟ್

    ಉಡುಪಿ: ನೈಜ ಭಾರತೀಯರಾದರೆ ಹಿಜಬ್ ಹೋರಾಟದಲ್ಲಿ ತೊಡಗಿರುವ ಮುಸ್ಲಿಂ ವಿದ್ಯಾರ್ಥಿಗಳು ಆಲ್‌ಖೈದಾ, ತಾಲಿಬಾನ್ ಬೆಂಬಲವನ್ನು ಖಂಡಿಸಬೇಕು. ಇಲ್ಲದಿದ್ದರೆ ಅವರೂ ಆಲ್‌ಖೈದಾ ಅಥವಾ ದೇಶದ್ರೋಹ ಸಂಪರ್ಕಿತರ ಪಟ್ಟಿಯಲ್ಲಿ ಸೇರುತ್ತಾರೆ. ತಮ್ಮ ಮೇಲಿನ ವಿಶ್ವಾಸವನ್ನೂ ಕಳೆದುಕೊಳ್ಳುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಸಿದ್ದಾರೆ.

    Raghupati Bhat

    ಉಡುಪಿಯಲ್ಲಿ ಇಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಹಿಜಬ್‌ಗೆ ಸಂಬಂಧಿಸಿದ ಘಟನೆ ಮೊದಲು ಪಾಕಿಸ್ತಾನದ ವಾಹಿನಿಯೊಂದರಲ್ಲಿ ಪ್ರಸಾರವಾಯಿತು. ಘಟನೆ ನಡೆದಾಗ ಮುಸ್ಕಾನ್ ವಿದ್ಯಾರ್ಥಿನಿ ಘೋಷಣೆಗೆ ತಾಲಿಬಾನ್ ಮೊದಲು ಬೆಂಬಲ ಸೂಚಿಸಿತ್ತು. ಇದೀಗ ಆಲ್‌ಖೈದಾ ಬೆಂಬಲ ಸೂಚಿಸಿರುವುದು ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳೂ ಆಲ್‌ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ನೇರವಾಗಿ ಸಂಪರ್ಕದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದ್ರು ಕೊಲೆಗಾರರಿಗೆ ಶರಿಯತ್ ಕಾನೂನು ಜಾರಿಯಾಗಬೇಕಾ: ರಘುಪತಿ ಭಟ್ ಪ್ರಶ್ನೆ

    ಹಿಜಬ್ ಹೋರಾಟದಲ್ಲಿ 6 ಹೆಣ್ಣುಮಕ್ಕಳು ಗಟ್ಟಿಯಾಗಿ ನಿಂತದ್ದರಿಂದಲೇ ಇಂದು ವಿವಾದ ದೊಡ್ಡದಾಗಿದೆ. ಇವರಿಗೆ ದೊಡ್ಡಮಟ್ಟದಲ್ಲಿ ಹಣಕಾಸು ಹರಿದು ಬಂದಿದೆ. ಹಾಗಾಗಿ ಸಿಎಫ್‌ಐ(CFI), ಪಿಎಫ್‌ಐ (PFI), ಎಸ್‌ಡಿಪಿಐ(SDPI) ಸಂಘಟನೆಗಳಲ್ಲಿ ದೇಶದ್ರೋಹ ಮಾತನಾಡುವವರನ್ನು ಎನ್‌ಐಎ (NIA) ತನಿಖೆಗೆ ಒಳಪಡಿಸಿದರೆ ವಿದೇಶಿ ಸಂಘನೆಗಳ ಕೈವಾಡ ಏನಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

    muskhan

    ಮುಸ್ಲಿಂ ವಿದ್ಯಾರ್ಥಿನಿಯರಿಗೆ ಆಲ್‌ಖೈದಾ ಜೊತೆಗೆ ಸಂಪರ್ಕವಿದೆ ಎಂದು ಹೇಳುತ್ತಿಲ್ಲ. ಆದರೆ, ಮಕ್ಕಳನ್ನು ಕಂಟ್ರೋಲ್ ಮಾಡುತ್ತಿರುವ ಸಿಎಫ್‌ಐ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ವಿದ್ಯಾರ್ಥಿಗಳು ಭಾರತದ ಪ್ರಜೆಗಳು ಇಲ್ಲಿನ ಎಲ್ಲ ಸವಲತ್ತು ಪಡೆಯುತ್ತಿದ್ದಾರೆ. ಅವರು ನಿಜವಾದ ದೇಶಭಕ್ತರಾದರೆ, ಆಲ್‌ಖೈದಾ, ತಾಲಿಬಾನಿಗಳ ಹೇಳಿಕೆ ಖಂಡಿಸಬೇಕು. ನಿಮ್ಮ ಸಹಕಾರ ನಮಗೆ ಬೇಡ. ನಮಗೆ ಸಂವಿಧಾನ ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎನ್ನುವಂತಹ ಹೇಳಿಕೆ ಕೊಡಬೇಕು. ಇಲ್ಲದಿದ್ದರೆ ಅವರನ್ನೂ ದೇಶಹದ್ರೋಹ ಸಂಪರ್ಕಿರತರ ಪಟ್ಟಿಗೆ ಸೇರಿಸಬೇಕಾಗುತ್ತದೆ, ಮಕ್ಕಳ ಮೇಲೂ ವಿಶ್ವಾಸ ಹೋಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್‌

    ಒಂದು ಸಂಘಟನೆಯನ್ನು ಬ್ಯಾನ್ ಮಾಡಿದರೆ, ಮತ್ತೊಂದು ಹೆಸರಿನಲ್ಲಿ ಸಂಘಟನೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ದೇಶದ್ರೋಹಿಗಳಿಗಾಗಿ ಸಂಘಟನೆ ಮಾಡುವವರನ್ನೇ ಬಹಿಷ್ಕರಿಸಬೇಕು. ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಇದು ಆಗಬೇಕು. ಬೆರಳೆಣಿಕೆ ಮಂದಿ ಮಾಡುವ ಇಂತಹ ಕೆಲಸಗಳಿಂದ ಬಹುಪಾಲು ಸಂಖ್ಯೆ ಮುಸ್ಲಿಮರಿಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಪ್ರಜ್ಞಾವಂತ ಮುಸ್ಲಿಮರು ಜಾಗೃತರಾಗಬೇಕು. ದೇಶದ್ರೋಹಿಗಳನ್ನು ಸಾಮೂಹಿಕವಾಗಿ ಬಹಿಷ್ಕರಿಸಬೇಕು ಎಂದು ಕೆರೆ ನೀಡಿದ್ದಾರೆ.

  • ಸಾಮರಸ್ಯದ ಜೀವನಕ್ಕೆ ಇಲ್ಲಿ ಬದುಕಿ, ಇಲ್ಲವೆಂದರೆ ಎಲ್ಲಿಗೆ ಬೇಕಾದರೂ ಹೋಗಿ: ಕಲ್ಲಡ್ಕ ಪ್ರಭಾಕರ ಭಟ್

    ಸಾಮರಸ್ಯದ ಜೀವನಕ್ಕೆ ಇಲ್ಲಿ ಬದುಕಿ, ಇಲ್ಲವೆಂದರೆ ಎಲ್ಲಿಗೆ ಬೇಕಾದರೂ ಹೋಗಿ: ಕಲ್ಲಡ್ಕ ಪ್ರಭಾಕರ ಭಟ್

    ಮಂಗಳೂರು: ಸಾಮರಸ್ಯದ ಜೀವನ ಮಾಡಬೇಕೆಂದರೆ ಈ ದೇಶದಲ್ಲಿ ಬದುಕಿ. ಆಗುದಿಲ್ಲ ಎಂದಾದರೆ ಎಲ್ಲಿ ಬೇಕಾದರೂ ಹೋಗಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

    ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು. ಆದರೆ ಕಾರ್ಯಕ್ರಮದ ಉದ್ಘಾಟನೆಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ) ಪ್ರತಿಭಟನೆ ನಡೆಸಿತು. ಇದನ್ನೂ ಓದಿ: ನವಾಬರು ಕೊಡುವುದಕ್ಕಿಂತ ಮೊದಲೇ ಮಂತ್ರಾಲಯ ಮಠಕ್ಕೆ ಸೇರಿದ್ದು: ಮಂತ್ರಾಲಯ ಶ್ರೀ

    ಯುನಿವರ್ಸಿಟಿ ಮಾರ್ಚ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ ಸಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಿಶ್ವವಿದ್ಯಾನಿಲಯದ ಪ್ರವೇಶ ದ್ವಾರದಲ್ಲಿಯೇ ತಡೆದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನೂಕಾಟ-ತಳ್ಳಾಟ ನಡೆಯಿತು. ಕಲ್ಲಡ್ಕ ಪ್ರಭಾಕರ್ ಭಟ್ ಕ್ರಿಮಿನಲ್ ಬ್ಯಾಕ್‌ಗ್ರಾಂಡ್ ಹೊಂದಿದ್ದಾರೆ ಎಂದು ಸಿಎಫ್‌ಐ ಕಾರ್ಯಕರ್ತರು ಆರೋಪಿಸಿ ಗೋ ಬ್ಯಾಕ್ ಘೋಷಣೆ ಕೂಗಿದರು. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್

    ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಕೇಸ್ ಯಾರಿಗೆ ಯಾರು ಬೇಕಾದರೂ ಹಾಕಬಹುದು. ಮೋದಿ, ಅಮಿತ್ ಶಾ ಮೇಲೂ ಕೇಸ್ ಇದೆ. ಅದಕ್ಕಾಗಿ ಅವರನ್ನು ಅಪರಾಧಿ ಎಂದು ಕರೆಯುವುದಕ್ಕೆ ಆಗುತ್ತಾ? ನನಗೆ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಇಲ್ಲ ಎಂದು ಸ್ಪಷ್ಟಪಡಿಸಿ ತಿರುಗೇಟು ನೀಡಿದರು.

  • ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಶಿವಮೊಗ್ಗ: ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಕ್ಕೆ ಬಿಜೆಪಿ ಯುವ ಮೋರ್ಚಾದ ವತಿಯಿಂದ 5 ಲಕ್ಷ ರೂ. ಚೆಕ್ ನೀಡಿದ್ದಾರೆ.

    ಹರ್ಷ ಮನೆಗೆ ಭೇಟಿ ನೀಡಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಯುವ ಘಟಕ ರಾಜ್ಯದ ತಂಡದವರೆಲ್ಲರು ಅವರ ಮನೆಗೆ ಭೇಟಿ ನೀಡಿದ್ದೇವೆ. ಹರ್ಷ ಹಿಂದುತ್ವಕ್ಕಾಗಿ ಬದುಕಿದ ಹುಡುಗನಾಗಿದ್ದನು. ಅವರನ್ನು ಅತ್ಯಂತ ಅಮಾನುಷವಾಗಿ ಬರ್ಬರವಾಗಿ ಕೊಲ್ಲಲಾಗಿದೆ. ದೇಶಕ್ಕಾಗಿ ಹೇಗೆ ಯೋಧರು ಹುತ್ಮಾತ್ಮರಾಗುತ್ತಾರೋ ಹಾಗೇ ನನ್ನ ಮಗ ಹುತಾತ್ಮ ನಾಗಿದ್ದಾನೆ ಅಂತ ಅವರ ತಾಯಿ ಹೇಳಿದರು ಎಂದರು. ಇದನ್ನೂ ಓದಿ: ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    ಪ್ರತಿ ಮನೆಯಲ್ಲಿಯೂ ಹರ್ಷ ನಂತ ಹಿಂದೂ ಹುಟ್ಟಬೇಕು ಅಂದಿದ್ದಾರೆ. ಫೇಸ್ ಬುಕ್ ಪೋಸ್ಟ್ ಮಾಡಿದ್ದಾಗ ಈ ರೀತಿ ಆಗುತ್ತದೆ ಅಂದರೆ ಐಸಿಸಿಗೂ ನಮಗೂ ಏನೂ ವ್ಯತ್ಯಾಸ ಇದೆ? ಹತ್ಯೆ ಮಾಡಿದ ರಾಕ್ಷಕರಿಗೆ ಒಂದು ಮಾತು ಹೇಳುತ್ತೇನೆ. ರಾಜ್ಯದಲ್ಲಿ ಹಿಂದೂತ್ವದ ಸರ್ಕಾರ ಇದ್ದು, ನಿಮ್ಮನ್ನು ಹುಡುಕಿ ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮನವಿ ಮಾಡಿಕೊಳ್ಳುತ್ತೇನೆ. ಹಿಂದೂ ಹರ್ಷನ ಹತ್ಯೆ ಮರ್ಡರ್ ಅಲ್ಲ, ಭಯೋತ್ಪಾದಕ ಕೃತ್ಯ ಅಂತಾನೇ ಪ್ರಕರಣ ದಾಖಲಾಗಬೇಕು ಎಂದರು.  ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

     

    ಈಗಾಗಲೇ ನಾಲ್ಕು ಜನ ಸುಪಾರಿ ಕಿಲ್ಲರ್‍ಗಳನ್ನು ಅರೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ ಕೋಕಾ ಕಾಯ್ದೆ ಜಾರಿಗೊಳಿಸಬೇಕು. ಎಸ್‍ಡಿಪಿಐ, ಪಿಎಫ್‍ಐ, ಸಿಎಫ್‍ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇವುಗಳನ್ನೂ ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ದಾಖಲೆ ಸಮೇತ ಕರುಡು ಸಲ್ಲಿಕೆ ಮಾಡಬೇಕು. ಹಿಂದೂಗಳ ಹತ್ಯೆ ಕೇವಲ ಮರ್ಡರ್ ಅಲ್ಲ. ಅದೊಂದು ವ್ಯವಸ್ಥಿತ ಮರ್ಡರ್‍ಗಳ ಷಡ್ಯಂತ್ರ ಎಂದರು.

  • ಇದನ್ನು ನಾವು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ಸಿಎಫ್‍ಐ

    ಇದನ್ನು ನಾವು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ಸಿಎಫ್‍ಐ

    ಉಡುಪಿ: ಹಿಜಬ್ ವರ್ಸಸ್ ಕೇಸರಿ ವಿವಾದಕ್ಕೆ ರಾಜ್ಯ ಹೈಕೋರ್ಟ್ ಮೌಖಿಕ ಆದೇಶ ನೀಡಿದೆ. ಈ ಆದೇಶ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ(ಸಿಎಫ್‍ಐ) ತೃಪ್ತಿ ನೀಡಿಲ್ಲ. ಸೋಮವಾರದ ನಂತರದ ತ್ರಿಸದಸ್ಯ ಪೀಠದ ವಿಚಾರಣೆ ಮೇಲೆ ಸಿಎಫ್‍ಐ ಕಣ್ಣಿಟ್ಟಿದೆ.

    ನಾವು ಇದನ್ನು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ. ನಾವು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಯಾವುದೇ ಒತ್ತಡ ಹಾಕಲ್ಲ. ಹಿಜಬ್ ಧರಿಸುವ ಬಗ್ಗೆ ಯಾವುದೇ ಸಲಹೆ ನೀಡಲ್ಲ. ಹಿಜಬ್ ತೆಗೆದು ಕಾಲೇಜಿಗೆ ಹೋಗುವ ವಿಚಾರ ಪೋಷಕರು ಹಾಗೂ ವಿದ್ಯಾರ್ಥಿನಿಯರ ಅಭಿಪ್ರಾಯಕ್ಕೆ ಬಿಟ್ಟಿದೆ ಎಂದು ಸಿಎಫ್‍ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲ್ ಕಟ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ

    ಹಿಜಬ್ ವಿವಾದದ ಮಧ್ಯಂತರ ತೀರ್ಪಿಗೆ ಪಿಎಫ್‍ಐ ತಕ್ಷಣದ ಪ್ರತಿಕ್ರಿಯೆ ನೀಡಿದೆ. ಕೋರ್ಟ್‍ನ ಆದೇಶ ಸಂಘಟನೆ ಸ್ವೀಕರಿಸಿದೆ. ಸೋಮವಾರ ನಂತರದ ವಿಚಾರಣೆ ಸಂದರ್ಭ ನಮ್ಮ ಪರವಾಗಿ ತೀರ್ಪುಗಳು ಬರಬಹುದು ಎಂಬ ನಂಬಿಕೆ ವ್ಯಕ್ತಪಡಿಸಿದೆ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಇದನ್ನು ಹೊರತಾಗಿ ಶನಿವಾರ ಅಥವಾ ಸೋಮವಾರದಿಂದ ಕಾಲೇಜಿಗೆ ತೆರಳುವುದು ವಿದ್ಯಾರ್ಥಿನಿಯರ ಇಚ್ಚೆಗೆ ಬಿಟ್ಟಿದ್ದು ಎಂದಿದೆ. ಇದನ್ನೂ ಓದಿ: ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

  • ಎಬಿವಿಪಿ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಭಾಗಿಯೇ ಹಿಜಬ್ ವಿವಾದಕ್ಕೆ ಮೂಲ ಕಾರಣ?

    ಎಬಿವಿಪಿ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಭಾಗಿಯೇ ಹಿಜಬ್ ವಿವಾದಕ್ಕೆ ಮೂಲ ಕಾರಣ?

    ಉಡುಪಿ: ಎಬಿವಿಪಿ ಪ್ರತಿಭಟನೆಯಲ್ಲಿ ಇಬ್ಬರು ಮುಸಲ್ಮಾನ್ ವಿದ್ಯಾರ್ಥಿಗಳು ಭಾಗಿಯಾಗಿದ್ದರಿಂದ ಸಿಎಫ್‍ಐ ಪ್ರತಿ ಸವಾಲ್ ಕೈಗೊಂಡು ಹಿಜಬ್ ವಿವಾದ ಹುಟ್ಟಿಸಿದೆ ಎಂಬ ಆರೋಪಗಳು ಈಗ ಕೇಳಿಬರುತ್ತಿವೆ.

    ಕಳೆದ ಅಕ್ಟೋಬರ್‌ನಲ್ಲಿ ಮಣಿಪಾಲ ವಿದ್ಯಾರ್ಥಿ ಅತ್ಯಾಚಾರ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಎಬಿವಿಪಿ ಪ್ರತಿಭಟನೆಯಲ್ಲಿ ತೊಡಗಿದ್ದಕ್ಕೆ ಸಿಎಫ್‍ಐ ಪ್ರತಿ ಸವಾಲ್ ಎಸೆದಿತ್ತು. ಹಿಜಾಬ್ ಅವಕಾಶ ಕೇಳುವಂತೆ ಸಿಎಫ್‍ಐ ಸಂಘಟನೆಗೆ ಪ್ರೇರೇಪಿಸಿದ್ದರಿಂದ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಇಳಿದಿದ್ದಾರೆ ಎಂಬ ಮಾತು ಈಗ ಕೇಳಿ ಬಂದಿದೆ.

    ಈ ಬಗ್ಗೆ ಮಾತನಾಡಿದ ಆಲಿಯಾ ಅಸಾದಿ ಅವರು, ಹಿಜಬ್ ಮತ್ತು ಕೇಸರಿ ವಿಚಾರದಲ್ಲಿ ಪೊಲಿಟಿಕಲ್ ಗೇಮ್ ನಡೆಯುತ್ತಿದೆ. ವಿದ್ಯಾರ್ಥಿಗಳ ವಿಚಾರಕ್ಕೆ ರಾಜಕೀಯ ಎಂಟ್ರಿಯಾಗಿದ್ದು ಯಾಕೆ? ಎಬಿವಿಪಿ ಪ್ರತಿಭಟನೆಗೆ ನಾವು ಕಾಲೇಜಿನಿಂದ ಎಲ್ಲರೂ ಹೋಗಿದ್ದೆವು. ಹಿಜಬ್ ಹಾಕಿ ನಾವು ಪ್ರತಿಭಟನೆಗೆ ಹೋಗಿದ್ದೆವು. ಆಗ ನಮಗೆ ಹೇಗೆ ಹಿಜಬ್ ಅವಕಾಶ ಕೊಟ್ಟಿದ್ದರು ಜೊತೆಗೆ ಎಬಿವಿಪಿ ಪ್ರತಿಭಟನೆ ಎಂದು ನಮಗೆ ಯಾರು ಹೇಳಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾವು ಮುಸ್ಲಿಂ ಹೆಣ್ಣು ಮಕ್ಕಳ ಪರ: ಮೋದಿ

    ನಾನು 17 ವಯಸ್ಸಿನ ವಿದ್ಯಾರ್ಥಿನಿ. ನನಗೆ ಮೆಂಟಲಿ ಟಾರ್ಚರ್ ಆಗುತ್ತಿದೆ. ಹಿಂದೂ ಮತ್ತು ಮುಸ್ಲಿಮರ ನಡುವೆ ವಿಭಾಗ ಆಗುತ್ತಿದೆ. ಹಿಂದಿನಿಂದಲೂ ಕೇಸರಿ ಶಾಲನ್ನು ಹಾಕುತ್ತಿದ್ದಾರಾ ಎಂದು ಪ್ರಶ್ನಿಸಿದ ಅವರು, ನಮಗೆ ಶಿಕ್ಷಣದಷ್ಟೇ ನಮ್ಮ ಧರ್ಮ ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಅಮಾಯಕ ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡುತ್ತಿವೆ: ಹೆಚ್‍ಡಿಕೆ

    ನನಗೆ ನನ್ನ ಜೀವನದಲ್ಲಿ ಒಂದು ಗುರಿ ಇದೆ. ನಾನು ಕೂಡ ಈ ದೇಶಕ್ಕೆ ಏನಾದರೂ ಮಾಡಬೇಕು ಎಂದು ಕನಸು ಕಟ್ಟಿದ್ದೇನೆ. ನನಗೆ ಬಹಳ ಹಿಂದೂ ಧರ್ಮದ ಗೆಳತಿಯರಿದ್ದಾರೆ. ಹಿಜಬ್‍ಗೆ ಹಿಂದೂ ಹಾಗೂ ಮುಸಲ್ಮಾನ ಗೆಳತಿಯರು ಸಹಾಯ ಮಾಡದ್ದರು ಎಂದರು.

  • ಪ್ರಶ್ನಿಸಿದರೆ ಮಾನವ ಹಕ್ಕು ಉಲ್ಲಂಘನೆ ದೂರು ನೀಡ್ತೇನೆ- ಕರ್ತವ್ಯ ನಿರತ ಪೊಲೀಸರಿಗೆ ಸಿಎಫ್‍ಐ ನಾಯಕ ಬೆದರಿಕೆ

    ಪ್ರಶ್ನಿಸಿದರೆ ಮಾನವ ಹಕ್ಕು ಉಲ್ಲಂಘನೆ ದೂರು ನೀಡ್ತೇನೆ- ಕರ್ತವ್ಯ ನಿರತ ಪೊಲೀಸರಿಗೆ ಸಿಎಫ್‍ಐ ನಾಯಕ ಬೆದರಿಕೆ

    ಮಂಗಳೂರು: ಪ್ರತಿಭಟನೆ ಹೆಸರಿನಲ್ಲಿ ಸಿಎಫ್‍ಐ ಕಾರ್ಯಕರ್ತರು ದರ್ಪ ತೋರಿಸಿದ್ದು, ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    ಪುತ್ತೂರಿನಲ್ಲಿ ಘಟನೆ ನಡೆದಿದ್ದು, ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ. ಪ್ರತಿಭಟನೆ ಹೆಸರಿನಲ್ಲಿ ಪೊಲೀಸರ ಮೇಲೆ ದರ್ಪ ಪ್ರದರ್ಶನ ಮಾಡಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮುಖಂಡ ಪೊಲೀಸರಿಗೆ ಬೆದರಿಕೆ ಹಾಕಿದ್ದು, ಶಾಸಕರ ಕಚೇರಿಗೆ ಮುತ್ತಿಗೆ ಹಾಗೂ ರಸ್ತೆ ತಡೆಗೆ ಸಿಎಫ್‍ಐ ಯತ್ನಿಸಿದೆ.

    ಯಾವುದೇ ಅನುಮತಿ ಪಡೆಯದೆ ಸಿಎಫ್‍ಐ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಬೆದರಿಕೆ ಹಾಕಿದ್ದಾನೆ. ನಾನು ಯಾರು ಅಂತ ಗೊತ್ತಾ ಎಂದು ಕರ್ತವ್ಯನಿರತ ಅಧಿಕಾರಿಯನ್ನು ಏಕವಚನದಲ್ಲಿ ನಿಂದಿಸಿದ್ದಾನೆ. ಅಲ್ಲದೆ ನನ್ನನ್ನು ಪ್ರಶ್ನಿಸಿದರೆ ಮಾನವ ಹಕ್ಕಿನ ಉಲ್ಲಂಘನೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಮಿಸಲಿಟ್ಟ ಜಾಗದಲ್ಲಿ ಸೀ ಫುಡ್ ಯೋಜನೆಗೆ ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಘಟನೆ ನಡೆದಿದೆ.