Tag: Central Government

  • ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ

    ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ

    ಬೆಂಗಳೂರು: ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ (SSC) 20,000 ಹುದ್ದೆ ಆಯ್ಕೆಗೆ ಹಿಂದಿ-ಇಂಗ್ಲೀಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಯಾವ ರಾಜ್ಯಕ್ಕಾದರೂ ಕಳುಹಿಸಬಹುದು. ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ. ಹಿಂದಿ ಹೇರಿಕೆ (Hindi Imposition), ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಪ್ರಶ್ನಿಸಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರಕ್ಕೆ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲೇಬೇಕು ಎನ್ನುವ ಕೆಟ್ಟ ಹಠವಿದ್ದಂತೆ ಇದೆ. ಕನ್ನಡವೂ ಸೇರಿ ದಕ್ಷಿಣದ ಪ್ರಾದೇಶಿಕ ಭಾಷೆಗಳ ಬಗ್ಗೆ ಇನ್ನಿಲ್ಲದ ಅಸಹನೆ, ದ್ವೇಷ ಮೈಗೂಡಿಸಿಕೊಂಡಿದೆ ಎನಿಸುತ್ತಿದೆ. ತ್ರಿಭಾಷಾ ಸೂತ್ರಕ್ಕೆ ಹೇಗಾದರೂ ಸಮಾಧಿ ಕಟ್ಟಲೇಬೇಕೆಂದು ಹೊರಟಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಸ್‌.ಎಂ ಕೃಷ್ಣ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನ

    ಒಕ್ಕೂಟ ತತ್ವದಲ್ಲಿ ಆಡಳಿತ ನಡೆಸುವ ಪಕ್ಷಕ್ಕೇ ಒಪ್ಪಿಗೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ. ಹಿಂದಿ ಭಾಷಿಗರನ್ನು ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ತುಂಬುವ ದುಸ್ಸಾಹಸವಷ್ಟೇ ಇದು ಎಂದು ಕಿಡಿಕಾರಿದ್ದಾರೆ.

    ಈ ವಿಷಯದಲ್ಲಿ ನಮ್ಮ 2 ಬೇಡಿಕೆಗಳಿವೆ. ಕನ್ನಡದಲ್ಲೂ ಪರೀಕ್ಷೆ ನಡೆಸಬೇಕು. ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಈ ಬದಲಾವಣೆ ನಂತರವಷ್ಟೇ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆ ನಡೆಸಬೇಕು ಎಂದು ಹೆಚ್‌ಡಿಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್-ಸಿದ್ದು ರನ್ನಿಂಗ್ ರೇಸ್

    ಕನ್ನಡದಲ್ಲೇ ಪರೀಕ್ಷೆ ನಡೆಸಿದರೆ ಕರ್ನಾಟಕದ ಅನೇಕ ಪ್ರತಿಭಾವಂತ ಯುವಜನರು ಆಯ್ಕೆ ಆಗಲು ಅನುಕೂಲವಾಗುತ್ತದೆ. ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರ ನೇಮಕವಾದರೆ, ಕರ್ನಾಟಕದ ಜನರಿಗೆ ಕನ್ನಡದಲ್ಲಿ ಸೇವೆ ದೊರೆಯುತ್ತದೆ. ತಪ್ಪಿದರೆ ಕೇಂದ್ರವು ಕನ್ನಡಿಗರ ಆಗ್ರಹಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ

    PFI Ban – ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧಿಕರಣ ರಚಿಸಿದ ಕೇಂದ್ರ

    ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಅದರ ಅಂಗಸಂಸ್ಥೆಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಪರಿಶೀಲಿಸುವ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (UAPA) ನ್ಯಾಯಮಂಡಳಿಯ ಅಧ್ಯಕ್ಷರಾಗಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

    ಈಗ PFI ತನ್ನ ವಾದವನ್ನು ನ್ಯಾಯಮಂಡಳಿಯ ಮುಂದೆ ಮಂಡಿಸಲು ಅವಕಾಶ ಹೊಂದಿರುತ್ತದೆ. ಸರ್ಕಾರದ ನಿರ್ಧಾರವನ್ನು ಇಲ್ಲಿ PFI ಪ್ರಶ್ನೆ ಮಾಡಬಹುದಾಗಿದೆ. ವಿಚಾರಣೆ ಬಳಿಕ ನ್ಯಾಯ ಮಂಡಳಿ, ಸರ್ಕಾರದ ನಿಲುವಿನ ಬಗ್ಗೆ ತನ್ನ ತೀರ್ಪು ನೀಡಲಿದೆ. ಇದನ್ನೂ ಓದಿ: 873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: NIA

    ಕೇಂದ್ರ ಸರ್ಕಾರ ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್ 3 ರ ಅಡಿಯಲ್ಲಿ ಪಿಎಫ್‌ಐ ಕಾನೂನುಬಾಹಿರ ಎಂದು ಘೋಷಿಸಿತು. ಐದು ವರ್ಷಗಳ ಕಾಲ ಅದರ ಮೇಲೆ ನಿಷೇಧ ಹೇರಿತು. ಸಂಘಟನೆಯು ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಹಾನಿಯುಂಟು ಮಾಡುವ ‘ಕಾನೂನುಬಾಹಿರ ಚಟುವಟಿಕೆʼಗಳಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

    ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ಮಾಡಿದ ಆದೇಶವನ್ನು UAPA ನ್ಯಾಯಮಂಡಳಿಯು ದೃಢೀಕರಿಸದ ಹೊರತು ಅಂತಹ ಯಾವುದೇ ನಿಷೇಧವು ಜಾರಿಗೆ ಬರುವುದಿಲ್ಲ. ಈ ಹಿನ್ನೆಲೆ ಸರ್ಕಾರ ನ್ಯಾಯಮಂಡಳಿಯನ್ನು ರಚಿಸಿದೆ. ಈ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ನಡೆಸಿ ಬಳಿಕ ಸರ್ಕಾರದ ನಿರ್ಧಾರದ ಬಗ್ಗೆ ತೀರ್ಪು ನೀಡಲಿದೆ. ಇದನ್ನೂ ಓದಿ: PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಔಷಧಿ ನಕಲಿಯೋ? ಅಸಲಿಯೋ? – ಇನ್ಮುಂದೆ ನೀವೇ ಚೆಕ್ ಮಾಡಬಹುದು

    ಔಷಧಿ ನಕಲಿಯೋ? ಅಸಲಿಯೋ? – ಇನ್ಮುಂದೆ ನೀವೇ ಚೆಕ್ ಮಾಡಬಹುದು

    ನವದೆಹಲಿ: ಇನ್ಮುಂದೆ ನೀವು ತೆಗೆದುಕೊಳ್ಳುವ ಔಷಧಿ (Medicine) ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ನಕಲಿ ಔಷಧ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central Government) ಶೀಘ್ರದಲ್ಲೇ ಟ್ರ‍್ಯಾಕ್ ಮತ್ತು ಟ್ರೇಸ್ (Track And Trace) ಜಾರಿ ಮಾಡಲು ಮುಂದಾಗಿದೆ.

    ಹೌದು. ನೀವು ತೆಗೆದುಕೊಳ್ಳುತ್ತಿರುವ ಔಷಧಿ ಸುರಕ್ಷಿತವಾಗಿದೆಯೋ ಇಲ್ಲವೋ? ಅದು ನಕಲಿಯೋ ಅಸಲಿಯೋ? ಎಂಬುದನ್ನು ತಿಳಿದುಕೊಳ್ಳುವ ಜೊತೆಗೆ ಕಳಪೆ ಹಾಗೂ ನಕಲಿ ಔಷಧ (Medicine) ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಟ್ರ‍್ಯಾಕ್ ಮತ್ತು ಟ್ರೇಸ್ ಕಾರ್ಯವಿಧಾನ ಪರಿಚಯಿಸಲಿದೆ. ಇದನ್ನೂ ಓದಿ: ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಪ್ರಾರಂಭಿಕ ಹಂತದಲ್ಲಿ 300 ಔಷಧ ತಯಾರಕರು ತಮ್ಮ ಉತ್ಪನ್ನ ಔಷಧಗಳಿಗೆ ಕ್ಯೂಆರ್‌ಕೋಡ್ ಅನ್ನು ಬಳಸಬೇಕಾಗುತ್ತದೆ. ಇದರಿಂದ ಆಂಟಿಬಯೊಟಿಕ್‌ನ ಪ್ರತಿ ಸ್ಟ್ರಿಪ್‌ 100 ರೂ.ಗಳ ಎಂಆರ್‌ಪಿ (MRP)ಗಿಂತ ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಟ್ರ‍್ಯಾಕ್ ಅಂಡ್ ಟ್ರೇಸ್ ಮಾಡೋದು ಹೇಗೆ?

    • ಮೊದಲು ಸರ್ಕಾರಿ ವೆಬ್‌ಸೈಟ್ ಮೂಲಕ ತೆರಳಿ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಬೇಕಾಗುತ್ತದೆ.
    • ಈ ಕೋಡ್ ಔಷಧದ ಬಗೆಗಿನ ಮಾಹಿತಿಯನ್ನು ದೃಢೀಕರಿಸುತ್ತದೆ. ಔಷಧದ ಸರಿಯಾದ ಹೆಸರು, ಬ್ರ‍್ಯಾಂಡ್, ತಯಾರಕರ ಹೆಸರು, ವಿಳಾಸ, ಬ್ಯಾಚ್ ಸಂಖ್ಯೆ, ಇದರೊಂದಿಗೆ ಉತ್ಪಾದನೆ ಹಾಗೂ ಮುಕ್ತಾಯಗೊಳ್ಳುವ ದಿನಾಂಕ ಹಾಗೂ ಉತ್ಪಾದನಾ ಪರವಾನಗಿ ದಿನಾಂಕವನ್ನೂ ತೋರಿಸುತ್ತದೆ.
    • ಇದು ಗ್ರಾಹಕರೇ ಸರ್ಕಾರಿ ಪೋರ್ಟಲ್‌ನಲ್ಲಿ ಯುನಿಕ್ ಐಡಿ ಸಂಖ್ಯೆಯನ್ನು ನಮೂದಿಸಲು ಹಾಗೂ ಮೊಬೈಲ್ ಮೂಲಕ ಅದನ್ನು ಟ್ರ‍್ಯಾಕ್ ಮಾಡಲು ಸಹಕಾರಿಯಾಗುತ್ತದೆ.
    • ಮೊದಲ ಹಂತದಲ್ಲಿ ಅತಿಹೆಚ್ಚು ಮಾರಾಟವಾಗುವ 300 ಔಷಧಗಳನ್ನು ಬಾರ್‌ಕೋಡ್‌ನೊಂದಿಗೆ ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ.
    • ಈ ಕ್ರಮದಿಂದಾಗಿ ಉತ್ಪಾದನಾ ವೆಚ್ಚ ಶೇ.3-4 ರಷ್ಟು ಹೆಚ್ಚಳವಾಗಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?

    ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?

    ಭೋಪಾಲ್: ನಮೀಬಿಯಾದಿಂದ (Namibia) ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್‌ಗೆ (Kuno National Park) ಬಂದಿರುವ 8 ಚೀತಾಗಳ ಪೈಕಿ `ಆಶಾ’ ಹೆಸರಿನ ಚೀತಾ (Cheetah) ಗರ್ಭಿಣಿಯಾಗಿರಬಹುದು. ಆದರೆ ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಚೀತಾ ಸಂರಕ್ಷಣಾ ನಿಧಿಯ ಡಾ.ಲಾರಿ ಮಾರ್ಕರ್ ಹೇಳಿದ್ದಾರೆ.

    ಚೀತಾದ ಚಲನವಲನಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಮೊದಲ ಬಾರಿಗೆ ಅದು ಗರ್ಭಧರಿಸಿದೆ ಎಂದು ನಂಬಿದ್ದೇವೆ. ಮುಂದೆ ಏನಾಗುತ್ತಿದೆ ಎಂದು ನೋಡಲು ನಾವೂ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಷ್ಟ್ರದ್ರೋಹಿಗಳ ವೋಟು ಬೇಡ ಎಂದು ಹೇಳಲಿ – ಈಶ್ವರಪ್ಪ

    ಸಿಸಿಎಫ್ (CCF) ಅನ್ನು ಒಳಗೊಂಡಿರುವ ಕುನೋದಲ್ಲಿ ಪ್ರಾಜೆಕ್ಟ್ ಚೀತಾ ತಂಡವು ಸಜ್ಜಾಗಿದೆ. ಒಂದು ವೇಳೆ ಚೀತಾ ಗರ್ಭ ಧರಿಸಿದ್ದರೆ, ಇದು ನಮೀಬಿಯಾದ ಮತ್ತೊಂದು ಉಡುಗೊರೆಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಚೀತಾ `ಆಶಾ’ ಗರ್ಭ ಧರಿಸಿದ್ದರೆ, ನಾವು ಆಶಾಳನ್ನು ಶಾಂತ ವಾತಾವರಣದಲ್ಲಿ ಇರಿಸಬೇಕಾಗುತ್ತದೆ. ಸುತ್ತಲೂ ನಿರ್ಜನ ವಾತಾವರಣ ಇರಬೇಕಾಗುತ್ತದೆ. ಹಾಗಾಗಿ ಪ್ರತ್ಯೇಕವಾಗಿ ಹುಲ್ಲಿನ ಗುಡಿಸಲನ್ನು ನಿರ್ಮಿಸಲಾಗಿದೆ ಎಂದು ಡಾ. ಮಾರ್ಕರ್ ಮಾಧ್ಯಮಗಳಿಗೆ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ

    ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಹೆಣ್ಣು ಚೀತಾ ಗರ್ಭಿಣಿಯಾಗಿರುವ (Pregnant) ಸುದ್ದಿ ತಪ್ಪು ದಾರಿಗೆಳೆಯುವಂತಿದೆ. ನಮೀಬಿಯಾದಿಂದ ಯಾವುದೇ ಪರೀಕ್ಷೆ ಮಾಡಿಲ್ಲ. ಗರ್ಭಧಾರಣೆಯ ವರದಿಯನ್ನು ನೀಡಿಲ್ಲ. ಈ ಸುದ್ದಿ ಹೇಗೆ ಹರಡಿದೆ ಎಂದು ನನಗೆ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಪ್ರಾಜೆಕ್ಟ್ ಚೀತಾದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ 8 ಚೀತಾಗಳನ್ನು ಬಿಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ನಾಗಾಲ್ಯಾಂಡ್‌ನ 9 ಜಿಲ್ಲೆಗಳಲ್ಲಿ AFSPA ಜಾರಿ

    ನಾಗಾಲ್ಯಾಂಡ್‌ನ 9 ಜಿಲ್ಲೆಗಳಲ್ಲಿ AFSPA ಜಾರಿ

    ನವದೆಹಲಿ: ನಾಗಾಲ್ಯಾಂಡ್‌ನ (Nagaland) 9 ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಇಂದಿನಿಂದ ಮುಂದಿನ ವರ್ಷದ ಮಾರ್ಚ್ 30ರವರೆಗೆ ವಿಸ್ತರಿಸಿದೆ ಎಂದು ಗೃಹ ಸಚಿವಾಲಯ (Central government) ಅಧಿಸೂಚನೆ ಹೊರಡಿಸಿದೆ.

    ನಾಗಾಲ್ಯಾಂಡ್‌ನ ದಿಮಾಪುರ್, ನಿಯುಲ್ಯಾಂಡ್, ಚುಮೌಕೆಡಿಮಾ, ಮೊನ್, ಕಿಫಿರೆ, ನೋಕ್ಲಾಕ್, ಫೆಕ್, ಪೆರೆನ್ ಮತ್ತು ಝುನ್ಹೆಬೊಟೊ ಜಿಲ್ಲೆಗಳು AFSPA ಕಾಯ್ದೆಯಡಿಯಲ್ಲಿ ಬರುತ್ತವೆ. ನಾಗಾಲ್ಯಾಂಡ್‌ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಶೀಲಿಸಿದ ನಂತರ ಕೇಂದ್ರವು ಈ ಕ್ರಮ ಕೈಗೊಂಡಿದೆ.

    ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯ್ದೆಯನ್ನು ಏಪ್ರಿಲ್ 1ರಿಂದ ಸೆಪ್ಟೆಂಬರ್ 30, 2022 ರವರೆಗೆ ನಾಗಾಲ್ಯಾಂಡ್‌ನ ಇತರ ನಾಲ್ಕು ಜಿಲ್ಲೆಗಳಲ್ಲಿ ಘೋಷಿಸಿತ್ತು. ಇದನ್ನೂ ಓದಿ: ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

    ಏನಿದು AFSPA ಕಾಯ್ದೆ?: ಭದ್ರತೆಗೆ ಸಮಸ್ಯೆಯಾಗುವ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ. ಇದು ಭದ್ರತಾ ಸಿಬ್ಬಂದಿಗೆ ಬಲವನ್ನು ಬಳಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಉಲ್ಲಂಘನೆಯ ಸಂದರ್ಭದಲ್ಲಿ ಸರಿಯಾದ ಎಚ್ಚರಿಕೆಯ ನಂತರ ಗುಂಡಿನ ದಾಳಿ ನಡೆಸಲು ಸಹ ಅನುಮತಿಸುತ್ತದೆ.

    ಇದರ ಅನ್ವಯ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಯಾರೊಬ್ಬರ ಮೇಲೆ ಗುಂಡು ಹಾರಿಸುವುದು, ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸುವುದು, ಯಾವುದೇ ವಾಹನ ನಿಲ್ಲಿಸುವುದು ಮತ್ತು ಹುಡುಕುವುದು ಮತ್ತು ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ನಿಷೇಧಿಸುವುದು ಸೇರಿದಂತೆ ಕೆಲವು ಅಧಿಕಾರಗಳನ್ನು ಸಶಸ್ತ್ರ ಪಡೆಗಳಿಗೆ ನೀಡಲಾಗುತ್ತದೆ. AFSPA ಅಡಿಯಲ್ಲಿ ನಾಗರಿಕರು ಬಂದೂಕುಗಳನ್ನು ಹೊಂದುವುದನ್ನು ಸಹ ನಿಷೇಧಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಐದು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ

    Live Tv
    [brid partner=56869869 player=32851 video=960834 autoplay=true]

  • 67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    ನವದೆದಲಿ: 2021ರ ಐಟಿ ನಿಯಮ (IT Rules) ಉಲ್ಲಂಘಿಸಿದ್ದಕ್ಕಾಗಿ 67 ಪೋರ್ನ್ ವೆಬ್‌ಸೈಟ್‌ಗಳನ್ನು (Pornographic Websites) ಬ್ಲಾಕ್ ಮಾಡಿವಂತೆ ಕೇಂದ್ರ ಸರ್ಕಾರ (Central Government) ಇಂರ್ಟರ್‌ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.

    ಭಾರತದಲ್ಲಿ ಅಶ್ಲೀಲ ಅಥವಾ ಪೋರ್ನ್ ವೆಬ್‌ಸೈಟ್‌ಗಳನ್ನು ಪ್ರಕಟಿಸುವುದು ಅಥವಾ ವೀಕ್ಷಿಸುವುದು ಕಾನೂನು ಬಾಹಿರ. ಆದರೂ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಪೋರ್ನ್ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಪುಣೆ ನ್ಯಾಯಾಲಯದ (Pune Court) ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳು ಹಾಗೂ ಉತ್ತರಾಖಂಡ ಹೈಕೋರ್ಟ್ (Uttarakhand High court) ಆದೇಶದ ಆಧಾರದ ಮೇಲೆ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಸಂಸ್ಥೆ (DOT) ಇಮೇಲ್ ಮೂಲಕ ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪೆನಿಗಳಿಗೆ ಸೂಚಿಸಿದೆ. ಇದನ್ನೂ ಓದಿ: ದೇಗುಲಕ್ಕೆ 8 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ – ಗೋಡೆ, ನೆಲದಲ್ಲೆಲ್ಲ ನೋಟಿನ ದರ್ಬಾರ್

    ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಮತ್ತು 2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊಸ ಐಟಿ ನಿಯಮಗಳ ಉಲ್ಲಂಘನೆಗಾಗಿ ಒಟ್ಟು 67 ಪೋರ್ನ್ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸರ್ಕಾರ ಆದೇಶಿಸಿದ್ದು, ಈ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳಿಗೆ ವೆಬ್‌ಸೈಟ್‌ಗಳ ಮಾಹಿತಿ, ಯೂಆರ್‌ಎಲ್ ನೀಡಿರುವ ಸರ್ಕಾರ, ಈ ವೆಬ್‌ಸೈಟ್‌ನಲ್ಲಿ ಮಹಿಳೆಯರ ಘನತೆಗೆ ಕಳಂಕ ತರುವ ಅಶ್ಲೀಲ ವೀಡಿಯೋಗಳು ಇವೆ. ಈ ವೀಡಿಯೋಗಳು ಮಾರ್ಫ್ ಮಾಡಲಾಗಿರುವ ವೀಡಿಯೋಗಳಾಗಿವೆ ಎಂದು ನೋಟಿಸ್‌ನಲ್ಲಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಪಿಎಫ್‌ಐ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್‌ ಓವೈಸಿ

    ಪಿಎಫ್‌ಐ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್‌ ಓವೈಸಿ

    ಹೈದರಾಬಾದ್: ಕೇಂದ್ರ ಸರ್ಕಾರವು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿರುವುದಕ್ಕೆ ಸಂಸದ ಹಾಗೂ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ (Asaduddin Owaisi) ವಿರೋಧ ವ್ಯಕ್ತಪಡಿಸಿದ್ದಾರೆ. ಸಂಘಟನೆ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಪಿಎಫ್‌ಐ ನಿಲುವಿಗೆ ನನ್ನ ವಿರೋಧವಿದೆ. ಪ್ರಜಾಪ್ರಭುತ್ವದ ವಿಧಾನವನ್ನು ನಾನು ಬೆಂಬಲಿಸುತ್ತೇನೆ. ಆದರೆ ಸಂಘಟನೆ ಮೇಲಿನ ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ ಎಂದು ಓವೈಸಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ಈ ರೀತಿಯ ಕಠೋರವಾದ ನಿಷೇಧವು ಅಪಾಯಕಾರಿ. ಏಕೆಂದರೆ ತನ್ನ ಮನಸ್ಸಿನಲ್ಲಿರುವುದನ್ನು ಹೇಳಲು ಬಯಸುವ ಯಾವುದೇ ಮುಸಲ್ಮಾನನ ಮೇಲೆ ನಿಷೇಧ ವಿಧಿಸಿದಂತಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬ ಮುಸ್ಲಿಂ ಯುವಕರನ್ನು ಯುಎಪಿಎ ಅಡಿಯಲ್ಲಿ ಪಿಎಫ್‌ಐ ಕರಪತ್ರದೊಂದಿಗೆ ಬಂಧಿಸಬಹುದು ಎಂದು ಹೇಳಿದ್ದಾರೆ.

    ಮಂಗಳವಾರ ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಅನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರವು ಇಸ್ಲಾಮಿ ಸಂಘಟನೆ ಮತ್ತು ಅದರ ಅಂಗಸಂಸ್ಥೆಗಳು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎಂದು ಅಭಿಪ್ರಾಯಪಟ್ಟಿದೆ. ಕೇಂದ್ರದ ನಿಲುವಿಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪಿಎಫ್‌ಐನಂತೆಯೇ ಆರ್‌ಎಸ್‌ಎಸ್‌ (RSS) ಅನ್ನು ಕೂಡ ಬ್ಯಾನ್‌ ಮಾಡಬೇಕು ಎಂದು ಅನೇಕ ಕಾಂಗ್ರೆಸ್‌ (Congress) ಸೇರಿದಂತೆ ವಿಪಕ್ಷಗಳು ಹಾಗೂ ಸಂಘಟನೆಗಳು ಒತ್ತಾಯಿಸಿವೆ. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    Live Tv
    [brid partner=56869869 player=32851 video=960834 autoplay=true]

  • ಸಂಪೂರ್ಣ ನಿಷೇಧವಾಗುತ್ತಾ PFI – ಕೇಂದ್ರ ಸರ್ಕಾರದ ಮುಂದಿನ ಪ್ಲ್ಯಾನ್ ಏನು?

    ಸಂಪೂರ್ಣ ನಿಷೇಧವಾಗುತ್ತಾ PFI – ಕೇಂದ್ರ ಸರ್ಕಾರದ ಮುಂದಿನ ಪ್ಲ್ಯಾನ್ ಏನು?

    ಬೆಂಗಳೂರು: ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆ ಕೇಂದ್ರ ಸರ್ಕಾರ (Central Government) ಐದು ವರ್ಷಗಳಿಗೆ ಪಿಎಫ್‍ಐ (PFI) ಸಂಘಟನೆಯನ್ನು ದೇಶಾದ್ಯಂತ ನಿಷೇಧ ಮಾಡಿದೆ. ಇದೀಗ 5 ವರ್ಷಗಳ ನಿಷೇಧದ ಬಳಿಕ ಸರ್ಕಾರ ಮುಂದೇನು ಮಾಡುತ್ತೆ ಎಂಬ ಪ್ರಶ್ನೆ ಎದ್ದಿದೆ.

    ಪಿಎಫ್‍ಐ ಸಂಘಟನೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿತ್ತು. ಜೊತೆಗೆ ಈ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಕೇಂದ್ರಕ್ಕೆ ರಾಜ್ಯ ಸರ್ಕಾರಗಳು ಮನವಿಯನ್ನು ಸಲ್ಲಿಸಿತ್ತು. ಇದೀಗ ಪಿಎಫ್‍ಐ ಸಂಘಟನೆ ಮುಂದಿನ 5 ವರ್ಷ ಬ್ಯಾನ್ ಆಗಿದೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ಮುಂದೇನು ಮಾಡುತ್ತೆ ಸರ್ಕಾರ?
    ಪಿಎಫ್‍ಐ ಮತ್ತು ಅದರ ಸಹ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಸರ್ಕಾರ ಮುಂದಾಗುತ್ತದೆ. ಎನ್‍ಐಎ (NIA) ಮತ್ತು ಇಡಿಯಿಂದ (ED) ವಿಸ್ತೃತ ತನಿಖೆ ನಡೆಯಲಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಿಎಫ್‍ಐ ಪಾತ್ರದ ಬಗ್ಗೆ ತನಿಖೆ ನಡೆಸಲಿದೆ. ಪಿಎಫ್‍ಐ ಖಾತೆಗೆ ವರ್ಗಾವಣೆಯಾಗುತ್ತಿರುವ ಅಕ್ರಮದ ಬಗ್ಗೆ ಇಡಿ ತನಿಖೆ ನಡೆಸಲಿದೆ. ಎರಡು ತನಿಖೆಗಳ ಅಂತಿಮ ವರದಿ ಬಳಿಕ ಕೇಂದ್ರ ಸರ್ಕಾರ ತನ್ನ ಮುಂದಿನ ನಿರ್ಧಾರ ಕೈಗೊಳ್ಳಬಹುದು. ಇದನ್ನೂ ಓದಿ: PFI ಬ್ಯಾನ್ – ‘ಕೈ’ ಪಾಳಯದಲ್ಲಿ ನಡುಕ, ಆಕ್ಷನ್ ಪ್ಲಾನ್‍ಗೆ ಸಿದ್ಧತೆ!

    ಪಿಎಫ್‍ಐ ಮೇಲಿನ ಈಗಿರುವ ಎಲ್ಲ ಆರೋಪಗಳು ಸಾಬೀತಾದಲ್ಲಿ ಶಾಶ್ವತ ನಿಷೇಧ ಮಾಡುವ ಬಗ್ಗೆ ಸರ್ಕಾರ ನಿರ್ಧಾರಿಸುವ ಸಾಧ್ಯತೆಯೂ ಇದೆ. ಮುಖ್ಯವಾಗಿ ರಾಜಕೀಯವಾಗಿ ಅಂಗವಾಗಿರುವ ಎಸ್‍ಡಿಪಿಐ (SDPI) ನಿಷೇಧಕ್ಕೂ ಕಾರ್ಯತಂತ್ರಗಳನ್ನು ರೂಪಿಸಬಹುದು. ನ್ಯಾಯಂಗದ ಮೂಲಕವೇ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬಹುದು. ಪಿಎಫ್‍ಐ ಮೇಲಿನ ಆರೋಪ, ಪಿಎಫ್‍ಐ, ಎಸ್‍ಡಿಪಿಐ ನಂಟು ಉಲ್ಲೇಖಿಸಿ ಮುಂಬರುವ ದಿನಗಳಲ್ಲಿ ಎಸ್‍ಡಿಪಿಐ ನಿಷೇಧಕ್ಕೂ ಪ್ರಯತ್ನ ನಡೆಯುವ ಸಾಧ್ಯತೆ ಹೆಚ್ಚಿದೆ.

    Live Tv
    [brid partner=56869869 player=32851 video=960834 autoplay=true]

  • 10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ

    10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ

    ನವದೆಹಲಿ: ಸಮುದಾಯಗಳ (Religious Communities) ನಡುವೆ ದ್ವೇಷ ಹರಡಲು ನಕಲಿ ಸುದ್ದಿ ಪ್ರಸಾರ ಮಾಡುತ್ತಿದ್ದ 10 ಚಾನಲ್‌ಗಳ (YouTube Channels) 45 ಯುಟ್ಯೂಬ್ ವೀಡಿಯೋ (YouTube Videos) ಗಳನ್ನ ಕೇಂದ್ರ ಸರ್ಕಾರ (Central Government) ನಿಷೇಧಿಸಿದೆ.

    ಉದಾಹರಣೆಗೆ ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಳ್ಳುವುದು, ಸಮುದಾಯದ ವಿರುದ್ಧ ಹಿಂಸಾತ್ಮಕ ಬೆದರಿಕೆ ಹಾಕುವುದು ಅಥವಾ ದೇಶದಲ್ಲಿ ಅಂತರ್ಯುದ್ಧ ಘೋಷಣೆಯಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ವೀಡಿಯೋಗಳನ್ನ ನಿರ್ಬಂಧಿಸುವಂತೆ ಆದೇಶಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ (Anurag Thakur) ಇಂದು ಆದೇಶಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    10 ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದ ಈ 45 ವೀಡಿಯೋಗಳು ಸಮಯದಾಯಗಳ ನಡುವೆ ದ್ವೇಷ ಹುಟ್ಟಿಸುವಂತವಾಗಿದ್ದವು, ತಪ್ಪು ಕಲ್ಪನೆಯನ್ನು ಹೊಂದಿದ್ದವು. ಒಟ್ಟಾರೆ 1.30 ಕೋಟಿಗೂ ಅಧಿಕ ಮಂದಿ ಈ ವೀಡಿಯೋಗಳನ್ನ ವೀಕ್ಷಿಸಿದ್ದರು. ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಗೌರವಿಸುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

    ಬ್ಲಾಕ್ ಮಾಡಲಾಗಿರುವ ವೀಡಿಯೋಗಳ ಪೈಕಿ ಕೆಲವು ವೀಡಿಯೋಗಳು ಅಗ್ನಿಪಥ್ ಯೋಜನೆ, ಭಾರತೀಯ ಸೇನೆ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುವಂತವಾಗಿದ್ದವು. ಜಮ್ಮು ಮತ್ತು ಕಾಶ್ಮೀರ (Jammu and Kashmir)  ಹಾಗೂ ಲಡಾಖ್ (Ladakh) ನಡುವಿನ ಗಡಿ ರೇಖೆಯನ್ನು ತಪ್ಪಾಗಿ ಬಿಂಬಿಸಿದ ರೀತಿಯಲ್ಲಿ ವೀಡಿಯೋ ಪ್ರಸಾರ ಮಾಡಲಾಗಿತ್ತು. ಈ ವಿಷಯಗಳು ಅತಿಸೂಕ್ಷ್ಮ ಹಾಗೂ ಸುಳ್ಳು ಎಂಬುದು ಗೊತ್ತಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

    ಮಾಹಿತಿ ತಂತ್ರಜ್ಞಾನ ನಿಯಮ-2021ರ ಅಡಿಯಲ್ಲಿ ಈ ವೀಡಿಯೊಗಳನ್ನು ಬ್ಲಾಕ್ ಮಾಡಲು ಸೆಪ್ಟೆಂಬರ್ 23ರಂದು ಆದೇಶ ಹೊರಡಿಸಲಾಗಿತ್ತು ಎಂದೂ ಪ್ರಕಟಣೆ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಬಲವಂತದ ಮತಾಂತರ ತಡೆಗೆ ನಿರ್ದೇಶನ ಕೋರಿ ಅರ್ಜಿ – ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಬಲವಂತದ ಮತಾಂತರ ತಡೆಗೆ ನಿರ್ದೇಶನ ಕೋರಿ ಅರ್ಜಿ – ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ಆಮಿಷವೊಡ್ಡುವುದು, ಬೆದರಿಕೆಗಳ ಮೂಲಕ ಧಾರ್ಮಿಕ ಮತಾಂತರ (Religious Conversion) ಮಾಡುವುದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ವಿಚಾರಣೆ ನಡೆಸುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ (Central Government) ಸೂಚನೆ ನೀಡಿದೆ.

    ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿರುವ ದ್ವಿಸದಸ್ಯ ಪೀಠವು ಕೇಂದ್ರ, ಗೃಹ ಸಚಿವಾಲಯ ಮತ್ತು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ನವೆಂಬರ್ 14 ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಇದನ್ನೂ ಓದಿ: ಬಿಎಸ್‍ವೈಗೆ ಸುಪ್ರೀಂಕೋರ್ಟ್‍ನಿಂದ ತಾತ್ಕಾಲಿಕ ರಿಲೀಫ್ – ವಿಜಯೇಂದ್ರಗೆ ಸಂಕಷ್ಟ

    ಬಲವಂತದ ಮತಾಂತರವನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

    ಆಮಿಷ, ಬೆದರಿಕೆ, ವಂಚನೆ ಮೂಲಕ ಮತಾಂತರ ಮಾಡುವ ಘಟನೆಗಳು ದೇಶದಾದ್ಯಂತ ಪ್ರತಿ ವಾರ ವರದಿಯಾಗುತ್ತಿವೆ. ಆದರೆ ಕೇಂದ್ರ ಮತ್ತು ರಾಜ್ಯಗಳು ಇದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಇದನ್ನು ತಕ್ಷಣವೇ ನಿಭಾಯಿಸಬೇಕಾಗಿದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಆರ್ಟಿಕಲ್ 370 ರದ್ದು, ದಸರಾ ರಜೆ ಬಳಿಕ ವಿಚಾರಣೆ – ಸಿಜೆಐ

    ಬಲವಂತದ ಮತಾಂತರವನ್ನು ನಿಯಂತ್ರಿಸಲು ವರದಿ ಮತ್ತು ಮಸೂದೆಯನ್ನು ಸಿದ್ಧಪಡಿಸಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.

    Live Tv
    [brid partner=56869869 player=32851 video=960834 autoplay=true]