Tag: central governament

  • ಮೇಕೆದಾಟು ಮುಂದಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳಿಂದ ಚುನಾವಣಾ ಆಟ: ಹೆಚ್‍ಡಿಕೆ ಕಿಡಿ

    ಮೇಕೆದಾಟು ಮುಂದಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳಿಂದ ಚುನಾವಣಾ ಆಟ: ಹೆಚ್‍ಡಿಕೆ ಕಿಡಿ

    ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ಮೇಕೆದಾಟು ವಿಷಯವನ್ನಿಟ್ಟುಕೊಂಡು ಚುನಾವಣಾ ಆಟ ಪ್ರಾರಂಭಿಸಿವೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್‍ನಲ್ಲಿ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಮೇಕೆದಾಟು ಯೋಜನೆ ವಿವಾದವನ್ನು ಕರ್ನಾಟಕ-ತಮಿಳುನಾಡು ಪರಸ್ಪರ ಚರ್ಚೆ ನಡೆಸುವ ಮೂಲಕ ಬಗೆಹರಿಸಿಕೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಅವರೇ ವಿವಾದ ಎನ್ನುವ ಮೂಲಕ ನಮ್ಮ ಜನರ ಕುಡಿಯುವ ನೀರಿನ ಯೋಜನೆಗೆ ಬಿಕ್ಕಟ್ಟಿನ ಲೇಪನ ಹಚ್ಚಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಎರಡೂ ರಾಜ್ಯಗಳು ಕುಳಿತು ಚರ್ಚೆ ಮಾಡಿಕೊಂಡು ಒಮ್ಮತಕ್ಕೆ ಬರಬೇಕು ಎಂದು ಕೇಂದ್ರ ಸಚಿವರೇ ಹೇಳುವ ಮೂಲಕ, ಮೇಕೆದಾಟು ಯೋಜನೆಗೆ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅನುಮತಿ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಗುಡುಗಿದ್ದಾರೆ.

    ಮುಂಗಡ ಪತ್ರದಲ್ಲಿ ಯೋಜನೆಗೆ 1,000 ಕೋಟಿ ರೂ. ಕೊಟ್ಟೆವು ಎಂದು ಬಿಜೆಪಿ ಹಾಗೂ ನಮ್ಮ ಪಾದಯಾತ್ರೆಯಿಂದಲೇ ಹಣ ಘೋಷಿಸಲಾಯಿತು ಎಂದು ಕಾಂಗ್ರೆಸ್ ಕುಣಿಯುತ್ತಿವೆ. ಒಂದೇ ನಾಣ್ಯದ ಎರಡು ಮುಖಗಳಾದ ಎರಡೂ ರಾಷ್ಟ್ರೀಯ ಪಕ್ಷಗಳು, ಈಗ ಮೇಕೆದಾಟು ಮುಂದಿಟ್ಟುಕೊಂಡು ಚುನಾವಣಾ ಆಟ ಶುರು ಮಾಡಿವೆ ಎಂದು ಟೀಕಿಸಿದ್ದಾರೆ.

    ವಾಸ್ತವ ಏನು ಎಂಬುದನ್ನು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೇಂದ್ರದ ಕಾನೂನು ಸುಳಿಯಲ್ಲಿ ಸಿಕ್ಕಿರುವ ಹಾಗೂ ಕೇಂದ್ರದ ಜಲ ಆಯೋಗದಲ್ಲಿ ಕೊಳೆಯುತ್ತಿರುವ ಮೇಕೆದಾಟು ಯೋಜನೆಯು ಪಾದಯಾತ್ರೆಯಿಂದ ಬರುವುದಿಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಯೇ ತಂದುಕೊಳ್ಳಬೇಕು ಎಂದಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದ ಆಫರ್ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ: ರಾಹುಲ್ ಗಾಂಧಿ

    ಈಗ ಕೇಂದ್ರ ಸಚಿವರಾದ ಶೇಖಾವತ್ ಅವರು ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಕರ್ನಾಟಕ ಉಂಟು, ತಮಿಳುನಾಡು ಉಂಟು. ನೀವು ನೀವೇ ಮಾತನಾಡಿಕೊಳ್ಳಿ ಎಂದು ಕೈ ಎತ್ತಿಬಿಟ್ಟಿದ್ದಾರೆ. ಹಾಗಾದರೆ ಯೋಜನೆಗೆ ಒಪ್ಪಿಗೆ ನೀಡುವಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪೌರತ್ವ ಸಾಬೀತುಪಡಿಸಿ ಎಂದಿದ್ದಕ್ಕೆ ಮಗ ಆತ್ಮಹತ್ಯೆ- 10 ವರ್ಷದ ಬಳಿಕ ವೃದ್ಧೆಗೆ ಮತ್ತೆ ನೋಟಿಸ್‌

    ನಮ್ಮ ಪಾಲಿನ ನೀರನ್ನು ದಕ್ಕಿಸಿಕೊಳ್ಳುವುದು ಮತ್ತು ನಮ್ಮ ಜನರಿಗೆ ಕುಡಿಯುವ ನೀರು ಕೊಡುವ ಮೇಕೆದಾಟು ಯೋಜನೆ ಅನುಷ್ಠಾನ ಮಾಡುವುದು ಕರ್ನಾಟಕದ ಹಕ್ಕು. ಆದರೆ, ಕೇಂದ್ರ ಸಚಿವರು ನೀವೇ ಬಗೆಹರಿಸಿಕೊಳ್ಳಿ ಎಂದು ಹೇಳಿದ ಒಳಮರ್ಮವೇನು? ಕಾವೇರಿ ಬಗ್ಗೆ ಬಿಜೆಪಿ ಹೊಸ ವರಸೆ ಶುರು ಮಾಡಿತೇ ಎನ್ನುವ ಸಂಶಯ ನನ್ನದು ಎಂದಿದ್ದಾರೆ.

    ಈ ಬಗ್ಗೆ 1,000 ಕೋಟಿ ಹಣ ಘೋಷಣೆ ಮಾಡಿದೊಡನೆ ಪಾದಯಾತ್ರೆಯಿಂದಲೇ ಆಯಿತು ಎಂದು ಹಿಗ್ಗಿ ಹೀರೆಕಾಯಿ ಆಗಿದ್ದ ಕಾಂಗ್ರೆಸ್ ನಿಲುವೇನು? ಅವರೀಗ ತಮ್ಮ ಮಿತ್ರಪಕ್ಷ ಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡು ಸರ್ಕಾರದ ಜೊತೆ ಮಾತುಕತೆ ನಡೆಸಿ ಎಂದು ಕೇಂದ್ರ ಸಕಾರದ ಮೇಲೆ ಒತ್ತಡ ಹಾಕುತ್ತಾರಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.

  • ಏರ್ ಇಂಡಿಯಾ ಸಾಲವನ್ನು ತೀರಿಸಿ ಟಾಟಾಗೆ ಮಾರಿದ್ದು ಆತ್ಮನಿರ್ಭರ ಭಾರತ ಹೇಗಾಗುತ್ತದೆ: ಸಿದ್ದರಾಮಯ್ಯ ಕಿಡಿ

    ಏರ್ ಇಂಡಿಯಾ ಸಾಲವನ್ನು ತೀರಿಸಿ ಟಾಟಾಗೆ ಮಾರಿದ್ದು ಆತ್ಮನಿರ್ಭರ ಭಾರತ ಹೇಗಾಗುತ್ತದೆ: ಸಿದ್ದರಾಮಯ್ಯ ಕಿಡಿ

    ಬೆಂಗಳೂರು: ಶ್ರೀಮಂತರ ಆದಾಯ ಏರಿಕೆ ಆಗುತ್ತಿದೆ. ಬಂಡವಾಳಿಗರಿಗೆ ಕಡಿಮೆ ತೆರಿಗೆ ವಿಧಿಸಿದ್ದರಿಂದ ಭಾರತದಲ್ಲಿ ಬಡವರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಮಾಡಿದ ಸಿದ್ದರಾಮಯ್ಯ ಬೊಮ್ಮಾಯಿ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಪೋಸ್ಟ್‍ನಲ್ಲಿ ಏನಿದೆ?
    ರಾಜ್ಯಪಾಲರು ಈ ಬಾರಿ ಸರ್ಕಾರದ ಒಂದು ವರ್ಷದ ಸಾಧನೆಯ ವರದಿಯನ್ನು ಸದನದಲ್ಲಿ ಓದಿದರು. ಸರ್ಕಾರವು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ ಮಾತುಗಳಲ್ಲಿ ಬಹುಪಾಲು ಜೊಳ್ಳು ಹಾಗೂ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳು ಇಲ್ಲ ಎಂಬುದರ ಸೂಚಕವಾಗಿವೆ. ಅನೇಕ ಕಡೆ ಕೇಂದ್ರದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಸೂಚನೆಗಳನ್ನು ಮಂಡಿಸಿದ ಬಿಜೆಪಿಯ ಶಾಸಕರು ಮೋದಿಯವರನ್ನು ಮತ್ತು ಕೇಂದ್ರದ ಯೋಜನೆಗಳನ್ನು ಶ್ಲಾಘಿಸುವುದಕ್ಕಷ್ಟೆ ಸೀಮಿತಗೊಂಡರು. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕಳಪೆ ಭಾಷಣವನ್ನು ಹಿಂದೆಂದೂ ಕೇಳಿರಲಿಲ್ಲ.

    ಬಂಡವಾಳಿಗರ ಮತ್ತು ಕಾಪೆರ್Çೀರೇಟ್ ಕುಳಗಳ ಮೂಗಿನ ನೇರಕ್ಕೆ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರೆ, ಭಾರತದ ಅತಿ ಶ್ರೀಮಂತರಾದ ಅದಾನಿ ಅಂಬಾನಿ ಮುಂತಾದ 142 ಜನರ ಸಂಪತ್ತು 23 ಲಕ್ಷ ಕೋಟಿಗಳಿದ್ದದ್ದು ಈಗ ಅದು 53 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಆದರೆ ಜನರ ಮೇಲಿನ ತೆರಿಗೆ ಹೊರೆ, ಬೆಲೆ ಏರಿಕೆ ಎರಡೂ ದುಪ್ಪಟ್ಟಾಗಿವೆ.

    ಮನಮೋಹನಸಿಂಗರ ಕಾಲದಲ್ಲಿ ದೇಶ ಸಂಗ್ರಹಿಸುವ 100 ರೂ ತೆರಿಗೆಯಲ್ಲಿ ಜನರ ತೆರಿಗೆಯ ಪಾಲು 58 ರಷ್ಟಿತ್ತು. ಬಂಡವಾಳಿಗರ ತೆರಿಗೆ ಪಾಲು ಶೇ. 42 ರಷ್ಟಿತ್ತು. ಈಗ ಜನರ ಪಾಲು 75 ಕ್ಕೆ ಏರಿಕೆಯಾಗಿದೆ. ಬಂಡವಾಳಿಗರಿಂದ 25 ರೂಪಾಯಿ ಸಂಗ್ರಹಿಸುತ್ತಿದ್ದಾರೆ. ಇದರ ಫಲವಾಗಿ ದೇಶದ ಬಡವರ ಸಂಖ್ಯೆ ಹೆಚ್ಚುತ್ತಿದೆ. ದೇಶ ದೊಡ್ಡ ಸಾಲಗಾರನಾಗುತ್ತಿದೆ.

    2014 ರಲ್ಲಿ 53 ಲಕ್ಷ ಕೋಟಿಗಳಿದ್ದ ದೇಶದ ಸಾಲ 2022 ರ ಕೊನೆಗೆ 152 ಲಕ್ಷ ಕೋಟಿಗಳಷ್ಟಾಗುತ್ತಿದೆ. ದೇಶವು ಸಂಗ್ರಹಿಸುವ 22 ಲಕ್ಷ ಕೋಟಿ ತೆರಿಗೆಯಲ್ಲಿ 9.40 ಲಕ್ಷ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ. ಅಂದರೆ ದುಡಿದ 100 ರೂಪಾಯಿನಲ್ಲಿ 43 ರೂಪಾಯಿ ಬಡ್ಡಿ ಕಟ್ಟುವುದಕ್ಕೆ ಖರ್ಚು ಮಾಡಲಾಗುತ್ತಿದೆ. ಹಾಗಾಗಿ ಮೋದಿ ಸರ್ಕಾರ ದೇಶದ ಆಸ್ತಿಗಳನ್ನೆಲ್ಲ ಮಾರಾಟಕ್ಕಿಟ್ಟಿದ್ದು, ಏರ್ ಇಂಡಿಯಾ ಸಾಲವನ್ನು ಮೋದಿ ಸರ್ಕಾರವೇ ತೀರಿಸಿ ಕೇವಲ 2700 ಕೋಟಿಗಳನ್ನು ನಗದು ರೂಪದಲ್ಲಿ ಪಡೆದುಕೊಂಡು ಟಾಟಾಗಳಿಗೆ ಬಿಟ್ಟುಕೊಟ್ಟಿದೆ. ಇದನ್ನೇ ಆತ್ಮ ನಿರ್ಭರ ಭಾರತ ಎಂದು ದಾರಿ ತಪ್ಪಿಸಲಾಗುತ್ತಿದೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..

    ರಾಜ್ಯದಿಂದ ಮೋದಿ ಸರ್ಕಾರವು 3 ಲಕ್ಷ ಕೋಟಿ ರೂಗಳಷ್ಟು ವಿವಿಧ ರೂಪದ ತೆರಿಗೆಗಳನ್ನು ಸಂಗ್ರಹಿಸುವ ಕೇಂದ್ರವು ವಾಪಸ್ಸು ನೀಡುತ್ತಿರುವುದು ಕೇವಲ 43 ಸಾವಿರ ಕೋಟಿ. ಇದರಿಂದ ರಾಜ್ಯದ ಆರ್ಥಿಕತೆಯೂ ದಿಕ್ಕುತಪ್ಪಿದೆ. 2018 ರ ವರೆಗೆ 2.42 ಲಕ್ಷ ಕೋಟಿಗಳಷ್ಟಿದ್ದ ರಾಜ್ಯದ ಸಾಲ ಈಗ 4.57 ಲಕ್ಷ ಕೋಟಿಗಳಷ್ಟಾಗಿದೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ, ಯುವಜನರ ಕಲ್ಯಾಣ ಮತ್ತು ನೇಕಾರರು ಮೀನುಗಾರರು ಕುಂಬಾರರು ಅಕ್ಕಸಾಲಿಗರು, ಮೇದಾರÀರು, ಕ್ಷೌರಿಕರು, ಉಪ್ಪಾರರು ವಿವಿಧ ವಾಹನ ಚಾಲಕರು, ಮಡಿವಾಳರು ಮುಂತಾದ ಕುಶಲ ಕರ್ಮಿಗಳ ಕುರಿತು ಒಂದಕ್ಷರದ ಪ್ರಸ್ತಾಪವಿಲ್ಲ. ಲೋಕೋಪಯೋಗಿ, ಸಣ್ಣ ಕೈಗಾರಿಕೆ, ನಗರ, ಪಟ್ಟಣಗಳ ಅಭಿವೃದ್ಧಿ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಜನರ ಕಲ್ಯಾಣದ ಕುರಿತು ಪ್ರಸ್ತಾಪವೂ ಇಲ್ಲ. ಅಭಿವೃದ್ಧಿ ಕುರಿತಾದ ಪ್ರಸ್ತಾಪವೂ ಇಲ್ಲ. ಈ ಕುರಿತು ತಾನು ಏನೂ ಮಾಡಿಲ್ಲ ಎಂದು ಸರ್ಕಾರವೆ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ. ತನ್ನ ಅದಕ್ಷತೆಯನ್ನು ಒಪ್ಪಿಕೊಂಡದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ.
    ಸರ್ಕಾರ ರಾಜ್ಯಪಾಲರ ಮೂಲಕ ಓದಿಸಿದ 116 ಪ್ಯಾರಾಗÀಳಲ್ಲಿ 22 ಪ್ಯಾರಾಗಳನ್ನು ಕೋವಿಡ್ ಯಶಸ್ವಿ ನಿರ್ವಹಣೆ, 8 ಪ್ಯಾರಾಗಳನ್ನು ಪ್ರವಾಹವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದೇವೆಂದು ಕೊಚ್ಚಿಕೊಳ್ಳಲು ದುರುಪಯೋಗಪಡಿಸಿಕೊಂಡಿದೆ. ಕೋವಿ???ನಿಂದ ರಾಜ್ಯದಲ್ಲಿ 4 ಲಕ್ಷ ಜನರು ಮರಣ ಹೊಂದಿದ್ದರೆ, ಅಸಂಖ್ಯಾತ ಮಕ್ಕಳು ತಬ್ಬಲಿಗಳಾಗಿವೆ. ವೃದ್ಧ ತಂದೆ ತಾಯಿಗಳು ಅನಾಥರಾಗಿದ್ದಾರೆ. ಆದರೂ ಸಹ ಸರ್ಕಾರ ತಾವು ಸಾಧನೆ ಮಾಡಿದ್ದೇವೆಂದು ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ.

    ಕಳೆದ ಮೇನಲ್ಲಿ ತೌಕ್ತೆ ಚಂಡಮಾರುತ ಬಂದಿತ್ತು. ಆಗಸ್ಟ್‍ನಲ್ಲಿ ಅತಿವೃಷ್ಟಿಯಾಗಿತ್ತು. ಅದರ ಪರಿಹಾರವನ್ನು ಇನ್ನೂ ನೀಡುವುದರಲ್ಲೇ ಇದ್ದಾರೆ. ಇದನ್ನು ಜವಾಬ್ಧಾರಿಯುತ ಸರ್ಕಾರ ಎನ್ನಬಹುದೆ? ನೀರಾವರಿ ಕುರಿತಂತೆಯೂ ರಾಜ್ಯಪಾಲರ ಮಾತುಗಳು ನಿಜಕ್ಕೂ ನಿರಾಶಾದಾಯಕವಾಗಿವೆ. ಯಾವ ಕಾರ್ಯಕ್ರಮಗಳನ್ನು ಎಷ್ಟು ಅನುದಾನದಲ್ಲಿ ರೂಪಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ.

    ಈ ಸರ್ಕಾರದಲ್ಲಿ ಅತ್ಯಂತ ನಿರ್ಲಕ್ಷಿತ ಇಲಾಖೆಗಳಲ್ಲಿ ಕೃಷಿಯೂ ಒಂದು. ಪ್ಯಾರಾ 41 ರಲ್ಲಿ ಬೆಂಬಲ ಬೆಲೆ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ನಾನೆಲ್ಲೊ ಈ ವರ್ಷದ ಬೆಂಬಲ ಬೆಲೆ ಇರಬೇಕೆಂದು ನೋಡಿದರೆ 2020-21 ರಲ್ಲಿ ಖರೀದಿಸಿದ್ದನ್ನು ಪ್ರಸ್ತಾಪಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ 2019 ರಲ್ಲಿ ಪ್ರಾರಂಭವಾಯಿತು. ಆಗ ರಾಜ್ಯ ಸರ್ಕಾರ ಕೇಂದ್ರದ 6000 ದ ಜೊತೆಗೆ 4000 ರೂಗಳನ್ನು ನೀಡುವುದಾಗಿ ಹೇಳಿತ್ತು. ಆದರೆ 2019 ಮತ್ತು 2020 ರಲ್ಲಿ ನೀಡಿದ್ದು ಕೇವಲ ತಲಾವಾರು 2000 ರೂಪಾಯಿಗಳನ್ನು ಮಾತ್ರ.

    ನಮ್ಮ ಸರ್ಕಾರ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿ 1 ಅಥವಾ 2 ನೇ ಸ್ಥಾನಗಳತ್ತು. ಈಗ ಓಲಾ ಬೈಕ್, ಏಥರ್, ಟಾಟಾ ಎಲೆಕ್ಟ್ರಾನಿಕ್ಸ್ ಮುಂತಾದ ಬೃಹತ್ ಬಂಡವಾಳದ ಕಂಪೆನಿಗಳು 10000 ಕೋಟಿ ಬಂಡವಾಳ ಹೂಡಲು ತಯಾರಿದ್ದವು. ಆದರೆ ಈ ಸರ್ಕಾರ ಆಸಕ್ತಿ ವಹಿಸದ ಕಾರಣ ತಮಿಳುನಾಡಿನ ಪಾಲಾದವು. ರಾಜ್ಯವು ಕೈಗಾರಿಕಾಭಿವೃದ್ಧಿಯಲ್ಲೂ ಹಿಂದೆ ಬಿದ್ದಿದೆ.

    ಎನ್.ಇ.ಪಿ. ಯಂಥ ಮನೆಹಾಳು ನೀತಿಗಳನ್ನು ಸರ್ಕಾರ ಸಾಧನೆ ಎಂದು ಹೇಳಿಸಿದೆ. ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರುಳಿಲ್ಲ, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳಿಲ್ಲ. ವಿಶ್ವ ವಿದ್ಯಾಲಯಗಳಲ್ಲಿ ವೈಜ್ಞಾನಿಕ ಮನೋಭಾವಗಳಿರುವ ಅಧ್ಯಾಪಕರಿಲ್ಲ. ಸ್ವತಂತ್ರವಾಗಿ ಅಧ್ಯಯನ ಮಾಡುವ, ಬರೆಯುವ ಅಧ್ಯಾಪಕರಿಗೆ ಸರ್ಕಾರದ ಕಿರುಕುಳದ ಭಯ. ಹೀಗಾಗಿ ಸಂಸ್ಕøತದಂಥಹ ಭಾಷೆಗಳ ಹೇರಿಕೆಗಷ್ಟೆ ಎ???ಇಪಿ ಸೀಮಿತವಾಗಿದೆ. ವಸತಿಯ ವಿಚಾರದಲ್ಲಿ ಕೇವಲ ಭವಿಷ್ಯ ನುಡಿಯಲಾಗಿದೆಯೇ ಹೊರತು ಸಾಧನೆಗಳಿಲ್ಲ.ಕಲ್ಯಾಣ ಕರ್ನಾಟಕದ ಹೆಸರು ಬದಲಾಯಿಸಿದೆವು, ಕಛೇರಿಯನ್ನು ಸ್ಥಳಾಂತರಿಸಿದೆವು ಎಂದು ಪ್ಯಾರಾ 75 ರಲ್ಲಿ ಹೇಳಿಕೊಳ್ಳಲಾಗಿದೆ. ಇದನ್ನು ಸಾಧನೆ ಎಂದು ಹೇಳಬಹುದೆ?

    ರಾಜ್ಯ ಸರ್ಕಾರ ಅಮೃತ ಹೆಸರಿನಲ್ಲಿ ಹಲವು ಯೋಜನೆಗಳನ್ನು ರಾಜ್ಯಪಾಲರ ಬಾಯಲ್ಲಿ ಪ್ರಸ್ತಾಪ ಮಾಡಿಸಿದೆ. ಅದರಲ್ಲಿ 750 ಗ್ರಾಮಗಳನ್ನು ಆಯ್ಕೆ ಮಾಡಿ ತಲಾ 25 ಲಕ್ಷ ರೂಪಾಯಿಗಳನ್ನು ನೀಡಲಾಗುವುದೆಂದು ಪ್ಯಾರಾ 21 ರಲ್ಲಿ ಪ್ರಸ್ತಾಪಿಸಲಾಗಿದೆ. 25 ಲಕ್ಷ ರೂಪಾಯಿಗಳಲ್ಲಿ ಯಾವ ಗ್ರಾಮವನ್ನು ಅಮೃತ ಗ್ರಾಮ ಮಾಡಲಾಗುತ್ತದೆ? ನಮ್ಮ ಸರ್ಕಾರದ ಅವಧಿಯಲ್ಲಿ ತಲಾ 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು ರೂ.1750 ಕೋಟಿಗಳನ್ನು ನೀಡಿ ಮುಖ್ಯಮಂತ್ರಿ ಸುವರ್ಣ ಗ್ರಾಮ ಯೋಜನೆಯಡಿ ಜಾರಿಗೆ ತಂದು ಯಶಸ್ವಿಯಾಗಿ ಅನುಷ್ಟಾನ ಮಾಡಿದ್ದೆವು.

    ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ನಿಧಿಯ ಹಣವನ್ನು ಕಾರ್ಮಿಕರಿಗೆ ಕೊಟ್ಟು ನಾವು ಸಾಧನೆ ಮಾಡಿದ್ದೇವೆ ಎಂದು ಪ್ಯಾರಾ 39 ರಲ್ಲಿ ಪ್ರಸ್ತಾಪಿಸಲಾಗಿದೆ.
    ಪಶುಪಾಲನೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ರಾಜ್ಯದ ಜಿಡಿಪಿಗೆ ರೂ.1 ಲಕ್ಷ ಕೋಟಿಯವರೆಗೂ ಕೊಡುಗೆ ನೀಡುತ್ತಿರುವ, ಸುಮಾರು 45 ಲಕ್ಷ ರೈತ ಕುಟುಂಬಗಳ ಜೀವನಾಧಾರವಾಗಿರುವ ಪಶುಪಾಲನೆಯನ್ನು ಈ ಮಟ್ಟಿಗೆ ನಿರ್ಲಕ್ಷಿಸಬಹುದೆ?

    ಪತ್ರಕರ್ತರಿಗೆ ಕೆಎಸ್‍ಆರ್‍ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಹಳೆಯ ಯೋಜನೆಯನ್ನೆ ಮುಂದುವರಿಸಿ ರಾಜ್ಯಪಾಲರ ಬಾಯಲ್ಲಿ ಸಾಧನೆ ಎಂದು ಹೇಳಿಸಲಾಗಿದೆ. ಸರ್ಕಾರ ಸುಳ್ಳು ಹೇಳಿ, ತನ್ನ ಬೆನ್ನನ್ನು ತಾನೆ ತಟ್ಟಿಕೊಂಡು ಓಡಾಡುತ್ತಿದೆ ಎಂಬುದಕ್ಕೆ ರಾಜ್ಯಪಾಲರ ಭಾಷಣವೆ ಸಾಕ್ಷಿ. ರಾಜ್ಯವು ಅತಿ ಕೆಟ್ಟ ಆಡಳಿತವನ್ನು ಎದುರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಭಾಷಣವಿದೆ.

  • ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಬೃಹತ್ ಪ್ರತಿಭಟನೆ

    ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಬೃಹತ್ ಪ್ರತಿಭಟನೆ

    ಬೆಂಗಳೂರು: ಬೆಲೆ ಏರಿಕೆ ವಿರೋಧಿಸಿ ಮಹದೇವಪುರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ನೂರಾರು ಕಾರ್ಯಕರ್ತರು ಆಟೋ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರದ ಅಧ್ಯಕ್ಷ ಅಶೋಕ್ ಮೃತ್ಯುಂಜಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಶೇ.60ಕ್ಕೂ ಹೆಚ್ಚು ಪೆಟ್ರೋಲ್, ಡೀಸೆಲ್ ಹಾಗೂ ತೈಲ ಬೆಲೆಗಳ ಮೇಲೆ ಅಬಕಾರಿ ಸುಂಕ, ವ್ಯಾಟ್ ಸುಂಕ ಹಾಗೂ ಇನ್ನಿತರ ಸೆಸ್‍ಗಳನ್ನು ವಿಧಿಸುವುದರ ಮೂಲಕ ದೇಶದ ಎಲ್ಲಾ ಪ್ರಜೆಗಳ ಜೇಬಿಗೆ ಕನ್ನ ಹಾಕುವ ಕೆಲಸಗಳನ್ನು ಮಾಡುತ್ತಿರುವುದು ಖಂಡನೀಯ ಎಂದರು. ಇದನ್ನೂ ಓದಿ:ಆನೇಕಲ್ ರೇವ್ ಪಾರ್ಟಿ ಪ್ರಕರಣ- 35 ಜನರ ಬಂಧನ

    ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಮಾರುಕಟ್ಟೆ ವಿನಿಮಯ ದರ, ಅವಾಸ್ತವಿಕ ವಿಚಾರಗಳನ್ನು ಹೇಳುವುದರ ಮೂಲಕ ರಾಜ್ಯ ಹಾಗೂ ದೇಶದ ಪ್ರಜೆಗಳ ದಿಕ್ಕನ್ನು ತಪ್ಪಿಸಿ ಬೆಲೆ ಏರಿಸಿದೆ. ಜನತೆಯ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ:ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    ಇತ್ತೀಚೆಗೆ ವಿಧಾನ ಸಭೆಯಲ್ಲೂ ಬೆಲೆ ಏರಿಕೆಗಳ ಬಗ್ಗೆ ಚರ್ಚೆ ನಡೆದರೂ, ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಇದುವರೆಗೂ ಯಾವುದೇ ತೆರಿಗೆಯನ್ನು ಇಳಿಸಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಇಳಿಸದಿದ್ದರೆ ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯದಾ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು.

     

  • ಗುಜರಾತ್ ಮಾದರಿಯಂತೆ ರಾಜ್ಯದಲ್ಲೂ ಟ್ರಾಫಿಕ್ ದಂಡಕ್ಕೆ ಬ್ರೇಕ್

    ಗುಜರಾತ್ ಮಾದರಿಯಂತೆ ರಾಜ್ಯದಲ್ಲೂ ಟ್ರಾಫಿಕ್ ದಂಡಕ್ಕೆ ಬ್ರೇಕ್

    ಬೆಂಗಳೂರು: ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ ಭಾರೀ ದಂಡ ವಿಧಿಸುತ್ತಿದ್ದ ಸರ್ಕಾರ ನಡೆಗೆ ಸಾಕಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ನಡುವೆಯೇ ಗುಜರಾತ್ ಸರ್ಕಾರ ದಂಡದ ಮೊತ್ತವನ್ನು ಕಡಿಮೆ ಮಾಡಿತ್ತು. ಸದ್ಯ ಕರ್ನಾಟಕದಲ್ಲೂ ದಂಡದ ಪ್ರಮಾಣ ಕಡಿಮೆ ಮಾಡಲು ಸಿಎಂ ಬಿಎಸ್‍ವೈ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ದಂಡದ ಮೊತ್ತ ಜಾಸ್ತಿಯಾಗಿರುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕಡಿಮೆ ಮಾಡಿರುವಂತೆ ನಮ್ಮಲ್ಲೂ ಕಡಿತ ಮಾಡುವ ಯೋಚನೆ ಇದೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಬೇರೆ ಬೇರೆ ರಾಜ್ಯಗಳಿಂದ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇವೆ. 2 ದಿನಗಳ ಒಳಗೆ ಈ ಮಾಹಿತಿ ಲಭಿಸುವ ನಿರೀಕ್ಷೆ ಇದ್ದು, ಮಾಹಿತಿ ಬಂದ ಕೂಡಲೇ ಕ್ರಮಕೈಗೊಳ್ಳುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ನೀಡಬೇಕಾದ ಕೆಲ ಸೂಚನೆಗಳನ್ನ ನೀಡಿದ್ದೇವೆ ಎಂದು ಹೇಳಿದರು. ಇದನ್ನು ಓದಿ: ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

    ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿತ್ತು. ಇದೇ ವೇಳೆ ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿದ್ದು, ಈ ಬಗ್ಗೆ ಚರ್ಚೆ ನಡೆಸಿ ಕೆಲ ದಂಡದ ಮೊತ್ತಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದರು. ಇದನ್ನು ಓದಿ: ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ಗುಜರಾತ್ ಸರ್ಕಾರದ ಹೊಸ ನಿಯಮಗಳಂತೆ ಹೆಲ್ಮೆಟ್ ಧರಿಸದಿದ್ದರೆ 500 ರೂ. ದಂಡವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ್ದ ಹೊಸ ತಿದ್ದುಪಡಿ ಕಾಯ್ದೆಯ ಅನ್ವಯ ಈ ಮೊತ್ತ 1 ಸಾವಿರ ರೂ. ಇತ್ತು. ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ಬದಲಾಗಿ 500 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ 2 ಸಾವಿರ ರೂ., ಉಳಿದ ವಾಹನಗಳಿಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ. ಆದರೆ ಲೈಸನ್ಸ್, ಆರ್ ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಮಾಲಿನ್ಯ ಪ್ರಮಾಣ ಪತ್ರ ಪಡೆಯದ ವಾಹನಗಳಿಗೆ ನಿಗದಿ ಮಾಡಿದ್ದ 10 ಸಾವಿರಗಳನ್ನು ಸಣ್ಣ ವಾಹನಗಳಿಗೆ 1 ಸಾವಿರ ರೂ. ಭಾರೀ ವಾಹನಗಳಿಗೆ 3 ಸಾವಿರ ರೂ.ಗೆ ಇಳಿಸಲಾಗಿದೆ.  ಇದನ್ನು ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘನೆ- ಬೈಕಿಗೆ 23, 24 ಸಾವಿರ ರೂ, ಆಟೋಗೆ 32 ಸಾವಿರ ರೂ. ದಂಡ

  • ಸಂಸದ ಪ್ರತಾಪ್ ಸಿಂಹ ಸಂಬಳದ ಮಾಹಿತಿಯನ್ನು ಹಂಚಿಕೊಂಡಿದ್ದು ಯಾಕೆ?

    ಸಂಸದ ಪ್ರತಾಪ್ ಸಿಂಹ ಸಂಬಳದ ಮಾಹಿತಿಯನ್ನು ಹಂಚಿಕೊಂಡಿದ್ದು ಯಾಕೆ?

    ಮೈಸೂರು: ಜಿಯೋ ಸಿಮ್‍ನಲ್ಲಿ ಅನಿಯಮಿತ ಕರೆ ಹಾಗೂ ಡೇಟಾ ಸಿಗುವ ಕಾಲದಲ್ಲಿ, ಸಂಸದರಿಗೆ ನೀಡುವ 15 ಸಾವಿರ ಫೋನ್ ಬಿಲ್ ನಿಲ್ಲಿಸಿ, ಎಂಬ ಟ್ವಿಟ್ಟರ್ ಅಭಿಯಾನ ಶುರುವಾಗಿದೆ. ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

    ತನ್ನ ಸಂಬಳದ ಚೀಟಿಯನ್ನು ಟ್ವಿಟರ್‍ ಹಾಗೂ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಟೀಕಾಕಾರರ ಹಾಗೂ ಟ್ವಿಟರಿಗರಿಗೆ ತಿರುಗೇಟು ನೀಡಿರುವ ಸಂಸದ, ಕೇಂದ್ರ ಸರ್ಕಾರ ನೀಡುವ ತಮ್ಮ ವೇತನವನ್ನ ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದಾರೆ. ಪ್ರತಿ ಸಂಸದ ತಿಂಗಳಿಗೆ 1 ಲಕ್ಷದ 10 ಸಾವಿರ ಸಂಬಳ ಪಡೆಯುತ್ತಾರೆ. 50 ಸಾವಿರ ಸಂಬಳ, 15 ಸಾವಿರ ಕಚೇರಿ ನಿರ್ವಹಣೆ, 45 ಸಾವಿರ ಕ್ಷೇತ್ರ ನಿರ್ವಹಣೆಗೆ ಹಣ ನೀಡುತ್ತಾರೆ.

    ವಾಸ್ತವವಾಗಿ ಒಂದು ಲ್ಯಾಂಡ್ ಲೈನ್ ಬಿಲ್ ಬಿಟ್ಟರೆ ಮತ್ಯಾವುದೆ ಹಣವನ್ನ ಫೋನ್ ಗಾಗಿ ನೀಡುವುದಿಲ್ಲ. ಒಟ್ಟು 1 ಲಕ್ಷದ 10 ಸಾವಿರ ಸಂಬಳ ನೀಡುವ ಕೇಂದ್ರ ಸರ್ಕಾರ ಎಲ್ಲವನ್ನು ಅದರಲ್ಲೆ ಬಳಸು ಎಂದಿದೆ. ಆದರೂ ಕೆಲವರು 15 ಸಾವಿರ ಫೋನ್ ಬಿಲ್ ಎಂದು ಟೀಕಿಸುತ್ತಾರೆ. ಇದಕ್ಕಾಗಿ ನೋಡಿ ನನ್ನ ಸಂಬಳದ ಚೀಟಿ ಎಂದು ಬರೆದು ಟ್ವಿಟರ್‍ನಲ್ಲಿ ಸಂಸದ ಪ್ರತಾಪ್ ಸಿಂಹ ಹಾಕಿದ್ದಾರೆ.

    ಏನಿದು ಕ್ಯಾಂಪೇನ್?: 399 ರೂಪಾಯಿಗೆ ಅನಿಯಮಿತ ಕರೆ ಮತ್ತು ಇಂಟರ್ ನೆಟ್ ಡಾಟಾ ಸಿಗುತ್ತಿರುವ ಕಾಲದಲ್ಲಿ ಸಂಸದರಿಗೆ ದೂರವಾಣಿಗಾಗಿ ತಿಂಗಳಿಗೆ 15 ಸಾವಿರ ರೂಪಾಯಿ ಕೊಡುತ್ತಿರುವುದು ದೊಡ್ಡ ಜೋಕ್. ಇದಕ್ಕಾಗಿ ತಿಂಗಳಿಗೆ 11 ಕೋಟಿ ರೂಪಾಯಿ ಯನ್ನು ಕೇಂದ್ರ ಸರಕಾರ ವೆಚ್ಚ ಮಾಡುತ್ತಿದೆ. ಇದನ್ನು ನಿಲ್ಲಿಸಿ ಎಂದು ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿತ್ತು.

     

  • ಕೇಂದ್ರಕ್ಕೆ ಅವಕಾಶ ಕೊಟ್ರೇ ಬರೀ 24 ಗಂಟೆಯಲ್ಲಿ ಕರಾವಳಿ ಶಾಂತವಾಗಿರಿಸ್ತೀವಿ- ಸಿಎಂಗೆ ಡಿವಿಎಸ್ ಬಹಿರಂಗ ಸವಾಲು

    ಕೇಂದ್ರಕ್ಕೆ ಅವಕಾಶ ಕೊಟ್ರೇ ಬರೀ 24 ಗಂಟೆಯಲ್ಲಿ ಕರಾವಳಿ ಶಾಂತವಾಗಿರಿಸ್ತೀವಿ- ಸಿಎಂಗೆ ಡಿವಿಎಸ್ ಬಹಿರಂಗ ಸವಾಲು

    ಬೆಂಗಳೂರು: ರಾಜ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆಳುತ್ತಿದೆ. ಕೇಂದ್ರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಅವಕಾಶ ಕೊಟ್ಟರೆ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುತ್ತೇವೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಬಹಿರಂಗ ಸವಾಲೆಸೆದಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿದ್ದು, ಆ ಬಳಿಕ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಸವಾಲು ಎಸೆದಿದ್ದಾರೆ.

    ರಾಜ್ಯದ ಆಡಳಿತ ಕಾಂಗ್ರೆಸ್ ಕೈಯಲ್ಲಿದೆಯೇ ಹೊರತು ಬಿಜೆಪಿ ಕೈಯಲ್ಲಿ ಇಲ್ಲ. ಮಾನ್ಯ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಇಂದೇ ರಾಜೀನಾಮೆ ಕೊಡಲಿ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕೊಡಲಿ. ಕೇವಲ 24 ಗಂಟೆಯಲ್ಲಿ ಕರಾವಳಿಯಲ್ಲಿ ಶಾಂತಿ ಕಾಪಾಡುತ್ತೇವೆ. ಯಾಕಂದ್ರೆ ಇವರೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದ್ರೆ ನಂದಿಸುವ ಕೆಲಸ ಮಾಡಲ್ಲ. ಆದ್ರೆ ಇದನ್ನ ನಂದಿಸೋರು ಯಾರು ಅಂತಾ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: RSS ಕಾರ್ಯಕರ್ತನ ಮೇಲೆ ಹಲ್ಲೆ: ಬಂಟ್ವಾಳ ಮತ್ತೆ ಉದ್ವಿಗ್ನ – ವಾಹನ ಸಂಚಾರ ಅಸ್ತವ್ಯಸ್ಥ

    ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಇವರ ಯೋಗ್ಯತೆಗೆ ಒಂದ್ ಮೀಟಿಂಗ್ ಮಾಡಿಲ್ಲ. ಈ ಎಲ್ಲ ಘಟನೆಗಳಿಗೆ ಸಿಎಂ ಸಿದ್ದರಾಮಯ್ಯನವರೇ ಕಾರಣ. ಸಿಎಂ ಅವರೇ ಕರಾವಳಿಯ ಸಚಿವರು, ಶಾಸಕರನ್ನ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಡಿವಿಎಸ್ ವಾಗ್ದಾಳಿ ನಡೆಸಿದರು.

    ಕೇಂದ್ರ ಕಾನೂನು ಬಗ್ಗೆ ಸೂಚನೆ ಕೊಟ್ರೆ ಅಧಿಕಾರ ಹಸ್ತಕ್ಷೇಪ, ಮೂಗು ತೂರಿಸ್ತಾರೆ ಅಂತಾರೆ. ಯಾವುದೇ ರೀತಿ ಕಟ್ಟು ನಿಟ್ಟಿನ ಸೂಚನೆ ಕೊಡ್ತಿಲ್ಲ 4 ವರ್ಷ ಆಯ್ತು. ಇದು ಕೊನೆಯ ವರ್ಷ. ಬಹುಶಃ ಈ ಕೊನೆಯ ವರ್ಷವೇ ಸಿದ್ದರಾಮಯ್ಯ ಪೊಲಿಟಿಕಲ್ ಕೆರಿಯರ್ ಗೆ ಕಡೆಯ ವರ್ಷ ಆಗಬಹುದು ಎಂಬು ಡಿವಿಎಸ್ ಭವಿಷ್ಯ ನುಡಿದರು.

    ಇದನ್ನೂ ಓದಿ:  ಚಿಕಿತ್ಸೆ ಫಲಕಾರಿಯಾಗದೆ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು

    ಇದನ್ನೂ ಓದಿ:  ಪೆಟ್ರೋಲ್ ಕೇಳೋ ನೆಪದಲ್ಲಿ ಮಂಗ್ಳೂರಿನಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ

    ಇದನ್ನೂ ಓದಿ:  ನನ್ನ ಮಗನನ್ನ ಯಾವ ರಾಜಕಾರಣಿಗಳು, ಸಂಘಟನೆಯವ್ರು ಉಳಿಸಲಿಲ್ಲ: ಶರತ್ ತಂದೆ ಕಣ್ಣೀರು

    ಇದನ್ನೂ ಓದಿ: ಶರತ್ ಅಂತ್ಯಕ್ರಿಯೆಗೂ ಮುನ್ನ ಬಂಟ್ವಾಳದಲ್ಲಿ ಮತ್ತೊಂದು ಚಾಕು ಇರಿತ!

    ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ದುಷ್ಕರ್ಮಿಗಳ ಅಟ್ಟಹಾಸ- ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

     

     

     

     

     

     

  • ಜಿಎಸ್‍ಟಿ ಬಗ್ಗೆ ತಲೆಕಡಿಸಿಕೊಳ್ಳಬೇಡಿ, ಈ ಸುದ್ದಿ ಓದಿ ನಕ್ಕುಬಿಡಿ

    ಜಿಎಸ್‍ಟಿ ಬಗ್ಗೆ ತಲೆಕಡಿಸಿಕೊಳ್ಳಬೇಡಿ, ಈ ಸುದ್ದಿ ಓದಿ ನಕ್ಕುಬಿಡಿ

    ನವದೆಹಲಿ: ದೇಶದಲ್ಲಿ ಜಿಎಸ್‍ಟಿ ಜಾರಿಗೆ ಬಂದಿದ್ದೂ ಆಯ್ತು. ಆದ್ರೆ ಈ ಬಗ್ಗೆ ಜನರಿಗೆ ಇನ್ನೂ ಏನೂ ಅನ್ನೋದೇ ತಿಳಿದಿಲ್ಲ. ಈ ಮಧ್ಯೆ ಜಿಎಸ್‍ಟಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ಸ್ ಹಾಗೂ ಮೀಮ್ಸ್ ಗಳು ಹರಿದಾಡುತ್ತಿವೆ.

    ಜಿಎಸ್‍ಟಿ ಅಂದ್ರೆ ಏನೂ ಅಂತಾ ಜನರು ಇನ್ನೂ ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ ಅದಕ್ಕೆ ಏನೇನೂ ಅರ್ಥಗಳನ್ನು ಕಲ್ಪಿಸಿಕೊಂಡು ಜನ ಜೋಕ್ಸ್ ಗಳನ್ನು ಹರಿಯಬಿಡುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ತಂದಿರುವ ಈ ಜಿಎಸ್‍ಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ.

    ಒಟ್ಟಿನಲ್ಲಿ ಜಿಎಸ್‍ಟಿ ಬಗ್ಗೆ ನೀವೂ ತಲೆಕೆಡಿಸಿಕೊಳ್ಳುವ ಬದಲು ಈ ಕೆಳಗಿನ ಜೋಕ್ಸ್ ಗಳನ್ನು ಓದಿ ನಕ್ಕುಬಿಡಿ. ಮನರಂಜನೆಗೆ ಮಾತ್ರ ಈ ಸುದ್ದಿಯನ್ನು ನೀಡಿದ್ದು ಗಂಭೀರವಾಗಿ ಸ್ವೀಕರಿಸಬೇಡಿ.

    https://twitter.com/Fussy_Ca/status/877929713984917504

    https://twitter.com/Supermanbita/status/880983846174552064

    https://twitter.com/James_Beyond/status/881117320361504768

    https://twitter.com/Atheist_Krishna/status/880777477093703680

    https://twitter.com/hankypanty/status/880360010718617600

    https://twitter.com/itsdhruvism/status/880852644071264256

    https://twitter.com/AkshayKatariyaa/status/881016493827387394

    https://twitter.com/juniorbacchhan/status/877511541771321345

  • ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಇಂದಿಗೆ 100 ದಿನ. ಹೊಸ 2000 ಸಾವಿರ ನೋಟ್ ಕೈಗೆ ಬಂದು ಮೂರು ತಿಂಗಳೇ ಕಳೆದಿವೆ. ಈ ಮಧ್ಯೆ ಮೈಸೂರಿನಲ್ಲಿ 2000 ನೋಟು ಪುಡಿ ಪುಡಿಯಾಗಿದ್ದ ಸುದ್ದಿ ನೋಡಿದ್ರಿ. ಅದೇ ರೀತಿಯ ಘಟನೆ ಬೆಂಗಳೂರಿನ ಪೀಣ್ಯದಲ್ಲೂ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪೀಣ್ಯ ದಾಸರಹಳ್ಳಿಯ ನಿರಂಜನ್ ಹೆಗಡೆಯವರಿಗೆ ಸಿಕ್ಕಿರುವ 2000 ಸಾವಿರ ರೂ. ಹೊಸ ನೋಟ್ ಕೂಡ ಪುಡಿ ಪುಡಿಯಾಗಿ ಉದುರುತ್ತಿದೆ.

    ಕಳೆದ ಮೂರು ದಿನಗಳ ಹಿಂದೆ ನಿರಂಜನ್ ಹೆಗಡೆಯವರ ಹಾರ್ಡ್‍ವೇರ್ ಶಾಪ್‍ಗೆ ಬಂದ ಗ್ರಾಹಕರೊಬ್ಬರು ಈ ನೋಟನ್ನ ಕೊಟ್ಟಿದ್ದಾರೆ. ಆದ್ರೆ ಇದೀಗ ಈ ನೋಟ್‍ನ್ನು ಬ್ಯಾಂಕ್‍ನವರಿಗೆ ತೋರಿಸಿದ್ರೆ ಇದು ನಕಲಿ ನೋಟ್ ಅಲ್ಲ ಒರಿಜಿನಲ್ ನೋಟು ಅದ್ರೆ ಯಾಕೆ ಹೀಗೆ ಆಗ್ತಿದೆ ಅಂತಾ ಗೊತ್ತಿಲ್ಲ ಅಂತಾರೆ ಎಂಬುವುದಾಗಿ ತಿಳಿದುಬಂದಿದೆ.

    https://www.youtube.com/watch?v=VqP0ijlkl6Q&feature=youtu.be