Tag: central pollution control board

  • ಇಲ್ಲದ ಕಾರ್ಖಾನೆಯಿಂದ ಮಾಲಿನ್ಯ ಆರೋಪ – ಅರ್ಜಿದಾರನಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್

    ಇಲ್ಲದ ಕಾರ್ಖಾನೆಯಿಂದ ಮಾಲಿನ್ಯ ಆರೋಪ – ಅರ್ಜಿದಾರನಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್

    ನವದೆಹಲಿ: ಇಲ್ಲದೇ ಇರುವ ಕಾರ್ಖಾನೆ ವಿರುದ್ಧ ಸುಳ್ಳು ಆರೋಪ ಮಾಡಿದ್ದ ವ್ಯಕ್ತಿಯೊಬ್ಬನಿಗೆ ದೆಹಲಿಯ (Delhi) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) 25,000 ರೂ. ದಂಡ ವಿಧಿಸಿದೆ.

    ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್‍ನಲ್ಲಿರುವ ಭಾರತ್ ಬ್ರಾಸ್ ಇಂಟರ್‌ನ್ಯಾಷನಲ್ ಕಾರ್ಖಾನೆ (Bharat Brass International)‌ ಪರಿಸರಕ್ಕೆ ಹಾನಿಯಾಗುವಂತಹ ವಿಷಕಾರಿ ಪದಾರ್ಥಗಳನ್ನು ಹೊರಚೆಲ್ಲುತ್ತಿದೆ. ಇದು ಪರಿಸರ ನಿಯಮಕ್ಕೆ ವಿರುದ್ಧವಾಗಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ಅರ್ಜಿದಾರ ವಸೀಮ್ ಅಹ್ಮದ್ ಆರೋಪಿಸಿದ್ದರು. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ – ಖರ್ಗೆಗೆ ಸಮನ್ಸ್ ಕೋರ್ಟ್ ಸಮನ್ಸ್

    ಮಾರ್ಚ್‍ನಲ್ಲಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ನ್ಯಾಯಾಲಯ ಮೊರಾದಾಬಾದ್ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಮೇ 9 ರಂದು ಸಮಿತಿಯು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು.

    ವರದಿ ಸಿಕ್ಕ ಬಳಿಕ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್, ಸುಧೀರ್ ಅಗರ್‍ವಾಲ್ ಹಾಗೂ ಪರಿಸರ ತಜ್ಞ ಸದಸ್ಯ ಪ್ರೊ. ಎ ಸೆಂಥಿಲ್ ವೇಲ್ ಅವರಿದ್ದ ಪೀಠ, ಆರೋಪ ದೋಷಪೂರಿತವಾಗಿದೆ. ಅಲ್ಲದೆ ಸಮಿತಿ ನಡೆಸಿದ ತನಿಖೆಯ ವೇಳೆ ಆರೋಪಿಸಲಾದ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ಕಾರ್ಖಾನೆ ಇಲ್ಲ ಎಂದು ತಿಳಿದು ಬಂದಿದೆ. ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ಅರ್ಜಿದಾರರು ಮಾಡಿದ್ದಾರೆ ಎಂದು ನ್ಯಾಯಾಲಯ ಗರಂ ಆಗಿದೆ.

    ಅರ್ಜಿದಾರರಿಗೆ ವಿಧಿಸಲಾದ ದಂಡವನ್ನು ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (Pollution Control Board) ಠೇವಣಿ ಇರಿಸಲು ಕೋರ್ಟ್ ಸೂಚಿಸಿದೆ. ದಂಡ ಪಾವತಿಗೆ ವಿಫಲವಾದರೆ ಮುಂದಿನ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಡಿಕೆಶಿ ಒಬ್ಬರೇ ಕೆಲಸ ಮಾಡಿದ್ದರೆ ನಾನ್ಯಾಕೆ ಪ್ರಚಾರದಲ್ಲಿ ತೊಡಗಬೇಕಿತ್ತು?- ಸಿಎಂ ಕುರ್ಚಿಗೆ ಸಿದ್ದು ವಾದ

  • ದೇಶದಲ್ಲೆ ಉತ್ತಮ ಗಾಳಿ ದೊರೆಯುವಲ್ಲಿ 2ನೇ ಸ್ಥಾನ ಪಡೆದುಕೊಂಡ ಮುದ್ರಣ ಕಾಶಿ

    ದೇಶದಲ್ಲೆ ಉತ್ತಮ ಗಾಳಿ ದೊರೆಯುವಲ್ಲಿ 2ನೇ ಸ್ಥಾನ ಪಡೆದುಕೊಂಡ ಮುದ್ರಣ ಕಾಶಿ

    ಗದಗ: ಸಂಗೀತದ ನಾಡು, ಹಸಿರು ಗಿರಿಗಳ ಸಾಲಿನ ಮುದ್ರಣ ಕಾಶಿಗೆ ಇದೀಗ ಪರಿಸರ ಮಾಲಿನ್ಯದಿಂದ ಮತ್ತೊಂದು ಕಿರೀಟ ಲಭಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮೀಕ್ಷೆ ಪ್ರಕಾರ, ದೇಶದಲ್ಲೇ ಉತ್ತಮ ಗಾಳಿ ದೊರೆಯುವ ಸ್ಥಳದಲ್ಲಿ ಗದಗ 2ನೇ ಸ್ಥಾನ ಪಡೆದಿದೆ. ಈ ಮೂಲಕ ಹಸಿರು ಸಹ್ಯಾದ್ರಿ ತನ್ನ ಉಸಿರನ್ನೂ ದೇಶದಲ್ಲಿ ಉತ್ತುಂಗಕ್ಕೇರಿಸಿದೆ.

    ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ 131 ನಗರಗಳ ಸಮೀಕ್ಷೆ ನಡೆಸಿದ್ದು, ವಾಯುಗುಣ ಮಟ್ಟದ ಸೂಚ್ಯಂಕದ ಬುಲೆಟಿನ್ ಪ್ರಕಾರ ಮುದ್ರಣಕಾಶಿ ಗದಗ ನಗರ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಜೂನ್ 15 ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿದೆ. ದೇಶದ 45 ನಗರಗಳು ಸಮಾಧಾನಕರ ಹಾಗೂ 21 ನಗರಗಳು ಗಾಳಿ ಸ್ಥಿತಿ ಮಧ್ಯಮವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ತಿಳಿಸಿದೆ.

    ಗದಗದಲ್ಲಿ ಉತ್ತಮ ಗುಣಮಟ್ಟದ ಗಾಳಿ ದೊರೆಯಲು ಹಲವಾರು ಕಾರಣಗಳಿವೆ. ನಗರದಲ್ಲಿ ಇಂಗಾಲ ಕಾರ್ಬನ್ ಡೈಯಾಕ್ಸೈಡ್ ಕಡಿಮೆ ಇದೆ. ವಿಷಕಾರಿ ಹೊಗೆ ಬಿಡುವಂಥಹ ಯಾವುದೇ ಫ್ಯಾಕ್ಟರಿಗಳಿಲ್ಲ. ಸಾವಯುವ ಕೃಷಿ ಮೂಲಕ ಕೃಷಿ ಕೇತ್ರದಲ್ಲೂ ಹೆಚ್ಚು ಸಾಧನೆ ಮಾಡುತ್ತಿದೆ. ಅನೇಕ ಗಿಡಮರಗಳು, ಕೆರೆಗಳ ಅಭಿವೃದ್ಧಿ, ಮಳೆ ನೀರು ಹಿಡಿದಿಡಲು ಬಾಂದಾರ್, ಚೆಕ್ ಡ್ಯಾಮ್, ಕೃಷಿ ಹೊಂಡ, ಹೀಗೆ ನೀರಿನ ಗುಂಡಿಗಳು ಹೆಚ್ಚು ನಿರ್ಮಾಣವಾಗುತ್ತಿವೆ. ಹಸರಿಕರಣ, ಸೋಲಾರ್ ಪವರ್, ವಿಂಡ್ ಪವರ್, ಎಲೆಕ್ಟ್ರಿಕಲ್ ವಾಹನಗಳ ಬಳಕೆಗಳಿಂದ ಇಂತಹ ಗುಣಮಟ್ಟದ ಗಾಳಿ ದೊರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಮಲೆನಾಡಲ್ಲಿ ಭಾರೀ ಮಳೆ, ಮುಳುಗುವ ಭೀತಿಯಲ್ಲಿ ಹೆಬ್ಬಾಳೆ ಸೇತುವೆ, ಭೂ ಕುಸಿತ

    ನಗರದ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ನಿರಂತರ ವಾಯುಗುಣಮಟ್ಟದ ಮಾಪನ ಕೇಂದ್ರ ಅಳವಡಿಸಲಾಗಿದೆ. ಪ್ರತಿದಿನ ಇದು ಬಾರಿ ವಾಯುಗುಣಮಟ್ಟವನ್ನು ತಿಳಿಸುತ್ತದೆ. ಜೂ.15 ರಂದು ಶೇ.10 ರಷ್ಟು ಸೂಚ್ಯಂಕವನ್ನು ಮಾಪನ ಪ್ರದರ್ಶಿಸಿದೆ. ಇದೇ ಡಾಟಾವನ್ನ ಸ್ಥಳೀಯ ಪರಿಸರ ಇಲಾಖೆ ಕೇಂದ್ರ ಇಲಾಖೆಗೆ ರವಾನಿಸಿದೆ. ಕೇಂದ್ರ ಇಲಾಖೆ ಇದನ್ನು ತನ್ನ ವೆಬ್‍ಸೈಟ್‍ನಲ್ಲಿ ಹಂಚಿಕೊಂಡಿದೆ. ಇನ್ನು ಈ ಭಾಗದಲ್ಲಿ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರೋ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ. ಇತ್ತೀಚಿಗೆ ಸಾಕಷ್ಟು ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಸೋಲಾರ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಬಳಸುತ್ತಿರುವುದರಿಂದ ನಮ್ಮ ನಗರ ಉತ್ತಮ ಗುಣಮಟ್ಟದ ಗಾಳಿ ಹೊಂದಿದೆ. ಇಂತಹ ನಗರದಲ್ಲಿ ನಾವು ವಾಸಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದು ಪರಿಸರ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ ಲಾಕ್‍ಡೌನ್ ಕಾರಣವೋ ಅಥವಾ ಇಲ್ಲಿನ ಹಸಿರು ಸಹ್ಯಾದ್ರಿಯ ಕಪ್ಪತ್ತಗುಡ್ಡದ ಕಾರಣವೋ ಗೊತ್ತಿಲ್ಲ. ಗದಗ ನಗರ ದೇಶದಲ್ಲಿ ಉತ್ತಮ ಗಾಳಿ ನೀಡುವದರಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಶುದ್ಧ ಗಾಳಿಯನ್ನು ನಗರದ ಜನತೆ ಅಶುದ್ಧ ಮಾಡದ ಹಾಗೆ ಇದೇ ರೀತಿ ಕಾಪಾಡಿಕೊಂಡು ಹೋಗಬೇಕು. ಪರಿಸರಕ್ಕೆ ಮಾರಕವಾದ ಚಟುವಟಿಕೆಗಳನ್ನು ನಿಲ್ಲಿಸಿ ಜಿಲ್ಲೆಗೆ ಉಸಿರಾಗಿರೋ ಹಸಿರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಸಾಕು ಎಂಬುವುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಕೆಎಲ್‍ಇ ಆಸ್ಪತ್ರೆಯಿಂದ ಲಸಿಕೆ ಖರೀದಿಸಿ ಯುವಕರಿಗೆ ಉಚಿತವಾಗಿ ಹಂಚಿದ ಗಣೇಶ್ ಹುಕ್ಕೇರಿ