Tag: CET

  • CET Results: ಎಂಜಿನಿಯರಿಂಗ್‌ನಲ್ಲಿ ವಿಘ್ನೇಶ್‌, BNYS ನಲ್ಲಿ ಪ್ರತೀಕ್ಷಾ ಫಸ್ಟ್‌ – ಟಾಪ್‌ ರ‍್ಯಾಂಕ್‌ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ

    CET Results: ಎಂಜಿನಿಯರಿಂಗ್‌ನಲ್ಲಿ ವಿಘ್ನೇಶ್‌, BNYS ನಲ್ಲಿ ಪ್ರತೀಕ್ಷಾ ಫಸ್ಟ್‌ – ಟಾಪ್‌ ರ‍್ಯಾಂಕ್‌ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ

    ಬೆಂಗಳೂರು: ಸಿಇಟಿ ಪರೀಕ್ಷೆಯ (CET Exam) ಫಲಿತಾಂಶ ಪ್ರಕಟಗೊಂಡಿದ್ದು ಎಂಜಿನಿಯರಿಂಗ್‌ (Engineering) ವಿಭಾಗದಲ್ಲಿ ಬೆಂಗಳೂರಿನ ಮಲ್ಲಸಂದ್ರದ ಶ್ರೀ ಕುಮಾರನ್ಸ್‌ ಕಾಲೇಜಿನ ವಿಘ್ನೇಶ್‌ ನಟರಾಜ್‌ ಕುಮಾರ್‌ ಪ್ರಥಮ ರ‍್ಯಾಂಕ್‌ ಪಡೆದರೆ ಬೆಂಗಳೂರಿನ ಆರ್‌ವಿ ಕಾಲೇಜಿನ ಅರುಣ್‌ ಕೃಷ್ಣಮೂರ್ತಿ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ.

    ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್ ಫಲಿತಾಂಶ ಪ್ರಕಟ ಮಾಡಿದರು. ಈ ವೇಳೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಉಪಸ್ಥಿತರಿದ್ದರು.

    ಒಟ್ಟಾರೆ 2,61,610 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು ಈ ಪೈಕಿ 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಪರೀಕ್ಷೆ ಬರೆದವರ ಪೈಕಿ ಎಂಜಿನಿಯರಿಂಗ್ ಕೋರ್ಸ್ 203381 ವಿದ್ಯಾರ್ಥಿಗಳು ರ‍್ಯಾಂಕ್‌ ಪಡೆದಿದ್ದಾರೆ. ಕೃಷಿ ವಿಜ್ಞಾನ ಕೋರ್ಸ್ 164187 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ನೀಡಲಾಗಿದೆ. ಪಶುಸಂಗೋಪನೆ ಕೋರ್ಸ್ 1,66,756 ರ‍್ಯಾಂಕ್‌, ಯೋಗ, ನ್ಯಾಚುರೋಪತಿ ಕೋರ್ಸ್ 1,66,746 ರ‍್ಯಾಂಕ್‌, ಬಿ ಫಾರ್ಮ್ ಕೋರ್ಸ್ 2,06,191 ರ‍್ಯಾಂಕ್‌, ಫಾರ್ಮ್ ಡಿ ಕೋರ್ಸ್ ನಲ್ಲಿ 2,06,340 ವಿದ್ಯಾರ್ಥಿಗಳು ರ‍್ಯಾಂಕ್‌ಪಡೆದಿದ್ದಾರೆ. ನರ್ಸಿಂಗ್ ಕೋರ್ಸ್‌ನಲ್ಲಿ 1,66,808 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ನೀಡಲಾಗಿದೆ.

    ಈ ಬಾರಿ ಗಣಿತ ಮತ್ತು ಭೌತಶಾಸ್ತ್ರ ವಿಷಯಕ್ಕೆ ಒಂದೊಂದು ಗ್ರೇಸ್ ಅಂಕ ನೀಡಲಾಗಿದೆ. ಒಂದು ವಾರದಲ್ಲಿ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿಯಲಿದ್ದು, ಶೀಘ್ರವಾಗಿ ಸೀಟು ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿ, ಸೀಟು ಹಂಚಿಕೆ ಪ್ರಕ್ರಿಯೆ ಶುರು ಮಾಡುವುದಾಗಿ ಸಚಿವರು ತಿಳಿಸಿದರು.

    ವಿದ್ಯಾರ್ಥಿಗಳು ಅರ್ಜಿ ತುಂಬಲು ಸಹಾಯವಾಗಲು ವಿಶೇಷ ಆಪ್ ತರುವುದಾಗಿ ಸಚಿವರು ತಿಳಿಸಿದ್ದಾರೆ. ಕಳೆದ ವರ್ಷದ ಶುಲ್ಕಕ್ಕೆ ಈ ಬಾರಿ 10% ಶುಲ್ಕ ಹೆಚ್ಚಳಕ್ಕೆ ಕಳೆದ ಸರ್ಕಾರ ಅನುಮತಿ ನೀಡಿದೆ.ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

    ಸಿಇಟಿ ರಾಂಕ್ ನಲ್ಲಿ ಬೆಂಗಳೂರು ಕಾಲೇಜು ವಿದ್ಯಾರ್ಥಿಗಳು ಸಿಂಹಪಾಲು ಪಡೆದಿದ್ದಾರೆ. ಎಂಜಿನಿಯರಿಂಗ್ ವಿಭಾಗದಲ್ಲಿ ಟಾಪ್ 10 ರಲ್ಲಿ 8 ರ‍್ಯಾಂಕ್‌ ಬೆಂಗಳೂರಿನ ಕಾಲೇಜಿನ ವಿದ್ಯಾರ್ಥಿಗಳು ಪಡೆದಿದ್ದಾರೆ.ಯೋಗ, ನ್ಯಾಚುರೋಪತಿಯಲ್ಲಿ 5 ರ‍್ಯಾಂಕ್‌ಬೆಂಗಳೂರು, ಬಿಎಸ್ಸಿ ಕೃಷಿಯಲ್ಲಿ 5 ರ‍್ಯಾಂಕ್‌ ಬೆಂಗಳೂರು, ಪಶು ವೈದ್ಯಕೀಯ ಕೋರ್ಸ್ ನಲ್ಲಿ ಟಾಪ್ 6 ರ‍್ಯಾಂಕ್‌, ಬಿ ಫಾರ್ಮ್ ಕೋರ್ಸ್ ನಲ್ಲಿ 7 ರ‍್ಯಾಂಕ್‌ ಹಾಗೂ ಫಾರ್ಮ್ ಡಿ ಕೋರ್ಸ್ ನಲ್ಲಿ 7 ಮತ್ತು ಬಿಎಸ್ಸಿ ನರ್ಸಿಂಗ್ ನಲ್ಲಿ 6 ರ‍್ಯಾಂಕ್‌ಗಳನ್ನು ಬೆಂಗಳೂರು ವಿದ್ಯಾರ್ಥಿಗಳು ಪಡೆದಿದ್ದಾರೆ.

    ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು.

    ಎಂಜಿನಿಯರಿಂಗ್ ಟಾಪ್ 3 ರ‍್ಯಾಂಕ್‌
    1.ವಿವಿಘ್ನೇಶ್‌ ನಟರಾಜ್‌ ಕುಮಾರ್ (ಶ್ರೀ ಕುಮಾರನ್ಸ್‌, ಮಲ್ಲಸಂದ್ರ)
    2.ಅರ್ಜುನ್ ಕೃಷ್ಣಸ್ವಾಮಿ (ಆರ್.ವಿ ಕಾಲೇಜು, ಜಯನಗರ, ಬೆಂಗಳೂರು)
    3.ಸಮೃದ್ದ ಶೆಟ್ಟಿ (ವಿದ್ಯಾನಿಕೇತನ ಪಿಯು ಕಾಲೇಜು, ಹುಬ್ಬಳ್ಳಿ)

    ಬಿಎನ್‍ವೈಎಸ್ ಟಾಪ್ 3 ರ‍್ಯಾಂಕ್‌
    1. ಪ್ರತೀಕ್ಷಾ. ಆರ್ ( ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
    2. ಭೈರೇಶ್, ಎಸ್‍ಎಚ್ (ಎಕ್ಸ್‌ಪರ್ಟ್‌ ಕಾಲೇಜು, ಮಂಗಳೂರು)
    3. ಶ್ರೀಜಾನ್. ಎಂ.ಎಚ್.( ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

    ಬಿಎಸ್‍ಸಿ ಕೃಷಿ ಟಾಪ್ 3 ರ‍್ಯಾಂಕ್‌
    1. ಭೈರೇಶ್. ಎಸ್‍ಎಚ್(ಎಕ್ಸ್‌ಪರ್ಟ್‌ ಕಾಲೇಜು, ಮಂಗಳೂರು)
    2. ಅನುರಾಗ್ ರಂಜನ್( ಪ್ರಮಾಣ ಕಾಲೇಜು, ರಾಯಚೂರು)
    3. ಕಾರ್ತಿಕ್ ಮನೋಹರ್(ಲೇಡಿ ಅನುಸೂಯ ಅಕಾಡೆಮಿ, ರಾಜಸ್ಥಾನ)

     

    ಬಿವಿಎಸ್‍ಸಿ ಪಶು ವಿಜ್ಞಾನ ಟಾಪ್ 3 ರ‍್ಯಾಂಕ್‌
    1. ಮಾಳವಿಕ ಕಪೂರ್ (ಮಹೇಶ್ ಪಿಯು ಕಾಲೇಜ್, ಚಾಮರಾಜಪೇಟೆ, ಬೆಂಗಳೂರು)
    2. ಪ್ರತೀಕ್ಷಾ( ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
    3. ಚಂದನ್ ಗೌಡ(ಮಹೇಶ್ ಪಿಯು ಕಾಲೇಜ್, ಚಾಮರಾಜಪೇಟೆ, ಬೆಂಗಳೂರು)

    ಬಿ ಫಾರ್ಮಾ ಟಾಪ್ 3 ರ‍್ಯಾಂಕ್‌
    1. ಪ್ರತೀಕ್ಷಾ (ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
    2. ಮಾಳವಿಕ ಕಪೂರ್ (ಮಹೇಶ್‌ ಪಿಯು ಕಾಲೇಜ್‌, ಚಾಮರಾಜಪೇಟೆ, ಬೆಂಗಳೂರು)
    3. ಮಾಧವ ಸೂರ್ಯ( ನಾರಾಯಣ ಇ ಟೆಕ್ನೋ ಸ್ಕೂಲ್‌, ಮಾರತ್‌ಹಳ್ಳಿ, ಬೆಂಗಳೂರು)

    ಬಿಎಸ್‍ಸಿ ನರ್ಸಿಂಗ್‌ ಟಾಪ್ 3 ರ‍್ಯಾಂಕ್‌
    1.ಮಾಳವಿಕ ಕಪೂರ್ (ಮಹೇಶ್‌ ಪಿಯು ಕಾಲೇಜ್‌, ಚಾಮರಾಜಪೇಟೆ, ಬೆಂಗಳೂರು)
    2. ಪ್ರತೀಕ್ಷಾ (ಶ್ರೀ ಕುಮಾರನ್ಸ್‌, ಪದ್ಮನಾಭನಗರ, ಬೆಂಗಳೂರು)
    3.ಚಂದನ್ ಗೌಡ. (ಮಹೇಶ್ ಪಿಯು ಕಾಲೇಜ್, ಚಾಮರಾಜಪೇಟೆ, ಬೆಂಗಳೂರು)

     

     

  • ಸಿಇಟಿ: 30,000 ಮಂದಿಯ ಆರ್‌ಡಿ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ, ಇಂದೇ ಸರಿ ಮಾಡಿಕೊಳ್ಳಿ

    ಸಿಇಟಿ: 30,000 ಮಂದಿಯ ಆರ್‌ಡಿ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ, ಇಂದೇ ಸರಿ ಮಾಡಿಕೊಳ್ಳಿ

    ಆರ್ ಡಿ ಸಂಖ್ಯೆ ಸರಿಪಡಿಸದಿದ್ದರೆ ಸಾಮಾನ್ಯ ಕೋಟಾದಲ್ಲಿ ಸೀಟು ಹಂಚಿಕೆ

    ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ (Professional Courses) ಪ್ರವೇಶಾತಿ ಬಯಸಿ ಸಿಇಟಿ (CET) ಬರೆದಿರುವ ಅಭ್ಯರ್ಥಿಗಳು (Candidate) ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್.ಡಿ ಸಂಖ್ಯೆಯನ್ನು (RD Number) ಸರಿಪಡಿಸಿಕೊಳ್ಳದಿದ್ದರೆ ಮೀಸಲಾತಿ ಸೌಲಭ್ಯಗಳು ರದ್ದಾಗಿ, ಜನರಲ್ ಮೆರಿಟ್ ಕೋಟಾದಡಿ ಬರಲಿದ್ದಾರೆ. ಆದ್ದರಿಂದ ಕೂಡಲೇ ಕಂದಾಯ ಇಲಾಖೆಯ ಆರ್.ಡಿ ಸಂಖ್ಯೆ ಜತೆ ತಾಳೆಯಾಗುವಂತೆ ಜೂನ್ 12ರ ಬೆಳಿಗ್ಗೆ 11 ಗಂಟೆಯ ವೇಳೆಗೆ ಸೂಕ್ತ ತಿದ್ದುಪಡಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಮ್ಮೆ ಹೇಳಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಶುಕ್ರವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

    ಸಿಇಟಿ ಬರೆದಿರುವ 2.6 ಲಕ್ಷ ಅಭ್ಯರ್ಥಿಗಳ ಪೈಕಿ 80 ಸಾವಿರಕ್ಕೂ ಹೆಚ್ಚು ಮಂದಿ ಆರ್.ಡಿ ಸಂಖ್ಯೆಯನ್ನು ತಪ್ಪಾಗಿ ಅರ್ಜಿಯಲ್ಲಿ ನಮೂದಿಸಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಅದರ ತಿದ್ದುಪಡಿಗೆ ಜೂನ್ 7ರಿಂದ 12ರವರೆಗೆ ಕೊನೆಯ ಅವಕಾಶ ನೀಡಿದೆ. ಆದರೂ ಇನ್ನೂ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಅರ್ಜಿಗಳಲ್ಲಿನ ದೋಷಗಳು ಹಾಗೆಯೇ ಉಳಿದುಕೊಂಡಿವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದಕ್ಕೆ ಶಾಲೆಗೆ ಬರಲು ಮಕ್ಕಳು ಹಿಂದೇಟು – ಶಾಲೆ ನೆಲಸಮ

    ಇದರ ಜತೆಗೆ ಕೆಲವರು ಆದಾಯ ಪ್ರಮಾಣ ಪತ್ರದ (Income Certificate) ಬದಲು ಇಡಬ್ಲ್ಯುಎಸ್ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಸಿಇಟಿ ನಿಯಮಗಳ ಪ್ರಕಾರ ಇದಕ್ಕೆ ಮನ್ನಣೆ ಇಲ್ಲ. ಆದ್ದರಿಂದ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್‍ನಲ್ಲಿ ಜೂನ್ 12ರ ನಿಗದಿತ ಕಾಲಮಿತಿಯೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಗಳಿಗೆ ವಿದ್ಯಾರ್ಥಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

    ಆರ್‌ಡಿ ಸಂಖ್ಯೆಗಳು ತಾಳೆಯಾಗದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಈಗಾಗಲೇ ಈ ಸಂಖ್ಯೆಗಳನ್ನು ಕಂದಾಯ ಇಲಾಖೆಯ ಆರ್‌ಡಿ ಸಂಖ್ಯೆ ಜತೆ ನಮೂದಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಿದ್ದುಪಡಿಗೆ ನೀಡಿರುವ ಕೊನೆಯ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

  • ಪ್ರಮಾಣವಚನ ಹಿನ್ನಲೆ ಟ್ರಾಫಿಕ್‌ ಜಾಮ್‌ ಸಾಧ್ಯತೆ; ಸಿಇಟಿ ಪರೀಕ್ಷೆ ಕೇಂದ್ರಗಳಿಗೆ ಬೇಗನೇ ಹೋಗಿ – ವಿದ್ಯಾರ್ಥಿಗಳಲ್ಲಿ ಡಿಕೆಶಿ ಮನವಿ

    ಪ್ರಮಾಣವಚನ ಹಿನ್ನಲೆ ಟ್ರಾಫಿಕ್‌ ಜಾಮ್‌ ಸಾಧ್ಯತೆ; ಸಿಇಟಿ ಪರೀಕ್ಷೆ ಕೇಂದ್ರಗಳಿಗೆ ಬೇಗನೇ ಹೋಗಿ – ವಿದ್ಯಾರ್ಥಿಗಳಲ್ಲಿ ಡಿಕೆಶಿ ಮನವಿ

    ನವದೆಹಲಿ/ಬೆಂಗಳೂರು: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದ ದಿನವೇ CET ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ. ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಇರುವ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಂಚಾರದ ತೊಂದರೆಯಾಗುವ ಸಾಧ್ಯತೆ ಇದೆ.

    ಪ್ರಮಾಣವಚನ ಹಿನ್ನಲೆಯಲ್ಲಿ ಕಂಠೀರವ ಕ್ರೀಡಾಂಗಣದ ಸುತ್ತುಮುತ್ತ ಬರುವ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರಿಂದ ಸೂಕ್ತ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳು ಬರುತ್ತಿರುವ ಹಿನ್ನಲೆ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗಿದೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್‌ ಬ್ಯಾನ್‌ ಮಾಡಿದ RBI

    ಕ್ವೀನ್ಸ್ ರಸ್ತೆ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದ ಕಡೆ ಹೋಗುವ ಎಲ್ಲಾ ಮಾದರಿಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಪರ್ಯಾಯ ಮಾರ್ಗ ಲ್ಯಾವೇಲ್ಲಿ ರೋಡ್ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

    ಬೆಂಗಳೂರಿನಲ್ಲಿ ಟ್ರಾಫಿಕ್ ಆಗುವ ಸಾಧ್ಯತೆ ಇರುವ ಕಾರಣ ವಿದ್ಯಾರ್ಥಿಗಳು ಬೆಳಗ್ಗೆ 8.30 ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ಎಲ್ಲಾ ಕೇಂದ್ರಗಳಿಗೂ 8.30 ಕ್ಕೆ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ. ಇದನ್ನೂ ಓದಿ: ಸಿಇಟಿ ಪರೀಕ್ಷೆ ದಿನವೇ ಪ್ರಮಾಣವಚನ – ಮೋದಿ ರ‍್ಯಾಲಿ ಇರೋವಾಗ ಮಾತ್ರ ನಿಮ್ಗೆ ವಿದ್ಯಾರ್ಥಿಗಳು ಕಾಣೋದ?: ಬಿಎಲ್ ಸಂತೋಷ್

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರು, ವಿದ್ಯಾರ್ಥಿಗಳು ಬೇಗನೇ ಪರೀಕ್ಷೆ ಕೇಂದ್ರಗಳಿಗೆ ತೆರಳಲು ಮನವಿ ಮಾಡಿದ್ದಾರೆ. ನಾಳೆ ಪ್ರಮಾಣವಚನ ಕಾರ್ಯಕ್ರಮ ಹಿನ್ನಲೆ ಸಮಸ್ಯೆ ಆಗಬಹುದು. ಕಂಠೀರವ ಸ್ಟೇಡಿಯಂ ಸುತ್ತಲಿನ ಪರೀಕ್ಷಾ ಕೇಂದ್ರಗಳಿಗೆ ಬೇಗನೇ ತೆರಳಲು ಮನವಿ ಮಾಡಿದ್ದಾರೆ.

  • ಸಿಇಟಿ ಪರೀಕ್ಷೆ ದಿನವೇ ಪ್ರಮಾಣವಚನ – ಮೋದಿ ರ‍್ಯಾಲಿ ಇರೋವಾಗ ಮಾತ್ರ ನಿಮ್ಗೆ ವಿದ್ಯಾರ್ಥಿಗಳು ಕಾಣೋದ?: ಬಿಎಲ್ ಸಂತೋಷ್

    ಸಿಇಟಿ ಪರೀಕ್ಷೆ ದಿನವೇ ಪ್ರಮಾಣವಚನ – ಮೋದಿ ರ‍್ಯಾಲಿ ಇರೋವಾಗ ಮಾತ್ರ ನಿಮ್ಗೆ ವಿದ್ಯಾರ್ಥಿಗಳು ಕಾಣೋದ?: ಬಿಎಲ್ ಸಂತೋಷ್

    ಬೆಂಗಳೂರು: ಶನಿವಾರ ಹಾಗೂ ಭಾನುವಾರ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ (CET Exam) ನಡೆಯಲಿದೆ. ಇದೇ ಸಂದರ್ಭದಲ್ಲಿ ಶನಿವಾರ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ಸಿಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಬೆಂಗಳೂರಿನ (Bengaluru) ವಿದ್ಯಾರ್ಥಿಗಳಿಗೆ ಟ್ರಾಫಿಕ್ ಜಾಮ್ ಆತಂಕ ಎದುರಾಗಿದೆ.

    ವಿಧಾನಸಭಾ ಚುನಾಣೆಗೂ ಮುನ್ನ ಬಿಜೆಪಿ (BJP) ಪಕ್ಷದ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೋಡ್‌ಶೋ (Road Show) ಮಾಡಿದ್ದರು. ಬೆಂಗಳೂರಿನಲ್ಲಿ ಮೋದಿ ರೋಡ್‌ಶೋ ಮಾಡಿದ್ದ ಒಂದು ದಿನ ನೀಟ್ ಪರೀಕ್ಷೆಯೂ (NEET Exam) ಇತ್ತು. ಇದಕ್ಕೆ ಕಾಂಗ್ರೆಸ್ಸಿಗರು ಮೋದಿ ರೋಡ್‌ಶೋಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದೀದ ಸಿದ್ದರಾಮಯ್ಯ ಪ್ರಮಾಣವಚನ ತೆಗೆದುಕೊಳ್ಳುವ ದಿನವೇ ಸಿಇಟಿ ಪರೀಕ್ಷೆ ಇರುವುದರಿಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯ ಅವರು, ಬೇಜವಾಬ್ದಾರಿ ಹಾಗೂ ಬೆಂಗಳೂರಿನ ಜನರ ವಿರೋಧವನ್ನು ಲೆಕ್ಕಿಸದೇ ರೋಡ್ ಶೋ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡುವ ಮೂಲಕ ಕೌಂಟರ್ ಕೊಟ್ಟಿರುವ ಸಂತೋಷ್, ಮೋದಿ ರ‍್ಯಾಲಿ ಮಾಡೋವಾಗ ಮಾತ್ರ ನಿಮಗೆ ವಿದ್ಯಾರ್ಥಿಗಳು ಕಾಣೋದಾ? ಸಿಇಟಿ ಪರೀಕ್ಷೆ ದಿನವೇ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟು ಪ್ರಮಾಣವಚನ ಕಾರ್ಯಕ್ರಮ ಮಾಡುತ್ತಿದ್ದೀರಿ. ಈಗ ನೀವು ಮಾಡುತ್ತಿರುವುದು ಸರೀನಾ ಎಂದು ಸಿದ್ದು ಹಾಗೂ ಡಿಕೆಶಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೇ 20, 21 ರಂದು ಸಿಇಟಿ ಪರೀಕ್ಷೆ – ಪ್ರಮಾಣವಚನ ಹಿನ್ನೆಲೆ ಟ್ರಾಫಿಕ್ ಆತಂಕ

    ಈ ಬಾರಿ ಸಿಇಟಿ ಪರೀಕ್ಷೆ ರಾಜ್ಯದ 592 ಕೇಂದ್ರಗಳಲ್ಲಿ ನಡೆಯಲಿದೆ. ಬೆಂಗಳೂರಿನಲ್ಲೇ 121 ಪರೀಕ್ಷಾ ಕೇಂದ್ರಗಳಿದ್ದು, ಉಳಿದ ಜಿಲ್ಲೆಗಳಲ್ಲಿ 471 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದೀಗ ಪರೀಕ್ಷೆ ನಡೆಯಲಿರುವ ಮೊದಲ ದಿನ ಶನಿವಾರದಂದೇ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳಿಗೆ ಟ್ರಾಫಿಕ್ ಜಾಮ್‌ನ ಭೀತಿ ಎದುರಾಗಿದೆ. ಇದನ್ನೂ ಓದಿ: ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

  • ಮೇ 20, 21ರಂದು ಸಿಇಟಿ ಪರೀಕ್ಷೆ

    ಮೇ 20, 21ರಂದು ಸಿಇಟಿ ಪರೀಕ್ಷೆ

    ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯು (CET) ಈ ಬಾರಿ ಮೇ 20 ಮತ್ತು 21ರಂದು ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examinations Authority) ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.

    ಸಿಇಟಿ ಅಂಗವಾಗಿ ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮೇ 22ರಂದು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: TNPL ನಲ್ಲೂ ದುಡ್ಡೋ ದುಡ್ಡು – ದುಬಾರಿ ಬೆಲೆಗೆ ಹರಾಜಾದ IPL ಚಾಂಪಿಯನ್ಸ್ ತಂಡದ ಆಟಗಾರ

    ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ಸೇರಿ ಒಟ್ಟು ಮೂರು ದಿನಗಳ ಕಾಲ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂದು ಮಧ್ಯಾಹ್ನ ಸಿಇಟಿ ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿ ಪ್ರಕಟ

    ಇಂದು ಮಧ್ಯಾಹ್ನ ಸಿಇಟಿ ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿ ಪ್ರಕಟ

    ಬೆಂಗಳೂರು: ಇಂದು ಮಧ್ಯಾಹ್ನ ಸಿಇಟಿ(CET) ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿ ಪ್ರಕಟವಾಗಲಿದೆ.

    ಹೈಕೋರ್ಟ್(High Court) ಆದೇಶದ ಮೇರೆಗೆ ಪರಿಷ್ಕೃತ ರಾಂಕಿಂಗ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಧ್ಯಾಹ್ನ 2 ಗಂಟೆಗೆ ಇಲಾಖೆ ವೆಬ್ ಸೈಟ್‌ನಲ್ಲಿ ಪ್ರಕಟಿಸಲಿದೆ. ಇದನ್ನೂ ಓದಿ: ಪಡಿತರ ಚೀಟಿ ಹೊಂದಿದ್ದ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟ ಆಹಾರ ಇಲಾಖೆ

    ಹಿಂದಿನ ವರ್ಷ ಪಿಯುಸಿ(PUC) ತೇರ್ಗಡೆಯಾಗಿದ್ದು, ಈ ಬಾರಿಯೂ ಸಿಇಟಿ ಬರೆದ 24 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳ ದ್ವಿತೀಯ ಪಿಯು ಅಂಕಗಳಲ್ಲಿ 6 ಅಂಕಗಳನ್ನು ಕಡಿತಗೊಳಿಸಿ, ಉಳಿದ ಶೇ. 50ರಷ್ಟು, ಈ ಬಾರಿಯ ಸಿಇಟಿಯ ಶೇ.50ರಷ್ಟು ಅಂಕಗಳನ್ನು ಸೇರಿಸಿ ಹೊಸ ಪರಿಷ್ಕೃತ ರ್‍ಯಾಂಕಿಂಗ್‌ ಪಟ್ಟಿ ಸಿದ್ಧಪಡಿಸಲಾಗಿದೆ.

    ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿಯಿಂದಾಗಿ ಈ ಹಿಂದೆ ಪ್ರಕಟಿಸಿದ ಪಟ್ಟಿಯಲ್ಲಿ ಒಂದಷ್ಟು ವ್ಯತ್ಯಾಸಗಳಾಗಲಿವೆ. ಫಲಿತಾಂಶವನ್ನು ಪ್ರಾಧಿಕಾರದ ವೆಬ್ ಸೈಟ್ karresults.nic.inನಲ್ಲಿ ನೋಡಬಹುದು.

    Live Tv
    [brid partner=56869869 player=32851 video=960834 autoplay=true]

  • UG-CET ಪರಿಷ್ಕೃತ ಫಲಿತಾಂಶ ಅಕ್ಟೋಬರ್ 1ಕ್ಕೆ ಪ್ರಕಟ

    UG-CET ಪರಿಷ್ಕೃತ ಫಲಿತಾಂಶ ಅಕ್ಟೋಬರ್ 1ಕ್ಕೆ ಪ್ರಕಟ

    ಬೆಂಗಳೂರು: UG-CET ಪರಿಷ್ಕೃತ ಫಲಿತಾಂಶ ಅಕ್ಟೋಬರ್ 1ಕ್ಕೆ ಪ್ರಕಟವಾಗಲಿದೆ ಎಂದು ಕೆಇಎ (KEA) ತಿಳಿಸಿದೆ.

    ಹೈಕೋರ್ಟ್ (High Court) ಆದೇಶದ ಮೇರೆಗೆ ಅಕ್ಟೋಬರ್ 1ಕ್ಕೆ ಕೆಇಎ ಪರಿಷ್ಕೃತ ಫಲಿತಾಂಶ ಪ್ರಕಟ ಮಾಡಲಿದೆ. ಈ ಹಿಂದೆ ಅಕ್ಟೋಬರ್ 3ರಂದು ಪರಿಷ್ಕೃತ ಫಲಿತಾಂಶ ಪ್ರಕಟಕ್ಕೆ ದಿನಾಂಕ ನಿಗದಿಯಾಗಿತ್ತು.

    ಈ ಮೊದಲು ಯುಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಶ್ರೇಯಾಂಕಗಳನ್ನು ನಿರ್ಧರಿಸಲು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠಕ್ಕೆ ಸರ್ಕಾರದ ಸಮಿತಿಯು ಎರಡು ಪ್ರಸ್ತಾವನೆಗಳನ್ನು ಒಳಗೊಂಡ ತನ್ನ ವರದಿಯನ್ನು ಸಲ್ಲಿಸಿತ್ತು. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ 81.90ಕ್ಕೆ ಕುಸಿತ

    EXAM

    ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಪಡೆದ ಪಿಯು ಅಂಕಗಳನ್ನು ಪ್ರಸಕ್ತ ಈ ವರ್ಷದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಿ ಹೊಸದಾಗಿ ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ಏಕಸದಸ್ಯ ಪೀಠವು ನಿರ್ದೇಶನ ನೀಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿರುವ ಮೇಲ್ಮನವಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಇದೀಗ ಹೈಕೋರ್ಟ್ ಆದೇಶದ ಮೇರೆಗೆ ಅಕ್ಟೋಬರ್ 1ಕ್ಕೆ ಕೆಇಎ ಪರಿಷ್ಕೃತ ಫಲಿತಾಂಶ ಪ್ರಕಟ ಮಾಡಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಹೊತ್ತಲ್ಲೇ ಡಿಕೆಶಿಗೆ CBI ಶಾಕ್ – ಆಸ್ತಿ ಮೌಲ್ಯಮಾಪನ

    Live Tv
    [brid partner=56869869 player=32851 video=960834 autoplay=true]

  • ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ಬೆಂಗಳೂರು: ಸಿಇಟಿ ರ್‍ಯಾಂಕ್ ರದ್ದುಪಡಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

    ಇಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಮ್ಮ ನಿವಾಸದಲ್ಲಿ ಕೆಇಎ ಅಧಿಕಾರಿಗಳು, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದರು. ಸಭೆಯಲ್ಲಿ ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಯ್ತು. ಇದನ್ನೂ ಓದಿ: ಹೈಕೋರ್ಟ್‌ನಿಂದ ಸಿಇಟಿ ರ‍್ಯಾಂಕ್‌ ರದ್ದು- ಮೇಲ್ಮನವಿ ಸಲ್ಲಿಸುತ್ತಾ ಸರ್ಕಾರ?

    ಸಭೆ ಬಳಿಕ ಮಾತನಾಡಿದ ಸಚಿವ ಅಶ್ವಥ್ ನಾರಾಯಣ, ಎಂದೂ ಆಗದ ರೀತಿ ಈ ಬಾರಿ ಸವಾಲು ನಾವು ನೋಡ್ತಿದ್ದೇವೆ. 25 ಸಾವಿರ ರಿಪೀಟರ್ಸ್ ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಹೊಸ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯ ಆಗದಂತೆ ನಾವು ನಿರ್ಧಾರ ಮಾಡಿದ್ವಿ. ಆದರೆ ಹೈಕೋರ್ಟ್ ರ್‍ಯಾಂಕ್ ರದ್ದು ಮಾಡಿದೆ. ಹೈಕೋರ್ಟ್ ಆದೇಶದ ತೀರ್ಪಿನಿಂದ 1.5 ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಲಾಗಿದೆ ಎಂದರು.  ಇದನ್ನೂ ಓದಿ: ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ – ಹಿಜಬ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯ

    ಸಮಸ್ಯೆ ಬಗೆಹರಿಸಲು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇಂದು ಅಥವಾ ನಾಳೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡು, ದ್ವಿ-ಸದಸ್ಯ ಪೀಠಕ್ಕೆ ಹೋಗುತ್ತೇವೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ. ಯಾರಿಗೂ ಅನ್ಯಾಯ ಆಗದಂತೆ ಕ್ರಮಕ್ಕೆ ಮುಂದಾಗುತ್ತೇವೆ. ಎಲ್ಲವು ಸಮಯದ ಒಳಗೆ ಮುಗಿಸುತ್ತೇವೆ. ವಿದ್ಯಾರ್ಥಿಗಳಿಗೆ ಒಳ್ಳೆಯದು ಮಾಡಲು ನಾವು ಸಿದ್ದರಿದ್ದೇವೆ. ರಿಪೀಟರ್ಸ್ ವಿದ್ಯಾರ್ಥಿಗಳ ಮೇಲೆ ನಮಗೇನು ಕೋಪ ಇಲ್ಲ. ಟೆಕ್ನಕಲ್ ವಿಷಯದಿಂದ ಹೊಸ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡಲು ಕ್ರಮ ತಗೋತೀವಿ ಅಂತ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲೀಗ ಶಿಕ್ಷಣ ತುಂಬಾ ದುಬಾರಿ!

    ದೇಶದಲ್ಲೀಗ ಶಿಕ್ಷಣ ತುಂಬಾ ದುಬಾರಿ!

    ನವದೆಹಲಿ: ದೇಶದಲ್ಲಿ ಈಗ ಶಿಕ್ಷಣ ತುಂಬಾ ದುಬಾರಿಯಾಗಿದೆ. ಬೆಳೆಯುತ್ತಿರುವ ತಾಂತ್ರಿಕತೆಗೆ ತಕ್ಕಂತೆ ವೇಗವಾಗಿ ಮುನ್ನುಗ್ಗಬೇಕೆಂಬ ಉತ್ಸಾಹದಿಂದ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನೇ ಕೊಡಿಸಲು ಪೋಷಕರು ಬಯಸುತ್ತಿದ್ದಾರೆ. ಹಾಗಾಗಿಯೇ ಖಾಸಗಿ ಶಾಲೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಶಿಕ್ಷಣವೂ ದುಬಾರಿಯಾಗಿದೆ. ಇತ್ತೀಚಿನ ಅಧ್ಯಯನ ವರದಿಗಳೂ ತಮ್ಮ ಸಂಶೋಧನೆಯ ಮೂಲಕ ಅದನ್ನು ಸಾಬೀತು ಮಾಡಿವೆ. ಆರ್ಥಿಕ ತೊಂದರೆಗಳು ಎದುರಾಗುತ್ತಿದ್ದರೂ ಶಾಲಾ-ಕಾಲೇಜುಗಳು ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದನ್ನು ತಜ್ಞರೂ ಒಪ್ಪಿಕೊಂಡಿದ್ದಾರೆ.

    ಆನ್‌ಲೈನ್ ಸಂಶೋಧನೆಯ ಪ್ರಕಾರ ಭಾರತದಲ್ಲಿ ಒಂದು ಮಗು 3 ವರ್ಷದಿಂದ 17 ವರ್ಷದ ವರೆಗೆ ಶಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಕನಿಷ್ಠ 30 ಲಕ್ಷ ರೂ. ವೆಚ್ಚ ಮಾಡಬೇಕಿದೆ ಎಂದು ಹೇಳಿದೆ. ಇದನ್ನೂಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್

    10 ವರ್ಷದ ಹಳೆಯ ಸೂತ್ರದ ಪ್ರಕಾರವೇ ಸಂಶೋಧನೆ ಮಾಡಲಾಗಿದ್ದು, ಅಂಕಿ-ಅಂಶ ನಿಖರ ಎಂದು ಹೇಳಲಾಗುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ವೆಚ್ಚವೂ ಆಗಬಹಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಸಾಂದರ್ಭಿಕ ಚಿತ್ರ

    2012 ರಿಂದ 2020ರ ನಡುವೆ ಭಾರತದಲ್ಲಿ ಶೈಕ್ಷಣಿಕ ವೆಚ್ಚವು ಶೇ.10 ರಿಂದ 12 ಪ್ರತಿಶತದಷ್ಟು ಹೆಚ್ಚಾಗಿದೆ. ಇದರಲ್ಲಿ ಕೇವಲ ಬೋಧನಾ ಶುಲ್ಕ ಮಾತ್ರವಲ್ಲದೇ ಮಕ್ಕಳಿಗೆ ಖರ್ಚಾಗುವ ಸಾರಿಗೆ ಹಾಗೂ ಪರೀಕ್ಷೆಗಳ ವೆಚ್ಚವೂ ಒಟ್ಟಾರೆ ಖರ್ಚಿನ ಮೇಲೆ ಅವಲಂಬಿತವಾಗಿರುತ್ತದೆ. ವಾರ್ಷಿಕವಾಗಿ ಒಂದು ಬಾರಿ ವ್ಯಯಿಸುವ ವೆಚ್ಚವಾಗಿದೆ ಎಂದು ಹೇಳಲಾಗಿದೆ. ಇದನ್ನೂಓದಿ: ಸಂಗೀತ ಕಾರ್ಯಕ್ರಮದಲ್ಲಿ ಬಿಯರ್ ಬಾಟಲಿ, ಕಲ್ಲು ತೂರಿ ಪೊಲೀಸರ ಮೇಲೆ ಹಲ್ಲೆ

    ಸಾಂದರ್ಭಿಕ ಚಿತ್ರ

    ಯಾವ ಮಾದರಿ ಶಿಕ್ಷಣಕ್ಕೆ ಎಷ್ಟು ಹಣ?

    • ಪ್ರಥಮ ದರ್ಜೆಯ ನಗರದ ಹೆಚ್ಚಿನ ಶಾಲೆಗಳಲ್ಲಿ 25 ಸಾವಿರದಿಂದ 75 ಸಾವಿರ ರೂ. ವರೆಗೆ ಪ್ರವೇಶ ಶುಲ್ಕ ಹೊಂದಿರುತ್ತವೆ. ಒಂದು ವೇಳೆ ಏಕ ಕಾಲದಲ್ಲಿ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸುವುದಾದರೆ 10 ರಿಂದ 20 ಸಾವಿರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.
    • ಪ್ರಥಮ ಹಾಗೂ ದ್ವಿತೀಯ ದರ್ಜೆ ನಗರದ ಕೆಲವು ಶಾಲೆಗಳಲ್ಲಿ ಶಿಶುವಿಹಾರವನ್ನೂ ಪ್ರೀಸ್ಕೂಲ್ ನಲ್ಲಿ ಸೇರಿಸಲಾಗಿದೆ. ಅದಕ್ಕಾಗಿ ಅವುಗಳಿಗೆ 60 ಸಾವಿರದಿಂದ 1.5 ಲಕ್ಷದ ವರೆಗೆ ಪ್ರವೇಶ ಶುಲ್ಕ ಇರುತ್ತದೆ. ಪೋಷಕರಿಬ್ಬರೂ ಕೆಲಸದಲ್ಲಿ ಇದ್ದರೆ ಅಂಥವರಿಗಾಗಿ ಡೇ ಕೇರ್ ಸೌಲಭ್ಯಗಳೂ ಇವೆ. ಕೆಲವು ಮಹಾನಗರಗಳಲ್ಲಿ ವೃತ್ತಿಪರ ಡೇ-ಕೇರ್ ಸೌಲಭ್ಯ ಕೇಂದ್ರಗಳು ದಿನಕ್ಕೆ 5,000 ರಿಂದ 8,500 ವರೆಗೂ ಶುಲ್ಕ ಪಡೆಯುತ್ತವೆ.
    • ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ 1.25 ಲಕ್ಷದಿಂದ 1.75 ಲಕ್ಷ ರೂ.ವರೆಗೆ ಇದೆ. ಪೋಷಕರು ತಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕಾಗಿಯೇ 5.50 ಲಕ್ಷ ಬಜೆಟ್ ವ್ಯಯಿಸಬೇಕಿದೆ.
    • ಮಧ್ಯಮ ಶಾಲೆಗಳಲ್ಲಿ ಸರಾಸರಿ ಬೋಧನಾ ಶುಲ್ಕ 1.6 ಲಕ್ಷ ರೂ.ನಿಂದ 1.8 ರೂ. ನಡುವೆ ಇರುತ್ತದೆ. ಇದರಿಂದ ಮಧ್ಯಮ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿಯೇ 9.5 ಲಕ್ಷ ರೂ ವಿನಿಯೋಗಿಸಬೇಕಾಗುತ್ತದೆ.
    • 11ನೇ ತರಗತಿಯಿಂದ, ಅನೇಕ ಶಾಲೆಗಳು ಪೋಷಕರು ಪ್ರತ್ಯೇಕ ಮಾಸಿಕ 4,000 ದಿಂದ 7 ಸಾವಿರದವರೆಗೆ ಪುಸ್ತಕಕ್ಕಾಗಿ ಪಾವತಿ ಮಾಡಬೇಕಿರುತ್ತದೆ. ಒಟ್ಟಾರೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಅಂದಾಜು 9 ಲಕ್ಷ ರೂ. ಮೀಸಲಿಸಬೇಕು.
    • ಇದನ್ನು ಹೊರತುಪಡಿಸಿ ಜೆಇಇ ಮತ್ತು ಇತರ ಪರೀಕ್ಷೆಗಳಂತಹ ಪ್ರವೇಶ ಪರೀಕ್ಷೆಗಳಿಗೆ ಕೇವಲ ಕೋಚಿಂಗ್ ವೆಚ್ಚವೇ 30 ಸಾವಿರದಿಂದ 5 ಲಕ್ಷದವರೆಗೆ ಹಣ ವ್ಯಯಿಸಬೇಕಾಗುತ್ತದೆ ಎಂದು ಸಂಶೋಧನಾ ವರದಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಇಟಿ ಫಲಿತಾಂಶ ಪ್ರಕಟ- ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳೇ ಟಾಪರ್ಸ್‌

    ಸಿಇಟಿ ಫಲಿತಾಂಶ ಪ್ರಕಟ- ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳೇ ಟಾಪರ್ಸ್‌

    ಬೆಂಗಳೂರು: 2021-22ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

    2021-22ನೇ ಸಾಲಿನ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಗೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಇಂದು ಕೆಇಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿದರು. ಸಿಇಟಿ ಪರೀಕ್ಷೆಗೆ ಸುಮಾರು 2.16 ಲಕ್ಷ ವಿದ್ಯಾರ್ಥಿಗಳು ನೋಂದಣಿ ಆಗಿದ್ದರು. ಈ‌ ಪೈಕಿ 2.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

    ಎಂಜಿನಿಯರ್ ಗೆ – 1,71,656 ರ‍್ಯಾಂಕ್, ಕೃಷಿ ಕೋರ್ಸ್ ಗೆ 1,39,968 ರ‍್ಯಾಂಕ್, ಪಶುಸಂಗೋಪನೆ ಕೋರ್ಸ್ ಗೆ 1,42,820 ರ‍್ಯಾಂಕ್, ಯೋಗ ಮತ್ತು ನ್ಯಾಚುರೋಪತಿಗೆ 1,42,750 ರ‍್ಯಾಂಕ್ ಮತ್ತು ಬಿ ಫಾರ್ಮ್ ಗೆ 1,74,568 ರ‍್ಯಾಂಕ್ ನೀಡಲಾಗಿದೆ. ವಿಶೇಷ ಅಂದ್ರೆ 5 ಕೋರ್ಸ್‌ನ ಟಾಪ್ 9 ರ‍್ಯಾಂಕ್‌ಗಳನ್ನು ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳು ಪಡೆದಿದ್ದಾರೆ.

    ಈ ಬಾರಿ 7 ಅಂಕ ಗ್ರೇಸ್ ನೀಡಲಾಗಿದೆ. ಗಣಿತಕ್ಕೆ 5, ಭೌತಶಾಸ್ತ್ರ, ಮತ್ತು ರಸಾಯನಶಾಸ್ತ್ರಕ್ಕೆ ತಲಾ 1 ಅಂಕ ಗ್ರೇಸ್ ನೀಡಲಾಗಿದೆ. ಆಗಸ್ಟ್ 5 ರಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ‌ ಪ್ರಾರಂಭವಾಗಲಿದ್ದು, ಸಂಪೂರ್ಣ ಆನ್ ಲೈನ್ ಮೂಲಕ ಪ್ರಕ್ರಿಯೆ ನಡೆಯಲಿದೆ. ಈ ವರ್ಷ ಸುಮಾರು 1.08 ಲಕ್ಷ ಸೀಟುಗಳು ಎಂಜಿನಿಯರಿಂಗ್ ನಲ್ಲಿ ಲಭ್ಯವಿದ್ದು, 57 ಸಾವಿರಕ್ಕೂ ಹೆಚ್ಚು ಸೀಟು ಸರ್ಕಾರದ ಕೋಟಾಗೆ ಸಿಗಲಿವೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

    ಎಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಅಪೂರ್ವ ಟಂಡನ್ ಮೊದಲ ರ‍್ಯಾಂಕ್ ಪಡೆದಿದ್ದು, ಎರಡನೇ ಹಾಗೂ ಮೂರನೇ ಸ್ಥಾನವನ್ನು ಮಾರತ್‍ಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‍ನ ವಿದ್ಯಾರ್ಥಿಗಳಾದ ಸಿದ್ದಾರ್ಥ ಸಿಂಗ್ ಹಾಗೂ ಆತ್ಮಕುರಿ ವೆಂಕಟ ಮಾದ್ ಕ್ರಮವಾಗಿ ಪಡೆದಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಹೂ ಕೊಡಲು ಬಂದ ಕೈ ಕಾರ್ಯಕರ್ತೆ ವಶಕ್ಕೆ

    ಬಿಎಸ್ಟಿ ಅಗ್ರಿಕಲ್ಚರ್ ವಿಭಾಗದಲ್ಲಿ ಎಚ್‍ಎಎಲ್ ಪಬ್ಲಿಕ್ ಸ್ಕೂಲ್‍ನ ಅರ್ಜುನ್ ರವಿಶಂಕರ್‌ಗೆ ಮೊದಲ ಸ್ಥಾನ, ಬೆಂಗಳೂರಿನ ಚೈತನ್ಯ ಇ ಟೆಕ್ನೋ ಕಾಲೇಜಿನ ಸುಮೀಸ್ ಎಸ್ ಪಾಟೀಲ್ ದ್ವಿತೀಯ ಸ್ಥಾನ ಹಾಗೂ ತುಮಕೂರಿನ ವಿದ್ಯಾನಿಕೇತನ ಪಿಯು ಕಾಲೇಜಿನ ಸುದೀಪ್ ವೈ.ಎಂಗೆ ತೃತೀಯ ಸ್ಥಾನ ದೊರಕಿದೆ.

    ಯೋಗ ಮತ್ತು ನ್ಯಾಚುರೋಪತಿಯಲ್ಲಿ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸಿಯ ಹೃಷಿಕೇಶ್ ಪ್ರಥಮ ಸ್ಥಾನ ಗಳಿಸಿದ್ದು, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಕ್ರಮವಾಗಿ ಉಡುಪಿಯ ಮಾಧವ ಕೃಪ ಇಂಗ್ಲೀಷ್ ಸ್ಕೂಲ್‍ನ ವಿ. ರಾಜೇಶ್ ಹಾಗೂ ಬೆಂಗಳೂರಿನ ಚೈತನ್ಯ ಟೆಕ್ನೋದ ಕೃಷ್ಣ ಎಸ್. ಆರ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್

    ಬಿ.ವಿ.ಎಸ್‍ಸಿ (ಪಶುಸಂಗೋಪನೆ)ಯಲ್ಲಿ ಬೆಂಗಳೂರಿನ ನ್ಯಾಷಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನ ಹೃಷಿಕೇಶ್ ಮೊದಲ ರ‍್ಯಾಂಕ್ ಪಡೆದಿದ್ದು, ಚೈತನ್ಯ ಇ ಟೆಕ್ನೋ ವಿದ್ಯಾರ್ಥಿಗಳಾದ ಮನಿಶ್ ಹಾಗೂ ಶುಭ ಕೌಶಿಕ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಬಿ. ಫಾರ್ಮ್‍ನಲ್ಲಿ ನಾರಾಯಣ್ ಇ ಟೆಕ್ನೋ ಕಾಲೇಜಿನ ಶಿಶಿರ್ ಆರ್‍ಕೆ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸಿಯ ಹೃಷಿಕೇಶ್ ದ್ವಿತೀಯ ಸ್ಥಾನ ಪಡೆದಿದ್ದು, ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಅಪೂರ್ವ ಟಂಡನ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]