Tag: CET

  • ಲೋಕಸಭಾ ಚುನಾವಣೆ : ಸಿಇಟಿ ಪರೀಕ್ಷೆ ಏ.29, 30ಕ್ಕೆ ಮುಂದೂಡಿಕೆ

    ಲೋಕಸಭಾ ಚುನಾವಣೆ : ಸಿಇಟಿ ಪರೀಕ್ಷೆ ಏ.29, 30ಕ್ಕೆ ಮುಂದೂಡಿಕೆ

    ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ನಿಗದಿಯಾಗಿದ್ದ ಸಿಇಟಿ ಪರೀಕ್ಷೆಗಳು ಮುಂದೂಡಿಕೆಯಾಗಿದೆ. ಏಪ್ರಿಲ್ 23, 24 ಕ್ಕೆ ನಿಗದಿಯಾಗಿರುವ ಸಿಇಟಿ ಪರೀಕ್ಷೆ ಏಪ್ರಿಲ್ 29, 30ಕ್ಕೆ ಮುಂದೂಡಿಕೆಯಾಗಿದೆ.

    ವೇಳಾಪಟ್ಟಿ ಮೊದಲಿನಂತೆ ಇರಲಿದ್ದು, ದಿನಾಂಕ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಏಪ್ರಿಲ್ 29 ರಂದು ಜೀವಶಾಸ್ತ್ರ, ಗಣಿತ ಪರೀಕ್ಷೆ ನಡೆದರೆ, ಏಪ್ರಿಲ್ 30 ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 1 ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ.

    ಈ ಬಾರಿ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಏ. 18 ರಂದು ಮೊದಲ ಹಂತದ ಚುನಾವಣೆ ನಡೆದರೆ ಎರಡನೇ ಹಂತದ ಚುನಾವಣೆ ಏ.23 ರಂದು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಿಇಟಿ ಫಲಿತಾಂಶ ಪ್ರಕಟ – ಅಗ್ರಿಕಲ್ಚರ್, ಎಂಜಿನಿಯರಿಂಗ್ ನಲ್ಲಿ ಶ್ರೀಧರ್ ದೊಡ್ಡಮನಿ ಫಸ್ಟ್ ರ್‍ಯಾಂಕ್

    ಸಿಇಟಿ ಫಲಿತಾಂಶ ಪ್ರಕಟ – ಅಗ್ರಿಕಲ್ಚರ್, ಎಂಜಿನಿಯರಿಂಗ್ ನಲ್ಲಿ ಶ್ರೀಧರ್ ದೊಡ್ಡಮನಿ ಫಸ್ಟ್ ರ್‍ಯಾಂಕ್

    ಬೆಂಗಳೂರು: ಇಂದು ರಾಜ್ಯ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಎಂಜಿನಿಯರಿಂಗ್ ಮತ್ತು ಅಗ್ರಿಕಲ್ಚರ್ ನಲ್ಲಿ ಶ್ರೀಧರ್ ದೊಡ್ಡಮನಿ ಫ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

    ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಮಾಡಿ, ಉನ್ನತ ಶಿಕ್ಷಣ ಇಲಾಖೆ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ. ರಾಜ್ ಕುಮಾರ್ ಕತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಅವರು ಫಲಿತಾಂಶ ಬಿಡುಗಡೆ ಮಾಡಿದರು.

    ವಿಜಯಪುರದಲ್ಲಿರುವ ಎಕ್ಸಲೆಂಟ್ ಸೈನ್ಸ್ ಕಾಲೇಜು ವಿದ್ಯಾರ್ಥಿ ಎಂಜಿನಿಯರಿಂಗ್ ಮತ್ತು ಅಗ್ರಿಕಲ್ಚರ್ ನಲ್ಲಿ ಶ್ರೀಧರ್ ದೊಡ್ಡಮನಿ ಪ್ರಥಮ ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ನಾರಾಯಣ ಪೈ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ಏಪ್ರಿಲ್ 19 ರಿಂದ 20 ರವರೆಗೆ ಸಿಇಟಿ ಪರೀಕ್ಷೆ ನಡೆದಿತ್ತು. ಈ ಬಾರಿ 1,98,639 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದರು. ಕಳೆದ ವರ್ಷ 1.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೃಷಿ ಕೋಟಾದ ಅಡಿ 83,302 ವಿದ್ಯಾರ್ಥಿಗಳು ಮತ್ತು ಎಂಜಿನಿಯರಿಂಗ್, ಪಶು ವೈದ್ಯಕೀಯ ಹಾಗೂ ಕೃಷಿ ವಿಜ್ಞಾನ ವೃತ್ತಿ ಪರ ಕೋರ್ಸ್ ಗಳಿಗೆ ಸಿಇಟಿ ಪರೀಕ್ಷೆ ನಡೆದಿತ್ತು.

    ಫಲಿತಾಂಶಕ್ಕಾಗಿ
    http://karresults.nic.in/

    ಎಂಜಿನಿಯರಿಂಗ್:
    1 ಶ್ರೀಧರ್ ದೊಡ್ಡಮನಿ – ಎಕ್ಸಲೆಂಟ್ ಸೈನ್ಸ್ ಕಾಲೇಜು ವಿಜಯಪುರ
    2 ನಾರಾಯಣ ಪೈ – ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜು ದಕ್ಷಿಣ ಕನ್ನಡ
    3 ದೇಬರ್ಶೋ ಸನ್ಯಾಸಿ – ಜಿಂದಾಲ್ ವಿದ್ಯಾ ಮಂದಿರ, ಬಳ್ಳಾರಿ

    ಅಗ್ರಿಕಲ್ಚರ್:
    1 ಶ್ರೀಧರ್ ದೊಡ್ಡಮನಿ – ಎಕ್ಸಲೆಂಟ್ ಸೈನ್ಸ್ ಕಾಲೇಜು ವಿಜಯಪುರ
    2 ಶೈಕುಮಾರ್ – ಚೇತನ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಬ್ಬಳ್ಳಿ ಧಾರವಾಡ
    3 ಮಹಿಮಾ ಕೃಷ್ಣ – ವಿವಿಎಸ್ ಸರ್ದಾರ್ ಪಟೇಲ್, ಬೆಂಗಳೂರು

    ವೆಟರ್ನರಿ ಸೈನ್ಸ್:
    1 ವಿನೀತ್ ಮೆಗುರ್ – ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು
    2 ಅಪರೂಪ – ಸಂಕಲ್ಪ ಪಿಯು ಕಾಲೇಜು, ಬಳ್ಳಾರಿ
    3 ಆದಿತ್ಯ ಚಿದಾನಂದ – ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್, ಬೆಂಗಳೂರು

    ಫಾರ್ಮ:
    1 ತುಹೀನ್ ಗಿರಿನಾಥ್ – ನಾರಾಯಣ ಇ ಟೆಕ್ನೋ ಬೆಂಗಳೂರು.
    2 ಅನಿತಾ ಜೇಮ್ಸ್ – ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು.
    3 ಯೋಗೇಶ್ ಮಾಧವ – ನಾರಾಯಣ ಇ ಟೆಕ್ನೋ, ಬೆಂಗಳೂರು.

  • ಶುಕ್ರವಾರ ಸಿಇಟಿ ಫಲಿತಾಂಶ ಪ್ರಕಟ – ಈ ವೆಬ್ ಸೈಟ್‍ಗಳಲ್ಲಿ ಸಿಗಲಿದೆ ಮಾಹಿತಿ

    ಶುಕ್ರವಾರ ಸಿಇಟಿ ಫಲಿತಾಂಶ ಪ್ರಕಟ – ಈ ವೆಬ್ ಸೈಟ್‍ಗಳಲ್ಲಿ ಸಿಗಲಿದೆ ಮಾಹಿತಿ

    ಬೆಂಗಳೂರು: ಕಳೆದ ಏಪ್ರಿಲ್ ನಲ್ಲಿ ನಡೆದಿದ್ದ ವೃತ್ತಿಪರ ಕೋರ್ಸ್ ಗಳ ಸಿಇಟಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಳ್ಳಲಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫಲಿತಾಂಶ ಪ್ರಕಟಿಸಲಿದೆ.

    ಮಧ್ಯಾಹ್ನ 3 ಗಂಟೆಗೆ ಇಲಾಖೆ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಉನ್ನತ ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟ ಮಾಡಲಿದ್ದಾರೆ.

    ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳ ಸೀಟಿಗೆ ನೀಟ್ ಪರೀಕ್ಷೆ ನಡೆದಿರುವುದರಿಂದ ಎಂಜಿನಿಯರಿಂಗ್, ಅಗ್ರಿಕಲ್ಚರ್ ಕೋರ್ಸ್ ಗಳ  ಫಲಿತಾಂಶ ನಾಳೆ ಪ್ರಕಟವಾಗಲಿದೆ. ಫಲಿತಾಂಶ ಲಭ್ಯವಾಗುವ ವೈಬ್ ಸೈಟ್ ಹೀಗಿದೆ.

    ಸಿಇಟಿ ರಿಸಲ್ಟ್ ವೆಬ್‍ಸೈಟ್ : 

    http://kea.kar.nic.in

    http://cet.kar.nic.in

    http://karresults.nic.in

  • ಸಿಇಟಿ, ನೀಟ್, ಜೆಇಇ ಪರೀಕ್ಷೆ: ದಯಾನಂದ ಸಾಗರ್ ಕಾಲೇಜಿನಲ್ಲಿ ಸಿಗಲಿದೆ ಮಾಹಿತಿ

    ಸಿಇಟಿ, ನೀಟ್, ಜೆಇಇ ಪರೀಕ್ಷೆ: ದಯಾನಂದ ಸಾಗರ್ ಕಾಲೇಜಿನಲ್ಲಿ ಸಿಗಲಿದೆ ಮಾಹಿತಿ

    ಬೆಂಗಳೂರು: ನೀವು ಸಿಇಟಿ, ನೀಟ್, ಜೆಇಇ, ಡಿಸ್ಯಾಟ್ ಪರೀಕ್ಷೆಗಳ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೀರಾ? ಈ ಪರೀಕ್ಷೆಗಳ ಬಗ್ಗೆ ಮಾಹಿತಿ ಬೇಕೇ? ಹಾಗಿದ್ದರೆ ಮಾರ್ಚ್ 19ರ ಸೋಮವಾರ ಕೂಡ್ಲು ಗೇಟ್ ಹೊಸೂರು ಮುಖ್ಯ ರಸ್ತೆಯಲ್ಲಿರುವ ದಯಾನಂದ ಸಾಗರ್ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಿ.

    ದೇಶದ ಪರಿಣತ ಶಿಕ್ಷಕರಾದ `ಸೂಪರ್ 30′ ಖ್ಯಾತಿಯ ಪ್ರೊ. ಆನಂದ್ ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವಿದ್ಯಾರ್ಥಿಗಳ ಸಂದೇಹವನ್ನು ನಿವಾರಿಸಲಿದ್ದಾರೆ.

    ಬಿಹಾರದ ಪಾಟ್ನಾದಲ್ಲಿರುವ ರಾಮಾನುಜಮ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಶಾಲೆಯ ಸಂಸ್ಥಾಪಕರಾಗಿರುವ ಆನಂದ್ ಕುಮಾರ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ಅಂಕಣಗಾರರಾಗಿ ಗುರುತಿಸಿಕೊಂಡಿದ್ದಾರೆ. ಆನಂದ್ ಕುಮಾರ್ ಅವರು ತಮ್ಮ `ಸೂಪರ್ 30′ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ದೇಶದ ಹಿಂದುಳಿದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ, ಅವರನ್ನು ಜೆಇಇ ಪರೀಕ್ಷೆಗೆ ಸಿದ್ಧ ಪಡಿಸುತ್ತಾರೆ. ಟೈಮ್ ಮ್ಯಾಗಜಿನ್ ಗುರುತಿಸಿದ ದೇಶದ ನಾಲ್ಕು ಉತ್ತಮ ಗಣಿತ ಶಾಲೆಗಳ ಪೈಕಿ ರಾಮಾನುಜಮ್ ಶಾಲೆಯೂ ಸೇರಿದೆ.

    ಪ್ರೊ. ಆನಂದ್ ಕುಮಾರ್ ಅವರ ಜೀವನ ಚರಿತ್ರೆಯನ್ನು ಆಧಾರಿಸಿ ಚಿತ್ರ ನಿರ್ಮಾಣವಾಗುತ್ತಿದೆ. ಹೃತಿಕ್ ರೋಶನ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರ 2019ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಮಕ್ಕಳ ಪೋಷಕರು ಹಾಗೂ ಪಿಯು ಕಾಲೇಜಿನ ಶಿಕ್ಷಕರು ಭಾಗವಹಿಸಲು ಅವಕಾಶವಿದೆ. ಸೋಮವಾರ ಎರಡು ಸೆಷನ್ ನಲ್ಲಿ ಕಾರ್ಯಕ್ರಮ ನಡೆಯುತ್ತದೆ. ಮೊದಲ ಅವಧಿಯನ್ನು ಪ್ರೊ. ಆನಂದ್ ಕುಮಾರ್ ನಡೆಸಿಕೊಡಲಿದ್ದು, ಎರಡನೆಯ ಅವಧಿಯಲ್ಲಿ ರಾಜ್ಯದ ಪ್ರಸಿದ್ದ ಶೈಕ್ಷಣಿಕ ತಜ್ಞ, ಬೇಸ್ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಹೆಚ್.ಎಸ್ ನಾಗರಾಜ್, ವಿಟಿಯು ಮಾಜಿ ಕುಲಪತಿ ಪ್ರೊ.ಎಚ್.ಪಿ ಕಿಂಚ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಭಾಗವಹಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ನೊಂದಣಿ ಮಾಡಬೇಕಾಗುತ್ತದೆ. ಕುಮಾರಸ್ವಾಮಿ ಲೇಔಟ್ ಕ್ಯಾಂಪಸ್, ಕನಕಪುರ ರಸ್ತೆಯ ರವಿಶಂಕರ್ ಅಶ್ರಮದ ಬಳಿ ಇರುವ ಕ್ಯಾಂಪಸ್, ಕೂಡ್ಲುಗೇಟ್ ಬಳಿ ಇರುವ ಕ್ಯಾಂಪಸ್ ಮತ್ತು ವಿವಿ ಪುರಂ ನಲ್ಲಿರುವ ಕೆರಿಯರ್ ಕೆಫೆಯಲ್ಲಿ ನೊಂದಣಿ ಮಾಡಬಹುದು. ಆನ್‍ಲೈನ್ ಮೂಲಕ www.dsu.edu.in ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಬಹುದು.

     

  • ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಬಾಳಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿಯ ಚೆಲ್ಲಾಟ

    ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಬಾಳಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿಯ ಚೆಲ್ಲಾಟ

    ತುಮಕೂರು: ಕರ್ನಾಟಕ ಪರೀಕ್ಷಾ ಮಂಡಳಿಯ ಎಡವಟ್ಟು ಮುಂದುವರಿದಿದ್ದು ಡಿಪ್ಲೋಮ ವಿದ್ಯಾರ್ಥಿನಿ ಜೊತೆ ಚೆಲ್ಲಾಟ ಆಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

    ಎಂಜಿನಿಯರಿಂಗ್ ಮಾಡಲು ಚಂದನಾ ಎಂಬವರು 2016 ರಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದರೂ ಈಗ ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶವನ್ನು ಬಿಡುಗಡೆ ಮಾಡದೇ ಆಟ ಆಡುತ್ತಿದೆ ಎಂದು ಚಂದನಾ ಪೋಷಕರು ಆರೋಪಿಸಿದ್ದಾರೆ.

    ಯಾಕೆ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ ಎಂದು ಸಂಬಂಧಪಟ್ಟವರನ್ನು ಪ್ರಶ್ನಿಸಿದರೆ, ಅಪ್ಲಿಕೇಷನ್ ತುಂಬುವಾಗ ನೀವು ಡಿಪ್ಲೋಮ ಮೊದಲ ವರ್ಷದ ಅಂಕಪಟ್ಟಿಯನ್ನೇ ನೀಡಿಲ್ಲ. ಹಾಗಾಗಿ ರಿಸಲ್ಟ್ ಬಂದಿಲ್ಲ ಎಂದು ಉತ್ತರಿಸಿದ್ದಾರೆ.

    ಆದರೆ ಚಂದನಾ ಅಪ್ಲಿಕೇಷನ್ ತುಂಬಿದ ನಂತರ ಅದರ ನಕಲಿ ಪ್ರತಿಯನ್ನು ಇಟ್ಟುಕೊಂಡಿದ್ದು ಅದರಲ್ಲಿ ಎಲ್ಲಾ ಮಾಹಿತಿಯನ್ನು ತುಂಬಿರುವ ದಾಖಲೆ ಸ್ಪಷ್ಟವಾಗಿದೆ. ಈಗ ಅಪ್ಲಿಕೇಷನ್ ಸರಿಯಿಲ್ಲ ಎಂದು ಹೇಳಿರುವ ಪರೀಕ್ಷಾ ಮಂಡಳಿ ಚಂದನಾರ ಅಪ್ಲಿಕೇಷನ್ ನೋಡಿ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಅಷ್ಟೇ ಅಲ್ಲದೇ ಅಲ್ಲದೆ ಅಪ್ಲಿಕೇಷನ್ ಪರಿಶೀಲನೆಯ ಕೊನೆಯ ದಿನದ ನಂತರದ ದಿನ ನೀವೇ ಮಾಹಿತಿಗಳನ್ನು ಬದಲಾಯಿಸಿದ್ದೀರಿ ಎಂದು ಐಪಿ ಅಡ್ರೆಸ್ ವೊಂದನ್ನು ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂಗೆ ದೂರು ಸಲ್ಲಿಸಲು ಚಂದನಾ ಪೋಷಕರು ನಿರ್ಧರಿಸಿದ್ದಾರೆ.

  • ಸಿಇಟಿ ಫಲಿತಾಂಶ ಪ್ರಕಟ -ಎಲ್ಲಾ ವಿಭಾಗಗಳ ಟಾಪರ್‍ಗಳ ಪಟ್ಟಿ ಇಲ್ಲಿದೆ

    ಸಿಇಟಿ ಫಲಿತಾಂಶ ಪ್ರಕಟ -ಎಲ್ಲಾ ವಿಭಾಗಗಳ ಟಾಪರ್‍ಗಳ ಪಟ್ಟಿ ಇಲ್ಲಿದೆ

    ಬೆಂಗಳೂರು: ಇಂದು ರಾಜ್ಯ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ.

    ಎಲ್ಲಾ ವಿಭಾಗಗಳ ಟಾಪರ್‍ಗಳ ಪಟ್ಟಿ ಇಲ್ಲಿದೆ

    ಎಂಜಿನಿಯರಿಂಗ್ ವಿಭಾಗ:
    1. ಪ್ರತೀಕ್ ಎಸ್. ನಾಯಕ್- ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
    2. ಸುಮಂತ್ ಆರ್. ಹೆಗಡೆ- ವಿವಿಎಸ್ ಸರ್ದಾರ್ ಪಿಯು ಕಾಲೇಜ್, ಬೆಂಗಳೂರು
    3. ಅನಿರುದ್ಧ್- ಆರ್.ವಿ. ಪಿಯು ಕಾಲೇಜ್, ಜಯನಗರ

    ಐಎಸ್‍ಎಂಎಚ್ ಕೋರ್ಸ್:
    1. ರಕ್ಷಿತಾ ರಮೇಶ್- ಭಗವಾನ್ ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು
    2. ವಿಕ್ಟರ್ ಥಾಮಸ್ – ವೈಷ್ಣವಿ ಪಿಯು ಕಾಲೇಜ್, ದಾವಣಗೆರೆ
    3. ನಾಸಿರ್ ಹುಸೇನ್ – ಇಂಡಿಪೆಂಡೆಂಟ್ ಪಿಯು ಕಾಲೇಜ್

    ಬಿವಿಎಸ್ ಕೋರ್ಸ್:
    1. ವಿಕ್ಟೋರಿ ಥಾಮಸ್- ವೈಷ್ಣವಿ ಚೇತನ ಪಿಯು ಕಾಲೇಜ್, ದಾವಣಗೆರೆ
    2. ರಕ್ಷಿತಾ ರಮೇಶ್- ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು
    3. ಭರತ್ ಕುಮಾರ್- ಆಳ್ವಾಸ್ ಪಿಯು ಕಾಲೇಜ್, ಮಂಗಳೂರು

    ಬಿಎಸ್ಸಿ ಕೋರ್ಸ್:
    1. ರಕ್ಷಿತಾ ರಮೇಶ್- ಮಹಾವೀರ ಜೈನ್ ಕಾಲೇಜ್, ಬೆಂಗಳೂರು
    2. ಸಂಕೀರ್ಥ ಸದಾನಂದ- ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು
    3. ಅನನ್ಯಾ- ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು

    ಬಿ ಫಾರ್ಮ್ ಕೋರ್ಸ್:
    1. ಪ್ರತೀಕ್ ಎಸ್ ನಾಯಕ್- ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
    2. ಸುಮನ್ ಆರ್ ಹೆಗಡೆ- ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್, ಬೆಂಗಳೂರು
    3. ಧ್ರುವ ಶ್ರೀರಾಮ್- ದೀಕ್ಷಾ ಪಿಯು ಕಾಲೇಜ್, ಬೆಂಗಳೂರು

    ಪರೀಕ್ಷೆಗಳು ಇದೇ ತಿಂಗಳು ಮೇ 2, 3 ಮತ್ತು 4ರಂದು ನಡೆದಿದ್ದವು. ಒಟ್ಟು 1,80,508 ವಿದ್ಯಾರ್ಥಿಗಳು ಎಕ್ಸಾಂ ಬರೆದಿದ್ರು. ಭಾರತೀಯ ವೈದ್ಯ ಪದ್ಧತಿಗೆ 96,643 ವಿದ್ಯಾರ್ಥಿಗಳಿಗೆ ಶ್ರೇಯಾಂಕ ನೀಡಲಾಗಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 1,25,860 ವಿದ್ಯಾರ್ಥಿಗಳಿಗೆ ಕ್ರಮಾಂಕ ನೀಡಲಾಗಿದೆ. ಕೃಷಿ ಕೋರ್ಸ್ ಗೆ 95,767, ಪಶುಸಂಗೋಪನೆ ಕೋರ್ಸ್‍ಗೆ 94,478 ಮತ್ತು ಬಿ ಫಾರ್ಮ್ ಗೆ 1,26,839 ವಿದ್ಯಾರ್ಥಿಗಳಿಗೆ ಕ್ರಮಾಂಕಗಳನ್ನು ನೀಡಲಾಗಿದೆ.

    ಈ ಬಾರಿ ನೀಟ್ ಕಡ್ಡಾಯ ಹಿನ್ನಲೆಯಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಹೊರತುಪಡಿಸಿ ಎಂಜಿನಿಯರಿಂಗ್ ಕೋರ್ಸ್ ಸೇರಿದಂತೆ ಉಳಿದ ವೃತ್ತಿಪರ ಕೋರ್ಸ್ ಗಳಿಗೆ ಮಾತ್ರ ಸಿಇಟಿ ನಡೆದಿತ್ತು.

     

     

  • ನಾಳೆ ಬೆಳಗ್ಗೆ 11 ಗಂಟೆಗೆ ಈ ವೆಬ್‍ಸೈಟ್‍ನಲ್ಲಿ ಸಿಇಟಿ ಫಲಿತಾಂಶ ಲಭ್ಯ

    ನಾಳೆ ಬೆಳಗ್ಗೆ 11 ಗಂಟೆಗೆ ಈ ವೆಬ್‍ಸೈಟ್‍ನಲ್ಲಿ ಸಿಇಟಿ ಫಲಿತಾಂಶ ಲಭ್ಯ

    ಬೆಂಗಳೂರು: ರಾಜ್ಯ ಸಿಇಟಿ ಫಲಿತಾಂಶ ನಾಳೆ ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪತ್ರಿಕಾಗೋಷ್ಠಿ ನಡೆಸಲಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ. ಬಳಿಕ ಕೆಇಎ ವೆಬ್‍ಸೈಟ್‍ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 2, 3, 4, ರಂದು ಸಿಇಟಿ ಪರೀಕ್ಷೆಗಳು ನಡೆದಿದ್ದವು.

    ಸುಮಾರು 1.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ಇನ್ನು ಈ ಬಾರಿ ನೀಟ್ ಕಡ್ಡಾಯ ಹಿನ್ನಲೆಯಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳಿಗೆ ಹೊರತುಪಡಿಸಿ ಎಂಜಿನಿಯರಿಂಗ್ ಕೋರ್ಸ್ ಸೇರಿದಂತೆ ಉಳಿದ ವೃತ್ತಿಪರ ಕೋರ್ಸ್ ಗಳಿಗೆ ಮಾತ್ರ ಸಿಇಟಿ ನಡೆದಿದ್ದು ಇದರ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ.

    ,