Tag: CET Examination

  • ಸಿಇಟಿ ಪರೀಕ್ಷೆಗೂ ಹಿಜಬ್ ನಿಷೇಧ – ಕೆಇಎ

    ಸಿಇಟಿ ಪರೀಕ್ಷೆಗೂ ಹಿಜಬ್ ನಿಷೇಧ – ಕೆಇಎ

    ಬೆಂಗಳೂರು: ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆ ಬಳಿಕ ಸಿಇಟಿ ಪರೀಕ್ಷೆಗೂ ಹಿಜಬ್‌ಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿಗೆ ಅನ್ವಯವಾಗುವ ನಿಯಮಗಳೇ ಸಿಇಟಿ ಪರೀಕ್ಷೆಗೂ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಜೂನ್ 16, 17 ಹಾಗೂ 18 ರಂದು ಈ ವರ್ಷದ ಸಿಇಟಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಿಜಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಿಜಬ್ ಸೇರಿದಂತೆ ಧಾರ್ಮಿಕ ಭಾವನೆಗಳ ಉಡುಪುಗಳನ್ನು ಧರಿಸದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಮೇ ಅಂತ್ಯಕ್ಕೆ ರಾಜ್ಯದ ಜನತೆಗೆ ಗುಡ್ ನ್ಯೂಸ್?

    HIJAB

    ಏನೆಲ್ಲಾ ನಿಷೇಧ?
    ಸಿಇಟಿ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಲವು ನಿಯಮಗಳನ್ನು ಜಾರಿ ಮಾಡಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದೆ. ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಿಜಬ್ ಧರಿಸುವಂತಿಲ್ಲ. ಹಿಜಬ್ ಅಲ್ಲದೇ ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ವಸ್ತ್ರಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ. ಇದನ್ನೂ ಓದಿ: ಪರಿಷತ್ ಅಭ್ಯರ್ಥಿಗಳ ಆಸ್ತಿ ವಿವರ – ಬಹುತೇಕರು ಕೋಟಿ ಒಡೆಯರು!

    ಪರೀಕ್ಷಾ ಕೇಂದ್ರಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಾಚ್ ನಿಷೇಧ (ಕೈ ಗಡಿಯಾರ) ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಆಭರಣಗಳನ್ನು ಧರಿಸುವುದಕ್ಕೂ ನಿಷೇಧ ಹಾಕಲಾಗಿದೆ. ಮೊಬೈಲ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಿದ್ದು, ಪ್ರತಿ ಕೇಂದ್ರದಲ್ಲೂ ಕೆಇಎಯಿಂದಲೇ ಗಡಿಯಾರ ಅಳವಡಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

    ವಿದ್ಯಾರ್ಥಿಗಳಿಗೆ ಕುಡಿಯುವ ನೀರು ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲು ಕೆಇಎ ತೀರ್ಮಾನ ಮಾಡಿದೆ.

  • ಕೊರೊನಾ ಎಫೆಕ್ಟ್ – ಸಿಇಟಿ ಪರೀಕ್ಷೆ ಮುಂದೂಡಿಕೆ

    ಕೊರೊನಾ ಎಫೆಕ್ಟ್ – ಸಿಇಟಿ ಪರೀಕ್ಷೆ ಮುಂದೂಡಿಕೆ

    ಬೆಂಗಳೂರು: ದೇಶದಲ್ಲಿ ಕೊರೊನಾ ಎಫೆಕ್ಟ್ ಜಾಸ್ತಿಯಾದ ಕಾರಣ ಮುಂದಿನ ತಿಂಗಳು ನಿಗದಿಯಾಗಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ.

    ಏಪ್ರಿಲ್ 22 ರಿಂದ 24ವರೆಗೆ ಸಿಇಟಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಕೊರೊನಾ ವೈರಸ್ ದೇಶದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ದಿನೇ ದಿನೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ.

    ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಇದರಲ್ಲಿ ಸಿಇಟಿ ಪರೀಕ್ಷೆ ಮುಂದೂಡಲಾಗಿದೆ ಎಂದು ಹೇಳಿದೆ. ಜೊತೆಗೆ ಈ ಸಿಇಟಿ ಪರೀಕ್ಷೆಯ ಹೊಸ ವೇಳಾಪಟ್ಟಿಯನ್ನು ಮುಂದೆ ನಿಗದಿ ಮಾಡಲಾಗುತ್ತದೆ ಎಂದು ಕೆಇಎ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

  • ಸಿಇಟಿ ಫಲಿತಾಂಶ ಪ್ರಕಟ: ಚೈತನ್ಯ ಟೆಕ್ನೊ ಪಿಯು ಕಾಲೇಜಿಗೆ ಮೊದಲ ರ್‍ಯಾಂಕ್

    ಸಿಇಟಿ ಫಲಿತಾಂಶ ಪ್ರಕಟ: ಚೈತನ್ಯ ಟೆಕ್ನೊ ಪಿಯು ಕಾಲೇಜಿಗೆ ಮೊದಲ ರ್‍ಯಾಂಕ್

    ಬೆಂಗಳೂರು: ಏಪ್ರಿಲ್‍ನಲ್ಲಿ ನಡೆದಿದ್ದ 2019 ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಇಂದು ಪ್ರಕಟವಾಗಿದೆ.

    ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿದ್ದಾರೆ. ಬೆಂಗಳೂರಿನ ಮಾರತ್ ಹಳ್ಳಿಯ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ಎಂಜಿನಿಯರ್ ವಿದ್ಯಾರ್ಥಿ ಜಫಿನ್ ಬಿಬು ಮೊದಲ ರ್‍ಯಾಂಕ್ ಪಡೆದುಕೊಂಡಿದ್ದಾನೆ.

    ನ್ಯಾಚಿರೋಪತಿ ಮತ್ತು ಯೋಗ ವಿಭಾಗದಲ್ಲಿ ಪಿ ಮಹೇಶ್ ಆನಂದ್, ಪಶು ವೈದ್ಯಕೀಯ ವಿಭಾಗದಲ್ಲಿ ಪಿ.ಮಹೇಶ್ ಆನಂದ್, ಬಿ ಫಾರ್ಮ್ ಡಿ ಫಾರ್ಮ್ ನಲ್ಲಿ ಸಾಯಿ ಸಾಕೇತ್ ಚಕುರಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ ಎಂಜಿನಿಯರ್, ನ್ಯಾಚಿರೋಪತಿ, ಪಶು ವೈದ್ಯಕೀಯ, ಬಿ ಫಾರ್ಮ್ ನಲ್ಲಿ ಮಾರತ್‍ಹಳ್ಳಿಯ ಚೈತನ್ಯ ಟೆಕ್ನೊ ಪಿಯು ಕಾಲೇಜ್ ಮೊದಲ ರ್‍ಯಾಂಕ್ ಪಡೆದುಕೊಂಡಿದೆ.

    ಬಿಎಸ್‍ಸಿ ಕೃಷಿ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿ ಕೀರ್ತನ್ ಎಂ.ಅರುಣ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

    ಈ ಬಾರಿ 1,80,315 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಎಂಜಿನಿಯರಿಂಗ್‍ನಲ್ಲಿ 1,40,957, ನ್ಯಾಚಿರೋಪತಿ – ಯೋಗ- 1,17,947, ಬಿಎಸ್‍ಸಿ ಕೃಷಿ- 1,13,294, ಪಶು ವೈದ್ಯಕೀಯ – 1,18,045, ಬಿ ಫಾರ್ಮ್ – 1,46,546, ಡಿ ಫಾರ್ಮ್ – 1,46,759 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗಿದೆ.

    ಎಂಜಿನಿಯರ್ ಟಾಪ್ 3
    1. ಜಫಿನ್ ಬಿಜು, ಚೈತನ್ಯ ಟೆಕ್ನೋ ಬೆಂಗಳೂರು.
    2. ಚಿನ್ಮಯಿ, ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು.
    3. ಸಾಯಿ ಸಾಕೇತಿಕ ಚಕುರಿ, ಚೈತನ್ಯ ಟೆಕ್ನೊ ಬೆಂಗಳೂರು.

    ನ್ಯಾಚಿರೋಪತಿ ಮತ್ತು ಯೋಗ ಟಾಪ್ 3
    1. ಮಹೇಶ್ ಆನಂದ್, ಚೈತನ್ಯ ಟೆಕ್ನೊ ಬೆಂಗಳೂರು.
    2. ವಿ.ವಾಸುದೇವ, ಬೇಸ್ ಪಿಯು ಕಾಲೇಜ್ ಮೈಸೂರು.
    3. ಉದೀತ್ ಮೋಹನ್, ನಾರಾಯಣ ಇ ಟೆಕ್ನೊ ಬೆಂಗಳೂರು.

    ಬಿಎಸ್ ಸಿ ಕೃಷಿ ಟಾಪ್ 3
    1. ಕೀರ್ತನಾ ಎಂ, ಅರುಣ್, ನ್ಯಾಷನಲ್ ಪಬ್ಲಿಕ್ ಸ್ಕೂಲ್.
    2. ಭುವನ್, ವಿಬಿ, ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು.
    3. ಶ್ರೀಕಾಂತ್.ಎಂ.ಎಲ್, ಮಾಸ್ಟರ್ಸ್ ಪಿಯು ಕಾಲೇಜ್ ಹಾಸನ.

    ಪಶು ವೈದ್ಯಕೀಯ ಟಾಪ್ 3
    1. ಮಹೇಶ್ ಆನಂದ್, ಚೈತನ್ಯ ಟೆಕ್ನೊ ಕಾಲೇಜ್, ಬೆಂಗಳೂರು.
    2. ಉದೀತ್ ಮೋಹನ್, ನಾರಾಯಣ ಇ ಟೆಕ್ನೊ ಬೆಂಗಳೂರು.
    3. ಬಿವಿಎಸ್‍ಎನ್ ಸಾಯಿರಾಮ್, ಚೈತನ್ಯ ಟೆಕ್ನೊ, ಬೆಂಗಳೂರು.

    ಬಿ ಮತ್ತು ಡಿ ಫಾರ್ಮ್
    1. ಸಾಯಿ ಸಾಕೇತಿಕ ಚಕುರಿ, ಚೈತನ್ಯ ಟೆಕ್ನೊ ಬೆಂಗಳೂರು.
    2. ಜಫಿನ್ ಬಿಜು, ಚೈತನ್ಯ ಟೆಕ್ನೊ, ಬೆಂಗಳೂರು.
    3. ಆರ್.ಚಿನ್ಮಯಿ, ಎಕ್ಸ್ ಪರ್ಟ್ ಪಿಯು ಕಾಲೇಜ್ ಮಂಗಳೂರು.

    ಫಲಿತಾಂಶ ಲಭ್ಯವಾಗುವ ವೆಬ್ ಸೈಟ್‍ಗಳು:

    http://kea.kar.nic.in

  • ನೀಟ್ ಕಡ್ಡಾಯ ಬಳಿಕ ಮೊದಲ ಸಿಇಟಿ- ವಿದ್ಯಾರ್ಥಿಗಳೇ ಟೆನ್ಶನ್ ಬಿಟ್ಟು ಬರೀರಿ ಎಕ್ಸಾಂ

    ನೀಟ್ ಕಡ್ಡಾಯ ಬಳಿಕ ಮೊದಲ ಸಿಇಟಿ- ವಿದ್ಯಾರ್ಥಿಗಳೇ ಟೆನ್ಶನ್ ಬಿಟ್ಟು ಬರೀರಿ ಎಕ್ಸಾಂ

    ಬೆಂಗಳೂರು: ಇಂದಿನಿಂದ ರಾಜ್ಯ ಸಿಇಟಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ದೇಶಾದ್ಯಂತ ನೀಟ್ ಪರೀಕ್ಷೆ ಕಡ್ಡಾಯವಾದ ಬಳಿಕ ನಡೆಯುತ್ತಿರುವ ಪರೀಕ್ಷೆ ಇದಾಗಿದೆ. ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದೆ.

    ಮೊದಲ ದಿನವಾದ ಇಂದು ಜೀವಶಾಸ್ತ್ರ ಹಾಗೂ ಗಣಿತ ವಿಷಯಗಳ ಪರೀಕ್ಷೆ ನಡೆಯಲಿದೆ. ಇದೇ ಮೊದಲ ಬಾರಿಗೆ ಪರೀಕ್ಷಾ ಪ್ರಾಧಿಕಾರ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲು ಪ್ರಶ್ನೆ ಪತ್ರಿಕೆಯನ್ನ ಇಂಗ್ಲೀಷ್ ಜೊತೆಗೆ ಕನ್ನಡದಲ್ಲೂ ಮುದ್ರಣ ಮಾಡುತ್ತಿದೆ. ಬೆಳಗ್ಗೆ 10.30 ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದ್ದು ಎರಡು ಅವಧಿಯಲ್ಲಿ ಪರೀಕ್ಷೆಗಳು ನಡೆಯಲಿವೆ.

    ಈ ಬಾರಿ ಒಟ್ಟು 1 ಲಕ್ಷದ 85 ಸಾವಿರದ 411 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯಾದ್ಯಂತ 404 ಪರೀಕ್ಷಾ ಕೇಂದ್ರಗಳು ಇದ್ದು, ಬೆಂಗಳೂರಿನಲ್ಲಿ 82 ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷೆ ಪ್ರಾರಂಭಕ್ಕೂ 15 ನಿಮಿಷ ಮುನ್ನ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ತಡವಾಗಿ ಬಂದ ಅಭ್ಯರ್ಥಿಗಳನ್ನ ಪರೀಕ್ಷೆಗೆ ಕೂರಿಸೋದಿಲ್ಲ. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್, ವಾಚ್, ಕ್ಯಾಲ್ಯುಕಲೇಟರ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನ ನಿಷೇಧ ಮಾಡಲಾಗಿದೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಕಡೆಯಿಂದ ಆಲ್ ದಿ ಬೆಸ್ಟ್.

    ಪರೀಕ್ಷಾ ಸಮಯ:
    ಬೆಳಗ್ಗೆ- 10.30-11.50
    ಮಧ್ಯಾಹ್ನ – 2.30-3.50.
    ನಿಷೇಧ- ಮೊಬೈಲ್, ವಾಚ್, ಕ್ಯಾಲ್ಯುಕೇಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು.