Tag: Central Home Department

  • ಕೇಂದ್ರದ ಮಾರ್ಗಸೂಚಿಗಳನ್ನು ಕಠಿಣಗೊಳಿಸಬೇಕೇ ಹೊರತು ಸಡಿಲ ಮಾಡುವಂತಿಲ್ಲ – ಗೃಹ ಇಲಾಖೆ

    ಕೇಂದ್ರದ ಮಾರ್ಗಸೂಚಿಗಳನ್ನು ಕಠಿಣಗೊಳಿಸಬೇಕೇ ಹೊರತು ಸಡಿಲ ಮಾಡುವಂತಿಲ್ಲ – ಗೃಹ ಇಲಾಖೆ

    ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಬದಲಾಯಿಸುವಂತಿಲ್ಲ ಎಂದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಇಲಾಖೆ ತಿಳಿಸಿದೆ.

    ಇಂದು ಈ ಸಂಬಂಧ ಆದೇಶ ಹೊರಡಿಸಿರುವ ಗೃಹ ಇಲಾಖೆ ಕೇಂದ್ರ ಸರ್ಕಾರ ನೀಡಿರುವ ನಿಯಮಗಳನ್ನು ಸಡಿಲಿಕೆ ಮಾಡುವಂತಿಲ್ಲ. ಆದರೆ ಮತ್ತಷ್ಟು ನಿಯಮಗಳನ್ನು ಕಠಿಣ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ.

    ಕಂಟೈನ್‍ಮೆಂಟ್, ಬಫರ್, ರೆಡ್, ಗ್ರೀನ್, ಆರೆಂಜ್ ಜೋನ್ ಗಳನ್ನು ಆರೋಗ್ಯ ಇಲಾಖೆ ಸಲಹೆ ಮೇರೆಗೆ ಮಾಡಿದ್ದು, ಕಂಟೈನ್‍ಮೆಂಟ್ ಜೋನ್ ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ಲಾಕ್‍ಡೌನ್ ವಿನಾಯತಿ ನೀಡಿದರೆ ಇದು ಯಥಾವತ್ತಾಗಿ ಜಾರಿಗೆ ಬರಬೇಕು. ಕಂಟೈನ್‍ಮೆಂಟ್ ಜೋನ್ ಗಳಲ್ಲಿ ಯಾವುದೇ ಕಾರಣಕ್ಕೂ ವಿನಾಯತಿ ನೀಡಬಾರದು ಎಂದು ಸೂಚಿಸಿದೆ.

    ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಎಲ್ಲ ವಲಯಗಳಲ್ಲಿ ನಿರ್ಬಂಧಿಸಿರುವ ವಲಯಗಳಲ್ಲಿ ಯಾವುದೇ ಕಾರಣಕ್ಕೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿನಾಯತಿ ನೀಡದಂತೆ ಗೃಹ ಇಲಾಖೆ ಎಚ್ಚರಿಸಿದೆ.

  • ರೈಲು ಪ್ರಯಾಣಕ್ಕೂ ಮುನ್ನ ಈ ನಿಯಮಗಳು ಪಾಲಿಸಬೇಕು

    ರೈಲು ಪ್ರಯಾಣಕ್ಕೂ ಮುನ್ನ ಈ ನಿಯಮಗಳು ಪಾಲಿಸಬೇಕು

    ನವದೆಹಲಿ: ದೇಶಾದ್ಯಂತ ಪ್ರಮುಖ ಹದಿನೈದು ನಗರಗಳಿಗೆ ಸೀಮಿತ ರೈಲು ಸಂಚಾರ ಪುನಾರಂಭವಾದ ಬೆನ್ನೆಲ್ಲೆ ಕೇಂದ್ರ ಗೃಹ ಇಲಾಖೆ ಪ್ರಯಾಣದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ಇಂದು ಸಂಜೆ ನಾಲ್ಕು ಗಂಟೆಯಿಂದ ಬುಕ್ಕಿಂಗ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಪ್ರಯಾಣದ ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಟಿಕೇಟ್ ಕನ್ಫರ್ಮ್ ಆದವರಿಗೆ ಮಾತ್ರ ರೈಲ್ವೆ ಸ್ಟೇಷನ್ ಪ್ರವೇಶ ಮತ್ತು ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

    ಪ್ರಯಾಣಕ್ಕೂ ಮುನ್ನ ರೈಲ್ವೆ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಒಳಪಡಬೇಕು ಸೋಂಕಿನ ಗುಣಲಕ್ಷಣಗಳು ಖಚಿತಪಡಿಸಿಕೊಳ್ಳಬೇಕು. ರೋಗದ ಗುಣಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲು ಸೂಚಿಸಲಾಗಿದೆ. ಪ್ರಯಾಣ ಆರಂಭಕ್ಕೂ ಮುನ್ನ ಮತ್ತು ಅಂತ್ಯದ ವೇಳೆ ಸ್ವಾನಿಟೈಜಿಂಗ್ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಸ್ಯಾನಿಟೈಸರ್ ಜೊತೆಗಿಟ್ಟುಕೊಳ್ಳುವುದು ಉತ್ತಮ ಎಂದು ಗೃಹ ಇಲಾಖೆ ಹೇಳಿದೆ. ಪ್ರಯಾಣದ ಅವಧಿಯಲ್ಲಿ ಫೇಸ್ ಮಾಸ್ಕ್ ಕಡ್ಡಾಯ ಎಂದು ಸಾರ್ವಜನಿಕರಿಗೆ ತಿಳಿಸಿದೆ.

  • ನೆರೆ ಹಾನಿ ಅಧ್ಯಯನಕ್ಕೆ ಇಂದು ಕೇಂದ್ರದ ತಂಡ ಆಗಮನ

    ನೆರೆ ಹಾನಿ ಅಧ್ಯಯನಕ್ಕೆ ಇಂದು ಕೇಂದ್ರದ ತಂಡ ಆಗಮನ

    ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಹಾನಿಯನ್ನು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಅಧ್ಯಯನ ತಂಡ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಇಂದಿನಿಂದ ಮೂರು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ನೆರೆ ಹಾನಿ ಬಗ್ಗೆ ಪರಿಶೀಲನೆ ನಡೆಸಲಿದೆ.

    ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ ನೇತೃತ್ವದಲ್ಲಿ ಅಧ್ಯಯನ ನಡೆಯಲಿದ್ದು, ತಂಡದಲ್ಲಿ ಕೃಷಿ, ಹಣಕಾಸು, ಜಲಶಕ್ತಿ ಹಾಗೂ ಸಾರಿಗೆ ಸಚಿವಾಲಯದ ಅಧಿಕಾರಿಗಳು ಇರಲಿದ್ದಾರೆ. ಮೂರು ದಿನಗಳ ಕಾಲ  ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜೀವ ಹಾನಿ, ಬೆಳೆ ಹಾನಿ, ಆಸ್ತಿ ಪಾಸ್ತಿ ನಷ್ಟ ಹಾಗೂ ಹಾಳಾದ ರಸ್ತೆಗಳ ಬಗ್ಗೆ ಅಧ್ಯಯನ ನಡೆಸಿ ರಾಜ್ಯದಲ್ಲಾದ ಒಟ್ಟು ಹಾನಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ.

    ರಾಜ್ಯದಲ್ಲಿ ಭಾರಿ ಪ್ರವಾಹ ಉಂಟಾದ ಹಿನ್ನೆಲೆ ಶೀಘ್ರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ, ಮಧ್ಯಂತರ ನೆರವು ರಾಜ್ಯಕ್ಕೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಕಳೆದ ವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಿಎಸ್‍ವೈ ಮನವಿ ಮಾಡಿಕೊಂಡಿದ್ದರು. ಮುಖ್ಯಮಂತ್ರಿಗಳ ಮನವಿ ಹಿನ್ನಲೆ ಗೃಹ ಇಲಾಖೆಯಿಂದ ಈಗ ಅಧ್ಯಯನ ತಂಡವನ್ನು ಕಳುಹಿಸಲಾಗಿದೆ.

    ಕಳೆದ ನಾಲ್ಕು ದಶಕಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸಿದೆ. ಒಂದು ಕಡೆ ಮಳೆರಾಯ ಜಲರಕ್ಕಸನ ಅವತಾರವೆತ್ತಿ ಅಬ್ಬರಿಸಿ ಬೊಬ್ಬಿರಿದಿದ್ದ. ಇನ್ನೊಂದೆಡೆ ಭೂ ಕುಸಿತ ಸಂಭವಿಸಿ ಜನ ಕಂಗಾಲಾಗಿದ್ದರು.

    16 ಜಿಲ್ಲೆಗಳ 80 ತಾಲೂಕುಗಳ 840 ಗ್ರಾಮಗಳು ಜಲದಿಗ್ಬಂಧನದಲ್ಲಿ ಸಿಲುಕಿದ್ದವು. 624 ಪರಿಹಾರ ಕೇಂದ್ರ ತೆರೆಯಲಾಗಿದ್ದು ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿತ್ತು.

    ಪ್ರವಾಹ ಪೀಡಿತ ಪ್ರದೇಶಗಳ 12,651 ಮನೆಗಳು ಸಂಪೂರ್ಣ ಹಾನಿಯಾಗಿವೆ. 3.22 ಲಕ್ಷ ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ ಹಾಗೂ ಮಲೆನಾಡಿನಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಿ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಹಾಗೂ ಭೂ ಕುಸಿತದಿಂದ ಜನರು ಪರಿತಪಿಸುವಂತಾಗಿತ್ತು. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿ ಸಾಕಷ್ಟು ನೀರನ್ನು ಹರಿಬಿಡಲಾಗಿತ್ತು.