Tag: CET

  • ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂದಿದ್ದು ತಪ್ಪು, ಅಂತಹ ಯಾವುದೇ ಮಾರ್ಗಸೂಚಿ ಇಲ್ಲ: ಕೆಇಎ

    ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂದಿದ್ದು ತಪ್ಪು, ಅಂತಹ ಯಾವುದೇ ಮಾರ್ಗಸೂಚಿ ಇಲ್ಲ: ಕೆಇಎ

    – ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಕ್ಷಮೆಯಾಚನೆ

    ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂತ ಹೇಳಿದ್ದು ತಪ್ಪು, ಕೆಇಎ (KEA) ಅಂತಹ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದರು.

    ಜನಿವಾರ ಧರಿಸಿದ್ದಕ್ಕೆ CET ಪರೀಕ್ಷೆ ಬರೆಯಲು ಅವಕಾಶ ಕೊಡದ ಪ್ರಕರಣಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್‌ ಟಿವಿʼ (PUBLiC TV) ಜೊತೆಗೆ ಮಾತನಾಡಿದರು. ಇದನ್ನೂ ಓದಿ: ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಎಕ್ಸಾಂ ಬರೆಯೋಕೆ ಆಗುತ್ತಾ? – ಚಕ್ರವರ್ತಿ ಸೂಲಿಬೆಲೆ

    ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂತ ಹೇಳಿದ್ದು ತಪ್ಪು, ಇದನ್ನ ಕೆಇಎ ಒಪ್ಪೋದಿಲ್ಲ. ಕೆಇಎ ಇಂತಹ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ. ತಪ್ಪು ಆಗಿರೋದಕ್ಕೆ ಕೆಇಎ ವಿಷಾದ ವ್ಯಕ್ತಪಡಿಸಿಸುತ್ತದೆ. ನಾನೇ ಅದಕ್ಕೆ ಕ್ಷಮೆ ಕೇಳ್ತೀನಿ. ಮುಂದೆ ಇಂತಹ ಘಟನೆ ಆಗದಂತೆ ಕಠಿಣ ಮಾರ್ಗಸೂಚಿ (Guidelines) ಪ್ರಕಟ ಮಾಡ್ತೀವಿ ಎಂದು ಹೇಳಿದರು.

    ಯಾವುದೇ ಜಾತಿ, ಧರ್ಮದ ವಿರುದ್ಧ ನಾವು ಮಾರ್ಗಸೂಚಿ ಸಿದ್ಧ ಮಾಡೋದಿಲ್ಲ, ಈಗ ತಪ್ಪು ಆಗಿದೆ. ಇಂತಹ ತಪ್ಪು ಮುಂದೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಷಯಗವನ್ನ ಮತ್ತಷ್ಟು ದೊಡ್ಡದು ಮಾಡೋದು ಬೇಡ. ಯಾರೂ ಇಂತಹ ಕೆಲಸ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಡಿಸಿಗಳಿಗೆ ಈಗಾಗಲೇ ತನಿಖೆಗೆ ಆದೇಶ ಮಾಡಿದ್ದೇನೆ. ವರದಿ ಅನ್ವಯ ಕ್ರಮ ಖಂಡಿತವಾಗಿ ತೆಗೆದುಕೊಳ್ತೀವಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಿದ ಪ್ರಕರಣ; ಬ್ರಾಹ್ಮಣ ಸಮುದಾಯದ ಆಕ್ರೋಶದಲ್ಲಿ ತಪ್ಪಿಲ್ಲ: ಎಂ.ಸಿ ಸುಧಾಕರ್

    ಬೀದರ್‌ ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ಕೊಡ್ತೀವಿ:
    ಬೀದರ್‌ನಲ್ಲಿ ಗಣಿತ ಪರೀಕ್ಷೆ ಸಂದರ್ಭದಲ್ಲಿ ಘಟನೆ ನಡೆದಿದೆ. ಗಣಿತ ವಿಷಯ ಬರೆಯದೇ ಹೋದ್ರೂ ಎಂಜಿನಿಯರ್ ರ‍್ಯಾಂಕ್ ಕೊಡಲು ನಿಯಮ ಇದೆ. ಅದರಂತೆ ವಿದ್ಯಾರ್ಥಿಗೆ ನ್ಯಾಯ ಕೊಡಿಸ್ತೀವಿ. ನಮ್ಮಿಂದ ಆಗಿರೋ ತಪ್ಪು ಇದು. ಹೀಗಾಗಿ ಬೀದರ್ ವಿದ್ಯಾರ್ಥಿಗೆ ರ‍್ಯಾಂಕ್ ಕೊಡ್ತೀವಿ. ಡಿಸಿಯಿಂದ ವರದಿ ತೆಗೆದುಕೊಂಡು ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಿ ಆ ವಿದ್ಯಾರ್ಥಿಗೆ ನ್ಯಾಯ ಕೊಡ್ತೀವಿ. ಇಂತಹ ತಪ್ಪು ಮುಂದೆ ಆಗದಂತೆ ನೋಡಿಕೊಳ್ತೀವಿ ʻಪಬ್ಲಿಕ್ ಟಿವಿʼ ಮೂಲಕ ತಿಳಿಸಿದರು.

    ಇನ್ನೂ ಶಿವಮೊಗ್ಗದಲ್ಲಿ ಜನಿವಾರ ತೆಗೆದು ಸಿಇಟಿ ಪರೀಕ್ಷೆ ಬರಿಬೇಕು ಅಂತಾ ಹೇಳಿರುವುದು ತಪ್ಪು. ಘಟನೆ ಕುರಿತು ಶಿವಮೊಗ್ಗ, ಬೀದರ್ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕಠಿಣ ಮಾರ್ಗಸೂಚಿಗಳನ್ನ ತರುತ್ತೇವೆ, ಸ್ಪಷ್ಟನೆ ಇರುವ ಮಾರ್ಗಸೂಚಿಗಳನ್ನ ತರುತ್ತೇವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದೆ ಇರೋ ರೀತಿ ತರಬೇತಿ ನೀಡುತ್ತೇವೆ ಎಂದು ಹೇಳಿದರು.  ಇದನ್ನೂ ಓದಿ: ಹಿಂದೂಗಳ ಮೇಲಿನ ದಾಳಿಯಂತೆ ಪ್ರತಿಬಿಂಬಿಸುವ ಪ್ರಯತ್ನ – ಬಾಂಗ್ಲಾದೇಶಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು

  • ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ರೂಲ್ಸ್ – ಇನ್ಮುಂದೆ ಒಂದು ಪ್ರಶ್ನೆಗೆ 5 ಆಯ್ಕೆ

    ಕೆಇಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ರೂಲ್ಸ್ – ಇನ್ಮುಂದೆ ಒಂದು ಪ್ರಶ್ನೆಗೆ 5 ಆಯ್ಕೆ

    – ಸಿಇಟಿ ಎಕ್ಸಾಂನಲ್ಲಿ ಯಾವುದೇ ಬದಲಾವಣೆ ಇಲ್ಲ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನುಮುಂದೆ ಹೊಸ ರೂಲ್ಸ್ ಜಾರಿ ಮಾಡುವುದಾಗಿ ಕೆಇಎ ತಿಳಿಸಿದೆ.

    ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆಯ ಉತ್ತರಕ್ಕೆ 5 ಆಯ್ಕೆಯನ್ನು ಕೆಇಎ ಕೊಡಲಿದೆ. ಇನ್ನುಮುಂದೆ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಯುಜಿಸಿಇಟಿ-2025 ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ – ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ

    ಸಿಇಟಿ ಪರೀಕ್ಷೆಯಲ್ಲಿ ಎಂದಿನಂತೆ ಒಂದು ಪ್ರಶ್ನೆಯ ಉತ್ತರಕ್ಕೆ 4 ಆಯ್ಕೆ ಮುಂದುವರಿಯಲಿದೆ. ಸಿಇಟಿ ಎಕ್ಸಾಂನಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ 5 ಉತ್ತರ ಆಯ್ಕೆಗಳು ಇರಲಿವೆ ಎಂದು ಕೆಇಎ ತಿಳಿಸಿದೆ. ಇದನ್ನೂ ಓದಿ: ಪಾಕ್‌ನ ಬಲೂಚಿಸ್ತಾನದಲ್ಲಿ IED ಸ್ಫೋಟ – 5 ಮಂದಿ ಸಾವು

  • ಸಿಇಟಿ, ನೀಟ್ 2ನೇ ಸುತ್ತಿನ ಸೀಟು ಹಂಚಿಕೆಗೆ ತಯಾರಿ ಆರಂಭ- ಕೆಇಎ

    ಸಿಇಟಿ, ನೀಟ್ 2ನೇ ಸುತ್ತಿನ ಸೀಟು ಹಂಚಿಕೆಗೆ ತಯಾರಿ ಆರಂಭ- ಕೆಇಎ

    ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು ಹಾಗೂ ಕ್ರಮಾಂಕ ಬದಲಿಸಿಕೊಳ್ಳಲು ಇದುವರೆಗೂ ನೀಡಿದ್ದ ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಶುಕ್ರವಾರ ಕೊನೆಗೊಳಿಸಿದೆ.ಇದನ್ನೂ ಓದಿ: ನಾಗಮಂಗಲ ಗಲಭೆ ಬೆನ್ನಲ್ಲೇ ಗುಪ್ತಚರ ವಿಭಾಗದ ಎಡಿಜಿಪಿ ಶರತ್‌ ಚಂದ್ರ ಎತ್ತಂಗಡಿ

     ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ (H.Prasanna) ಮಾತನಾಡಿ, ಈ ಸಲುವಾಗಿ ತೆರೆದಿದ್ದ ಕೆಇಎ (KEA) ಪೋರ್ಟಲ್ ಅನ್ನು ಸ್ಥಗಿತಗೊಳಿಸಿದ್ದು, ಯಾವ ಬದಲಾವಣೆಗೂ ಅವಕಾಶ ಇರುವುದಿಲ್ಲ. ಈ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಪೂರ್ವ ತಯಾರಿ ಆರಂಭಿಸಿದಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ- ಹಿಂದೂ ಯುವಕರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಅಶೋಕ್ ಕಿಡಿ

  • ಸಿಇಟಿ, ನೀಟ್ ಆಯ್ಕೆ ಬದಲಾವಣೆಗೆ ಮತ್ತಷ್ಟು ದಿನ ಅವಕಾಶ- ಕೆಇಎ

    ಸಿಇಟಿ, ನೀಟ್ ಆಯ್ಕೆ ಬದಲಾವಣೆಗೆ ಮತ್ತಷ್ಟು ದಿನ ಅವಕಾಶ- ಕೆಇಎ

    ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು, ಕ್ರಮಾಂಕ ಬದಲಿಸಿಕೊಳ್ಳಲು ಮತ್ತಷ್ಟು ದಿನಗಳ ಅವಕಾಶವಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಮುಂದಿನ ಆದೇಶದವರೆಗೂ ಅವಕಾಶ ನೀಡಿದೆ.ಇದನ್ನೂ ಓದಿ: ಮೋದಿ ರ‍್ಯಾಲಿ ವೇಳೆ ಸ್ಫೋಟ ಪ್ರಕರಣ – ನಾಲ್ವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಬದಲಿಸಿದ ಪಾಟ್ನಾ ಹೈಕೋರ್ಟ್

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಮಾತನಾಡಿ, ಈ ಸಲುವಾಗಿ ಕೆಇಎ (KEA) ಪೋರ್ಟಲ್ ತೆರೆದಿರುತ್ತದೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಕುಳಿತು, ಆಯ್ಕೆಗಳನ್ನು ಬದಲಿಸಿಕೊಳ್ಳುವ ಅಥವಾ ತೆಗೆದು ಹಾಕುವ ಕೆಲಸವನ್ನು ಮಾಡಿಕೊಳ್ಳಬಹುದು. ಎಚ್ಚರಿಕೆಯಿಂದಲೇ ಈ ಕೆಲಸ ಮಾಡಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ವಿಶ್ವದ ಎಲ್ಲ ಸಾಧನಗಳಲ್ಲಿ ಭಾರತ ನಿರ್ಮಿತ ಚಿಪ್ ಇರಬೇಕೆನ್ನುವುದು ನಮ್ಮ ಕನಸು: ಮೋದಿ

  • ಸಿಇಟಿ, ನೀಟ್ – ಸೆ.8ರಿಂದ 2ನೇ ಸುತ್ತಿನ ಸೀಟು‌ ಹಂಚಿಕೆ ಆರಂಭ: KEA

    ಸಿಇಟಿ, ನೀಟ್ – ಸೆ.8ರಿಂದ 2ನೇ ಸುತ್ತಿನ ಸೀಟು‌ ಹಂಚಿಕೆ ಆರಂಭ: KEA

    ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸೆ.8ರಿಂದ ಆರಂಭಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

    ಅಂದು ಬೆಳಿಗ್ಗೆ 11ಕ್ಕೆ ಹಂಚಿಕೆಗೆ ಲಭ್ಯ ಇರುವ ಸೀಟುಗಳ ವಿವರವನ್ನು ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 2ರಿಂದ ಸೆ.11ರವರೆಗೆ ‘ಆಯ್ಕೆ’ (Options) ಗಳನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ. ರಾಷ್ಟೀಯ ಮಟ್ಟದ ನೀಟ್ (NEET) ಫಲಿತಾಂಶ ನೋಡಿಕೊಂಡು ಎರಡನೇ ಸುತ್ತಿನ ಫಲಿತಾಂಶ ದಿನಾಂಕವನ್ನು‌ ನಂತರ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ನೀಟ್‌ಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳಿಗೆ ಯಾವುದೇ ಛಾಯ್ಸ್‌ಗಳನ್ನ ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಈ ಹಂತದಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದರೆ ಅಂತಹವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಇಷ್ಟ ಇರುವ ಕಾಲೇಜುಗಳನ್ನು ಮಾತ್ರ ದಾಖಲಿಸಬೇಕು‌ ಎಂದು ಅವರು ಸಲಹೆ ನೀಡಿದ್ದಾರೆ.

    ಯುಜಿ ಸಿಇಟಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು‌ ಹಂಚಿಕೆಯ ಫಲಿತಾಂಶದ ನಂತರ ಅಭ್ಯರ್ಥಿಗಳು ತಮಗೆ ಇಷ್ಟ ಇರುವ ಯಾವುದಾದರೊಂದು‌ ಛಾಯ್ಸ್ ಆಯ್ಕೆ‌ ಮಾಡಿಕೊಳ್ಳಬಹುದು. ಈ ಕುರಿತು ಸದ್ಯದಲ್ಲೇ ವಿವರಗಳನ್ನು ನೀಡಲಾಗುವುದು ಎಂದು‌ ತಿಳಿಸಿದ್ದಾರೆ.

    ಮೂಲ ದಾಖಲೆ ಸಲ್ಲಿಕೆ
    ಯುಜಿ ನೀಟ್ ನ ಮೊದಲ ಸುತ್ತಿನಲ್ಲಿ ಖಾಸಗಿ‌ ಕಾಲೇಜುಗಳಲ್ಲಿ ಸರ್ಕಾರಿ‌ ಕೋಟಾದ ವೈದ್ಯಕೀಯ ಸೀಟು ಪಡೆದಿರುವ ಅಥವಾ ಖಾಸಗಿ ಕೋಟಾದ ಸೀಟುಗಳನ್ನು ಖಾಸಗಿ ಕಾಲೇಜುಗಳಲ್ಲಿ ಪಡೆದವರು ಮೂಲ ದಾಖಲೆಗಳನ್ನು ಸೆ.9ರಿಂದ 12ರವರೆಗೆ ಕೆಇಎಗೆ ಸಲ್ಲಿಸಬೇಕು ಎಂದು ಅವರು ಕೋರಿದ್ದಾರೆ. ಛಾಯ್ಸ್-2 ಆಯ್ಕೆ ಮಾಡಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕೂಡ ಈ ದಿನಾಂಕಗಳಂದು ಮೂಲ ದಾಖಲೆ ಸಲ್ಲಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

  • ಸಿಇಟಿ-ನೀಟ್ ಚಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ – ಕೆಇಎ

    ಸಿಇಟಿ-ನೀಟ್ ಚಾಯ್ಸ್ ದಾಖಲು ಸೆ.4ರ ಮಧ್ಯಾಹ್ನ 12ಗಂಟೆಗೆ ಕೊನೆ – ಕೆಇಎ

    ಬೆಂಗಳೂರು : ಯುಜಿಸಿಇಟಿ- ನೀಟ್ (UGCET-NEET) ಕೋರ್ಸ್ ಗಳಲ್ಲಿ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದೆ. ಸುಮಾರು 15 ಸಾವಿರ ಅಭ್ಯರ್ಥಿಗಳು ಯಾವ ಚಾಯ್ಸ್ ಗಳನ್ನು ದಾಖಲು ಮಾಡಲಿಲ್ಲ. ಈ ಕಾರಣ ಅವರಿಗೆ ಅನುಕೂಲ ಆಗಲಿಯೆಂದು ಚಾಯ್ಸ್ ದಾಖಲು ದಿನಾಂಕವನ್ನು ಸೆ.4ರ ಮಧ್ಯಾಹ್ನ 12ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

    ಚಾಯ್ಸ್ ದಾಖಲಿಗೆ ಸೆ.3ರ ರಾತ್ರಿ 12ಗಂಟೆವರೆಗೂ ಅವಕಾಶ ಇತ್ತು. ಅದನ್ನು ವಿಸ್ತರಿಸಲಾಗಿದೆ. ಹಾಗೆಯೇ ಶುಲ್ಕ ಪಾವತಿಗೆ ನಾಳೆ ಸಂಜೆ 4 ಗಂಟೆವರೆಗೆ ಅವಕಾಶ ಇರಲಿದೆ. ನಿಗದಿತ ಅವಧಿಯೊಳಗೆ ಚಾಯ್ಸ್ ದಾಖಲು ಮಾಡಿಕೊಳ್ಳದಿದ್ದರೆ ಅಂತಹ ಅಭ್ಯರ್ಥಿಗಳ ಸೀಟು ರದ್ದಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ಕಾರ್ಪೊರೇಷನ್ ಸಭೆಯಲ್ಲಿ ಡಿಕೆ ಶಿವಕುಮಾರ್ ಭಾಗಿ

    ಅಭ್ಯರ್ಥಿಗಳು ಕೊನೆ ದಿನಾಂಕದವರೆಗೂ ಕಾಯದೇ ಚಾಯ್ಸ್ ದಾಖಲು ಮಾಡಿ, ನಂತರದ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಶುಲ್ಕ ಪಾವತಿ ನಂತರ ಆದೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಆಯುಕ್ತ ಅಮಾನತಿನಿಂದ ಮುಡಾ ನಿರ್ಣಯ ತಪ್ಪೆಂದು ಸಾಬೀತು; ಈಗಲಾದ್ರೂ ಸಿಎಂ ರಾಜೀನಾಮೆ ಕೊಡಲಿ: ಎನ್.ರವಿಕುಮಾರ್

    ಇವತ್ತಿನವರೆಗೂ 92 ಸಾವಿರ ಮಂದಿ ತಮ್ಮ ಚಾಯ್ಸ್ ದಾಖಲು ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್ – ಷರತ್ತುಗಳು ಅನ್ವಯ

  • ಸಿಇಟಿ, ನೀಟ್ ನೈಜ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ: ಕೆಇಎ

    ಸಿಇಟಿ, ನೀಟ್ ನೈಜ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ: ಕೆಇಎ

    ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ನೈಜ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುರುವಾರ ರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

    ಫಲಿತಾಂಶ ಕುರಿತು ನಿರ್ದಿಷ್ಟವಾದ ಆಕ್ಷೇಪಣೆಗಳಿದ್ದಲ್ಲಿ ಮಾತ್ರ, ಅಂದರೆ ಆಪ್ಷನ್ ದಾಖಲಿಸಿದ್ದರೂ ಸೀಟು ಹಂಚಿಕೆಯಾಗದಿರುವ ಇತ್ಯಾದಿ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆ.30ರ ಮಧ್ಯಾಹ್ನ 12 ಗಂಟೆ ಒಳಗೆ ಇ-ಮೇಲ್ (keaauthority-ka@nic.in) ಕಳುಹಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್‌ ಲೇವಡಿ

    ಆಕ್ಷೇಪಣೆಗಳನ್ನು ಪರಿಶೀಲಿಸಿ, ನೈಜವಾಗಿದ್ದರೆ ಮಾತ್ರ ಪರಿಗಣಿಸಲಾಗುತ್ತದೆ. ಬಳಿಕ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ವಿವಿಧ ನಾಲ್ಕು ಚಾಯ್ಸ್‌ಗಳನ್ನು ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

    ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್-24) ಗೆ ಅರ್ಜಿ ಸಲ್ಲಿಸಲು ಸೆ.2 ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಸೆ.3 ಕೊನೆ ದಿನ ಎಂದು ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ವಕ್ಫ್ ಬೋರ್ಡ್ ವಿರೋಧ – ಖಂಡನಾ ನಿರ್ಣಯ ಅಂಗೀಕರಿಸುವಂತೆ ಸಿಎಂಗೆ ಮನವಿ

    ಜುಲೈ ತಿಂಗಳ ಮರು ಪರೀಕ್ಷೆಯಲ್ಲಿ ಅರ್ಹತೆ ಪಡೆದ ಡಿಪ್ಲೊಮಾ ಅಭ್ಯರ್ಥಿಗಳು, ಡಿಸಿಇಟಿ-24ಕ್ಕೆ ಹಾಜರಾಗದೇ ಇದ್ದಲ್ಲಿ 2ನೇ ಸುತ್ತಿನ ನಂತರ ಉಳಿದಿರುವ ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಸೀಟುಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಪ್ರಸನ್ನ ತಿಳಿಸಿದ್ದಾರೆ. ಮಾರ್ಗಸೂಚಿಗಳನ್ನು ಸದ್ಯದಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ವಿವರಗಳಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

  • ಸೆಪ್ಟೆಂಬರ್ 1ಕ್ಕೆ ಸಿಇಟಿ, ನೀಟ್ ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎ

    ಸೆಪ್ಟೆಂಬರ್ 1ಕ್ಕೆ ಸಿಇಟಿ, ನೀಟ್ ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಕೆಇಎ

    ಬೆಂಗಳೂರು: ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸುಗಳ ಪ್ರವೇಶಕ್ಕೆ ಆಪ್ಷನ್ (ಆಯ್ಕೆ/ಇಚ್ಛೆ) ಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ ರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಪೋರ್ಟಲ್ ತೆರೆದಿದೆ.

    ಆಗಸ್ಟ್ 22ರ ಬೆಳಿಗ್ಗೆ 10ರವರೆಗೆ ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಕಾಲೇಜು ಮತ್ತು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸಂಬಂಧ ಇದೇ ಮೊದಲ ಬಾರಿಗೆ‌ ಅಭ್ಯರ್ಥಿಗಳ ನೋಂದಾಯಿತ ಮೊಬೈಲ್‌ಗೆ ವಾಟ್ಸಪ್‌ ಸಂದೇಶ ಕೂಡ ರವಾನಿಸುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ದುಷ್ಮನ್ ಕಹಾ ಹೈ ಅಂದ್ರೆ, ಕಾಂಗ್ರೆಸ್ ಪಾರ್ಟಿ ತುಂಬಾ ಹೈ: ಹಿತಶತ್ರುಗಳ ಬಗ್ಗೆ ಸಿಎಂಗೆ ಆರ್‌.ಅಶೋಕ್‌ ಎಚ್ಚರಿಕೆ

    ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಹಾಗೂ ಇತರೆ ಕೋರ್ಸುಗಳಿಗೂ ಆಪ್ಷನ್ (ಆಯ್ಕೆ)ಗಳನ್ನು ದಾಖಲಿಸಲು ಅವಕಾಶ ಇರುತ್ತದೆ ಎಂದು ಅವರು ವಿವರಿಸಿದ್ದಾರೆ. ಆಗಸ್ಟ್ 25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ (ಯುಜಿ ಸಿಇಟಿ/ನೀಟ್) ಪ್ರಕಟಿಸಲಾಗುತ್ತದೆ. ನಂತರ ಆಗಸ್ಟ್ 27ರ ಬೆಳಗ್ಗೆ 11ರವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆಪ್ಟೆಂಬರ್ 1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು.

    ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ/ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಹಾಗೆಯೇ ಕಾಲೇಜು ಶುಲ್ಕದ ಮಾಹಿತಿ ಕೂಡ ಇದ್ದು, ಅದನ್ನೂ ಗಮನಿಸಿಯೇ‌ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದೂ ಪ್ರಸನ್ನ ಸಲಹೆ ನೀಡಿದ್ದಾರೆ. ಆಪ್ಷನ್‌ಗಳನ್ನು ದಾಖಲಿಸುವ ಬಗ್ಗೆ, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಂಡೇ ಮುಂದಡಿ ಇಡಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂ ಒಳಹರಿವು ಹೆಚ್ಚಳ – 4 ದಿನಗಳಲ್ಲಿ ಹರಿದು ಬಂತು 7 ಟಿಎಂಸಿ ನೀರು

  • ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ; ಉಭಯ ಸದನಗಳಲ್ಲಿ ತೀರ್ಮಾನ

    ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ; ಉಭಯ ಸದನಗಳಲ್ಲಿ ತೀರ್ಮಾನ

    – ನಿರ್ಣಯ ಮಂಡಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್: ನೀಟ್ ಪರೀಕ್ಷೆ ವಿರುದ್ಧ ನಿರ್ಣಯ ಅಂಗೀಕಾರ

    ಬೆಂಗಳೂರು: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ಯನ್ನು ರದ್ದುಪಡಿಸಿ ಹಳೆಯ ಸಾಮಾನ್ಯ ಪ್ರವೇಶ ಪರೀಕ್ಷೆ (CET) ವ್ಯವಸ್ಥೆಯನ್ನೇ ಮುಂದುವರೆಸುವ ಮಹತ್ವದ ನಿರ್ಣಯವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಿ ಅಂಗೀಕರಿಸಲಾಗಿದೆ.

    ಪ್ರತಿಪಕ್ಷಗಳ ಸದಸ್ಯರ ವಿರೋಧದ ನಡುವೆಯೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ವಿಧಾನಸಭೆಯಲ್ಲಿ ಹಾಗೂ ವಿಧಾನಪರಿಷತ್‌ನಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ನೀಟ್ ಪರೀಕ್ಷೆಯ ವಿರುದ್ಧ ನಿರ್ಣಯವನ್ನು ಮಂಡನೆ ಮಾಡಿದರು. ಪ್ರತಿಪಕ್ಷಗಳ ಸದಸ್ಯರು ಈ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರೆ ಆಡಳಿತ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದ ನಂತರ ಸದನವು ಅಂಗೀಕಾರ ನೀಡಿತು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ

    ವಿಧಾನಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನಿರ್ಣಯದ ಮೇಲೆ ಮಾತನಾಡಿ, ನೀಟ್ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣ ಅವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುತ್ತಿದೆ. ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಹೀಗಾಗಿ ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

    ನೀಟ್ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು. ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ನೀಡಬೇಕೆಂದು ಮತ್ತು ನೀಟ್ ಪರೀಕ್ಷೆಯಲ್ಲಿ ಆಗುತ್ತಿರುವ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ವ್ಯವಸ್ಥೆಯನ್ನು ರದ್ದುಪಡಿಸುವುದು. ಜೊತೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ ಅದಿನಿಯಮ 2019ರಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಎಂದು ಮನವಿ ಮಾಡಿದರು. ಸಭಾಧ್ಯಕ್ಷ ಯು.ಟಿ.ಖಾದರ್ ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ಪ್ರಕಟಿಸಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಮಸೂದೆ ಚರ್ಚೆಗೆ ಸದನ ಸಮಿತಿ ರಚನೆ: ಡಿಕೆಶಿ ಘೋಷಣೆ

    ಪರಿಷತ್‌ನಲ್ಲೂ ಅಂಗೀಕಾರ: ನೀಟ್ ಪರೀಕ್ಷೆಯನ್ನು ರದ್ದು ಮಾಡಿ ಕರ್ನಾಟಕ ಸರ್ಕಾರದ ವತಿಯಿಂದಲೇ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ಸಿಇಟಿಯನ್ನೇ ಮುಂದುವರಿಸುವ ನಿರ್ಣಯಕ್ಕೆ ವಿಧಾನಪರಿಷತ್‌ನಲ್ಲೂ ಅಂಗೀಕಾರ ಸಿಕ್ಕಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿರ್ಣಯವನ್ನು ಮಂಡಿಸಿದರು. ಪ್ರತಿಪಕ್ಷಗಳು ವಿರೋಧದ ನಡುವೆಯೂ ಸಭಾಪತಿ ಬಸವರಾಜ ಹೊರಟ್ಟಿಯವರು ನಿರ್ಣಯ ಅಂಗೀಕಾರವಾಗಿದೆ ಎಂದು ಘೋಷಣೆ ಮಾಡಿದರು.

    ಇದಕ್ಕೂ ಮುನ್ನ ನಿರ್ಣಯದ ಮೇಲೆ ಮಾತನಾಡಿದ ಶಿವಕುಮಾರ್ ಅವರು, ಇತ್ತೀಚೆಗೆ ದೇಶಾದ್ಯಂತ ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಸಾಕಷ್ಟು ಲೋಪದೋಷಗಳು ಉಂಟಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ನೀಟ್‌ನಿಂದ ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಪ್ರತಿ ವರ್ಷ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗೆ ನಡೆಯುವ ಸಿಇಟಿಯನ್ನು ಮುಂದುವರೆಸಲು ಅನುವು ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ವಿಧಾನ ಪರಿಷತ್ ‌ನಲ್ಲಿ ಮುಡಾ ಗಲಾಟೆ: 6 ವಿಧೇಯಕ, 4 ನಿರ್ಣಯಗಳು ಚರ್ಚೆ ಇಲ್ಲದೆ ಅಂಗೀಕಾರ

  • ಸಿಇಟಿ – ವಿಕಲಚೇತನರ ವೈದ್ಯಕೀಯ ತಪಾಸಣೆ ಆರಂಭ

    ಸಿಇಟಿ – ವಿಕಲಚೇತನರ ವೈದ್ಯಕೀಯ ತಪಾಸಣೆ ಆರಂಭ

    ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‍ಗಳಿಗೆ ವಿಕಲಚೇತನಾ ಕೋಟಾದಲ್ಲಿ ಮೀಸಲಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ (Medical Examination) ಇಂದಿನಿಂದ (ಸೋಮವಾರ) ಆರಂಭವಾಯಿತು.

    ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ನಡೆಯುತ್ತಿರುವ ವೈದ್ಯಕೀಯ ತಪಾಸಣೆಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಚಾಲನೆ ನೀಡಿದರು. ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯಿಂದ ಬಂದಿದ್ದ ಆರು ಜನ ಮೂಳೆ ರೋಗ ಮತ್ತು ಕಣ್ಣು, ಮೂಗು, ಕಿವಿ (ಇಎನ್‍ಟಿ) ತಜ್ಞ ವೈದ್ಯರು ಅಭ್ಯರ್ಥಿಗಳನ್ನು ತಪಾಸಣೆ ಮಾಡಿ, ದಾಖಲೆಗಳನ್ನು ಪರಿಶೀಲಿಸಿದರು. ಇದನ್ನು ಖುದ್ದು ಪ್ರಸನ್ನ ಅವರು ಮೇಲ್ವಿಚಾರಣೆ ನಡೆಸಿದರು.

    ಸಿಇಟಿಗೆ (CET) ಅರ್ಜಿ ಸಲ್ಲಿಸುವಾಗ ಒಟ್ಟು 783 ಮಂದಿ ವಿಕಲಚೇತನರ ಕೋಟಾದಲ್ಲಿ ಮೀಸಲಾತಿ ಕ್ಲೇಮ್ ಮಾಡಿದ್ದು ಅಷ್ಟೂ ಮಂದಿಗೆ ಇದೇ ತಿಂಗಳ 12ವರೆಗೆ ತಪಾಸಣೆ ನಡೆಸಲಾಗುತ್ತದೆ. ಮೊದಲ ದಿನ 250 ಮಂದಿಗೆ ಬರಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕಣ್ಣಿನ ಸಮಸ್ಯೆ ಇರುವವರ ತಪಾಸಣೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಅಲ್ಲಿಗೆ ಕೆಇಎ ಸಿಬ್ಬಂದಿಯೇ ಅಂತಹವರನ್ನು ವಾಹನದಲ್ಲಿ ಕರೆದೊಯ್ಯುವ ಕೆಲಸ ಮಾಡುತ್ತಿದೆ. ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಕಲಚೇತನರ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಿಮ ಎಂದು ಅವರು ತಿಳಿಸಿದ್ದಾರೆ.

    ವೈದ್ಯಕೀಯ ತಪಾಸಣೆಗೆ ತರಬೇಕಾದ ದಾಖಲೆಗಳೇನು?
    ಯುಜಿಸಿಇಟಿ ಅರ್ಜಿಯ ಪ್ರತಿ, ಪ್ರವೇಶ ಪತ್ರ, ಅಭ್ಯರ್ಥಿಯ ಭಾವಚಿತ್ರ ಇರುವ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರ, ಕಿವುಡುತನದ ಸಮಸ್ಯೆ ಇರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರಗಳನ್ನು ತಪಾಸಣೆ ಸಂದರ್ಭದಲ್ಲಿ ತಂದಿರಬೇಕು ಎಂದು ಅವರು ತಿಳಿಸಿದ್ದಾರೆ.