Tag: central

  • ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ: ನಟ ಸಾಧು ಕೋಕಿಲಾ

    ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ: ನಟ ಸಾಧು ಕೋಕಿಲಾ

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ (Sadhu Kokila) ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಈ ಭಾಗದಲ್ಲಿ ಇರುವುದರಿಂದ ಸಾಧು ಕೋಕಿಲಾ ಅವರಿಗೇ ಟಿಕೆಟ್ ನೀಡುವಂತೆ ಮನವಿ ಕೂಡ ಮಾಡಿದೆ.

    ಈ ಕುರಿತಂತೆ ಮಾತನಾಡಿರುವ ಸಾಧು ಕೋಕಿಲಾ, ನಾನು ಒಂದು ಧರ್ಮಕ್ಕೆ ಸೀಮಿತಿ ಆಗಿಲ್ಲ. ಬೆಂಗಳೂರಿನಲ್ಲಿ ನಾನು ಜನರಲ್ ಕಂಪಾರ್ಟಮೆಂಟ್. ನನ್ನನ್ನ ಎಲ್ಲಾ ಜಾತಿ ಧರ್ಮದವರು ಗುರುತಿಸುತ್ತಾರೆ. ನನ್ನ ಹಿನ್ನಲೆ ಜನರಿಗೆ ಗೊತ್ತಿದೆ. ನನನ್ನು ಯಾವ ಜಾತಿಗೂ ಸೇರಿಸಬೇಡಿ. ನಾನು ಎಲ್ಲರಿಗೂ ಸೇರಿದವನು. ಬೆಂಗಳೂರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಕ್ರಿಶ್ಚಿಯನ್ ಸಮುದಾಯದಿಂದ ಸಾಧು ಕೋಕಿಲಗೆ ಟಿಕೆಟ್ ಕೊಡಿ ಅಂತ ಕೇಳಿದ್ದಾರೆ. ನನಗೆ ಗೊತ್ತಿಲ್ಲ ಪಕ್ಷ ಏನ್ ಮಾಡುತ್ತೋ.ಯಾರಿಗೆ ಟಿಕೆಟ್ ಕೊಡ್ತಾರೆ ಗೊತ್ತಿಲ್ಲ’ ಎಂದಿದ್ದಾರೆ.

     

    ಅಲ್ಲದೇ, ಪಕ್ಷದ ತೀರ್ಮಾನಕ್ಕೆ ನಾನು ಬದ್ದ. ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ. ಟಿಕೆಟ್ ಕೊಟ್ಟರೆ 100% ಕಾಂಗ್ರೆಸ್ ನಿಂದ ನಿಲ್ತೀನಿ ಎನ್ನುವ ವಿಶ್ವಾಸದ ಮಾತುಗಳನ್ನೂ ಸಾಧು ಕೋಕಿಲ ಆಡಿದ್ದಾರೆ.

  • ದೇಶದಲ್ಲೇ ಪ್ರಥಮ 500 ಕೆವಿಎ ಭೂಗತ ಪರಿವರ್ತಕ ಕೇಂದ್ರದ ಲೋಕಾರ್ಪಣೆ

    ದೇಶದಲ್ಲೇ ಪ್ರಥಮ 500 ಕೆವಿಎ ಭೂಗತ ಪರಿವರ್ತಕ ಕೇಂದ್ರದ ಲೋಕಾರ್ಪಣೆ

    ಬೆಂಗಳೂರು: ದೇಶದಲ್ಲೇ ಪ್ರಪ್ರಥಮ ಬಾರಿಗೆ ನಿರ್ಮಿಸಿರುವ 500 ಕೆವಿಎ ಭೂಗತ ಪರಿವರ್ತಕ ಕೇಂದ್ರದ (Underground 500-kVA Electric Transformer) ಲೋಕಾರ್ಪಣೆ ಕಾರ್ಯಕ್ರಮವು ಇಂದು (ಮಂಗಳವಾರ) ಬೆಳಗ್ಗೆ 11 ಗಂಟೆಗೆ 15ನೇ ಅಡ್ಡ ರಸ್ತೆ ಮಲ್ಲೇಶ್ವರಂ (Malleshwaram) ವಿಭಾಗದಲ್ಲಿ ಉದ್ಘಾಟನೆಗೊಂಡಿದೆ.

    ಇಂಧನ ಇಲಾಖೆ ಸಚಿವರಾದ ಕೆ.ಜೆ. ಜಾರ್ಜ್ (K J George) ಅವರು ಉದ್ಘಾಟನೆ ಮಾಡಿದ್ರು. ಮಾಜಿ ಉಪಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್ (Ashwath Narayan) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು. ಬೆಸ್ಕಾಂ ಹಾಗೂ ಬಿಬಿಎಂಪಿ (BBMP) ಸಹಭಾಗಿತ್ವದಲ್ಲಿ 1.97 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ವಿಭಾಗದಲ್ಲಿ ಈ ಭೂಗತ ಪರಿವರ್ತಕ ಕೇಂದ್ರವನ್ನು ಸ್ಥಾಪಿಸಲಾಗಿದೆ.

    ಇದರಡಿ ಬೆಸ್ಕಾಂ 1.33 ಕೋಟಿ ರೂ. ವೆಚ್ಚದಲ್ಲಿ 500 ಕೆವಿಎ ತೈಲರಹಿತ ಪರಿವರ್ತಕ, 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯುನಿಟ್, 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ, 2 ಕೆವಿಎ ಯುಪಿಎಸ್, 1 ಹೆಚ್.ಪಿ ವಾಟರ್ ಪಂಪ್ (ಸ್ವಯಂಚಾಲಿತ), ಹವಾನಿಯಂತ್ರಣ ವ್ಯವಸ್ಥೆ (ಸ್ವಯಾಂಚಾಲಿತ), ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳು ಸೇರಿದಂತೆ ಭೂಗತ ಪರಿವರ್ತಕ ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಅಳವಡಿಸಲಾಗಿದೆ. ಈ ಯೋಜನೆಯ ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಜಿ20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷರ ಪ್ರವಾಸ – ಬೈಡನ್ ಪ್ರವಾಸಕ್ಕೂ ಮುನ್ನ ಜಿಲ್ ಬೈಡನ್‍ಗೆ ಕೊರೊನಾ ಸೋಂಕು

    ಅಲ್ಲದೇ ಈ ಯೋಜನೆಯಡಿ ವಿತರಣ ಪರಿವರ್ತಕಗಳು, ರಿಂಗ್ ಮೇನ್ ಯೂನಿಟ್ ಗಳು, ಫಿಡರ್ ಪಿಲ್ಲರ್ ಬಾಕ್ಸ್ ಗಳು ಸೇರಿದಂತೆ ಸಂಪೂರ್ಣ ವ್ಯವಸ್ಥೆಯನ್ನು ಭೂಗತವಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸುವುದರ ಜೊತೆಗೆ ವಿದ್ಯುತ್ ಪೂರೈಕೆ ನಷ್ಟವನ್ನು ತಗ್ಗಿಸಬಹುದಾಗಿದೆ. ಗುಣಮಟ್ಟದ ವಿದ್ಯುತ್ ಪೂರೈಸಲು ಕೂಡ ಈ ಯೋಜನೆ ಸಹಕಾರಿಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ನವದೆಹಲಿ: ಭಾರತ ಸರ್ಕಾರ ಸಾರ್ವಜನಿಕ ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸಲು ತರಂಗಾಂತರ ಹರಾಜಿಗೆ ಅನುಮತಿ ನೀಡಿದೆ. ಶೀಘ್ರದಲ್ಲೇ ಹೊರಬರಲಿರುವ 5ಜಿ ಸೇವೆ 4ಜಿ ಗಿಂತಲೂ 10 ಪಟ್ಟು ವೇಗವಿರಲಿದೆ ಎಂದು ಸರ್ಕಾರ ತಿಳಿಸಿದೆ.

    20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72 ಜಿಹೆಚ್‌ಝಡ್ ಸ್ಪೆಕ್ಟ್ರಮ್ ಈ ವರ್ಷದ ಜುಲೈ ಅಂತ್ಯದ ವೇಳೆಗೆ ಹರಾಜಿಗೆ ಇಡಲಾಗುತ್ತದೆ. ವಿವಿಧ ಕಡಿಮೆ(600 MHz, 700 MHz, 800 MHz, 900 MHz, 1800 MHz, 2100 MHz, 2300 MHz) ಮಧ್ಯಮ (3300 MHz) ಹಾಗೂ ಹೆಚ್ಚಿನ(26 GHz) ಆವರ್ತಗಳಲ್ಲಿ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯಲಿದೆ. ಇದನ್ನೂ ಓದಿ: ಕೊರೊನಾ ರೂಪಾಂತರ ಓಮಿಕ್ರಾನ್, ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ: ICMR

    5G

    ಪ್ರಸ್ತುತ 4ಜಿ ಸೇವೆಗಳ ಮೂಲಕ ಸಾಧ್ಯವಾಗುವುದಕ್ಕಿಂತಲೂ 10 ಪಟ್ಟು ಹೆಚ್ಚಿನ ವೇಗದ ಹಾಗೂ ಸಾಮರ್ಥ್ಯದ 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ರೋಲ್ ಔಟ್ ಮಾಡಲು ಟೆಲಿಕಾಂ ಸೇವಾ ಪೂರೈಕೆದಾರರು ಮಧ್ಯಮ ಹಾಗೂ ಹೆಚ್ಚಿನ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

    ಇದೇ ಮೊದಲ ಬಾರಿಗೆ ಯಶಸ್ವಿ ಬಿಡ್ದಾರರಿಗೆ ಮುಂಗಡ ಪಾವತಿ ಮಾಡುವ ಯಾವುದೇ ಕಡ್ಡಾಯ ಕ್ರಮವಿಲ್ಲ. ಸ್ಪೆಕ್ಟ್ರಮ್‌ಗಾಗಿ ಪಾವತಿಗಳನ್ನು 20 ಸಮಾನ ವಾರ್ಷಿಕ ಕಂತುಗಳಲ್ಲಿ ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿಸಬಹುದು. ಇದು ನಗದು ಹರಿವಿನ ಅಗತ್ಯತೆಗಳನ್ನು ಗಮನಾರ್ಹವಾಗಿ ಸರಾಗಗೊಳಿಸುವ ನಿರೀಕ್ಷೆಯಿದೆ ಮತ್ತು ಈ ವಲಯದಲ್ಲಿ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಬಿಡ್ದಾರರಿಗೆ ಭವಿಷ್ಯದ ಹೊಣೆಗಾರಿಕೆಗಳಿಲ್ಲದೇ 10 ವರ್ಷಗಳ ಬಳಿಕ ಸ್ಪೆಕ್ಟ್ರಮ್ ಅನ್ನು ಒಪ್ಪಿಸುವ ಆಯ್ಕೆಯನ್ನೂ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಭಾರತದ ಗೋಧಿ ರಫ್ತನ್ನು 4 ತಿಂಗಳು ಅಮಾನತುಗೊಳಿಸಿದ ಯುಎಇ

    ಈ ಬ್ರಾಡ್‌ಬ್ಯಾಂಡ್ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. 4ಜಿ ಸೇವೆ ಮೂಲಕ 2015ರಲ್ಲಿ ದೊಡ್ಡ ಮಟ್ಟದಲ್ಲಿ ಉತ್ತೇಜನ ಪಡೆದುಕೊಂಡಿದೆ. 2014ರಲ್ಲಿ 10 ಕೋಟಿ ಚಂದಾದಾರರಿದ್ದು, ಈಗ 80 ಕೋಟಿ ಚಂದಾದಾರರು ಬ್ರಾಡ್‌ಬ್ಯಾಂಡ್ ಬಳಕೆ ಮಾಡುತ್ತಿದ್ದಾರೆ. ಇದೀಗ ಹೊಸ ಯುಗದ ವ್ಯವಹಾರ ದೊಡ್ಡ ಮಟ್ಟದ ಲಾಭ ಪಡೆಯಲಿದೆ ಹಾಗೂ ಉದ್ಯಮಗಳಿಗೆ ಹೆಚ್ಚಿನ ಆದಾಯವನ್ನು ಸೃಷ್ಟಿಸುತ್ತದೆ ಎಂದಿದೆ.

    Live Tv

  • ಕಾಶ್ಮೀರದ ಹತ್ಯೆಗಳಿಗೆ ಪಾಕಿಸ್ತಾನವನ್ನು ದೂರಿದ ಕೇಂದ್ರ

    ಕಾಶ್ಮೀರದ ಹತ್ಯೆಗಳಿಗೆ ಪಾಕಿಸ್ತಾನವನ್ನು ದೂರಿದ ಕೇಂದ್ರ

    ನವದೆಹಲಿ: ಕಾಶ್ಮೀರದ ಕಣಿವೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಹಾಗೂ ಹತ್ಯೆಗೆ ಕೇಂದ್ರ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ.

    ಶುಕ್ರವಾರ ನಾರ್ತ್ ಬ್ಲಾಕ್‌ನಲ್ಲಿ ನಡೆದ ಸರಣಿ ಸಭೆಗಳ ಸಂದರ್ಭ ಕೇಂದ್ರ ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡುವ ಸಂದರ್ಭ ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ದೂಷಿಸಿದೆ.

    Kashmiri_Pandits

    ಕಾಶ್ಮೀರದಲ್ಲಿ ಹಿಂಸಾಚಾರದ ಮಟ್ಟಗಳು ಹೆಚ್ಚಿರಬಹುದು ಆದರೆ ಅದು ಜಿಹಾದ್ ಅಲ್ಲ. ಕೆಲವು ಹತಾಶ ಶಕ್ತಿಗಳು ಇದನ್ನು ಮಾಡುತ್ತಿದೆ. ಹಿಂಸಾಚಾರಕ್ಕೆ ಸಂಬಂಧಪಟ್ಟವರು ಕಾಶ್ಮೀರದ ಗಡಿಯುದ್ದಕ್ಕೂ ಕುಳಿತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:  JNU ಕ್ಯಾಂಪಸ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಕಾಶ್ಮೀರದ ಕಣಿವೆಯಲ್ಲಿ ತಾಲಿಬಾನ್ ಇರುವಿಕೆಗೆ ಪುರಾವೆಗಳಿಲ್ಲ. ಪಾಕಿಸ್ತಾನಿಗಳು ಇದಕ್ಕಾಗಿಯೇ ಭಾರತದ ಗಡಿ ಪ್ರವೇಶಿಸಲು ಸಂಚು ರೂಪಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಹತ್ಯೆಗಳು ನಡೆದಿವೆ. ಕಾಶ್ಮೀರಿ ಪಂಡಿತರ ಬೇಡಿಕೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಲ್ಲಿಂದ ಹೊರಗೆ ಸ್ಥಳಾಂತರಿಸುವ ಬದಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಅವರ ಗುರಿ ಕಾಶ್ಮೀರದಿಂದ ಜನಾಂಗೀಯ ನಿರ್ಮೂಲನೆ ಮಾಡುವುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದರು.

    ಕಾಶ್ಮೀರಿ ಪಂಡಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಆದರೆ ಕಾಶ್ಮೀರದಿಂದ ಹೊರಗಲ್ಲ ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಕೇಂದ್ರ ಯಾವುದೇ ಜನಾಂಗೀಯ ಶುದ್ಧೀಕರಣಕ್ಕೆ ಮುಂದಾಗುವುದಿಲ್ಲ. ಈ ಸರ್ಕಾರದಲ್ಲಿ ನಾವು ಬಹು ಸಾಂಸ್ಕೃತಿಕ ಸಮಾಜವನ್ನು ನಂಬುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧಕ್ಕೆ 100 ದಿನ ಪೂರ್ಣ- ಮತ್ತೆ ನಗರವನ್ನು ವಶಪಡಿಸಿಕೊಂಡ ಉಕ್ರೇನ್

  • ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ಬೆಂಗಳೂರು: ರಾಜ್ಯ ಐಪಿಎಸ್ ಅಧಿಕಾರಿಗಳ ಗುಳೆ ಪರ್ವ ಆರಂಭವಾಗಿದೆ. ರಾಜ್ಯ ಸೇವೆಗೆ ಗುಡ್ ಬೈ ಹೇಳಿ ಕೇಂದ್ರ ಸೇವೆಗೆ ತೆರಳಲು ನಾಲ್ವರು ಐಪಿಎಸ್ ಅಧಿಕಾರಿಗಳು ತಯಾರಾಗಿದ್ದಾರೆ.

    ಈ ಲಿಸ್ಟ್ ನಲ್ಲಿ ಮೊದಲಿಗೆ ಇರೋರು ಮಧುಕರ್ ಶೆಟ್ಟಿ. ರಾಜ್ಯದಲ್ಲಿ ಒಳ್ಳೆಯ ಪೋಸ್ಟಿಂಗ್ ನೀಡದ ಹಿನ್ನೆಲೆಯಲ್ಲಿ ಕೇಂದ್ರದ ಕದ ತಟ್ಟಿದ್ದಾರೆ. ಇದೀಗ ನ್ಯಾಷನಲ್ ಪೊಲೀಸ್ ಅಕಾಡೆಮಿ ಐಜಿಯಾಗಿ ಮಧುಕರ್ ಶೆಟ್ಟಿ ನಿಯೋಜನೆಗೊಂಡಿದ್ದಾರೆ.

    ಖಡಕ್ ಮಹಿಳಾ ಅಧಿಕಾರಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತದಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದವರು. ಪಿಯುಸಿ ಪ್ರಶ್ನೆ ಪತ್ರಿಕೆ ಲೀಕಾಸುರರನ್ನ ಹೆಡೆಮುರಿ ಕಟ್ಟಿದವರು. ಸದ್ಯ ಸಿಐಡಿ ಯಲ್ಲಿ ಡಿಐಜಿ ಯಾಗಿ ಕರ್ತವ್ಯ ನಿರ್ವಹಿಸ್ತಿದ್ದು, ಏಪ್ರಿಲ್ 1ರಿಂದ ಕೇಂದ್ರ ಸೇವೆಗೆ ತೆರಳಲಿದ್ದಾರೆ. ಈ ಮೂಲಕ ಎನ್‍ಐಎ ಡಿಐಜಿಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಳೆದ ವರ್ಷವೇ ಕೇಂದ್ರ ಸೇವೆಗೆ ತೆರಳಬೇಕಿದ್ದ ನಾರಂಗ್ ಅವರನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರಲಿಲ್ಲ.

    ದಕ್ಷ ಪ್ರಾಮಾಣಿಕ ಅಧಿಕಾರಿ ಲಾಭೂರಾಮ್ ಅವರ ಹೆಸರು ಕೇಳಿದಾಕ್ಷಣ ಒಳ್ಳೆ ಆಫೀಸರ್ ಅಂತಾರೆ ಜನ. ಸದ್ಯ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿರೋ ಲಾಭೂರಾಮ್ ಕೇಂದ್ರಕ್ಕೆ ತೆರಳಲಿದ್ದಾರೆ. ಇವರ ಜೊತೆಗೆ ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್ ಸಹ ಕೇಂದ್ರ ನಿಯೋಜನೆಗೆ ತೆರಳಲಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಗೆ ಇಬ್ಬರೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

    ಈ ನಾಲ್ವರ ಟ್ರಾನ್ಸ್ ಫರ್ ಗೆ ಕೇಂದ್ರ ಗೃಹ ಇಲಾಖೆ ಸಮ್ಮತಿ ನೀಡಿದೆ. ಆದ್ರೆ ಇಂಥ ಒಳ್ಳೆ ಆಫೀಸರ್ ಗಳನ್ನು ಸರ್ಕಾರ ಉಳಿಸಿಕೊಳ್ಳೋಕೆ ಆಗ್ತಿಲ್ವಲ್ಲ ಅನ್ನೋದೇ ವಿಪರ್ಯಾಸ.