Tag: Central Government

  • ನೋಟು ನಿಷೇಧವನ್ನು ಸುಪ್ರೀಂ ಎತ್ತಿ ಹಿಡಿದಿಲ್ಲ; ಇದು ಜನರ ಜೀವನೋಪಾಯವನ್ನೇ ನಾಶಪಡಿಸಿದೆ – ಕಾಂಗ್ರೆಸ್‌

    ನೋಟು ನಿಷೇಧವನ್ನು ಸುಪ್ರೀಂ ಎತ್ತಿ ಹಿಡಿದಿಲ್ಲ; ಇದು ಜನರ ಜೀವನೋಪಾಯವನ್ನೇ ನಾಶಪಡಿಸಿದೆ – ಕಾಂಗ್ರೆಸ್‌

    ನವದೆಹಲಿ: 500, 1000 ಮುಖಬೆಲೆ ನೋಟುಗಳನ್ನು 2016ರಲ್ಲಿ ಅಮಾನ್ಯೀಕರಣ (Demonitisation) ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ (Supreme Court) ಎತ್ತಿ ಹಿಡಿದಿಲ್ಲ. ನೋಟು ಅಮಾನ್ಯೀಕರಣಗೊಳಿಸಿದ್ದು ದೇಶದ ಆರ್ಥಿಕತೆಗೆ ವಿನಾಶಕಾರಿಯಾಗಿದೆ. ಅಲ್ಲದೇ ಜನರ ಜೀವನೋಪಾಯವನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್‌ (Congress) ಮತ್ತೆ ಕಿಡಿಕಾರಿದೆ.

    ನೋಟ್‌ ಬ್ಯಾನ್‌ ಮಾಡಿದ್ದ ಕೇಂದ್ರದ ನಿರ್ಧಾರ ನ್ಯಾಯ ಸಮ್ಮತವಾಗಿದೆ ಎಂದು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಇಂದು ತೀರ್ಪು ಪ್ರಕಟಿಸಿತು. ಅಲ್ಲದೇ ನೋಟು ಅಮಾನ್ಯೀಕರಣ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು. ಈ ಕುರಿತು ಕಾಂಗ್ರೆಸ್‌ ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ನೋಟು ಅಮಾನ್ಯೀಕರಣವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಹೇಳುವುದು ಸಂಪೂರ್ಣ ತಪ್ಪು. 2016ರ ನವೆಂಬರ್ 8 ರಂದು ನೋಟು ಅಮಾನ್ಯೀಕರಣವನ್ನು ಘೋಷಿಸುವ ಮೊದಲು RBI ಕಾಯಿದೆ, 1934 ರ ಸೆಕ್ಷನ್ 26(2) ಅನ್ನು ಸರಿಯಾಗಿ ಅನ್ವಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಅಷ್ಟೆ. ಜೊತೆಗೆ ಒಬ್ಬರು ನ್ಯಾಯಾಧೀಶರು ಕೇಂದ್ರದ ನಿರ್ಧಾರದ ವಿರುದ್ಧ ತೀರ್ಪನ್ನು ಪ್ರಕಟಿಸಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ.

    ನೋಟು ಅಮಾನ್ಯೀಕರಣದ ಪರಿಣಾಮದ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಇದು ಕೇಂದ್ರ ಕೈಗೊಂಡ ವಿನಾಶಕಾರಿ ನಿರ್ಧಾರವಾಗಿದೆ. ಇದು ಬೆಳವಣಿಗೆಯ ವೇಗಕ್ಕೆ ಪೆಟ್ಟು ನೀಡಿದೆ. MSMEಗಳನ್ನು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ) ದುರ್ಬಲಗೊಳಿಸಿತು. ಅನೌಪಚಾರಿಕ ವಲಯವನ್ನು ಕೊನೆಗಾಣಿಸಿತು ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದನ್ನೂ ಓದಿ: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ

    ಚಲಾವಣೆಯಲ್ಲಿರುವ ಕರೆನ್ಸಿಯನ್ನು ಕಡಿಮೆ ಮಾಡುವುದು, ನಗದು ರಹಿತ ಆರ್ಥಿಕತೆಯತ್ತ ಸಾಗುವುದು, ನಕಲಿ ಕರೆನ್ಸಿಗೆ ಕಡಿವಾಣ ಹಾಕುವುದು, ಭಯೋತ್ಪಾದನೆಯನ್ನು ಕೊನೆಗೊಳಿಸುವುದು, ಕಪ್ಪುಹಣವನ್ನು ಹೊರತೆಗೆಯಲಾಗುವುದು ಎಂದು ಕೇಂದ್ರ ಸಮರ್ಥಿಸಿಕೊಂಡಿತ್ತು. ಆದರೆ ಈ ಯಾವ ಗುರಿಗಳನ್ನೂ ಸಾಧಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂ ಕೋರ್ಟ್

    ನವದಹೆಲಿ: 500 ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ಅಮಾನ್ಯೀಕರಣ (Demonetisation) ಮಾಡಿದ್ದ ಕೇಂದ್ರ ಸರ್ಕಾರದ (Central Government) ನಿರ್ಧಾರವನ್ನು ಸುಪ್ರೀಂ ಕೋರ್ಟ್‌ (Supreme Court) ಎತ್ತಿ ಹಿಡಿದಿದೆ. ನೋಟು ಅಮಾನ್ಯೀಕರಣ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಸೋಮವಾರ ವಜಾಗೊಳಿಸಿದೆ.

    ನ್ಯಾಯಮೂರ್ತಿ ಎಸ್‌.ಎ. ನಜೀರ್‌ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿದೆ. ಕೇಂದ್ರದ ನೋಟ್‌ ಬ್ಯಾನ್‌ ನಿರ್ಧಾರಕ್ಕೆ ಪೀಠ 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ. ನೋಟು ಅಮಾನ್ಯೀಕರಣ ಮಾಡಿರುವ ಕೇಂದ್ರದ ನಿರ್ಧಾರ ಸಮ್ಮತವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದನ್ನೂ ಓದಿ: ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ನೋಟು ಬ್ಯಾನ್‌ ಮಾಡಿದ್ದು ಮಾನ್ಯವಾಗಿದೆ. ಕೇಂದ್ರವು ಅದನ್ನು ಪ್ರಾರಂಭಿಸಿದೆ ಎಂಬ ಕಾರಣಕ್ಕೆ ನಿರ್ಧಾರವನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ಆರ್‌ಬಿಐನ ಕೇಂದ್ರೀಯ ಮಂಡಳಿಯೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರವು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ಸಂಬಂಧ ಆರು ತಿಂಗಳ ಕಾಲ ಇಬ್ಬರ ನಡುವೆ ಸಮಾಲೋಚನೆ ನಡೆದಿದೆ ಎಂದು ಐವರು ಸದಸ್ಯರ ಪೀಠದಲ್ಲಿ ನಾಲ್ವರು ನ್ಯಾಯಾಧೀಶರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಕೋಪದ ಭರದಲ್ಲಿ ತನ್ನ ನವಜಾತ ಶಿಶುವನ್ನು ನೆಲಕ್ಕೆ ಎಸೆದ

    RBI

    ಆದರೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತು. ಅದು ಸರ್ಕಾರದಿಂದ ಅಲ್ಲ ಎಂದು ಕೇಂದ್ರದ ನಿರ್ಧಾರಕ್ಕೆ ಭಿನ್ನ ತೀರ್ಪು ಪ್ರಕಟಿಸಿದ್ದಾರೆ.

    ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು 2022ರ ಡಿಸೆಂಬರ್ 7ರಂದು ತೀರ್ಪನ್ನು ಕಾಯ್ದಿರಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ವೈಯಕ್ತಿಕ ಡೇಟಾ ಸಂರಕ್ಷಣೆ – ನಿಯಮ ಉಲ್ಲಂಘಿಸಿದ್ರೆ 500 ಕೋಟಿವರೆಗೂ ಬೀಳುತ್ತೆ ದಂಡ

    ವೈಯಕ್ತಿಕ ಡೇಟಾ ಸಂರಕ್ಷಣೆ – ನಿಯಮ ಉಲ್ಲಂಘಿಸಿದ್ರೆ 500 ಕೋಟಿವರೆಗೂ ಬೀಳುತ್ತೆ ದಂಡ

    ನವದೆಹಲಿ: ಭಾರತದ ಪ್ರಮುಖ ನಗರಗಳಿಗೆ 5ಜಿ (5G) ಕಾಲಿಟ್ಟಿದ್ದು, ಡಿಜಿಟಲ್ ಯುಗದಲ್ಲಿ ಹೊಸ ಕ್ರಾಂತಿ ಶುರುವಾಗಿದೆ. ಆದರೆ ತಾಂತ್ರಿಕತೆಯಲ್ಲಿ (Technology) ಬದಲಾವಣೆ ಕಂಡುಬಂದಂತೆ ಸೈಬರ್ ಅಪರಾಧಗಳು ಹಾಗೂ ದತ್ತಾಂಶ ಕಳವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದಕ್ಕಾಗಿ ಸಂರಕ್ಷಣಾ ಕ್ರಮಗಳನ್ನು ಒಳಗೊಂಡ ಹೊಸ ಕರಡನ್ನು ಬಿಡುಗಡೆ ಮಾಡಲಾಗಿದೆ.

    ಕೇಂದ್ರ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಂದು ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ -2022ರ ಕರಡನ್ನು (Digital Data Protection Bill) ಬಿಡುಗಡೆಗೊಳಿಸಿದ್ದಾರೆ. ಡಿಸೆಂಬರ್ 17ರ ವರೆಗೆ ಸಾರ್ವಜನಿಕರು ಮಸೂದೆಯ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಬಹುದಾಗಿದೆ.  ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಅಂಶಗಳೇನಿದೆ?
    ದೂರಸಂಪರ್ಕ ಮಸೂದೆ-2022 ಮತ್ತು 2000ರ ಪರಿಷ್ಕೃತ ಐಟಿ ಕಾಯ್ದೆಯು ಈ ವೈಯಕ್ತಿಕ ಡೇಟಾ ಸಂರಕ್ಷಣೆಗೆ ಕಾನೂನು ಅಡಿಪಾಯ ಹಾಕಿಕೊಡುತ್ತದೆ. ಪ್ರತಿಯೊಬ್ಬರ ವೈಯಕ್ತಿಕ ಡೇಟಾಗಳನ್ನು ಸಂರಕ್ಷಿಸಲು, ವ್ಯಕ್ತಿಯ ಹಕ್ಕು ಹಾಗೂ ಕಾನೂನು ಬದ್ಧ ಉದ್ದೇಶಗಳನ್ನು ಈಡೇರಿಸಲು ಇದು ಶಾಸನ ಬದ್ಧ ಕ್ರಮವಾಗಿದ್ದು, ಅದಕ್ಕಾಗಿ ಭಾರತೀಯ ಡೇಟಾ ಸಂರಕ್ಷಣಾ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ (Government Of India) ಅನುಮತಿ ನೀಡಲಾಗುತ್ತದೆ. ಇದನ್ನೂ ಓದಿ: 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ – BWSSB, ಬಿಬಿಎಂಪಿಗೆ ಬೆಸ್ಕಾಂ ನೋಟಿಸ್

    ಡೇಟಾಗಳಿಗೆ ಭದ್ರತಾ ಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾದ್ರೆ ಅಥವಾ ಲೋಪಗಳು ಕಂಡುಬಂದಲ್ಲಿ ಅಂತಹ ಸಂಸ್ಥೆಗಳಿಗೆ 500 ಕೋಟಿ ರೂ. ದಂಡ ವಿಧಿಸುವ ಅಂಶವನ್ನು ಸೇರಿಸಲಾಗಿದೆ.

    ಈ ಹಿಂದೆ 2018ರಲ್ಲಿ ಸಂಸತ್ತಿನಲ್ಲಿ ಡೇಟಾ ಸಂರಕ್ಷಣಾ ಮಸೂದೆ ಮಂಡನೆಯಾಗಿತ್ತು. ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು. ಇದೀಗ ಹೊಸ ಕರಡನ್ನು ಬಿಡುಗಡೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಯೋತ್ಪಾದನೆಯನ್ನು ಯಾವುದೇ ಧರ್ಮಕ್ಕೆ ಹೋಲಿಸೋದು ಬೇಡ – ಅಮಿತ್ ಶಾ

    ಭಯೋತ್ಪಾದನೆಯನ್ನು ಯಾವುದೇ ಧರ್ಮಕ್ಕೆ ಹೋಲಿಸೋದು ಬೇಡ – ಅಮಿತ್ ಶಾ

    ನವದೆಹಲಿ: ಭಯೋತ್ಪಾದನೆಯನ್ನು ಅಥವಾ ಭಯೋತ್ಪಾದನೆಯ (Terrorism) ಬೆದರಿಕೆಗಳನ್ನು ಯಾವುದೇ ಧರ್ಮ (Religion) ಅಥವಾ ಗುಂಪಿಗೆ ಹೋಲಿಕೆ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ.

    ದೆಹಲಿಯ ಗೃಹ ಸಚಿವಾಲಯ ಆಯೋಜಿಸಿದ್ದ ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹ ಕುರಿತ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಭಯೋತ್ಪಾದನೆ (Terrorism) ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತಲೂ ಅಪಾಯಕಾರಿ. ಹಾಗಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಜನಾಂಗದ ಗುಂಪಿಗೆ ಹೋಲಿಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದೋರ್‌ಗೆ ಬಂದ ತಕ್ಷಣ ರಾಹುಲ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ

    ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಹಿಂಚಾರ ನಡೆಸಲು, ಯುವಸಮೂಹವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳೋದು ಹಾಗೂ ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಭಯೋತ್ಪಾದಕರು ನಿರಂತರವಾಗಿ ಹೊಸ – ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ತಮ್ಮ ಗುರುತನ್ನು ಮರೆಮಾಚಲು ಡಾರ್ಕ್‌ನೆಟ್‌ (DrakNet) ಬಳಸುತ್ತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ

    ಭಯೋತ್ಪಾದನಾ ಬೆದರಿಕೆಗಳು ವಿಶ್ವದ ಶಾಂತಿಗೆ ಭಂಗ ತರುತ್ತವೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಚಟುವಟಿಕೆಗಳ ನಿಧಿಗೆ ಹಣಕಾಸು ಹರಿದು ಬರೋದ್ರಿಂದಲೇ ಚಟುವಟಿಕೆ ಪೋಷಣೆಯಾಗುತ್ತಿದೆ. ಈ ಬೆಳವಣಿಗೆಯು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.

    ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ಸಾಮೂಹಿಕ ಸಂಕಲ್ಪವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಕೆಲವು ದೇಶಗಳು ನಡೆಸುತ್ತಿವೆ. ಇದರ ಹೊರತಾಗಿಯೂ ಭಾರತ ಭಯೋತ್ಪಾದನೆ ನಿಗ್ರಹಿಸಲು ಆರ್ಥಿಕ ವ್ಯವಸ್ಥೆ ಹಾಗೂ ಕಾನೂನು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಶ್ಲಾಘಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಲವಂತದ ಮತಾಂತರ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು : ಸುಪ್ರೀಂ ಕೋರ್ಟ್

    ಬಲವಂತದ ಮತಾಂತರ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು : ಸುಪ್ರೀಂ ಕೋರ್ಟ್

    ನವದೆಹಲಿ: ಬಲವಂತದ ಧಾರ್ಮಿಕ ಮತಾಂತರವು (Conversion) ರಾಷ್ಟ್ರೀಯ ಸುರಕ್ಷತೆ (National Security) ಹಾಗೂ ಧರ್ಮದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಹೇಳಿದೆ.

    ನ್ಯಾಯಾಧೀಶರಾದ ಎಂ.ಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ದ್ವಿಸದಸ್ಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸಿತ್ತು. ಈ ವೇಳೆ ಬೆದರಿಕೆ ಹಾಕುವ ಮೂಲಕ ಅಥವಾ ಹಣ ಹಾಗೂ ಉಡುಗೊರೆಯ ಆಮಿಷವೊಡ್ಡಿ ಜನರನ್ನು ಮತಾಂತರಗೊಳಿಸುವುದರಿಂದ ರಾಷ್ಟ್ರದ ಭದ್ರತೆಗೆ ತೊಂದರೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಬಲವಂತದ ಮತಾಂತರಗಳನ್ನು ತಡೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ (Central Government) ತಿಳಿಸಿದೆ.

    ಬಲವಂತದ ಧಾರ್ಮಿಕ ಮತಾಂತರವು ಅತ್ಯಂತ ಗಂಭೀರ ವಿಷಯವಾಗಿದ್ದು, ಪರಿಸ್ಥಿತಿ ಕಷ್ಟಕರವಾಗುವ ಮುನ್ನವೇ ಅವುಗಳನ್ನು ತಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು. ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಲ್ಲಿಸದಿದ್ದರೆ ಅತ್ಯಂತ ಕಠಿಣ ಪರಿಸ್ಥಿತಿ ಉದ್ಭವಿಸುತ್ತದೆ. ಅಷ್ಟೇ ಅಲ್ಲದೇ ಅದು ರಾಷ್ಟ್ರದ ಭದ್ರತೆಯ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಬಲವಂತದ ಮತಾಂತರವನ್ನು ನಿಲ್ಲಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿದರೆ ಉತ್ತಮ ಎಂದು ಪೀಠವು ಅಭಿಪ್ರಾಯಪಟ್ಟಿದೆ.

    MONEY

    ಬೆದರಿಕೆ, ಉಡುಗೊರೆಗಳು ಮತ್ತು ಹಣದ ಆಮಿಷವೊಡ್ಡಿ ಮೋಸಗೊಳಿಸುವ ಮೂಲಕ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವನಿ ಕುಮಾರ್ ಉಪಾಧ್ಯಾಯ ಅವರು ಪಿಐಎಲ್ ಸಲ್ಲಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಕೋಲಾರದಲ್ಲಿ ಬಲಿ ಕೊಡೋಕೆ ಅವರ ಪಕ್ಷದವರೇ ಪ್ರಯತ್ನ ಮಾಡ್ತಿದ್ದಾರೆ: ಸಿಎಂ ಇಬ್ರಾಹಿಂ

    ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸೋಕೆ ನಮಗೆ ಬಿಜೆಪಿ ಜೊತೆ ಒಪ್ಪಂದ ಅವಶ್ಯಕತೆ ಇಲ್ಲ: ಕುಮಾರಸ್ವಾಮಿ

    Live Tv
    [brid partner=56869869 player=32851 video=960834 autoplay=true]

  • ಕೋಸ್ಟ್ ಗಾರ್ಡ್ ಭದ್ರತಾ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌ – ಮನೋಜ್ ಬಾಡ್ಕರ್

    ಕೋಸ್ಟ್ ಗಾರ್ಡ್ ಭದ್ರತಾ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌ – ಮನೋಜ್ ಬಾಡ್ಕರ್

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಈ ಹಿಂದಿನಿಂದಲೂ ಸ್ಯಾಟ್‌ಲೈಟ್ ಫೋನ್ (Satellite Phone) ಆಕ್ಟೀವ್ ಆಗಿದ್ದು ಕೇಂದ್ರದ ಗುಪ್ತದಳ, ಸ್ಥಳೀಯ ಪೊಲೀಸರಿಗೆ (Police) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ಕೋಸ್ಟ್ ಗಾರ್ಡ್‌ನ (Coast Guard) ಭದ್ರತಾ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಲು ಭಾರತ ಸರ್ಕಾರ ಯೋಜನೆ ರೂಪಿಸಿದೆ ಎಂದು ಭಾರತೀಯ ತಟರಕ್ಷಕ ಪಡೆಯ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡ್ಕರ್ ತಿಳಿಸಿದ್ದಾರೆ.

    ಕಾರವಾರದ (Karwar) ಕೋಸ್ಟ್‌ಗಾರ್ಡ್‌ ಕಚೇರಿಗೆ ಆಗಮಿಸಿದ್ದ ಮನೋಜ್ ಬಾಡ್ಕರ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಕೋಸ್ಟ್ ಗಾರ್ಡ್ನ ಭದ್ರತಾ ಶಕ್ತಿ ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ (Central Government) ಯೋಜನೆ ರೂಪಿಸಿದೆ. ಅದಕ್ಕಾಗಿ ಕೋಸ್ಟಲ್ ಸೆಕ್ಯುರಿಟಿ ಮೆಕ್ಯಾನಿಸಂ ರೂಪಿಸಲಾಗಿದೆ. ಇದರಲ್ಲಿ ಕೋಸ್ಟ್ ಚೈನ್ ಆ್ಯಪ್ ಸ್ಟಾಟಿಸ್ಟಿಕ್ಸ್ ಚೈನ್ ಸೆನ್ಸಾರ್ ಇದೆ. 30 ನಾಟಿಕಲ್ ಮೈಲ್‌ನಲ್ಲಿ ಒಂದೊಂದು ರೆಡಾರ್ ಇದೆ. ಅಲ್ಲಿ ಸಿಸಿ ಕ್ಯಾಮೆರಾ ಕೂಡ ಇರುತ್ತದೆ. ಯಾವುದೇ ಬೋಟ್‌ಗಳು ರೆಡಾರ್ ಹತ್ತಿರ ಬರುತ್ತಿದ್ದಂತೆ ಗೊತ್ತಾಗುತ್ತದೆ. ಇದು ಸಮುದ್ರದಲ್ಲಿ (Sea) ಭದ್ರತಾ ದೃಷ್ಟಿಯಿಂದ ಮತ್ತಷ್ಟು ಉಪಯೋಗವಾಗುತ್ತದೆ. 200 ನಾಟಿಕಲ್ ಮೈಲಿವರೆಗೆ ಸಮುದ್ರದಲ್ಲಿ ಪೆಟ್ರೋಲ್ ಚೈನ್ (Petrol Chain) ಸಹ ಇದೆ ಎಂದು ವಿವರಿಸಿದ್ದಾರೆ.

    5ಕ್ಕೂ ಹೆಚ್ಚು ಸ್ಯಾಟ್‌ಲೈಟ್ ಫೋನ್ ವಶ:
    ತೈಮೋರ್ ಸ್ಯಾಟ್‌ಲೈಟ್ ಫೋನ್‌ಗಳನ್ನ (Satellite Phone) ಎಲ್ಲಾ ದೇಶಗಳಲ್ಲಿ ಉಪಯೋಗಿಸಲು ಅವಕಾಶವಿದೆ. ಆದರೇ ನಮ್ಮ ದೇಶದಲ್ಲಿ ಮಾತ್ರ ನಿಷೇಧವಿದೆ. ಹೀಗಾಗಿ ವಿದೇಶದಿಂದ ಬಂದ ಹಡಗುಗಳು ಭಾರತದ ಗಡಿ ಪ್ರವೇಶಿಸಿದ ನಂತರ ಈ ಫೋನ್‌ಗಳನ್ನ ಸೀಲ್ಡ್ ಮಾಡಿ ಇಡಬೇಕು. ಕೆಲವು ಬಾರಿ ಗೊತ್ತಿಲ್ಲದೇ ಉಪಯೋಗಿಸುತ್ತಾರೆ. ಇಂತಹ 5ಕ್ಕೂ ಹೆಚ್ಚು ಸ್ಯಾಟ್‌ಲೈಟ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಕರಾವಳಿ ಪ್ರದೇಶದಲ್ಲಿ ಪ್ರತಿ 30 ಮೈಲಿಗೆ ಒಂದು ರೆಡಾರ್ ಹಾಕಲಾಗಿದೆ. ಇದರೊಂದಿಗೆ ಕ್ಯಾಮೆರಾ (Camera) ಅಳವಡಿಸಲಾಗಿದೆ. ಅಂಕೋಲ ತಾಲೂಕಿನ ಬೇಲಿಕೇರಿ ಬಂದರಿನಲ್ಲಿ ರೆಡಾರ್ (Redar) ಹಾಕುತ್ತೇವೆ. ಮೀನುಗಾರರು ಸಮುದ್ರದ ಭದ್ರತಾ ದೃಷ್ಟಿಯಿಂದ ಕಣ್ಣು, ಕಿವಿ ಇದ್ದಂತೆ. ಮೀನುಗಾರರ ರಕ್ಷಣೆಗಾಗಿ ನಾವು ಕೆಲಸ ಮಾಡುತ್ತೇವೆ. ಈ ವರ್ಷದಲ್ಲಿ ಕೋಸ್ಟ್ ಗಾರ್ಡ್ ವಲಯದಲ್ಲಿ 720 ಜನರ ಜೀವ ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕಾರವಾರದಲ್ಲಿ ಕೋಸ್ಟ್ ಗಾರ್ಡ್ಗೆ ಸಂಬಂಧಿಸಿದ ಸ್ವಂತ ಕಟ್ಟಡವಿಲ್ಲ. ಹಾಗಾಗಿ ಕಡಲ ತೀರದಲ್ಲೇ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ಮೀನುಗಾರರ ವಿರೋಧವಿದ್ದು, ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ. ಈಗಾಗಲೇ ಅಮದಳ್ಳಿಯಲ್ಲಿ 26 ಎಕರೆ ಪ್ರದೇಶ ಖರೀದಿ ಮಾಡಿದ್ದು, 2 ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    IPC, CRPC ಸುಧಾರಣೆಗೆ ಶೀಘ್ರದಲ್ಲೇ ನೂತನ ಕರಡು ಮಂಡನೆ – ಶಾ ಹೇಳಿಕೆ

    ಸೂರಜ್‌ಕುಂಡ್: ಭಾರತೀಯ ದಂಡ ಸಂಹಿತೆ (IPC) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶೀಗ್ರವೇ ಸದನದಲ್ಲಿ ಹೊಸ ಕರಡನ್ನು ಮಂಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

    ಹರಿಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ಭಾರತೀಯ ದಂಡ ಸಂಹಿತೆ (IPC) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (CRPC) ಸುಧಾರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ಸ್ವೀಕರಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಎರಡೂ ಶಾಸನಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಸದನದಲ್ಲಿ ಹೊಸದಾಗಿ ಕರಡು ಮಂಡಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರೆನ್ಸಿ ನೋಟುಗಳಲ್ಲಿರಲಿ ಗಣೇಶ, ಲಕ್ಷ್ಮೀ ಚಿತ್ರ – ಮೋದಿಗೆ ಕೇಜ್ರಿವಾಲ್ ಪತ್ರ

    ಐಪಿಸಿ, ಸಿಆರ್‌ಪಿಸಿ ಸುಧಾರಣೆಗಳಿಗಾಗಿ ಸಾಕಷ್ಟು ಸಮಯ ವಿನಿಯೋಗಿಸಿದ್ದು, ಆಳವಾಗಿ ಅಧ್ಯಯನ ಮಾಡಲಾಗುತ್ತಿದೆ. ಭಾರತದಲ್ಲಿ ಕ್ರಿಮಿನಲ್ ಕಾನೂನು (Law) ಸುಧಾರಣೆ ಶಿಫಾರಸ್ಸು ಮಾಡುವಂತೆ ಗೃಹ ಸಚಿವರು 2020ರ ಮೇನಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ದೆಹಲಿಯ ಕಾನೂನು ವಿಶ್ವವಿದ್ಯಾಲಯದ (Delhi Law University) ಕುಲಪತಿ ಪ್ರೊ. ರಣಬೀರ್ ಸಿಂಗ್ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ 52 ಅಡಿಕೆ ಗಿಡಗಳ ನಾಶ- ಜಮೀನಿನಲ್ಲಿಯೇ ಹೊರಳಾಡಿ ರೈತ ಕಣ್ಣೀರು

    ಸಮಿತಿ ರಚಿಸಿದಾಗ ವೈವಿಧ್ಯತೆ ಮತ್ತು ಪಾರದರ್ಶಕತೆ ಕೊರತೆಯ ಹಿನ್ನೆಲೆಯಲ್ಲಿ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸಮಿತಿಯು ಎಲ್ಲಾ ರೀತಿಯ ಅಭಿಪ್ರಾಯ ಮತ್ತು ಸಲಹೆಗಳನ್ನು ಗೌರವಿಸುವುದಾಗಿ ಹೇಳಿತ್ತು. ಪಾರದರ್ಶಕತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಹೇಳಿತ್ತು. ಹಾಗಾಗಿ ಸೂಕ್ತ ಸಲಹೆಗಳನ್ನು ಸ್ವೀಕರಿಸಿದ್ದು, ಶೀಘ್ರದಲ್ಲೇ ಕರಡು ಮಂಡಿಸುವುದಾಗಿ ಅವರು ಘೋಷಿಸಿದ್ದಾರೆ.

    ಪ್ರತಿ ರಾಜ್ಯದಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇಂದ್ರ ಆರಂಭಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಚಿತ್ರದುರ್ಗ: 2023ರ ರೈಲ್ವೆ ಬಜೆಟ್‌ (Budget)ನಲ್ಲಿ ಚಿತ್ರದುರ್ಗ – ಆಲಮಟ್ಟಿ ಹೊಸ ರೈಲು ಮಾರ್ಗಕ್ಕೆ (Railway Tracking) 8,431.44 ಕೋಟಿ ರೂ. ಅನುದಾನ ಕಲ್ಪಿಸುವಂತೆ ಸಂಸದ ಕರಡಿ ಸಂಗಣ್ಣ (Karadi Sanganna Amarappa) ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

    2018ರಲ್ಲಿ ಕೇಂದ್ರ ಸರ್ಕಾರದಿಂದ (Central Government) ನೂತನ ರೈಲುಮಾರ್ಗ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಸುಮಾರು 279.94 ಕಿಮೀ ಉದ್ದದ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಆದೇಶ ನೀಡಲಾಗಿತ್ತು. ಅದರಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಇಂಜಿನಿಯರ್ 8,431.44 ಕೋಟಿ ರೂ.ಗಳಿಗೆ ಅಂದಾಜು ಮೊತ್ತದ ಯೋಜನೆ ತಯಾರಿಸಿ ರೈಲ್ವೆ ಮಂಡಳಿಗೆ ಅನುಮೋದನೆಗಾಗಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ಸಾಂದರ್ಭಿಕ ಚಿತ್ರ

    ಈ ರೈಲು ಮಾರ್ಗವು ಕೂಡಲಸಂಗಮ, ಹುನಗುಂದ, ಕುಷ್ಟಗಿ, ಬೇವೂರ ಇರಕಲಗಡ, ಕೊಪ್ಪಳ, ಹಿರೇಸಿಂಧೋಗಿ, ಕಾತರಕಿ, ತಮ್ರಹಳ್ಳಿ, ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಚಿತ್ರದುರ್ಗ ಸಂಪರ್ಕಿಸಲಿದೆ. ಹಾಗಾಗಿ ಈ ಯೋಜನೆಗೆ 2023-2024ನೇ ಬಜೆಟ್‌ನಲ್ಲಿ ಅನುದಾನ ಕಲ್ಪಿಸುವಂತೆ ಕೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರಕ್ಕೆ ನಿಯೋಗ – ಆರಗ ಜ್ಞಾನೇಂದ್ರ

    ಅಡಿಕೆ ಬೆಳೆಯ ಎಲೆ ಚುಕ್ಕೆ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರಕ್ಕೆ ನಿಯೋಗ – ಆರಗ ಜ್ಞಾನೇಂದ್ರ

    ಬೆಂಗಳೂರು: ಶಿವಮೊಗ್ಗ (Shivamogga), ಚಿಕ್ಕಮಗಳೂರು (Chikkamagaluru) ಹಾಗೂ ಕರಾವಳಿ ಭಾಗದಲ್ಲಿ ರೈತ ಸಮುದಾಯದ ಜೀವನಾಡಿಯಾದ ಅಡಿಕೆ ಬೆಳೆ ಎಲೆ ಚುಕ್ಕೆ ರೋಗದಿಂದ (Areca Leaf Dot Disease) ನಲುಗಿದ್ದು, ನಿಯಂತ್ರಣ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಾಳೆ ದೆಹಲಿಗೆ (New Delhi) ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಎಲೆ ಚುಕ್ಕೆ ರೋಗವು ಇಡೀ ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು, ಅಡಿಕೆ ಬೆಳೆ ಸಂಪೂರ್ಣವಾಗಿ ನಾಶವಾಗುವ ಅಪಾಯಕ್ಕೆ ತುತ್ತಾಗಿದೆ. ಅಡಿಕೆ ಬೆಳೆಯನ್ನು ಉಳಿಸಿ, ಬೆಳೆಗಾರರ ರಕ್ಷಣೆಗೆ ಬರಬೇಕಾದ ತುರ್ತು ಅಗತ್ಯವಿದ್ದು, ತಕ್ಷಣ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಇತರರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕ ಕೊಡುಗೆ ಗುರಿ – ಮೇಲ್ವಿಚಾರಣೆಗೆ ವಿಶೇಷ ತಂಡ ರಚನೆ

    ಎಲೆ ಚುಕ್ಕೆ ರೋಗದ ನಿಯಂತ್ರಣ ಬಗ್ಗೆ ಸಂಶೋಧನೆ, ರೈತರಿಗೆ ಪರಿಹಾರ ಹಾಗೂ ಇತರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಸಂಸದ ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ ಹಾಗೂ ಇತರ ಗಣ್ಯರು ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ರೋಗಪೀಡಿತ ಅಡಿಕೆ ತೋಟಗಳಿಗೆ ಭೇಟಿ ನೀಡಿ ರೈತರು, ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಇತರರ ಜೊತೆ ಸಮಾಲೋಚನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟಿಎಸ್ ರಜತೋತ್ಸವ – ಕೇಂದ್ರ ಐಟಿ ಸಚಿವ ವೈಷ್ಣವ್‍ಗೆ ಆಹ್ವಾನ

    Live Tv
    [brid partner=56869869 player=32851 video=960834 autoplay=true]

  • 2025ರೊಳಗೆ ದೇಶದ ಎಲ್ಲ ರೈಲುಗಳಿಗೂ ಎಲೆಕ್ಟ್ರಿಕ್‌ ಇಂಜಿನ್ – ರೈಲ್ವೆ ಇಲಾಖೆ

    2025ರೊಳಗೆ ದೇಶದ ಎಲ್ಲ ರೈಲುಗಳಿಗೂ ಎಲೆಕ್ಟ್ರಿಕ್‌ ಇಂಜಿನ್ – ರೈಲ್ವೆ ಇಲಾಖೆ

    ನವದೆಹಲಿ: 2025ರ ಒಳಗೆ ಎಲ್ಲ ಡೀಸೆಲ್ ಹಾಗೂ ಬಯೋ ಇಂಧನ ರೈಲು ಇಂಜಿನ್‌ಗಳನ್ನು (Railway Engine) ಹಿಂಪಡೆದು ಸಂಪೂರ್ಣ ಎಲೆಕ್ಟ್ರಿಕ್‌ ಇಂಜಿನ್‌ಗಳನ್ನು (Electric Engine) ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

    ವಿದ್ಯುತ್ ಚಾಲಿತ ವಾಹನಗಳ (Electric Vehicles) ಮೇಲೆ ಈ ನೀತಿಯನ್ನು ಕಳೆದ ವಾರ ಜಾರಿಗೆ ತರಲಾಗಿದೆ. ಇದರೊಂದಿಗೆ ರೈಲ್ವೆಯು ಪ್ರಮುಖ ರೈಲು ನಿಲ್ದಾಣಗಳು (RailwayStations), ಕಚೇರಿ ಕಟ್ಟಡಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸುವುದಾಗಿ ಹೇಳಿದೆ. ಇದನ್ನೂ ಓದಿ: ಸಿಪಿಐ(ಎಂ) ಮುಖಂಡನ ಮನೆಯಲ್ಲಿ ಬಾಂಬ್ ಪತ್ತೆ – ತಾಜ್ ಉದ್ದೀನ್ ಮಲ್ಲಿಕ್ ಅರೆಸ್ಟ್

    ಸಾಂದರ್ಭಿಕ ಚಿತ್ರ

    2023ರೊಳಗೆ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳ (Electric Vehicles) ದೇಶವಾಗಿ ಮಾಡಬೇಕೆಂಬ ಸರ್ಕಾರದ ಗುರಿಯ ಹಿನ್ನೆಲೆಯಲ್ಲಿ ರೈಲ್ವೆಯ ಈ ನೀತಿಗೆ ಮಹತ್ವ ಬಂದಿದೆ. ಇದನ್ನೂ ಓದಿ: ರಾಯಚೂರಿಗೆ ಬರಲಿದೆ ಏಮ್ಸ್, ಮಂತ್ರಾಲಯ ಸೇತುವೆಗೆ ಬಿಎಸ್‌ವೈ ಹೆಸರು: ಸಿಎಂ ಬೊಮ್ಮಾಯಿ

    ರೈಲ್ವೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್‌ ಇಂಜಿನ್ ಅನುಷ್ಠಾನಕ್ಕೆ ಬರಲು 46 ಸಾವಿರ ಚಾರ್ಜಿಂಗ್ ಸ್ಟೇಷನ್‌ಗಳು ದೇಶಾದ್ಯಂತ ಬೇಕಾಗುತ್ತವೆ. ಸದ್ಯದ ಗುರಿ ಪ್ರಕಾರ 2023 ರೊಳಗೆ ಶೇ.20, 2024ರೊಳಗೆ ಶೇ.60 ಹಾಗೂ 2025ರ ಅಂತ್ಯದೊಳಗೆ ಶೇ.100ರಷ್ಟು ಎಲೆಕ್ಟ್ರಿಕ್‌ ಇಂಜಿನ್ ಅಳವಡಿಸುವ ಗುರಿ ಇಲಾಖೆ ಹಾಕಿಕೊಂಡಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]