Tag: Central govt

  • ಸಾರಿಡಾನ್ ಸೇರಿ 327 ಪೇನ್ ಕಿಲ್ಲರ್ಸ್ ಬ್ಯಾನ್

    ಸಾರಿಡಾನ್ ಸೇರಿ 327 ಪೇನ್ ಕಿಲ್ಲರ್ಸ್ ಬ್ಯಾನ್

    ನವದೆಹಲಿ: ಅಸುರಕ್ಷಿತ ನೋವು ನಿವಾರಕ ಮಾತ್ರೆಗಳ ಮೇಲೆ ಕೇಂದ್ರ ಸರ್ಕಾರ ವಾರ್ ನಡೆಸಿದೆ.

    ಸಾರಿಡಾನ್ ಸೇರಿದಂತೆ ಸ್ಕಿನ್ ಕ್ರೀಮ್ ಪೆಂಡ್ರೆಮ್, ಡಯಾಬಿಟಿಕ್ ಡ್ರಗ್ಸ್ ಗ್ಲೂಕೋನಾರ್ಮ್ ಪಿಜಿ, ಆಂಟಿ ಬಯಾಟಿಕ್ ಲೂಪಿಡಾಕ್ಸ್, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಸೇರಿದಂತೆ 328 ಮಾತ್ರೆ, ಔಷಧಿಗಳ ತಯಾರಿಕೆ, ಮಾರಾಟದ ಮೇಲೆ ತತ್‍ಕ್ಷಣದ ನಿಷೇಧ ಹೇರಿದೆ. ಅಲ್ಲದೆ, 6 ಪೇನ್ ಕಿಲ್ಲರ್ ಟ್ಯಾಬ್ಲೆಟ್‍ಗಳ ಮೇಲೆ ತಕ್ಷಣದ ನಿರ್ಬಂಧ ಹೇರಿ ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

    ಕಳೆದ ಎರಡು ವರ್ಷಗಳಿಂದ ದೇಶದ ಹಲವು ಹೈಕೋರ್ಟ್‍ಗಳು ಹಾಗೂ ಸುಪ್ರೀಂಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಲೇ ಇತ್ತು. ಈ ಮಧ್ಯೆ, ಇದೀಗ ಎರಡು ವರ್ಷಗಳ ಅವಧಿಯಲ್ಲಿ ಔಷಧಿಗಳಲ್ಲಿ ಬಳಸುವ ಅಂಶಗಳನ್ನು ಶೇ.2ರಷ್ಟು ಪ್ರಮಾಣವನ್ನು ಕಡಿತಗೊಳಿಸಿದ್ದೇವೆ ಅಂತ ಕಂಪನಿಗಳು ವಾದಿಸಿದ್ದವು. ಆರೋಗ್ಯ ಇಲಾಖೆ ಮತ್ತು ಔಷಧಿ ತಯಾರಕ ಕಂಪನಿಗಳ ನಡುವೆ 2016ರಿಂದ ನಡೆಯುತ್ತಿದ್ದ ಡ್ರಗ್ಸ್ ಯುದ್ಧ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದ ಅಭಿವೃದ್ಧಿ ಮಾಡಲು 5 ವರ್ಷ ಸಾಲಲ್ಲ – ಪ್ರಧಾನಿ ಮೋದಿ ಪರ ಯದುವೀರ್ ಬ್ಯಾಟಿಂಗ್

    ದೇಶದ ಅಭಿವೃದ್ಧಿ ಮಾಡಲು 5 ವರ್ಷ ಸಾಲಲ್ಲ – ಪ್ರಧಾನಿ ಮೋದಿ ಪರ ಯದುವೀರ್ ಬ್ಯಾಟಿಂಗ್

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಮಾಡಲು 5 ವರ್ಷಗಳ ಅವಧಿ ಸಾಲುವುದಿಲ್ಲ. ಅವರಿಗೆ ಮತ್ತಷ್ಟು ಅವಕಾಶಗಳು ಸಿಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

    ಸರ್ಕಾರದ ಸಾಧನೆಯ ಪುಸ್ತಕ ತೆಗೆದುಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಕುರಿತ ಮಾಹಿತಿ ನೀಡಿದ್ದಾರೆ. ಆದರೆ ಈ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸಲು ಇನ್ನು ಕೆಲ ಅವಕಾಶಗಳು ಬೇಕಿದೆ. ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸಕ್ಕೆ ನಾವೆಲ್ಲ ಬೆಂಬಲಿಸಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್‍ರನ್ನ ಭೇಟಿ ಮಾಡಿದ ಶ್ರೀರಾಮುಲು

    2019 ರ ಲೋಕಾಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದಲ್ಲಿ ಮೋದಿ ನಾಯಕತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಸಯೋಜನೆಗಳ ಬಗ್ಗೆ ದೇಶದ ಗಣ್ಯರಿಗೆ ತಿಳಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ರಾಜ್ಯ ಬಿಜೆಪಿ ನಾಯಕರು ಕೂಡ ತಮ್ಮ ಸಂಪರ್ಕದಲ್ಲಿರುವ ಗಣ್ಯರಿಗೆ ಸರ್ಕಾರ ಸಾಧನೆ ವಿವರಿಸುವ ಪುಸ್ತಕ ನೀಡಿ ಮಾಹಿತಿ ನೀಡುತ್ತಿದ್ದಾರೆ. ಸದ್ಯ ಬಿಜೆಪಿ ಮುಖಂಡ ರಾಮ್‍ದಾಸ್ ಸೇರಿದಂತೆ ಹಲವು ಮುಖಂಡರು ಒಡೆಯರ್ ಅವರನ್ನು ಭೇಟಿ ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಶಾಸಕ ಶ್ರೀರಾಮುಲು ಅವರು ಸಹ ನಟ ಯಶ್ ರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳನ್ನ ವಿವರಿಸಿದ್ದರು.

  • ಕೇಂದ್ರದಲ್ಲೊಂದು, ರಾಜ್ಯದಲ್ಲೊಂದು ಸರ್ಕಾರ- ಮತ್ತೊಮ್ಮೆ ನಂಬಿಕೆ ನಿಜವಾಯ್ತು

    ಕೇಂದ್ರದಲ್ಲೊಂದು, ರಾಜ್ಯದಲ್ಲೊಂದು ಸರ್ಕಾರ- ಮತ್ತೊಮ್ಮೆ ನಂಬಿಕೆ ನಿಜವಾಯ್ತು

    ಬೆಂಗಳೂರು: ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಧಿಕಾರಕ್ಕೆ ಬರಲ್ಲ ಎನ್ನುವ ಮಾತು ಇದೀಗ ಮತ್ತೊಮ್ಮೆ ನಿಜವಾಗಿದೆ.

    ಹೌದು. ಇತ್ತೀಚಿನ ಕೆಲ ವರ್ಷಗಳಲ್ಲಿ ಕೇಂದ್ರದಲ್ಲಿ ಒಂದು ಪಕ್ಷ ಅಧಿಕಾರವಿದ್ದರೆ ರಾಜ್ಯದಲ್ಲಿ ಇನ್ನೊಂದು ಪಕ್ಷ ಅಧಿಕಾರ ಹಿಡಿಯುತ್ತಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಅಸ್ತಿತ್ವಕ್ಕೆ ಬರಲ್ಲ ಎಂಬುದು ಇದೀಗ ಈ ವರ್ಷದ ಚುನಾವಣೆಯಲ್ಲಿ ಮತ್ತೊಮ್ಮೆ ನಿಜವಾಯಿತು.

    ಚುನಾವಣಾ ಫಲಿತಾಂಶಕ್ಕೂ ಮೊದಲೇ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಹೆಚ್ಚು ಸ್ಥಾನವನ್ನು ಗೆದ್ದುಕೊಂಡರೂ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದ ಸಾಧ್ಯವಾಗಿಲ್ಲ. ಆದ್ರೂ ರಾಜ್ಯಪಾಲರ ಅನುಮತಿಯಂತೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದೇ ಬಿಟ್ಟರು. ಒಂದು ವೇಳೆ ಬಹುಮತ ಸಾಬೀತು ಪಡಿಸಿ ಸರ್ಕಾರ ರಚಿಸುತ್ತಿದ್ದರೆ ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದು ಇತಿಹಾಸ ನಿರ್ಮಾಣವಾಗತಿತ್ತು.

    ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಪರಿಣಾಮ ವಿಶ್ವಾಸ ಮತಯಾಚನೆ ಮಾಡದೇ ಮೂರೇ ದಿನಕ್ಕೆ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದ್ರು. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯಾಡಳಿತ ಮಾಡಲಿವೆ.

    ಒಟ್ಟಿನಲ್ಲಿ ಇದೀಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರವಾಗಿ ಅಧಿಕಾರ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಿವೆ.

    ಈ ಹಿಂದೆ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರದ ಆಡಳಿತವಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲೂ ಯುಪಿಎ ಆಡಳಿತವಿತ್ತು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

  • ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬಿಎಸ್‍ವೈ, ಅನಂತ್ ಕುಮಾರ್, ಡಿವಿಎಸ್ ಸಹಾಯ ಮಾಡ್ಬೇಕು- ಎಂ.ಬಿ ಪಾಟೀಲ್

    ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಬಿಎಸ್‍ವೈ, ಅನಂತ್ ಕುಮಾರ್, ಡಿವಿಎಸ್ ಸಹಾಯ ಮಾಡ್ಬೇಕು- ಎಂ.ಬಿ ಪಾಟೀಲ್

    ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಶಿಫಾರಸ್ಸು ಪತ್ರವನ್ನು ರಾಜ್ಯ ಸರ್ಕಾರ, ಕೇಂದ್ರಕ್ಕೆ ಕಳುಹಿಸಿದೆ. ಆದ್ರೆ ಆ ವಿಚಾರದಲ್ಲಿ ಹಾಲಲ್ಲಿ ಉಪ್ಪು ಹಾಕುವ ಕೆಲಸವನ್ನು ಮಾಡಬೇಡಿ ಎಂದು ಪರೋಕ್ಷವಾಗಿ ಯಡಿಯೂರಪ್ಪ, ಅನಂತಕುಮಾರ್ ಹಾಗೂ ಸದಾನಂದಗೌಡ ಅವ್ರಿಗೆ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಪುರಾವೆಗಳನ್ನು, ಸಾಕ್ಷ್ಯಗಳನ್ನು ನೀಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಕೇಂದ್ರ ಸರ್ಕಾರ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತದೆಯೆಂಬ ಅಚಲ ವಿಶ್ವಾಸವಿದೆ. ಆದ್ರೆ ಅದ್ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಅನಂತಕುಮಾರ್, ಸದಾನಂದಗೌಡ ಅವರು ನಮಗೆ ಸಹಾಯ ಮಾಡಬೇಕೆಂದು ಅವರು ಮನವಿ ಮಾಡಿದ್ರು. ಇದನ್ನೂ ಓದಿ: ಸಿಎಂ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ: ರಂಭಾಪುರಿ ಶ್ರೀ

    ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೂ ಚುನಾವಣೆಗೂ ಸಂಬಂಧವಿಲ್ಲ. ಚುನಾವಣೆಗಾಗಿ ನಾವು ಮಾಡೋದಿದ್ರೆ ನಾವು ಯಾವಾಗಲೋ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುತ್ತಿದ್ದೆವು. ರಾಜ್ಯದಲ್ಲಿ ಅದಕ್ಕೆ ಮಾನ್ಯತೆ ಕೊಟ್ಟು ಬಳಿಕ ನಾವು ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೇವೆ. ಆರಂಭದಲ್ಲಿ ಬಹಳ ಜನ ಎಂಬಿ ಪಾಟೀಲರು ಚುನಾವಣೆಗಾಗಿ ಪ್ರತ್ಯೇಕತೆ ಕೂಗು ಎತ್ತಿದ್ದಾರೆಂದು ಮಾತನಾಡಿದ್ರು. ಆದ್ರೆ ಅದಕ್ಕೆ ನಾವು ಬದ್ಧತೆಯಿಂದ ರಾಜ್ಯದಲ್ಲಿ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸ್ಸು ಕಳಿಸಿದ್ದೆವೆ. ಇದ್ರಲ್ಲಿ ರಾಜಕೀಯ ಮಾಡುವುದು ಬೇಡ. ನಾವು ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಅವರಿಗೆ ತಲೆ ಬಾಗಿಸುತ್ತೆವೆ.ವಿನಂಮ್ರತೆಯಿಂದ ಮುನ್ನಡೆಯಬೇಕಿದೆ ಅಂದ್ರು. ಇದನ್ನೂ ಓದಿ: ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು

    ರಂಭಾಪುರಿ ಶ್ರೀಗಳೂ ನಮ್ಮ ಗುರುಗಳು. ಅವರು ನಮ್ಮ ಬಸವ ತತ್ವಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವ್ರಿಗೆ ಅವರದ್ದೇ ಆದ ತಾತ್ವಿಕ ಅಭಿಪ್ರಾಯ ಇದೆ. ಹೀಗಾಗಿ ಶೀಘ್ರದಲ್ಲೇ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಅವರ ಮನವೊಲಿಸುತ್ತೆವೆ ಅಂತ ತಿಳಿಸಿದ್ರು.  ಇದನ್ನೂ ಓದಿ: ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?

    ಈಗ ಜಾಗತಿಕ ಧರ್ಮ ಆಗಲು ಕಾಲ ಪಕ್ವವಾಗಿದೆ. ಜಯದ ಜೊತೆಗೆ ನಾವು ವಿನಂಮ್ರವಾಗಿ ಎಲ್ಲರನ್ನು ಕೂಡಿಸಿಕೊಂಡು ಬಸವ ಧರ್ಮಗಾಗಿ ಒಟ್ಟಾಗಲಿದ್ದೆವೆ. ನಮಗೆ ಬೈದವ್ರನ್ನು ಸೇರಿಸಿಕೊಂಡು ಒಟ್ಟಾಗಿ ಹೋಗುತ್ತೇವೆ. ಈಶ್ವರ ಖಂಡ್ರೆ, ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಹೀಗೆ ಎಲ್ಲರನ್ನು ಸೇರಿಸಿಕೊಂಡು ಧರ್ಮ ಸ್ಥಾಪನೆಗೆ ಮುನ್ನಡೆಯಲಿದ್ದೇವೆ ಎಂದರು.

  • ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು

    ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ಕೇಂದ್ರಕ್ಕೆ ಶೀಘ್ರವೇ ಸಿದ್ದು ಸರ್ಕಾರದಿಂದ ಶಿಫಾರಸ್ಸು

    ಬೆಂಗಳೂರು: ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೊನೆಗೂ ಸಿದ್ದರಾಮುಯ್ಯ ನೇತೃತ್ವದ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

    ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆದಿದ್ದು, ಈ ವೇಳೆ ಸಮಿತಿಯ ಸದಸ್ಯರ ಅಭಿಪ್ರಾಯದಂತೆ ಲಿಂಗಾಯಿತ ಮತ್ತು ವೀರಶೈವರಾಗಿದ್ದು ಬಸವ ತತ್ವವವನ್ನು ಅನುಸರಿಸುತ್ತಿರುವ ಮಂದಿಗೆ ಪ್ರತ್ಯೇಕ ಧರ್ಮದ ಕುರಿತು ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಇಂದು ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಮಿತಿ ನೀಡಿದ್ದ ವರದಿ ಬಗ್ಗೆ ಚರ್ಚೆ ಆಗಿದೆ. ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ನ್ಯಾ. ನಾಗಮೋಹನ ದಾಸ್ ಸಮಿತಿ ವರದಿಯನ್ವಯ ಪ್ರತ್ಯೇಕ ವೀರಶೈವ ಲಿಂಗಾಯಿತ ಸ್ವತಂತ್ರ ಧರ್ಮದ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಅಂದ್ರು.

    ಇದೀಗ ಸರ್ಕಾರ ಎಲೆಕ್ಷನ್ ಹೊತ್ತಲ್ಲಿ ಲಿಂಗಾಯತರು- ವೀರಶೈವರನ್ನು ಓಲೈಸಲು ಯತ್ನ ಮಾಡುತ್ತಿದ್ದೆಯಾ ಎಂಬ ಪ್ರಶ್ನೆ ಎದ್ದಿದೆ. ಶತಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿದ್ದ ವೀರಶೈವ-ಲಿಂಗಾಯತರನ್ನು ಇದೀಗ ಸರ್ಕಾರ `ಅಲ್ಪಸಂಖ್ಯಾತರು’ ಎಂದು ಪರಿಗಣಿಸಲು ಮುಂದಾಗಿರುವುದು ಬಹುಸಂಖ್ಯಾತ ಹಿಂದೂ ಧರ್ಮೀಯರ ಆಕ್ರೋಶಕ್ಕೆ ತುತ್ತಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

  • ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವೆಗೆ ಯಾವುದೇ ಹಾನಿ ಮಾಡಲ್ಲ- ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ

    ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವೆಗೆ ಯಾವುದೇ ಹಾನಿ ಮಾಡಲ್ಲ- ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ

    ನವದೆಹಲಿ: ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ನಿರ್ಮಾಣಕ್ಕಾಗಿ ರಾಮ ಸೇತುವೆಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರದಂದು ಸುಪ್ರೀಂ ಕೋರ್ಟ್‍ಗೆ ಹೇಳಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಿರೋ ಕೇಂದ್ರ ಸರ್ಕಾರ, ರಾಷ್ಟ್ರದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ರಾಮಸೇತುವೆಯನ್ನ ಮುಟ್ಟುವುದಿಲ್ಲ ಎಂದು ತಿಳಿಸಿದೆ.

    ಮುಖ್ಯನ್ಯಾಯಾಧೀಶರಾದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಕೇಂದ್ರ ಹಡಗು ಸಚಿವಾಲಯ ಅಫಿಡವಿಟ್ ಸಲ್ಲಿಸಿದ್ದು, ಕೇಂದ್ರದ ನಿಲುವನ್ನ ಪರಿಗಣಿಸಿ, ಸೇತುಸಮುದ್ರಂ ಯೋಜನೆಯ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಈಗ ವಿಲೇವಾರಿ ಮಾಡಬಹುದು ಎಂದು ಹೇಳಿದೆ.

    ಸೇತುಸಮುದ್ರಂ ಯೋಜನೆಗಾಗಿ ಮೊದಲು ಹೇಳಲಾಗಿದ್ದ ಮಾರ್ಗಕ್ಕೆ ಪರ್ಯಾಯವನ್ನ ಕಂಡುಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ರಾಷ್ಟ್ರದ ಹಿತದೃಷ್ಟಿಯಿಂದ ರಾಮಸೇತುವೆಗೆ ಯಾವುದೇ ಹಾನಿ ಮಾಡದಂತೆ ಯೋಜನೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುತ್ತದೆ ಎಂದು ಅಫಿಡವಿಟ್‍ನಲ್ಲಿ ತಿಳಿಸಿದೆ.

    ಕೇಂದ್ರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ಹಿಂದಿನ ಮಾರ್ಗಗಳಿಗೆ ಅನುಗುಣವಾಗಿ ಕೇಂದ್ರ ತನ್ನ ಪ್ರತಿಕ್ರಿಯೆ ನೀಡಿದೆ. ಈಗ ಅರ್ಜಿಯನ್ನ ವಿಲೇವಾರಿ ಮಾಡಬಹುದು ಎಂದು ಕೋರ್ಟ್ ಗೆ ತಿಳಿಸಿದರು.

    ಸೇತುಸಮುದ್ರಂ ಯೋಜನೆಯ ವಿರುದ್ಧ ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಯೋಜನೆಗಾಗಿ ರಾಮಸೇತುಗೆ ಹಾನಿ ಮಾಡದಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.

    ಈ ಹಿಂದೆ ಕೇಂದ್ರ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ಮಾತನಾಡಿ, ಕಾಲುವೆ ಯೋಜನೆ ನಿರ್ಮಾಣಕ್ಕಾಗಿ ಯಾವುದೇ ಕಾರಣಕ್ಕೂ ರಾಮಸೇತುವೆಯನ್ನ ಒಡೆದು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಜನರ ಭಾವನೆಗಳನ್ನ ನಾವು ಗೌರವಿಸುತ್ತೇವೆ. ಯಾವುದೇ ಕಾರಣಕ್ಕೂ ರಾಮಸೇತುವೆಯನ್ನ ಒಡೆಯುವುದಿಲ್ಲ ಎಂದು ಎಕಾನಾಮಿಕ್ ಎಡಿಟರ್ಸ್ ಕಾನ್ಫರೆನ್ಸ್ ನಲ್ಲಿ ಗಡ್ಕರಿ ಹೇಳಿದ್ದರು.

  • ವುಮೆನ್ಸ್ ಡೇ ಗೆ ಮಹಿಳೆಯರಿಗೆ ಗುಡ್‍ನ್ಯೂಸ್- ಇಂದಿನಿಂದ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ ಸ್ಯಾನಿಟರಿ ಪ್ಯಾಡ್

    ವುಮೆನ್ಸ್ ಡೇ ಗೆ ಮಹಿಳೆಯರಿಗೆ ಗುಡ್‍ನ್ಯೂಸ್- ಇಂದಿನಿಂದ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ ಸ್ಯಾನಿಟರಿ ಪ್ಯಾಡ್

    ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಗಿಫ್ಟ್ ನೀಡಿದೆ.

    ಅತ್ಯಂತ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‍ಗಳನ್ನ ಇಂದು ಸರ್ಕಾರ ಬಿಡುಗಡೆ ಮಾಡಿದೆ. ಸುವಿಧ ಹೆಸರಿನ, ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‍ಗಳು ಇದಾಗಿದೆ. ಸಾಮಾನ್ಯವಾಗಿ ಒಂದು ನ್ಯಾಪ್‍ಕಿನ್‍ಗೆ 8 ರೂ. ಬೆಲೆ ಇದ್ದು, ಈಗ ಬಿಡುಗಡೆ ಮಾಡಲಾಗಿರುವ ಪ್ಯಾಡ್ ಕೇವಲ 2.50 ರೂಪಾಯಿಗೆ ಒಂದು ಸ್ಯಾನಟರಿ ಪ್ಯಾಡ್ ದೊರಕಲಿದೆ. ದೇಶಾದ್ಯಂತ 589 ಜಿಲ್ಲೆಗಳಲ್ಲಿನ ಎಲ್ಲಾ 3200 ಜನೌಷಧಿ ಕೇಂದ್ರಗಳಲ್ಲಿ ಅಗ್ಗದ ಸ್ಯಾನಿಟರಿ ಪ್ಯಾಡ್ ಗಳು ಲಭ್ಯವಿರಲಿದೆ.

    ಮಾರುಕಟ್ಟೆಯಲ್ಲಿ ವಿವಿಧ ಪ್ಯಾಡ್‍ಗಳ ಬೆಲೆ ಸರಾಸರಿ 30 ರಿಂದ 80 ರೂ.ವರೆಗೂ ಇದೆ. ಆದ್ರೆ 4 ಪ್ಯಾಡ್‍ಗಳ ಒಂದು ಸೆಟ್ ಸುವಿಧಾ ಪ್ಯಾಡ್ಸ್ ಬೆಲೆ ಕೇವಲ 10 ರೂ. ಇರಲಿದೆ. ಇವು ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಟ್ಟಮೊದಲ ಪರಿಸರ ಸ್ನೇಹಿ ಪ್ಯಾಡ್‍ಗಳು. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಪ್ಯಾಡ್‍ಗಳಿಗಿಂತ ಇವು ಅಗ್ಗವಾಗಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದ್ದಾರೆ.

    ಈ ಹಿಂದೆ ಸರ್ಕಾರ ಕ್ಯಾನ್ಸರ್, ಡಯಾಬಿಟಿಸ್, ಬಿಪಿ ಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳು ಸೇರಿದಂತೆ ಸುಮಾರು 800 ಔಷಧಿಗಳ ಬೆಲೆಯನ್ನ ಕಡಿಮೆ ಮಾಡಿತ್ತು. ಇತ್ತೀಚೆಗೆ ಸ್ಟೆಂಟ್‍ಗಳ ಬೆಲೆಯನ್ನೂ ಇಳಿಸಲಾಗಿತ್ತು.

  • ಗುಡ್‍ನ್ಯೂಸ್, ಮುಷ್ಕರ ಕೈಬಿಟ್ಟ ಪೆಟ್ರೋಲ್ ಬಂಕ್ ಮಾಲೀಕರು

    ಗುಡ್‍ನ್ಯೂಸ್, ಮುಷ್ಕರ ಕೈಬಿಟ್ಟ ಪೆಟ್ರೋಲ್ ಬಂಕ್ ಮಾಲೀಕರು

    ಬೆಂಗಳೂರು: ನಾಳೆ ಮಧ್ಯರಾತ್ರಿಯಿಂದ ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಇದೀಗ ಮುಷ್ಕರವನ್ನು ಕೈಬಿಟ್ಟಿದ್ದಾರೆ.

    ತೈಲ ಕಂಪನಿಗಳು ಮಾತುಕತೆ ಗೆ ಮುಂದಾದ ಹಿನ್ನಲೆಯಲ್ಲಿ ಬಂಕ್ ಮಾಲೀಕರು ಈ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಮುಷ್ಕರ ಯಾಕೆ?: ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪೆಟ್ರೋಲ್ ಡೀಸೆಲ್ ಡೀಲರ್ಸ್ ಆಸೋಸಿಯೇಷನ್ ಅಕ್ಟೋಬರ್ 13 ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಬಂದ್ ನಡೆಸಲು ನಿರ್ಧರಿಸಿತ್ತು.

    ಸರ್ಕಾರವು ನಿತ್ಯ ದರದ ಪರಿಷ್ಕರಣೆಯನ್ನು ಕೈ ಬಿಡಲು ಹಾಗೂ ಅಪೂರ್ಣ ಚಂದ್ರ ಕಮೀಟಿ ವರದಿ ಜಾರಿಗೆ ಒತ್ತಾಯಿಸಿ ನಾಳೆ ಮಧ್ಯರಾತ್ರಿಯಿಂದ ಅಕ್ಟೋಬರ್ 13 ರ ದಿನವಿಡಿ ಪೆಟ್ರೋಲ್ ಬಂಕ್ ಬಂದ್ ಮಾಡಲು ಸಂಘ ಮುಂದಾಗಿತ್ತು.

    ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತೆಗೆದುಕೊಳ್ಳದಿದ್ದರೆ, ನಾವು ಅಕ್ಟೋಬರ್ 27 ರಿಂದ ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವಾಧಿ ಬಂದ್ ನಡೆಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪೆಟ್ರೋಲ್ ಡೀಸೆಲ್ ಡೀಲರ್ಸ್ ಆಸೋಸಿಯೇಷನ್ ರವೀಂದ್ರನಾಥ್ ಪಬ್ಲಿಕ್ ಟಿವಿಗೆ ತಿಳಿಸಿದ್ದರು.

  • ಸಂಪುಟ ವಿಸ್ತರಣೆ ಮಾಡಲು ಮೋದಿ ಬಳಸಿದ್ದಾರೆ `ಪಿ’ ಮತ್ತು `ಎನ್’ ಫಾರ್ಮುಲಾ!

    ಸಂಪುಟ ವಿಸ್ತರಣೆ ಮಾಡಲು ಮೋದಿ ಬಳಸಿದ್ದಾರೆ `ಪಿ’ ಮತ್ತು `ಎನ್’ ಫಾರ್ಮುಲಾ!

    ನವದೆಹಲಿ: ರಾಜ್ಯದಲ್ಲಿ ಸಂಪುಟ ಸರ್ಜರಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲು ತಯಾರಿ ನಡೆಯುತ್ತಿದೆ.

    ಇದಕ್ಕಾಗಿ `ಪಿ’ ಹಾಗೂ `ಎನ್’ ಎಂಬ ಸಿಂಪಲ್ ಫಾರ್ಮುಲಾವನ್ನು ಬಳಸಿದ್ದಾರೆ ಇದರಲ್ಲಿ ಯಾರ್ಯಾರು ಇನ್ ಆಗ್ತಾರೆ? ಯಾರ್ಯಾರು ಔಟ್ ಆಗ್ತಾರೆ ಎಂಬುವುದನ್ನು ಸುಲಭವಾಗಿ ಕಂಡುಹಿಡಿಯಲಾಗುತ್ತದೆ.

    ಇದಕ್ಕಾಗಿ ಈಗಾಗಲೇ ವಿಶೇಷ ಎಕ್ಸೆಲ್ ಶೀಟ್ ಒಂದನ್ನು ಕ್ರಿಯೇಟ್ ಮಾಡಲಾಗಿದೆ ಎಂಬುವುದಾಗಿ ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. ಈ ಶೀಟ್ ಕಾಲಮ್ ನಲ್ಲಿ ಪಿ(ಪಾಸಿಟಿವ್) ಮತ್ತು ಎನ್(ನೆಗೆಟಿವ್) ಎಂದು ಬರೆಯಲಾಗಿದೆ. ಪ್ರತೀ ಸಚಿವರ ಹೆಸರಿನ ಎದುರು ಪಿ ಅಥವಾ ಎನ್ ಎಂಬುವುದಾಗಿ ನಮೂದಿಸಲಾಗುತ್ತದೆ. ಈ ಶೀಟ್ ನನ್ನು ಈಗಾಗಲೇ ಮೋದಿ ಮತ್ತು ಅಮಿತ್ ಶಾ ರೆಡಿಮಾಡಿದ್ದು, ಯಾರು ಸಂಪುಟದಲ್ಲಿ ಉಳಿಯುತ್ತಾರೆ ಹಾಗೂ ಯಾರು ಔಟ್ ಆಗುತ್ತಾರೆ ಎಂಬುವುದನ್ನು ಘೋಷಿಸಲಷ್ಟೇ ಬಾಕಿಯಿದೆ. ಈ ಶೀಟ್ ರೆಡಿ ಮಾಡಲೆಂದು ಅಮಿತ್ ಶಾ ಕಳೆದ ಕೆಲ ವಾರಗಳ ಹಿಂದೆಯೇ ಉನ್ನತ ಮಟ್ಟದ ಸಭೆ ನಡೆಸಿದ್ದರು.

    ಒಟ್ಟಿನಲ್ಲಿ ಹೊಸಬರಿಗೆ ಮಣೆ ಹಾಕೋದರ ಜೊತೆಗೆ ಹಳೇ ಸಚಿವರ ಖಾತೆಗೂ ಮೋದಿ ಕೊಕ್ಕೆ ಹಾಕ್ತಾರೆ ಅಂತ ಹೇಳಲಾಗ್ತಿದೆ. ಜೊತೆಗೆ ಕರ್ನಾಟಕದ ನಾಲ್ವರು ಸಂಸದರಿಗೆ ಸಚಿವ ಸ್ಥಾನ ಸಿಗುತ್ತೆ ಅಂತಾ ಹೇಳಲಾಗ್ತಿದೆ. ಹಾಗಿದ್ರೆ ಯಾರ್ಯಾರ ಖಾತೆಗೆ ಕೊಕ್ಕೆ ಬೀಳುತ್ತೆ? ಯಾರ್ಯಾರು ಇನ್ ಆಗ್ತಾರೆ? ಯಾರ್ಯಾರು ಔಟ್ ಆಗ್ತಾರೆ? ಅಂತ ನೋಡೋದಾದ್ರೆ..

    ಯಾರ್ಯಾರು ಔಟ್..!?
    ಜಲಸಂಪನ್ಮೂಲ ಸಚಿವೆ ಉಮಾಭಾರತಿ, ಕೌಶಲ್ಯ ಅಭಿವೃದ್ಧಿ ಸಚಿವ ರಾಜಿವ್ ಪ್ರತಾಪ್ ರೂಡಿ, ಆರೋಗ್ಯ ಖಾತೆಯ ರಾಜ್ಯ ಸಚಿವ ಫಗಲ್‍ಸಿಂಗ್ ಕುಲಾಸ್ತೆ, ರಾಜ್ಯ ಖಾತೆಯ ಕೃಷಿ ಸಚಿವ ಸಂಜು ಬಾಲ್ಯಾನ್, ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಖಾತೆ ಸಚಿವ ಎಂಎನ್. ಪಾಂಡೆ ಔಟಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಯಾರ ಖಾತೆ ಬದಲಾವಣೆ..?
    ನಿತಿನ್ ಗಡ್ಕರಿ ಅವರಿಗೆ ರಸ್ತೆ ಸಾರಿಗೆ ಜೊತೆಗೆ ರೈಲ್ವೆ ಖಾತೆ, ಸುರೇಶ್ ಪ್ರಭು ಅವರಿಗೆ ಪರಿಸರ ಖಾತೆ, ಸ್ಮೃತಿ ಇರಾನಿ ಅವರ ಜವಳಿ ಖಾತೆಗೆ ಕೊಕ್ಕೆ, ಅರುಣ್ ಜೇಟ್ಲಿ ಅವರ ಹೆಚ್ಚುವರಿ ರಕ್ಷಣಾ ಖಾತೆಗೆ ಕೊಕ್ಕೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

    ರಾಜ್ಯದಿಂದ ಯಾರು ಇನ್..?
    ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆ ಸಂಸದ ಶಿವಕುಮಾರ್ ಉದಾಸಿ, ಬಳ್ಳಾರಿ ಸಂಸದ ಶ್ರೀರಾಮುಲು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಎಐಡಿಎಂಕೆ ಮತ್ತ ಜೆಡಿ(ಯು) ಕೂಡ ಸಂಪುಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುವುದಾಗಿ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಭಾನುವಾರ ಪ್ರಧಾನಿ ಮೋದಿ ಬ್ರಿಕ್ಸ್ ಸಮಿತಿಯಲ್ಲಿ ಪಾಲ್ಗೊಳ್ಳುವದಕ್ಕಿಂತಲೂ ಮೊದಲು ಅಂದ್ರೆ ಶನಿವಾರ ಸಂಪುಟ ವಿಸ್ತರಣೆ ಮಾಡುಲಾಗುವುದು ಎಂಬುವುದಾಗಿ ತಿಳಿದುಬಂದಿದೆ.

  • 11 ಲಕ್ಷ ಪ್ಯಾನ್‍ ಕಾರ್ಡ್ ಗಳನ್ನ ನಿಷ್ಕ್ರಿಯಗೊಳಿಸಿದ ಸರ್ಕಾರ- ನಿಮ್ಮ ಕಾರ್ಡ್ ಸ್ಟೇಟಸ್ ತಿಳಿಯೋದು ಹೇಗೆ?

    11 ಲಕ್ಷ ಪ್ಯಾನ್‍ ಕಾರ್ಡ್ ಗಳನ್ನ ನಿಷ್ಕ್ರಿಯಗೊಳಿಸಿದ ಸರ್ಕಾರ- ನಿಮ್ಮ ಕಾರ್ಡ್ ಸ್ಟೇಟಸ್ ತಿಳಿಯೋದು ಹೇಗೆ?

    ನವದೆಹಲಿ: ಒಂದಕ್ಕಿಂತ ಹೆಚ್ಚು ಪ್ಯಾನ್‍ಕಾರ್ಡ್‍ಗಳನ್ನ ಹೊಂದುವ ಮೂಲಕ ವಂಚನೆ ಎಸಗುವುದನ್ನ ತಡೆಯಲು ಕೇಂದ್ರ ಸರ್ಕಾರ ಈ ವರ್ಷ ಜುಲೈ 27ರವರೆಗೆ ಸುಮಾರು 11.4 ಲಕ್ಷ ಪ್ಯಾನ್‍ಕಾರ್ಡ್‍ಗಳನ್ನ ನಿಷ್ಕ್ರಿಯಗೊಳಿಸಿದೆ.

    ಇನ್‍ಕಮ್ ಟ್ಯಾಕ್ಸ್ ರಿಟನ್ರ್ಸ್ ಫೈಲ್ ಮಾಡಲು ಪ್ಯಾನ್‍ಕಾರ್ಡ್‍ನೊಂದಿಗೆ ಆಧಾರ್ ನಂಬರ್ ಸಂಯೋಜನೆಯನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿತ್ತು. ಜುಲೈ 1 ರಿಂದ ಪ್ಯಾನ್‍ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದು ಪ್ಯಾನ್‍ಕಾರ್ಡ್ ಮಾತ್ರ ಹೊಂದಬಹುದಾಗಿದೆ. ಈ ಹಿಂದೆ ಸುಳ್ಳು ಮಾಹಿತಿಯುಳ್ಳ ನಕಲಿ ಪ್ಯಾನ್‍ಕಾರ್ಡ್‍ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನ ಸರ್ಕಾರ ತನಿಖೆ ಮಾಡಿತ್ತು.

    ನಿಮ್ಮ ಪ್ಯಾನ್‍ಕಾರ್ಡ್ ವ್ಯಾಲಿಡಿಟಿ ಚೆಕ್ ಮಾಡೋದು ಹೇಗೆ:
    1. ಇನ್‍ಕಮ್ ಟ್ಯಾಕ್ಸ್ ರಿಟನ್ರ್ಸ್ ಫೈಲ್ ಮಾಡಲು ಇರುವ ಅಧಿಕೃತ ವೆಬ್‍ಸೈಟ್  incometaxindiaefiling.gov.in ಗೆ ಲಾಗ್ ಇನ್ ಆಗಬೇಕು.

    2. ವೆಬ್‍ಸೈಟ್‍ನ ಹೋಮ್‍ಪೇಜ್‍ನಲ್ಲಿ ಎಡಬದಿಯ ಕಾಲಮ್‍ನಲ್ಲಿ ಸರ್ವೀಸಸ್ ಎಂಬ ಶೀರ್ಷಿಕೆಯಡಿಯಿರುವ ನೋ ಯುವರ್ ಪ್ಯಾನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ

    3. ನಿಮ್ಮ ಹೆಸರು, ಲಿಂಗ, ಜನ್ಮದಿನಾಂಕ, ಪ್ಯಾನ್‍ಕಾರ್ಡ್ ನೊಂದಾಯಿಸಲು ಬಳಸಿದ ಮೊಬೈಲ್ ನಂಬರ್ ಸೇರಿದಂತೆ ಎಲ್ಲಾ ಅಗತ್ಯ ವಿವರಗಳನ್ನ ನೀಡಿ ಸಬ್‍ಮಿಟ್ ಬಟನ್ ಒತ್ತಿ. ನಿಮ್ಮ ನೊಂದಾಯಿಯ ಮೊಬೈಲ್ ನಂಬರ್‍ಗೆ ಒಂದು ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಬರುತ್ತದೆ.


    4. ಒಂದು ವೇಳೆ ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ನೋಂದಣಿಯಾಗಿದ್ದರೆ ಒಂದು ನೋಟಿಸ್ ಪಾಪ್ ಅಪ್ ಆಗುತ್ತದೆ. “ಒಂದಕ್ಕಿಂತ ಹೆಚ್ಚು ದಾಖಲೆ ಇದೆ. ದಯವಿಟ್ಟು ಹೆಚ್ಚಿನ ಮಾಹಿತಿ ನೀಡಿ ಎಂದು ಕೇಳುತ್ತದೆ”. ನಂತರ ಹೊಸ ಪೇಜ್‍ಗೆ ನಿಮ್ಮನ್ನು ಕೊಂಡೊಯ್ದು ನಿಮ್ಮ ಪ್ಯಾನ್ ವ್ಯಾಲಿಡಿಟಿ ಬಗ್ಗೆ ತೋರಿಸುತ್ತದೆ.
    5. ನಿಮ್ಮ ಪ್ಯಾನ್‍ಕಾರ್ಡ್ ಆ್ಯಕ್ಟೀವ್ ಆಗಿದ್ದರೆ ಆ್ಯಕ್ಟೀವ್ ಎಂದು ತೋರಿಸುತ್ತದೆ.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?