Tag: Centra Government

  • ಸುಗ್ರಿವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಿಸಿ: ಕೇಂದ್ರಕ್ಕೆ ಭಾಗವತ್ ಸೂಚನೆ

    ಸುಗ್ರಿವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಿಸಿ: ಕೇಂದ್ರಕ್ಕೆ ಭಾಗವತ್ ಸೂಚನೆ

    ಮುಂಬೈ: ಆತ್ಮಗೌರಕ್ಕಾಗಿ ರಾಮ ಮಂದಿರ ನಿರ್ಮಾಣ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಮಾಡಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

    ವಿಜಯದಶಮಿ ಆಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರದ ವಾರ್ಷಿಕ ಭಾಷಣದಲ್ಲಿ ಅವರು, ಕೇಂದ್ರ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ಮುಂದಾಗಬೇಕು. ಆತ್ಮಗೌರವಕ್ಕಾಗಿ ನಿರ್ಮಾಣ ಮಾಡಬೇಕಾಗಿರುವು ಅನಿವಾರ್ಯವಾಗಿದೆ. ಸೌಹಾರ್ದತೆ ಹಾಗೂ ಏಕತೆಗೆ ರಾಮ ಮಂದಿರ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.

    ರಾಷ್ಟ್ರದ ಜೀವ ಮತ್ತು ಧರ್ಮವನ್ನು ಪ್ರತಿಬಿಂಬಿಸುವ ಶ್ರೀ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ಮಂದಿರವನ್ನು ನಿಮಾರ್ಣ ಮಾಡಲು ಸಂಘ ಸೇರಿದಂತೆ ದೇಶದ ಕೋಟ್ಯಂತರ ಜನ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ದೇವಸ್ಥಾನದ ನಿರ್ಮಾಣಕ್ಕೆ ಜನ್ಮಭೂಮಿಯಲ್ಲೇ ಸ್ಥಳ ಇನ್ನೂ ನಿಗಧಿಯಾಗಿಲ್ಲ. ಅಲ್ಲದೇ ಆ ಸ್ಥಳದಲ್ಲಿ ರಾಮನ ಮಂದಿರವಿತ್ತು ಎನ್ನುವ ಹಲವು ಪುರಾವೆಗಳು ಸಹ ದೃಢಪಟ್ಟಿದೆ ಎಂದರು. ಇದನ್ನೂ ಓದಿ: ತಾಳ್ಮೆಯಿಂದಿರಿ, ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಯೋಗಿ ಆದಿತ್ಯನಾಥ್

    ಕೇಂದ್ರ ಸರ್ಕಾರವು ರಾಮ ಮಂದಿರ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು. ಅಲ್ಲದೇ ಅದಕ್ಕಾಗಿ ಸೂಕ್ತ ಕಾನೂನುನನ್ನು ರೂಪಿಸಬೇಕು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕೆಲವು ಯೋಜಿತ ವಿಷಯಗಳು ಮಧ್ಯಸ್ಥಿಕೆ ವಹಿಸುವ ಮೂಲಕ ತೀರ್ಪನ್ನು ಸ್ಥಗಿತಗೊಳಿಸಲು ಪ್ರಭಾವ ಬೀರುತ್ತಿವೆ. ಆದರೆ ಯಾವುದೇ ಕಾರಣವಿಲ್ಲದೆಯೇ ಸಮಾಜದ ತಾಳ್ಮೆ ಕೆಡಿಸುವ ಆಸಕ್ತಿ ಯಾರಿಗೂ ಇಲ್ಲವೆಂದು ಹೇಳಿದ್ದಾರೆ.

    ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಸುಪ್ರೀಂ ಕೋರ್ಟ್ ನಲ್ಲಿ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ರಾಮ ಮಂದಿರ ಪ್ರಕರಣದಲ್ಲಿ ನನ್ನ ಅರ್ಜಿಯನ್ನು ಮೊದಲು ಪರಿಗಣಿಸಬೇಕು – ಸುಬ್ರಮಣಿಯನ್ ಸ್ವಾಮಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv