Tag: celebrity chef

  • ಅಡುಗೆ ಮನೆಯಲ್ಲಿ ಸೆಲೆಬ್ರಿಟಿ ಶೆಫ್ ಶವವಾಗಿ ಪತ್ತೆ

    ಅಡುಗೆ ಮನೆಯಲ್ಲಿ ಸೆಲೆಬ್ರಿಟಿ ಶೆಫ್ ಶವವಾಗಿ ಪತ್ತೆ

    ತಿರುವನಂತಪುರಂ: ಮನೆಯಲ್ಲಿ ಕಿರುತೆರೆ ಕಲಾವಿದೆ ಹಾಗೂ ಸೆಲೆಬ್ರಿಟಿ ಶೆಫ್ ಶವವಾಗಿ ಪತ್ತೆಯಾದ ಘಟನೆ ಸೋಮವಾರ ಸಂಜೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

    ಜಗೀ ಜಾನ್ ಶವವಾಗಿ ಪತ್ತೆಯಾದ ಶೆಫ್. ಜಗೀ ಕುರವಂಕೋಣಂನ ಪ್ಲ್ಯಾಟ್ ನಲ್ಲಿ ತನ್ನ ತಾಯಿ ಜೊತೆ ವಾಸಿಸುತ್ತಿದ್ದರು. ಸೋಮವಾರ ಅಡುಗೆ ಮನೆಯಲ್ಲಿ ಜಗೀ ಶವವಾಗಿ ಪತ್ತೆಯಾಗಿದ್ದರು. ಸಂಜೆ ಸುಮಾರು 4 ಗಂಟೆಗೆ ಅವರ ಸ್ನೇಹಿತೆ ಮನೆಗೆ ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಜಗ್ಗೀ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಅಲ್ಲದೆ ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ನಾವು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆ ನಡೆದ ನಂತರ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

    ಜಗೀ ಅವರು ‘ಜಗ್ಗೀ ಕುಕ್‍ಬುಕ್’ ಎಂಬ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಅಲ್ಲದೆ ಅವರು ಸೌಂದರ್ಯ ಹಾಗೂ ವ್ಯಕ್ತಿತ್ವ ಪ್ರದರ್ಶನ ಕಾರ್ಯಕ್ರಮವನ್ನು ತೀರ್ಪುಗಾರರಾಗಿದ್ದರು. ಅಲ್ಲದೆ ಅವರು ಗಾಯಕಿ ಕೂಡ ಆಗಿದ್ದರು.