Tag: central minister

  • ಮದ್ವೆಯಾದ್ರೆ ರಾಹುಲ್ ಗಾಂಧಿ ಬಲಿಷ್ಠರಾಗ್ತಾರೆ: ರಾಮ್‍ದಾಸ್ ಅಥಾವಳೆ

    ಮದ್ವೆಯಾದ್ರೆ ರಾಹುಲ್ ಗಾಂಧಿ ಬಲಿಷ್ಠರಾಗ್ತಾರೆ: ರಾಮ್‍ದಾಸ್ ಅಥಾವಳೆ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಮದುವೆಯಾಗುವಂತೆ ಸಲಹೆ ನೀಡಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಸೋಲು ಕಂಡಿದ್ದು, ಹೀಗಾಗಿ ಪಕ್ಷ ಬಲಿಷ್ಠಗೊಳಿಸಬೇಕಾದರೆ ಪಕ್ಷದ ಅಧ್ಯಕ್ಷರು ಏನು ಮಾಡಬೇಕು ಎಂದು ಕೇಳಿದ್ದಕ್ಕೆ 48 ವರ್ಷದ ರಾಹುಲ್ ಗಾಂಧಿಯವರು ಮದುವೆಯಾದರೆ ಮತ್ತಷ್ಟು ಬಲಿಷ್ಠವಾಗಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

    ರಾಹುಲ್ ಗಾಂಧಿಯವರು ನನ್ನ ಗೆಳೆಯರಾಗಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಪಕ್ಷದ ಗೆಲುವಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಹೀಗಾಗಿ ಅವರು ಇನಷ್ಟು ಶಕ್ತಿಯುತವಾಗಿರಲು ಮದುವೆಯಾಗಬೇಕು. ಮದುವೆಯಾದರೆ ಜವಾಬ್ದಾರಿ ಹೆಚ್ಚಾಗುತ್ತದೆ. ಆವಾಗ ಅವರು ಬಲಿಷ್ಠರಾಗುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಹಲವು ಬಾರಿ ಮದುವೆಯ ಬಗ್ಗೆ ರಾಹುಲ್ ಗಾಂಧಿಯವರನ್ನು ಕೇಳಿದಾಗ ನಾನು ಕಾಂಗ್ರೆಸ್ ಪಕ್ಷವನ್ನೇ ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಉತ್ತರಿಸಲು ತಪ್ಪಿಸಿಕೊಳ್ಳುತ್ತಿದ್ದರು.

  • ಜುಲೈ 5ರ ಬಜೆಟ್‍ಗೆ ನಿರ್ಮಲಾ ಸೀತಾರಾಮನ್‍ರಿಂದ ಭಾರೀ ಸಿದ್ಧತೆ

    ಜುಲೈ 5ರ ಬಜೆಟ್‍ಗೆ ನಿರ್ಮಲಾ ಸೀತಾರಾಮನ್‍ರಿಂದ ಭಾರೀ ಸಿದ್ಧತೆ

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 5ರ ಬಜೆಟ್‍ಗೆ ಭಾರೀ ಸಿದ್ಧತೆ ನಡೆಸುತ್ತಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ಮೊದಲ ಬಜೆಟ್‍ನ ಪೂರ್ವಭಾವಿ ಸಲಹಾ ಸಭೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ವಲಯಕ್ಕೆ ನಿರ್ಮಲಾ ಅವರು ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ಮುಂದಿನ 5 ವರ್ಷಗಳಲ್ಲಿ ರೈಲು, ರಸ್ತೆ, ಡಿಜಿಟಲ್ ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕಾಗಿ ಬರೋಬ್ಬರಿ 100 ಲಕ್ಷ ಕೋಟಿ ವೆಚ್ಚ ಮಾಡುವ ಬಜೆಟ್ ಹೊಂದಿರಲಿದೆ ಎನ್ನಲಾಗಿದೆ.

    ಈ ಮೊತ್ತದಲ್ಲಿ ಸಾರಿಗೆ ವಿಭಾಗಕ್ಕೆ ಹೆಚ್ಚು ಹಣ ಮೀಸಲು ಇರಿಸುವ ಸಾಧ್ಯತೆ ಇದ್ದು, ನಂತರ ಗೃಹ ನಿರ್ಮಾಣ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆ ಆಗಲಿದೆ. ಇದರಿಂದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ನಿರ್ಮಲಾ ಮತ್ತವರ ತಂಡದ ಲೆಕ್ಕಾಚಾರವಾಗಲಿದೆ.

  • ಅಸಾಧ್ಯವಾಗಿದನ್ನು ಸಾಧ್ಯ ಮಾಡುವವರು ಮೋದಿ, ಈಗ ಜವಾಬ್ದಾರಿ ಹೆಚ್ಚಾಗಿದೆ – ಜೋಶಿ

    ಅಸಾಧ್ಯವಾಗಿದನ್ನು ಸಾಧ್ಯ ಮಾಡುವವರು ಮೋದಿ, ಈಗ ಜವಾಬ್ದಾರಿ ಹೆಚ್ಚಾಗಿದೆ – ಜೋಶಿ

    ಬೆಂಗಳೂರು: ಪ್ರಧಾನಿ ಮೋದಿ ಅವರು ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡುವವರು. ಇವರ ಕ್ಯಾಬಿನೆಟ್‍ಗೆ ನಾನು ಆಯ್ಕೆಯಾಗಿದ್ದೇನೆ. ಇದರಿಂದ ನಮ್ಮ ಮೇಲೆ ಇರುವ ಜವಬ್ದಾರಿ ಹೆಚ್ಚಿದೆ ಎಂದು ನೂತನ ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನನಗೆ ಕರೆ ಮಾಡಿ ವಿಷಯ ತಿಳಿಸಿದರು. ಸಂಜೆ 5 ಗಂಟೆಗೆ ಪ್ರಧಾನ ಮಂತ್ರಿ ನಿವಾಸಕ್ಕೆ ಬರಬೇಕು. ಹಾಗೆಯೇ ಸಂಜೆ 7 ಗಂಟೆಗೆ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದರು. ಕೇಂದ್ರ ಸಚಿವ ಸ್ಥಾನ ಸಿಗುತ್ತಿರುವುದಕ್ಕೆ ಖುಷಿ ಆಗುತ್ತಿರುವುದಕ್ಕಿಂತ ಜವಬ್ದಾರಿ ಹೆಚ್ಚಿದೆ. ಮೋದಿ ಅವರ ಮೇಲೆ ಜನರ ನಿರೀಕ್ಷೆ ಬಹಳ ಇದೆ. ಕಳೆದ 5 ವರ್ಷ ಅವರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಮೋದಿ ಅವರು ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡುವವರು. ಹೀಗಾಗಿ ನಮ್ಮ ಮೇಲು ಹೆಚ್ಚು ಜವಾಬ್ದಾರಿ ಇದೆ. ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಚೆನ್ನಾಗಿ ಕೆಲಸ ಮಾಡುತ್ತೇವೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.

    ನಮ್ಮ ಪಕ್ಷದ ಮೇಲೆ ನನಗೆ ಭರವಸೆ ಇದೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ ಹಿಡಿದು ಇಂದಿನ ನಾಯಕರಾದ ಮೋದಿ ಹಾಗೂ ಅಮಿತ್ ಶಾ ಅವರು ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡು ಬಂದಿದ್ದಾರೆ. ಮುಂದೆಯೂ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಹಿಂದಿನ ಕ್ಯಾಬಿನೆಟ್‍ನಲ್ಲಿ ನನಗೆ ಸ್ಥಾನ ಕೊಡದ ಬಗ್ಗೆ ನಾನು ಮಾತನಾಡುವುದಿಲ್ಲ ಹಿಂದೆ ಕೂಡ ನಮ್ಮ ನಾಯಕರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದರು. ಈಗಲೂ ಸರಿಯಾಗಿಯೇ ತಿರ್ಮಾನಿಸಿದ್ದಾರೆ. ಉತ್ತರ ಕರ್ನಾಟಕದಿಂದ ನಾನು ಮತ್ತು ಸುರೇಶ್ ಅಂಗಡಿ ಇಬ್ಬರು ಇದ್ದೇವೆ ಹಾಗೆಯೇ ದಕ್ಷಿಣದಿಂದ ಸದಾನಂದ ಗೌಡರು ಇದ್ದಾರೆ. ನಾವೆಲ್ಲರೂ ಸೇರಿ ಸಮಗ್ರ ಕರ್ನಾಟದ ಅಭಿಮೃದ್ಧಿ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಪ್ರಥಮ ಬಾರಿಗೆ ಕೇಂದ್ರ ಸಚಿವನಾಗುತ್ತಿದ್ದೇನೆ ಇಂತಹದ್ದೆ ಖಾತೆ ಬೇಕು ಅಂತ ನಿರೀಕ್ಷೆ ಮಾಡಿಲ್ಲ. ಮೋದಿ ಹಾಗೂ ನಮ್ಮ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ಧ ಎಂದರು. ಬಳಿಕ ಅನಂತ್‍ಕುಮಾರ್ ಹೆಗಡೆ ಅವರಿಗೆ ಕೊಕ್ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ನಮ್ಮ ನಾಯಕರು ಯಾವ ಕಾಲಕ್ಕೆ ಏನು ಮಾಡಬೇಕು ಎಂದು ಮೊದಲೇ ಯೊಚನೆ ಮಾಡಿರುತ್ತಾರೆ. ಹಿಂದೆ ಅವರಿಗೆ ಸ್ಥಾನ ಕೊಟ್ಟಿದ್ದರು. ಈ ಬಾರಿ ನನಗೆ ಸ್ಥಾನ ಕೊಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ಮಹದಾಯಿ ವಿಚಾರವಾಗಿ ಮಾತನಾಡಿ, ಈ ವಿಷಯ ಕೋರ್ಟ್‍ನಲ್ಲಿದೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಈ ಬಗ್ಗೆ ವರದಿ ವರದಿ ಸಲ್ಲಿಸಿದೆ. ಕೋರ್ಟ್‍ನಲ್ಲಿ ಈ ವಿಚಾರ ಪೆಂಡಿಂಗ್ ಅಲ್ಲಿ ಇದೆ. ಹೀಗಾಗಿ ಕೋರ್ಟ್ ಮಹದಾಯಿ ವಿಚಾರದಲ್ಲಿ ತೀರ್ಪು ಕೊಟ್ಟ ನಂತರ ನಾವು ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

  • ಸಚಿವ ಅನಂತ್‍ಕುಮಾರ್ ಹೆಗ್ಡೆಗೆ ವಾದ್ರಾ ಸಹೋದರಿ ಪತಿ ಚಾಲೆಂಜ್

    ಸಚಿವ ಅನಂತ್‍ಕುಮಾರ್ ಹೆಗ್ಡೆಗೆ ವಾದ್ರಾ ಸಹೋದರಿ ಪತಿ ಚಾಲೆಂಜ್

    ನವದೆಹಲಿ: ಹಿಂದೂ ಹುಡುಗಿಯ ಮೈ ಮುಟ್ಟಿದ ಕೈ ಇರಬಾರದು ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರ ಹೇಳಿಕೆ ದೇಶದ್ಯಾಂತ ಭಾರೀ ಸದ್ದು ಮಾಡಿದ್ದು, ಇದೀಗ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸಹೋದರಿಯ ಪತಿ, ಕಾಂಗ್ರೆಸ್ ನಾಯಕ ತೆಹಸೀನ್ ಪೂನವಾಲಾ ಸಚಿವರಿಗೆ ಚಾಲೆಂಜ್ ಹಾಕಿದ್ದಾರೆ.

    ನಾನು ನನ್ನ ಹಿಂದೂ ಜೀವನ ಸಂಗಾತಿಯ ಮೈ ಮುಟ್ಟಿದ್ದೇನೆ. ಇದೀಗ ನನ್ನನ್ನು ನೀವೇನು ಮಾಡುತ್ತೀರಿ ಎಂದು ಫೋಟೋ ಸಮೇತ ಸಚಿವರಿಗೆ ಟ್ವೀಟ್ ಮೂಲಕ ಚಾಲೆಂಜ್ ಹಾಕಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ”ಶುಭ ಮಧ್ಯಾಹ್ನ ಅನಂತ್ ಕುಮಾರ್ ಹೆಗ್ಡೆಯವರೇ.. ನೋಡಿ ನನ್ನ ಕೈಗಳು ನನ್ನ ಹಿಂದೂ ಹೆಣ್ಣನ್ನು ಟಚ್ ಮಾಡಿವೆ. ಇದೀಗ ನೀವು ನನ್ನನ್ನು ಏನು ಮಾಡುತ್ತೀರಿ. ಇದು ನನ್ನ ಚಾಲೆಂಜ್ ಸರ್” ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಹೆಗ್ಡೆ ಹೇಳಿದ್ದೇನು..?
    ಜಾತಿ ವಿಷಬೀಜ ಸಮಾಜದಲ್ಲಿ ಸೇರಿಕೊಂಡ ಬಳಿಕ ನಾವು ನಿರ್ಮಾಣ ಮಾಡಿದ್ದನ್ನು ನಮ್ಮದು ಎಂದು ಹೇಳಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ನಿಲ್ಲದೇ ಇದ್ದರೆ ಏನಾಗುತ್ತದೆ ಎಂಬುವುದನ್ನು ಇತಿಹಾಸ ನೋಡಿದರೆ ನಮಗೆ ಅರಿವಾಗುತ್ತದೆ. ಆದ್ದರಿಂದ ಜಾತಿ ಪ್ರಶ್ನೆ ಇಲ್ಲದೆ ಹಿಂದೂ ಹುಡುಗಿಯ ಮುಟ್ಟಿದರೆ ಆ ಕೈ ಇರಬಾರದು ಎಂದು ಮಡಿಕೇರಿಯಲ್ಲಿ ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಾಮಾಜಿಕ ಸಮರಸತಾ ಸಮಾವೇಶ, ಹಿಂದೂ ಐಕ್ಯ ಸಮ್ಮೇಳನದಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದರು.

    https://www.youtube.com/watch?v=sZnllwvVLOs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವತಃ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು ಹಿಂಗೆ- ಕಾಂಗ್ರೆಸ್ ವಿರುದ್ಧ ಡಿ.ವಿ.ಸದಾನಂದಗೌಡ ವ್ಯಂಗ್ಯ

    ಸ್ವತಃ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು ಹಿಂಗೆ- ಕಾಂಗ್ರೆಸ್ ವಿರುದ್ಧ ಡಿ.ವಿ.ಸದಾನಂದಗೌಡ ವ್ಯಂಗ್ಯ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎನ್ನುವ ಆದೇಶ ಪತ್ರವನ್ನು ಹಾಕಿ, ಟ್ವೀಟ್ ಮೂಲಕ ರಾಜ್ಯ ಕೈ ನಾಯಕರ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ವ್ಯಂಗ್ಯವಾಡಿದ್ದಾರೆ.

    ಇದಪ್ಪಾ ವರಸೆ! ಅಂತಿಮವಾಗಿ ತೆರೆಗೆ ದೃಶ್ಯ ಬಂದಿದೆ. ತಾವೇ ಸೂತ್ರಧಾರಿ ತಾವೇ ಪಾತ್ರಧಾರಿ. ಯಾರಲ್ಲಿ ದೂತರೇ! ನನ್ನ ಸಭೆಗೆ ಹಾಜಾರಾಗದ ವಂದಿ ಮಾಗಧರನ್ನು ನನ್ನ ಸಾಮ್ರಾಜ್ಯದಿಂದಲೇ ಉಚ್ಚಾಟಿಸಿ. ಇದು ಕಟ್ಟಾಜ್ಞೆ, ರಾಜಾಜ್ಞೆ. ಸ್ವತಃ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು ಹಿಂಗೆ ಎಂದು ಸಸಚಿವರು ಟ್ವೀಟ್ ಮಾಡಿದ್ದಾರೆ.

    ಆಪರೇಷನ್ ಕಮಲದ ಭೀತಿಯಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ನಾಯಕರು ಶುಕ್ರವಾರ ಕಾಂಗ್ರೆಸ್ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಗೆ ಕಡ್ಡಾಯವಾಗಿ ಎಲ್ಲ ಶಾಸಕರು ಹಾಜರಾಗಬೇಕು ಎಂದು ಸೂಚಿಸಿದೆ. ಕಾಂಗ್ರೆಸ್ನ ಈ ಆದೇಶವನ್ನು ಎತ್ತಿ ಹಿಡಿದು ಡಿ.ವಿ.ಸದಾನಂದಗೌಡ ಅವರು ಕೈ ನಾಯಕರ ಕಾಲೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 11 ತಿಂಗ್ಳಲ್ಲೇ ಸಿಎಂ ಸ್ಥಾನದಿಂದ ಕೆಳಗಿಳಿದು ಓಡಿಹೋದವರಲ್ವೆ ಅಂದ್ರು ಸಿದ್ದರಾಮಯ್ಯ..!

    11 ತಿಂಗ್ಳಲ್ಲೇ ಸಿಎಂ ಸ್ಥಾನದಿಂದ ಕೆಳಗಿಳಿದು ಓಡಿಹೋದವರಲ್ವೆ ಅಂದ್ರು ಸಿದ್ದರಾಮಯ್ಯ..!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಮಧ್ಯೆ ಟ್ವಿಟ್ಟರ್ ವಾರ್ ನಡೆದಿದ್ದು, ಮಾಜಿ ಸಿಎಂ ಅವರು ಡಿವಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ ಎಂಬ ಮಾಜಿ ಸಿಎಂ ಟ್ವೀಟ್ ಗೆ ಸಚಿವರು ಪ್ರತಿಕ್ರಿಯಿಸಿದ್ದರು. ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ. ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕ್ಕೊಳ್ಳಲು ಇದೊಂದು ಹೊಸ ಪ್ರಹಸನ ಅಂತ ತಿರುಗೇಟು ನೀಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಎಷ್ಟೆಂದರೂ ನೀವು 11 ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿ ಹೋದವರಲ್ಲವೇ ಅಂತ ವ್ಯಂಗ್ಯವಾಡಿದ್ದಾರೆ.

    ಸಿದ್ದರಾಮಯ್ಯ ಟ್ವೀಟ್ ನಲ್ಲೇನಿದೆ..?
    ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ. ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ?

    ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ ಬಿಜೆಪಿ ಇಷ್ಟು ದಿನ ಬೇರೆ ಏನು ಮಾಡಿದೆ ಅಂತ ಪ್ರಶ್ನಿಸಿ ಬಿಜೆಪಿ ಫಾರ್ ಕರ್ನಾಟಕ ಟ್ವಿಟ್ಟರ್ ಅಕೌಂಟ್ ಗೆ ಟ್ಯಾಗ್ ಮಾಡಿದ್ದರು.

    ಡಿವಿಎಸ್ ಟ್ವೀಟ್ ನಲ್ಲೇನಿದೆ..?
    ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ . ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕ್ಕೊಳ್ಳಲು ಇದೊಂದು ಹೊಸ ಪ್ರಹಸನ . ಮುಲಾಜಿನ ಸರ್ಕಾರ ನಡೆಸಲು ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿ, ಕನ್ನಡಿಗರು ಮುಗ್ಧರು ಮೂರ್ಖರಲ್ಲ ನಿಮ್ಮ ಗಿಲೀಟು ಮಾತು ನಂಬಲು ಅಂತ ಡಿವಿಎಸ್ ರೀಟೀಟ್ ಮಾಡಿದ್ದರು.

    ಇದಕ್ಕೆ ಮತ್ತೆ ಟೀಟ್ವೀಟ್ ಮಾಡಿದ ಮಾಜಿ ಸಿಎಂ “ಡಿವಿಎಸ್ ಅವರೇ, ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ, ‘ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ…’ ಎಷ್ಟೆಂದರೂ, ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿಹೋದವರಲ್ವೇ ನೀವು ಅಂತ ಬರೆದು ಕೇಂದ್ರ ಸಚಿವರಿಗೆ ಟ್ಯಾಗ್ ಮಾಡಿದ್ದಾರೆ.

    ಈ ಮೂಲಕ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣೆಯಲ್ಲಿ ಪಕ್ಷ ಸೋತರೆ ಹೊಣೆ ಯಾರದ್ದು – ಗಡ್ಕರಿ ಖಡಕ್ ಮಾತು

    ಚುನಾವಣೆಯಲ್ಲಿ ಪಕ್ಷ ಸೋತರೆ ಹೊಣೆ ಯಾರದ್ದು – ಗಡ್ಕರಿ ಖಡಕ್ ಮಾತು

    ನವದೆಹಲಿ: ಸಂಸದರು ಹಾಗೂ ಶಾಸಕರ ಕಾರ್ಯವೈಖರಿ ಸರಿ ಇಲ್ಲದಿದ್ದರೆ ಅದಕ್ಕೆ ನೇರವಾಗಿ ಪಕ್ಷದ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ಇತ್ತೀಚೆಗೆ ನಡೆದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರವಾಗಿ ಮುಖಭಂಗ ಅನುಭವಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಗಡ್ಕರಿಯವರು, ಚುನಾವಣೆಯಲ್ಲಿ ಸೋತರೆ ಪಕ್ಷದ ನಾಯಕರೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಅಲ್ಲದೇ ಸೋಲಿನ ಹೊಣೆಯನ್ನು ಹೊರುವುದು ಸಹ ನಾಯಕತ್ವದ ಭಾಗ ಎಂದಿದ್ದಾರೆ.

    ತಮ್ಮ ಹೇಳಿಕೆಯನ್ನು ದೆಹಲಿಯ ವಿಜ್ಞಾನ್ ಭವನದಲ್ಲಿ ನಡೆದ 31ನೇ ಗುಪ್ತಚರ ಇಲಾಖಾ ಅಧಿಕಾರಿಗಳ ಎಂಡೋಮೆಂಟ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಮರ್ಥಿಸಿಕೊಂಡು ಮಾತನಾಡಿದ ಅವರು, ಗೃಹ ಸಚಿವಾಲಯದ ಯಶಸ್ಸಿಗೆ ತರಬೇತಿ ಹಾಗೂ ನೈಪುಣ್ಯತೆಯನ್ನು ಪಡೆದ ಐಪಿಎಸ್ ಅಧಿಕಾರಿಗಳು ಕಾರಣರಾಗುತ್ತಾರೆ. ಏಕೆಂದರೆ ಈ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸಿದ್ದರಿಂದ ಯಶಸ್ಸು ಕಂಡಿದೆ. ಆದರೆ ನಾನು ಪಕ್ಷದ ಅಧ್ಯಕ್ಷನಾಗಿದ್ದುಕೊಂಡು ಸಂಸದರು ಹಾಗೂ ಶಾಸಕರು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದ್ದಾರೆ.

    ಈ ಕಾರಣಕ್ಕಾಗಿ ಸಂಸದರು ಹಾಗೂ ಶಾಸಕರು ಆಯಾ ರಾಜ್ಯಗಳಲ್ಲಿ ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ, ಅದಕ್ಕೆ ನೇರವಾಗಿ ಪಕ್ಷದ ಮುಖ್ಯಸ್ಥರೇ ಹೊಣೆಗಾರರನ್ನಾಗಿ ಮಾಡಬೇಕೆಂದು ಹೇಳಿದ್ದಾರೆ.

    ತಮ್ಮ ಹೇಳಿಕೆ ಸಂಬಂಧ ಇಲ್ಲಸಲ್ಲದ ಮಾಹಿತಿಗಳನ್ನು ಹರಡುವ ಮೂಲಕ ಪಕ್ಷ ಹಾಗೂ ತಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯತ್ನಿಸುತ್ತಿದ್ದಾರೆಂದು ತಮ್ಮ ಟ್ವಿಟ್ಟರ್ ನಲ್ಲಿ ಗಡ್ಕರಿ ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿವಿಎಸ್‍ಗೆ ಡಿಸ್ಟಿಲ್ಡ್ ವಾಟರ್ ಕುಡಿಸಿದ್ದ ಇಮ್ಮಡಿ ಸ್ವಾಮೀಜಿ

    ಡಿವಿಎಸ್‍ಗೆ ಡಿಸ್ಟಿಲ್ಡ್ ವಾಟರ್ ಕುಡಿಸಿದ್ದ ಇಮ್ಮಡಿ ಸ್ವಾಮೀಜಿ

    ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿ 15 ಮಂದಿಯ ಸಾವಿಗೆ ಕಾರಣವಾದ ಪ್ರಮುಖ ಆರೋಪಿ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿ, ಈ ಹಿಂದೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡರಿಗೆ ಡಿಸ್ಟಿಲ್ಡ್ ವಾಟರ್ ಕುಡಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡರು ಮಲೆ ಮಾದೇಶ್ವರ ದೇವರ ದರ್ಶನಕ್ಕೆ ಬಂದಿದ್ದು, ಅಲ್ಲೇ ತಂಗಿದ್ದರು. ದೇವರ ದರ್ಶನಕ್ಕೆ ಬಂದಿದ್ದ ಡಿವಿಎಸ್ ಗೆ ಊಟದ ವ್ಯವಸ್ಥೆಯನ್ನು ಸ್ವಾಮೀಜಿ ಮಾಡಿಸಿದ್ದರು. ಡಿವಿಎಸ್ ತಿಂಡಿಗಾಗಿ ಸಾಲೂರು ಮಠಕ್ಕೆ ತೆರಳಿದ್ದರು. ಈ ವೇಳೆ ಡಿವಿಎಸ್ ಜೊತೆ ಇತರೆ ಗಣ್ಯರಿಗೂ ಇಮ್ಮಡಿ ಮಹದೇವ ಸ್ವಾಮೀಜಿ ಡಿಸ್ಟಿಲ್ಡ್ ವಾಟರ್ ಕುಡಿಸಿದ್ದರು.

    ಪರಿಣಾಮ ಡಿವಿಎಸ್‍ಗೆ ಎದೆ ಉರಿ ಕಾಣಿಸಿಕೊಂಡಿದ್ದು, ಕೂಡಲೇ ಅವರಿಗೆ ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ವಾಮೀಜಿ, ಕಣ್ತಪ್ಪಿನಿಂದ ಈ ಘಟನೆ ಆಯ್ತು ಅಂತ ಸಮಜಾಯಿಶಿ ಕೊಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ನಾಟಕ ರಾಜಕೀಯದಲ್ಲಿ ಭೂಕಂಪನ- ಸಮ್ಮಿಶ್ರ ಸರ್ಕಾರ ಧಮಾಕಾ ನಿಶ್ಚಿತ: ಜಾವ್ಡೇಕರ್ ಭವಿಷ್ಯ

    ಕರ್ನಾಟಕ ರಾಜಕೀಯದಲ್ಲಿ ಭೂಕಂಪನ- ಸಮ್ಮಿಶ್ರ ಸರ್ಕಾರ ಧಮಾಕಾ ನಿಶ್ಚಿತ: ಜಾವ್ಡೇಕರ್ ಭವಿಷ್ಯ

    ನವದೆಹಲಿ: ಕರ್ನಾಟಕ ರಾಜಕೀಯದಲ್ಲಿ ಭೂಕಂಪನ ಆಗಲಿದೆ ಎಂದು ಮಾನವ ಸಂಪನ್ಮೂಲ ಸಚಿವ, ಕರ್ನಾಟಕ ಚುನಾವಣಾ ಉಸ್ತುವಾರಿಯೂ ಆಗಿದ್ದ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ.

    ರಾಜಸ್ಥಾನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜಕೀಯದಲ್ಲಿ ಯಾವಾಗ ಬೇಕಾದರೂ ಧಮಾಕ ಆಗಬಹುದು. ಈ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಆಗ್ತಿಲ್ಲ. ಹೀಗಾಗಿ ಜೆಡಿಎಸ್-ಕಾಂಗ್ರೆಸ್‍ನಲ್ಲಿ ಧಮಾಕ ಆಗೋದಂತೂ ನಿಶ್ಚಿತವಾಗಿದೆ. ಆದ್ರೆ ಆ ಧಮಾಕ ಯಾವಾಗ ಅಂತ ಯಡಿಯೂರಪ್ಪ ಅಷ್ಟೇ ಹೇಳಬಹುದು ಅಂತ ಹೇಳಿದ್ದಾರೆ.

    ಕರ್ನಾಟಕದಲ್ಲಿ ನಾವೇ ಅತೀ ದೊಡ್ಡ ಪಕ್ಷ, ನಮಗೆ 7 ಶಾಸಕರ ಸಂಖ್ಯೆಯಷ್ಟೇ ಕೊರತೆ ಇದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಒಳ್ಳೆ ಸರ್ಕಾರ ನೀಡ್ತಿಲ್ಲ ಅಂತ ತಿಳಿಸಿದ್ದಾರೆ.

    ಯಾವುದೇ ಸಂದರ್ಭದಲ್ಲೂ ಆಪರೇಷನ್ ಕಮಲ ಆಗಬಹುದೆಂಬ ಭೀತಿ ಸಮ್ಮಿಶ್ರ ಸರ್ಕಾರಕ್ಕೆ ಇದೀಗ ಭೀತಿ ಎದುರಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಯಾವಾಗ ಬೇಕಾದ್ರೂ ಬೀಳಬಹುದು. ಮೈತ್ರಿ ಸರ್ಕಾರ ಒಂದು ಅಸ್ಥಿರ ಸರ್ಕಾರವಾಗಿದ್ದು, ಅನಿವಾರ್ಯದ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ಇವರ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ ಅಂದಿದ್ದಾರೆ.

    ಕರ್ನಾಟಕದಲ್ಲಿ ಜನ ಪ್ರಧಾನಿ ಮೋದಿಯನ್ನು ಮೆಚ್ಚಿಕೊಂಡು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಬಿಜೆಪಿಗೆ ಬಹುಮತ ನೀಡಿದ್ದಾರೆ. ಸರ್ಕಾರ ರಚನೆಗೆ ನಮಗೆ 7 ಸ್ಥಾನಗಳಷ್ಟೇ ಬೇಕಾಗಿದೆ. ಇದು ಯಾವಾಗ ಬೇಕಾದ್ರೂ ಆಗಬಹುದು ಎಂದು ಜಾವ್ಡೇಕರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾವೇರಿ ನದಿಯಲ್ಲಿ ಅನಂತಕುಮಾರ್ ಅಸ್ಥಿ ವಿಸರ್ಜನೆ

    ಕಾವೇರಿ ನದಿಯಲ್ಲಿ ಅನಂತಕುಮಾರ್ ಅಸ್ಥಿ ವಿಸರ್ಜನೆ

    ಮಂಡ್ಯ: ಸೋಮವಾರ ನಿಧನರಾಗಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಸ್ಥಿಯನ್ನು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

    ದಿವಂಗತ ಅನಂತಕುಮಾರ್ ಅವರ ಸಹೋದರ ನಂದ ಕುಮಾರ್ ಅವರು ಇಂದು ಅಸ್ಥಿ ವಿಸರ್ಜನೆಯನ್ನು, ವೇದಬ್ರಹ್ಮ ಡಾಕ್ಟರ್ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬ್ರಾಹ್ಮಣ ಸಂಪ್ರದಾಯದಂತೆ ಅಸ್ಥಿಗೆ ಪಂಚಾಮೃತ, ಪಂಚಗವ್ಯ ಅಭಿಷೇಕವನ್ನು ಮಾಡಿ, ನಂತರ ದೂಪ ದೀಪ ನೈವೇದ್ಯದಿಂದ ಕಾವೇರಿ ಮಾತೆಗೆ ಫಲಗಳ ಅರ್ಪಣೆ ಮಾಡಿ ಪಶ್ಚಿಮ ವಾಹಿನಿಯಲ್ಲಿ ಅವರ ಅಸ್ಥಿಯನ್ನು ವಿಸರ್ಜನೆ ಮಾಡಲಾಯಿತು.

    ತುಲಾಮಾಸದಲ್ಲಿ ಗಂಗೆಯೇ ಕಾವೇರಿಯಲ್ಲಿ ವಾಸ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದು, ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿತ್ತು. ಅಸ್ಥಿ ವಿಸರ್ಜನೆ ವೇಳೆ ಅನಂತಕುಮಾರ್ ಕುಟುಂಬಸ್ಥರು, ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ, ರಾಮದಾಸ್, ಪ್ರತಾಪ್ ಸಿಂಹ, ಶ್ರೀರಂಗಪಟ್ಟಣದ ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಅವರು ಸೋಮವಾರ ನಸುಕಿನ ಜಾವ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿರೋ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸೋಮವಾರ ಅಂತಿಮ ದರ್ಶನ ಪಡೆದಿದ್ದರು.

    ಅದಮ್ಯ ಚೇತನ, ದೆಹಲಿಯ ಕನ್ನಡದ ಧ್ವನಿ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ಕರ್ನಾಟಕ ಬಿಜೆಪಿಯ ಆಧಾರಸ್ತಂಭ ಅನಂತಕುಮಾರ್‍ರ ಪಾರ್ಥಿವ ಶರೀರವನ್ನು ಮಂಗಳವಾರ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗಿತ್ತು. ಪುರೋಹಿತ ಶ್ರೀನಾಥ್ ಅವರ ನೇತೃತ್ವದಲ್ಲಿ ಸಹೋದರ ನಂದಕುಮಾರ್ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿ, ಅಗ್ನಿ ಸ್ಪರ್ಶ ಮಾಡಿದ್ದರು. ಈ ವೇಳೆ ಅನಂತ ಕುಮಾರ್ ಅವರ ಕುಟುಂಬಸ್ಥರು, ಸಂಬಂಧಿಕರು, ಆಪ್ತರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews