Tag: Cement

  • ಸಿಮೆಂಟ್ ಬೆಲೆ 20 ರೂಪಾಯಿ ಹೆಚ್ಚಳ

    ಸಿಮೆಂಟ್ ಬೆಲೆ 20 ರೂಪಾಯಿ ಹೆಚ್ಚಳ

    ಕೋಲ್ಕತ್ತಾ: ಕಟ್ಟಡ ನಿರ್ಮಾಣ ಚಟುವಟಿಕೆಯ ಪ್ರಮುಖ ಕಚ್ಚಾವಸ್ತುವಾದ ಸಿಮೆಂಟ್ ಬೆಲೆ ಇನ್ನು ಕೆಲ ತಿಂಗಳಿನಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

    ಪ್ರತಿ ಚೀಲ ಸಿಮೆಂಟ್ ಬೆಲೆ 15-20 ರೂಪಾಯಿ ಹೆಚ್ಚಳದ ಸಾಧ್ಯತೆ ಇದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ನಿನ್ನೆ ತಿಳಿಸಿದೆ. ಸಿಮೆಂಟ್ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಾಗಿ ಸಿಮೆಂಟ್ ದರ ಏರಿಕೆಗೆ ಕಾರಣವಾಗಲಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

    MONEY

    ಈಗ ಪ್ರಸ್ತುತವಾಗಿ 360 ರಿಂದ 380ರವರೆಗೆ ಬೆಲೆಯಲ್ಲಿರುವ ಸಿಮೆಂಟ್‌ ಬೆಲೆ 400ರೂ. ಮುಟ್ಟಲಿದೆ.  ಹೀಗಾಗಿ 50 ಕೇಜಿ ಇರುವ ಪ್ರತಿ ಚೀಲದ ಸಿಮೆಂಟ್ ಬೆಲೆ 400 ರೂಪಾಯಿ ಮುಟ್ಟಲಿದೆ. ಈ ಮೂಲಕ ಸಿಮೆಂಟ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.

    2020ರ ವೇಳೆ ಕೊರೊನಾ ಕಾರಣಕ್ಕೆ ಸಿಮೆಂಟ್ ಬೇಡಿಕೆಯಲ್ಲಿ ಕುಸಿತವಾಗಿತ್ತು. ಆದರೆ ಈ ಆರ್ಥಿಕ ವರ್ಷದಲ್ಲಿ ಸಿಮೆಂಟ್ ಬೇಡಿಕೆ ಪ್ರಮಣ ಶೇ.11ರಿಂದ 13 ರಷ್ಟು ಏರಿಕೆಯಾಗಿದೆ. ವಿದೇಶದಿಂದ ತರಿಸಲಾಗಿದ್ದ ಕಲ್ಲಿದ್ದಲು ಶೇ.120ಕ್ಕಿಂತ ಹೆಚ್ಚು ಮತ್ತು ಪೆಟ್‍ಕೋಕ್ ದರದ ಶೇ.80 ರಷ್ಟು ಏರಿಕೆ. ಇದರಿಂದ ವಿದ್ಯುತ್‌ ಮತ್ತು ಇಂಧನ ಬೆಲೆಗಳು ಪ್ರತೀ ಟನ್‍ಗೆ 350 ರಿಂದ 400 ರೂಪಾಯಿ ಜಿಗಿಯುವ ಸಾಧ್ಯತೆ ಇದೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

  • ಕಲಬುರಗಿಯಲ್ಲಿರೋ ಕೇಂದ್ರ ಸರ್ಕಾರದ ಸಿಸಿಐ ಸಿಮೆಂಟ್ ಕಾರ್ಖಾನೆ ಅದಾನಿ ಪಾಲು

    ಕಲಬುರಗಿಯಲ್ಲಿರೋ ಕೇಂದ್ರ ಸರ್ಕಾರದ ಸಿಸಿಐ ಸಿಮೆಂಟ್ ಕಾರ್ಖಾನೆ ಅದಾನಿ ಪಾಲು

    ಕಲಬುರಗಿ: ತೊಗರಿ ಕಣಜವಾಗಿರುವ ಕಲಬುರಗಿ ಜಿಲ್ಲೆ ಸಿಮೆಂಟ್ ಹಬ್ ಅಂತಾನೆ ಇಡೀ ದೇಶದಲ್ಲಿ ತನ್ನ ಹೆಸರನ್ನು ಪಡೆದುಕೊಂಡಿದೆ. ಹೀಗಾಗಿಯೇ ಇಲ್ಲಿ 10ಕ್ಕೂ ಹೆಚ್ಚು ಪ್ರತಿಷ್ಠಿತ ಸಿಮೆಂಟ್ ಕಾರ್ಖಾನೆಗಳು ಜಿಲ್ಲೆಯಲ್ಲಿ ತಲೆ ಎತ್ತಿವೆ.

    ಕಲಬುರಗಿ ಜಿಲ್ಲೆ ಸೇಡಂ ತಾಕೂಕಿನ ಕುರಕುಂಟಾ ಗ್ರಾಮದಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಸಿಸಿಐ ಸಿಮೆಂಟ್ ಕಾರ್ಖಾನೆ ಸಿಮೆಂಟ್ ಕಂಪನಿ ಆಫ್ ಇಂಡಿಯಾ(ಸಿಸಿಐ) ಕಾರ್ಖಾನೆ ಉದ್ಯಮಿ ಗೌತಮ ಅದಾನಿ ಮಾಲೀಕತ್ವದ ಅದಾನಿ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ (ಎಸಿಐಎಲ್) ಅಭಿವೃದ್ಧಿಪಡಿಸಲು ಮುಂದಾಗಿದೆ.

    ಮೊದಲ ಬಾರಿಗೆ ಅದಾನಿ ಸಿಮೆಂಟ್ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದು, ಹೇರಳವಾಗಿ ಕಚ್ಚಾ ವಸ್ತು ಸಿಗುವ ಸಿಮೆಂಟ್ ನಾಡು ಕಲಬುರಗಿಗೆ ಇದರ ಲಾಭವಾಗಲಿದೆ. ಮುಚ್ಚಿರುವ ಸಿಸಿಐಗೆ ಮರು ಜೀವ ಸಿಗಲಿದೆ. ಉದ್ಯೋಗ ಅವಕಾಶಗಳು ಮತ್ತು ಉದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಬೂಸ್ಟ್ ಸಿಗಲಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಯುವ ವೈದ್ಯೆ ಸಾವು

    ಕಲಬುರಗಿಯ ಮೊದಲ ಸಿಮೆಂಟ್ ಕಾರ್ಖಾನೆಯಾಗಿರುವ ಕುರಕುಂಟಾ ಸಿಸಿಐ ಅನ್ನು ಅದಾನಿ ಗ್ರೂಪ್‍ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಗತ್ಯ ಪ್ರಕ್ರಿಯೆ ನಡೆದಿದೆ. ಕಾರ್ಖಾನೆ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರವೇ ಆರಂಭವಾಗಲಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ದೃಢಪಡಿಸಿದ್ದಾರೆ.

    ಜಿಲ್ಲೆಯ ಸೇಡಂ ತಾಲೂಕಿನ ಕುರಕುಂಟಾದಲ್ಲಿ 1972ರ ಅಕ್ಟೋಬರ್‍ನಲ್ಲಿ ಆರಂಭವಾದ ಈ ಸಿಸಿಐ ವಾರ್ಷಿಕ 2 ಲಕ್ಷ ಟನ್ ಸಿಮೆಂಟ್ ಉದ್ಪಾದನೆ ಮಾಡುತ್ತಿತ್ತು. ಈ ಪ್ರದೇಶದಲ್ಲಿಖಾಸಗಿ ಸ್ವಾಮ್ಯದ ಹಲವು ಸಿಮೆಂಟ್ ಕಾರ್ಖಾನೆಗಳು ಬಂದಿದ್ದರಿಂದ ಇದನ್ನು 1998ರಲ್ಲಿಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಲಾಗಿತ್ತು. ಸುಮಾರು 430ಕ್ಕೂ ಹೆಚ್ಚು ಕಾರ್ಮಿಕರು ಇದರಲ್ಲಿಕೆಲಸ ಮಾಡುತ್ತಿದ್ದರು ಎಂದು ಕಾರ್ಮಿಕ ಮುಖಂಡರು ಹೇಳುತ್ತಾರೆ.

    ಸಿಸಿಐ ಕಾರ್ಖಾನೆ ವ್ಯಾಪ್ತಿಯಲ್ಲಿ 932 ಎಕರೆ ಜಮೀನಿದೆ. ಸಿಮೆಂಟ್ ಉತ್ಪಾದನೆಗಾಗಿ ಇನ್ನೂ 132. 67 ಮಿಲಿಯನ್ ಟನ್ ಸುಣ್ಣದ ಕಲ್ಲುಮೀಸಲಿಡಲಾಗಿದೆ. ಶೇ 110ರಷ್ಟು ಸಿಮೆಂಟ್ ಉತ್ಪಾದಿಸಿದ್ದರಿಂದ ಈ ಕಾರ್ಖಾನೆಗೆ 1989ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಇದನ್ನೂ ಓದಿ: ಅಂಗಾಂಗ ದಾನ ಮಾಡಿ ಇಬ್ಬರು ರೋಗಿಗಳ ಪ್ರಾಣ ಉಳಿಸಿದ 27ರ ಯುವಕ

    ಕಲಬುರಗಿ ಸಿಮೆಂಟ್ ವಲಯ ಅಧಿಕೃತ ಮೂಲಗಳ ಪ್ರಕಾರ ಕಲಬುರಗಿಯಲ್ಲಿ ಪ್ರತಿ ವರ್ಷ 30ಲಕ್ಷ ಟನ್ ಸಿಮೆಂಟ್ ಉತ್ಪಾದನೆ ಮಾಡಲಾಗುತ್ತಿದೆ. ಸಿಮೆಂಟ್ ಕಾರ್ಖಾನೆಗೆ ಬೇಕಿರುವ ಸುಣ್ಣದ ಕಲ್ಲುಹೇರಳವಾಗಿದೆ. 6,445 ಮಿಲಿಯನ್ ಟನ್ ಸುಣ್ಣದ ಕಲ್ಲುಸಿಮೆಂಟ್ ಉದ್ಯಮಕ್ಕಾಗಿ ಕಾದಿರಿಸಲಾಗಿದೆ.

    ಅದಾನಿ ಸಿಮೆಂಟ್ಸ್‍ನಿಂದ ಏನು ಅನುಕೂಲ?:
    2009-14ರವರೆಗೆ ಜಾರಿಯಲ್ಲಿದ್ದ ಕೈಗಾರಿಕಾ ನೀತಿಯಲ್ಲಿ ಕಲಬುರಗಿ ವಿಭಾಗವನ್ನು ಸಿಮೆಂಟ್ ವಲಯವನ್ನಾಗಿ ರಾಜ್ಯ ಸರಕಾರ ಘೋಷಿಸಿತ್ತು. ಅದಾನಿ ಗ್ರೂಪ್ ಸಿಸಿಐ ಕಾರ್ಖಾನೆ ಪಡೆದು ಅಭಿವೃದ್ಧಿಪಡಿಸಿದರೆ, 5 ಸಾವಿರ ಜನರಿಗೆ ಪ್ರತ್ಯಕ್ಷ ಮತ್ತು 20 ಸಾವಿರಕ್ಕೂ ಹೆಚ್ಚು ಪರೋಕ್ಷ ನೌಕರಿ ಸಿಗಲಿದೆ. ಇದರ ಜತೆಗೆ ಸಾರಿಗೆ, ಇಂಧನ, ಸಿಮೆಂಟ್ ಚೀಲ ಉತ್ಪಾದನೆ ಸೇರಿದಂತೆ ಇತರ ಕ್ಷೇತ್ರಗಳೂ ಅಭಿವೃದ್ಧಿಯಾಗಲಿವೆ ಎನ್ನುತ್ತಾರೆ ಆರ್ಥಿಕ ತಜ್ಞರು.

    ಯಾಕೆ ಸಿಮೆಂಟ್ ಉದ್ಯಮಕ್ಕೆ ಕಲಬುರಗಿ ಫೇವರೇಟ್..?
    ಕಲಬುರಗಿಯಲ್ಲಿ ಸಿಮೆಂಟ್ ಉದ್ಯಮ ಹುಲುಸಾಗಿ ಬೆಳೆದಿದ್ದು, ಎಸಿಸಿ, ಒರಿಯಂಟ್, ರಾಜಶ್ರೀ, ಆದಿತ್ಯ ಬಿರ್ಲಾ, ಶ್ರೀ ಸಿಮೆಂಟ್, ಅಲ್ಟ್ರಾಟೆಕ್, ಚಟ್ಟಿನಾಡ್ ಸೇರಿದಂತೆ ಪ್ರಮುಖ ಸಿಮೆಂಟ್ ಕಂಪನಿಗಳು ಇಲ್ಲಿವೆ. ಅದಾನಿ ಸಿಮೆಂಟ್ಸ್‍ಗೆ ಅವಕಾಶಗಳು ಹೆಚ್ಚಿವೆ. ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಸಂಪರ್ಕಿಸುವ ರೈಲು ಸೌಲಭ್ಯವಿದೆ. ಇತ್ತೀಚೆಗೆ ವಿಮಾನ ಸಂಪರ್ಕದಿಂದ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಪ್ರಶಸ್ತವಾಗಿದೆ.

  • ಕೋವಿಡ್ -19 ಪರಿಹಾರ ನಿಧಿಗೆ 5 ಕೋಟಿ ದೇಣಿಗೆ ನೀಡಿದ ಸಿಮೆಂಟ್ ಉದ್ಯಮಿಗಳು

    ಕೋವಿಡ್ -19 ಪರಿಹಾರ ನಿಧಿಗೆ 5 ಕೋಟಿ ದೇಣಿಗೆ ನೀಡಿದ ಸಿಮೆಂಟ್ ಉದ್ಯಮಿಗಳು

    – ಸಚಿವ ನಿರಾಣಿ ಮನವಿಗೆ ಸ್ಪಂದಿಸಿದ ಉದ್ದಿಮೆದಾರರು
    – ಅಗತ್ಯ ವೈದ್ಯಕೀಯ ಸೌಲಭ್ಯಕ್ಕೆ ಬಳಕೆ

    ಕಲಬುರಗಿ: ಕೋವಿಡ್ -19 ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಬುರಗಿ ಜಿಲ್ಲೆಯ ಸೋಂಕಿತರ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು 5 ಕೋಟಿ ಹಣವನ್ನು ದೇಣಿಗೆ ನೀಡುವ ಮೂಲಕ ಮಾನವೀಯತೆ ತೋರಿದ್ದಾರೆ.

    ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು, ಜಿಲ್ಲೆಯ ಸಿಮೆಂಟ್ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದರು.

    ಸಭೆಯಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿ ಸೋಂಕಿನ ಸ್ಥಿತಿಗತಿ, ಸೋಂಕು ತಗಲಿರುವ ಪ್ರಮಾಣ, ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರು, ಹೋಂ ಕ್ವಾರೆಂಟೆನ್ ಗೆ ಒಳಗಾಗಿರುವವರು, ಆಕ್ಸಿಜನ್ ಪೂರೈಕೆ, ಐಸಿಯು ಬೆಡ್ ಸಾಮಾನ್ಯ ಬೆಡ್ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೋಂಕಿತರಿಗೆ ಅಗತ್ಯವಾಗಿರುವ ವೈದ್ಯಕೀಯ ನೆರವು ನೀಡಲು ಸಿಮೆಂಟ್ ಉದ್ಯಮಿಗಳು ಮುಂದೆ ಬರುವಂತೆ ಸಚಿವ ನಿರಾಣಿ ಅವರು ಮನವಿ ಮಾಡಿಕೊಂಡರು.

    ಇದಕ್ಕೆ ತಕ್ಷಣ ಸ್ಫಂದಿಸಿದ ವಿವಿಧ ಸಿಮೆಂಟ್ ಉದ್ಯಮಿದಾರರು ಸೋಂಕಿತರ ಚಿಕಿತ್ಸಾ ನೆರವಿಗೆ 5 ಕೋಟಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

  • ಸಿಮೆಂಟ್ ತುಂಬಿದ ವಾಹನ ಪಲ್ಟಿ – ಇಬ್ಬರು ಕಾರ್ಮಿಕರು ದಾರುಣ ಸಾವು

    ಸಿಮೆಂಟ್ ತುಂಬಿದ ವಾಹನ ಪಲ್ಟಿ – ಇಬ್ಬರು ಕಾರ್ಮಿಕರು ದಾರುಣ ಸಾವು

    ವಿಜಯಪುರ: ಸಿಮೆಂಟ್ ತುಂಬಿಕೊಂಡು ಕೆಲಸದ ಕಡೆಗೆ ಸಾಗುತ್ತಿದ್ದ ವಾಹನವೊಂದು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಬಳಿ ನಡೆದಿದೆ.

    ಮೃತ ದುರ್ದೈವಿಗಳನ್ನು ಗೆದ್ದಲಮರಿ ತಾಂಡಾದ ನಿವಾಸಿ ವೆಂಕಟೇಶ್ ಪವಾರ(40) ಹಾಗೂ ಢವಳಗಿ ನಿವಾಸಿ ನಾಗಪ್ಪ ದಂಡೆನ್ನವರ್(45) ಎಂದು ಗುರುತಿಸಲಾಗಿದೆ. ಇವರೊಂದಿಗೆ ಇನ್ನು ಇಬ್ಬರು ಕಾರ್ಮಿಕರು ಮುದ್ದೇಬಿಹಾಳದಿಂದ ನೇಬಗೇರಿಗೆ ಸಿಮೆಂಟ್ ತುಂಬಿಕೊಂಡು ಲಾರಿಯಲ್ಲಿ ಹೊಗುವಾಗ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟರೆ ಇನ್ನಿಬ್ಬರಿಗೆ ಗಾಯಗಳಾಗಿವೆ.

    ಗಾಯಾಳುಗಳನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಾಹನ ಪಲ್ಟಿಯಾಗಲು ಕಾರಣ ಏನೆಂದು ತಿಳಿದುಬಂದಿಲ್ಲ. ಈ ಕುರಿತು ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಯೋಧ್ಯೆ ಭೂಮಿಪೂಜೆ- 1 ಚೀಲ ಸಿಮೆಂಟ್ ಕೊಟ್ಟಿದ್ದ ಸಂಶುದ್ದೀನ್ ಸಂತಸ

    ಅಯೋಧ್ಯೆ ಭೂಮಿಪೂಜೆ- 1 ಚೀಲ ಸಿಮೆಂಟ್ ಕೊಟ್ಟಿದ್ದ ಸಂಶುದ್ದೀನ್ ಸಂತಸ

    ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಮುಸ್ಲಿಂ ಯುವಕನಲ್ಲಿ ಸಂಭ್ರಮ ಮನೆ ಮಾಡಿದೆ.

    ಹೌದು. ಮೂರು ವರ್ಷಗಳ ಹಿಂದೆ ಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ ತೆರಳಿದ್ದರು. 2017ರ ಏಪ್ರೀಲ್ 27 ರಂದು ಕೊಪ್ಪಳದಿಂದ ರೈಲು ಮೂಲಕ ತೆರಳಿ, 2017ರ ಮೇ 1 ರಂದು ಅಯೋಧ್ಯೆಯಲ್ಲಿದ್ದರು. ಅಲ್ಲದೆ ಅಂದೇ ಟ್ರಸ್ಟ್ ಗೆ ಒಂದು ಚೀಲ ಸಿಮೆಂಟ್ ನೀಡಿದ್ದರು.

    ಈ ವೇಳೆ ಶ್ರೀರಾಮ ಮಂದಿರ ಶೀಘ್ರವೇ ನಿರ್ಮಾಣವಾಗಲೆಂದು ಬೇಡಿಕೊಂಡಿದ್ದರು. ಇದೀಗ ಇಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುವುದಕ್ಕೆ ಸಂಶುದ್ದೀನ್ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು: ಕೊಪ್ಪಳದ ಮುಸ್ಲಿಂ ಯುವಕ

    ಆಟೋ ಚಾಲಕನಾಗಿರುವ ಶಂಶುದ್ದೀನ್, ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ನಿವಾಸಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾನಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದರು. ”ಅಯೋಧ್ಯೆ ತೀರ್ಪು ದೇಶವು ಇಂದು ಖುಷಿ ಪಡುವ ವಿಚಾರ. ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವೀಕರಿಸಿದ್ದಾರೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬದುಕಬೇಕಿದೆ. ಕೊಪ್ಪಳ ಜಿಲ್ಲೆಯ ವತಿಯಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಹೋಗಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿ ಬಂದಿದ್ದೇನೆ. ಈ ಕೆಲಸ ಇಂದು ಸಾರ್ಥಕ ಅನಿಸುತ್ತಿದೆ ಎಂದು ಹೇಳಿದ್ದರು.

    ನಾನೊಬ್ಬ ಭಾರತೀಯ, ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಬದುಕಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸುಪ್ರೀಂಕೋರ್ಟ್ ನೀಡಿದೆ. ಅಯೋಧ್ಯೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸಿದ್ದೇವೆ ಎಂದು ಸಂಶುದ್ದೀನ್ ತಿಳಿಸಿದ್ದರು. ಇದನ್ನೂ ಓದಿ:  ರಾಮಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ಮಾಡ್ತೀರೋ 82ರ ವೃದ್ಧೆ

  • ಕಾರ್ಕಳ ಶಾಸಕ ಸುನೀಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಆರೋಪ

    ಕಾರ್ಕಳ ಶಾಸಕ ಸುನೀಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಆರೋಪ

    ಉಡುಪಿ: ಜಿಲ್ಲೆಯ ಕಾರ್ಕಳ ಶಾಸಕ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿಬಂದಿದೆ.

    ಸುನೀಲ್ ಕುಮಾರ್ ಸರ್ಕಾರಿ ಕಾಮಗಾರಿಯ ಗುತ್ತಿಗೆ ನೀಡಿರುವ ಕಾಂಟ್ರಾಕ್ಟರ್ ಗಳಿಂದ ನೂರಾರು ಗೋಣಿ ಸಿಮೆಂಟ್ ಪಡೆದು ತನ್ನ ಖಾಸಗಿ ಕಚೇರಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ವೀಡಿಯೋಗಳನ್ನು ಕಾಂಗ್ರೆಸ್ಸಿನವರು ರಿಲೀಸ್ ಮಾಡಿದ್ದಾರೆ. ಕಾರ್ಕಳ ನಗರಸಭೆಯ ಸದಸ್ಯ ಕಾಂಗ್ರೆಸ್ ನಾಯಕ ಶುಭದ ರಾವ್ ಈ ಆರೋಪವನ್ನು ಮಾಡಿದ್ದಾರೆ. ಕಾರ್ಕಳ ತಾಲೂಕು ಪಂಚಾಯತ್ ರಸ್ತೆಯಲ್ಲಿ ಸುನೀಲ್ ಕುಮಾರ್ ಅವರ ಖಾಸಗಿ ಜಮೀನಿನಲ್ಲಿ ಬಹು ಮಹಡಿಯ ಕಚೇರಿ ನಿರ್ಮಾಣ ಆಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಅಲ್ಟ್ರಾ ಟೆಕ್ ಕಂಪನಿಯ ನಾಟ್ ಫಾರ್ ಸೇಲ್ ಎಂದು ನಮೂದಿಸಿರುವ ಸಿಮೆಂಟ್ ಗಳನ್ನು ಬಳಸಲಾಗಿದೆ. ಗುತ್ತಿಗೆ ನೀಡಿದ ಕಾಂಟ್ರಾಕ್ಟ್ ಗಳಿಂದ ಶಾಸಕ ಸುನೀಲ್ ಕುಮಾರ್ ಸಿಮೆಂಟ್ ಚೀಲಗಳನ್ನು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

    ಶಾಸಕ ಸುನೀಲ್ ಕುಮಾರ್ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ. ಸರ್ಕಾರಿ ವ್ಯವಸ್ಥೆಗಳನ್ನು ದುರುಪಯೋಗಪಡಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಲೋಕಾಯುಕ್ತರಿಗೆ ದೂರು ನೀಡಲು ಕಾರ್ಕಳ ಕಾಂಗ್ರೆಸ್ ನಿರ್ಧರಿಸಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ನಗರಸಭೆ ಸದಸ್ಯ ಶುಭದ್ ರಾವ್ ಒತ್ತಾಯಿಸಿದ್ದಾರೆ.

  • ಸರ್ಕಾರ ಜನರಿಗೆ ಕೊಟ್ಟ 2ಲಕ್ಷ ರೂ. ಮೌಲ್ಯದ ಸಿಮೆಂಟ್ ಗುಳುಂ- ಬಿಜೆಪಿ ಶಾಸಕ ರಮೇಶ್ ಬೂಸನೂರು ಅಕ್ರಮ

    ಸರ್ಕಾರ ಜನರಿಗೆ ಕೊಟ್ಟ 2ಲಕ್ಷ ರೂ. ಮೌಲ್ಯದ ಸಿಮೆಂಟ್ ಗುಳುಂ- ಬಿಜೆಪಿ ಶಾಸಕ ರಮೇಶ್ ಬೂಸನೂರು ಅಕ್ರಮ

    ವಿಜಯಪುರ: ತಮ್ಮ ಸ್ವಂತ ನಿವಾಸ ಕಟ್ಟಿಸೋದಕ್ಕೆ ವಿಜಯಪುರದ ಸಿಂದಗಿ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಬೂಸನೂರು ಸರ್ಕಾರಿ ಸಿಮೆಂಟನ್ನು ಪುಕ್ಸಟ್ಟೆಯಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪವೊಂದು ಕೇಳಿಬಂದಿದೆ.

    ವಿಜಯಪುರದ ಸಿಂದಗಿ ಪಟ್ಟಣದ ಬೂದಿಹಾಳ ಲೇಔಟ್ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡಿ, ಅದರ ಮೇಲ್ಚಾವಣಿ ಹಾಕೋದಕ್ಕೆ ಸರ್ಕಾರಕ್ಕೆ ಸೇರಿದ ಸಿಮೆಂಟನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.

    ಕರ್ನಾಟಕ ರೂರಲ್ ಇನ್ಪಾಸ್ಟ್ರೇಕ್ಚರ್ ಡೆವೆಲಪಮೆಂಟ್ ಕಾರ್ಪೋರೇಷನ್ ಲಿಮಿಟೆಡ್‍ಗೆ ಸೇರಿದ ಸುಮಾರು 2 ಲಕ್ಷ ಮೌಲ್ಯದ ಅಂದಾಜು 400 ಚೀಲ ಸಿಮೆಂಟ್ ಹಾಗೂ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳನ್ನು ಬಳಸಿಕೊಂಡು ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

  • ಬ್ರಿಡ್ಜ್ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದ ಸಿಮೆಂಟ್ ಲಾರಿ

    ಬ್ರಿಡ್ಜ್ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದ ಸಿಮೆಂಟ್ ಲಾರಿ

    ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರದ ಸುಲ್ತಾನಪುರ ಬಳಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಸೇತುವೆ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದಿದೆ.

    ಸೇತುವೆ ಮೇಲಿಂದ ಲಾರಿ ಬಿದ್ದರೂ ಚಾಲಕ ಬಸವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಮೇಲಿಂದ ಬಿದ್ದಿದರಿಂದ ಸಿಮೆಂಟ್ ಚೀಲಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಜೆ.ಎಸ್.ಡಬ್ಲು ನಿಂದ ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಇಂದು ನಸುಕಿನ ಜಾವ ಡ್ರೈವರ್ ಅಜಾಗರೂಕತೆಯಿಂದ ಸೇತುವೆ ಮೇಲಿಂದ ಪಲ್ಟಿಯಾಗಿ ಬಿದ್ದಿದೆ.

    ಚಾಲಕ ಬಸವರಾಜನನ್ನು ಸಂಡೂರಿನ ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

    ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

    ಕೊಪ್ಪಳ: ಜಿಲ್ಲೆಯ ಮುಸ್ಲಿಂ ಯುವಕರೊಬ್ಬರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೈತಿಕ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದಾರೆ.

    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಆಟೋ ಚಾಲಕ ಶಂಶುದ್ದೀನ್ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಹೊರಟ ಯುವಕ. ಈ ಸಂಬಂಧ ಕೊಪ್ಪಳದಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದಾರೆ. ಶಂಶುದ್ದೀನ್ ಕಳೆದ ಕೆಲ ದಿನಗಳ ಹಿಂದೆ ತನ್ನ ಫೇಸ್‍ಬುಕ್‍ನಲ್ಲಿ ರಾಮಮಂದಿರ ಕಟ್ಟಲು ಒಂದು ಚೀಲ ಸಿಮೆಂಟ್ ಒಯ್ಯುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಈ ವೇಳೆ ಶಂಶುದ್ದೀನ್ ಅವರಿಗೆ ಸಾಕಷ್ಟು ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿದೆ.

    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಶಂಶುದ್ದೀನ್ ಪ್ರವೃತ್ತಿಯಲ್ಲಿ ಸಿನಿಮಾ ಕಲಾವಿದ. ಬಿಡುಗಡೆ ಹಂತದಲ್ಲಿರುವ ಲಂಬಾಣಿ ಭಾಷೆಯ ಕೋವೆಲ್ ಮತ್ತು ನಟ ಲೂಸ್ ಮಾದ ನಟಿಸಿರುವ ಧೂಳಿಪಟ ಚಿತ್ರದಲ್ಲಿ ಶಂಶುದ್ದೀನ ಖಳನಾಯಕರಾಗಿ ಅಭಿನಯಿಸಿದ್ದಾರೆ. ಶಂಶುದ್ದೀನ್ ಅವರಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಸನ್ಮಾನಿಸಿ, ಬೀಳ್ಕೊಟ್ಟಿದ್ದಾರೆ.

    ಕೊಪ್ಪಳದಿಂದ ಅಯೋಧ್ಯೆಗೆ ತೆರಳಿ ಅಲ್ಲಿಯೇ ಸಿಮೆಂಟ್ ನೀಡಲು ಶಂಶುದ್ದೀನ್ ನಿರ್ಧರಿಸಿದ್ದಾರೆ. ಭಾವೈಕ್ಯತೆ ಸಂಕೇತವಾಗಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಈ ನಿರ್ಧಾರವನ್ನು ಶಂಶುದ್ದೀನ್ ಮಾಡಿದ್ದಾರೆ.