Tag: Central Government

  • ಕೇಂದ್ರದಿಂದ ಇಡಿ ದುರ್ಬಳಕೆ ಆರೋಪ – ಜೂ.13ಕ್ಕೆ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

    ಕೇಂದ್ರದಿಂದ ಇಡಿ ದುರ್ಬಳಕೆ ಆರೋಪ – ಜೂ.13ಕ್ಕೆ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

    ನವದೆಹಲಿ: ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇಡಿ) ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್, ಇದೇ ಜೂನ್ 13ರಂದು ಕೇಂದ್ರದ ವಿರುದ್ಧ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ.

    ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಹಿರಿಯ ನಾಯಕರು ಹಾಗೂ ಸಂಸದರು ಅಂದು ಬೆಳಗ್ಗೆ 9ಕ್ಕೆ ಮುಖ್ಯ ಕಚೇರಿಯಲ್ಲಿ ಹಾಜರಾಗಿ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಪಕ್ಷ ಕರೆಕೊಟ್ಟಿದೆ.

    ನ್ಯಾಷನಲ್ ಹೆರಾಲ್ಡ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಮಾಡಿತ್ತು. ಈ ಹಿನ್ನೆಲೆ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಇದನ್ನೂ ಓದಿ: ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು

    ಎಐಸಿಸಿ ಕಚೇರಿಯಿಂದ ಪ್ರಾರಂಭವಾಗಿ ಇಡಿ ಕಚೇರಿವರೆಗೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರತಿಭಟನೆಯಲ್ಲಿ ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಶ್ರೀನಿವಾಸ್ ಬಿವಿ, ಡಿಕೆ ಸುರೇಶ್, ಹೆಚ್‌ಕೆ ಪಾಟೀಲ್, ದಿನೇಶ್ ಗೂಂಡೂರಾವ್ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

  • 21 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ – ಕರ್ನಾಟಕಕ್ಕೆ 8 ಸಾವಿರ ಕೋಟಿ ಬಿಡುಗಡೆ

    21 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ – ಕರ್ನಾಟಕಕ್ಕೆ 8 ಸಾವಿರ ಕೋಟಿ ಬಿಡುಗಡೆ

    ನವದೆಹಲಿ: ಕೇಂದ್ರ ಸರ್ಕಾರ 21 ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಪರಿಹಾರ ಹಣ ಬಿಡುಗಡೆ ಮಾಡಿದೆ.

    ಕರ್ನಾಟಕ ಸೇರಿದಂತೆ ಒಟ್ಟು 21 ರಾಜ್ಯಗಳಿಗೆ ಹಣಕಾಸು ಸಚಿವಾಲಯ 86,912 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೂ ಭಾರೀ ಪರಿಹಾರ ಬಿಡುಗಡೆ ಮಾಡಲಾಗಿದೆ. 86,912 ಕೋಟಿ ರೂ.ಗಳಲ್ಲಿ 8,633 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ

    ಭಾರತದ ಜಿಡಿಪಿ ದರ ಏರಿಕೆಯಾಗಿದ್ದು, 2021-22 ಆರ್ಥಿಕ ವರ್ಷದ ಜಿಡಿಪಿ ದರ ಶೇ.8.7 ರಷ್ಟಿದೆ. ಕ್ವಾರ್ಟರ್ 4ರ ಜಿಡಿಪಿ ದರ ಶೇ.4 ರಷ್ಟಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್ 

    GST
    ಸಾಂದರ್ಭಿಕ ಚಿತ್ರ

    ಮಹಾರಾಷ್ಟಕ್ಕೆ ಹೆಚ್ಚಿನ ಪರಿಹಾರ: ಒಟ್ಟಾರೆ ಜಿಎಸ್‌ಟಿ ಹಣದಲ್ಲಿ ಮಹಾರಾಷ್ಟ್ರಕ್ಕೆ 14,145 ಕೋಟಿ ರೂ. ಹೆಚ್ಚಿನ ಪರಿಹಾರ ನೀಡಲಾಗಿದೆ. ಇನ್ನುಳಿದಂತೆ ತಮಿಳುನಾಡಿಗೆ 9,602 ಕೋಟಿ, ಉತ್ತರ ಪ್ರದೇಶಕ್ಕೆ 8,874 ಕೋಟಿ ಹೊರತುಪಡಿಸಿದರೆ 3ನೇ ಸ್ಥಾನದಲ್ಲಿ ಕರ್ನಾಟಕ ಇದ್ದು 8,633 ಕೋಟಿ ರೂ. ಪರಿಹಾರ ನೀಡಲಾಗಿದೆ.

  • ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್

    ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್

    ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (PM-KISAN) ಯೋಜನೆ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 10 ಕೋಟಿ ರೈತರಿಗೆ 21 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.

    11ನೇ ಹಣಕಾಸು ಆಯೋಗದಲ್ಲಿ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿಂದು ಅನುದಾನ ಬಿಡುಗಡೆ ಮಾಡಿದ್ದಾರೆ. NDA ನೇತೃತ್ವದ BJP ಸರ್ಕಾರಕ್ಕೆ ಎಂಟು ವರ್ಷ ಪೂರ್ಣವಾಗಿರುವ ಹಿನ್ನಲೆ ಇಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಗರೀಬ್ ಕಲ್ಯಾಣ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ರೈತರು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ: ಅಮಿತ್ ಶಾ ಭರವಸೆ

    ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ 9 ಇಲಾಖೆಗಳ ಯೋಜನೆಗಳ ಬಗ್ಗೆ ವಿವಿಧ ರಾಜ್ಯದ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದರು. ಇದೇ ವೇಳೆ ದೇಶಾದ್ಯಂತ ಸಾರ್ವಜನಿಕ ಪ್ರತಿನಿಧಿಗಳಿಂದ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆ ಪಡೆದರು.

  • ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನಾರಚನೆ?

    ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನಾರಚನೆ?

    ನವದೆಹಲಿ: ಈಗಾಗಲೇ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದರಲ್ಲಿ ರಾಜ್ಯಸಭೆಯಿಂದ ಆಯ್ಕೆ ಆಗಿರುವ ಅನೇಕ ಕೇಂದ್ರ ಸಚಿವರ ಹೆಸರು ಪಟ್ಟಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸದ್ಯದಲ್ಲೇ ಸಚಿವ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ.

    ಜೂ.10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಬಿಜೆಪಿಯೂ ಘೋಷಿಸಿದೆ. ಆದರೆ ಈಗಾಗಲೇ ಅನೇಕ ರಾಜ್ಯಸಭೆಯಿಂದ ಆಯ್ಕೆ ಆಗಿರುವ ಸಚಿವರಾಗಿರುವ ಅನೇಕರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿಲ್ಲ. ಬಿಜೆಪಿಯ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.

    ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕೇಂದ್ರ ಅಲ್ಪಸಂಖ್ಯಾತರ ಸಚಿವ ಮುಖ್ತಾರ್ ಅಬ್ಬಾನಖ್ವಿ, ಪಕ್ಷದ ಹಿರಿಯ ನಾಯಕ ಒ.ಪಿ.ಮಾಥುರ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ಮ ಮತ್ತು ವಿನಯ್ ಸಹಸ್ರ ಬುದ್ಧೆ, ಮಾಜಿ ಕೇಂದ್ರ ಸಚಿವ ಶಿವ್ ಪ್ರತಾಪ್ ಶುಕ್ಲಾ ಸೇರಿದಂತೆ ಅನೇಕರು ರಾಜ್ಯಸಭೆಯಿಂದ ಆಯ್ಕೆಯಾಗಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಈ ಬಾರಿಯ ರಾಜ್ಯಸಭೆ ಚುನಾವಣೆಗೆ ಇವರ್ಯಾರಿಗೂ ಟಿಕೆಟ್ ನೀಡದೇ ಇರುವುದು ತೀವ್ರ ಕುತೂಹಲ ಮೂಡಿಸಿದ್ದು, ಸದ್ಯದಲ್ಲೇ ಕೇಂದ್ರದಲ್ಲಿ ಸಚಿವ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆಯಿದೆ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: 20 ದಿನದಲ್ಲಿ ಪೀಣ್ಯ ಫ್ಲೈಓವರ್‌ ಮೇಲೆ ಬಸ್‌, ಲಾರಿ ಓಡಾಟಕ್ಕೆ ಅವಕಾಶ?

    ಸಚಿವ ಸಂಪುಟ ಪುನಾರಾಚನೆಯಲ್ಲಿ ಬಿಜೆಪಿಯ ಸಿದ್ಧಾಂತದಂತೆ ಹೊಸ ಸಂಸದರಿಗೆ ಹೆಚ್ಚು ಮನ್ನಣೆ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಎಚ್‌ಡಿಡಿ ಮನವಿಯನ್ನು ಒಪ್ಪುತ್ತಾ ಕಾಂಗ್ರೆಸ್‌ ಹೈಕಮಾಂಡ್‌?

  • ಪಾಕಿಸ್ತಾನದಿಂದ ಬಂದ ಶೇ.87 ಮಂದಿಗೆ ಭಾರತದ ಪೌರತ್ವ

    ಪಾಕಿಸ್ತಾನದಿಂದ ಬಂದ ಶೇ.87 ಮಂದಿಗೆ ಭಾರತದ ಪೌರತ್ವ

    ನವದೆಹಲಿ: ಕಳೆದ 5 ವರ್ಷಗಳಲ್ಲಿ ಭಾರತೀಯ ಪೌರತ್ವವನ್ನು ಪಡೆದಿರುವ ಶೇ.87 ರಷ್ಟು ಅರ್ಜಿದಾರರು ಪಾಕಿಸ್ತಾನದಿಂದ ಬಂದವರು ಎಂಬ ಮಾಹಿತಿಯನ್ನು ಗೃಹ ಸಚಿವಾಲಯವು ಬಹಿರಂಗಪಡಿಸಿದೆ.

    ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿ, ಕಳೆದ 5 ವರ್ಷಗಳಲ್ಲಿ 5,220 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಅವರಲ್ಲಿ 4,552 (ಶೇ.87) ಹೊಸ ನಾಗರಿಕರು ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿತ್ತು 28 ಕೋಟಿ ಮೌಲ್ಯದ ಕೊಕೇನ್ – ಬೆಚ್ಚಿಬಿದ್ದ ಪೊಲೀಸರು

    REPORT

    ಕಳೆದ ವರ್ಷ ನವಂಬರ್‌ನಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಪ್ರಕಾರ, 5 ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದಾರೆ. 2021 ರಿಂದ 2021ರ ವರೆಗೆ 6,08,162 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಅವರು ಲೋಕಸಭೆಗೆ ತಿಳಿಸಿದ್ದರು.

    ಗೃಹ ಸಚಿವಾಲಯವು 2017 ಮತ್ತು 2022ರ ನಡುವೆ 5,220 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಪ್ರತಿವರ್ಷ ಸರಾಸರಿ 1,21,632 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದರು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬೆಂಗ್ಳೂರು ಡ್ರೋನ್ ಹಾರಿಸಿ ಉತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

    Passport

    ಕಳೆದ 5 ವರ್ಷಗಳಲ್ಲಿ ಕೇವಲ 71 ಅಮೆರಿಕನ್ನರು ಭಾರತೀಯ ಪೌರತ್ವ ಪಡೆದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಪಾಕಿಸ್ತಾನ (ಶೇ.87), ಅಫ್ಘಾನಿಸ್ತಾನ (ಶೇ.8) ಮತ್ತು ಬಾಂಗ್ಲಾದೇಶ (ಶೇ.2) ಭಾರತದ ಪೌರತ್ವ ಪಡೆದುಕೊಂಡಿವೆ.

    ಯಾವ ವರ್ಷ ಎಷ್ಟು ಮಂದಿಗೆ ಪೌರತ್ವ?

    • 2017- 1,33,049
    • 2018- 1,34,561
    • 2019- 1,44,017
    • 2020- 85,248
    • 2021- 1,11,287

  • ಬೆಂಗ್ಳೂರು ಡ್ರೋನ್  ಹಾರಿಸಿ ಉತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

    ಬೆಂಗ್ಳೂರು ಡ್ರೋನ್ ಹಾರಿಸಿ ಉತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ದೇಶದ ಅತಿದೊಡ್ಡ ಡ್ರೋನ್ ಉತ್ಸವ `ಭಾರತ್ ಡ್ರೋನ್ ಮಹೋತ್ಸವ 2022’ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

    ನಾಗರಿಕ ವಿಮಾನಯಾನ ಸಚಿವಾಲಯವು ಭಾರತೀಯ ಡ್ರೋನ್ ಫೆಡರೇಶನ್ (DFI) ಈವೆಂಟ್ ಸಹಭಾಗಿತ್ವದಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿ ಹಮ್ಮಿಕೊಂಡಿರುವ ಡ್ರೋನ್ ಉತ್ಸವದಲ್ಲಿ ಬೆಂಗಳೂರು ಡ್ರೋನ್ ಹಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳಿಂದ 8 ಸಾವಿರ ಭಾರತೀಯ ಉದ್ಯೋಗಿಗಳು ವಜಾ

    ಮೇ 27 ರಿಂದ ನಡೆಯುತ್ತಿದ್ದು, ಮೇ 28ಕ್ಕೆ ಮುಕ್ತಾಯವಾಗಲಿದೆ. ಈ ಡ್ರೋನ್ ಉತ್ಸವದಲ್ಲಿ ಬೆಂಗಳೂರು ಮೂಲದ ಫುಲ್‌ಸ್ಟಾಕ್ ಡ್ರೋನ್ ಟೆಕ್ನಾಲಜಿ ಕಂಪನಿ ಆಸ್ಟೆರಿಯಾ ಏರೋಸ್ಪೇಸ್ ಲಿಮಿಟೆಡ್ ಡ್ರೋನ್ ಭಾಗವಸಿದೆ.

    ಈ ಉತ್ಸವದಲ್ಲಿ ಮೋದಿ ಡ್ರೋನ್‌ಗಳ ಹಾರಾಟದ ಪ್ರಾತ್ಯಕ್ಷಿಕೆ ವೀಕ್ಷಣೆ ಜೊತೆಗೆ, ಕಿಸಾನ್ ಡ್ರೋನ್ ಪೈಲಟ್‌ಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದಶಕದ ಅಂತ್ಯದೊಳಗೆ ಭಾರತವನ್ನು ಜಾಗತಿಕ ಡ್ರೋನ್ ಹಬ್ ಆಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದೆ. ಭಾರತವನ್ನು ಡ್ರೋನ್ ಹಬ್ ಆಗಿ ಮಾಡಲು ಕೇಂದ್ರ ಸರ್ಕಾರ ಎಲ್ಲ ನೆರವು ನೀಡಲಿದೆ. ಡ್ರೋನ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದಿದ್ದಾರೆ.

    ದೇಶದಲ್ಲಿ ಡ್ರೋನ್ ಬಳಕೆಗೆ ಇದ್ದ ಅಡೆ ತಡೆಗಳನ್ನು ನಿವಾರಿಸಿದ್ದೇವೆ. ಇದರಿಂದ ಕೃಷಿ ಕ್ಷೇತ್ರದಲ್ಲೂ ಡ್ರೋನ್ ಬಳಕೆ ಮಾಡಲು ಸಾಧ್ಯವಾಗುತ್ತಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡರೆ ದೇಶದ ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಾಗಲಿದೆ ಎಂದು ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

    DRONE 1

    ಉತ್ಸವದಲ್ಲಿ ಆಸ್ಟೆರಿಯಾ ತನ್ನ ಗಟ್ಟಿಮುಟ್ಟಾದ, ವಿಶ್ವಾಸಾರ್ಹ ಮತ್ತು ಕಾರ್ಯಕ್ಷಮತೆ ಆಧರಿತ ಡ್ರೋನ್‌ಗಳನ್ನು ಪ್ರದರ್ಶಿಸಿದೆ. ಭದ್ರತೆ, ನಿಗಾ, ಮೇಲ್ವಿಚಾರಣೆ ಮತ್ತು ತಪಾಸಣೆಗಾಗಿ ಈ ಡ್ರೋನ್‌ಗಳನ್ನು ಬಳಸಬಹುದಾಗಿದೆ. ತನ್ನ ಕ್ಲೌಡ್ ಆಧರಿತ ಡ್ರೋನ್ ಆಪರೇಶನ್‌ಗಳ ಪ್ಲಾಟ್‌ಫಾರಂ ಸ್ಕೈಡೆಕ್ ಅನ್ನೂ ಪ್ರದರ್ಶಿಸಲಾಗಿದೆ.

  • ವಿಮಾನದಲ್ಲಿ ಗುಟ್ಕಾ ಕಲೆ – ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು

    ವಿಮಾನದಲ್ಲಿ ಗುಟ್ಕಾ ಕಲೆ – ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು

    ನವದೆಹಲಿ: ಕೇಂದ್ರ ಸರ್ಕಾರವು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತದೆ. ಆದರೆ ಈ ಮಧ್ಯೆ ಭಾರತದಲ್ಲಿ ಅನೇಕ ಮಂದಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

    ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹಲವಾರು ಪ್ರಸಿದ್ಧ ಸ್ಮಾರಕಗಳ ಸುತ್ತಮುತ್ತ ಗುಟ್ಕಾ ಮತ್ತು ವೀಳ್ಯದೆಲೆ ಕಲೆಗಳನ್ನು ನೀವು ಬಹುಶಃ ನೋಡಿರಬಹುದು. ಆದರೆ ಈಗ ವಿಮಾನದಲ್ಲಿ ಉಗುಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:  ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ

    ಛತ್ತೀಸ್‍ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು, ತಮ್ಮ ಟ್ವಿಟ್ಟರ್‌ನಲ್ಲಿ ವಿಮಾನದ ಕಿಟಕಿಯ ಕೆಳಗೆ ಗುಟ್ಕಾವನ್ನು ಉಗುಳಿರುವ ಕಲೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಯಾರೋ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ವೈರಲ್ ಆಗುತ್ತಿರುವ ಈ ಫೋಟೋ ಹಿಂದಿರುವ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ. ಈ ಪೋಸ್ಟ್‌ಗೆ 16,000 ಕ್ಕೂ ಹೆಚ್ಚು ಲೈಕ್‍ಗಳು ಬಂದಿದ್ದು, ಕೆಲವು ಟ್ವಿಟ್ಟರ್ ಬಳಕೆದಾರರು ಸೂಪರ್‌ಸ್ಟಾರ್‌ಗಳ ತಂಬಾಕು ಸೇವನೆಯ ಜಾಹೀರಾತುಗಳನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ

    ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅಧ್ಯಯನಗಳು ತಿಳಿಸಿದೆ. ಹಲವಾರು ಕಂಪನಿಗಳು ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಪ್ಯಾಕ್‌ ಮೇಲೆ ನಮೂದಿಸಿರುತ್ತದೆ. ಜೊತೆಗೆ  ಚಲನಚಿತ್ರಗಳು ಪ್ರಾರಂಭವಾಗುವ ಮುನ್ನ ಚಿತ್ರಮಂದಿರಗಳಲ್ಲಿ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು  ಪ್ರಸಾರ ಮಾಡುವ ಮೂಲಕ ಸಂದೇಶ ಸಾರಲಾಗುತ್ತದೆ.

  • ಕೇಂದ್ರದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ

    ಕೇಂದ್ರದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ

    ಮುಂಬೈ: ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ಬೆನ್ನಲ್ಲೇ, ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಭಾನುವಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್‍ನ್ನು ಕಡಿತಗೊಳಿಸಿದೆ.

    ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ 2.08 ರೂ. ಮತ್ತು ಡೀಸೆಲ್‍ಗೆ ಲೀಟರ್‌ಗೆ 1.44 ರೂ.ಗೆ ಇಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ

    ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 2,500 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಿದ ನಂತರ, ಪೆಟ್ರೋಲ್‍ನಿಂದ ತಿಂಗಳ ಆದಾಯವು 80 ಕೋಟಿ ರೂ.ಗಳಷ್ಟು ಕಡಿಮೆಯಾದರೆ, ಡೀಸೆಲ್‍ನಿಂದ 125 ಕೋಟಿ ರೂ. ಕಡಿಮೆಯಾಗಲಿದೆ ಎಂದು ರಾಜ್ಯ ಸರ್ಕಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: 12 ಜ್ಯೋತಿರ್ಲಿಂಗಗಳಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕ ಶಿವಲಿಂಗವೂ ಒಂದು: ವಿಹೆಚ್‌ಪಿ

    ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ ರೂ. 8 ಮತ್ತು 6 ರೂ. ಕಡಿತ ಮಾಡಿ ಶನಿವಾರ ಆದೇಶ ಹೊರಡಿಸಿತ್ತು.

  • ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ

    ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ

    ನವದೆಹಲಿ: ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಇಳಿಕೆಯಾಗಿದೆ.

    ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ ಎಂದು ಕೇಂದ್ರ ನೇರ ತೆರಿಗೆ ಮತ್ತು ಸುಂಕ ಮಂಡಳಿ (CBIC) ತಿಳಿಸಿದೆ. ಇದನ್ನೂ ಓದಿ: ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

    ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಕಳೆದ 8 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿರುವ ನಡುವೆ, ಗ್ರಾಹಕರಿಗೆ ಕೊಂಚ ನಿರಾಳತೆ ನೀಡಿದಂತಾಗಿದೆ. ನಿನ್ನೆ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಪ್ರತಿ ಲೀಟರ್‌ಗೆ 2.48 ರೂ. ಮತ್ತು ಡೀಸೆಲ್‌ಗೆ 1.16 ರಷ್ಟು ಕಡಿಮೆ ಮಾಡಿದೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

    ಈ ಕುರಿತು ಟ್ವೀಟ್ ಮಾಡಿರುವ ಗೆಹ್ಲೋಟ್, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿತಗೊಳಿಸಿರುವುದರಿಂದ ರಾಜ್ಯ ಸರ್ಕಾರವೂ ದರ ಇಳಿಕೆ ಮಾಡಿದೆ. ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ 10.48 ರೂ. ಮತ್ತು ಡೀಸೆಲ್ 7.16 ರೂ.ಗಳಷ್ಟು ಕಡಿತವಾಗಲಿದೆ. ಅದರಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳನ್ನು ನೋಡಬಹುದು.

    PETROL

    ಎಲ್ಲಿ – ಎಷ್ಟು ದರ?
    * ಮುಂಬೈ: ಪೆಟ್ರೋಲ್ 113.33 ರೂ., ಡೀಸೆಲ್ 97.26 ರೂ.
    * ಕೋಲ್ಕತ್ತಾ: ಪೆಟ್ರೋಲ್ 106.01 ರೂ., ಡೀಸೆಲ್ 92 ರೂ.
    * ಚೆನ್ನೈ: ಪೆಟ್ರೋಲ್ 102.62 ರೂ., ಡೀಸೆಲ್ 94.22 ರೂ.
    * ಬೆಂಗಳೂರು: ಪೆಟ್ರೋಲ್ 101.92 ರೂ., ಡೀಸೆಲ್ 87 ರೂ.
    * ಗುರುಗ್ರಾಮ್: ಪೆಟ್ರೋಲ್ 97.17 ರೂ., ಡೀಸೆಲ್ 90 ರೂ..
    * ಒಡಿಶಾ: ಪೆಟ್ರೋಲ್ 102 ರೂ., ಡೀಸೆಲ್ 94.86 ರೂ.
    * ದಕ್ಷಿಣ ಕನ್ನಡ: ಪೆಟ್ರೋಲ್ 101.13 ರೂ., ಡೀಸೆಲ್ 87.13 ರೂ.

  • ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ನವದೆಹಲಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ.

    ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ ಪೆಟ್ರೋಲ್‌ಗೆ 9.50 ರೂಪಾಯಿ ಮತ್ತು ಪ್ರತಿ ಲೀಟರ್‌ ಡೀಸೆಲ್‌ಗೆ 6 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: 12 ಜ್ಯೋತಿರ್ಲಿಂಗಗಳಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕ ಶಿವಲಿಂಗವೂ ಒಂದು: ವಿಹೆಚ್‌ಪಿ

    ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಅಲ್ಲದೇ ಅಡುಗೆ ಸಿಲಿಂಡರ್‌ ದರ 200 ರೂ. ಕಡಿತ ಮಾಡಲಾಗಿದೆ.

    ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 5 ರಂದು ಪೆಟ್ರೋಲ್ ಮೇಲೆ 5 ರೂ. ಡಿಸೇಲ್ ಮೇಲೆ 10 ರೂಪಾಯಿ ಇಳಿಕೆ ಮಾಡಿತ್ತು. ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬೆಲೆ ಇಳಿಕೆ ಮಾಡಿತ್ತು. ಈಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ಮುನ್ನ ಬೆಲೆ ಇಳಿಕೆ ಮಾಡಿದೆ. ಈ ಬಾರಿ ಎಲ್‌ಪಿಜಿಗೂ ಸಬ್ಸಿಡಿ ನೀಡಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ನಿಂತು ನಮಾಜ್- ವ್ಯಕ್ತಿಯ ಬಂಧನ

    LPG

    ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬೇಕಾಗುವ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನೂ ಇಳಿಕೆ ಮಾಡಲಾಗಿದೆ. ಉಕ್ಕಿನ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ಸುಂಕವನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ.

    ರಾಜ್ಯ ಸರ್ಕಾರ ಕೂಡ ಅಬಕಾರಿ ಸುಂಕ ಕಡಿಮೆ ಮಾಡಿದರೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಮತ್ತಷ್ಟು ಕಡಿಮೆ ಆಗುತ್ತೆ. ಆದರೆ ರಾಜ್ಯ ಸರ್ಕಾರ ಯಾವಾಗ ಕಡಿಮೆ ಮಾಡುವ ನಿರ್ಧಾರ ಮಾಡುತ್ತೋ ಕಾದು ನೋಡಬೇಕಿದೆ.

    ಇವತ್ತು ಬೆಂಗಳೂರಿನಲ್ಲಿ ಎಷ್ಟು ಲೀಟರ್ ಬೆಲೆ ಎಷ್ಟಿದೆ?: ಪೆಟ್ರೋಲ್ ಬೆಲೆ – 111.09 ಪೈಸೆ ಹಾಗೂ ಡಿಸೇಲ್ ಬೆಲೆ – 94.79 ಪೈಸೆ ಇದೆ. ಅಬಕಾರಿ ಸುಂಕ ಕಡಿಮೆ ಮಾಡಿದರೆ ಪೆಟ್ರೋಲ್ ಬೆಲೆ – 102.09 ಪೈಸೆ ಹಾಗೂ ಡಿಸೇಲ್ ಬೆಲೆ – 87.79 ಪೈಸೆ ಆಗಬಹುದು.