Tag: Central govt

  • Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    – ಮೃತರಿಗೆ ತಲಾ 5 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಸಾರಿಗೆ ಸಚಿವ

    ನವದೆಹಲಿ/ಹೈದರಾಬಾದ್: ಆಂಧ್ರದ ಕರ್ನೂಲಿನಲ್ಲಿ (Karnool) ನಡೆದ ಭೀಕರ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಧನ ಘೋಷಿಸಿದೆ.

    ಗುರುವಾರ (ಅ.23) ಮಧ್ಯರಾತ್ರಿ 3ರ ಸುಮಾರಿಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದು, 24 ಜನರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಪಿಎಂ ಕಚೇರಿ (PMO) ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಿಎಂ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ನೀಡುವುದಾಗಿ ತಿಳಿಸಿದೆ.ಇದನ್ನೂ ಓದಿ: Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    ಈ ಕುರಿತು ಆಂಧ್ರಪ್ರದೇಶ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ (Ram Prasad Reddy) ಮಾತನಾಡಿ, ಇದು ಹಳೆಯ ಬಸ್ ಆಗಿದ್ದ ಕಾರಣ ಇದರಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಇರಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬರ್ತಿದ್ದ ಖಾಸಗಿ ಎಸಿ ಬಸ್ ಆಂಧ್ರದ ಕರ್ನೂಲ್ ಬಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತವಾದ ಬಳಿಕವೂ ಡ್ರೈವರ್‌ ಬಸ್ ನಿಲ್ಲಿಸದೇ ಸವಾರನ ಸಮೇತ ಬೈಕ್ ಅನ್ನು ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ಈ ವೇಳೆ, ಬೈಕ್‌ನಲ್ಲಿದ್ದ ಪೆಟ್ರೋಲ್ ಚೆಲ್ಲಿ ಬಸ್ ಅಡಿ ಬೆಂಕಿ ಹೊತ್ತಿಕೊಂಡಿದೆ. ನಂತರ ಇಡೀ ಬಸ್‌ಗೆ ಬೆಂಕಿ ಹಬ್ಬಿದೆ. ಎಸಿ ಬಸ್ ಆಗಿದ್ದ ಕಾರಣ ಕ್ಷಣಾರ್ಧದಲ್ಲಿ ಇಡೀ ಬಸ್‌ಗೆ ಬೆಂಕಿ ಆವರಿಸಿದೆ.

    ಮುಂಜಾನೆ 3 ಗಂಟೆ ಸುಮಾರಿನಲ್ಲಿ ದುರಂತ ಸಂಭವಿಸಿದ್ದು, ಪ್ರಯಾಣಿಕರು ನಿದ್ದೆಯಲ್ಲಿದ್ದರು. ಹೀಗಾಗಿ, 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಕೂಡ ಸುಟ್ಟಗಾಯಗಳಿಂದಾಗಿ ಒದ್ದಾಡುತ್ತಿದ್ದಾರೆ. ದುರಂತಕ್ಕೆ ತೆಲಂಗಾಣ-ಆಂಧ್ರಪ್ರದೇಶ-ಕರ್ನಾಟಕದ ಮುಖ್ಯಮಂತ್ರಿಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ: ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು

  • ಸುಂಕದ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಲಿ – ಎಂ.ಬಿ ಪಾಟೀಲ್ ಸಲಹೆ

    ಸುಂಕದ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಲಿ – ಎಂ.ಬಿ ಪಾಟೀಲ್ ಸಲಹೆ

    ಬೆಂಗಳೂರು: ಅಮೆರಿಕವು (America) ಭಾರತದ ಉತ್ಪನ್ನಗಳ ಮೇಲೆ ವಿಪರೀತ ಸುಂಕ ವಿಧಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಈಗ ಅವರು ನಮ್ಮ ಔಷಧೋತ್ಪನ್ನಗಳ ಮೇಲೂ ವಿಪರೀತ ಸುಂಕ ಹೇರಿದ್ದಾರೆ. ಕೇಂದ್ರ ಸರ್ಕಾರವು (Central Govt) ಮಧ್ಯ ಪ್ರವೇಶಿಸಿ ಇದನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಅವರು ಹೇಳಿದರು.

    ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚೀನಾ ಮತ್ತು ವಿಯೆಟ್ನಾಂ ಎರಡೂ ಉತ್ಪಾದನೆ ಹಾಗೂ ರಫ್ತಿನಲ್ಲಿ ನಮಗಿಂತ ಮುಂದಿವೆ. ಅವುಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಶೇ.30 ಮತ್ತು ಶೇ.19ರಷ್ಟು ಮಾತ್ರ ಸುಂಕ ಹೇರಿದ್ದಾರೆ. ಆದರೆ ಭಾರತದ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿದ್ದಾರೆ. ಇದರಿಂದ ನಮಗೆ ಹೊಡೆತ ಬೀಳುತ್ತಿರುವುದು ಸುಳ್ಳಲ್ಲ ಎಂದರು.ಇದನ್ನೂ ಓದಿ: ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸಲ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಬ್ ಕೀ ಬಾರ್ ಟ್ರಂಪ್ ಎಂದು ಅವರ ಪರ ನೇರವಾಗಿ ಪ್ರಚಾರ ಮಾಡಿದ್ದರು. ಆದರೆ ಆಗ ಜೋ ಬೈಡನ್ ಗೆದ್ದರು. ಅವರೇನೂ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಲಿಲ್ಲ. ಈ ಸಲ ಗೆದ್ದು ಬಂದ ಮೇಲೆ ಟ್ರಂಪ್ ಭಾರತದ ಮೇಲೆ ಅತಾರ್ಕಿಕವಾಗಿ ಸುಂಕ ವಿಧಿಸುತ್ತಿದ್ದು, ನಾವು ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ. ಎಚ್1-ಬಿ ವೀಸಾ ಮೇಲೆ ವರ್ಷಕ್ಕೆ ಒಂದು ಲಕ್ಷ ಡಾಲರ್ ಶುಲ್ಕ ವಿಧಿಸಿರುವುದು ಆಘಾತಕಾರಿಯಾಗಿದೆ. ಇಂತಹ ತೀರ್ಮಾನ ನಮ್ಮ ಐಟಿ ಸೇವೆಗಳು ಮತ್ತು ಎಫ್.ಡಿ.ಐ. ಮೇಲೆ ಕರಿನೆರಳನ್ನು ಸೃಷ್ಟಿಸುತ್ತಿದೆ. ಮೋದಿಯವರು ಇದನ್ನು ಬಗೆಹರಿಸಬೇಕು ಎಂದು ಪ್ರತಿಪಾದಿಸಿದರು.

    ಟ್ರಂಪ್ ಇದುವರೆಗೂ ನಮ್ಮ ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳಿಗೆ ಸುಂಕದಿಂದ ವಿನಾಯಿತಿ ನೀಡಿದ್ದರು. ಆದರೆ ಈಗ ಫಾರ್ಮಾ ಉತ್ಪನ್ನಗಳನ್ನೂ ಬಿಟ್ಟಿಲ್ಲ. ಇದು ಕೇವಲ ಕರ್ನಾಟಕದ ಮೇಲೆ ಮಾತ್ರವಲ್ಲ, ಇಡೀ ಭಾರತದ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಟ್ರಂಪ್ ಏನೇ ಮಾಡಲಿ, ನಾವು ದೇಶದ ಪರವಾಗಿದ್ದೇವೆ. ನಮ್ಮಲ್ಲಿ ಅಪಾರ ಪ್ರತಿಭೆ ಇದೆ ಎಂದು ಅಭಿಪ್ರಾಯಪಟ್ಟರು.

    ಸದ್ಯದಲ್ಲೇ ಎಂಎಸ್‌ಐಎಲ್ ಚಿಟ್ ಫಂಡ್:
    ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ವತಿಯಿಂದ ವಾರ್ಷಿಕ 10 ಸಾವಿರ ಕೋಟಿ ರೂ. ವಹಿವಾಟು ಗುರಿಯುಳ್ಳ ಚಿಟ್ ಫಂಡ್ ವ್ಯವಹಾರವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.

    ಎಂಎಸ್‌ಐಎಲ್ ಸದ್ಯಕ್ಕೆ ವಾರ್ಷಿಕವಾಗಿ ಕೇವಲ 500 ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ. ಆದರೆ ಪಕ್ಕದ ಕೇರಳದಲ್ಲಿ ಅಲ್ಲಿನ ಸರ್ಕಾರವು ವರ್ಷಕ್ಕೆ 1 ಲಕ್ಷ ಕೋಟಿ ರೂ. ಮೊತ್ತದ ಚಿಟ್ ಫಂಡ್ ನಡೆಸುತ್ತಿದೆ. ಎಂಎಸ್‌ಐಎಲ್ ಉಪಕ್ರಮವು ಸಂಪೂರ್ಣವಾಗಿ ಡಿಜಿಟಲ್ ಸ್ವರೂಪದಲ್ಲಿ ಇರಲಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಉದ್ಘಾಟಿಸಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

  • ಆನ್‌ಲೈನ್ ಗೇಮಿಂಗ್ ನಿಷೇಧ – BCCI ಪ್ರಾಯೋಜಕತ್ವದಿಂದ ಹಿಂದೆ ಸರಿದ Dream11

    ಆನ್‌ಲೈನ್ ಗೇಮಿಂಗ್ ನಿಷೇಧ – BCCI ಪ್ರಾಯೋಜಕತ್ವದಿಂದ ಹಿಂದೆ ಸರಿದ Dream11

    ನವದೆಹಲಿ: ಹಣ ಹೂಡಿಕೆ ಮಾಡಿ ಆಡುವ ಆನ್‌ಲೈನ್ ಗೇಮ್‌ಗಳನ್ನು (Online Gaming) ಕೇಂದ್ರ ಸರ್ಕಾರ (Central Govt) ನಿಷೇಧಿಸಿದ ಬೆನ್ನಲ್ಲೇ ಮನಿ ಗೇಮಿಂಗ್ ಸಂಸ್ಥೆಯಾಗಿರುವ ಡ್ರೀಮ್11 (Dream11) ಬಿಸಿಸಿಐ (BCCI) ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.

    ಈ ಕುರಿತು ಡ್ರೀಮ್11 ಬಿಸಿಸಿಐಗೆ ಮಾಹಿತಿ ನೀಡಿದ್ದು, ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಸೆ.9ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೆ ಬೇರೆ ಹೊಸ ಪ್ರಾಯೋಜಕರ ಅವಶ್ಯತತೆಯಿದೆ.ಇದನ್ನೂ ಓದಿ: ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

    18 ವರ್ಷಗಳ ಹಿಂದೆ ಆರಂಭವಾಗಿದ್ದ ಡ್ರೀಮ್11 ಸಂಸ್ಥೆ 2023ರ ಜುಲೈನಲ್ಲಿ ಬಿಸಿಸಿಐ ಪ್ರಾಯೋಜಕತ್ವವನ್ನು 3 ವರ್ಷದ ಅವಧಿಗೆ ಬರೋಬ್ಬರಿ 358 ಕೋಟಿ ರೂ.ಗೆ ಪಡೆದುಕೊಂಡಿತ್ತು. ಒಪ್ಪಂದದ ಅವಧಿ ಮುಂಬರುವ 2026ರ ಜುಲೈ ತಿಂಗಳವರೆಗೆ ಇದ್ದರೂ ಕೂಡ 1 ವರ್ಷಕ್ಕೂ ಮುಂಚೆ ಸಂಸ್ಥೆ ಪ್ರಾಯೋಜಕತ್ವವನ್ನು ತೊರೆದಿದೆ.

    ಇನ್ನೂ ಇದು ಕಾನೂನು ವಿಚಾರಕ್ಕೆ ಒಳಪಟ್ಟಿರುವುದರಿಂದ ಡ್ರೀಮ್11 ಸಂಸ್ಥೆ ಅವಧಿಗೂ ಮುನ್ನ ಪ್ರಾಯೋಜತ್ವವನ್ನು ತೊರೆದಿದ್ದರೂ ಕೂಡ ಬಿಸಿಸಿಐ ಯಾವುದೇ ದಂಡ ಪಾವತಿಸಿಕೊಳ್ಳುತ್ತಿಲ್ಲ. ಸಾಮಾನ್ಯವಾಗಿ ಯಾವುದೇ ಸಂಸ್ಥೆಯು ಅವಧಿಗೆ ಮುನ್ನ ಪ್ರಾಯೋಜಕತ್ವ ತೊರೆದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ.

    ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಮಾತನಾಡಿ, ಆನ್‌ಲೈನ್ ಗೇಮಿಂಗ್ ಮಸೂದೆಯ ನಂತರ ಬಿಸಿಸಿಐ ಮತ್ತು ಡ್ರೀಮ್11 ಪರಸ್ಪರ ಸಂಬಂಧವನ್ನು ಸ್ಥಗಿತಗೊಳಿಸುತ್ತಿದ್ದು, ಭವಿಷ್ಯದಲ್ಲಿ ಈ ರೀತಿಯ ಯಾವುದೇ  ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ, ಇದನ್ನೂ ಓದಿ: ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

  • ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

    ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

    ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವ `ಆನ್‌ಲೈನ್ ಗೇಮಿಂಗ್ ತಡೆ’ (Online Gaming  Ban) ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.ಇದನ್ನೂ ಓದಿ: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಷರತ್ತು ಬದ್ಧ ಅನುಮತಿ

    ಮಂಗಳವಾರ (ಆ.19) ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆನ್‌ಲೈನ್ ಗೇಮಿಂಗ್ ಮಸೂದೆಗೆ ಅನುಮೋದನೆ ನೀಡಿದೆ. ಆನ್‌ಲೈನ್ ಬೆಟ್ಟಿಂಗ್ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಮೂಲಗಳು ತಿಳಿಸಿದ್ದು, ಈ ಮಸೂದೆಯನ್ನು ಬುಧವಾರ (ಆ.20) ಲೋಕಸಭೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

    ಮೂಲಗಳ ಪ್ರಕಾರ, ಆನ್‌ಲೈನ್ ಗೇಮ್ ಆ್ಯಪ್‌ಗಳಿಗೆ ಬ್ಯಾಂಕ್‌ಗಳು, ಸಂಸ್ಥೆಗಳು ಹಣ ವಹಿವಾಟಿಗೆ ಅನುಮತಿ ಕೊಡಬಾರದಂತೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಇತ್ತೀಚಿನ ತಿಂಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಮಸೂದೆ ಮಂಡನೆಗೆ ಕೇಂದ್ರ ಮುಂದಾಗಿದೆ. ಈಗಾಗಲೇ ಬೆಟ್ಟಿಂಗ್ ಆ್ಯಪ್ ಪ್ರಮೋಷನ್‌ನಲ್ಲಿ ಸ್ಟಾರ್‌ಗಳೂ ಭಾಗಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ.ಇದನ್ನೂ ಓದಿ: 97 LCA ಮಾರ್ಕ್ 1A ಫೈಟರ್ ಜೆಟ್‌ ಖರೀದಿಗೆ 62,000 ಕೋಟಿ ರೂ. ಒಪ್ಪಂದಕ್ಕೆ ಭಾರತ ಅನುಮೋದನೆ

  • ಬಿಜೆಪಿಯವರಿಗೆ ಧಮ್ಮು-ತಾಕತಿದ್ರೆ ಕೇಂದ್ರದಿಂದ ಯೂರಿಯಾ ಕೊಡಿಸಲಿ – ಚಲುವರಾಯಸ್ವಾಮಿ

    ಬಿಜೆಪಿಯವರಿಗೆ ಧಮ್ಮು-ತಾಕತಿದ್ರೆ ಕೇಂದ್ರದಿಂದ ಯೂರಿಯಾ ಕೊಡಿಸಲಿ – ಚಲುವರಾಯಸ್ವಾಮಿ

    ಬೆಂಗಳೂರು: ರಾಜ್ಯದಲ್ಲಿ ಯೂರಿಯಾ ಕೊರತೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಬಿಜೆಪಿಯವರು ರಾಜಕೀಯ ಮಾಡೋದು ಬಿಟ್ಟು ಧೈರ್ಯವಿದ್ದರೆ ಕೇಂದ್ರ ಸರ್ಕಾರದಿಂದ (Central Govt) ಯೂರಿಯಾ ಕೊಡಿಸಲಿ ಎಂದು ಬಿಜೆಪಿ (BJP) ನಾಯಕರ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ ಯೂರಿಯಾ ಕೊರತೆ ಅಂತ ಬಿಜೆಪಿ ಪ್ರತಿಭಟನೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಬಹಳ ಸ್ಪಷ್ಟವಾಗಿ ಎಲ್ಲೆಲ್ಲಿ ಯೂರಿಯಾ ಸರಬರಾಜು ಆಗಿದೆ ಎಂದು ಹೇಳಿದ್ದೇನೆ. ಡಿಸಿ, ಸೆಕ್ರೆಟರಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬಿಜೆಪಿಯವರಿಗೆ ಮಾತಡೋಕೆ ಬೇರೆ ವಿಷಯ ಇಲ್ಲ ಅದಕ್ಕೆ ಪ್ರತಿಭಟನೆ ಅಂತಿದ್ದಾರೆ. ಇವರಿಗೆ ಕೇಂದ್ರಕ್ಕೆ ಹೋಗಿ ಹೇಳೋ ಧಮ್ ಇಲ್ಲ. ನಾನು ಎಲ್ಲ ಎಂಪಿಗಳಿಗೆ ಹಾಗೂ ಕೇಂದ್ರ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಸಿಎಂ ಅವರು ಕೂಡ ಪತ್ರ ಬರೆದಿದ್ದಾರೆ. ಇನ್ನೂ ಏನು ಮಾಡಬೇಕಂತೆ ವಿಜಯೇಂದ್ರ, ಅಶೋಕ್‌ಗೆ ತಿರುಗೇಟು ನೀಡಿದರು.ಇದನ್ನೂ ಓದಿ:ಚೆಸ್‌ ವಿಶ್ವಕಪ್‌ | ಅನುಭವಿ ಕೊನೆರು ಹಂಪಿಗೆ ಸೋಲು, 19ರ ದಿವ್ಯಾ ದೇಶಮುಖ್‌ ಚಾಂಪಿಯನ್‌

    ಕೇಂದ್ರವೇ ನಮಗೆ ಯೂರಿಯಾ ಒದಗಿಸುತ್ತದೆ. ಹೀಗಾಗಿ ನಾವು ಇದರಲ್ಲಿ ರಾಜಕೀಯ ಮಾಡಲು ಹೋಗಿರಲಿಲ್ಲ. ಇವರು ರಾಜಕೀಯವಾಗಿ ಮಾತಾಡಿದ್ರೆ ನಾವೇನು ಮಾಡೋಕೆ ಆಗಲ್ಲ. ರಾಜ್ಯದ ಒಬ್ಬ ಮಂತ್ರಿಗಾದರೂ ಕೇಂದ್ರಕ್ಕೆ ಪತ್ರ ಬರೆಯುವ ಧಮ್ ಇದ್ಯಾ? ರಾಜ್ಯದ ರೈತರಿಗೆ ರಸಗೊಬ್ಬರ ಕೊಡುತ್ತಿದ್ದೇವೆ. ಕೊಪ್ಪಳದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ರೈತರ ಸಮಸ್ಯೆಗಳ ಮೇಲೆಯೂ ರಾಜಕಾರಣ ಮಾಡ್ತಿದ್ದಾರೆ. ಇದಕ್ಕೆ ಏನೂ ಮಾಡಲು ಆಗಲ್ಲ. ರೈತರ ಪರ ನಾವಿದ್ದೇವೆ. ಕೇಂದ್ರದಿಂದ ಬರಬೇಕಾದ ಬಾಕಿ ಯೂರಿಯಾ ಬರಲು ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ. ಬಿಜೆಪಿಯವರಿಗೆ ಧಮ್ಮು, ತಾಕತ್ತಿದ್ರೆ ಕೇಂದ್ರದ ಮೇಲೆ ಒತ್ತಡ ಹಾಕಲಿ ಅಂತ ಕಿಡಿಕಾರಿದರು.

    ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಆಗ್ತಿದೆ ಎಂಬ ಬಿಜೆಪಿ ಅರೋಪಕ್ಕೆ ತಿರುಗೇಟು ಕೊಟ್ಟ ಅವರು, ಇಲ್ಲದೆ ಇರೋದನ್ನ ಹೇಳಿದ್ರೆ ನಾವು ಏನು ಮಾಡೋಕೆ ಆಗಲ್ಲ. ವಿಜಿಲೆನ್ಸ್ ಇದೆ, ಸಾವಿರಾರು ರೀಟೈಲ್ ಸೆಂಟರ್ ಇವೆ. ಇಂತಹದ್ದು ಕಂಡು ಬಂದ್ರೆ ಬ್ಲಾಕ್ ಲಿಸ್ಟ್ಗೆ ಸೇರಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರ ಎಂಟು ಮೆಟ್ರಿಕ್ ಟನ್ ಯೂರಿಯಾ ಕೊಟ್ಟಿದೆ. ಆರು ಮೆಟ್ರಿಕ್ ಟನ್ ಎಲ್ಲಿ ಹೋಯ್ತು ಎಂಬ ವಿಜಯೇಂದ್ರ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ವಿಜಯೇಂದ್ರಗೆ ಬುದ್ಧಿ ಇದ್ಯಾ? ಹಳೆಯ ಬ್ಯಾಲೆನ್ಸ್ ಯಾವುದು ಇದೆ ಅಂತ ವಿಜಯೇಂದ್ರಗೆ ಗೊತ್ತಿಲ್ಲ. ಪಾಪ ಅವರಿಗೆ ಅನುಭವದ ಕೊರತೆ ಇದೆ. ನಮ್ಮ ಅಶೋಕಣ್ಣನಿಗೆ ಎಲ್ಲಾ ಗೊತ್ತಿದೆ. ಅಧಿಕಾರ ಮಾಡಿದ ಅನುಭವ ಇದೆ. ಪಾಪ ಅವರಿಗೆ ಮಾತಾಡೋಕೆ ಬರಲ್ಲ. ಎಂಟೂವರೇ ಲಕ್ಷದಲ್ಲಿ ಆರು ಲಕ್ಷ ಯೂರಿಯಾ ಬಂದಿದೆ. ಇನ್ನೂ ಒಂದೂವರೇ ಲಕ್ಷ ಯೂರಿಯಾ ಬರಬೇಕಿದೆ. ನಾನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಜೊತೆ ಮಾತಾಡಿದ್ದೇನೆ. ಇಲ್ಲಿ ಇರೋರಿಗೆ ಅದರ ಬಗ್ಗೆ ಗೊತ್ತಿಲ್ಲ. ಕೇಂದ್ರದ ಜೊತೆ ಮಾತನಾಡಿ ಬಾಕಿ ಇರುವ ಯೂರಿಯಾವನ್ನ ಕೊಡಿಸಲಿ ಎಂದು ವಿಜಯೇಂದ್ರಗೆ ಸವಾಲ್ ಹಾಕಿದರು.ಇದನ್ನೂ ಓದಿ: ಮಜಾವಾದಿ ಸಿದ್ದರಾಮಯ್ಯ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು – ಜೆಡಿಎಸ್

  • 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ

    2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ

    – ಮಾವು ಮಾರುಕಟ್ಟೆ ಮಧ್ಯಪ್ರವೇಶ; ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ: ಚಲುವರಾಯಸ್ವಾಮಿ

    ಬೆಂಗಳೂರು: ನಿರಂತರ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಮಾವು ಬೆಳೆಗಾರರ ನೆರವಿಗೆ ಸರ್ಕಾರ ದಾವಿಸಿದೆ. ರಾಜ್ಯದಲ್ಲಿ ಮಾವಿನ‌ (Mangoes) ಬೆಲೆ ಕುಸಿತದ ಹಿನ್ನೆಲೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರವೂ ಸಕಾರಾತ್ಮಕ ಸಮ್ಮತಿ ನೀಡಿದೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡೂ ಪ್ರತಿ ಕೆ.ಜಿ.ಗೆ ಎರೆಡೆರೆಡು ರೂ. ಗಳಂತೆ ಒಟ್ಟು‌ 4 ರೂ. ವ್ಯತ್ಯಾಸ ಪಾವತಿಸಿ ಮಾರುಕಟ್ಟೆ ಚೈತನ್ಯಕ್ಕೆ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಿವೆ. ಇಂದು ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (Chaluvaraya Swamy) ವಿಡಿಯೋ‌ ಸಂವಾದದ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾವು ಬೆಳೆಗಾರರ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಹೆಲ್ಪ್‌ಲೈನ್‌ ಹೆಸರಲ್ಲಿ ವಂಚನೆ ಆರೋಪ – ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ ಎಫ್‌ಐಆರ್

    2025-26ನೇ ಸಾಲಿನ ಮಾರುಕಟ್ಟೆ ಋತುವಿನಲ್ಲಿ ಮಾವಿಗೆ PDPS ಯೋಜನೆಯ ಅನುಷ್ಠಾನಕ್ಕೆ ಸಚಿವ ಚಲುವರಾಯಸ್ವಾಮಿ ಮಾಡಿದ ಮನವಿಗೆ ಕೇಂದ್ರ ಕೃಷಿ ಸಚಿವರೂ ಸಹ ಸಮ್ಮತಿ ನೀಡಿದರು.

    2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸೋಮವಾರ ಈ‌ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ‌ಇದೆ. ಈ‌ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ‌ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ: ಸಚಿವ ವೆಂಕಟೇಶ್

    ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲೊಂದಾಗಿದೆ. 2025-26ನೇ ಋತುವಿನಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಅಂದಾಜು 8 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರಮುಖ ಮಾವು ಬೆಳೆ ಪ್ರದೇಶಗಳಾಗಿವೆ. ಕರ್ನಾಟಕದಲ್ಲಿ, ಮಾವಿನ ಕೊಯ್ಲು ಮೇ ನಿಂದ ಜುಲೈ ವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ, ಮಾರುಕಟ್ಟೆ ಬೆಲೆಗಳಲ್ಲಿ ಗಮನಾರ್ಹ ಏರಿಳಿತಗಳನ್ನು ಗಮನಿಸಲಾಗಿದೆ.

    2025ರ ಮೇ ತಿಂಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಮಾದರಿ ಬೆಲೆಗಳು ಕ್ವಿಂಟಾಲ್‌ಗೆ 1,200 ರೂ. ನಿಂದ 2,500 ರೂ. ವರೆಗೆ ಇತ್ತು. ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ತೋತಾಪುರಿ ವರಿಟೆಯ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಪ್ರತಿ ಕ್ವಿಂಟಾಲ್‌ಗೆ 450-550 ರೂ.ಗೆ ಕುಸಿದಿದೆ. ಕರ್ನಾಟಕ ಕೃಷಿ ಬೆಲೆ ಆಯೋಗವು ಮಾವಿನ A1 + FL ಕೃಷಿ ವೆಚ್ಚವನ್ನು ಕ್ವಿಂಟಲ್‌ಗೆ 3,460 ರೂ. ಮತ್ತು C-3 ವೆಚ್ಚಕ್ಕೆ 5,466 ರೂ. ಎಂದು ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಜೂ.11 ರಂದು ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು. ಜೂ.13 ರಂದು ಸ್ಪಷ್ಟೀಕರಣಗಳಿಗೆ ಉತ್ತರವನ್ನು ನೀಡಲಾಯಿತು. ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು PDPS ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ.

  • ಜಾತಿಗಣತಿ ಲೋಪ ಸರಿ ಮಾಡಲು ಹೊಸ ಜಾತಿಗಣತಿ: ಲಕ್ಷ್ಮಣ್ ಸವದಿ

    ಜಾತಿಗಣತಿ ಲೋಪ ಸರಿ ಮಾಡಲು ಹೊಸ ಜಾತಿಗಣತಿ: ಲಕ್ಷ್ಮಣ್ ಸವದಿ

    ಬೆಂಗಳೂರು: ಜಾತಿಗಣತಿಯಲ್ಲಿ (Caste Census) ಕೆಲ ಲೋಪಗಳಿದ್ದವು, ಹೀಗಾಗಿ ಅದನ್ನು ಸರಿ ಮಾಡಲು ಹೊಸ ಜಾತಿಗಣತಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ (Laxman Savadi) ತಿಳಿಸಿದರು.ಇದನ್ನೂ ಓದಿ: ಶಾರ್ಟ್‌ಕಟ್‌ನಲ್ಲಿ ಬಂದಿದ್ದಕ್ಕೆ ಇಂಗ್ಲಿಷ್‌ನಲ್ಲಿ ಕೆಟ್ಟದಾಗಿ ಬೈಯ್ದು, ಹಲ್ಲೆ ಮಾಡಿದ್ರು – ರ‍್ಯಾಪಿಡೊ ಚಾಲಕ ಸುಹಾಸ್‌

    ಹೊಸ ಜಾತಿಗಣತಿಗೆ ಸರ್ಕಾರ ನಿರ್ಧರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್‌ಗೆ ಸಿಎಂ ತಲೆಬಾಗಿದ್ದಾರೆ. ಸರ್ವೇ ಬಗ್ಗೆ ಕೆಲವು ಸಮುದಾಯಗಳ ವಿರೋಧ ಇತ್ತು. ಇದನ್ನ ಸರಿಪಡಿಸಲು ಹೈಕಮಾಂಡ್ ನಾಯಕರು ಸಿಎಂ ಜೊತೆ ಚರ್ಚೆ ಮಾಡಿ, ಹೊಸ ಜಾತಿಗಣತಿ ಮಾಡುವುದಾಗಿ ಹೇಳಿದ್ದಾರೆ. ಎಲ್ಲಿ ಲೋಪ ಆಗಿದೆ ಅದನ್ನು ಸರಿ ಮಾಡಲು ಮುಂದಾಗಿದ್ದಾರೆ. ಇದರಿಂದ ಒಳ್ಳೆಯದಾಗಿದೆ. ಕೇಂದ್ರ ಸರ್ಕಾರ ಗಣತಿ ಮಾಡಲಿ ಅದರ ಜೊತೆ ಹೋಲಿಕೆ ಮಾಡಲು ನಮಗೆ ಗಣತಿ ಬೇಕಾಗುತ್ತದೆ ಎಂದರು.

    ಕಾಲ್ತುಳಿತ ಪ್ರಕರಣ ಡೈವರ್ಟ್ ಮಾಡಲು ಜಾತಿಗಣತಿ ವಿಷಯ ತಂದಿದ್ದಾರೆ ಎಂಬ ಬಿಜೆಪಿ (BJP) ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಅವರಿಗೆ ಆರೋಪ ಮಾಡುವುದೇ ಕೆಲಸ. ಅವರು ಆರೋಪ ಮಾಡಲಿ. ಬಿಜೆಪಿ ಒಳಜಗಳ ಮುಚ್ಚಿ ಹಾಕೋಕೆ ಕಾಲ್ತುಳಿತ ಪ್ರಕರಣ ತೆಗೆದುಕೊಂಡಿದ್ದಾರೆ. ಯತ್ನಾಳ್ ಸೇರಿ ಮೂರು ಗುಂಪಿದೆ. ಪಕ್ಷ ಉದ್ಧಾರ ಆಗುವುದಿಲ್ಲ. ಇವರಿಗೆ ಬುದ್ಧಿ ಇಲ್ಲ ಎಂದು ಜನ ಮಾತಾಡುತ್ತಿದ್ದಾರೆ. ಅದನ್ನ ಡೈವರ್ಟ್ ಮಾಡೋಕೆ ಈ ವಿಷಯ ತೆಗೆದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಇಂದಿನಿಂದ ಗೂಗಲ್‌ ಪೇ, ಫೋನ್‌ ಪೇ ಮತ್ತಷ್ಟು ಫಾಸ್ಟ್‌ – ಏನೇನು ಬದಲಾವಣೆ?

  • ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?

    ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?

    – ಠೇವಣಿ ವಿಮೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ; ಠೇವಣಿದಾರರಿಗೆ ಹೇಗೆ ಸಹಾಯ ಮಾಡುತ್ತೆ?

    ದುಡಿಯುವ ಹಣಕ್ಕೆ ಸುರಕ್ಷಿತೆ ಬೇಕು, ಅದನ್ನು ಲಾಭದಾಯಕವಾಗಿ ಪರಿವರ್ತಿಸಬೇಕು ಎಂಬ ಉದ್ದೇಶದಿಂದ ಜನರು ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ. ಠೇವಣಿ ಇಟ್ಟರೂ ಕೆಲವೇ ಲಕ್ಷಕ್ಕೆ ಮಾತ್ರ ಬ್ಯಾಂಕ್‌ನಲ್ಲಿ ಗ್ಯಾರಂಟಿ ಎಂಬ ಚಿಂತೆ ಜನರಲ್ಲಿತ್ತು. ಈಗ ಆ ಚಿಂತೆಯನ್ನು ದೂರ ಮಾಡಲು ಸರ್ಕಾರ ಮುಂದಾಗಿದೆ. ಪ್ರಸ್ತುತ ಇರುವ ಠೇವಣಿ ವಿಮಾ ಮಿತಿಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಹೆಚ್ಚಿನ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು ಗ್ರಾಹಕರಿಗೆ ತುಂಬಾ ಅನುಕೂಲ ಆಗಲಿದೆ.

    ಏನಿದು ಠೇವಣಿ ವಿಮೆ? ಇದುವರೆಗೆ ಬ್ಯಾಂಕ್‌ನಲ್ಲಿ ಒಬ್ಬ ಗ್ರಾಹಕರಿಗೆ ಎಷ್ಟು ಹಣಕ್ಕೆ ಸುರಕ್ಷತೆ ಇತ್ತು. ಈಗ ಎಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ? ಇದರಿಂದ ಠೇವಣಿದಾರರಿಗೆ ಸಹಾಯವಾಗುತ್ತಾ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಠೇವಣಿ ಎಂದರೇನು?
    ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬ್ಯಾಂಕ್‌ನಲ್ಲಿ ಇರಿಸಲಾಗುವುದ ಹಣದ ಮೊತ್ತ. ಠೇವಣಿಯನ್ನು ಯಾರು ಇಡುತ್ತಾರೋ ಅವರ ಹೆಸರಲ್ಲೇ ಹಣ ಜಮೆ ಆಗಿರುತ್ತದೆ. ಈ ಹಣವನ್ನು ಅವರು ತಮಗೆ ಬೇಕೆಂದಾಗ ಹಿಂತೆಗೆದುಕೊಳ್ಳಬಹುದು. ಅಥವಾ ಬ್ಯಾಂಕ್ ವಹಿವಾಟು ಮೂಲಕ ಬೇರೆಯವರ ಖಾತೆಗೆ ವರ್ಗಾಯಿಸಲೂ ಬಹುದು.

    ಠೇವಣಿ ವಿಮೆ ಎಂದರೇನು?
    ಯಾವುದೇ ಬ್ಯಾಂಕ್ ತನ್ನ ಗ್ರಾಹಕನ ಠೇವಣಿ ಮೇಲೆ ವಿಮೆ (ಡೆಪಾಸಿಟ್ ಇನ್ಶುರೆನ್ಸ್) ಮಾಡಿಸಿರುತ್ತದೆ. ಆರ್‌ಬಿಐನ ಅಂಗಸಂಸ್ಥೆಯಾಗಿರುವ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ಗೆ (ಡಿಐಸಿಜಿಸಿ) ನಿರ್ದಿಷ್ಟ ಕಂತು ಪಾವತಿಸುವ ಮೂಲಕ ಬ್ಯಾಂಕ್‌ಗಳು ಗ್ರಾಹಕರ ಠೇವಣಿಗೆ ಭದ್ರತೆ ಒದಗಿಸಿರುತ್ತವೆ. ಒಂದು ವೇಳೆ ಬ್ಯಾಂಕ್‌ಗಳು ದಿವಾಳಿಯಾದರೆ, ಸಂಕಷ್ಟಕ್ಕೆ ಸಿಲುಕಿದರೆ ಅಥವಾ ಠೇವಣಿದಾರರ ಹಣ ಮರಳಿಸಲು ವಿಫಲವಾದರೆ ಗ್ರಾಹಕರಿಗೆ ನಿರ್ದಿಷ್ಟಪಡಿಸಿದ ಠೇವಣಿ ಹಣವನ್ನು ಡಿಐಸಿಜಿಸಿ ಪಾವತಿಸುತ್ತದೆ.

    ಏನಿದು ಡಿಐಸಿಜಿಸಿ?
    ಡಿಐಸಿಜಿಸಿ ಆರ್‌ಬಿಐನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳನ್ನು ಒಳಗೊಂಡಿರುವ ಠೇವಣಿ ವಿಮೆಯನ್ನು ನಿರ್ವಹಿಸುತ್ತದೆ. 2023-24ರಲ್ಲಿ ಡಿಐಸಿಜಿಸಿ 1,432 ಕೋಟಿ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಿದೆ. ಕಳೆದ ವರ್ಷದ ಅಂತ್ಯಕ್ಕೆ 1,997 ವಿಮೆ ಮಾಡಲಾದ ಬ್ಯಾಂಕ್‌ಗಳು ಡಿಐಸಿಜಿಸಿಯಲ್ಲಿ ನೋಂದಣಿಯಾಗಿವೆ. ಅವುಗಳನ್ನು 140 ವಾಣಿಜ್ಯ ಬ್ಯಾಂಕ್‌ಗಳು ಮತ್ತು 1,875 ಸಹಕಾರಿ ಬ್ಯಾಂಕ್‌ಗಳಾಗಿವೆ.

    ಭಾರತದಲ್ಲಿ ಪ್ರಾರಂಭವಾಗಿದ್ದು ಯಾವಾಗ?
    ರೇವಣಿ ವಿಮೆ ಭಾರತದಲ್ಲಿ 1996ರ ಜ.1 ರಂದು ಪ್ರಾರಂಭವಾಯಿತು. ಆಗ ಠೇವಣಿ ವಿಮಾ ನಿಗಮ (ಡಿಐಸಿ) ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಡಿಯಲ್ಲಿ ಸ್ಥಾಪಿಸಲಾಯಿತು.

    ಠೇವಣಿ ವಿಮಾ ಮಿತಿ ಹಿಂದೆ ಎಷ್ಟಿತ್ತು?
    1962, ಜನವರಿ 1: 1,500
    1968, ಜನವರಿ 1: 5,000
    1970, ಏಪ್ರಿಲ್ 1: 10,000
    1976, ಜನವರಿ 1: 20,000
    1980, ಜುಲೈ 1: 30,000
    1993, ಮೇ 1 1,00,000

    ಈಗ ಎಷ್ಟಿದೆ?
    2020ರ ಫೆಬ್ರವರಿ 4 ರಂದು ಠೇವಣಿ ವಿಮಾ ಮಿತಿಯ ಮೊತ್ತವನ್ನು ಸರ್ಕಾರ 5 ಲಕ್ಷ ರೂ. ವರೆಗೆ ಹೆಚ್ಚಿಸಿತ್ತು. ಈ ಮಿತಿಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ವಿಮೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರ ಪರಿಗಣಿಸುತ್ತಿದೆ. ಸರ್ಕಾರ ಅನುಮೋದನೆ ನೀಡಿದ ಬಳಿಕ ಅಧಿಸೂಚನೆ ಹೊರಡಿಸಲಾಗುವುದು ಎನ್ನಲಾಗಿದೆ. ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

    ಏನಿದು ಬ್ಯಾಂಕ್ ಹಗರಣ?
    ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ 122 ಕೋಟಿ ರೂ. ಹಗರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ಅಕೌಂಟೆಂಟ್, ಆತನ ಸಹಚರನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಬ್ಯಾಂಕ್‌ನ ಮಾಜಿ ಸಿಇಒ ಬಂಧನ ಕೂಡ ಆಗಿದೆ. ಬ್ಯಾಂಕಿನ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ಅಕೌಂಟೆಂಟ್ ಹಿತೇಶ್ ಮೆಹ್ತಾ ಅವರು ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಪ್ರಭಾದೇವಿ ಮತ್ತು ಗೊರೆಗಾಂವ್ ಬ್ಯಾಂಕಿನ ಕಚೇರಿಗಳ ತಿಜೋರಿಯಲ್ಲಿದ್ದ ಹಣದಿಂದ 122 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಆರ್‌ಬಿಐ ಕೈಗೊಂಡ ಕ್ರಮಗಳೇನು?
    ಮೇಲ್ವಿಚಾರಣಾ ವೈಫಲ್ಯ, ಕಳಪೆ ಆಡಳಿತ ಮಾನದಂಡಗಳನ್ನು ಉಲ್ಲೇಖಿಸಿ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯನ್ನು 12 ತಿಂಗಳ ಕಾಲ ಆರ್‌ಬಿಐ ರದ್ದುಗೊಳಿಸಿದೆ. ಜೊತೆಗೆ ಬ್ಯಾಂಕ್‌ಗೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಬ್ಯಾಂಕ್ ಹೊಸ ವ್ಯವಹಾರ ನಡೆಸುವುದು, ಹಣ ಹಿಂಡೆಯುವಕ್ಕೂ ಬ್ರೇಕ್ ಹಾಕಿದೆ. ಯಾವುದೇ ಸಾಲ ಮತ್ತು ಮುಂಗಡಗಳನ್ನು ಮಂಜೂರು ಮಾಡದಂತೆ ನಿರ್ದೇಶನ ನೀಡಿದೆ. ಫೆಬ್ರವರಿ 13ರಂದು ಬ್ಯಾಂಕ್ ವ್ಯವಹಾರ ಮುಗಿದ ನಂತರ ಈ ನಿರ್ಬಂಧಗಳು ಜಾರಿಗೆ ಬಂದಿವೆ.

    ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಮುಂಬೈ, ಥಾಣೆ, ನವಿ ಮುಂಬೈ ಮತ್ತು ಪುಣೆ ಹಾಗೂ ಗುಜರಾತ್‌ನ ಸೂರತ್‌ನಲ್ಲಿ 30 ಶಾಖೆಗಳನ್ನು ಹೊಂದಿದೆ. 2024ರ ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್ 2,436 ಕೋಟಿ ರೂ. ಠೇವಣಿ ಮೂಲವನ್ನು ಹೊಂದಿತ್ತು. 2023-24ರಲ್ಲಿ 22.78 ಕೋಟಿ ರೂ. ಮತ್ತು 2022-34ರಲ್ಲಿ 30.74 ಕೋಟಿ ರೂ. ನಷ್ಟವನ್ನು ಬ್ಯಾಂಗಳು ದಾಖಲಿಸಿವೆ.

    ಠೇವಣಿ ವಿಮಾ ಮಿತಿ ಹೆಚ್ಚಳಕ್ಕೆ ಕಾರಣವೇನು?
    ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ.ರಾಜೇಶ್ವರ್ ರಾವ್ ಅವರು, ಕಳೆದ ವರ್ಷದ ಮಾ.31ರ ಅಂಕಿಅಂಶದಂತೆ ಸಂಪೂರ್ಣ ಸಂರಕ್ಷಿತ ಖಾತೆಗಳು 97.8% ರಷ್ಟಿವೆ. ಇದು ಅಂತಾರಾಷ್ಟ್ರೀಯ ಮಾನದಂಡದ 80% ಗಿಂತ ಹೆಚ್ಚಿದೆ. ಬ್ಯಾಂಕ್ ಠೇವಣಿಗಳ ಮೌಲ್ಯದಲ್ಲಿನ ಬೆಳವಣಿಗೆ, ಆರ್ಥಿಕ ಬೆಳವಣಿಗೆ ದರ, ಹಣದುಬ್ಬರ, ಆದಾಯ ಮಟ್ಟಗಳಲ್ಲಿನ ಹೆಚ್ಚಳ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ಮಿತಿಯನ್ನು ನಿಯತಕಾಲಿಕವಾಗಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.

    ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಂತಹ ವೈಫಲ್ಯಗಳು ಠೇವಣಿದಾರರ ಹಿತಾಸಕ್ತಿಗೆ ಮಾರಕವಾಗಿವೆ. ಇದರಿಂದ ಗ್ರಾಹಕರಲ್ಲಿ ವಿಶ್ವಾಸ ಕುಂದಬಹುದು. ಹೆಚ್ಚಿನ ಠೇವಣಿ ಮೊತ್ತ ಇಡಲು ಹಿಂಜರಿಯಬಹುದು. ಠೇವಣಿ ವಿಮಾ ಮಿತಿ ಹೆಚ್ಚಿಸುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಬಹುದು. ಆ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • ಇನ್ಮುಂದೆ 5, 8ನೇ ತರಗತಿ ವಿದ್ಯಾರ್ಥಿಗಳು ಫೇಲ್‌ ಆಗ್ತಾರಾ?; ಏನಿದು ‘ನೋ-ಡಿಟೆನ್ಷನ್‌ ಪಾಲಿಸಿ’?

    ಇನ್ಮುಂದೆ 5, 8ನೇ ತರಗತಿ ವಿದ್ಯಾರ್ಥಿಗಳು ಫೇಲ್‌ ಆಗ್ತಾರಾ?; ಏನಿದು ‘ನೋ-ಡಿಟೆನ್ಷನ್‌ ಪಾಲಿಸಿ’?

    – ವಿದ್ಯಾರ್ಥಿಗಳನ್ನು ಪಾಸ್‌ ಮಾಡುವ ನಿಯಮವನ್ನ ಕೇಂದ್ರ ರದ್ದುಗೊಳಿಸಿದ್ಯಾಕೆ?

    ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ನೀತಿಯಲ್ಲಿ ಮೇಜರ್ ಸರ್ಜರಿ ಮಾಡಿದೆ. ತನ್ನ ಅಡಿಯಲ್ಲಿ ಬರುವ ಶಾಲೆಗಳಲ್ಲಿ 5, 8ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನೋ-ಡಿಟೆನ್ಷನ್ ಪಾಲಿಸಿ’ (ಅನುತ್ತೀರ್ಣ ರಹಿತ ನೀತಿ) ರದ್ದುಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ಪರೀಕ್ಷೆಯನ್ನು ಸರಿಯಾಗಿ ಬರೆಯದಿದ್ದರೂ ಪಾಸ್ ಆಗಬಹುದು ಎಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಕೇಂದ್ರದ ಈ ಕ್ರಮ ಬಿಸಿ ತುಪ್ಪವಾಗಿದೆ.

    ಏನಿದು ಕೇಂದ್ರದ ಹೊಸ ನೀತಿ? ಈ ಪಾಲಿಸಿ ವ್ಯಾಪ್ತಿಗೆ ಯಾವ ವಿದ್ಯಾರ್ಥಿಗಳು ಬರುತ್ತಾರೆ? ಯಾವ ರಾಜ್ಯಗಳಿಗೆ ನೀತಿ ಅನ್ವಯಿಸುತ್ತೆ ಮತ್ತು ಅನ್ವಯಿಸಲ್ಲ ಎಂಬೆಲ್ಲ ಪ್ರಶ್ನೆಗಳಿಗೆ ವಿವರ ಇಲ್ಲಿದೆ. ಇದನ್ನೂ ಓದಿ: INDIA ಒಕ್ಕೂಟದಿಂದ ಕಾಂಗ್ರೆಸ್‌ ಉಚ್ಚಾಟಿಸಿ – ಆಪ್‌ ಬಂಡಾಯ!

    ನೋ-ಡಿಟೆನ್ಷನ್ ಪಾಲಿಸಿ, ಏನಿದು?
    ಕೇಂದ್ರದ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ 5, 8ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನೋ-ಡಿಟೆನ್ಷನ್ ಪಾಲಿಸಿ’ (No-Detention Policy) ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಹುದು. ಅವರು ಪರೀಕ್ಷೆಗಳನ್ನು ಪುನಃ ತೆಗೆದುಕೊಳ್ಳಬೇಕಾಗುತ್ತದೆ.

    ಪಾಲಿಸಿ ರದ್ದು ಯಾಕೆ?
    ಕಲಿಕೆಯಲ್ಲಿ ವಿದ್ಯಾರ್ಥಿಗಳ ಏಳಿಗೆಗಾಗಿ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಲಹೆ, ಸೂಚನೆಗಳ ಜೊತೆಗೆ 2 ತಿಂಗಳ ಒಳಗಾಗಿ ಮರುಪರೀಕ್ಷೆ ನಡೆಸಲಾಗುತ್ತದೆ. ಆಗಲೂ ಪಾಸ್ ಆಗದಿದ್ದರೆ ಅವರನ್ನು ಫೇಲ್ ಎಂದೇ ಪರಿಗಣಿಸಲಾಗುತ್ತದೆ. ಅವರನ್ನು 5 ಮತ್ತು 8ನೇ ತರಗತಿಯಲ್ಲೇ ಉಳಿಸಿಕೊಳ್ಳಲಾಗುತ್ತದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿ ಮತ್ತು ಅಗತ್ಯಬಿದ್ದರೆ ಪೋಷಕರಿಗೆ ತರಗತಿ ಶಿಕ್ಷಕರು ಹೆಚ್ಚುವರಿ ಸಲಹೆ, ಸೂಚನೆಗಳನ್ನು ನೀಡುತ್ತಾರೆ ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

    ಆರ್‌ಟಿಇ 2019 ಕಾಯ್ದೆಗೆ ತಿದ್ದುಪಡಿ
    ಹೊಸ ನೀತಿ ಜಾರಿಗೊಳಿಸಲು ಕೇಂದ್ರ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಆರ್‌ಟಿಇ) 2019 ಕಾಯ್ದೆಗೆ ತಿದ್ದುಪಡಿ ತಂದಿದೆ. ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 16, 8ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂರಿಸುವುದಕ್ಕೆ ನಿರ್ಬಂಧಿಸಿದೆ. ಈ ನೋ-ಡಿಟೆನ್ಷನ್ ನೀತಿಯನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ಈಚೆಗೆ ಲೋಕಸಭೆಯಲ್ಲಿ ಮಂಡಿಸಲಾಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಇದನ್ನು ಹೆಚ್ಚಿನ ರಾಜ್ಯ ಸರ್ಕಾರಗಳು ಬೆಂಬಲಿಸಿದ ಪ್ರಮುಖ ಸುಧಾರಣೆ ಎಂದು ಬಣ್ಣಿಸಿದ್ದಾರೆ.

    ನೀತಿಯ ರದ್ದತಿಯು ಪ್ರಾಥಮಿಕ ಶಿಕ್ಷಣಕ್ಕೆ ಹೊಣೆಗಾರಿಕೆಯನ್ನು ತರುತ್ತದೆ. ಶಾಲೆಗಳು ಕೇವಲ ಮಧ್ಯಾಹ್ನದ ಊಟದ ಶಾಲೆಗಳಾಗಿ ಮಾರ್ಪಟ್ಟಿವೆ. ವಿದ್ಯಾರ್ಥಿಗಳು ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಲ್ಲಿ ಶಿಕ್ಷಣ ಮತ್ತು ಕಲಿಕೆ ಕಾಣೆಯಾಗಿದೆ ಎಂಬುದು ಕೇಂದ್ರದ ಅಭಿಪ್ರಾಯ.

    ನೋ-ಡಿಟೆನ್ಷನ್ ಪಾಲಿಸಿ ಬಂದಿದ್ಯಾವಾಗ?
    ಶಿಕ್ಷಣ ಹಕ್ಕು ಕಾಯ್ದೆಯಡಿ 2009ರಲ್ಲಿ ‘ನೋ ಡಿಟೆನ್ಷನ್ ಪಾಲಿಸಿ’ಯನ್ನು ಪರಿಚಯಿಸಲಾಯಿತು. ಭಾರತದ ಪ್ರತಿ ವಿದ್ಯಾರ್ಥಿಯು 8ನೇ ತರಗತಿ ವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಇದು ಹೊಂದಿತ್ತು. ವಿವಿಧ ಹಿನ್ನೆಲೆಯ ಮಕ್ಕಳಿಗೆ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿತ್ತು. ಶೈಕ್ಷಣಿಕ ಸವಾಲುಗಳನ್ನು ಲೆಕ್ಕಿಸದೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಅವರಿಗೆ ಅನುವು ಮಾಡಿಕೊಟ್ಟಿತ್ತು. ಮಕ್ಕಳು ಶಾಲೆ ಬಿಡುವುದನ್ನು ತಡೆಗಟ್ಟಲು ಮತ್ತು ಹಾಜರಾತಿ ಪ್ರಮಾಣ ಹೆಚ್ಚಿಸಲು ಈ ನೀತಿ ನಿರ್ಣಾಯಕವಾಗಿತ್ತು ಎಂದು ಶಿಕ್ಷಣ ತಜ್ಞರು ಆಗ ನೀತಿ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ವಾಜಪೇಯಿ ಜನ್ಮದಿನಕ್ಕೆ ಮೋದಿ ಗಿಫ್ಟ್ – ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಶಿಲಾನ್ಯಾಸ

    ಆದಾಗ್ಯೂ, ಹಲವು ರಾಜ್ಯಗಳು ಈ ನೀತಿಯನ್ನು ವಿರೋಧಿಸಿದವು. ಇದು ವಿದ್ಯಾರ್ಥಿಗಳನ್ನು ಬೋರ್ಡ್ ಪರೀಕ್ಷೆಗಳಿಗೆ ಸರಿಯಾಗಿ ತಯಾರಾಗದಂತೆ ಮಾಡಿದೆ. 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ವೈಫಲ್ಯಕ್ಕೆ ಕಾರಣವಾಗಿದೆ ಎಂದು ವಾದಿಸಿದ್ದವು. ಪರಿಣಾಮವಾಗಿ 2015ರಲ್ಲಿ ಸಿಎಬಿಇ ಸಭೆಯಲ್ಲಿ 28ರ ಪೈಕಿ 23 ರಾಜ್ಯಗಳು ನೀತಿಯನ್ನು ರದ್ದುಗೊಳಿಸಲು ಶಿಫಾರಸು ಮಾಡಿದವು. 5 ಮತ್ತು 8ನೇ ತರಗತಿಗಳಲ್ಲಿ ನಿಯಮಿತ ಪರೀಕ್ಷೆಗಳನ್ನು ನಡೆಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟವು.

    ಯಾವ ರಾಜ್ಯಗಳಲ್ಲಿ ಈಗಾಗಲೇ ನೀತಿ ರದ್ದು?
    15ಕ್ಕೂ ಹೆಚ್ಚು ರಾಜ್ಯಗಳು ನೋ-ಡಿಟೆನ್ಷನ್ ನೀತಿಯನ್ನು ರದ್ದುಗೊಳಿಸಿವೆ. ಅಸ್ಸಾಂ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಜಾರ್ಖಂಡ್, wಮಧ್ಯಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ನೀತಿ ಜಾರಿಯಲ್ಲಿಲ್ಲ.

    ಯಾವ ರಾಜ್ಯಗಳಲ್ಲಿ ನೀತಿ ಜಾರಿಯಲ್ಲಿದೆ?
    ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸಗಢ, ಗೋವಾ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ಲಡಾಖ್‌ನಲ್ಲಿ ನೋ-ಡಿಟೆನ್ಷನ್ ಪಾಲಿಸಿ ಇನ್ನೂ ಜಾರಿಯಲ್ಲಿದೆ. ಮುಖ್ಯವಾಗಿ, ಹರಿಯಾಣ ಮತ್ತು ಪುದುಚೇರಿ ಈ ನೀತಿಯ ಅನುಷ್ಠಾನದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದನ್ನೂ ಓದಿ: Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ

    ಪರಿಣಾಮ ಯಾರ ಮೇಲೆ?
    ಕೇಂದ್ರೀಯ ವಿದ್ಯಾಲಯಗಳು, ಜವಾಹರ ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳು (ರಕ್ಷಣಾ ಸಚಿವಾಲಯದ ಅಡಿಯಲ್ಲಿ), ಏಕಲವ್ಯ ಮಾದರಿ ವಸತಿ ಶಾಲೆಗಳು (ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ) ಸೇರಿದಂತೆ ಕೇಂದ್ರ ಸರ್ಕಾರ ನಡೆಸುತ್ತಿರುವ ಸುಮಾರು 3,000 ಕ್ಕೂ ಹೆಚ್ಚು ಶಾಲೆಗಳಿಗೆ ಈ ನಿಯಮ ಅನ್ವಯವಾಗಲಿದೆ.

  • IAS ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ – ಕೇಂದ್ರ ಸರ್ಕಾರ ಆದೇಶ

    IAS ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ – ಕೇಂದ್ರ ಸರ್ಕಾರ ಆದೇಶ

    ಮುಂಬೈ: ಕೇಂದ್ರ ಸರ್ಕಾರವು ಭಾರತೀಯ ಆಡಳಿತ ಸೇವೆಯಿಂದ (IAS) ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ (Puja Khedkar) ಅವರನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿದೆ ಎಂದು ವರದಿಯಾಗಿದೆ.

    1954ರ ಐಎಎಸ್ (Exam) ನಿಯಮಗಳ 12ನೇ ನಿಯಮದ ಅಡಿಯಲ್ಲಿ ಕೇಂದ್ರ ಸರ್ಕಾರವು (Central Govt) ಐಎಎಸ್‌ ಸೇವೆಯಿಂದ ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆ ಅತ್ಯಾಚಾರಿ ಆರೋಪಿಗೆ ಜಾಮೀನು ನೀಡಬೇಕೆ? – ಸಿಬಿಐ ಪರ ವಕೀಲರ ವಿರುದ್ಧ ಕೋರ್ಟ್‌ ಗರಂ

    ವಿಶೇಷಚೇತನ ಹಾಗೂ ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಮೇಲೆ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (UPSC) ಈ ಹಿಂದೆ ಎಫ್‌ಐಆರ್‌ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೂಜಾ ಅವರ ಆಯ್ಕೆಯನ್ನು ವಜಾಗೊಳಿಸಿದೆ. ಇದನ್ನೂ ಓದಿ: Maharashtra: ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಎಫ್‌ಐಆರ್‌!

    ತಮ್ಮ ಉದ್ಯೋಗ ಭದ್ರತೆಗಾಗಿ ಪೂಜಾ ಖೇಡ್ಕರ್‌ ನಕಲಿ ದಾಖಲೆ, ಪ್ರಮಾಣ ಪತ್ರಗಳನ್ನ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಖಾಸಗಿ ಆಡಿ ಕಾರಿಗೆ ರೆಡ್‌ಲೈಟ್‌ ಮತ್ತು ಮಹಾರಾಷ್ಟ್ರ ಸರ್ಕಾರದ (Maharashtra Government) ಲಾಂಛನ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲ ಕಾರಣಗಳಿಂದಾಗಿ ಮಹಾರಾಷ್ಟ್ರ ಸರ್ಕಾರ ಅವರ ತರಬೇತಿಯನ್ನು ತಡೆಹಿಡಿದಿತ್ತು. ವಿಚಾರಣೆಗಾಗಿ ಮಸ್ಸೂರಿಯಲ್ಲಿರುವ ಲಾಲ್‌ ಬಹದ್ದೂರ್‌ ಶಾಸ್ತ್ರೀ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ಮಿನಿಸ್ಟ್ರೇಷನ್‌ಗೆ ಬರುವಂತೆ ಸೂಚಿಸಿತ್ತು. ವಿಚಾರಣೆ ಬಳಿಕ ಜು.18 ರಂದು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದ ಯುಪಿಎಸ್‌ಸಿ, ಜು.19ರಂದು ಎಫ್‌ಐಆರ್‌ ದಾಖಲಿಸಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಪೂಜಾ ಖೇಡ್ಕರ್‌ ಅವರನ್ನ ಐಎಎಸ್‌ ಸೇವಯಿಂದಲೇ ವಜಾಗೊಳಿಸಿದೆ. ಅಲ್ಲದೇ ಮುಂದಿನ ಎಲ್ಲಾ ಯುಪಿಎಸ್‌ಸಿ ಪರೀಕ್ಷೆಗಳಿಗೆ ಶಾಶ್ವತವಾಗಿ ಡಿಬಾರ್‌ ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ.

    ಪೂಜಾ ಮೇಲಿನ ಆರೋಪ ಏನು?
    2023ನೇ ಸಾಲಿನ ಐಎಎಸ್‌ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್‌ ಅವರು ವಾಶೀಂ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿದ್ದರು. ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ತಾವು ಭಾಗಶಃ ಅಂಗವಿಕಲತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ಅಂಗವೈಕಲ್ಯ ಕೋಟಾ ಬಳಸಿಕೊಂಡಿದ್ದರು. ಅಲ್ಲದೇ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಾತಿ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳನ್ನು ನಕಲು ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಮುನ್ನವೇ ಸವಲತ್ತುಗಳಿಗೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಅವರ ವಿರುದ್ಧ ಇದೆ.

    ದೆಹಲಿ ಪೊಲೀಸರ ವರದಿಯಲ್ಲೇನಿದೆ?
    ಕಳೆದ ವಾರ ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್‌ಗೆ 2ನೇ ಹಂತದ ಸ್ಥಿತಿ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಪೂಜಾ ಅಂಕವಿಲತೆ‌ ಎಂದು ಸಲ್ಲಿಸಿದ್ದ ವರದಿಗಳು ನಕಲಿ ಎಂದು ಉಲ್ಲೇಖಿಸಿದ್ದರು. ಯುಪಿಎಸ್‌ಸಿ ಪರೀಕ್ಷೆಗಾಗಿ ಆಕೆ 2 ಪ್ರತ್ಯೇಕ ಅಂಗವಿಕಲತೆ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ತಿಳಿಸಿದ್ದರು. ಇದನ್ನೂ ಓದಿ: Manipur Violence | ಎರಡು ಸಮುದಾಯಗಳ ಗುಂಪಿನ ನಡುವೆ ಗುಂಡಿನ ಚಕಮಕಿ – ಐವರು ಸಾವು