ಎಸ್‌ಎಂ ಕೃಷ್ಣ ಅವರು ತಿರುಪತಿ ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿದ್ದೇ ತಡ ಅದು ಅವರ ಜೀವನದಲ್ಲಿ ಒಂದು ವಿಶೇಷ ಬೆಳವಣಿಗೆಗೆ ನಾಂದಿ ಹಾಡಿತ್ತು. ಈ ಮೂಲಕ ಕೇಂದ್ರ ಸಚಿವರಾಗುವ ಸುದ್ದಿ ಸಿಕ್ಕಿತ್ತು.
ಹೌದು, 1983ರಲ್ಲಿ ಎಸ್.ಎಂ.ಕೃಷ್ಣ ಅವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಆ ಸಮಯದಲ್ಲಿ ಮಂಗಳಾರತಿ ತೆಗೆದುಕೊಳ್ಳಬೇಕಾದರೆ ಅವರ ವಾಚು ಕೈಯಿಂದ ಕಳಚಿ ಬಿತ್ತು. ಇದನ್ನು ದೇವಾಲಯದ ಅರ್ಚಕರು ಗಮನಿಸಿ, ಕೃಷ್ಣರ ಸ್ನೇಹಿತರಾಗಿದ್ದ ಸಿಂಗಾರಿಗೌಡರಿಗೆ ಕಳಚಿದ ವಾಚ್‌ನ್ನು ಹುಂಡಿಗೆ ಹಾಕಿಸಿ ಎಂದು ಹೇಳಿದರು.ಇದನ್ನೂ ಓದಿ: ದಿನ ಭವಿಷ್ಯ 11-12-2024
ಅದಾದ ಬಳಿಕ ಮತ್ತೆ ಅವರ ಪತ್ನಿ ಪ್ರೇಮಾ ಅವರ ಜೊತೆ ತಿರುಪತಿ ಹೋಗಿದ್ದರು. ಆಗ ತಮ್ಮ ವಾಚ್‌ನ್ನು ತಿಮ್ಮಪ್ಪನ ಹುಂಡಿಗೆ ಹಾಕಿ ಬಂದಿದ್ದರು. ಅಂದು ಮರಳಿ ಬೆಂಗಳೂರಿಗೆ ಬಂದು, ಮತ್ತೆ ಸಂಜೆ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಿದ್ದರು. ಟೆನಿಸ್ ಕ್ಲಬ್‌ಗೆ ತೆರಳಿ ಆಡುತ್ತಿದ್ದರು. ಆ ದಿನ ರಾತ್ರಿ ದೆಹಲಿ ಬರುವಂತೆ ತುರ್ತು ಕರೆ ಬಂದಿದೆ.
ದೆಹಲಿಗೆ ತೆರಳಿದ ಎಸ್‌ಎಂ ಕೃಷ್ಣ ಅವರು ಪ್ರಧಾನಿ ಇಂದಿರಾ ಗಾಂಧಿ ಭೇಟಿಯಾದರು. ಆಗ ಪ್ರಧಾನಿಯವರು ಕೃಷ್ಣ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಸುದ್ದಿ ಸಿಕ್ಕಿತ್ತು. ಬಳಿಕ ಪ್ರಮಾಣವಚನ ಸ್ವೀಕಾರ ಮಾಡಿ ಕೇಂದ್ರ ಸಚಿವರೂ ಆದರು. ಇದು ಅವರ ಜೀವನದಲ್ಲಾದ ವಿಶೇಷ ಬೆಳವಣಿಗೆ. ತಿರುಪತಿ ದೇವರ ಸನ್ನಿಧಿಯಲ್ಲಿ ಮಾತ್ರ ಇಂತಹ ಪವಾಡ ನಡೆಯಲು ಸಾಧ್ಯ ಎಂದು ಎಸ್‌ಎಂಕೆ ನಂಬಿದ್ದರು. ಅವರಿಗೆ ದೇವರಲ್ಲಿ ಅಪಾರ ನಂಬಿಕೆ ಇತ್ತು. ಆದರೆ ಅದನ್ನು ಬಹಿರಂಗವಾಗಿ ಎಲ್ಲಿಯೂ ತೋರಿಸಿಕೊಡುತ್ತಿರಲಿಲ್ಲ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 11-12-2024
– ರಾಜನಾಥ್ ಸಿಂಗ್, ಹೆಚ್‌ಡಿಕೆ, ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ
ನವದೆಹಲಿ: ರಾಜ್ಯದ ಕೈಗಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರ ಸರ್ಕಾರದ ಸಹಕಾರ ಕೋರಿ ಮತ್ತು ಅಗತ್ಯ ಬಂಡವಾಳ ಹೂಡಿಕೆ ನಿರೀಕ್ಷಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮೂವರು ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ.
2025ರ ಫೆ.12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಎಂ.ಬಿ ಪಾಟೀಲ ಅವರು ದೆಹಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ಮೊದಲ ದಿನ ಎಡೆಬಿಡದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
ಮೊದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು, ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ಡಿಫೆನ್ಸ್ ಕಾರಿಡಾರ್ ಸ್ಥಾಪನೆಯ ಜರೂರು, ರಾಜ್ಯದಲ್ಲಿರುವ ಬಿಎಚ್‌ಇಎಲ್ ಮತ್ತು ಬಿಇಎಂಎಲ್ ತರಹದ ಕೇಂದ್ರೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ನೀಡಬೇಕು ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವಿನ ಬಗ್ಗೆ ಚರ್ಚಿಸಿದರು.
ಬಳಿಕ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಜೊತೆ ಮಾತನಾಡಿ, ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನಿರ್ಣಾಯಕ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು. ಇ.ವಿ. ವಲಯದಲ್ಲಿ ನವೋದ್ಯಮಗಳಿಗೆ 10 ಸಾವಿರ ಕೋಟಿ ರೂ. ಪೂರೈಸಲು ಎದುರಾಗಿರುವ ಸವಾಲು, ಫೇಮ್-3 ಯೋಜನೆಯ ಜಾರಿಯಲ್ಲಿ ಆಗುತ್ತಿರುವ ವಿಳಂಬ, ರಕ್ಷಣಾ ತಂತ್ರಜ್ಞಾನ ಹಬ್‌ಗಳ ಸ್ಥಾಪನೆಯ ಜರೂರು, ಬೆಂಗಳೂರು ಗ್ರಾಮಾಂತರದಲ್ಲಿ ಇಎಂಸಿ ಕ್ಲಸ್ಟರ್ ಸ್ಥಾಪನೆಗೆ ಬಾಕಿ ಇರುವ ಅನುಮೋದನೆಯ ಕುರಿತು ಮಾತನಾಡಿದರು.
ಹಾರೋಹಳ್ಳಿ, ಕುಡುತಿನಿ ಮತ್ತು ದೇವಕತ್ತಿಕೊಪ್ಪದಲ್ಲಿ ಕೈಗಾರಿಕಾ ಯೋಜನೆಗಳಿಗೆ ಬಾಕಿ ಇರುವ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ, ಸೆಮಿಕಂಡಕ್ಟರ್ ಕಂಪನಿ ಸ್ಥಾಪನೆಯ ತುರ್ತು ಮತ್ತು ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ರೂಪಿಸಿರುವ 12 ಸ್ಮಾರ್ಟ್ ಸಿಟಿ ಯೋಜನೆಯಿಂದ ಕರ್ನಾಟಕವನ್ನು ಹೊರಗಿಟ್ಟಿರುವುದರ ಬಗ್ಗೆ ಮಾತುಕತೆ ನಡೆಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿ, ಬೇಗನೆ ಹಾಳಾಗುವಂತಹ ಪದಾರ್ಥಗಳನ್ನು ವಿಮಾನದ ಮೂಲಕ ಹೊರದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್‌ಟಿ ತೆರಿಗೆಯನ್ನು ರದ್ದುಪಡಿಸಬೇಕು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ಈಗ ಇರುವ ಭಾರೀ ಆಮದು ತೆರಿಗೆ ಮತ್ತು ಸುಂಕವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಪುನರ್ ವಿಮರ್ಶೆ ನಡೆಸಬೇಕು – ಎಂ.ಸಿ.ಸುಧಾಕರ್
ಸಿಂಗಪೂರ್ ಹೈಕಮೀಷನರ್ ಭೇಟಿ
ಇದಕ್ಕೂ ಮುನ್ನ ಎಂ.ಬಿ ಪಾಟೀಲ, ಸಿಂಗಪುರ್ ಹೈಕಮಿಷನರ್ ಸೈಮನ್ ವಾಂಗ್ ಅವರನ್ನು ಭೇಟಿಯಾಗಿ, ಫೆಬ್ರವರಿಯಲ್ಲಿ ನಡೆಯಲಿರುವ ಹಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಅವರು, ಇತ್ತೀಚೆಗೆ ಭಾರತ ಮತ್ತು ಸಿಂಗಪೂರ್ ಸೆಮಿಕಂಡಕ್ಟರ್, ಡಿಜಿಟಲ್ ಸಹಕಾರ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಮಾಡಿಕೊಂಡಿರುವ ಒಡಂಬಡಿಕೆ ಕುರಿತು ಚರ್ಚಿಸಿದರು.
ಇದಕ್ಕೆ ಸ್ಪಂದಿಸಿದ ಹೈಕಮಿಷನರ್, ನೆಟ್-ಜೀರೋ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸಲು ತಮಗಿರುವ ಆಸಕ್ತಿಯನ್ನು ಮತ್ತು ಜೊತೆಗೆ ಡೇಟಾ ಕೇಂದ್ರಗಳು, ಎಂಆರ್ ಓ, ವೈದ್ಯಕೀಯ ಉಪಕರಣಗಳು ಮತ್ತು ಔಷಧ ಕಂಪನಿಗಳಲ್ಲಿ ಹೂಡಿಕೆ ಮಾಡಲು ತಮ್ಮ ದೇಶದ ಕಂಪನಿಗಳಿರುವ ಒಲವನ್ನು ಹಂಚಿಕೊಂಡರು.
– ಅಂದು ನಾನೂ ಕುತಂತ್ರಕ್ಕೆ ಬಲಿಯಾಗಿದ್ದೆ
– ಮೋದಿ ಮಾತು ಕೇಳಿದ್ದರೆ ನಾನೇ ಸಿಎಂ ಆಗಿರುತ್ತಿದ್ದೆ
– ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವರ ಮಾತು
ಬೆಂಗಳೂರು: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗಿಂದು ಅದ್ಧೂರಿ ಸ್ವಾಗತ ಕೋರಲಾಯಿತು. ಮಹಿಳಾ ಘಟದ ಕಾರ್ಯಕರ್ತರು ಆರತಿ ಬೆಳಗಿ ಸ್ವಾಗತ ಕೋರಿದರು. ಅಲ್ಲದೇ ಜೆಡಿಎಸ್ ವತಿಯಿಂದ ಇಲ್ಲಿನ ಜೆಪಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ (Felicitation Ceremony) ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕರ್ತರು ಪುಷ್ಪನಮನ ಸಲ್ಲಿಸಿ, ಕುಣಿದು ಕುಪ್ಪಳಿಸಿದರು.
ಮಂತ್ರಿ ಸ್ಥಾನ ಕರ್ನಾಟಕದ ಜನರಿಗೆ ಅರ್ಪಣೆ: ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಹೆಚ್‌ಡಿಕೆ, ಪಕ್ಷದ ಕಾರ್ಯಕರ್ತರ ದುಡಿಮೆಗೆ 2008 ರಿಂದ ಯಾವುದೇ ರೀತಿಯ ಪ್ರತಿಫಲ ಸಿಕ್ಕಿರಲಿಲ್ಲ. ಅಂತಹ ಸಮಯದಲ್ಲಿ ಪಕ್ಷವನ್ನ ಉಳಿಸಿದ ಬೆಳೆಸಿದ ಲಕ್ಷಾಂತರ ಕಾರ್ಯಕರ್ತರು ಈ ರಾಜ್ಯದಲ್ಲಿ ಇದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ. ಮೋದಿ (Narendra Modi) ಅವರು 2 ಬಾರಿ ಪ್ರಧಾನಿಯಾಗಿ ಉತ್ತಮವಾಗಿ ಕೆಲಸ ಮಾಡಿ, 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಮಂತ್ರಿ ಮಂಡಲದಲ್ಲಿ ಕೇಂದ್ರದ ಮಂತ್ರಿ ಆಗಿದ್ದೇನೆ, ನನ್ನ ಪಾಲಿಗೆ ಬಂದಿರೋ ಈ ಮಂತ್ರಿ ಸ್ಥಾನವನ್ನ ಕರ್ನಾಟಕದ ಜನರಿಗೆ ಅರ್ಪಣೆ ಮಾಡ್ತೀನಿ ಎಂದು ಭಾವುಕರಾದರು.
ಮೋದಿಗೆ ಧನ್ಯವಾದ: 2018ರ ದಿನವನ್ನ ನಾನು ನೆನಪು ಮಾಡಿಕೊಳ್ತೀನಿ. ಅವತ್ತು ಬಹುಮತ ಬಾರದೇ ಇದ್ದಾಗ ಕಾಂಗ್ರೆಸ್‌ನವರು ಬಂದರು. ಕಾಂಗ್ರೆಸ್‌ನ ದೆಹಲಿ ನಾಯಕರು ದೇವೇಗೌಡರ ಮನೆಗೆ ಬಂದು ಒತ್ತಾಯ ಹಾಕಿ ನನಗೆ ಬಲವಂತವಾಗಿ ಸಿಎಂ ಸ್ಥಾನ ಕೊಟ್ಟಿದ್ದರು. ಇವತ್ತು ನಾನು ದೆಹಲಿಯಿಂದ ಕನ್ನಡ ನಾಡಿನ ಮಣ್ಣಿಗೆ ಪಾದಾರ್ಪಣೆ ಮಾಡಿದ್ದೇನೆ. ಆವತ್ತು ನಾನು ಸಿಎಂ ಇದ್ದಾಗ ಇದೇ ಜಾಗದಲ್ಲಿ ಸನ್ಮಾನ ಮಾಡಿದ್ರಿ. ಅಂದು ಕಣ್ಣಲ್ಲಿ ನೀರು ಹಾಕಿದ್ದೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದಾಗ ನಮ್ಮನ್ನ ಯಾವ ರೀತಿ ನಡೆಸಿ ಕೊಂಡಿದ್ದರು ಅಂತ ಹೇಳಿದ್ದೆ. ವಿಷಕಂಠ ಆಗಿದ್ದೇ ಅಂತ ಹೇಳಿದ್ದೆ. ಆದರೆ ಇವತ್ತು ನಾನು ಅತ್ಯಂತ ಸಂತೋಷದಿಂದ ಯಾವುದೇ ಕಲ್ಮಷ ಇಟ್ಟುಕೊಳ್ಳದೇ ಪ್ರಾಮಾಣಿಕ ನನ್ನ ಮಾತು ಹೇಳ್ತಿದ್ದೇನೆ. ಮೊದಲಿಗೆ ಮೋದಿ ಅವರಿಗೆ ಕಾರ್ಯಕರ್ತ ಸಮ್ಮುಖದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದು ನುಡಿದರು.
ನಾನೂ ಕುತಂತ್ರಕ್ಕೆ ಬಲಿಯಾಗಿದ್ದೆ: ಕಾಂಗ್ರೆಸ್ ಜೊತೆ ರಾಜ್ಯದಲ್ಲಿ ಸರ್ಕಾರ ಮಾಡಿ ಏನ್ ಆಯ್ತು ಅಂತ ಜನರಿಗೆ ಗೊತ್ತಿದೆ. ಆವತ್ತು ಸಹ ಕಾಂಗ್ರೆಸ್ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡೋಕೆ ಬಿಡಲಿಲ್ಲ. ಹೀಗಾಗಿ ನಾನು ಶಾಸಕರ ಜೊತೆ ಸೇರಿ ಮುಂದೆ ಹೆಜ್ಜೆ ಇಟ್ಟಿದ್ವಿ. ಆದಾಗ ಬಳಿಕ ನಮ್ಮ ಮತ್ತು ಬಿಜೆಪಿ ಶಾಸಕರು ಸರ್ಕಾರ ಮಾಡೋಣ ಅಂತ ಹೋದ್ವಿ. ನಾನು ಆವತ್ತು ಎಂ.ಪಿ ಪ್ರಕಾಶ್ ಅವರಿಗೆ ನೀವೇ ಆಗಿ ಅಂತ ಹೇಳಿದ್ದೇ. ನಾನು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಅಂತ ಇದ್ದವನು ನಾನು, ಆದ್ರೆ ಅವರಿಗೆ ಅಧಿಕಾರ ಕೊಡಬಾರದು ಅಂತ ಕುತಂತ್ರ ನಡೆಯಿತು. ನಾನೂ ಸಹ ಆ ಕುತಂತ್ರಕ್ಕೆ ಬಲಿಯಾದೆ. ನಾನು ಪಕ್ಷ ಉಳಿಸಿಕೊಳ್ಳೋಕೆ 20 ತಿಂಗಳು ಕೆಲಸ ಮಾಡಿದೆ. ಅಂದು ಸಹ ನಾನು ಹಣದ ವ್ಯಾಮೋಹ ಬಲಿಯಾಗಿಲ್ಲ. ಲಾಟರಿ ನಿಷೇಧ ಮಾಡಿದೆ, ಸಾರಾಯಿ ನಿಷೇಧ ಮಾಡಿದೆ. ಪಕ್ಷ ಕಟ್ಟಬೇಕು ಅಂತ ಗ್ರಾಮ ವಾಸ್ತವ್ಯ ಮಾಡಿದೆ. ಹಣ ಮಾಡೋಕೆ ಇಷ್ಟಪಡೆಯಲಿಲ್ಲ ಎಂದು ಭಾವುಕರಾದರು.
ಜೆಡಿಎಸ್ ನಾಶ ಮಾಡ್ತೀವಿ ಅಂದಿದ್ದರು: ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರೋಣ ಅಂತ ಪ್ರಯತ್ನ ಮಾಡಿದೆ, ನನ್ನ ಆರೋಗ್ಯ ಲೆಕ್ಕಿಸದೇ ಕೆಲಸ ಮಾಡಿದೆ. ನಾನು ಅದರಲ್ಲಿ ಯಶಸ್ವಿಯಾಗಲಿಲ್ಲ. ನಾನು ಹೋದ ಕಡೆ ಜನ ಸೇರುತ್ತಾರೆ. `ಪಂಚರತ್ನ’ ಯಾತ್ರೆಗೆ ಲಕ್ಷಾಂತರ ಜನ ಸೇರಿದ್ದರು. ವಿವಿಧ ಬಗೆಯ ಹಾರಗಳನ್ನ ಹಾಕಿದ್ರು, ಗಿನ್ನಿಸ್ ರೇಕಾರ್ಡ್ ಆಯ್ತು. ಇಷ್ಟೆಲ್ಲ ಶ್ರಮ ಹಾಕಿದರೂ 19 ಸೀಟ್‌ಗೆ ಇಳಿಯಿತು. ಜೆಡಿಎಸ್ ಮುಗಿದೇ ಹೋಯ್ತು. ಪಕ್ಷಕ್ಕೆ ಬನ್ನಿ ಅಂತ ಕಾಂಗ್ರೆಸ್ ಅವರು ಕರೆಯುತ್ತಿದ್ದರು, ಕ್ಷೇತ್ರದ ಕೆಲಸಕ್ಕೆ ಹೋದ್ರೆ ಹಣ ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂತ ಹಣ ಕೋಡೋಕೆ ಬಂದಿದ್ದರು. ಜೆಡಿಎಸ್ ನಾಶ ಮಾಡ್ತೀವಿ ಅಂತ ಹೋದ್ರು. ಇವತ್ತು ಎಲ್ಲಿಗೆ ಬಂದು ನಿಂತಿದೆ? 2018ರಲ್ಲಿ ರಾಜ್ಯದ ವಿಷಯಗಳ ಬಗ್ಗೆ ಮೋದಿ ಅವರಿಗೆ ಮಾತಾಡೋಕೆ ಹೋಗಿದ್ದೆ, ಆಗ ನಿನ್ನ ಕೆಲಸಕ್ಕೆ ಬೆಲೆ ಇಲ್ಲ. ನೀನು ರಾಜೀನಾಮೆ ಕೊಟ್ಟು ಬಾ, ನೀನೇ ಸಿಎಂ ಆಗು ಅಂತ ಮೋದಿ ಹೇಳಿದ್ದರು. ಆವತ್ತು ಮೋದಿ ಮಾತು ಕೇಳಿದ್ದರೆ ಕಾರ್ಯಕರ್ತರು ಇಷ್ಟು ಕಷ್ಟ ಪಡುತ್ತಿರಲಿಲ್ಲ. ಆ ಅವಕಾಶ ನಾನೇ ಕಳೆದುಕೊಂಡೆ ಎಂದು ಕಹಿ ಸತ್ಯಗಳನ್ನು ಕಾರ್ಯಕರ್ತರ ಮುಂದೆ ಬಿಟ್ಟಿಟ್ಟರು.
ಈಗಲೂ ನಮ್ಮ ಜೊತೆಗೂಡಿ ಕೆಲಸ ಮಾಡು ಅಂತ ಮೋದಿ ಅವರು ಗೌರವ ಕೊಟ್ಟಿದ್ದಾರೆ. ಈ ಗೌರವ ಕಾರ್ಯಕರ್ತರಿಗೆ ಸೇರುತ್ತದೆ. ಇಲ್ಲದೇ ಹೋಗಿದ್ದರೆ ನಮ್ಮನ್ನ ಕೇಳೋರು ಯಾರು? ಕಾರ್ಯಕರ್ತರ ಪ್ರೀತಿಗೆ ಫಲ ಸಿಕ್ಕಿದೆ. ನಾವು ಗೆದ್ದಿರೋದು ಎರಡು ಸ್ಥಾನ. ಹಾಸನ ಜನರಿಗೆ ದೋಷ ಕೊಡೊಲ್ಲ, ಹಾಸನದ ಜನ ಕೊಟ್ಟಿರೋ ಶಕ್ತಿ ಕೊನೆ ಉಸಿರು ಇರೋ ವರೆಗೂ ಮರೆಯೊಲ್ಲ. ಕೆಲವು ರಾಜಕೀಯ ಆಯ್ತು. ಅದಕ್ಕೂ ಕಾಲ ಬರುತ್ತದೆ ಎಂದು ಹೇಳಿದರು.
ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ, ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಮೃದ್ಧಿ ಮಂಜುನಾಥ್, ಸಂಸದ ಮಲ್ಲೇಶ್ ಬಾಬು, ವೈಎಸ್‌ವಿ ದತ್ತಾ ಸೇರಿ ಶಾಸಕರು, ಮಾಜಿ ಶಾಸಕರು, ಪಕ್ಷದ ನಾಯಕರು ಭಾಗಿ ಪಾಲ್ಗೊಂಡಿದ್ದರು.
ಭೋಪಾಲ್: ಮಧ್ಯಪ್ರದೇಶದ (Madhya Pradesh) ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ (Central Minister Pralhad Patel) ಅವರಿದ್ದ ಕಾರು ಅಪಘಾತಕ್ಕೀಡಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಈ ಘಟನೆ ಇಂದು (ಮಂಗಳವಾರ) ನಡೆದಿದೆ. ಸಚಿವರು ನವೆಂಬರ್ 17ರಂದು ನಡೆಯಲಿರುವ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂದ್ವಾರದಿಂದ ನರಸಿಂಗ್‍ಪುರ ಕಡೆ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಿರಂಜನ್ ಚಂದ್ರವನ್‍ಶಿ ಎಂದು ಗುರುತಿಸಲಾಗಿದೆ. ನಿರಂಜನ್ ಮಕ್ಕಳಾದ ನಿಖಿಲ್ ನಿರಂಜನ್ (7) ಮತ್ತು ಸಂಸ್ಕರ್ ನಿರಂಜನ್ (10) ಗಾಯಗೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ನಿರಂಜನ್ ತಮ್ಮ ಮಕ್ಕಳೊಂದಿಗೆ ಬೈಕ್‍ನಲ್ಲಿ ಮನೆಗೆ ಮರಳುತ್ತಿದ್ದರು. ಇದನ್ನೂ ಓದಿ: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಮನಸ್ಸೋ ಇಚ್ಛೆ 58 ಬಾರಿ ಇರಿದು ಕೊಂದ್ರು
#WATCH | Union Minister and BJP candidate from Narsinghpur, Prahlad Patel's convoy meets with a road accident in Amarwara of Chhindwara district in Madhya Pradesh. The minister was travelling from Chhindwara to Narsinghpur. pic.twitter.com/k9vQvQWxda
ಘಟನೆಯಲ್ಲಿ ನಿರಂಜನ್ ಎಂಬವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇವರೆಲ್ಲರೂ ನಾಗ್ಪುರ ನಿವಾಸಿಗಳು. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಧೀರ್ ಜೈನ್ ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಓರ್ವನ ತಲೆಗೆ ಏನು ಬಿದ್ದಿದೆ. ಇದರಲ್ಲಿ 10 ವóದ ಬಾಲಕನ ಸ್ಥಿತಿ ಗಂಭೀರವಾಗಿದೆ. ಜತಿನ್‍ಗೆ ಕೂಡ ಗಾಯಗಳಾಗಿವೆ. ಮೂವರು ಗಾಯಾಳುಗಳನ್ನು ಕೂಡ ನಾಗ್ಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದರಲ್ಲಿ 33 ವರ್ಷದ ನಿರಂಜನ್ ಚಂದ್ರವಂಶಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಿವಿಲ್ ಸರ್ಜನ್ ಡಾ ಎಂಕೆ ಸೋನಿಯಾ ಹೇಳಿದ್ದಾರೆ.
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹವಾ ಇವತ್ತು ಬೆಂಗಳೂರಿನಲ್ಲಿ ಭರ್ಜರಿಯಾಗಿ ಇತ್ತು. ಹಲವು ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗವಹಿಸಿದರು. ನೃಪತುಂಗ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಿಂಚಿನ ಸಂಚಾರ ಮಾಡಿದರು.
ನೃಪತುಂಗ ವಿಶ್ವವಿದ್ಯಾಲಯ ಉದ್ಘಾಟನೆಯನ್ನ ಅಮಿತ್ ಶಾ ಮಾಡಿದರು. ಇದರ ಜೊತೆಗೆ ವಿಶ್ವವಿದ್ಯಾಲಯದ ಲೋಗೋ ಅನಾವರಣ ಮಾಡಿದ ಶಾ, ವಿವಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದರು. ಸರ್ಕಾರಿ ಕಲಾ ಕಾಲೇಜು ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಗೆ ಆಗಮಿಸಿದ ಕೂಡಲೇ ವಿದ್ಯಾರ್ಥಿಗಳು ಅಮಿತ್ ಶಾರಿಗೆ ಜೈಕಾರದ ಸ್ವಾಗತ ಮಾಡಿದರು. ವಿದ್ಯಾರ್ಥಿಗಳಿಗೆ ಕೈಬೀಸಿ ಅಭಿಮಾನದಿಂದ ಅಮಿತ್ ಶಾ ವಿದ್ಯಾರ್ಥಿಗಳ ಸ್ವಾಗತ ಸ್ವೀಕಾರ ಮಾಡಿದರು.
ನೃಪತುಂಗ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಭವ್ಯ ಭಾರತದ ಕನಸ್ಸನ್ನ ವಿದ್ಯಾರ್ಥಿಗಳ ಮುಂದೆ ಇಟ್ಟರು. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಆಗುವ ವೇಳೆಗೆ ಭಾರತ ವಿಶ್ವಗುರು ಆಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕೆಲಸ ಮಾಡ್ತಿದ್ದಾರೆ ಅಂತ ತಿಳಿಸಿದ್ರು. ಯುವ ಸಮೂಹ ಸಣ್ಣ ಸಣ್ಣ ವಿಚಾರಗಳ ಮೂಲಕ ಸಂಕಲ್ಪ ಮಾಡಬೇಕು ಅಂತ ಕರೆ ನೀಡಿದರು. ಇದನ್ನೂ ಓದಿ: ಪ್ರತಿಯೊಬ್ಬರು ಪರಸ್ಪರ ಧರ್ಮವನ್ನು ಗೌರವಿಸಬೇಕು: ನಿತೀಶ್ ಕುಮಾರ್
ಜಮ್ಮು-ಕಾಶ್ಮೀರದ 370 ರದ್ದು ಮಾಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದು ಪ್ರಧಾನಿ ಮೋದಿ ಅವರು ಅಂತ ಮೋದಿ ಕಾರ್ಯ ಶ್ಲಾಘಿಸಿದರು. ದೇಶದಲ್ಲಿ ಮೆಡಿಕಲ್ ಕಾಲೇಜು, ಕೇಂದ್ರೀಯ ವಿವಿಗಳು, ಐಐಟಿಗಳನ್ನ ಹೊಸದಾಗಿ ದೇಶಾದ್ಯಂತ ಮೋದಿ ಅವರು ಸ್ಥಾಪನೆ ಮಾಡಿದ್ದಾರೆ ಅಂತ ತಿಳಿಸಿದರು. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಿರೋದಕ್ಕೆ ಅಭಿನಂದನೆ ಸಲ್ಲಿಸಿದರು. ನದಿ ಜೋಡಣೆ ಕೆಲಸ ಮೋದಿ ಅವರು ಮಾಡ್ತಿದ್ದಾರೆ. ಗಡಿ ವಿವಾದಗಳಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಅಂತ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮಿತ್ ಶಾರಿಗೆ ಮೈಸೂರು ಪೇಟಾ ತೊಡಿಸಿ, ಸರಸ್ವತಿ ಪ್ರತಿಮೆ ನೀಡಿ ಸನ್ಮಾನಿಸಲಾಯ್ತು. ಇದೇ ಕಾರ್ಯಕ್ರಮದಲ್ಲಿ ಬಳ್ಳಾರಿಯ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಇ-ಬೀಟ್ ವ್ಯವಸ್ಥೆಗೆ ವಚ್ರ್ಯುಯಲ್ ಮೂಲಕ ಅಮಿತ್ ಶಾ ಚಾಲನೆ ಕೊಟ್ಟರು.
ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಉಕ್ರೇನ್ ಮೇಲೆ ರಷ್ಯಾ ಸೈನಿಕರು ದಾಳಿ ಮಾಡುತ್ತಿದ್ದು, ಅಲ್ಲಿ ಸಿಲುಕಿರುವ ಭಾರತೀಯರು ಆತಂಕ ಹೊರಹಾಕುತ್ತಿದ್ದಾರೆ. ಆದಷ್ಟು ಬೇಗ ನಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಕಣ್ಣೀರಾಕುತ್ತಿದ್ದಾರೆ.
Civil Aviation Minister @JM_Scindia provides a healing touch to medical students from Maharashtra waiting at the Bucharest airport ! Speaks in Marathi, reassures all assistance ! This is how crises are handled by @narendramodi Govt ! #OperationGanga ! pic.twitter.com/jse1HtRj0L
ಇತ್ತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ, 4 ಕೇಂದ್ರ ಸಚಿವರನ್ನು ನಿಯೋಜಿಸಿ ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಕಳುಹಿಸಿದೆ. ಅದರಂತೆ ಸಚಿವರು ಈಗಾಗಲೇ ಅಲ್ಲಿಗೆ ತೆರಳಿದ್ದು, ಆ ದೇಶದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಡುವ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್
Met & interacted with Indian students awaiting their flights at the Bucharest Airport.Overwhelmed by their grit & concerned by their anxiety amid the tough times.However, assured them of their quick departure from Bucharest. PM @narendramodi ji & all of India have got their back! pic.twitter.com/g386wfg2zh
— Jyotiraditya M. Scindia (@JM_Scindia) March 1, 2022
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೊಮೇನಿಯಾದ ಬುಕಾರೆಸ್ಟ್ ತಲುಪಿದ್ದಾರೆ. ಬುಧವಾರ ಅಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಸಿಂಧಿಯಾ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು, ಚಿಂತೆ ಮಾಡಬೇಡಿ, ನಾನು ಎಲ್ಲರನ್ನು ಮನೆಗೆ ಕಳುಹಿಸುತ್ತೇನೆ ಎಂದು ಧೈರ್ಯ ಹೇಳಿದರು. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್ ನಾಯಕರಿಗೆ ಉಕ್ರೇನ್ ಅಧ್ಯಕ್ಷ ಕರೆ
Met the Indian Ambassador to Romania & Moldova, Sh Rahul Shrivastava Ji to discuss the operational issues for evacuation and the flight plan from Bucharest & Suceava in the coming days. #OperationGanga in full gear! pic.twitter.com/I9h0N45IuA
— Jyotiraditya M. Scindia (@JM_Scindia) March 1, 2022
ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ಸಿಂಧಿಯಾ, ಇಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ದಾಳಿಯಿಂದ ತತ್ತರಿಸಿರುವ ಜನರಿಗೆ ಧೈರ್ಯ ತುಂಬಲಾಗಿದೆ. ಇವರನ್ನು ತಕ್ಷಣವೇ ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ
Thank you PM @narendramodi for sending ur ministers to countries bordering Ukraine 🇺🇦
Contrary to what rabble-rousers believe, this move will effectively aid in rescue ops
World is watching how India leaves no citizen behind, when even “superpowers” have disowned their people pic.twitter.com/SkOdlE2Frx
ಇತ್ತ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಹಂಗೇರಿಯಲ್ಲಿ, ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ, ವಿಕೆ ಸಿಂಗ್ ಪೋಲೆಂಡ್‍ನಲ್ಲಿ ಭಾರತೀಯರ ತೆರವು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಉಕ್ರೇನ್ ನೆರೆಯ ನಾಲ್ಕು ದೇಶಗಳಿಂದ ಮೂರು ದಿನಗಳಲ್ಲಿ ಸುಮಾರು 5000 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಪ್ಲ್ಯಾನ್ ಮಾಡಲಾಗುತ್ತಿದೆ. ಆಪರೇಷನ್ ಗಂಗಾ ಮಿಷನ್ ಗೆ ಸಿ 17 ವಿಮಾನ ಬಳಕೆ ಮಾಡಲಾಗುತ್ತಿದೆ. ಇಂದೇ ಎರಡು ದೇಶಗಳಿಗೆ ಸಿ 17 ವಿಮಾನ ತೆರಳು ಸಾಧ್ಯತೆ ಇದ್ದು, ಮುಂದಿನ 3-4 ದಿನಗಳಲ್ಲಿ ಬೃಹತ್ ಕಾರ್ಯಚರಣೆ ನಡೆಯಲಿದೆ. ಕಳೆದ ಆರು ದಿನಗಳಲ್ಲಿ ಕೇವಲ ಎರಡು ಸಾವಿರ ವಿದ್ಯಾರ್ಥಿಗಳ ಸ್ಥಳಾಂತರ ಮಾಡಲಾಗಿದ್ದು, ನವೀನ್ ಸಾವಿನ ಬೆನ್ನಲೆ ತುರ್ತು ಕಾರ್ಯಚರಣೆಗೆ ವಿದೇಶಾಂಗ ಇಲಾಖೆ ಇಳಿದಿದೆ.
ಧಾರವಾಡ: ಉಪಚುನಾವಣೆ ಇದ್ದಾಗ ಸರ್ಕಾರ ಹಾಗೂ ಸರ್ಕಾರದ ಮಂತ್ರಿಗಳು ನಿಲ್ಲುವುದು ಸಹಜ, ಹಿಂದೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆ ನಡೆದಾಗ ಸಿದ್ದರಾಮಯ್ಯನವರು ಅಲ್ಲೇ ಟೆಂಟ್ ಹೊಡೆಡಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಯಾರು ಇರ್ತಾರೆ ಅವರು ಉಪಚುನಾವಣೆ ಗೆಲ್ಲಿಸಲು ನಿಲ್ಲುವುದು ಸಹಜ ಎಂದರು. ಎರಡು ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದರೆ 53 ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಡಿಪಾಸಿಟ್ ಕಳೆದುಕೊಂಡಿದ್ದರೆ ರೂಟ್ ಔಟ್, ನಮಗೂ 76 ಸಾವಿರ ವೋಟು ಹಾಕಿದ್ದಾರೆ ಎಂದರು.
ಸೋಲು ಅಂದರೆ ವಿರೋಧ ಪಕ್ಷದ ಮಾನ್ಯತೆ ಪಡೆಯಲಿಕ್ಕೂ ವಿಫಲರಾಗಿದ್ದು ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ ಜೋಶಿ, ಹಾನಗಲ್‍ನಲ್ಲಿ ಅವರಿಗೆ 4 ಸಾವಿರ ಹೆಚ್ಚು ಮತ ಬಿದ್ದಿವೆ, ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ, 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಸಿಂದಗಿಯಲ್ಲೇ ಟೆಂಟ್ ಹೊಡೆದಿದ್ರು. ಒಟ್ಟಿನಲ್ಲಿ ಗೆದ್ದ ನಂತರ ನಾವು ಭಾರೀ ಬೀಗಬಾರದು, ಸೋತ ನಂತರ ಧೃತಿಗೆಡಬಾರದು ಎಂದು ಜೋಶಿ ಹೇಳಿದರು.
ಲಕ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾಗೆ ಸೇರಿದ ಮಹೀಂದ್ರ ಥಾರ್ ವಾಹನವನ್ನು ಹತ್ತಿಸಿರುವ ವೀಡಿಯೋ ಈಗ ಸಿಕ್ಕಿದೆ. ಆ ವೀಡಿಯೋದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆಯಲ್ಲಿ ತೆರಳ್ತಿದ್ದವರ ಮೇಲೆ ಏಕಾಏಕಿ ವಾಹನವನ್ನು ಹತ್ತಿಸಲಾಗಿದೆ. ಇದನ್ನೂ ಓದಿ: ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‍ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ವಿರುದ್ಧ ರೈತರು ಕಪ್ಪು ಬಾವುಟ ಹಿಡಿದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇವರ ಜೊತೆಗೆ ಬೆಂಗಾವಲು ವಾಹನಗಳ ಸಾಲಿನಲ್ಲಿದ್ದ ಮಹೀಂದ್ರ ಗಾಡಿಯನ್ನು ರೈತರ ಮೇಲೆ ಹತ್ತಿಸಲಾಗಿದ್ದು, ಇದರಲ್ಲಿ ಸಚಿವನ ಪುತ್ರ ಆಶಿಶ್ ಮಿಶ್ರಾ ಇದ್ದ ಎಂದು ರೈತರು ಈಗಾಗಲೇ ಆರೋಪಿಸಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ
ಈ ವಾಹನದ ಹಿಂಭಾಗದಲ್ಲಿ ಬಿಜೆಪಿ ಪಕ್ಷದ ಬ್ಯಾನರ್‍ನ್ನೂ ಕಟ್ಟಲಾಗಿತ್ತು. ವಾಹನ ಹೋದ ಬಳಿಕ ಅದರ ಹಿಂದೆಯೇ ಇನ್ನೊಂದು ಕಾರು ಕೂಡಾ ಹಾದು ಹೋಗಿದೆ. ಕಾರು ಹತ್ತಿಸಿದ್ದರಿಂದ ನಾಲ್ವರು ರೈತರು ಪ್ರಾಣ ಕಳೆದುಕೊಂಡರು. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಹಿಂದಿ ಸುದ್ದಿವಾಹಿನಿ ಓರ್ವ ವರದಿಗಾರ ಕೂಡಾ ಬಲಿಯಾಗಿದ್ದಾರೆ. ಕೃತ್ಯ ಸಂಬಂಧ ಕೇಂದ್ರ ಸಚಿವನ ಮಗನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್
ಮೃತ ರೈತರ ಕುಟುಂಬಸ್ಥರಿಗೆ 45 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ರೈತರ ಮೇಲೆ ವಾಹನ ಹತ್ತಿಸಿರುವ ಕೃತ್ಯವನ್ನು ಖಂಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಸಿಬಿಐ ತನಿಖೆ ನಡೆಸುವಂತೆ ಕೋರಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‍ಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ
ಲಕ್ನೋ: ಕೇಂದ್ರ ಸಚಿವನ ಮಗ ಕಾರು ಹತ್ತಿಸಿದ ಪರಿಣಾಮ ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಆ ಬಳಿಕ ನಡೆದ ಹಿಂಸಾಚಾರದಲ್ಲಿ ಆ ಕಾರಿನಲ್ಲಿದ್ದ ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ.
ಲಖೀಂಪುರ್‍ನಲ್ಲಿ ಉಪ ಮುಖ್ಯಮಂತ್ರಿ ಕೇಶವ್‍ಪ್ರಸಾದ್ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ನೀಡುವ ವೇಳೆ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬೆಂಗಾವಲು ವಾಹನಗಳ ಸಾಲಿನಲ್ಲಿ ಬರುತ್ತಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾನ ಪುತ್ರ ಇದ್ದ ರೈತರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಆ ಬಳಿಕ ಅಲ್ಲಿ ಪ್ರತಿಭಟನೆ ಉದ್ರಿಕ್ತಗೊಂಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದನ್ನೂ ಓದಿ: 20 ವರ್ಷ ಸೇನೆಯಲ್ಲಿ ಸೇವೆ- ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಸೈನಿಕ
ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಇಳಿಯಬೇಕಿದ್ದ ಹೆಲಿಪ್ಯಾಡ್‍ಗೂ ರೈತ ಸಂಘಟನೆಗಳು ಮುತ್ತಿಗೆ ಹಾಕಿದ್ದವು. ಕೃತ್ಯ ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ಇವತ್ತು ದೇಶದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವಂತೆ ರೈತರಿಗೆ ಕರೆ ನೀಡಿವೆ. ಇತ್ತ ಲಖೀಂಪುರ್‍ಗೆ ಹೊರಟ್ಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಗೆ ತಡೆ ಹಾಕಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ರೇಂಜ್‍ರೋವರ್ ಚಾಲನೆ – ನಿಂತಿದ್ದ ವ್ಯಕ್ತಿ ಸಾವು
Congress General Secretary Priyanka Gandhi Vadra left for Lakhimpur; earlier visuals from Lucknow pic.twitter.com/5jlWetJftU
ನನ್ನ ಮಗ ಕಾರಿನಲ್ಲಿ ಇರಲಿಲ್ಲ. ರೈತರು ಪ್ರತಿಭಟನೆ ಮಾಡಬಹುದು ಎಂದು ಮೊದಲೇ ತಿಳಿದಿತ್ತು. ಆದರೆ ರೈತರ ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ಸೇರಿಕೊಂಡು ಬಿಜೆಪಿ ಕಾರ್ಯಕರ್ತರಿದ್ದ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದರು ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. ಸಚಿವರ ಮಗನ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ಇತ್ತ ಹಿಂಸಾಚಾರವನ್ನು ಖಂಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಮತ್ತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಆನೇಕಲ್: ದೇಶದಲ್ಲೆ ಮೊಟ್ಟಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ ವಿಮಾನ ನಿಲ್ದಾಣ ಮಾದರಿಯಲ್ಲಿ ನಿರ್ಮಿಸಲಾದ ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ಬೈಯಪ್ಪನಹಳ್ಳಿ ನೂತನ ರೈಲ್ವೆ ನಿಲ್ದಾಣದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ರೈಲ್ವೆ ಯಾರ್ಡ್ ನ ಕಾರ್ಯಕಾರಿ ಅಂಶಗಳು, ಸೌಲಭ್ಯಗಳು ಮತ್ತು ನಿಲ್ದಾಣದಲ್ಲಿ ಒದಗಿಸಲಾದ ನವೀನ ವೈಶಿಷ್ಟ್ಯಗಳನ್ನು ಪರಿಶೀಲಿಸಿದರು. ಪರಿಶೀಲನೆಗೂ ಮುನ್ನ ಸಚಿವರಿಗೆ ರೈಲ್ವೆ ಪೊಲೀಸರಿಂದ ಗೌರವ ಗೌರವ ವಂದನೆ ಅರ್ಪಿಸಲಾಯಿತು.
ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ನೇತೃತ್ವದ ಎಸ್‍ಡಬ್ಲ್ಯೂಆರ್‍ನ ಹಿರಿಯ ಅಧಿಕಾರಿಗಳೊಂದಿಗೆ ಅವರು ಈ ಟರ್ಮಿನಲ್ ನಿಂದ ಪಾರ್ಸೆಲ್ ಸಾಗಿಸುವ ಸಾಮರ್ಥ್ಯದ ಕುರಿತು ಚರ್ಚಿಸಿದರು. ನಿಲ್ದಾಣ ನಿರ್ಮಾಣವನ್ನು ನೋಡಿ ತುಂಬಾನೆ ಸಂತೋಷ ವ್ಯಕ್ತಪಡಿಸಿದ ಸಚಿವರು ಟರ್ಮಿನಲ್ ನ ಇಂಚಿಂಚೂ ಮಾಹಿತಿಯನ್ನ ಅಧಿಕಾರಿಗಳಿಂದ ಪಡೆದರು. ನಂತರ ಮಾತನಾಡಿದ ಸಚಿವರು, ಈ ಪ್ರದೇಶದಲ್ಲಿ ತಯಾರಿಸಿದ ಬಿಳಿ ಸರಕುಗಳು, ಕೈಗಾರಿಕಾ ಉಪಕರಣಗಳು, ಜವಳಿ ಮತ್ತು ಇತರ ಉತ್ಪನ್ನಗಳನ್ನು ಸಾಗಿಸಲು ಪಾರ್ಸೆಲ್ ವಿಶೇಷ ರೈಲುಗಳ ಓಡಾಟದಿಂದ ಆದಾಯವನ್ನು ಗಳಿಸಲು ಪ್ರಸ್ತಾಪಗಳನ್ನು ರೂಪಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಟೋಕಿಯೋ ಪ್ಯಾರಾಲಂಪಿಕ್ಸ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶೇಷ: ಮೋದಿ
ಈ ವಿಮಾನ ನಿಲ್ದಾಣ ರೀತಿಯಲ್ಲಿ ರೂಪಿಸಿದ ಮತ್ತು ಕಾರ್ಯಗತಗೊಳಿಸಿದ ಎಂಜಿನಿಯರ್‍ಗಳ ತಂಡವನ್ನು ವೈಷ್ಣವ್ ಶ್ಲಾಘಿಸಿದರು. ಸರ್ ಎಂವಿ ಟರ್ಮಿನಲ್‍ನಲ್ಲಿ ಪ್ರಯಾಣಿಕರ ಸೌಕರ್ಯ ಮತ್ತು ಸೌಕರ್ಯವನ್ನು ಹೆಚ್ಚಿಸಲು ಒದಗಿಸಲಾದ ಸೌಲಭ್ಯಗಳು ಮತ್ತು ಸೌಕರ್ಯಗಳು ಭವಿಷ್ಯದಲ್ಲಿ ದೇಶದಾದ್ಯಂತ ನಿರ್ಮಾಣಗೊಳ್ಳುವ ನಿಲ್ದಾಣಗಳಿಗೆ ಮಾನದಂಡವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ
ಇಡೀ ದೇಶಕ್ಕೆ ಮಾದರಿಯಾದ ನಿಲ್ದಾಣ:
ಈ ನಿಲ್ದಾಣವು 7 ಪ್ಲಾಟ್‍ಫಾರ್ಮ್‍ಗಳನ್ನು ಹೊಂದಿದ್ದು, ದಿನಕ್ಕೆ 1 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಸಾಮಥ್ರ್ಯವನ್ನು ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಎಸ್ಕಲೇಟರ್‍ಗಳು ಮತ್ತು ಲಿಫ್ಟ್‍ಗಳನ್ನು ಹೊರತುಪಡಿಸಿ ಸಬ್‍ವೇಗೆ ಪ್ರವೇಶಿಸಲು ಬ್ರೈಲ್ ಚಿಹ್ನೆಗಳು, ಅಂಡರ್ ಪಾಸ್ ಗಳ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ದಿವ್ಯಾಂಗ(ಅಂಗವಿಕಲರ) ಸ್ನೇಹಿ ನಿಲ್ದಾಣವಾಗಿದೆ. ನಿಲ್ದಾಣದಲ್ಲಿ ಪರಿಸರ ಸ್ನೇಹಿ ನೀರಿನ ಮರುಬಳಕೆ ಘಟಕವೂ ಇದೆ. ಬಿಬಿಎಂಪಿಯೊಂದಿಗೆ ಸಮಾಲೋಚಿಸಿ ಟರ್ಮಿನಲ್‍ಗೆ ಪ್ರವೇಶಕ್ಕೆ ಕಿರಿದಾದ ರಸ್ತೆಗಳ ಪ್ರವೇಶದ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಿ ಶೀಘ್ರದಲ್ಲೇ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದು ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಪರಿಶೀಲನೆಗೆ ಸಚಿವ ಜೊತೆಗೆ ಸಂಸದ ಪಿ.ಸಿ.ಮೋಹನ್, ಜನರಲ್ ಮ್ಯಾನೇಜರ್ ಎಸ್ ಡಬ್ಲ್ಯುಆರ್ ಸಂಜೀವ್ ಕಿಶೋರ್, ಪ್ರಿನ್ಸಿಪಾಲ್ ಚೀಫ್ ಆಪರೇಷನ್ ಮ್ಯಾನೇಜರ್ ಹರಿ ಶಂಕರ್ ವರ್ಮಾ, ಡಿ ಆರ್ ಎಂ ಬೆಂಗಳೂರು ಶ್ಯಾಮ್ ಸಿಂಗ್, ಮುಖ್ಯ ಆಡಳಿತಾಧಿಕಾರಿ, ನಿರ್ಮಾಣ ದೇಶ್ ರತನ್ ಗುಪ್ತಾ, ಮತ್ತು ರೈಲ್ವೇಸ್ ನ ಹಿರಿಯ ಅಧಿಕಾರಿಗಳು ಭಾಸ್ಕರ್ ರಾವ್, ಮುಖ್ಯ ಆಯುಕ್ತ ಬಿಬಿಎಂಪಿ ಗೌರವ್ ಗುಪ್ತಾ ಭಾಗವಹಿಸಿದ್ದರು.