ಶಿವಮೊಗ್ಗ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಕೂರಿಸದ ಪ್ರಕರಣದಲ್ಲಿ ಸಿಇಟಿ ಪರೀಕ್ಷೆಯ (CET Exam) ಅಧಿಕಾರಿ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಏಪ್ರಿಲ್ 16 ರಂದು ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ (Brahmins Students) ಜನಿವಾರವನ್ನು ಕತ್ತರಿಸಿದ್ದಾರೆ. ಆದರೆ ಪರೀಕ್ಷಾ ವಿಚಾರದಲ್ಲಿ ಜನಿವಾರ ಕತ್ತರಿಸಬೇಕೆಂಬ ನಿಯಮವಿಲ್ಲ. ಕಾಲೇಜಿನ ಭದ್ರತಾ ಸಿಬ್ಬಂದಿ ಜನಿವಾರ ಕತ್ತರಿಸಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ನೋ ಎಂಟ್ರಿ – ಬೀದರ್ ವಿದ್ಯಾರ್ಥಿಗೆ ನ್ಯಾಯ ಕೊಡಿಸಲು ಕೆಇಎ ಸಿದ್ಧತೆ
– ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಕ್ಷಮೆಯಾಚನೆ
ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂತ ಹೇಳಿದ್ದು ತಪ್ಪು, ಕೆಇಎ (KEA) ಅಂತಹ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದರು.
ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂತ ಹೇಳಿದ್ದು ತಪ್ಪು, ಇದನ್ನ ಕೆಇಎ ಒಪ್ಪೋದಿಲ್ಲ. ಕೆಇಎ ಇಂತಹ ಯಾವುದೇ ಮಾರ್ಗಸೂಚಿ ಕೊಟ್ಟಿಲ್ಲ. ತಪ್ಪು ಆಗಿರೋದಕ್ಕೆ ಕೆಇಎ ವಿಷಾದ ವ್ಯಕ್ತಪಡಿಸಿಸುತ್ತದೆ. ನಾನೇ ಅದಕ್ಕೆ ಕ್ಷಮೆ ಕೇಳ್ತೀನಿ. ಮುಂದೆ ಇಂತಹ ಘಟನೆ ಆಗದಂತೆ ಕಠಿಣ ಮಾರ್ಗಸೂಚಿ (Guidelines) ಪ್ರಕಟ ಮಾಡ್ತೀವಿ ಎಂದು ಹೇಳಿದರು.
ಯಾವುದೇ ಜಾತಿ, ಧರ್ಮದ ವಿರುದ್ಧ ನಾವು ಮಾರ್ಗಸೂಚಿ ಸಿದ್ಧ ಮಾಡೋದಿಲ್ಲ, ಈಗ ತಪ್ಪು ಆಗಿದೆ. ಇಂತಹ ತಪ್ಪು ಮುಂದೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಷಯಗವನ್ನ ಮತ್ತಷ್ಟು ದೊಡ್ಡದು ಮಾಡೋದು ಬೇಡ. ಯಾರೂ ಇಂತಹ ಕೆಲಸ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಡಿಸಿಗಳಿಗೆ ಈಗಾಗಲೇ ತನಿಖೆಗೆ ಆದೇಶ ಮಾಡಿದ್ದೇನೆ. ವರದಿ ಅನ್ವಯ ಕ್ರಮ ಖಂಡಿತವಾಗಿ ತೆಗೆದುಕೊಳ್ತೀವಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಿದ ಪ್ರಕರಣ; ಬ್ರಾಹ್ಮಣ ಸಮುದಾಯದ ಆಕ್ರೋಶದಲ್ಲಿ ತಪ್ಪಿಲ್ಲ: ಎಂ.ಸಿ ಸುಧಾಕರ್
ಬೀದರ್ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಕೊಡ್ತೀವಿ:
ಬೀದರ್‌ನಲ್ಲಿ ಗಣಿತ ಪರೀಕ್ಷೆ ಸಂದರ್ಭದಲ್ಲಿ ಘಟನೆ ನಡೆದಿದೆ. ಗಣಿತ ವಿಷಯ ಬರೆಯದೇ ಹೋದ್ರೂ ಎಂಜಿನಿಯರ್ ರ‍್ಯಾಂಕ್ ಕೊಡಲು ನಿಯಮ ಇದೆ. ಅದರಂತೆ ವಿದ್ಯಾರ್ಥಿಗೆ ನ್ಯಾಯ ಕೊಡಿಸ್ತೀವಿ. ನಮ್ಮಿಂದ ಆಗಿರೋ ತಪ್ಪು ಇದು. ಹೀಗಾಗಿ ಬೀದರ್ ವಿದ್ಯಾರ್ಥಿಗೆ ರ‍್ಯಾಂಕ್ ಕೊಡ್ತೀವಿ. ಡಿಸಿಯಿಂದ ವರದಿ ತೆಗೆದುಕೊಂಡು ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಿ ಆ ವಿದ್ಯಾರ್ಥಿಗೆ ನ್ಯಾಯ ಕೊಡ್ತೀವಿ. ಇಂತಹ ತಪ್ಪು ಮುಂದೆ ಆಗದಂತೆ ನೋಡಿಕೊಳ್ತೀವಿ ʻಪಬ್ಲಿಕ್ ಟಿವಿʼ ಮೂಲಕ ತಿಳಿಸಿದರು.
ಇನ್ನೂ ಶಿವಮೊಗ್ಗದಲ್ಲಿ ಜನಿವಾರ ತೆಗೆದು ಸಿಇಟಿ ಪರೀಕ್ಷೆ ಬರಿಬೇಕು ಅಂತಾ ಹೇಳಿರುವುದು ತಪ್ಪು. ಘಟನೆ ಕುರಿತು ಶಿವಮೊಗ್ಗ, ಬೀದರ್ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕಠಿಣ ಮಾರ್ಗಸೂಚಿಗಳನ್ನ ತರುತ್ತೇವೆ, ಸ್ಪಷ್ಟನೆ ಇರುವ ಮಾರ್ಗಸೂಚಿಗಳನ್ನ ತರುತ್ತೇವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದೆ ಇರೋ ರೀತಿ ತರಬೇತಿ ನೀಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂಗಳ ಮೇಲಿನ ದಾಳಿಯಂತೆ ಪ್ರತಿಬಿಂಬಿಸುವ ಪ್ರಯತ್ನ – ಬಾಂಗ್ಲಾದೇಶಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು