ನವದೆಹಲಿ: ಕೇಂದ್ರ ಸರ್ಕಾರದ (Central Government) ಮಹತ್ವಕಾಂಕ್ಷಿ ಜನೌಷಧಿ ಯೋಜನೆಯನ್ನು ರಾಜ್ಯ ಸರ್ಕಾರ ಬಂದ್ ಮಾಡಿದ್ದು, ಇದರಿಂದ ಬಡವರಿಗೆ ಸಮಸ್ಯೆಯಾಗಿದೆ ಎಂದು ಚಿತ್ರದುರ್ಗದ ಸಂಸದ ಗೋವಿಂದ್ ಕಾರಜೋಳ (Govind Karjol) ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ರಿಯಾಯಿತಿ ದರದಲ್ಲಿ ಬಡವರಿಗೆ ಔಷಧ ಸಿಗಬೇಕು ಎನ್ನುವ ಕಾರಣಕ್ಕೆ ಪ್ರಧಾನಿ ಮೋದಿ (PM Modi) ಜನೌಷಧಿ ಕೇಂದ್ರ ಸ್ಥಾಪನೆ ಮಾಡಿದ್ದರು. ಜನೌಷಧಿ ಕೇಂದ್ರಗಳಲ್ಲಿ ಶೇ.25ರಷ್ಟು ರಿಯಾಯಿತಿ ದರದಲ್ಲಿ ಔಷಧಿ ಸಿಗುತ್ತಿತ್ತು. ಬಡವರು ಅಲ್ಲಿಂದ ಔಷಧಿ ಪಡೆದು ಉಪಯೋಗ ಮಾಡುತ್ತಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರ (CM Siddaramaiah) ಯಾವ ಪುರುಷಾರ್ಥಕ್ಕೆ ಜನೌಷಧಿ ಕೇಂದ್ರ ಬಂದ್ ಮಾಡಿದ್ದಾರೋ ಗೊತ್ತಿಲ್ಲ, ಖಾಸಗಿಯವರಿಗೆ ಮಣಿದು ಹೀಗೆ ಮಾಡಿರಬಹುದು ಎಂದರು.ಇದನ್ನೂ ಓದಿ: ಅಜಯ್ ರಾವ್ ನಟನೆಯ ‘ಸರಳ ಸುಬ್ಬರಾವ್’ ಚಿತ್ರದ ಸಾಂಗ್ ರಿಲೀಸ್
ಸರ್ಕಾರದ ಈ ನಿರ್ಧಾರದ ಹಿಂದೆ ದುರುದ್ದೇಶ ಇರಬಹುದು, ಖಾಸಗಿಯವರಿಗೆ ಸಹಾಯ ಮಾಡಲು ಹೀಗೆ ಮಾಡಿರಬಹುದು. ಇದನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಬಾರದು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಬಗ್ಗೆ ಮಾತನಾಡಿದ ಅವರು, ಮಳೆಯಿಂದ ರಾಜ್ಯಕ್ಕೆ ಹಾಗೂ ಬೆಂಗಳೂರಿಗೆ ಸಮಸ್ಯೆ ಆಗಿದೆ, ಜನ, ಜಾನುವಾರು, ರೈತರಿಗೆ ಸಮಸ್ಯೆಯಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಆಗಿರುವ ಜಿಲ್ಲೆಗೆ ನೂರು ಕೋಟಿಯಷ್ಟು ಪರಿಹಾರ ನೀಡಬೇಕು. ಬೆಂಗಳೂರು ಜನರ ಪಾಡು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಕೂಡಲೇ ಬೆಂಗಳೂರಿಗರಿಗೆ ಪರಿಹಾರ ನೀಡಬೇಕು, ತುರ್ತು ಕಾಮಗಾರಿ ಜೊತೆಗೆ ಪರಿಹಾರ ನೀಡಬೇಕು. ರಸ್ತೆ ಚರಂಡಿ ಸರಿಪಡಿಸಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶದ ಬಗ್ಗೆ ಮಾತನಾಡಿ, ಕಾಂಗ್ರೆಸ್ ನಾಯಕರು ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡುತ್ತಿದ್ದಾರೆ ಗೊತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ, ರಸ್ತೆ ಚರಂಡಿ, ಯಾವ ಕಾಮಗಾರಿ ಕೆಲಸ ಮಾಡಿಲ್ಲ, 40% ಶಾಸಕರು ಕೆಲಸ ಆಗುತ್ತಿಲ್ಲ ಎಂದಿದ್ದಾರೆ. ಜೊತೆಗೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ಸಾಧನ ಸಮಾವೇಶಕ್ಕಿಂತ ಆತ್ಮಾವಲೋಕನ ಸಮಾವೇಶ ಮಾಡಿಕೊಳ್ಳಲಿ ಎಂದು ಟೀಕಿಸಿದರು.
ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Act) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ತನ್ನ ಉತ್ತರ ನೀಡಿದೆ.
ಕಳೆದ 100 ವರ್ಷಗಳಿಂದ ವಕ್ಫ್ ಅನ್ನು ಬಳಕೆದಾರರ ನೋಂದಣಿ ನಂತರವೇ ಗುರುತಿಸಲಾಗುತ್ತಿದೆಯೇ ಹೊರತು ಮೌಖಿಕವಾಗಿ ಅಲ್ಲ. ಹೀಗಾಗಿ ತಿದ್ದುಪಡಿ ಅಗತ್ಯವಾಗಿತ್ತು ಎಂದು ಹೇಳಿದೆ. ವಕ್ಫ್ ಕೌನ್ಸಿಲ್ ಮತ್ತು ವಕ್ಫ್ ಮಂಡಳಿಯಲ್ಲಿರುವ 22 ಸದಸ್ಯರಲ್ಲಿ ಗರಿಷ್ಠ ಇಬ್ಬರು ಮುಸ್ಲಿಮೇತರರಾಗಿರಬೇಕು (Non Muslims) ಎಂದು ಕೇಂದ್ರ ಸರ್ಕಾರ ಹೇಳಿದೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲೊಬ್ಬ ಸೂಪರ್ ಹಿರೋ.. ಬಿಜೆಪಿ ಕುಟುಂಬ ಕಾಪಾಡಿದ ಕಾಶ್ಮೀರಿ ಮುಸ್ಲಿಂ!
ಇದು ವಕ್ಫ್ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸರ್ಕಾರಿ ಭೂಮಿಯನ್ನು ಉದ್ದೇಶಪೂರ್ವಕವಾಗಿ ಅಥವಾ ತಪ್ಪಾಗಿ ವಕ್ಫ್ ಆಸ್ತಿ ಎಂದು ಗುರುತಿಸುವುದನ್ನು ತಡೆಯುವುದು, ಕಂದಾಯ ದಾಖಲೆಗಳನ್ನು ಸರಿಪಡಿಸುವ ಉದ್ದೇಶವಾಗಿದೆ. ಸರ್ಕಾರಿ ಭೂಮಿಯನ್ನು ಯಾವುದೇ ಧಾರ್ಮಿಕ ಸಮುದಾಯಕ್ಕೆ ಸೇರಿದ ಭೂಮಿಯೆಂದು ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಹೇಳಿದೆ. ಇದನ್ನೂ ಓದಿ: ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!
– ಯಾರು ಅಮಾಯಕರ ರಕ್ಷಣೆ ಮಾಡಬೇಕಿತ್ತೋ ಅವರು ಮಾಡಿಲ್ಲ; ಶಾಸಕ
ರಾಮನಗರ: ಜಮ್ಮು-ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ (Pahalgam Terror Attack) ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕಷ್ಣ (HC Balakrishna) ಹೇಳಿದ್ದಾರೆ.
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಯಾವ ಸರ್ಕಾರ ಅಧಿಕಾರದಲ್ಲಿ ಇರುತ್ತೋ ಅದೇ ಸರ್ಕಾರ ಹೊಣೆ ಹೊರಬೇಕು. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಫೆಲ್ಯೂರ್ ಆಗಿದೆ. ಹಾಗಾಗಿ ಅಮಾಯಕರು ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ
ಕಾಶ್ಮೀರದಲ್ಲಿ ಪ್ರವಾಸಿಗರಿಗೆ ರಕ್ಷಣೆ ನೀಡಬೇಕಿತ್ತು. ಕೆಂದ್ರದಲ್ಲಿ ಅಧಿಕಾರ ನಡೆಸುವವರೇ ಇದಕ್ಕೆ ಜವಾಬ್ದಾರಿ. ಮೃತರ ಕುಟುಂಬಕ್ಕೆ ಇಡೀ ರಾಜ್ಯ ಸರ್ಕಾರ ಸಾಂತ್ವನ ಹೇಳಿದೆ. ಸಿಎಂ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸಂತೋಷ್ ಲಾಡ್ ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರನ್ನ ರಕ್ಷಣೆ ಮಾಡಿದ್ದಾರೆ. ನಾವು ನಮ್ಮ ಕೆಲಸ ಮಾಡಿದ್ದೇವೆ. ಯಾರು ಅಮಾಯಕರ ರಕ್ಷಣೆ ಮಾಡಬೇಕಿತ್ತೋ ಅವರು ಮಾಡಿಲ್ಲ ಎಂಬುದು ದೂರು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Pahalgam Terrorist Attack | ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು – ರಾಹುಲ್, ಖರ್ಗೆ ಭಾಗಿ
ಕೇಂದ್ರ ಗೃಹ ಮಂತ್ರಿಗಳು ಈಗ ಆ ಜಾಗಕ್ಕೆ ಹೋದ್ರೆ ಸತ್ತವರು ಬದುಕಿ ಬರೋಲ್ಲ. ಘಟನೆ ನಡೆಯದ ಹಾಗೆ ತಡೆಯುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಮುಗಿದ ಮೇಲೆ ಸಾಂತ್ವನ ಎಲ್ಲರೂ ಹೇಳುತ್ತಾರೆ. ಘಟನೆ ನಡೆಯುವ ಮುನ್ನವೇ ಮಿಲಿಟರಿ ನಿಯೋಜನೆ ಮಾಡಬೇಕಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಹೇಗೆ ಕಾರ್ಯ ನಿರ್ವಹಣೆಯ ಮಾಡಬೇಕೆಂದು ಕೇಂದ್ರಕ್ಕೆ ಗೊತ್ತಿರಲಿಲ್ವಾ? ಎಂದು ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ
– ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಏರಿಕೆಗೆ ಸಿಎಂ ಆಕ್ಷೇಪ – ಎಲ್ಲದರ ಬೆಲೆ ಏರಿಕೆಗೆ ಕಾರಣ ಕೇಂದ್ರ ಸರ್ಕಾರ
ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮೋದಿ ಕಪಾಳಮೋಕ್ಷ ಮಾಡಿದ್ದಾರೆ, ಬಿಜೆಪಿ ನಾಯಕರ ಮುಖಕ್ಕೆ ಮಸಿ ಬಳಿದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ (Central Government) ಪೆಟ್ರೋಲ್, ಡೀಸೆಲ್‌ನ ಅಬಕಾರಿ ಸುಂಕ 2 ರೂ. ಏರಿಕೆ ಮಾಡಿರುವ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ (BJP) ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಆರೇ ತಿಂಗಳಲ್ಲಿ ತಂದುಕೊಡ್ತೀನಿ – 2.45 ಲಕ್ಷ ರೂ. ಕದ್ದು ಪತ್ರ ಬರೆದಿಟ್ಟು ಹೋದ ಕಳ್ಳ!
ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಜನರ ಮುಂದೆ ಒಪ್ಪಿಕೊಂಡಿದ್ದಾರೆ. ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು 2 ರೂ.ಗಳಷ್ಟು ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 50 ರೂ.ಯಷ್ಟು ಏರಿಕೆ ಮಾಡಿರುವ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಎಂಬುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಲು ಕಾರಣ ಏನು ಎಂದು ಬಿಜೆಪಿ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ @narendramodi ಅವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ @BJP4Karnataka ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ.
ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು… pic.twitter.com/Q156qri9pG
ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೋಟೆಲ್ ತಿಂಡಿಯವರೆಗೆ ಎಲ್ಲದರ ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಎನ್ನುವುದು ಆರ್ಥಿಕ ವ್ಯವಹಾರದ ಸಾಮಾನ್ಯ ಜ್ಞಾನ ಇದ್ದವರಿಗೆ ಗೊತ್ತಿರುತ್ತದೆ. ಹೀಗಿದ್ದರೂ ಬೆಲೆ ಏರಿಕೆಯ ಪಾಪದ ಹೊರೆಯನ್ನು ನಮ್ಮ ತಲೆ ಮೇಲೆ ಕಟ್ಟಲು ಹೊರಟಿರುವ ಬಿಜೆಪಿ ನಾಯಕರ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಮಸಿ ಬಳಿದಿದ್ದಾರೆ ಎಂದರು.
ಜನಾಕ್ರೋಶ ಯಾತ್ರೆ ಹೊರಟವರ ಮುಂದೆ ಈಗ ಇರುವುದು ಎರಡೇ ಎರಡು ಆಯ್ಕೆ. ಒಂದು ಅವರು ಪ್ರಧಾನ ಮಂತ್ರಿಯವರ ಮೇಲೆ ಒತ್ತಡ ಹೇರಿ ಕೇಂದ್ರ ಸರ್ಕಾರ ಹೆಚ್ಚಿಸಿರುವ ಬೆಲೆಯನ್ನು ಇಳಿಸುವಂತೆ ಮಾಡಬೇಕು. ಇಲ್ಲವೇ ಯಾತ್ರೆಯನ್ನು ಕೊನೆಗೊಳಿಸಿ ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಮನೆಗೆ ಮರಳಬೇಕು. ಇದರ ಹೊರತಾಗಿ ಈ ಯಾತ್ರೆಯ ಪ್ರಹಸನವನ್ನು ಮುಂದುವರಿಸಿದರೆ ಜನರ ಆಕ್ರೋಶಕ್ಕೆ ತುತ್ತಾಗುವುದು ಖಂಡಿತ ಎಂದು ತಿಳಿಸಿದರು.ಇದನ್ನೂ ಓದಿ: ಮಂಡ್ಯ | ವಿಸಿ ನಾಲೆಯಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ಮೂವರು ಮಕ್ಕಳ ದುರ್ಮರಣ
ನವದೆಹಲಿ: ಯುಗಾದಿ (Yugadi) ಹಬ್ಬದ ಹೊತ್ತಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (DA) ಶೇ.2ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇನ್ನೂ ಕಳೆದ ವರ್ಷ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.50ರಿಂದ ಶೇ.53ಕ್ಕೇರಿಕೆಯಾಗಿತ್ತು. ಇದೀಗ ಸರ್ಕಾರ ಅದನ್ನು ಶೇ.2ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ಡಿಎ ಇದೇ ಜನವರಿಯಿಂದ ಅನ್ವಯವಾಗಲಿದ್ದು, ಮಾರ್ಚ್ ತಿಂಗಳ ಸಂಬಳದಲ್ಲಿ ಮೂರು ತಿಂಗಳ ಅರಿಯರ್ಸ್ ಸೇರಿ ಖಾತೆಗೆ ಜಮೆಯಾಗಲಿದೆ.
ಹಣದುಬ್ಬರದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ನೌಕರರಿಗೆ ತುಟ್ಟಿಭತ್ಯೆ ನೆರವಾಗುತ್ತದೆ. ಹೆಚ್ಚುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತುಟ್ಟಿಭತ್ಯೆಯು ಸಹಾಯವಾಗುತ್ತದೆ. ವೇತನ ಆಯೋಗದ ಪ್ರಕಾರ, ಪ್ರತಿ 10 ವರ್ಷಕ್ಕೊಮ್ಮೆ ಮೂಲ ವೇತನವು ಪರಿಷ್ಕರಣೆಗೊಂಡರೆ, ತುಟ್ಟಿಭತ್ಯೆಯನ್ನು ಹಣದುಬ್ಬರ ಆಧಾರದ ಮೇಲೆ ಹೊಂದಾಣಿಕೆ ಮಾಡಲಾಗುತ್ತದೆ.ಇದನ್ನೂ ಓದಿ:ಪರಿಹಾರದ ಹಣದಲ್ಲಿ ಬೆಟ್ಟಿಂಗ್ – ವಂಚನೆಯಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ
ನವದೆಹಲಿ: ಕೇಂದ್ರ ಸರ್ಕಾರ (Central Government) ಏ.1ರೊಳಗೆ ಹೊಸ ಟೋಲ್ ಸುಂಕ ನೀತಿಯನ್ನು ಬಿಡುಗಡೆಗೊಳಿಸಲಿದ್ದು, ಇದರಿಂದ ವಾಹನ ಸವಾರರಿಗೆ ರಿಯಾಯಿತಿ ಸಿಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದರು.ಇದನ್ನೂ ಓದಿ: ಕಡಲಾಚೆಯ ಗಣಿಗಾರಿಕೆ ಯೋಜನೆಗೆ ಕೇರಳದ ವಿರೋಧವೇಕೆ? – ಯೋಜನೆಯ ಮಹತ್ವವೇನು?
ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುಂಕ ಕೇಂದ್ರದಲ್ಲಿ ಪ್ರಯಾಣಿಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಏ.1ರ ಒಳಗೆ ಹೊಸ ಟೋಲ್ ಸುಂಕ ನೀತಿಯನ್ನು ಬಿಡುಗಡೆಗೊಳಿಸಲಿದೆ. ಹೊಸ ನೀತಿಯಲ್ಲಿ ಪ್ರಯಾಣಿಕರಿಗೆ ಸ್ವಲ್ಪ ಪ್ರಮಾಣದ ರಿಯಾಯಿತಿ ದೊರೆಯಲಿದೆ. ಜೊತೆಗೆ ಸುಂಕ ವಸೂಲಿಯನ್ನೂ ಸರಳೀಕರಿಸಲಾಗಿದ್ದು, ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಕೇರಳದ (Kerala) ಕರಾವಳಿಯಲ್ಲಿ ಕೇಂದ್ರ ಸರ್ಕಾರ (Central Government) ಪ್ರಸ್ತಾವಿತ ಕಡಲಾಚೆಯ ಗಣಿಗಾರಿಕೆ ಯೋಜನೆಯನ್ನು (Offshore Mining) ವಿರೋಧಿಸಿ ಪ್ರತಿಭಟನೆಗಳನ್ನು ನಡೆಯುತ್ತಿವೆ. ಅಲ್ಲದೇ ಈ ಕ್ರಮದ ವಿರುದ್ಧ ದೆಹಲಿಯಲ್ಲಿ ಸಂಸದರು ಮತ್ತು ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಈ ಯೋಜನೆಯ ಮಹತ್ವ, ಉದ್ದೇಶ ಹಾಗೂ ಅಗತ್ಯಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
ಕೇರಳ ಕರಾವಳಿಯಲ್ಲಿ 745 ಮಿಲಿಯನ್ ಟನ್ ಖನಿಜ ನಿಕ್ಷೇಪ
ಕೇಂದ್ರವು ಕಳೆದ ವರ್ಷ ನವೆಂಬರ್‌ನಲ್ಲಿ ಕಡಲಾಚೆಯ ಗಣಿಗಾರಿಕೆಗೆ ದೇಶದ ಮೊದಲ ಹಂತದ ಇ-ಹರಾಜನ್ನು (50 ವರ್ಷಗಳ ಅವಧಿಗೆ ಗುತ್ತಿಗೆ) ಪ್ರಾರಂಭಿಸಿತು. ಗಣಿಗಾರಿಕೆಗೆ ದೇಶದ 13 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಮೂರು ಕೇರಳ ಕರಾವಳಿಯಲ್ಲಿ, ಮೂರು ಗುಜರಾತ್‌ನಲ್ಲಿ ಮತ್ತು 7 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿವೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಕೇರಳ ಕರಾವಳಿಯಲ್ಲಿ ಅಧ್ಯಯನ ನಡೆಸಿ, ಸುಮಾರು 745 ಮಿಲಿಯನ್ ಟನ್‌ಗಳಷ್ಟು ಮರಳಿನ ನಿಕ್ಷೇಪವನ್ನು ಪತ್ತೆ ಮಾಡಿದೆ. ಅಲ್ಲದೇ, ಗಣನೀಯ ಪ್ರಮಾಣದ ಕೋಬಾಲ್ಟ್-ಹೊಂದಿರುವ ಪಾಲಿ-ಮೆಟಾಲಿಕ್ ನಿಕ್ಷೇಪಗಳು, ನಿರ್ಮಾಣ ಯೋಜನೆಗಳಿಗೆ ಬಳಸಬಹುದಾದ ನಿಕಲ್ ಮತ್ತು ಅಪರೂಪದ ಖನಿಜಗಳನ್ನು ಹೊಂದಿವೆ ಎಂದು ವರದಿ ನೀಡದೆ. ಈ ಗಣಿಗಾರಿಕೆಗೆ ನೂತನ ತಂತ್ರಜ್ಞಾನದ ಅವಶ್ಯಕತೆ ಇದೆ. ಪ್ರಸ್ತುತ, ದಕ್ಷಿಣ ಕೇರಳದ ಕೊಲ್ಲಂ ಕರಾವಳಿಯ ಮೂರು ಬ್ಲಾಕ್‌ಗಳಲ್ಲಿ ಗಣಿಗಾರಿಕೆಗೆ ಪರಿಗಣಿಸಲಾಗುತ್ತಿದೆ. ಈ ಬ್ಲಾಕ್‌ಗಳಲ್ಲಿ 300 ಮಿಲಿಯನ್ ಟನ್‌ಗಳಷ್ಟು ಮರಳಿನ ನಿಕ್ಷೇಪವಿದೆ.
ಗಣಿಗಾರಿಕೆ ಕೇರಳ ಕಡಲ ವ್ಯಾಪ್ತಿ ಮೀರಿದೆ
OMDR ಕಾಯ್ದೆಯ ಪ್ರಕಾರ, ಕಡಲಾಚೆಯ ಪ್ರದೇಶಗಳಲ್ಲಿ ಗಣಿಗಳು ಮತ್ತು ಖನಿಜಗಳನ್ನು ನಿಯಂತ್ರಿಸುವ ಅಧಿಕಾರ ಕೇಂದ್ರಕ್ಕೆ ಇದೆ. ಇನ್ನೂ ಸಮುದ್ರದಲ್ಲಿ 12 ನಾಟಿಕಲ್ ಮೈಲುಗಳವರೆಗಿನ ಮೀನುಗಾರಿಕೆ ಮತ್ತು ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳು ಮಾತ್ರ ರಾಜ್ಯಕ್ಕೆ ಸೇರಿದ್ದಾಗಿದೆ. ಕೇರಳದ ಕೊಲ್ಲಂ ಕರಾವಳಿಯ ಮೂರು ಬ್ಲಾಕ್‌ಗಳು 12 ನಾಟಿಕಲ್ ಮೈಲುಗಳನ್ನು ಮೀರಿವೆ. ಆದ್ದರಿಂದ ಅವು ಕೇರಳ ಸರ್ಕಾರದ ಅಡಿಯಲ್ಲಿಲ್ಲ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ.
ಏನಿದು OMDR ಕಾಯ್ದೆ?
2023ರಲ್ಲಿ ಕೇಂದ್ರ ಸರ್ಕಾರವು ದೇಶೀಯ ಖನಿಜ ಸಂಪನ್ಮೂಲ ಸಾಮರ್ಥ್ಯಗಳನ್ನು ಅಭಿವೃದ್ಧಿ ಹಾಗೂ ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸಲು ಖಾಸಗಿ ನಿರ್ವಾಹಕರಿಗೆ ಕಡಲಾಚೆಯ ಖನಿಜ ಹೊರತೆಗೆಯುವ ಅಧಿಕಾರವನ್ನು ವಿಸ್ತರಿಸಲು ಈ ಕಾಯ್ದೆಯನ್ನು ಜಾರಿಗೆ ತಂದಿದೆ.
ಕಡಲ ಗಣಿಗಾರಿಕೆಗೆ ಕೇರಳದ ವಿರೋಧವೇಕೆ?
222 ಮೀನುಗಾರಿಕಾ ಹಳ್ಳಿಗಳಲ್ಲಿ ಹರಡಿರುವ ಸುಮಾರು 11 ಲಕ್ಷ ಮೀನುಗಾರರ ಜೀವನೋಪಾಯವಾದ ಮೀನುಗಾರಿಕೆ ವಲಯಕ್ಕೆ ಹಾನಿ ಆಗುವ ಸಾಧ್ಯತೆ ಇದೆ. ಇದರಿಂದ ಕೇಂದ್ರವು ಯೋಜನೆ ಕೈಬಿಡಬೇಕೆಂದು ಕೇರಳ ಒತ್ತಾಯಿಸಿದೆ.
ಕೇರಳದ ಕರಾವಳಿ ಪ್ರದೇಶದಲ್ಲಿ ಅತ್ಯಂತ ವೈವಿಧ್ಯಮಯ ಮತ್ತು ವ್ಯಾಪಕವಾದ ಮೀನು ಸಂತತಿಯನ್ನು ಇದೆ. ಗಣಿಗಾರಿಕೆಯು ಈ ಆವಾಸಸ್ಥಾನವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಇದು ನಮ್ಮ ಪ್ರದೇಶದ ಮೀನುಗಾರರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೇರಳದ ಕರಾವಳಿಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಈಗಾಗಲೇ ತೀವ್ರವಾಗಿ ಪರಿಣಾಮ ಬೀರಿದೆ. ಅರೇಬಿಯನ್ ಸಮುದ್ರವು ವೇಗವಾಗಿ ಬಿಸಿಯಾಗುತ್ತಿದೆ ಇದೆಲ್ಲ ಮೀನುಗಾರರ ಜೀವನಕ್ಕೆ ಕಷ್ಟತಂದೊಡ್ಡುತ್ತದೆ ಎಂದು ಮೀನುಗಾರರ ಪರ ಹೋರಾಟಗಾರರು, ಪರಿಸರವಾದಿಗಳು ವಾದಿಸಿದ್ದಾರೆ.
ತಜ್ಞರು ಹೇಳೋದೇನು?
ಆಳ ಸಮುದ್ರ ಗಣಿಗಾರಿಕೆಯ ಪರಿಣಾಮದ ಬಗ್ಗೆ ರಾಷ್ಟ್ರೀಯ ಭೂ ಅಧ್ಯಯನ ಕೇಂದ್ರ (NCESS) ವಿವರವಾದ ಸಂಶೋಧನೆ ಮಾಡಿದೆ. 242 ಚದರ ಕಿಲೋಮೀಟರ್ ಪ್ರದೇಶದಲ್ಲಿ ಗಣಿಗಾರಿಕೆಯು ಮೀನುಗಾರಿಕೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇದರಿಂದ ಸಮುದ್ರ ಪರಿಸರ ವ್ಯವಸ್ಥೆಯನ್ನು ನಾಶವಾಗುವುದಿಲ್ಲ ಎಂದು ಹಿರಿಯ ಸಂಶೋಧಕರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಕರಾವಳಿಯಿಂದ ಸುಮಾರು 10 ಕಿಲೋಮೀಟರ್ ದೂರದ ಸಮುದ್ರದಲ್ಲಿ ಗಣಿಗಾರಿಕೆ ನಡೆಸಿದಾಗ, ಆ ಪ್ರದೇಶದಲ್ಲಿನ ಮೀನುಗಳು 6-7 ಕಿಲೋಮೀಟರ್ ಚಲಿಸುತ್ತವೆ. ಟ್ರಾಲಿಂಗ್ ಮೀನುಗಾರಿಕೆಯು ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಇದೇ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಡಲಾಚೆಯ ಮರಳು ಗಣಿಗಾರಿಕೆಯು ಸಾಗಣೆ, ವ್ಯಾಪಾರ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದ ಮೂಲಕ ಗಮನಾರ್ಹ ಆದಾಯವನ್ನು ತರುವ ನಿರೀಕ್ಷೆಯಿದೆ .
ಕಡಲಾಚೆಯ ಗಣಿಗಾರಿಕೆ ಎಂದರೇನು?
ಕಡಲಾಚೆಯ ಗಣಿಗಾರಿಕೆಯು ಸಮುದ್ರತಳದಿಂದ ಖನಿಜಗಳು ಅಥವಾ ಅಮೂಲ್ಯ ಕಲ್ಲುಗಳನ್ನು ಹೊರತೆಗೆಯುವುದಾಗಿದೆ. ಭಾರತದಲ್ಲಿ ಕಡಲಾಚೆಯ ಗಣಿಗಾರಿಕೆಗೆ 2 ಮಿಲಿಯನ್ ಚದರ ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ಪ್ರದೇಶ ಯೋಗ್ಯವಾಗಿದೆ.
ಕಡಲಾಚೆಯ ಗಣಿಗಾರಿಕೆಗೆ ಕಳವಳಗಳೇನು?
ಕಡಲಾಚೆಯ ಗಣಿಗಾರಿಕೆಯು ಕೆಸರನ್ನು ಸೃಷ್ಟಿಸುತ್ತದೆ ಮತ್ತು ಭಾರ ಲೋಹಗಳನ್ನು ಹೊಂದಿರುವ ವಿಷಕಾರಿ ತ್ಯಾಜ್ಯ ನೀರನ್ನು ಬಿಡುಗಡೆ ಮಾಡುತ್ತದೆ, ಇದು ಸಮುದ್ರ ಜೀವಿಗಳಿಗೆ ಮತ್ತು ಸಮುದ್ರ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುವ ಪರಿಸರ ವ್ಯವಸ್ಥೆಗಳಿಗೆ ದೀರ್ಘಕಾಲೀನ ಅಪಾಯಗಳನ್ನುಂಟುಮಾಡುತ್ತದೆ.
ಪರಿಸರ ವ್ಯವಸ್ಥೆಗಳನ್ನು ಅಸ್ಥಿರಗೊಳಿಸುತ್ತದೆ, ಇದರಿಂದ ಸುನಾಮಿಗಳು, ಚಂಡಮಾರುತಗಳು, ಸವೆತಗಳ ವಿರುದ್ಧ ನೈಸರ್ಗಿಕ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ. ಕೆಸರು ಜಲಚರಗಳ ಆವಾಸಸ್ಥಾನಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.
ಸಮುದ್ರತಳದ ಪರಿಸರ ವ್ಯವಸ್ಥೆಗಳನ್ನು ತೊಂದರೆಗೊಳಿಸುವುದರಿಂದ ಸಂಗ್ರಹವಾಗಿರುವ ಇಂಗಾಲ ಬಿಡುಗಡೆಯಾಗಬಹುದು, ಇದು ವಾತಾವರಣದಲ್ಲಿ ಇಂಗಾಲದ ಮಟ್ಟವನ್ನು ಹೆಚ್ಚಿಸುವ ಮೂಲಕ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಬಹುದು ಎಂಬ ಆತಂಕ ಸಹ ಇದೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಉತ್ತರಾಖಂಡದಲ್ಲಿ 6,811 ಕೋಟಿ ರೂ. ವೆಚ್ಚದಲ್ಲಿ 2 ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸೋನ್‌ಪ್ರಯಾಗ್- ಕೇದಾರನಾಥ್ ಮತ್ತು ಹೇಮಕುಂಡ್ ಸಾಹಿಬ್- ಗೋವಿಂದಘಾಟ್ ನಡುವಿನ ರೋಪ್ವೇಗಳು ಮುಂದಿನ 4ರಿಂದ 6 ವರ್ಷಗಳೊಳಗೆ ಪೂರ್ಣಗೊಳಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸೋನ್‌ಪ್ರಯಾಗ್-ಕೇದಾರನಾಥ್ 12.9 ಕಿ.ಮೀ.ವರೆಗಿನ ಮತ್ತು ಹೇಮಕುಂಡ್ ಸಾಹಿಬ್-ಗೋವಿಂದಘಾಟ್ 12.4 ಕಿ.ಮೀ. ನಡುವೆ ರೋಪ್‌ವೇ ನಿರ್ಮಿಸಲಾಗುತ್ತದೆ. ಇದರಿಂದಾಗಿ 8 ಗಂಟೆ ಬೇಕಾಗಿದ್ದ ಪ್ರಯಾಣದ ಅವಧಿ ಕೇವಲ 40 ನಿಮಿಷಕ್ಕೆ ಇಳಿಯಲಿದೆ. ಈ ರೋಪ್‌ವೇಯು ಭಾರತದ ಉದ್ದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕೇದಾರನಾಥ್‌ನಿಂದ ಸೋನ್‌ಪ್ರಯಾಗ್ ನಡುವಿನ ರೋಪ್‌ವೇ ಅನ್ನು 4,081 ಕೋಟಿ ರೂ. ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್ ಡಿಟ್ಯಾಚೇಬಲ್ ಗೊಂಡೋಲ (3ಎಸ್) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18,000 ಪ್ರಯಾಣಿಕರನ್ನು ಈ ಕೇಬಲ್ ಕಾರ್ ಹೊತ್ತೊಯ್ಯಲಿದೆ. ಹೇಮಕುಂಡ್ ಸಾಹಿಬ್ ಜಿ ಮತ್ತು ಗೋವಿಂದಘಾಟ್ ನಡುವಿನ ರೋಪ್‌ವೇ 2,730 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ರೋಪ್‌ವೇನ ವಿಶೇಷತೆ ಏನು?
ಈ ರೋಪ್‌ವೇ 10 ಆಸನಗಳ ಕ್ಯಾಬಿನ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಕ್ಯಾಬಿನ್‌ಗಳನ್ನು ಮುಚ್ಚಿರುತ್ತದೆ. ಸ್ವಯಂಚಾಲಿತ ತೆರೆಯುವ ಮತ್ತು ಮುಚ್ಚುವ ಬಾಗಿಲುಗಳನ್ನು ಹೊಂದಿರುತ್ತದೆ. ಇವು ಒಂದು ಗಂಟೆಯಲ್ಲಿ 1,800 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ರೋಪ್‌ವೇ ವರ್ಷವಿಡೀ ಕಾರ್ಯನಿರ್ವಹಿಸುತ್ತದೆ. ಮಳೆಗಾಲ, ಬೇಸಿಗೆ ಕಾಲದ ಸಮಯದಲ್ಲೂ ಕಾರ್ಯನಿರ್ವಹಿಸುತ್ತದೆ.
ರೋಪ್‌ವೇ ನಿರ್ಮಾಣದ ಲಾಭವೇನು?
ಹೇಮಕುಂಡ್ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ತೆರಳುವ ದಾರಿ ಕಲ್ಲು ಬಂಡೆಗಳಿಂದ ಕೂಡಿದ್ದು, ಜನ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ವೃದ್ಧರನ್ನು ಕುದುರೆಗಳ ಮೇಲೆ ಕೂರಿಸಿಕೊಂಡು ಅಥವಾ ಹೊತ್ತುಕೊಂಡು ಹೋಗಲಾಗುತ್ತಿತ್ತು. ಭೂಕುಸಿತ ಸಂಭವಿಸಿದಾಗ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ಈ ರೋಪ್ ವೇಯು ಯಾತ್ರಾರ್ಥಿಗಳ ಪ್ರಯಾಣವನ್ನು ಸುಖಕರಗೊಳಿಸಲು ಹಾಗೂ ಎಲ್ಲಾ ಹವಾಮಾನದಲ್ಲೂ ಓಡಾಡಲು ಅನುಕೂಲವಾಗುತ್ತದೆ. ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದ್ದರಿಂದ ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.
ವಿಶ್ವ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ 20 ಲಕ್ಷ ಯಾತ್ರಾಧಿಗಳು ಭೇಟಿ ನೀಡುತ್ತಾರೆ. ಇದೀಗ ಈ ದೇವಾಲಯಕ್ಕೆ ತೆರಳಲು ರೋಪ್ ವೇ ನಿರ್ಮಾಣ ಮಾಡುತ್ತಿರುವುದರಿಂದ ಭಕ್ತಾಧಿಗಳು ದುರ್ಗಮ ಹಾದಿಯಲ್ಲಿ ತೆರಳುವುದನ್ನು ತಪ್ಪಿಸುತ್ತದೆ.
ಭಾರತದ ಮೊದಲ ರೋಪ್‌ವೇ
1960ರಲ್ಲಿ ಭಾರತದ ಮೊದಲ ಆಧುನಿಕ ರೋಪ್‌ವೇ ಅನ್ನು ರಾಜ್‌ಗೀರ್‌ನಲ್ಲಿ ನಿರ್ಮಿಸಲಾಗಿತ್ತು. ಇದನ್ನು ಪ್ರಸಿದ್ಧ ಜಪಾನಿನ ಬೌದ್ಧ ಸನ್ಯಾಸಿ ಫ್ಯೂಜಿ ಅವರು ರಾಜ್‌ಗೀರ್‌ನ ವಿಶ್ವ ಶಾಂತಿ ಸ್ತೂಪಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ.
ಅರುಣಾಚಲದ ತವಾಂಗ್ ಬೌದ್ಧ ಧಾರ್ಮಿಕ ಸ್ಥಳದ ರೋಪ್‌ವೇಯನ್ನು ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿ 2010ರಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ರೋಪ್‌ವೇಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗುಲ್ಮಾರ್ಗ್ ರೋಪ್‌ವೇಯು ವಿಶ್ವದ 2 ನೇ ಅತಿ ಎತ್ತರದ ಕೇಬಲ್ ಕಾರನ್ನು ಹೊಂದಿದೆ. ಏಷ್ಯಾದ ಅತಿ ಎತ್ತರದ ಮತ್ತು ಉದ್ದವಾದ ಕೇಬಲ್ ಕಾರನ್ನು ಹೊಂದಿದೆ.
ಕೇಬಲ್ ಲಿಫ್ಟ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕ್ರೊಯೇಷಿಯಾದ ಪಾಲಿಮ್ಯಾತ್ ಫೌಸ್ಟೊ ವೆರಾಂಜಿಯೊ ನಿರ್ಮಾಣ ಮಾಡಿದ್ದರು. ಮೊದಲ ಕಾರ್ಯಾಚರಣಾ ವೈಮಾನಿಕ ಲಿಪ್ಟ್ ಅನ್ನು 1644 ರಲ್ಲಿ ಪೋಲೆಂಡ್‌ನ ಗ್ಡಾನ್ಸ್ಕ್ ನಲ್ಲಿ ಆಡಮ್ ವೈಬೆ ನಿರ್ಮಿಸಿದ್ದರು. ಇದನ್ನು ಯುರೋಪಿಯನ್ ಇತಿಹಾಸದಲ್ಲಿ ಮೊದಲ ಕೇಬಲ್ ಲಿಫ್ಟ್ ಎಂದು ಕರೆಯಲಾಗಿತ್ತು.
ನಬಾರ್ಡ್ ಸಂಸ್ಥೆ ಈ ವರ್ಷ ರಾಜ್ಯಕ್ಕೆ ಕಡಿಮೆ ಹಣಕಾಸು ನೆರವು ನೀಡಿದೆ. 2023-24 ರಲ್ಲಿ 5,600 ಕೋಟಿ ಹಣಕಾಸು ನೆರವು ಕೊಟ್ಟಿತ್ತು. 2024-25 ರಲ್ಲಿ 2,340 ಕೋಟಿ ಮಾತ್ರ ನಬಾರ್ಡ್ ಹಣಕಾಸು ನೆರವು ಕೊಟ್ಟಿದೆ. 2023-24 ನೇ ಸಾಲಿಗೆ ಹೋಲಿಕೆ ಮಾಡಿದ್ರೆ 58% ಕಡಿಮೆ ಹಣಕಾಸು ನೆರವು ನಬಾರ್ಡ್ ಕೊಟ್ಟಿದೆ ಅಂತ ಮಾಹಿತಿ ನೀಡಿದ್ರು. ಇದನ್ನೂ ಓದಿ: `ದೃಶ್ಯಂ’ ಸಿನಿಮಾ ಶೈಲಿಯಲ್ಲಿ ಮಹಿಳೆ ಕೊಲೆ ಮಾಡಿ ಸಾಕ್ಷ್ಯ ನಾಶ – 4 ತಿಂಗಳ ಬಳಿಕ ಆರೋಪಿ ಅರೆಸ್ಟ್
ಕಡಿಮೆ ಹಣ ಕೊಟ್ಟ ಹಿನ್ನೆಲೆಯಲ್ಲಿ ಸಿಎಂ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಾನು ಕೂಡಾ ಬಿಜೆಪಿ ಎಂಪಿಗಳಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಬಳಿಕ ನಬಾರ್ಡ್ 896 ಕೋಟಿ ಬಿಡುಗಡೆ ಮಾಡಿದೆ. ಇದೂ ಕೂಡಾ ಸಾಕಾಗಿಲ್ಲ.ಹೀಗಾಗಿ ಮತ್ತೆ ಬೇಡಿಕೆ ಸಲ್ಲಿಸಲಾಗಿದೆ. ನಮ್ಮ ಬೇಡಿಕೆ 9119 ಕೋಟಿ ಇದೆ. ಆದರೆ ನಬಾರ್ಡ್ ಈ ಬಾರಿ 2,340 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಇದರಿಂದ ರೈತರಿಗೆ ಸಾಲ ಕೊಡಲು ಆಗ್ತಿಲ್ಲ. ಕೇಂದ್ರ ಅನುದಾನದ ಲಭ್ಯತೆ ನೋಡಿಕೊಂಡು ಸಾಲ ನೀಡುವ ಕೆಲಸ ಮಾಡುತ್ತೇವೆ ಅಂತ ತಿಳಿಸಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರೋಧಿಸಿ ರೈತರ ಸಭೆ – ಬೃಹತ್ ಪಾದಯಾತ್ರೆಗೆ ನಿರ್ಧಾರ
ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಯಾತ್ರಾ ಸ್ಥಳ ಸವದತ್ತಿ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 100 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇಂದ್ರದ ಪ್ರಸಾದ ಯೋಜನೆ ಅಡಿಯಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದರಿಂದ ಈ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಆಧುನಿಕ ಸೌಲಭ್ಯಗಳು ದೊರೆಯುವಂತಾಗಲಿದೆ. ಭಕ್ತರಲ್ಲಿ ದೇವಸ್ಥಾನದ ಬಗ್ಗೆ ಸಕಾರಾತ್ಮಕ ಭಾವನೆ ಮೂಡುವ ವಿಶ್ವಾಸ ಇದೆ ಎಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿAಗ್ ಶೇಖಾವತ್ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.ಇದನ್ನೂ ಓದಿ: ಬೆಳಗಾವಿ| ಬಾಲಕಿಯನ್ನು ಪುಸಲಾಯಿಸಿ ಗರ್ಭಿಣಿ ಮಾಡಿದ 2 ಮಕ್ಕಳ ತಂದೆ ಅರೆಸ್ಟ್