Tag: Central Government

  • ಬೈಕ್ ಟ್ಯಾಕ್ಸಿಗೆ ಕೇಂದ್ರದಿಂದ ಅಸ್ತು – ಮಾರ್ಗಸೂಚಿ ಬಿಡುಗಡೆ

    ಬೈಕ್ ಟ್ಯಾಕ್ಸಿಗೆ ಕೇಂದ್ರದಿಂದ ಅಸ್ತು – ಮಾರ್ಗಸೂಚಿ ಬಿಡುಗಡೆ

    – ರಾಜ್ಯ ಸರ್ಕಾರ ಅನುಮತಿ ನೀಡಿದ್ರೆ ಮಾತ್ರ ಅಗ್ರಿಗೇಟರ್ ಸೇವೆ

    ನವದೆಹಲಿ: ರಾಜ್ಯ ಸರ್ಕಾರ (State Government) ನಿಷೇಧ ಹೇರಿದ ಹಿನ್ನೆಲೆ ಭಾರೀ ಪ್ರತಿಭಟನೆ ನಡೆಯುತ್ತಿರುವ ಹೊತ್ತಲ್ಲೇ ಬೈಕ್ ಟ್ಯಾಕ್ಸಿಗೆ (Bike Taxi) ಕೇಂದ್ರ ಸರ್ಕಾರ (Central Government) ಅನುಮತಿ ನೀಡಿದೆ. ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.

    ಕಳದ ಜೂ.16ರಿಂದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಬ್ಯಾನ್‌ಗೊಳಿಸಿತ್ತು. ಈ ಹಿನ್ನೆಲೆ ಇದರ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ.ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆಯಿಂದ RailOne ಆಪ್‌ ಬಿಡುಗಡೆ- ಏನೆಲ್ಲಾ ಸೇವೆ ಲಭ್ಯವಿದೆ?

    ಈ ಸಂಬಂಧ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದ್ದು, ನಿಮ್ಮ ಖಾಸಗಿ ಬೈಕ್‌ಗಳನ್ನು ಬಳಸಿಕೊಂಡು ಅಗ್ರಿಗೇಟರ್ ಸೇವೆಗಳನ್ನು ಒದಗಿಸಬಹುದು. ಆದರೆ ಆಯಾ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ ಎಂದು ತಿಳಿಸಿದೆ. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ 1988ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 2025ರ ಅಗ್ರಿಗೇಟರ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – ರಾಜ್ಯ ಸರ್ಕಾರಗಳು ಖಾಸಗಿ ಬೈಕ್‌ಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರ್‌ಗಳಿಗೆ ಅನುಮತಿ ಕೊಡಬಹುದು.
    – ಇದರಿಂದ ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ, ಕೈಗೆಟುಕುವ ದರದ ಪ್ರಯಾಣ, ಸ್ಥಳೀಯ ಸಾರಿಗೆ ಅಭಿವೃದ್ಧಿ ಮತ್ತು ಜೀವನವನ್ನ ರೂಪಿಸಲು ಅವಕಾಶ ಮಾಡಿಕೊಡಬಹುದು.
    – ರಾಜ್ಯ ಸರ್ಕಾರಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಸಬ್ ಸೆಕ್ಷನ್ (3)ರ ಅಡಿಯಲ್ಲಿ ಅಗ್ರಿಗೇಟರ್‌ಗಳಿಗೆ ಖಾಸಗಿ ವಾಹನಗಳನ್ನ ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅನುಮತಿ ಕೊಡಬಹುದು
    – ಇದರಡಿ ಅಗ್ರಿಗೇಟರ್‌ಗಳಿಗೆ ದೈನಂದಿನ, ವಾರದ, ಹದಿನೈದು ದಿನದ ಅನುಮತಿಗಾಗಿ ಸರ್ಕಾರ ಶುಲ್ಕ ವಿಧಿಸಬಹುದು.ಇದನ್ನೂ ಓದಿ: ಈಡೇರಿದ ಶರಾವತಿ ಮಡಿಲ ಮಕ್ಕಳ 6 ದಶಕಗಳ ಕನಸು!

  • GST ಕಲೆಕ್ಷನ್‌ನಲ್ಲಿ ದಾಖಲೆ – 5 ವರ್ಷಗಳಲ್ಲಿ ಡಬಲ್, ಬರೋಬ್ಬರಿ 22.08 ಲಕ್ಷ ಕೋಟಿ ಸಂಗ್ರಹ

    GST ಕಲೆಕ್ಷನ್‌ನಲ್ಲಿ ದಾಖಲೆ – 5 ವರ್ಷಗಳಲ್ಲಿ ಡಬಲ್, ಬರೋಬ್ಬರಿ 22.08 ಲಕ್ಷ ಕೋಟಿ ಸಂಗ್ರಹ

    ನವದೆಹಲಿ: ಕಳೆದ 5 ವರ್ಷಗಳಲ್ಲಿ ಸರಕು ಸೇವಾ ತೆರಿಗೆ (GST) ಸಂಗ್ರಹ ದ್ವಿಗುಣಗೊಂಡಿದೆ. 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟಾರೆ ತೆರಿಗೆ ಸಂಗ್ರಹ ದಾಖಲೆಯ 22.08 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂಬುದನ್ನು ಇಂದು ಬಿಡುಯಾದ ಸರ್ಕಾರಿ ಡೇಟಾ ಬಹಿರಂಗಪಡಿಸಿದೆ.

    ಇದು ಈವರೆಗಿನ ದಾಖಲೆಯ ತೆರಿಗೆ ಸಂಗ್ರಹವಾಗಿದೆ (GST Collections). 2021ರ ಆರ್ಥಕ ವರ್ಷದಲ್ಲಿ 11.37 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದೀಗ 2025ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಸರಾಸರಿ ಮಾಸಿಕ ಜಿಎಸ್‌ಟಿ ಸಂಗ್ರಹ 1.84 ಲಕ್ಷ ಕೋಟಿ ಇದ್ದರೆ, 2024ರ ಆರ್ಥಿಕ ವರ್ಷದಲ್ಲಿ 1.68 ಲಕ್ಷ ಕೋಟಿ ರೂ., 2022ರ ಆರ್ಥಿಕ ವರ್ಷದಲ್ಲಿ 1.51 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಗಮನಾರ್ಹ ಏರಿಕೆಯಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ

    Indian Economy 2

    ಸರಕು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ಬಂದು 8 ವರ್ಷ ತುಂಬಿದೆ. ಒಟ್ಟು ನೋಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆ 65 ಲಕ್ಷ ದಿಂದ 1.51 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ 2024-25ರ ಆರ್ಥಿಕ ವರ್ಷದಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಶೇ.9.4 ರಷ್ಟು ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಎಂಬುದನ್ನು ದತ್ತಾಂಶ ಬಹಿರಂಗಗೊಳಿಸಿದೆ. ಇದನ್ನೂ ಓದಿ: ಭಾರತ್-NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಇನ್ನೋವಾ ಹೈಕ್ರಾಸ್‌ಗೆ ಸಿಕ್ತು 5 ಸ್ಟಾರ್ ರೇಟಿಂಗ್

    ಇನ್ನೂ 2025ನೇ ಸಾಲಿನ ಏಪ್ರಿಲ್‌ನಲ್ಲಿ 2.37 ಲಕ್ಷ ಕೋಟಿ, ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ಸಂಗ್ರಹವಾಗಿದ್ದು, ಜೂನ್‌ ತಿಂಗಳ ಅಂಕಿ ಅಂಶ ಜುಲೈ 2ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸೇನಾ ಸಾಮರ್ಥ್ಯಕ್ಕೆ ಇನ್ನಷ್ಟು ಬಲ – ಭಾರತದ ʻಬ್ರಹ್ಮಾಸ್ತ್ರʼ ಅಗ್ನಿ-5 ಬಂಕರ್ ಬಸ್ಟರ್? – ಪಾಕ್‌ಗೆ ನಡುಕ

    ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ತೆರಿಗೆ ಸಂಗ್ರಹ ಹೆಚ್ಚಳ ಒಂದುಕಡೆಯಾದ್ರೆ, ತೆರಿಗೆ ಮೂಲಗಳ ವಿಸ್ತರಣೆಯೂ ಆಗಿದೆ. ಇದು ಭಾರತದ ಹಣಕಾಸಿನ ಸ್ಥಿತಿಯನ್ನು ಇನ್ನಷ್ಟು ಸ್ಥಿರವಾಗಿ ಬಲಪಡಿಸಿದೆ. ಅಲ್ಲದೇ ಪರೋಕ್ಷ ತೆರಿಗೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಪ್ರಕರಣೆಯಲ್ಲಿ ತಿಳಿಸಿದೆ.

  • ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ

    ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ

    – 2.5 ಲಕ್ಷ ಟನ್ ಮಾವು ಖರೀದಿಗೆ ಬೆಂಬಲ ಬೆಲೆ ಘೋಷಣೆ
    – ಮಾವು ಬೆಳೆಗಾರರ ನರೆವಿಗೆ ಬರುವಂತೆ ಪತ್ರ ಬರೆದಿದ್ದ ಹೆಚ್‌ಡಿಕೆ

    ನವದೆಹಲಿ: ಮಾವು ಬೆಳೆಗಾರರ ನೆರವಿಗೆ ಬರುವಂತೆ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪತ್ರ ಬರೆದು ಮನವಿ ಮಾಡಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ (Central Government) ಬೆಂಬಲ ಬೆಲೆ ಘೋಷಿಸಿ, ಖರೀದಿಗೆ ಬೆಲೆ ನಿಗದಿ ಮಾಡಿದೆ.

    ಈ ಮೂಲಕ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ ಮಾಡಿದ್ದು, 2.5 ಲಕ್ಷ ಟನ್ ಮಾವು ಖರೀದಿಸಲು ನಿರ್ಧರಿಸಿದೆ. ತಮ್ಮ ಪತ್ರವನ್ನು ಆಧರಿಸಿ ತಕ್ಷಣವೇ ಸ್ಪಂದಿಸಿದಕ್ಕಾಗಿ ಕೇಂದ್ರಕ್ಕೆ ಹೆಚ್‌ಡಿಕೆ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಕೇಂದ್ರ ಕೃಷಿ ಸಚಿವರಿಗೆ ಹೆಚ್‌ಡಿಕೆ ಪತ್ರ – ಮಾವು ಬೆಳೆಗಾರರ ನೆರವಿಗೆ ಬರುವಂತೆ ಮನವಿ

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರ ರೈತಪರ ಬದ್ಧತೆ, ಅಚಲತೆಗೆ ಹೃದಯಪೂರ್ವಕ ಧನ್ಯವಾದಗಳು. ರಾಜ್ಯದ ಮಾವು ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿಕೊಂಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ತಕ್ಷಣ ಬೆಂಬಲ ಬೆಲೆ ಘೋಷಿಸಿದ್ದೀರಿ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕರ್ನಾಟಕದ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

    ಇದಕ್ಕೂ ಮುನ್ನ ಹೆಚ್‌ಡಿಕೆ ಅವರು ಪತ್ರದ ಮೂಲಕ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ಪತ್ರದ ಮೂಲಕ, ಕೇಂದ್ರ ಸರ್ಕಾರ ನೆರವಿಗೆ ಬಾರದಿದ್ದರೆ ಬೆಳೆಗಾರರಿಗೆ ಬೇರೆ ನೆರವಿನ ಖಾತರಿ ಇಲ್ಲ. ನಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ ಮಾವು ಖರೀದಿ ಮಾಡಬೇಕು ಹಾಗೂ ತಕ್ಷಣವೇ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕರ್ನಾಟಕದ ಗ್ರಾಮೀಣ ಭಾಗದ ಮಾವು ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಬೆಲೆ ಸಿಗದ ಕಾರಣ ಮಾವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಇಂತಹ ಕಷ್ಟಕಾಲದಲ್ಲಿ ತಾವು ರೈತರ ನೆರವಿಗೆ ಧಾವಿಸಬೇಕು ಎಂದು ಕೋರಿದ್ದರು.

    ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಮಾವನ್ನು ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8ರಿಂದ 10 ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ದುರಾದೃಷ್ಟದ ಸಂಗತಿ ಎಂದರೆ, ಹವಾಮಾನ ವೈಪರೀತ್ಯದಿಂದ ರೋಗರುಜಿನಗಳು ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ.30ರಷ್ಟು ಕಡಿಮೆಯಾಗಿದೆ ಎಂಬ ಅಂಶವನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದರು.ಇದನ್ನೂ ಓದಿ: ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್

  • 16ನೇ ಜನಗಣತಿ – 2027ರಲ್ಲಿ ನಡೆಯಲಿರುವ ಈ ಗಣತಿಯಲ್ಲಿ ಹೊಸದೇನು?

    16ನೇ ಜನಗಣತಿ – 2027ರಲ್ಲಿ ನಡೆಯಲಿರುವ ಈ ಗಣತಿಯಲ್ಲಿ ಹೊಸದೇನು?

    ನಸಂಖ್ಯೆಯ ಸಮಗ್ರ ಚಿತ್ರಣ ಹಾಗೂ ನಿರ್ದಿಷ್ಟ ಕಾಲಾವಧಿಗೆ ನಡೆಸಲಾಗುವ ಒಂದು ಪ್ರಕ್ರಿಯೆ ಜನಗಣತಿ (Census). 1872ರಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆ 1881ರಿಂದ ಈವರೆಗೂ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಾ ಬಂದಿದೆ. ಈ ಬಾರಿ 2027ರ 16ನೇ ಜನಗಣತಿ ವಿವಿಧ ಹೊಸ ಪ್ರಕ್ರಿಯೆಗಳಿಂದ ಹಾಗೂ ಇನ್ನಿತರ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ನಡೆಯಲಿದೆ.

    ಹೌದು, 2011ರ ನಂತರ 10 ವರ್ಷಗಳ ಬಳಿಕ 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್ ಸಮಸ್ಯೆಯಿಂದಾಗಿ ನಡೆಸಲಾಗಿರಲಿಲ್ಲ. ಇದೇ ಕಾರಣದಿಂದ ಸದ್ಯ ಕೇಂದ್ರ ಸರ್ಕಾರ (Central Government) 2027ರಲ್ಲಿ ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮೊದಲ ಹಂತ 2026 ಅಕ್ಟೋಬರ್ 1 ಹಾಗೂ ಎರಡನೇ ಹಂತ 2027ರ ಮಾರ್ಚ್ 1ರಿಂದ ನಡೆಯಲಿದೆ.

    ಜನಗಣತಿ ಎಂದರೇನು?
    ಜನಗಣತಿ ಎಂದರೆ ದೇಶದ ಜನಸಂಖ್ಯೆ ಸಮಗ್ರ ಚಿತ್ರಣ ನೀಡುವ ಗಣತಿ ಹಾಗೂ ಸಾಮಾಜಿಕ ಪ್ರಕ್ರಿಯೆ ಎನ್ನಲಾಗಿದೆ. ಇದು ನಿರ್ದಿಷ್ಟ ಕಾಲ ಬದಿಗೆ ಒಂದು ಬಾರಿ ಸರ್ಕಾರದ ವತಿಯಿಂದ ನಡೆಸಲಾಗುವ ಒಂದು ಉಪಕ್ರಮವಾಗಿರುತ್ತದೆ. ದೇಶದಲ್ಲಿರುವ ಜನರ ಸಂಖ್ಯೆ, ಲಿಂಗ ಸಮಾನತೆ, ವಯೋವರ್ಗ, ಶಿಕ್ಷಣ ಮಟ್ಟ, ಉದ್ಯೋಗ ಸ್ಥಿತಿ, ವಾಸ ಸ್ಥಾನ, ಧರ್ಮ, ಭಾಷೆ ಮತ್ತು ಅನೇಕ ಬಡಾವಣೆಗಳ ಕುರಿತು ವಿವರವಾದಂತಹ ಮಾಹಿತಿಯನ್ನು ಒದಗಿಸುತ್ತದೆ.

    ಇದು ದೇಶದ ಅಭಿವೃದ್ಧಿಗೆ ತಾಂತ್ರಿಕವಾಗಿ ಸಹಾಯ ಒದಗಿಸುತ್ತದೆ. ಇದು ಕೇವಲ ಅಂಕಿ ಅಂಶಗಳ ಸಂಗ್ರಹಣೆಯಾಗಿರದೆ ದೇಶದ ಸಾಮಾಜಿಕ ಸ್ಥಿತಿಯ ಪ್ರತಿಬಿಂಬವಾಗಿರುತ್ತದೆ. ಈ ಮೂಲಕ ಸರ್ಕಾರ ಹಾಗೂ ನಾಗರಿಕರ ನಡುವಿನ ಸಂಪರ್ಕದ ಬಲವಾದ ಸೇತುವೆಯಾಗಿ ಜನಗಣತಿ ಕಾರ್ಯನಿರ್ವಹಿಸುತ್ತದೆ. ಜನಗಣತಿಯೆಂಬುದು ಲ್ಯಾಟಿನ್ ಭಾಷೆಯ ಸೆನ್ಸೆರೆ ಎಂಬ ಪದದಿಂದ ಬಂದಿದೆ. ಮೂಲ ಪದದ ಅರ್ಥ ಮೌಲ್ಯಮಾಪನ ಮಾಡು, ಅಂದಾಜು ಹಾಕು ಎನ್ನಲಾಗಿದೆ. ಪ್ರಾಚೀನ ರೋಮ್ ನಲ್ಲಿ ಈ ಪದವನ್ನು ಮೊದಲ ಬಾರಿಗೆ ಬಳಸಲಾಯಿತು. ಆಗ ನಾಗರೀಕರ ಸಂಖ್ಯೆ ಮತ್ತು ಆಸ್ತಿಯ ಮೌಲ್ಯವನ್ನು ಅಳೆಯುವ ಕಾರ್ಯಕ್ಕಾಗಿ ಈ ಪದವನ್ನು ಬಳಕೆ ಮಾಡಿದ್ದರು.

    ಜನಗಣತಿಯ ಇತಿಹಾಸ:
    ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ ಕೌಟಿಲ್ಯ ಕ್ರಿ.ಪೂ 321-296 ರವರೆಗೆ ಬರೆದ ಪ್ರಸಿದ್ಧ ಪುಸ್ತಕ ಅರ್ಥಶಾಸ್ತ್ರವು ತೆರಿಗೆ, ರಾಜನೀತಿ ಸೇರಿದಂತೆ ಆಡಳಿತ ಭಾಗವಾಗಿ ಜನಗಣತಿ ನಡೆಸುವುದನ್ನು ಕೂಡ ವಿವರಿಸಿದ್ದಾರೆ. ಇನ್ನು ಮೊಘಲ್ ದೊರೆ ಅಕ್ಬರನ ಆಳ್ವಿಕೆಯಲ್ಲಿ ‘ ಐನ್- ಎ- ಅಕ್ಬರಿ’ ಎಂಬ ಗ್ರಂಥದಲ್ಲಿ ಜನಸಂಖ್ಯೆ, ಕೈಗಾರಿಕೆ, ಸಂಪತ್ತು ಮತ್ತು ಸಮಾಜದ ಹಲವು ಪ್ರಕ್ರಿಯೆಗಳ ಬಗ್ಗೆ ವಿವರಿಸಿದ್ದಾರೆ. ಅದಾದ ನಂತರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಭಾಗವಾಗಿ ಜನಗಣತಿ ಪ್ರಾರಂಭವಾಯಿತು. ವರದಿಗಳ ಪ್ರಕಾರ 1872 ರಲ್ಲಿ ಜನಗಣತಿ ಪ್ರಾರಂಭವಾಯಿತು. ಆದರೆ ಅದಕ್ಕೂ ಮುನ್ನ ಹಲವು ದಶಕಗಳ ಹಿಂದೆ ಜನಗಣತಿ ಪ್ರಾರಂಭವಾಗಿತ್ತು.

    1800ರಲ್ಲಿ ಕಲ್ಕತ್ತಾ ಮತ್ತು ಬನಾರಸ್ ನಗರದಲ್ಲಿ ಮೊದಲ ಬಾರಿಗೆ ಜನಗಣತಿ ನಡೆಸಲಾಯಿತು. 1814-15 ರಲ್ಲಿ ಬಾಂಬೆಯ ದ್ವೀಪದಲ್ಲಿ ನಡೆಸಲಾಗಿತ್ತು. ಹಾಗೆ ಮುಂದುವರೆದು 1821, 1831, 1837, 1850, 1866 ಕಲ್ಕತ್ತಾದಲ್ಲಿ, 1833, 1844, 1849, 1864 ಬಾಂಬೆಯಲ್ಲಿ, 1822, 1863, 1867 ಪಂಜಾಬ್ ನಲ್ಲಿ ಹೀಗೆ ಬೇರೆ ಬೇರೆ ಕಡೆಯಲ್ಲಿ ಕೆಲವು ಜನಗಣತಿ ನಡೆಸಿದ ಪ್ರಯತ್ನಗಳು ಕಂಡುಬಂದಿವೆ. 1872 ಜನಗಣತಿಯ ಪ್ರಕಾರ ಭಾರತ ಲಿಂಗಾನುಪಾತವು 100 ಪುರುಷರಿಗೆ 105 ಮಹಿಳೆಯರು ಎಂದು ತೋರಿಸುತ್ತದೆ. ಅದಾದ ಬಳಿಕ 1881ರಲ್ಲಿ ಭಾರತದಲ್ಲಿ ಏಕಕಾಲದಲ್ಲಿ  ಜನಗಣತಿ ನಡೆಸಲಾಯಿತು. ಅಂದಿನಿಂದ ಪ್ರಾರಂಭವಾದ ಜನಗಣತಿ 1881, 1891, 1901, 1911, 1921, 1931, 1941, 1951, 1961, 1971, 1981, 1991, 2001, 2011, 2021 ನಡೆಯುತ್ತಾ ಬಂದಿದೆ. ಅದಾದ ಬಳಿಕ 1948ರ ಸೆಕ್ಷನ್ 3ರ ಅಡಿಯಲ್ಲಿ ಜನಗಣತಿ ಕಾಯ್ದೆಯ ಗೆಜೆಟ್ ಅಧಿಸೂಚನೆ ಹೊರಡಿಸಲಾಯಿತು.

    2027ರ ಜನಗಣತಿ ಹೇಗಿರಲಿದೆ:
    ಭಾರತದ 16ನೇ ಜನಗಣತಿ 2027ರಲ್ಲಿ ನಡೆಯಲಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಕಾರಣದಿಂದಾಗಿ ನಡೆಸಲಾಗಿರಲಿಲ್ಲ. ಈ ಹಿನ್ನೆಲೆ ಈ ಜನಗಣತಿಯನ್ನ 2027ರಲ್ಲಿ ನಡೆಸಲಾಗುತ್ತಿದೆ. ಈ ಬಾರಿಯ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2026ರ ಅಕ್ಟೋಬರ್ 1 ರಿಂದ ಉತ್ತರ ಭಾರತದ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲಡಾಖ್‌ನಂತಹ ಇನ್ನಿತರ ಪ್ರದೇಶಗಳಲ್ಲಿ ಜನಗಣತಿ ನಡೆಯಲಿದೆ. ಬಳಿಕ 2027ರ ಮಾರ್ಚ್ 1 ರಿಂದ ಭಾರತದ ಇನ್ನಿತರ ಪ್ರದೇಶಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಬಾರಿಗೆ ಜನಗಣತಿಯ ಜೊತೆಗೆ ಜಾತಿಗಣತಿಯು ನಡೆಯಲಿದೆ. ಜನಗಣತಿ ಪ್ರಾರಂಭಕ್ಕೂ ಮುನ್ನ ಮನೆ ಪಟ್ಟಿ, ವಸತಿ ಗಣತಿ ಬಳಿಕ ಜನಸಂಖ್ಯಾ ಗಣತಿ ನಡೆಯುತ್ತದೆ. ಈ ಬಾರಿ ಶಾಲಾ ಶಿಕ್ಷಕರು ಸೇರಿದಂತೆ 30 ಲಕ್ಷ ಗಣತಿದಾರರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 1,20,000 ಕಾರ್ಯಕರ್ತರು ಹಾಗೂ 46,000 ತರಬೇತಿದಾರರು ಕಾರ್ಯನಿರ್ವಹಿಸಲಿದ್ದಾರೆ.

    ಜನಗಣತಿ ನಡೆಸುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವ ತಿಂಗಳಲ್ಲಿ ನಡೆಸಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್ 1ರಿಂದ ಸಪ್ಟೆಂಬರ್ 30ರ ನಡುವೆ ಜನಗಣತಿ ನಡೆಸಲಾಗುತ್ತದೆ. ಗಣತಿ ಪೂರ್ಣಗೊಂಡ ನಂತರ 10 ದಿನಗಳಲ್ಲಿ ತಾತ್ಕಾಲಿಕ ದತ್ತಾಂಶ ಹಾಗೂ ಮುಂದಿನ ಆರು ತಿಂಗಳುಗಳಲ್ಲಿ ಅಂತಿಮ ದತ್ತಾಂಶ ಹೊರಬರುವ ನಿರೀಕ್ಷೆ ಇರುತ್ತದೆ. ಈ ಬಾರಿ ಇತಿಹಾಸದಲ್ಲಿ ಮೊದಲ ಬಾರಿಗೆ ಡಿಜಿಟಲ್ ಆಧಾರಿತ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ ಮೊಬೈಲ್ ಅಪ್ಲಿಕೇಶನ್, ಆನ್ಲೈನ್ ಸ್ವಯಂ ಗಣತಿ ನಡೆಸಲು ತೀರ್ಮಾನಿಸಲಾಗಿದೆ. ವೇಗದಲ್ಲಿ ಜನಗಣತಿ ನಡೆಸುವುದು ಹಾಗೂ ಡಿಜಿಟಲ್ ಮಾಹಿತಿಗಳನ್ನು ಸಂಗ್ರಹಿಸುವ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆನ್ಲೈನ್ ಪೋರ್ಟಲ್ ಮೂಲಕ ತಮ್ಮದೇ ಆದ ವಿವರಗಳನ್ನು ಭರ್ತಿ ಮಾಡಲು ಅವಕಾಶ ಇರುತ್ತದೆ.

    ಡಿಜಿಟಲ್ ಅಪ್ಲಿಕೇಶನ್‌ಗಳ ಬಳಕೆ ಹೇಗೆ?
    ಭಾರತೀಯ ರಿಜಿಸ್ಟರ್ ಜನರಲ್‌ನ ರಾಷ್ಟ್ರೀಯ ದತ್ತಾಂಶ ಕೇಂದ್ರ ಈಗಾಗಲೇ ಎರಡು ಮೊಬೈಲ್ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಎರಡು ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳಬಹುದಾಗಿದೆ. ಕಾಗದ ರೂಪದಿಂದ ಡಿಜಿಟಲ್ ಡೇಟಾವನ್ನು ಸಂಗ್ರಹಿಸುವ ಉದ್ದೇಶದೊಂದಿಗೆ ಈ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಶನ್ ಹಿಂದಿ, ಇಂಗ್ಲಿಷ್ ಸೇರಿದಂತೆ ಒಟ್ಟು 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ. ಜೊತೆಗೆ ಪೋರ್ಟಲ್‌ಗಳನ್ನು ಉಪಯೋಗಿಸಿಕೊಂಡು ತಮ್ಮ ವಿವರವನ್ನು ಭರ್ತಿ ಮಾಡಲು ಅವಕಾಶವಿರುತ್ತದೆ.

    ಅಪ್ಲಿಕೇಶನ್ ಬಳಸುವಾಗ ಸ್ವವಿವರಗಳನ್ನು ಭರ್ತಿ ಮಾಡಿದ ನಂತರ ಒಂದು ಐಡಿಯನ್ನು ಸೃಷ್ಟಿಯಾಗುತ್ತದೆ. ಬಳಿಕ ಗಣತಿದಾರರು ತಮ್ಮ ಮನೆಗೆ ಬಂದಾಗ ಈ ಐಡಿಯನ್ನು ತೋರಿಸಬೇಕಾಗುತ್ತದೆ. ಈ ಮೂಲಕ ಜನಗಣತಿಯು ನೈಜ್ಯತೆಯನ್ನು ಹೊಂದಿರುತ್ತದೆ. ಈ ಮೂಲಕ 16 ವರ್ಷಗಳ ನಂತರ ಕೇಂದ್ರ ಗ್ರಹ ಸಚಿವಾಲಯ ಜನಗಣತಿ ನಡೆಸಲು ಜೂನ್ 16ರಂದು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಭಾರತದ ಮೊದಲ ಡಿಜಿಟಲ್ ಆಧಾರಿತ ಜನಗಣತಿ ಇದಾಗಲಿದ್ದು, ಆಳವಾದ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತದೆ.

    ಈ ಡಿಜಿಟಲ್ ಆಪ್ಲಿಕೇಶನ್ಗಳು ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯಿಂದ ಕಾರ್ಯನಿರ್ವಹಿಸಲಿವೆ. ಈ ಮೂಲಕ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯಿಂದ ರಾಜ್ಯವನ್ನ ಆಯ್ಕೆ ಮಾಡಿಕೊಂಡು ಸ್ವ ವಿವರಗಳನ್ನು ಭರ್ತಿ ಮಾಡಲು ಅವಕಾಶ ನೀಡುತ್ತದೆ. ಬಳಿಕ ಹೆಸರು , ಜನ್ಮ ದಿನಾಂಕ ಹಾಗೂ ಮೊಬೈಲ್ ಸಂಖ್ಯೆ, ಸದಸ್ಯರ ಮಾಹಿತಿ, ಮನೆಯ ಮುಖ್ಯಸ್ಥ ಇನ್ನಿತರ ವಿವರಗಳನ್ನು ಭರ್ತಿ ಮಾಡುವಂತೆ ತಿಳಿಸುತ್ತದೆ.

    ಜನಗಣತಿ ವಿಧಾನ ಹೇಗಿರುತ್ತದೆ?
    ಮನೆ ಪಟ್ಟಿ ವಿಧಾನ: ಈ ಮೂಲಕ ಪ್ರತಿ ಮನೆಗೂ ಭೇಟಿ ನೀಡುವುದು, ಕಟ್ಟಡ, ಕೊಠಡಿಗಳ ಸಂಖ್ಯೆ, ನೀರು ವಿದ್ಯುತ್, ದಿನನಿತ್ಯದ ಸೌಲಭ್ಯಗಳು, ಮೊಬೈಲ್, ಇಂಟರ್ನೆಟ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ದತ್ತಾಂಶಗಳನ್ನು ಸಂಗ್ರಹಿಸುತ್ತದೆ.

    ಜನಸಂಖ್ಯೆ ಎಣಿಕೆ: ಈ ಮೂಲಕ ಹೆಸರು, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಉದ್ಯೋಗ, ಧರ್ಮ, ಜಾತಿ ಪಂಗಡ, ಅಂಗವೈಕಲ್ಯ ಸೇರಿದಂತೆ ಇನ್ನಿತರ ವ್ಯಯತಿಕ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಜನಸಂಖ್ಯೆ ಸೇರಿದಂತೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲಾಗುತ್ತದೆ.

    ಈ ಜನಗಣತಿ ಭಾರತದ ಆಡಳಿತ ಮತ್ತು ನೀತಿ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಮೂಲಕ ಭಾರತದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ತಿಳಿಸುವಲ್ಲಿ ಮುಖ್ಯವಾಗುತ್ತದೆ. ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಸಬ್ಸಿಡಿ, ಅನುದಾನ ಇನ್ನಿತರೆ ಯೋಜನೆಗಳನ್ನ ವಿತರಿಸಲು ಜನಸಂಖ್ಯೆಯ ದತ್ತಾಂಶ ನಿರ್ಣಾಯಕ ಪಾತ್ರವಹಿಸಲಿದೆ. ಜನಗಣತಿಯಿಂದ ಜನಸಂಖ್ಯೆ ಹೆಚ್ಚಳದಿಂದಾಗಿ ಅಗತ್ಯ ವಸ್ತುಗಳ ಪೂರೈಕೆಗೆ ಇದು ಸಹಾಯವಾಗುತ್ತದೆ.

  • ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

    ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

    – 1 ವರ್ಷದಿಂದ ಏನ್ ಕಡಿದು ಕಟ್ಟೆ ಹಾಕಿದ್ದೀರಾ ಅಂತ ಲೇವಡಿ

    ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹಾಗೂ ಹೆಚ್.ಡಿ ಕುಮಾರಸ್ವಾಮಿಯವರ (HD Kumarswamy) ಕೊಡುಗೆ ಏನು? ಇಬ್ಬರಿಗೂ ಆತ್ಮಸಾಕ್ಷಿಯಿದ್ದರೆ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕೇಂದ್ರ ಸಚಿವರಿಗೆ ಪಂಥಾಹ್ವಾನ ನೀಡಿದ್ದಾರೆ.

    1 ವರ್ಷದಿಂದ ಏನ್ ಕಡೆದು ಕಟ್ಟೆ ಹಾಕಿದ್ದೀರಾ?
    ವಿಧಾನಸೌಧದಲ್ಲಿ ಮಾತನಾಡಿದ ಅವರು, NDA ಎಂದರೆ ನೇಷನ್ ಡೆಸ್ಟ್ರಾಯ್ ಅಲಾಯನ್ಸ್. ಕೇಂದ್ರ ಸಚಿವ ಜೋಶಿ ಮತ್ತು ಕುಮಾರಸ್ವಾಮಿಗೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಕಳೆದ 1 ವರ್ಷದಿಂದ ನೀವು ಇಬ್ಬರು ಕೇಂದ್ರದಲ್ಲಿ ಏನ್ ಕಡಿದು ಕಟ್ಟೆ ಹಾಕಿದ್ದೀರಾ? ಉತ್ತರ ಕೊಡಿ. ಆತ್ಮಸಾಕ್ಷಿ ಇದ್ದರೆ ಬಹಿರಂಗ ಚರ್ಚೆ ಇಬ್ಬರು ಬರಲಿ ಎಂದರು.ಇದನ್ನೂ ಓದಿ: ಬೆಂಗಳೂರು | ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ ಸಾವು

    ಕೇಂದ್ರ ಸರ್ಕಾರ (Central Government) ಏನು ಮಾಡಿದೆ ಎಂದು ತಿಳಿಯುವ ಕುತೂಹಲವಿದೆ. ನಮ್ಮ ರಾಜ್ಯ ಸರ್ಕಾರ 2 ವರ್ಷ ಏನು ಮಾಡಿದೆ ಎಂದು ನಾನು ಹೇಳುತ್ತೇನೆ. ಮೊದಲು ನೀವು ರಾಜ್ಯಕ್ಕೆ ಏನು ಮಾಡಿದ್ದೀರಾ ಹೇಳಿ? ನಮ್ಮ ಸರ್ಕಾರದ ಎಲ್ಲಾ ಸಚಿವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ನಾವು ಪ್ರತಿಭಟನೆ ಮಾಡಿದ್ದೇವೆ. ಆದರೂ ಕೇಂದ್ರ ನಮಗೆ ಏನ್ ಕೊಡ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿದ್ದಾರೆ ಎಂದ ಮೇಲೆ ಅವರಿಗೆ ಜವಾಬ್ದಾರಿ ಇದೆ. ಏನಾದ್ರು ಮಾತಾಡಿದ್ರೆ ಆಪರೇಷನ್ ಸಿಂಧೂರ ಅಂತಾರೆ. ಮೋದಿ ಅಂತಾರೆ. ನಿಮ್ಮ ರಿಪೋರ್ಟ್ ಏನು? ರಾಜ್ಯಕ್ಕೆ ಕೊಡುಗೆ ಏನು? ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

    ರಾಜ್ಯದಿಂದ ಭದ್ರಾ ಮೇಲ್ಡಂಡೆ, ಕೃಷ್ಡ ಮೇಲ್ಡಂಡೆ ಮಾಡಿ, ಬೇಡಿಕೆ ಈಡೇರಿಸಿದ್ದೇವೆ. ಯಾಕೆ ಹಣ ಕೊಡಲಿಲ್ಲ? ಕೇಂದ್ರದ ಎಲ್ಲಾ ಅನುದಾನ ರಾಜ್ಯಕ್ಕೆ ಕಡಿಮೆಯಾಗಿದೆ. ತೆರಿಗೆ ಪಾಲು ಸರಿಯಾಗಿ ಕೊಡ್ತಿಲ್ಲ. ಜಾಸ್ತಿ ಪಾಲು ಕೊಡಬೇಕು. ಕುಮಾರಸ್ವಾಮಿ, ಜೋಶಿ ಚರ್ಚೆಗೆ ಬರಲಿ. ನಾನು ಚರ್ಚೆಗೆ ಸಿದ್ಧ. ಕುಮಾರಸ್ವಾಮಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ಕೊಡ್ತೀನಿ. ಒಂದು ವರ್ಷದಿಂದ ರಾಜ್ಯಕ್ಕೆ ಏನ್ ಕೊಟ್ಟಿದ್ದೀರಾ ಹೇಳಿ. ಬಹಿರಂಗ ಚರ್ಚೆಗೆ ಜೋಶಿ, ಕುಮಾರಸ್ವಾಮಿ ಬರಲಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

  • ಕಪ್ಪತಗುಡ್ಡದ 322 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ – ಕೇಂದ್ರದಿಂದ ಅಧಿಸೂಚನೆ

    ಕಪ್ಪತಗುಡ್ಡದ 322 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ – ಕೇಂದ್ರದಿಂದ ಅಧಿಸೂಚನೆ

    ನವದೆಹಲಿ/ಗದಗ: ಜಿಲ್ಲೆಯ ಕಪ್ಪತಗುಡ್ಡ (Kappatgudda) ವನ್ಯ ಜೀವಿಧಾಮದ 322 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದಾದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದೆ.

    ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಂದಾಯ ಗ್ರಾಮಗಳ 298.89 ಚದರ ಕಿ.ಮೀ. ಹಾಗೂ ಅಧಿಸೂಚಿತ ಅರಣ್ಯ ಪ್ರದೇಶಗಳ 23.80 ಕಿ.ಮೀ ಸೇರಿದೆ. ಈ ಪ್ರದೇಶದಲ್ಲಿ 62 ಗ್ರಾಮಗಳಿವೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಕನಿಷ್ಠ ಒಂದು ಕಿ.ಮೀನಿಂದ ಗರಿಷ್ಠ 4.30 ಕಿ.ಮೀವರೆಗೆ ಗುರುತಿಸಲಾಗಿದೆ.ಇದನ್ನೂ ಓದಿ: ಡ್ರೋನ್ ಕಣ್ಣಲ್ಲಿ ಸೆರೆಯಾದ ಬೈಂದೂರಿನ ಸೌಪರ್ಣಿಕಾ ನದಿ

    ಉತ್ತರ ದಿಕ್ಕಿನಲ್ಲಿ 1 ಕಿ.ಮೀನಿಂದ 3.25 ಕಿ.ಮೀವರೆಗೆ, ಪಶ್ಚಿಮ ದಿಕ್ಕಿನಲ್ಲಿ 4.30 ಕಿ.ಮೀವರೆಗೆ, ವಾಯವ್ಯ ದಿಕ್ಕಿನಲ್ಲಿ 1.96 ಕಿ.ಮೀವರೆಗೆ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಲಾಗಿದೆ. ಉಳಿದ ದಿಕ್ಕುಗಳಲ್ಲಿ 1 ಕಿ.ಮೀ ಮಾತ್ರ ಇದೆ. ವನ್ಯಜೀವಿ ಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಒಟ್ಟು 28 ಪ್ರಸ್ತಾವಗಳು ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾಗಿವೆ.

    ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದಕ್ಕೆ ನಿರ್ಬಂಧ:
    ಈಗಿರುವ ಹಾಗೂ ಹೊಸ ವಾಣಿಜ್ಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಕಲ್ಲುಪುಡಿ ಮಾಡುವ ಘಟಕಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ ಇರಲಿದೆ. ಯಾವುದೇ ಹೊಸ ಉಷ್ಣ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಯಾವುದೇ ಅಪಾಯಕಾರಿ ವಸ್ತು ಬಳಕೆ, ಉತ್ಪಾದನೆ ಅಥವಾ ಸಂಸ್ಕರಣೆಗೆ ನಿರ್ಬಂಧ ಇರಲಿದೆ.

    ನೈಸರ್ಗಿಕ ಜಲಮೂಲಗಳು ಅಥವಾ ಸಂಸ್ಕರಿಸದ ತ್ಯಾಜ್ಯಗಳ ವಿಸರ್ಜನೆ ನಿಷೇಧ, ಹೊಸದಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಜೈವಿಕ, ವೈದ್ಯಕೀಯ ತ್ಯಾಜ್ಯ ಸುಡುವ ಘಟಕಕ್ಕೆ ಅವಕಾಶ ಇರುವುದಿಲ್ಲ, ಈಗಿರುವ ಹಾಗೂ ಹೊಸದಾಗಿ ಇಟ್ಟಿಗೆ ಗೂಡುಗಳ ಘಟಕ ಸ್ಥಾಪನೆಗೆ ನಿಷೇಧ ಇರಲಿದೆ. ಮರದ ಮಿಲ್‌ಗಳಿಗೆ ನಿರ್ಬಂಧ, ದೊಡ್ಡ ಪ್ರಮಾಣದಲ್ಲಿ ಜಾನುವಾರು ಹಾಗೂ ಕೋಳಿಗಳ ಫಾರ್ಮ್ಗಳಿಗೆ ಅವಕಾಶ ಇಲ್ಲ. ಮರ ಆಧಾರಿತ ಕೈಗಾರಿಕೆಗಳನ್ನು ಆರಂಭಿಸುವಂತಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯೊಳಗೆ ಹೋಟೆಲ್‌ಗಳು ಹಾಗೂ ರೆಸಾರ್ಟ್ಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ.ಇದನ್ನೂ ಓದಿ: ವಾರದಲ್ಲಿ 2 ದಿನ ರಜೆ – ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ?

  • 16ನೇ ಜನಗಣತಿಗೆ ಅಧಿಸೂಚನೆ ಪ್ರಕಟ – 2026ರಲ್ಲಿ ಮೊದಲ, 2027ರ ಮಾರ್ಚ್‌ನಿಂದ 2ನೇ ಹಂತದ ಗಣತಿ

    16ನೇ ಜನಗಣತಿಗೆ ಅಧಿಸೂಚನೆ ಪ್ರಕಟ – 2026ರಲ್ಲಿ ಮೊದಲ, 2027ರ ಮಾರ್ಚ್‌ನಿಂದ 2ನೇ ಹಂತದ ಗಣತಿ

    -16 ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಗಣತಿ

    ನವದೆಹಲಿ: 16ನೇ ಜನಗಣತಿಗಾಗಿ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 2026ರಲ್ಲಿ ಮೊದಲ ಹಾಗೂ 2027ರಲ್ಲಿ ಎರಡನೇ ಹಂತದಲ್ಲಿ ಗಣತಿ ನಡೆಸಲಾಗುತ್ತದೆ.

    ಅಧಿಸೂಚನೆಯ ಪ್ರಕಾರ, ಜನಗಣತಿ (Census) ಹಾಗೂ ಜಾತಿಗಣತಿ (Caste Census) 2026ರ ಅ.1ರಿಂದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಿಮದಿಂದ ಆವೃತವಾದ ಪ್ರದೇಶಗಳಲ್ಲಿ ಪ್ರಾರಂಭವಾಗುತ್ತದೆ. ಉಳಿದ ಭಾಗಗಳಲ್ಲಿ ಈ ಪ್ರಕ್ರಿಯೆಯು 2027ರ ಮಾರ್ಚ್ 1ರಿಂದ ಪ್ರಾರಂಭವಾಗುತ್ತದೆ.ಇದನ್ನೂ ಓದಿ: ಪ್ರಧಾನಿ ಮೋದಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ

    ಅಧಿಸೂಚನೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, ಭಾನುವಾರ (ಜೂ.15) ಜನಗಣತಿ ನಡೆಸುವ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಪ್ರಧಾನ ಕಾರ್ಯದರ್ಶಿ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಮತ್ತು ಇತರ ಅಧಿಕಾರಿಗಳು ಭಾಗಿಯಾಗಿದ್ದರು.

    ಈ ಜನಗಣತಿ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಲಾಗುವುದು ಮತ್ತು ಜನಗಣತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಅದರಲ್ಲಿ ಸಂಗ್ರಹಿಸಲಾಗುವುದು. ಅಪ್ಲಿಕೇಶನ್‌ಗಳು 16 ಭಾಷೆಗಳಲ್ಲಿ ಲಭ್ಯವಿರುತ್ತವೆ. 16ನೇ ಜನಗಣತಿಯಲ್ಲಿ ಮೊದಲ ಬಾರಿಗೆ ಜಾತಿಗಣತಿಯನ್ನು ಸೇರಿಸಲಾಗಿದೆ. 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು, 1.3 ಲಕ್ಷ ಜನಗಣತಿ ಅಧಿಕಾರಿಗಳು ಆಧುನಿಕ ಮೊಬೈಲ್ ಮತ್ತು ಡಿಜಿಟಲ್ ಉಪಕರಣಗಳೊಂದಿಗೆ ಜನಗಣತಿ ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದ್ದು, ಸದ್ಯ ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯಾಚರಣೆ ನಡೆಯುತ್ತಿದೆ. ಈ ಮೂಲಕ ವಸತಿ ಪರಿಸ್ಥಿತಿಗಳು, ಮನೆಯ ಆಸ್ತಿಗಳು ಮತ್ತು ಸೌಕರ್ಯಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಅದಾದ ಬಳಿಕ ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ, ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಹಾಗೂ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

    ಈ ಜನಗಣತಿಯು ಭಾರತದ 16ನೇ ಜನಗಣತಿ ಮತ್ತು ಸ್ವಾತಂತ್ರ‍್ಯದ ನಂತರದ 8ನೇ ಜನಗಣತಿಯಾಗಲಿದೆ. ಈ ಬಾರಿ ಜನಗಣತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ರೂಪದಲ್ಲಿ ಮಾಡಲಾಗುವುದು. ನಾಗರಿಕರಿಗೆ ಸ್ವಯಂ-ಗಣತಿ ಸೌಲಭ್ಯವೂ ಲಭ್ಯವಿರುತ್ತದೆ. ದತ್ತಾಂಶ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಗ್ರಹಣೆ, ಪ್ರಸರಣ ಸಮಯದಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೊನೆಯ ಜನಗಣತಿಯನ್ನು 2011ರಲ್ಲಿ ನಡೆಸಲಾಗಿತ್ತು ಮತ್ತು ಈ ಜನಗಣತಿಯನ್ನು 16 ವರ್ಷಗಳ ಅಂತರದ ನಂತರ ನಡೆಸಲಾಗುತ್ತಿದೆ.ಇದನ್ನೂ ಓದಿ: ಮಹಾರಾಷ್ಟ್ರದ ಇಂದ್ರಯಾಣಿ ನದಿ ಸೇತುವೆ ಕುಸಿತ – ಕರ್ನಾಟಕದ ಟೆಕ್ಕಿ ಸಾವು

  • 16ನೇ ಜನಗಣತಿಗೆ ಇಂದು ಕೇಂದ್ರದಿಂದ ಅಧಿಕೃತ ಅಧಿಸೂಚನೆ ಸಾಧ್ಯತೆ

    16ನೇ ಜನಗಣತಿಗೆ ಇಂದು ಕೇಂದ್ರದಿಂದ ಅಧಿಕೃತ ಅಧಿಸೂಚನೆ ಸಾಧ್ಯತೆ

    ನವದೆಹಲಿ: ದೇಶದಲ್ಲಿ ಜನಗಣತಿ (Census) ನಡೆಸುವ ವಿಚಾರವಾಗಿ ಇಂದು ಕೇಂದ್ರ ಸರ್ಕಾರ (Central Government) ಅಧಿಕೃತ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಭಾನುವಾರ (ಜೂ.15) ಸಭೆ ನಡೆದಿತ್ತು. ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆ ನಡೆದ ಹಿನ್ನೆಲೆ ಇಂದು ಅಧಿಕೃತ ಅಧಿಸೂಚನೆ ಪ್ರಕಟಿಸುವ ಸಾಧ್ಯತೆಯಿದೆ.ಇದನ್ನೂ ಓದಿ: ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ಮೊದಲ ಬಾರಿಗೆ ಜನಗಣತಿಯಲ್ಲಿ ಜಾತಿಗಣತಿ (Caste Census) ಸೇರಿಸಲಾಗಿದ್ದು, ಈ ಬಾರಿ 34 ಲಕ್ಷ ಗಣತಿದಾರರು, ಮೇಲ್ವಿಚಾರಕರು ಮತ್ತು ಜನಗಣತಿ ಕಾರ್ಯಕರ್ತರು ಸೇರಿ ಸುಮಾರು 1.3 ಲಕ್ಷ ಜನರಿದ್ದಾರೆ. ಜೊತೆಗೆ ಜನಗಣತಿ ವೇಳೆ ಅತ್ಯಾಧುನಿಕ ಮೊಬೈಲ್ ಡಿಜಿಟಲ್ ಗ್ಯಾಜೆಟ್‌ಗಳನ್ನು ಬಳಸಲಿದ್ದಾರೆ.

    ಸದ್ಯ ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯಾಚರಣೆ ನಡೆಯುತ್ತಿದೆ. ಈ ಮೂಲಕ ವಸತಿ ಪರಿಸ್ಥಿತಿಗಳು, ಮನೆಯ ಆಸ್ತಿಗಳು ಮತ್ತು ಸೌಕರ್ಯಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಅದಾದ ಬಳಿಕ ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ, ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಹಾಗೂ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.ಇದನ್ನೂ ಓದಿ:ಮುಂದುವರಿದ ಮಳೆ ಆರ್ಭಟ – ಇಂದು ರಾಜ್ಯದ ಹಲವು ಜಿಲ್ಲೆಗಳಿಗೆ ಅಲರ್ಟ್

  • ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ 4% ಮೀಸಲಾತಿ ಕಡ್ಡಾಯ: ಕೇಂದ್ರ ಸರ್ಕಾರ

    ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ 4% ಮೀಸಲಾತಿ ಕಡ್ಡಾಯ: ಕೇಂದ್ರ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ (Housing Quota) ದಿವ್ಯಾಂಗರಿಗೆ 4% ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಉದ್ದೇಶಕ್ಕೆ ಪೂರಕವಾಗುವಂತೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಪ್ರವೇಶ ಭಾರತ ಅಭಿಯಾನದಡಿಯಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ

    ಇನ್ಮುಂದೆ ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ ಶೇ.4 ರಷ್ಟು ಮೀಸಲಾತಿ ನೀಡಲಾಗುವುದು, ಇದು ಸಾರ್ವಜನಿಕ ಸೇವೆಗಳಲ್ಲಿ ಸಮಾನತೆ, ಘನತೆ ಮತ್ತು ಪ್ರವೇಶದತ್ತ ಗಣನೀಯ ಹೆಜ್ಜೆಯಾಗಿದೆ ಎಂದು ಖಟ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಂಗವಿಕಲ ವ್ಯಕ್ತಿಗಳ ಹಕ್ಕುಗಳ (RPWD) ಕಾಯ್ದೆ, 2016 ರ ಅಡಿಯಲ್ಲಿ, ಎಸ್ಟೇಟ್ ನಿರ್ದೇಶನಾಲಯವು ಅಂಗವಿಕಲರಿಗೆ ಕೇಂದ್ರ ಸರ್ಕಾರಿ ನಿವಾಸಗಳಿಗೆ ಸಮಂಜಸವಾದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸಿದೆ. ಇದನ್ನೂ ಓದಿ: ಒಂದೇ ಕಾರ್ಯಕ್ರಮದಲ್ಲಿ ಕಾಣಿಸಕೊಂಡ ಮಾಜಿ ಅತ್ತೆ, ಸೊಸೆ – ಸಮಂತಾ ಮಾತಿಗೆ ಅಮಲಾ ಚಪ್ಪಾಳೆ

  • ವಕ್ಫ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಅದು ದಾನಧರ್ಮವಲ್ಲದೆ ಬೇರೇನೂ ಅಲ್ಲ – ಸುಪ್ರೀಂ ಮುಂದೆ ಕೇಂದ್ರದ ವಾದ

    ವಕ್ಫ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಅದು ದಾನಧರ್ಮವಲ್ಲದೆ ಬೇರೇನೂ ಅಲ್ಲ – ಸುಪ್ರೀಂ ಮುಂದೆ ಕೇಂದ್ರದ ವಾದ

    ನವದೆಹಲಿ: ವಕ್ಫ್ (Waqf) ಎನ್ನುವುದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಅದು ದಾನಧರ್ಮವಲ್ಲದೆ ಬೇರೇನೂ ಅಲ್ಲ ಎಂದು ಸುಪ್ರೀಂ ಕೋರ್ಟ್‌ಗೆ (Supreme Court) ಕೇಂದ್ರ ಸರ್ಕಾರ ಹೇಳಿದೆ. ವಕ್ಫ್ ಕಾಯ್ದೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

    ವಕ್ಫ್ ಒಂದು ಇಸ್ಲಾಮಿಕ್ ಪರಿಕಲ್ಪನೆ. ಆದರೆ ಅದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ವಕ್ಫ್ ಇಸ್ಲಾಂನಲ್ಲಿ ಕೇವಲ ದಾನವಾಗಿದೆ. ದಾನವು ಪ್ರತಿಯೊಂದು ಧರ್ಮದ ಭಾಗವಾಗಿದೆ ಮತ್ತು ಕ್ರಿಶ್ಚಿಯನ್ ಧರ್ಮಕ್ಕೂ ಸಹ ಇದು ಸಂಭವಿಸಬಹುದು ಎಂದು ತೀರ್ಪುಗಳು ತೋರಿಸುತ್ತವೆ. ಹಿಂದೂಗಳು ದಾನ ಮಾಡುವ ವ್ಯವಸ್ಥೆಯನ್ನು ಹೊಂದಿದ್ದಾರೆ. ಸಿಖ್‌ರು ಸಹ ಈ ಸಂಪ್ರದಾಯ ಹೊಂದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ

    ಬಳಕೆದಾರರಿಂದ ವಕ್ಫ್ ತತ್ವದ ಅಡಿಯಲ್ಲಿ ವಕ್ಫ್ ಎಂದು ಘೋಷಿಸಲಾದ ಆಸ್ತಿಗಳನ್ನು ಮರುಪಡೆಯಲು ಕೇಂದ್ರವು ಕಾನೂನುಬದ್ಧ ಅಧಿಕಾರ ಹೊಂದಿದೆ. ಸರ್ಕಾರಿ ಭೂಮಿಯ ಮೇಲೆ ಯಾರಿಗೂ ಹಕ್ಕಿಲ್ಲ. ಅದು ಸರ್ಕಾರಕ್ಕೆ ಸೇರಿದ್ದು, ಆಸ್ತಿ ವಕ್ಫ್ ಎಂದು ಘೋಷಿಸಲ್ಪಟ್ಟಿದ್ದರೆ ಸರ್ಕಾರವು ಆಸ್ತಿಯನ್ನು ಉಳಿಸಬಹುದು ಎಂದು ಮೆಹ್ತಾ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿ-ಸದ್ಯಸ ಪೀಠಕ್ಕೆ ತಿಳಿಸಿದರು.

    ಹೊಸ ಕಾನೂನಿನಲ್ಲಿ ಔಪಚಾರಿಕ ದಾಖಲೆಗಳಿಲ್ಲದಿದ್ದರೂ ಸಹ, ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೀರ್ಘಕಾಲೀನ ಬಳಕೆಯ ಆಧಾರದ ಮೇಲೆ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರಿಂದ ವಕ್ಫ್ ಮೂಲಭೂತ ಹಕ್ಕಲ್ಲ ಎಂದು ಪ್ರತಿಪಾದಿಸಿದ ಅವರು, ಬಳಕೆದಾರರಿಂದ ವಕ್ಫ್ ಅನ್ನು ಮೂರು ವಿನಾಯಿತಿಗಳೊಂದಿಗೆ ಅನುಮತಿಸಲಾಗುವುದಿಲ್ಲ, ಅದು ನೋಂದಾಯಿಸಲ್ಪಡಬೇಕು, ಖಾಸಗಿ ಆಸ್ತಿ ಮತ್ತು ಸರ್ಕಾರಿ ಆಸ್ತಿಯಾಗಿರಬೇಕು ಎಂದು ಹೇಳಿದರು.

    ಬ್ರಿಟಿಷ್ ಮತ್ತು ಭಾರತೀಯ ಸರ್ಕಾರಗಳು ಪರಿಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಇತ್ತೀಚಿನ ವಕ್ಫ್ ಕಾನೂನು ತಿದ್ದುಪಡಿಗಳು ಪರಿಹರಿಸಿವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.ಇದನ್ನೂ ಓದಿ: ‘ಆರ್ಯ 3’ ಟೈಟಲ್ ರಿಜಿಸ್ಟರ್ ಮಾಡಿಸಿದ ನಿರ್ಮಾಪಕ- ಸಾಥ್ ನೀಡ್ತಾರಾ ಅಲ್ಲು ಅರ್ಜುನ್?