Tag: Central Africa

  • ಯುವಕನ ಕಣ್ಣಿನಲ್ಲಿದ್ದ ಹುಳ ಹೊರ ತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು

    ಯುವಕನ ಕಣ್ಣಿನಲ್ಲಿದ್ದ ಹುಳ ಹೊರ ತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು

    ಶಿವಮೊಗ್ಗ: ದೇಶದಲ್ಲಿಯೇ ಅಪರೂಪದಲ್ಲಿ ಅಪರೂಪವಾದ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಜಿಲ್ಲೆಯ ಸಾಗರದ ವೈದ್ಯರು ನಡೆಸಿ ಯಶಸ್ವಿಯಾಗಿದ್ದಾರೆ. ಇದು ಮಧ್ಯ ಆಫ್ರಿಕಾದಲ್ಲಿ ಕಂಡುಬರುವ ಕಣ್ಣಿನ ವ್ಯಾಧಿಯಾಗಿದ್ದು, ಭಾರತದಲ್ಲಿ ಈಗ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿದೆ.

    ‘ಲೋವಾ ಲೋವಾ’ ಎಂಬ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಕಣ್ಣನ್ನು ರಕ್ಷಿಸಲಾಗಿದೆ. ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಸಾಗರ ತಾಲೂಕು ಮಂಡಗಳಲೆ ಗ್ರಾಮದ 19 ವರ್ಷದ ಯುವಕನೋರ್ವ ಕಣ್ಣು ನೋವೆಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ತಪಾಸಣೆಗೆ ಒಳಪಡಿಸಿದಾಗ ಅವನಿಗೆ ಕಣ್ಣಿನಲ್ಲಿ ಹುಳವೊಂದು ಓಡಾಡುತ್ತಿರುವುದನ್ನು ಕಂಡು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ಹೇಳಿದ್ದೆವು ಎಂದರು. ಇದನ್ನೂ ಓದಿ: ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ 

    ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಮೋದ್ ಯುವಕನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಯುವಕನ ಕಣ್ಣಿನಲ್ಲಿದ್ದ 3 ಸೆಂ.ಮೀ ಉದ್ದ ‘ಲೋವಾ ಲೋವಾ’ ಎಂಬ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಮೊದಲ ವಿಶೇಷ ಹಾಗೂ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಸಾಗರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

    ಯಾವುದು ಈ ರೋಗ?
    ಇಂತಹ ಸಮಸ್ಯೆ ನಮ್ಮ ದೇಶದಲ್ಲಿ ಅಪರೂಪಕ್ಕೆ ಕಂಡುಬರುತ್ತದೆ. ಇದು ಹೆಚ್ಚಾಗಿ ಮಧ್ಯ ಆಫ್ರಿಕಾ ದೇಶದಲ್ಲಿ ಕಾಣಿಸಿಕೊಳ್ಳುತ್ತೆ. ನಮ್ಮ ದೇಶದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಈವರೆಗೆ ಕೇವಲ 10 ಮಾತ್ರ ನಡೆದಿವೆ. ಇದರಲ್ಲಿ ಬಹುತೇಕ ಮಧ್ಯ ಆಫ್ರಿಕಾದಿಂದ ಬಂದವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಏನಿದು ‘ಲೋವಾ ಲೋವಾ’?
    ಇದು ಡೀರ್ ಹಾಗೂ ಮ್ಯಾಂಗ್ಯೂ ಎಂಬ ಸಣ್ಣ ಹುಳದ ಕಡಿತದಿಂದ ಹುಳ ನಮ್ಮ ದೇಹಕ್ಕೆ ಸೇರ್ಪಡೆಯಾಗುತ್ತದೆ. ಹುಳವು ರಕ್ತದ ಮೂಲಕ ದೇಹಕ್ಕೆ ಸೇರಿ ನಂತರ ಅದು ಕಣ್ಣಿನಲ್ಲಿ ಬೆಳವಣಿಗೆ ಆಗುತ್ತದೆ. ಮೊದಲು ಕಣ್ಣಿನ ಬಿಳಿ ಭಾಗದಲ್ಲಿ ಬೆಳೆಯುವ ಇದು ನಂತರ ಕಣ್ಣಿನ ಅಕ್ಷಿ ಪಟಲಕ್ಕೆ ಹೋಗಿ ನಮ್ಮ ಕಣ್ಣಿನ ದೃಷ್ಟಿ ಇರುವ ಕರಿಗುಡ್ಡೆಗೆ ಹಾನಿ ಮಾಡುತ್ತದೆ. ಇದರಿಂದ ಮನುಷ್ಯನಿಗೆ ಶಾಶ್ವತ ಅಂಧತ್ವ ಬರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹುಳದ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ:  ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್