Tag: Central Government

  • ಉಪಚುನಾವಣೆ ಫಲಿತಾಂಶದ ಬಳಿಕವಾದ್ರೂ ಬಿಜೆಪಿ ಎಚ್ಚೆತ್ತುಕೊಳ್ಳಲಿ – ರೇವಣ್ಣ ಟಾಂಗ್

    ಉಪಚುನಾವಣೆ ಫಲಿತಾಂಶದ ಬಳಿಕವಾದ್ರೂ ಬಿಜೆಪಿ ಎಚ್ಚೆತ್ತುಕೊಳ್ಳಲಿ – ರೇವಣ್ಣ ಟಾಂಗ್

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಆಡಳಿತ ವಹಿಸಿಕೊಂಡ ಬಳಿಕ ಮಾಡಿದ ರೈತ ಸಾಲಮನ್ನಾ ಫಲವಾಗಿ ಜನ ಉಪಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದು, ಇದನ್ನ ನೋಡಿಯಾದರೂ ಕೇಂದ್ರದಲ್ಲಿ ಅಧಿಕಾರಲ್ಲಿರುವ ಬಿಜೆಪಿ ಎಚ್ಚೆತ್ತುಕೊಂಡು ಜನರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದ್ದಾರೆ.

    ಮೈತ್ರಿ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ದೇವಾಲಯ ಪೂಜೆ ಮುಗಿಸಿ ರೇವಣ್ಣ ಅವರು ದೇವೇಗೌಡರ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಜನತೆಗೆ ಧನ್ಯವಾದ. ಎಲ್ಲಾ ಕ್ಷೇತ್ರದಲ್ಲೂ ಜನರು ಆಶೀರ್ವಾದ ಮಾಡಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಹಣ ಬಲ ಕೆಲಸ ಮಾಡಿದಂತೆ ಕಂಡಿದೆ. ಬಳ್ಳಾರಿ ಫಲಿತಾಂಶ ಉತ್ತಮ ಎನ್ನಿಸಿದೆ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಒಳ್ಳೆ ಆಡಳಿತವೇ ಕಾರಣ. 2019 ಚುನಾವಣೆ ಉದ್ದೇಶಕ್ಕಾದರೂ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ನೆರವು ನೀಡುವಂತೆ ಮನವೊಲಿಕೆ ಮಾಡಬೇಕು ಎಂದು ಸಲಹೆ ನೀಡಿದರು.

    ಬೆಂಗಳೂರಿನ ಪದ್ಮನಾಭನಗರ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಸಚಿವ ರೇವಣ್ಣ ಅವರು ಚುನಾವಣೆ ಫಲಿತಾಂಶದ ಕುರಿತು ಮಹತ್ವದ ಚರ್ಚೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿಢೀರ್ ಕೋಟ್ಯಧಿಪತಿಗಳಾದ್ರು ಅರುಣಾಚಲಪ್ರದೇಶದ ಗ್ರಾಮಸ್ಥರು!

    ದಿಢೀರ್ ಕೋಟ್ಯಧಿಪತಿಗಳಾದ್ರು ಅರುಣಾಚಲಪ್ರದೇಶದ ಗ್ರಾಮಸ್ಥರು!

    ಗುವಾಹಟಿ: ಅಕ್ಟೋಬರ್ 20ಕ್ಕೂ ಮುನ್ನ ಸಾಮಾನ್ಯ ಪ್ರಜೆಗಳಾಗಿದ್ದ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತುಕ್ಬೆನ್ ಗ್ರಾಮದ ಜನರು ಕೋಟ್ಯಧಿಪತಿಗಳಾಗಿದ್ದಾರೆ.

    ಹೌದು, ಈ ಸುದ್ದಿ ಕೇಳಿ ನೀವು ಅಶ್ಚರ್ಯಗೊಂಡರೂ ನಿಜ. ಐದು ದಶಕದ ಹಿಂದೆ ಗ್ರಾಮದ ಕೆಲ ನಿವಾಸಿಗಳ ಭೂ ಪ್ರದೇಶವನ್ನು ಭಾರತೀಯ ಸೇನೆ ತನ್ನ ವಶಕ್ಕೆ ಪಡೆದಿತ್ತು. ಈ ಭೂಮಿಗೆ ಸದ್ಯ ಸರ್ಕಾರ ಪರಿಹಾರ ಹಣ ನೀಡಿದ್ದು, ಗ್ರಾಮಸ್ಥರು ಕೋಟಿ ಕೋಟಿ ಹಣ ಪಡೆದಿದ್ದಾರೆ.

    ಪಶ್ಚಿಮ ಕಮೆಂಗ್ ಜಿಲ್ಲೆಯ ತುಕ್ಪೆನ್, ಸಿಂಗ್ಚುಂಗ್ ಸೇರಿ ವಿವಿಧ ಹಳ್ಳಿಯ ಜನರಿಗೆ ಪರಿಹಾರ ಮೊತ್ತವನ್ನು ಅಲ್ಲಿನ ಸರ್ಕಾರ ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಸ್ತಾಂತರಿಸಿದೆ. ಪ್ರಮುಖವಾಗಿ ಗ್ರಾಮದ ಪ್ರೇಮ್ ದೊರ್ಜಿ ಎಂಬವರಿಗೆ 6.31 ಕೋಟಿ ರೂ. ಫನ್ಟೋ ಎಂಬವರು 6.21 ಕೋಟಿ ರೂ, ಹಾಗೂ ಖಂಡು ಅವರಿಗೆ 5.98 ಕೋಟಿ ರೂ. ಸಿಕ್ಕಿದೆ.

    ಅರುಣಾಚಲ ಪ್ರದೇಶ ಸಿಎಂ ಪ್ರೇಮಾ ಖಾಂಡು, ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜೂಜು ಅವರು ಕಾರ್ಯಕ್ರದಲ್ಲಿ ಭಾಗವಹಿಸಿ ಪರಿಹಾರ ಮೊತ್ತವನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಪ್ರಧಾನಿ ಮೋದಿ ಅವರ ಪ್ರೀತಿಯಿಂದ ಅರುಣಾಚಲಕ್ಕೆ ಹಲವು ವರ್ಷದ ಬಳಿಕ ಪರಿಹಾರ ಸಿಗಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

    ಗ್ರಾಮದ ಹಲವು ಮಂದಿಗೆ ಸರ್ಕಾರದ ಪರಿಹಾರ ಮೊತ್ತ ಸಿಕ್ಕಿದ್ದು, ಸಿಂಚಂಗ್‍ನಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು ಐದು ಗ್ರಾಮಸ್ಥರಿಗೆ 24.56 ಕೋಟಿ ರೂ. ನೀಡಲಾಗಿದೆ. ಅಲ್ಲದೇ ತುಕ್ಬೆನ್ ಗ್ರಾಮದ ಏಳು ನಿವಾಸಿಗಳಿಗೆ 13.17 ಕೋಟಿ ರೂ. ನೀಡಲಾಗಿದೆ ಎಂದು ಉಪ ಕಮಿಷನರ್ ಸೋನಾಲ್ ಸ್ವರೂಪ್ ತಿಳಿಸಿದ್ದಾರೆ.

    1962 ರ ಭಾರತದ ಹಾಗೂ ಚೀನಾ ನಡುವೆ ಗಡಿ ವಿಚಾರವಾಗಿ ನಡೆದ ಯುದ್ಧದ ನಂತರ ಭಾರತೀಯ ಸೇನೆಯೂ ಅಲ್ಲಿನ ಪ್ರದೇಶಗಳ ಭೂಮಿಯನ್ನು ವಶಕ್ಕೆ ಪಡೆದು ಸೇನಾ ನೆಲೆ ನಿರ್ಮಾಣ ಮಾಡಿತ್ತು. ಆದರೆ ಅಲ್ಲಿನ ನಿವಾಸಿಗಳಿಗೆ ಅಂದು ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿರಲಿಲ್ಲ. ಹೀಗಾಗಿ 2017 ರ ಏಪ್ರಿಲ್‍ನಲ್ಲಿ ಪಶ್ಚಿಮ ಕಮೆಂಗ್ ಜಿಲ್ಲೆಯ ಮೂರು ಗ್ರಾಮಗಳ 152 ಕುಟುಂಬಗಳು ಕೇಂದ್ರಕ್ಕೆ ಮನವಿ ಸಲ್ಲಿದ್ದವು. ಇದರ ಪರಿಣಾಮವಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಗ್ರಾಮಗಳಿಗೆ 54 ಕೋಟಿ ರೂ. ಹಾಗೂ ಸೆಪ್ಟಂಬರ್ ನಲ್ಲಿ ಅರುಣಾಚಲ ಪ್ರದೇಶದ ಖಾಸಗಿ ಭೂಮಿ ಸ್ವಾಧೀನಕ್ಕೆ 158 ಕೋಟಿ ರೂ. ಅನ್ನು ನೀಡಿತ್ತು.

    ಈ ವರ್ಷ ಫೆಬ್ರವರಿಯಲ್ಲಿ ತವಾಂಗ್ ಜಿಲ್ಲೆಯ ಬಾಮ್ಜಾ ಗ್ರಾಮದ 31 ಕುಟುಂಬಗಳಿಗೆ 40.80 ಕೋಟಿ ರೂ., 29 ಕುಟುಂಬಗಳಿಗೆ 1.09 ಕೋಟಿ ರೂ. ನೀಡಿದ್ದು, ಒಂದು ಕುಟುಂಬಕ್ಕೆ 6.73 ಕೋಟಿ ರೂ. ಮತ್ತು ಇನ್ನೊಬ್ಬರಿಗೆ 2.45 ಕೋಟಿ ರೂ. ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಷ್ಠಾವಂತ ತೆರಿಗೆದಾರರಿಗೆ ಸಿಗಲಿದೆ ವಿಶೇಷ ಸವಲತ್ತು!

    ನಿಷ್ಠಾವಂತ ತೆರಿಗೆದಾರರಿಗೆ ಸಿಗಲಿದೆ ವಿಶೇಷ ಸವಲತ್ತು!

    ನವದೆಹಲಿ: ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಸಹಕರಿಸುತ್ತಿರುವ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಿ ಅವರಿಗೆ ವಿಶೇಷ ಸವಲತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ನಿಗದಿತ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವವರನ್ನು ಇದುವರೆಗೂ ಯಾವುದೇ ಸರ್ಕಾರಗಳು ಗುರುತಿಸಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಷ್ಠಾವಂತ ತೆರಿಗೆದಾರರಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಸಿದ್ಧತೆ ನಡೆಸಿದೆ.

    ಈಗಾಗಲೇ ಹಣಕಾಸು ಸಚಿವಾಲಯ ನೂತನ ಕರಡು ಪ್ರಸ್ತಾವನೆಯನ್ನು ಪ್ರಧಾನಿ ಕಚೇರಿಗೆ ತಲುಪಿಸಿದ್ದು, ಅಲ್ಲಿ ಅಂತಿಮಗೊಂಡ ಬಳಿಕ ಕ್ಯಾಬಿನೆಟ್ ಒಪ್ಪಿಗೆ ನೀಡಲಿದೆ. ಇದನ್ನೂ ಓದಿ: ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?
    ನಿಷ್ಠಾವಂತ ತೆರಿಗೆ ಪಾವತಿದಾರರಿಗೆ ಸಾರ್ವಜನಿಕ ಸೇವೆಗಳಾದ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ರಸ್ತೆ ಟೋಲ್‍ಗಳಲ್ಲಿ `ಆದ್ಯತೆಯ ಸೇವೆ’ ಸಿಗಲಿದೆ. ಅಷ್ಟೇ ಅಲ್ಲದೇ ಸರ್ಕಾರಿ ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ವಿಶೇಷ ಗುರುತಿನ ಸಂಖ್ಯೆ ಅಥವಾ ಪಾನ್ ಸಂಖ್ಯೆಯ ಮೂಲಕ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಬಹುದು ಎನ್ನುವ ಅಂಶ ಕರಡು ಪ್ರಸ್ತಾವನೆಯಲ್ಲಿದೆ.

    ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನಡೆದ ಹಿರಿಯ ತೆರಿಗೆ ಅಧಿಕಾರಿಗಳ ಸಂವಾದ ಕಾರ್ಯಕ್ರಮದಲ್ಲಿ ನಿಷ್ಠಾವಂತ ತೆರಿಗೆ ಪಾವತಿ ಮಾಡುವ ಪಾವತಿದಾರರಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೇ ಅವರಿಗೆ ವಿಶೇಷ ಸವಲತ್ತುಗಳನ್ನು ಘೋಷಿಸಲಾಗುತ್ತದೆ ಎಂದು ಹೇಳಿದ್ದರು.

    2015-16ರ ಹಣಕಾಸು ವರ್ಷದಲ್ಲಿ ಒಟ್ಟು 5.43 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದರೆ, 2017-18ರ ಸಾಲಿನಲ್ಲಿ 6.84 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ಸಾಂದರ್ಭಿಕ ಚಿತ್ರ

    ನವದೆಹಲಿ: 2019ರ ಜುಲೈ ತಿಂಗಳಿನಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ವಿತರಿಸಲು ರಸ್ತೆ ಸಾರಿಗೆ ಸಚಿವಾಲಯ ನಿರ್ಧರಿಸಿದೆ.

    ದೇಶಾದ್ಯಂತ ಒಂದೇ ಮಾದರಿಯ ಡಿಎಲ್ ಹಾಗೂ ಆರ್‌ಸಿ ಕಾರ್ಡ್‍ಗಳನ್ನು ವಿತರಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂ ಆರ್‌ಸಿ ಕಾರ್ಡ್‍ಗಳು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳ ಎಟಿಎಂ ಕಾರ್ಡ್‍ಗಳು ಕೆಲಸ ನಿರ್ವಹಿಸುವ ರೀತಿಯಲ್ಲೇ ಕಾರ್ಯನಿರ್ವಹಿಸಲಿವೆ.

    ನೂತನ ಸ್ಮಾರ್ಟ್ ಡಿಎಲ್ ಹಾಗೂ ಆರ್‌ಸಿಗಳ ಬಣ್ಣ, ವಿನ್ಯಾಸಗಳು ಎಲ್ಲಾ ರಾಜ್ಯಗಳಲ್ಲಿಯೂ ಒಂದೇ ಆಗಿರಲಿದೆ. ವಿಶೇಷವಾಗಿ ಈ ಕಾರ್ಡ್‍ಗಳಲ್ಲಿ ಮೈಕ್ರೋ ಚಿಪ್ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆಯೂ ಇರಲಿದೆ. ಇದು ನಿಯರ್ ಫೀಲ್ಡ್ ಕಮ್ಯೂನಿಕೇಶನ್(ಎನ್‍ಎಫ್‍ಸಿ) ತಂತ್ರಜ್ಞಾನವನ್ನು ಹೊಂದಿದೆ. ಹೀಗಾಗಿ ಈ ಕಾರ್ಡ್‍ಗಳನ್ನು ಮೆಟ್ರೋ ಹಾಗೂ ಎಟಿಎಮ್ ಕಾರ್ಡ್‍ಗಳ ರೀತಿಯಲ್ಲೂ ಬಳಸಬಹುದಾಗಿದೆ. ಈ ಮೂಲಕ ಸಂಚಾರಿ ಪೊಲೀಸರು ಸ್ಕ್ಯಾನ್ ಮಾಡಿ ಸುಲಭವಾಗಿ ವಾಹನ ಸವಾರರ ಮಾಹಿತಿಗಳನ್ನು ಕಲೆಹಾಕಬಹುದು.

    ಇದಲ್ಲದೇ ವಿಶೇಷವಾಗಿ ವಾಹನ ಚಾಲಕರು ತಮ್ಮ ಅಂಗಾಂಗ ದಾನದ ಮಾಹಿತಿಯನ್ನೂ ಸಹ ಈ ಡಿಲ್‍ನಲ್ಲಿ ನಮೂದಿಸಬಹುದು. ಅಂಗವಿಕಲರಿಗಾಗಿ ಸಿದ್ಧಪಡಿಸಿರುವ ವಿಶೇಷ ವಾಹನಗಳ ಬಗ್ಗೆಯೂ ಸಹ ಈ ಕಾರ್ಡ್‍ಗಳಲ್ಲಿ ವಿವರ ನೀಡಲಾಗಿರುತ್ತದೆ. ನೂತನ ಆರ್‌ಸಿ ಕಾರ್ಡ್ ಮೂಲಕ ವಾಹನವು ಎಷ್ಟು ಪ್ರಮಾಣದಲ್ಲಿ ಹೊಗೆ ಹೊರಹಾಕುತ್ತದೆ ಎಂಬುದನ್ನು ಸಹ ತಿಳಿಯಬಹುದಾಗಿದೆ. ಇದರಿಂದಾಗಿ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿದೆ.

    ನೂತನ ಡಿಎಲ್‍ನಲ್ಲಿ ಏನೇನು ಇರುತ್ತದೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಡಿಎಲ್ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವ್ಯಕ್ತಿಯ ಹೆಸರು, ರಕ್ತದ ಗುಂಪು ಹಾಗೂ ಅಂಗಾಂಗಳನ್ನು ದಾನ ಮಾಡುವ ಮಾಹಿತಿ, ವಾಹನಗಳ ವಿಧ ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು ಮುದ್ರಿತವಾಗಿರುತ್ತದೆ.

    ಆರ್‌ಸಿ ಕಾರ್ಡ್‍ನಲ್ಲಿ ಏನೇನು ಇರುತ್ತೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಆರ್‍ಸಿ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವಾಹನದ ವಿಧ, ವಾಣಿಜ್ಯೇತರ ಹಾಗೂ ವಾಣಿಜ್ಯ ಬಳಕೆಯ ವಿವರ, ವಾಹನಗಳ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಭಾರತ್ ಸ್ಟೇಜ್ 4 ಅಥವಾ 5 ಎಂಬುದರ ವಿವರ ಮುದ್ರಿತವಾಗಿರುತ್ತದೆ. ಇದನ್ನೂ ಓದಿ: ಏನಿದು ಭಾರತ್ ಸ್ಟೇಜ್?ಯಾವಾಗ ಜಾರಿಯಾಗಿದೆ? ಬಿಎಸ್4 ಕಾರಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?

    ಡಿಎಲ್ ಹಾಗೂ ಆರ್‌ಸಿಗಳಲ್ಲಿರುವ ಭದ್ರತಾ ಕ್ರಮಗಳು:
    ನೂತನ ಸ್ಮಾಟ್ ಡಿಎಲ್ ಹಾಗೂ ಆರ್‌ಸಿಗಳಲ್ಲಿ ಅಳಿಸಲಾರದಂತೆ ಗಿಲ್ಲೋಚ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ ಇದಕ್ಕೆ ಬಳಸಲಾದ ಬಣ್ಣಗಳು ನೇರಾಳಾತಿತಾ ಬಣ್ಣಗಳಿಂದ ಕೂಡಿದ್ದರಿಂದ ಯಾವುದೇ ರೀತಿಯಲ್ಲಿ ಬಣ್ಣ ಬದಲಾಗುವುದಿಲ್ಲ. ಸೂಕ್ಷ್ಮ ರೀತಿಯಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ನಿರ್ದಿಷ್ಟ ಗುರುತಿನ ಪುರಾವೆ(ಹೊಲೊಗ್ರಾಮ್) ಬಳಕೆ ಮಾಡಿರಲಾಗುತ್ತದೆ. ಹಿಂಬದಿ ಹಾಗೂ ಮುಂಭಾಗದಲ್ಲಿ ವಾಟರ್ ಮಾರ್ಕ್ ಮೂಲಕ ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಅಧಿಕೃತ ಚಿಹ್ನೆಗಳನ್ನು ಮುದ್ರಿಸಲಾಗಿರುತ್ತದೆ.

    ಯಾಕೆ ವಿತರಣೆ? ದರ ಎಷ್ಟು?
    ಮಾಹಿತಿಗಳ ಪ್ರಕಾರ ಪ್ರತಿನಿತ್ಯ ಹೊಸ ಹಾಗೂ ಪರಿಷ್ಕೃತ 32,000 ಡಿಎಲ್‍ಗಳನ್ನು ವಿತರಿಸಲಾಗುತ್ತಿದೆ. ಇದಲ್ಲದೇ ಹೊಸ ನೋಂದಣಿ ಹಾಗೂ ಮರು ನೋಂದಣಿಯ ಸುಮಾರು 43 ಸಾವಿರ ಕಾರ್ಡುಗಳನ್ನು ದೇಶದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೊಸ ಮಾದರಿಯ ವಿಶೇಷ ತಂತ್ರಜ್ಞಾನ ಹೊಂದಿರುವ ಕಾರ್ಡ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸಮಯದ ಉಳಿತಾಯ ಹಾಗೂ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸಿಗುವಂತೆ ಮಾಡಲು ರಸ್ತೆ ಸಾರಿಗೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಮೂಲಗಳ ಪ್ರಕಾರ ಇಂದು ಮುದ್ರಿತವಾಗುತ್ತಿರುವ ಪ್ರತಿ ಕಾರ್ಡ್ ದರಕ್ಕಿಂತ 15 ರೂಪಾಯಿ ಮಾತ್ರ ಹೆಚ್ಚಳವಾಗುತ್ತದೆ ಎಂದು ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆ : ಏನಿದು ಆರ್‌ಎಎಫ್? ಎಲ್ಲಿ ಸ್ಥಾಪನೆಯಾಗುತ್ತೆ?

    ಮಂಗ್ಳೂರಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆ : ಏನಿದು ಆರ್‌ಎಎಫ್? ಎಲ್ಲಿ ಸ್ಥಾಪನೆಯಾಗುತ್ತೆ?

    ನವದೆಹಲಿ: ಗಲಭೆ ಹಾಗೂ ದೊಂಬಿಯಂತಹ ಸಮಯದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಗೆಂದೇ ಇರುವ ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್) ತುಕಡಿಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಸದ್ಯ ದೇಶದಲ್ಲಿರುವ ಒಟ್ಟು 10 ಆರ್‌ಎಎಫ್ ತುಕಡಿಗಳ ಪೈಕಿ, 5 ಹೊಸ ತುಕಡಿಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಜನವರಿಯಲ್ಲೇ 5 ಆರ್‌ಎಎಫ್ ಘಟಕವನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈಗ ಎಲ್ಲಿ ಸ್ಥಾಪನೆಯಾಗಲಿದೆ ಎನ್ನುವ ವಿವರವನ್ನು ಪ್ರಕಟಿಸಿದೆ.

    ಕರ್ನಾಟಕದ ಮಂಗಳೂರು, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರ ಹಾಜಿಪುರ ಮತ್ತು ಹರಿಯಾಣದ ನುಹ್ ಜಿಲ್ಲೆಗಳಲ್ಲಿ ಹೊಸ ಆರ್‌ಎಎಫ್ ಘಟಕ ಪ್ರಾರಂಭವಾಗಲಿದೆ.

    ಘಟಕ ಸ್ಥಾಪನೆ ಸಂಬಂಧ ಪಟ್ಟಂತೆ ಅಗತ್ಯವಾದ ಜಾಗ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕಾರ್ಯಚರಣೆ ನಡೆಸುತ್ತಿರುವ ಆರ್‌ಎಎಫ್ ಸಿಬ್ಬಂದಿಗಳು ಶೀಘ್ರವೇ ಹೊಸ ನೆಲೆಗಳಿಗೆ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ದೇಶದ ಹೈದರಾಬಾದ್, ಅಹಮದಾಬಾದ್, ಅಲಹಾಬಾದ್, ಮುಂಬೈ, ದೆಹಲಿ, ಆಲಿಘರ್, ಕೊಯಮತ್ತೂರ್, ಜಮ್ಶೆಡ್‍ಪುರ್, ಭೋಪಾಲ್ ಹಾಗೂ ಮೀರತ್ ಪ್ರದೇಶಗಳಲ್ಲಿ ಆರ್‌ಎಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿವೆ.

    ಏನಿದು ಆರ್‌ಎಎಫ್?
    ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಅರ್ಥಾತ್ ಕ್ಷಿಪ್ರ ಕಾರ್ಯಾಚರಣೆ ಪಡೆ. ದೊಂಬಿ, ಗಲಭೆ ಸೇರಿದಂತೆ ಮತ್ತಿತರ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ವಿಶೇಷ ತರಬೇತಿ ಹೊಂದಿದ ಅರೆಸೇನಾಪಡೆ ಘಟಕ. ಇಲ್ಲಿಯವರೆಗೂ ದೇಶದಲ್ಲಿ ಒಟ್ಟು 10 ಆರ್‌ಎಎಫ್ ತುಕಡಿಗಳಿವೆ. ಪ್ರತಿ ತುಕಡಿಯಲ್ಲಿ 1,000 ಸಿಬ್ಬಂದಿಗಳಿದ್ದು, ಅವರು ಅತ್ಯಾಧುನಿಕ ತಾಂತ್ರಿಕ ಉಪಕರಣಗಳು, ಮಾರಕವಲ್ಲದ ಶಸ್ತ್ರಾಸ್ತ್ರಗಳು, ಹೊಗೆಸೂಸುವ ಗ್ರೆನೇಡ್‍ಗಳು ಹಾಗೂ ಇನ್ನೂ ಮುಂತಾದ ತುರ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.

    ಮಂಗಳೂರಿನಲ್ಲಿ ಏಲ್ಲಿ?
    ಮಂಗಳೂರಿನಲ್ಲಿ ಎಲ್ಲಿ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆರ್‌ಎಎಫ್ ಸ್ಥಾಪನೆ ಸಂಬಂಧ ಈ ಹಿಂದೆ ಬಜಪೆ ಮತ್ತು ಪರವೂರಿನಲ್ಲಿ ಜಾಗ ಗುರುತಿಸಿ 2 ವರ್ಷದ ಹಿಂದೆ ಸರ್ಕಾರ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಯಾಂಕ್, ಟೆಲಿಕಾಂ ಸಂಸ್ಥೆಗಳಿಗೆ ಆಧಾರ್ ಬಳಕೆಗೆ ಅವಕಾಶ ನೀಡಲಾಗುವುದು -ಅರುಣ್ ಜೇಟ್ಲಿ

    ಬ್ಯಾಂಕ್, ಟೆಲಿಕಾಂ ಸಂಸ್ಥೆಗಳಿಗೆ ಆಧಾರ್ ಬಳಕೆಗೆ ಅವಕಾಶ ನೀಡಲಾಗುವುದು -ಅರುಣ್ ಜೇಟ್ಲಿ

    ನವದೆಹಲಿ: ಬ್ಯಾಂಕ್, ಟೆಲಿಕಾಂ ಸಂಸ್ಥೆಗಳಿಗೆ ಆಧಾರ್ ಜೋಡಣೆ ಮಾಡುವ ನಿಯಮವನ್ನು ಮುಂದುವರೆಸಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ಹೇಳಿದ್ದಾರೆ.

    ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿರುವ ಅರುಣ್ ಜೇಟ್ಲಿ, ಬ್ಯಾಂಕ್, ಟೆಲಿಕಾಂ ಸಂಸ್ಥೆಗಳಿಗೆ ಆಧಾರ್ ಬಳಕೆ ಮಾಡಲು ಅವಕಾಶ ನೀಡಲಾಗುವುದು. ಆದರೆ ಕೇಂದ್ರ ಸರ್ಕಾರ ಈ ಕುರಿತು ಹೊಸ ಕಾಯ್ದೆ ರೂಪಿಸುತ್ತಾ ಎಂಬುದರ ಕುರಿತು ಸಚಿವರು ಸ್ಪಷ್ಟಪಡಿಸಲಿಲ್ಲ.

    ಇದೇ ವೇಳೇ ಆಧಾರ್ ಎಂಬುವುದು ಪೌರತ್ವದ ಸಂಕೇತವಲ್ಲ ಎಂದು ತಿಳಿಸಿರುವ ಅರುಣ್ ಜೇಟ್ಲಿ, ಸರ್ಕಾರ ವಿವಿಧ ಯೋಜನೆಗಳ ಲಾಭ ಮತ್ತು ಸಬ್ಸಿಡಿ ಪಡೆಯುವ ಒಂದು ವ್ಯವಸ್ಥೆಯಾಗಿದೆ. ಇದುವೇ ಆಧಾರ್ ನ ಮೂಲ ಉದ್ದೇಶವಾಗಿದೆ. ತಾರ್ಕಿಕ ತತ್ವದ ಆಧಾರದ ಮೇಲೆ ಆದಾಯ ತೆರಿಕೆ ಪಾವತಿಸುವ ಹಲವು ಪ್ರದೇಶಗಳಲ್ಲಿ ಆಧಾರ್ ಸಂಖ್ಯೆ ಸಂಪರ್ಕಿಸುವುದಕ್ಕೆ ಕೋರ್ಟ್ ಅವಕಾಶ ನೀಡಿದೆ ಎಂದು ತಿಳಿಸಿದರು. ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ: ಯಾವುದಕ್ಕೆ ಕಡ್ಡಾಯ?

    ಸುಪ್ರೀಂ ಕೋರ್ಟ್ ಕಳೆದ  ತಿಂಗಳು ಆಧಾರ್ ಗೆ ಸಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿತ್ತು. ಅಲ್ಲದೇ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಮಾತ್ರ ಆಧಾರ್ ಕಡ್ಡಾಯ ಮಾಡುಬಹುದು, ಆದರೆ ಖಾಸಗಿ ಚಟುವಟಿಕೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತೈಲ ಬೆಲೆ 2.50 ರೂ. ಇಳಿಕೆ: ಯಾವೆಲ್ಲ ರಾಜ್ಯಗಳಲ್ಲಿ ಒಟ್ಟು 5 ರೂ. ಇಳಿಕೆಯಾಗಿದೆ?

    ತೈಲ ಬೆಲೆ 2.50 ರೂ. ಇಳಿಕೆ: ಯಾವೆಲ್ಲ ರಾಜ್ಯಗಳಲ್ಲಿ ಒಟ್ಟು 5 ರೂ. ಇಳಿಕೆಯಾಗಿದೆ?

    ನವದೆಹಲಿ: ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬೆನ್ನಲ್ಲೇ ಕೆಲ ರಾಜ್ಯಗಳು ವ್ಯಾಟ್ ಇಳಿಕೆ ಮಾಡಿದೆ. ಹೀಗಾಗಿ ಕೆಲ ರಾಜ್ಯಗಳಲ್ಲಿ ಪ್ರತಿ ಲೀಟರ್, ಪೆಟ್ರೋಲ್ ಡೀಸೆಲ್ ದರ 5 ರೂ. ಇಳಿಕೆಯಾಗಿದೆ.

    ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಿದ್ದು, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ. ಹೀಗಾಗಿ ಒಟ್ಟು 2.50 ರೂ ಕಡಿತವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ

    ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಸಲಹೆ ನೀಡಿದ್ದರು.

    ಕೇಂದ್ರ ಸರ್ಕಾರದ 2.5ರೂ. ಇಳಿಕೆ ಮಾಡಿದ ಬೆನ್ನಲ್ಲೇ ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಲ್ಲೂ ತೈಲ ದರ ಇಳಿಕೆಯಾಗಿದೆ. ತೈಲ ದರ ಕಡಿತದಿಂದಾಗಿ ಮಹಾರಾಷ್ಟ್ರದ ವಾಹನ ಸವಾರರಿಗೆ ಪ್ರತಿ ಲೀಟರ್ ಗೆ  5 ರೂಪಾಯಿಗಳವರೆಗೆ ಕಡಿತವಾಗಿದೆ. ಈ ಕುರಿತು ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯದಲ್ಲಿಯೂ ಸಹ 2.5 ರೂಪಾಯಿ ದರವನ್ನು ಇಳಿಕೆ ಮಾಡಲಿದ್ದು, ಇದರಿಂದಾಗಿ ವಾಹನ ಸವಾರಿಗೆ ಪ್ರತಿ ಲೀಟರ್ ಗೆ ಒಟ್ಟು 5 ರೂಪಾಯಿ ಹೆಚ್ಚುವರಿ ಹೊರೆ ಕಡಿಮೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗೋ ನಗರಗಳು

    ಮಹಾರಾಷ್ಟ್ರವಲ್ಲದೆ ಜಾರ್ಖಂಡ್, ಗುಜರಾತ್, ಛತ್ತೀಸ್‍ಗಡ್, ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ, ತ್ರಿಪುರ, ಅಸ್ಸಾಂ, ಹಿಮಾಚಲ ಪ್ರದೇಶ, ಗೋವಾ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಸಹ ತಮ್ಮ ತಮ್ಮ ಪಾಲಿನ ವ್ಯಾಟ್ ಇಳಿಕೆ ಮಾಡುವ ಮೂಲಕ ವಾಹನ ಸವಾರರಿಗೆ 5 ರೂಪಾಯಿ ಹೊರೆಯನ್ನು ಕಡಿಮೆಗೊಳಿಸಿವೆ.

    ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ 2 ರೂಪಾಯಿ ಸೆಸ್ ಕಡಿಮೆ ಮಾಡಿದ್ದೇವೆ. ಹೀಗಾಗಿ ಮತ್ತೊಮ್ಮೆ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲಿನ ವ್ಯಾಟ್ ಅನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಇಲ್ಲ: ಎಚ್‍ಡಿಕೆ

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ತೈಲ 76 ಡಾಲರ್ ನಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆಯಲ್ಲಿ ಅಮೆರಿಕ ಚೀನಾ ವಾಣಿಜ್ಯ ಸಮರ, ಇರಾನ್ ನಿಂದ ತೈಲ ಖರೀದಿಗೆ ನಿರ್ಬಂಧ ಹೇರಿದ ಪರಿಣಾಮ ಡಾಲರ್ ಮುಂದೆ ರೂಪಾಯಿ ದುರ್ಬಲವಾಗುತ್ತಿದ್ದು 73 ರೂ. ಗಡಿ ದಾಟಿದೆ. ಹೀಗಾಗಿ ತೈಲ ಬೆಲೆ ಭಾರತದಲ್ಲಿ ಏರಿಕೆಯಾಗುತ್ತಿದೆ. ಇದನ್ನೂ ಓದಿ:  ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    2014 ರಿಂದ 2016 ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ. ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು.

    ಪ್ರತಿ ಲೀಟರ್ ಪೆಟ್ರೋಲ್ ಮೇಲೆ 9.48 ರೂ. ನಿಂದ 21.48 ರೂ., ಡೀಸೆಲ್ ಮೇಲೆ 3.56 ರೂ.ನಿಂದ 17.33 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿತ್ತು. 2016 ರ ವರೆಗೆ ಈ ಏರಿಕೆ ಮಾಡಿದ್ದು, 2017 ರ ಅಕ್ಟೋಬರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅಬಕಾರಿ ಸುಂಕದಿಂದ ಸಂಗ್ರಹವಾದ ಹಣವನ್ನು ಜನರ ಕಲ್ಯಾಣ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೊಮ್ಮೆ ಮೋದಿ ಅಧಿಕಾರಕ್ಕೆ- ಈಗ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ?

    ಮತ್ತೊಮ್ಮೆ ಮೋದಿ ಅಧಿಕಾರಕ್ಕೆ- ಈಗ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ?

    ನವದೆಹಲಿ: ಲೋಕಸಭಾ ಮಹಾ ಸಮರಕ್ಕೆ 7 ತಿಂಗಳು ಬಾಕಿ ಇರುವ ವೇಳೆಯೇ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿದೆ. ಈ ವೇಳೆ ರಾಷ್ಟ್ರೀಯ ಸುದ್ದಿ ವಾಹಿನಿ ಎಬಿಪಿ ಸಿ ವೋಟರ್ ಸರ್ವೆ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದ್ದು, ಸದ್ಯ ಪರಿಸ್ಥಿತಿಯಲ್ಲಿ ಚುನಾವಣೆ ನಡೆದರೆ ಮತ್ತೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರ ಪಡೆಯಲಿದೆ ಎಂದು ತಿಳಿಸಿದೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳು 276 ಸ್ಥಾನ ಪಡೆದರೆ, ಕಾಂಗ್ರೆಸ್, ಮೈತ್ರಿ ಪಕ್ಷಗಳು 115 ಸ್ಥಾನ ಮತು ಇತರೆ ಪಕ್ಷಗಳು 152 ಸ್ಥಾನ ಗಳಿಸಲಿವೆ ಎಂದು ಸಮೀಕ್ಷೆ ತಿಳಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 336, ಕಾಂಗ್ರೆಸ್ ನೇತೃತ್ವದ ಯುಪಿಎ 60, ಇತರೆ ಪಕ್ಷಗಳು 147 ಸ್ಥಾನ ಪಡೆದಿತ್ತು.

    ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ?
    ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಆದರೆ ಮೈತ್ರಿ ಮಾಡಿಕೊಂಡರೂ ಬಿಜೆಪಿ ಕಳೆದ ಬಾರಿಗಿಂತ 1 ಸ್ಥಾನ ಹೆಚ್ಚು ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಬಿಜೆಪಿ 18 (+1), ಕಾಂಗ್ರೆಸ್ 07 (-1), ಜೆಡಿಎಸ್ 03 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

    ದೇಶದ ಪ್ರಮುಖ ರಾಜ್ಯಗಳಾದ ಗುಜರಾತ್ ನಲ್ಲಿ ಬಿಜೆಪಿ 24, ಕಾಂಗ್ರೆಸ್ 2 ಸ್ಥಾನ ಪಡೆಯಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ 16, ಕಾಂಗ್ರೆಸ್ 30, ಇತರೆ 2 ಸ್ಥಾನ ಲಭಿಸಲಿದೆ. ಮುಖ್ಯವಾಗಿ ಮಹಾರಾಷ್ಟ್ರ ರಾಜಕರಾಣದಲ್ಲಿ ಎನ್‍ಸಿಪಿ, ಕಾಂಗ್ರೆಸ್ ಮೈತ್ರಿ ಚುನಾವಣೆ ನಡೆಸಿ ಶಿವಸೇನೆ ಎನ್‍ಡಿಎ ಮೈತ್ರಿಕೂಡದಿಂದ ಹೊರ ಬಂದರೆ ಕಾಂಗ್ರೆಸ್ ಹೆಚ್ಚಿನ ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

    ದೇಶದ ಹೆಚ್ಚು ಲೋಕಾಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶ ದಲ್ಲಿ ಬಿಜೆಪಿ 36, ಕಾಂಗ್ರೆಸ್ 02, ಇತರೆ ಪಕ್ಷಗಳು 42 ಸ್ಥಾನ ಗಳಿಸಲಿದೆ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿ ಎಸ್‍ಪಿ ಹಾಗೂ ಬಿಎಸ್‍ಪಿ ಪಕ್ಷಗಳ ಮೈತ್ರಿಯನ್ನು ಇತರೆ ಎಂದು ಗುರುತಿಸಲಾಗಿದೆ. ಮಧ್ಯ ಪ್ರದೇಶ ಬಿಜೆಪಿ 23, ಕಾಂಗ್ರೆಸ್ 6 ಸ್ಥಾನ ಗಳಿಸಲಿದೆ. ಉಳಿದಂತೆ ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿ ವೈಎಸ್‍ಆರ್ ಕಾಂಗ್ರೆಸ್ ಕ್ಲೀನ್‍ಸ್ವೀಪ್ ಮಾಡಲಿದೆ ಎಂದು ಸರ್ವೇ ಹೇಳಿದ್ದು, ವೈಎಸ್‍ಆರ್ ಸಿಗೆ 22, ಟಿಡಿಪಿಗೆ 4 ಸೀಟ್ ಸಿಗಲಿದೆ ಎಂದು ತಿಳಿಸಿಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯ ಸರ್ಕಾರವನ್ನು ಕೇಂದ್ರ ಕಾಪಿ ಹೊಡೆದಿದೆ: ಎಚ್‍ಡಿಡಿ

    ರಾಜ್ಯ ಸರ್ಕಾರವನ್ನು ಕೇಂದ್ರ ಕಾಪಿ ಹೊಡೆದಿದೆ: ಎಚ್‍ಡಿಡಿ

    ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ದರವನ್ನು ಕಡಿತಗೊಳಿಸಲು ಮೂಲಕ ರಾಜ್ಯ ಸರ್ಕಾರ ಜಾರಿ ಮಾಡಿದ್ದ ನೀತಿಯನ್ನೇ ಕಾಪಿ ಹೊಡೆದಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕವನ್ನು ನೋಡಿಕೊಂಡು ಪೆಟ್ರೋಲ್ ಡೀಸೆಲ್ ದರವನ್ನು ಕಡಿಮೆ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಕಾಪಿ ಹೊಡೆದಿದೆ. ಅಲ್ಲದೇ ಹಣಕಾಸು ಸಚಿವರು ರಾಜ್ಯ ಸರ್ಕಾರಗಳು ದರ ಇಳಿಕೆ ಮಾಡುವಂತೆ ಹೇಳಿದ್ದಾರೆ. ಆದರೆ ಈಗಾಗಲೇ ಕರ್ನಾಟಕ ಸರ್ಕಾರ ಬೆಲೆ ಇಳಿಕೆ ಮಾಡಿದ್ದು, ಇನ್ನೂ ಇಳಿಕೆ ಸಾಧ್ಯವೇ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಇಲ್ಲ: ಎಚ್‍ಡಿಕೆ

    ಕರ್ನಾಟಕ ಸರ್ಕಾರ ಸಾಲಮನ್ನಾ ಸೇರಿದಂತೆ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಹಾಕಿಕೊಂಡಿದೆ. ಸಾಲಮನ್ನಾ ಕುರಿತ ಸುಗ್ರಿವಾಜ್ಞೆಯನ್ನು ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಲಾಗಿದೆ. ಶುಕ್ರವಾರ ಸಿಎಂ ಕುಮಾರಸ್ವಾಮಿ ಕೂಡಾ ದೆಹಲಿಯ ಬರಲಿದ್ದು, ಈ ಸಂಬಂಧ ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ

    ಇದಕ್ಕೂ ಮುನ್ನ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗೆ ಅಧ್ಯಕ್ಷರ ಆಯ್ಕೆ ಸಂಬಂಧ ದೇವೇಗೌಡರನ್ನು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾಗಿದ್ದರು. ಇವರಿಬ್ಬರು ಸುಮಾರು ಒಂದೂವರೆ ಗಂಟೆ ದೀರ್ಘಕಾಲ ಚರ್ಚೆ ನಡೆಸಿದ್ದರು. ಸಚಿವ ಸಂಪುಟಕ್ಕೆ ಒಟ್ಟು ಆರು ಖಾತೆಗಳನ್ನು ಭರ್ತಿ ಮಾಡಬೇಕಿದ್ದು, ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಬೂದಿ ಮುಚ್ಚಿದ ಕೆಂಡದಂತಿದ್ದು ಎಲ್ಲರಿಗೂ ಸಮಧಾನ ಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಜೆಟ್ ನಂತ್ರ ಪೆಟ್ರೋಲ್, ಡೀಸೆಲ್ ಆದಾಯ ಭಾರೀ ಕುಸಿತ!

    ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಖಾತೆ ಹಂಚಿಕೆ ಮಾಡಿ, ಬಂಡಾಯ ಏಳುವ ಶಾಕಸರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ವೇಣುಗೋಪಾಲ್ ಅವರಿಗೆ ದೇವೇಗೌಡರು ಸಲಹೆ ನೀಡಿದ್ದಾರೆ. ಇದೇ ವೇಳೆ ಲೋಕಸಭೆ ಸಂಬಂಧಿತ ಚರ್ಚೆ ನಡೆದಿದ್ದು, ರಾಜಸ್ಥಾನ ಹಾಗೂ ಮಧ್ಯ ಪ್ರದೇಶ ಚುನಾವಣೆಗಳಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಕಾಂಗ್ರೆಸ್ ಗೆ ಬೆಂಬಲ ನೀಡದಿರುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗೋ ನಗರಗಳು

    ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‍ರೊಂದಿಗೆ ಮಾತನಾಡಿದ್ದೇನೆ. ನಮ್ಮ ಭೇಟಿ ಕೇವಲ ಸೌಜನ್ಯಯುತವಾದದ್ದು. ವೇಣುಗೋಪಾಲ್‍ರವರು ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಪ್ರಮುಖ ನಾಯಕರ ಜೊತೆ ಮಾತನಾಡಿ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‍ಪಿ ರಾಜ್ಯದಲ್ಲಿ ಒಂದಾಗಿವೆ. ಸರ್ಕಾರದಲ್ಲಿ ಪ್ರಮುಖ ಖಾತೆಯೊಂದನ್ನ ಬಿಎಸ್‍ಪಿಗೆ ನೀಡಿದೆ. ಇದಕ್ಕೆ ಕಾಂಗ್ರೆಸ್ ಕೂಡಾ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಮಾಯಾವತಿಯವರ ಹೇಳಿಕೆ ಆಧರಿಸಿ ಮಹಾಮೈತ್ರಿಗೆ ಹಿನ್ನೆಡೆ ಎಂದು ಭಾವಿಸುವುದು ತಪ್ಪು. ರಾಜಕೀಯದಲ್ಲಿ ಯಾವುದು ಅಂತಿಮವಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಇಲ್ಲ: ಎಚ್‍ಡಿಕೆ

    ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಇಲ್ಲ: ಎಚ್‍ಡಿಕೆ

    ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಇಳಿಕೆ ಮಾಡಿದ್ದು ಮತ್ತೆ ಇಳಿಕೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದೆ. ಅಲ್ಲದೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಎಲ್ಲಾ ರಾಜ್ಯದವರು ಅಬಕಾರಿ ಸುಂಕವನ್ನು ಕಡಿಮೆಗೊಳಿಸುವಂತೆ ಕೇಳಿಕೊಂಡಿದ್ದರು. ಅರುಣ್ ಜೇಟ್ಲಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ಈಗಲಾದರೂ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಮೊದಲು ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

    ಈಗಾಗಲೇ ರಾಜ್ಯದಲ್ಲಿ 2 ರೂಪಾಯಿ ಸೆಸ್ ಕಡಿಮೆ ಮಾಡಿದ್ದೇವೆ. ಹೀಗಾಗಿ ಮತ್ತೊಮ್ಮೆ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲಿನ ವ್ಯಾಟ್ ಯಾವುದೇ ಕಾರಣಕ್ಕೂ ಕಡಿತಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ

    ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಸಲಹೆ ನೀಡಿದ್ದರು.

    ಸಮ್ಮಿಶ್ರ ಸರ್ಕಾರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಎಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು. ಸೆಪ್ಟೆಂಬರ್ 17 ರಂದು ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ. ಸೆಸ್ ಇಳಿಕೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv