Tag: Central Department of Health

  • ಕೊರೊನಾಗೆ ದೇಶದಲ್ಲಿ 4ನೇ ಬಲಿ – ಪಂಜಾಬ್‍ನಲ್ಲಿ ವ್ಯಕ್ತಿ ಸಾವು

    ಕೊರೊನಾಗೆ ದೇಶದಲ್ಲಿ 4ನೇ ಬಲಿ – ಪಂಜಾಬ್‍ನಲ್ಲಿ ವ್ಯಕ್ತಿ ಸಾವು

    ನವದೆಹಲಿ: ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಪಂಜಾಬ್ ನಲ್ಲಿ ಮೊದಲ ಬಲಿಯಾಗಿದ್ದು ದೇಶದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿನಿಂದ ವ್ಯಕ್ತಿ ಮೃತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಮೃತ ವ್ಯಕ್ತಿ 70 ವರ್ಷದವರಾಗಿದ್ದು ಜಪಾನ್ ನಿಂದ ಭಾರತಕ್ಕೆ ವಾಪಸ್ ಆಗಿದ್ದರು. ತಪಾಸಣೆ ವೇಳೆ ಇವರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು.

    ಮೃತ ವೃದ್ಧನಿಗೆ ಕೊರೊನಾ ಸೊಂಕಿನ ಜೊತೆಗೆ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು. ಇಂದು ಅವರು ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

    ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ ದೇಶದಲ್ಲಿ 142 ಮಂದಿ ಭಾರತೀಯರು 25 ವಿದೇಶಿ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಇದುವರೆಗೂ 15 ಮಂದಿ ಸಂಪೂರ್ಣ ಗುಣ ಮುಖರಾಗಿದ್ದಾರೆ.

    ಕರ್ನಾಟಕದಲ್ಲಿ 14 ಮಂದಿಯಲ್ಲಿ ವೈರಸ್ ಸೋಂಕು ದೃಢಪಟ್ಟಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.